Tag: ಮಾನಷಿ ಚಿಲ್ಲರ್

  • ವಿಚ್ಛೇದಿತ ಉದ್ಯಮಿಗಿಂತ ಮುಂಚೆ ಮಾನುಷಿ ಚಿಲ್ಲರ್ ಮತ್ತೊಬ್ಬ ಹುಡುಗನ ಜೊತೆ ಡೇಟಿಂಗ್

    ವಿಚ್ಛೇದಿತ ಉದ್ಯಮಿಗಿಂತ ಮುಂಚೆ ಮಾನುಷಿ ಚಿಲ್ಲರ್ ಮತ್ತೊಬ್ಬ ಹುಡುಗನ ಜೊತೆ ಡೇಟಿಂಗ್

    ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡು ರಾಷ್ಟ್ರ ಮಟ್ಟದ ಗಮನ ಸೆಳೆದ ಮಾನುಷಿ ಚಿಲ್ಲರ್, ಇದೀಗ ಡೇಟಿಂಗ್ ವಿಚಾರವಾಗಿ ಸುದ್ದಿಯಾಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮಾನುಷಿ, ಇದೀಗ ವಿಚ್ಛೇದಿತ ಉದ್ಯಮಿ ನಿಖಿತ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಜಿರೊಧಾ ಕಂಪನಿಯ ಸಹ ಸಂಸ್ಥಾಪಕ ಆಗಿರುವ ನಿಖಿತ್ ಮತ್ತು ಮಾನಷಿ ಇತ್ತೀಚೆಗಷ್ಟೇ ರಿಷಿಕೇಶಕ್ಕೆ ಒಟ್ಟಾಗಿ ಭೇಟಿ ಕೊಟ್ಟಿದ್ದಾರೆ ಎಂದೂ ವರದಿಯಾಗಿದೆ.

    ನಿಖಿಲ್ ಕಾಮತ್ ಈ ಮುಂಚೆಯೇ ಅಮಂಡಾ ಪುರವಂಕರಾ ಎಂಬುವವ ಜೊತೆ 2019 ಏಪ್ರಿಲ್ 18 ರಂದು ಮದುವೆಯಾಗಿದ್ದರು. ಇವರ ದಾಂಪತ್ಯ ಜೀವನ ತುಂಬಾ ದಿನಗಳ ಕಾಲ ಉಳಿಯಲಿಲ್ಲ. 2021ರಲ್ಲಿ ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡರು. ಡಿವೋರ್ಸ್ ಸಿಗುತ್ತಿದ್ದಂತೆಯೇ ಮಾನಷಿ ಜೊತೆ ನಿಖಿಲ್ ಡೇಟಿಂಗ್ ನಲ್ಲಿ ತೊಡಗಿದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ

    ನಿಖಿಲ್ ಗಿಂತ ಮುಂಚೆಯೇ ಮಾನಷಿ ಬೇರೆ ಹುಡುಗನೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿಯೂ ಗುಟ್ಟಾಗಿ ಇರಲಿಲ್ಲ. ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ರೋಹಿತ್ ಖಾಂದೇಲವಾಲ್ ಎಂಬುವವರ ಜೊತೆ ಮಾನಷಿ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಆಗಾಗ್ಗೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರು ಎನ್ನುವ ಗಾಸಿಪ್ ಕೂಡ ಇತ್ತು.

    Live Tv
    [brid partner=56869869 player=32851 video=960834 autoplay=true]

  • ರಾಮಚರಣ್ ಒಪ್ಪಿದರೆ ಈಗಲೂ ಡೇಟಿಂಗ್ ಗೆ ರೆಡಿ ಎಂದ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್

    ರಾಮಚರಣ್ ಒಪ್ಪಿದರೆ ಈಗಲೂ ಡೇಟಿಂಗ್ ಗೆ ರೆಡಿ ಎಂದ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್

    ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿರುವ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ಗಮನ ಸೆಳೆಯುವಂತಹ ಮಾತುಗಳನ್ನು ಆಡಿದ್ದಾರೆ. ಅವರ ಆ ಮಾತು ತೆಲುಗು ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸ್ಟಾರ್ ನಟ ರಾಮಚರಣ್ ತೇಜ ಹೆಂಡತಿಯು ತಲೆ ಕೆಡಿಸಿಕೊಂಡು ಕೂರುವಂತಾಗಿದೆ. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಮಾನಷಿ ಚಿಲ್ಲರ್, ಇದೀಗ ಆ ಸಿನಿಮಾ ಪ್ರಚಾರದ ಬ್ಯುಸಿಯಲ್ಲಿದ್ದಾರೆ. ಇಂದು ರಿಲೀಸ್ ಆಗಿರುವ ಸಿನಿಮಾದ ಬಗ್ಗೆ ಒಳ್ಳೆಯ ಮಾತು ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಮಾನಷಿ ಆಡಿದ ಮಾತು ಕೂಡ ವೈರಲ್ ಆಗಿದೆ. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ

    ಮಾನಷಿ ಚಿಲ್ಲರ್ ಆರ್.ಆರ್.ಆರ್ ಸಿನಿಮಾ ನೋಡಿದಾಗ ರಾಮ್ ಚರಣ್ ಬಗ್ಗೆ ವಿಪರೀತ ಲವ್ ಆಯಿತಂತೆ. ಅವರ ದೊಡ್ಡ ಅಭಿಮಾನಿಯಾಗಿ ಅವರು ಬದಲಾದರಂತೆ. ರಾಮ್ ಚರಣ್ ತೇಜ ಅವರಿಗೆ ಮದುವೆ ಆಗದೇ ಇದ್ದರೆ, ನಾನು ಅವರನ್ನು ಡೇಟಿಗೆ ಕರೆಯುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಮದುವೆಯಾದರೂ ಪರವಾಗಿಲ್ಲ. ಈಗಲೂ ಅವರು ಒಪ್ಪಿದರೆ ನಾನು ರೆಡಿ ಎಂದು ಹೇಳಿದ್ದಾರೆ. ಈ ಮಾತು ರಾಮ್ ಚರಣ್ ಅಭಿಮಾನಿಗಳನ್ನು ಖುಷಿಗೊಳಿಸಿದೆ.