Tag: ಮಾನಸಾ

  • ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?

    ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?

    ಬಿಗ್ ಬಾಸ್ ಮನೆಯಲ್ಲಿ ಈ ಬಾರಿಯ ವೀಕೆಂಡ್ ತುಂಬಾನೇ ವಿಭಿನ್ನವಾಗಿದೆ. ಶನಿವಾರದ (ಅ.26) ಸಂಚಿಕೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರು ಬಂದಿದ್ದರು. ಭಾನುವಾರದ (ಅ.27) ಎಪಿಸೋಡ್‌ನಲ್ಲಿ ಸೃಜನ್ ಲೋಕೇಶ್ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಅದಷ್ಟೇ ಅಲ್ಲ, ಕಿಚ್ಚ ಸುದೀಪ್ (Sudeep) ಅವರ ಅನುಪಸ್ಥಿತಿಯಲ್ಲಿ ಇಂದು ಎಲಿಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿ ನಡೆದಿದೆ. ದೊಡ್ಮನೆ ಆಟದಿಂದ ಮಾನಸಾ ಸಂತೋಷ್ (Manasa Santhosh) ಔಟ್ ಆಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಇಂದಿನ ಸಂಚಿಕೆಯಲ್ಲಿ ಸೃಜನ್ ಲೋಕೇಶ್ (Srujan Lokesh) ದೊಡ್ಮನೆಗೆ ಗ್ರ‍್ಯಾಂಡ್ ಆಗಿ ಇಂಟ್ರಿ ನೀಡಿದ್ದಾರೆ. ನಟ ಸೃಜನ್ ಲೋಕೇಶ್ ಅವರು ಸ್ಪರ್ಧಿಗಳಿಗೆ ಒಂದಷ್ಟು ಟಾಸ್ಕ್ ನೀಡಿದಂತೆ ಇದೆ. ಜೊತೆಗೆ ನಾಮಿನೇಟ್ ಆಗಿರುವ ಕೆಲವು ಸ್ಪರ್ಧಿಗಳನ್ನು ಸೇವ್ ಮಾಡುವ ಕೆಲಸವನ್ನೂ ಸೃಜನ್ ಮಾಡಿದ್ದಾರೆ. ಈ ವೇಳೆ, ಸ್ಪರ್ಧಿ ಮಾನಸ ಕಣ್ಣೀರು ಇಟ್ಟಿದ್ದಾರೆ.

    ಕೊನೆಯಲ್ಲಿ ಬಿಗ್ ಬಾಸ್ ಮನೆಗೆ ಎರಡು ಕಾರುಗಳು ಬಂದು ನಿಂತಿದ್ದು, ಅದರಲ್ಲಿ ಎಲಿಮಿನೇಟ್ ಆಗಿರುವ ಸ್ಪರ್ಧಿಗಳನ್ನು ಕರೆದುಕೊಂಡು ಹೋಗುವ ತುಣುಕನ್ನು ವಾಹಿನಿಯ ಪ್ರೋಮೋದಲ್ಲಿ ತೋರಿಸಲಾಗಿದೆ. ಹೀಗಾಗಿ ಇವತ್ತಿನ ಎಲಿಮಿನೇಷನ್ ಪ್ರಕ್ರಿಯೆ ತುಂಬಾನೇ ಡಿಫರೆಂಟ್ ನಡೆದಿದ್ದು, ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ:ಕಾರವಾರ | ದೇವಬಾಗ್ ಕಡಲ ತೀರದಲ್ಲಿ ನಟ ರಮೇಶ್ ಅರವಿಂದ್

    ಬಿಗ್ ಬಾಸ್ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 15 ಸ್ಪಧಿಗಳಲ್ಲಿ 9 ಮಂದಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ. ಭವ್ಯಾ ಗೌಡ, ಗೌತಮಿ, ಚೈತ್ರಾ, ಹಂಸ, ಮೋಕ್ಷಿತಾ, ಶಿಶಿರ್, ಸುರೇಶ್ ಹಾಗೂ ಕ್ಯಾಪ್ಟನ್ ಅವರಿಂದ ನೇರವಾಗಿ ಮಾನಸ ಹಾಗೂ ಮಂಜು ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಮಾನಸಾ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ. ಎಲ್ಲದ್ದಕ್ಕೂ ಉತ್ತರ ಇಂದಿನ ಸಂಚಿಕೆಯಲ್ಲಿ ಸಿಗಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.

  • BBK 11: ದೊಡ್ಮನೆಗೆ ಕಾಲಿಟ್ಟ ಶಿಶಿರ್, ತ್ರಿವಿಕ್ರಮ್, ಮಾನಸಾ

    BBK 11: ದೊಡ್ಮನೆಗೆ ಕಾಲಿಟ್ಟ ಶಿಶಿರ್, ತ್ರಿವಿಕ್ರಮ್, ಮಾನಸಾ

    ನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ಕ್ಕೆ (Bigg Boss Kannada 11) ತ್ರಿವಿಕ್ರಮ್ ಮತ್ತು ಶಿಶಿರ್ ಶಾಸ್ತ್ರಿ, ಮಾನಸಾ (Manasa Tukali Santhosh) ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಜೊತೆಯಾಗಿ ದೊಡ್ಮನೆಗೆ ಕಾಲಿಟ್ಟ ಅನುಷಾ ರೈ, ಧರ್ಮ ಕೀರ್ತಿರಾಜ್‌

    ತ್ರಿವಿಕ್ರಮ್ ಪದ್ಮಾವತಿ ಸೀರಿಯಲ್ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ರೆ, ಶಿಶಿರ್ ಕುಲವಧು ಸೇರಿದಂತೆ ಹಲವು ಸೀರಿಯಲ್, ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ. 8ನೇ ಮತ್ತು 9ನೇ ಸ್ವರ್ಧಿಯಾಗಿ ಆಗಮಿಸಿದ್ದಾರೆ. ಶಿಶಿರ್ (Shishir Shastry) ನರಕಕ್ಕೆ ಎಂಟ್ರಿ ಪಡೆದರೆ, ತ್ರಿವಿಕ್ರಮ್ (Trivikram) ಸ್ವರ್ಗಕ್ಕೆ ಬಂದಿದ್ದಾರೆ.

    ಇತ್ತ ಮಾನಸಾ ತುಕಾಲಿ ಸಂತೋಷ್ ಅವರು ಗಿಚ್ಚಿ ಗಿಲಿಗಿಲಿ 3ರ ರನ್ನರ್ ಅಪ್ ಆಗಿದ್ದರು. ಈಗ ಬಿಗ್ ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ.

    ಪ್ರಸ್ತುತ ಭವ್ಯಾ ಗೌಡ, ಯಮುನಾ, ಧನರಾಜ್, ಗೌತಮಿ, ಅನುಷಾ ರೈ, ಧರ್ಮ ಕೀರ್ತಿರಾಜ್ ದೊಡ್ಮನೆ ಪ್ರವೇಶ ಪಡೆದಿದ್ದಾರೆ. ಒಟ್ಟು 17 ಸ್ಪರ್ಧಿಗಳ ಜಟಾಪಟಿ ದೊಡ್ಮನೆಯಲ್ಲಿ ನೋಡಬಹುದು.

  • ‘ಬಿಗ್ ಬಾಸ್’ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತ

    ‘ಬಿಗ್ ಬಾಸ್’ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತ

    ‘ಬಿಗ್ ಬಾಸ್’ ಖ್ಯಾತಿಯ (Bigg Boss Kannada 10) ತುಕಾಲಿ ಸಂತೋಷ್ (Tukali Santhosh) ಅವರ ಕಾರು ಅಪಘಾತವಾಗಿದೆ. ತುಮಕೂರಿನಲ್ಲಿ ತುಕಾಲಿ ಸಂತೋಷ್‌ ಅವರ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಸದ್ಯ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ಘಟನೆ ನಡೆದಿದೆ. ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ತುಕಾಲಿ ಸಂತೋಷ್ ಅವರು ಪತ್ನಿ ಮಾನಸಾ ಜೊತೆ ಪ್ರಯಾಣಿಸುತ್ತಿದ್ದರು. ಅದೇ ವೇಳೆ ಕುಣಿಗಲ್‌ನಿಂದ ಕುರುಡಿಹಳ್ಳಿಗೆ ಆಟೋ ಬರುತ್ತಿತ್ತು. ತುಕಾಲಿ ಸಂತೋಷ್ ಅವರ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

    ಸದ್ಯ ದೂರು ಪ್ರತಿದೂರು ದಾಖಲಿಸಲು ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಟೋ ಡ್ರೈವರ್ ಕಾರ್‌ಗೆ ಡಿಕ್ಕಿ ಹೊಡೆದಿದ್ದಾರೆ ಅಂತಾ ತುಕಾಲಿ ಸಂತು ಕೂಡ ಆರೋಪಿಸುತ್ತಿದ್ದಾರೆ. ಈ ಬಗ್ಗೆ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಅಂದಹಾಗೆ, ತುಕಾಲಿ ಸಂತೋಷ್ ಅವರು ಇತ್ತೀಚೆಗೆ ಹೊಸ ಕಾರನ್ನು ಖರೀದಿಸಿದ್ದರು. ಬಿಗ್ ಬಾಸ್ ಶೋನಿಂದ ಬಂದ ಹಣದಲ್ಲಿ ದುಬಾರಿ ಕಾರು ಖರೀದಿ ಮಾಡಿದ್ದರು.

  • ಹೊಸ ಕಾರು ಖರೀದಿಸಿ ಕಂಡ ಕನಸನ್ನು ಈಡೇರಿಸಿಕೊಂಡ ತುಕಾಲಿ

    ಹೊಸ ಕಾರು ಖರೀದಿಸಿ ಕಂಡ ಕನಸನ್ನು ಈಡೇರಿಸಿಕೊಂಡ ತುಕಾಲಿ

    ‘ಬಿಗ್ ಬಾಸ್ ಕನ್ನಡ ಸೀಸನ್ 10’ರ (Bigg Boss Kannada 10) ಸ್ಪರ್ಧಿ ತುಕಾಲಿ ಸಂತೋಷ್ (Tukali Santhosh) ಅವರ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ. ಹೊಸ ಕಾರನ್ನು ಖರೀದಿಸಬೇಕೆಂಬುದು ತುಕಾಲಿ ಸಂತೋಷ್ ಕನಸಾಗಿತ್ತು. ಇದೀಗ ಅದು ನೆರವೇರಿದೆ. ಹೊಸ ಕಾರಿನ ವಿಡಿಯೋವನ್ನು ನಟ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬಿಗ್ ಬಾಸ್ ಶೋ ಮುಗಿದ್ಮೇಲೆ ಹಲವರ ಬದುಕು ಬದಲಾಗಿದೆ. ತುಕಾಲಿ ಸಂತೋಷ್ ಲೈಫ್‌ನಲ್ಲಿಯೂ ಕೂಡ ಹೊಸ ಜರ್ನಿ ಶುರುವಾಗಿದೆ. ರಿಯಾಲಿಟಿ ಶೋ ಮಧ್ಯೆ ಸಿನಿಮಾ ಅವಕಾಶಗಳು ಕೂಡ ಅರಸಿ ಬರುತ್ತಿದೆ. ಇದನ್ನೂ ಓದಿ:ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು ‘ಮಾಣಿಕ್ಯ’ ನಟಿ ಎಂಗೇಜ್‌ಮೆಂಟ್

    ಬಿಗ್ ಬಾಸ್ ಫಿನಾಲೆವರೆಗೆ ಇದ್ದ ಅವರು ನಾಲ್ಕನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ದೊಡ್ಮನೆಯಿಂದ ಬಂದ ಸಂಭಾವನೆಯಿಂದ ಅವರು ಕಾರು ಖರೀದಿ ಮಾಡಿದ್ದಾರೆ. ಕಿಯಾ ಕಂಪನಿಯ ಕಾರನ್ನು ಅವರು ಖರೀದಿ ಮಾಡಿದ್ದಾರೆ. ಈ ವೇಳೆ, ಅವರ ಪತ್ನಿ ಮಾನಸಾ ಕೂಡ ಇದ್ದರು.

    ‘ಕಂಡ ಕನಸು ನನಸಾದ ದಿನ’ ಎಂದು ಅಡಿಬರಹ ನೀಡಿ, ತುಕಾಲಿ ಸಂತು ಕಾರು ಖರೀದಿಸುತ್ತಿರುವ ವಿಡಿಯೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ನಟನ ಯಶಸ್ಸಿಗೆ ಫ್ಯಾನ್ಸ್ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಸ್ವರ್ಗವನ್ನು ಧರೆಗಿಳಿಸಿದ ಅಂಬಾನಿ ಮಗನ ಪ್ರೀ-ವೆಡ್ಡಿಂಗ್‌ನಲ್ಲಿ ಸಿನಿತಾರೆಯರ ದಂಡು

    ಕಾಮಿಡಿ ಕಿಲಾಡಿಗಳು 3, ಜೋಡಿ ನಂಬರ್ ಒನ್, ಗಿಚ್ಚಿ ಗಿಲಿ ಗಿಲಿ 3 (Gichi gili gili 3) ಸೇರಿದಂತೆ ಹಲವು ಶೋಗಳ ಮೂಲಕ ತುಕಾಲಿ ಸಂತೋಷ್ ಜನಪ್ರಿಯತೆ ಗಳಿಸಿದ್ದಾರೆ. ಬಿಗ್ ಬಾಸ್ ಸೀಸನ್ 10ರ ಶೋ ಇವರಿಗೆ ಹೆಚ್ಚಿನ ಖ್ಯಾತಿ ತಂದು ಕೊಟ್ಟಿದೆ. ಅದರಲ್ಲೂ ವರ್ತೂರು ಸಂತೋಷ್ ಜೊತೆಗಿನ ಒಡನಾಟದ ವಿಚಾರವಾಗಿ ತುಕಾಲಿ ಸಂತು ಹೈಲೆಟ್ ಆಗಿದ್ದರು.

  • ಇದು ಲೈಫಿಗೆ ಹತ್ತಿರಾದ ವಾಸ್ತವಗಳ ಸೆಲ್ಫಿ ಅಂದ್ರು ಪ್ರಜ್ವಲ್!

    ಇದು ಲೈಫಿಗೆ ಹತ್ತಿರಾದ ವಾಸ್ತವಗಳ ಸೆಲ್ಫಿ ಅಂದ್ರು ಪ್ರಜ್ವಲ್!

    ಪ್ರಜ್ವಲ್ ದೇವರಾಜ್ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಬಗ್ಗೆ, ಅದರ ಕಥೆಯ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡಿದ್ದಾರೆ. ಇದರ ಕಥೆ, ತಮ್ಮ ಪಾತ್ರದಿಂದ ಕಾಡಿಸಿಕೊಂಡೇ ನಟಿಸಿದ್ದ ಪ್ರಜ್ವಲ್ ಈ ಚಿತ್ರದ ಕಥೆಯ ಆಚೀಚೆಗಿನ ಒಂದಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ.

    ನಿರ್ದೇಶಕ ದಿನಕರ್ ತೂಗುದೀಪ ಅವರ ಮಡದಿ ಮಾನಸಾ ಬರೆದ ಈ ಕಥೆಯನ್ನು ಆರಂಭಿಕವಾಗಿ ಕೇಳಿದಾಗಲೇ ಅದರ ಬಗ್ಗೆ ತಮ್ಮ ಪಾತ್ರದ ಬಗ್ಗೆ ಪ್ರಭಾವಿತನಾಗಿದ್ದಾಗಿ ಪ್ರಜ್ವಲ್ ಹೇಳಿಕೊಂಡಿದ್ದಾರೆ. ಇಡೀ ಕಥೆ ಎಲ್ಲರ ಬದುಕುಗಳನ್ನೂ ಒಂದಲ್ಲ ಒಂದು ರೀತಿಯಲ್ಲಿ ಪ್ರಖಭಾವಿಸುವಂತಿದೆ. ಪ್ರತೀ ಪ್ರೇಕ್ಷಕರೆದೆಯಲ್ಲಿ, ಪ್ರತೀ ಪಾತ್ರಗಳೂ ಶಾಶ್ವತವಾಗೊಂದು ಛಾಯೆಯನ್ನು ಉಳಿಸುವಂತಿವೆ. ಎಲ್ಲ ಸಂಕಟಗಳ ಆಯಸ್ಸು ಕಡಿಮೆ ಎಂಬ ಸೂತ್ರದಡಿಯಲ್ಲಿ ಹೊಸಾ ಭರವಸೆಯೊಂದನ್ನು ತುಂಬಿ ಕಳಿಸುವಂತಿವೆ ಎಂಬುದು ಪ್ರಜ್ವಲ್ ಅನಿಸಿಕೆ.

    ಅಂದಹಾಗೆ ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ಕೋಟ್ಯಾಧೀಶನ ಮಗ ವಿರಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಯಾವುದಕ್ಕೂ ಕಡಿಮೆ ಇಲ್ಲದಿದ್ದರೂ ಎಂಥಾದ್ದೋ ಕೊರತೆ, ಕೊರೆತಗಳ ನಡುವೆ ಕಂಗಾಲಾದ ಪಾತ್ರವದು. ಇಡೀ ಚಿತ್ರದ ಜೀವಾಳವಾಗಿರೋ ಆ ಪಾತ್ರದ ಅಸಲೀಯತ್ತೇನೆಂಬುದು ಬಿಡುಗಡೆಯ ನಂತರ ಗೊತ್ತಾಗಲಿದೆಯಾದರೂ, ಆ ಪಾತ್ರದ ಪ್ರಭಾವ ದೊಡ್ಡದೆಂಬುದು ಈಗಾಗಲೇ ಜಾಹೀರಾಗಿದೆ.

    ಪ್ರಜ್ವಲ್ ದೇವರಾಜ್ ನಿರ್ದೇಶಕ ತೂಗುದೀಪ ದಿನಕರ್ ಅವರ ಫ್ಯಾಮಿಲಿ ಫ್ರೆಂಡ್. ಪ್ರಜ್ವಲ್ ರನ್ನು ಚಿಕ್ಕಂದಿನಿಂದಲೂ ನೋಡುತ್ತಾ ಬಂದಿರೋ ದಿನಕರ್ ಅವರ ಸಿನಿಮಾ ಬೆಳವಣಿಗೆಗಳನ್ನೂ ಗಮನಿಸುತ್ತಲೇ ಇದ್ದರು. ಅದ್ಭುತ ಎನರ್ಜಿ ಇರೋ ಪ್ರಜ್ವಲ್ ಜೊತೆಗೊಂದು ಸಿನಿಮಾ ಮಾಡಬೇಕೆಂಬ ಆಸೆ ದಿನಕರ್ ಅವರಿಗೂ ಇತ್ತು. ಅದು ಪ್ರಜ್ವಲ್ ಅವರದ್ದೂ ಆಗಿತ್ತು. ಕಾಲವೇ ಅದಕ್ಕೆ ವೇದಿಕೆ ಸಿದ್ಧಪಡಿಸಿದೆ. ಪ್ರಜ್ವಲ್‍ಗಾಗಿ ಒಂದು ಪಾತ್ರವೂ ಸೃಷ್ಟಿಯಾಗಿದೆ. ಇಂಥಾ ಕಾಲಾಂತರಗಳ ಕನಸಿನಂತೆ ಮೂಡಿ ಬಂದಿರೋ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ವಾರದೊಪ್ಪತ್ತಿನಲ್ಲೇ ತೆರೆ ಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೈಫ್ ಜೊತೆ ಒಂದ್ ಸೆಲ್ಫಿ – ಕಥೆ ಹುಟ್ಟಿದ್ದ ಬಗ್ಗೆ ದಿನಕರ್ ಹೇಳಿದ ಇಂಟರೆಸ್ಟಿಂಗ್ ಕಥೆ!

    ಲೈಫ್ ಜೊತೆ ಒಂದ್ ಸೆಲ್ಫಿ – ಕಥೆ ಹುಟ್ಟಿದ್ದ ಬಗ್ಗೆ ದಿನಕರ್ ಹೇಳಿದ ಇಂಟರೆಸ್ಟಿಂಗ್ ಕಥೆ!

    ಸಾರಥಿಯಂಥಾ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ದಿನಕರ್ ತೂಗುದೀಪ ಅವರ ನಿರ್ದೇಶನದ ನಾಲ್ಕನೇ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ. ಲವ್ಲಿ ಸ್ಟಾರ್ ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಕಥೆ ಏನೆಂಬ ಬಗ್ಗೆ ಎಲ್ಲೆಡೆ ಕುತೂಹಲ ಹರಡಿಕೊಂಡಿದೆ. ಇದೇ ಹೊತ್ತಿನಲ್ಲಿ ಈ ಚಿತ್ರದ ಕಥೆ ಹುಟ್ಟಿದ ಮಜವಾದ ಕಥೆಯ ಬಗ್ಗೆ ದಿನಕರ್ ಅವರು ಕೆಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ!

    ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರಕ್ಕೆ ಕಥೆ ಬರೆದಿದ್ದು ದಿನಕರ್ ಅವರ ಮಡದಿ ಮಾನಸಾ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ದಿನಕರ್ ಎಲ್ಲ ರೀತಿಯಿಂದಲೂ ತಮ್ಮನ್ನು ಕಾಡಿ ಕೈ ಹಿಡಿದೆಬ್ಬಿಸೋ ಕಥೆಯೊಂದು ಸಿಗದ ಹೊರತಾಗಿ ನಿರ್ದೇಶನಕ್ಕಿಳಿಯುವವರಲ್ಲ. ಒಂದು ದೊಡ್ಡ ಗ್ಯಾಪಿನಲ್ಲಿ ಅಂಥಾದದ್ದೊಂದು ನಿರೀಕ್ಷೆ ಹೊಂದಿದ್ದ ದಿನಕರ್ ಅವರಿಗೆ ಮಾನಸಾ ಈ ಚಿತ್ರದ ಕಥೆಯ ಎಳೆಯೊಂದನ್ನು ಹೇಳಿದ್ದು ಈಗ್ಗೆ ಒಂದೂವರೆ ವರ್ಷಗಳ ಹಿಂದೆ!

    ಈ ಕಥಾ ಎಳೆ ಕೇಳಿದಾಕ್ಷಣ ಏನೋ ಛಳುಕು ಮೂಡಿದಂತಾಗಿ ತಕ್ಷಣವೇ ಅವರು ಮಾನಸಾರ ಜೊತೆ ಸೇರಿ ಕಥೆಗೊಂದು ರೂಪ ಕೊಡಲಾರಂಭಿಸಿದ್ದರು. ಅಖಂಡ ಆರೇಳು ತಿಂಗಳು ಕಳೆದ ನಂತರ ಕಥೆಗೊಂದು ಸ್ಪಷ್ಟವಾದ ರೂಪ ಬಂದಿತ್ತು. ಆ ನಂತರ ಮತ್ತೆ ಆರು ತಿಂಗಳು ಪಟ್ಟಾಗಿ ಕೂತ ದಿನಕರ್ ಅವರೇ ಸ್ಕ್ರೀನ್ ಪ್ಲೇ ರಚಿಸಿದ್ದರು. ಮಾನಸಾ ಕೂಡಾ ಅದಕ್ಕೆ ಸಹಕರಿಸಿದ್ದರು. ಹೀಗೆ ಸ್ಕ್ರೀನ್ ಪ್ಲೇ ರೆಡಿಯಾದಾಕ್ಷಣವೇ ನಿರ್ಮಾಪಕರನ್ನು ಭೇಟಿಯಾದಾಗ ಅವರು ಈ ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಳ್ಳಲು ತೆಗೆದುಕೊಂಡಿದ್ದು ಕೇವಲ ಎರಡು ನಿಮಿಷವಂತೆ!

    ಆ ನಂತರದಲ್ಲಿ ಚಿತ್ರೀಕರಣ ಶುರು ಮಾಡಿದಾಗಲೂ ಚಿತ್ರದುದ್ದಕ್ಕೂ ಕಥೆ ಬರೆದ ಮಾನಸಾ ಸಾಥ್ ನೀಡಿದ್ದಾರೆ. ತಮ್ಮ ಕಥೆ ದೃಶ್ಯವಾಗೋದನ್ನು ಥ್ರಿಲ್ ಆಗುತ್ತಲೇ ಕಣ್ತುಂಬಿಕೊಂಡಿದ್ದಾರೆ. ಕಡೆಗೆ ಎಡಿಟಿಂಗ್ ಎಲ್ಲ ಆದ ನಂತರ ನೋಡಿ ಹಿರಿ ಹಿರಿ ಹಿಗ್ಗಿದ್ದಾರಂತೆ. ಒಟ್ಟಾರೆಯಾಗಿ ಈ ಚಿತ್ರದ ಉದ್ದಕ್ಕೂ ದಿನಕರ್ ಅವರ ಮಡದಿ ಮಾನಸಾ ಪ್ರಮುಖ ಪಾತ್ರ ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews