ರಾಯಚೂರು: ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್‍ಗೆ (Manappa D.Vajjal) ಪುತ್ರ ವಿಯೋಗವಾಗಿದೆ. ಎರಡನೇ ಪುತ್ರ ಶ್ರೀಮಂತರಾಯ ವಜ್ಜಲ್(32) ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಕಾಯಿಲೆ, ಡಸ್ಟ್ ಅಲರ್ಜಿ ಹಾಗೂ ಶ್ವಾಸಕೋಶದ ತೊಂದರೆಯಿಂದ ಶ್ರೀಮಂತರಾಯ ಅವರು ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ರಾಯಚೂರು: ನನ್ನ ಮಗ ಗೂಂಡಾ ಅಲ್ಲ ಚಿಕ್ಕವನು, ಅವನು ತಪ್ಪು ಮಾಡಿದ್ದಾನೆ ಎಂದು ಸಾಬೀತಾದರೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಜಿಲ್ಲೆಯ ಲಿಂಗಸುಗೂರು ಮಾಜಿ ಶಾಸಕ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಹೇಳಿದ್ದಾರೆ.
ಪುತ್ರ ಆಂಜನೇಯ ವಜ್ಜಲ್ ಗಲಾಟೆ ಪ್ರಕರಣ ಈಗ ಸದ್ದು ಮಾಡುತ್ತಿದ್ದು, ಪ್ರಕರಣ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಅಪಾರ್ಟ್‍ಮೆಂಟ್ ಗೆ ಸಂಬಂಧವಿಲ್ಲದ ವ್ಯಕ್ತಿ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ಎರಡನೇ ಬಾರಿ ಗಲಾಟೆ ಮಾಡಿದ್ದರಿಂದ ನನ್ನ ಪುತ್ರ ಹಾಗೂ ಅಲ್ಲಿದ್ದ ಆತನ ಸ್ನೇಹಿತರು ಮಾತಿನ ಚಕಮಕಿ ನಡೆಸಿದ್ದಾರೆ. ಗಲಾಟೆ ಜೋರಾಗಿದ್ದರಿಂದ ಹಲ್ಲೆಯೂ ಆಗಿದೆ. ರಾಜೀ ಸಂಧಾನ ಮೂಲಕ ಗಲಾಟೆ ಬಗೆಹರಿಸಿಕೊಳ್ಳಬೇಕೆಂದು ಸುಮ್ಮನಾಗಿದ್ದೇವು. ಆದರೆ ಸಣ್ಣ ಘಟನೆ ಈಗ ದೊಡ್ಡದಾಗಿದೆ. ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ. ಪೊಲೀಸರು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದರು.
ಗಲಾಟೆ ಮಾಡಿದವನು ಯಾರು? ಅವನ ಹಿನ್ನೆಲೆ ಏನು ಎಲ್ಲವನ್ನೂ ತೆಗೆಸುತ್ತೇವೆ. ನಮ್ಮ ಸರ್ಕಾರ ಮಟ್ಟದಲ್ಲಿ ಎಲ್ಲ ಪೊಲೀಸ್ ಠಾಣೆಯಿಂದ ಮಾಹಿತಿ ತರಿಸಿಕೊಳ್ಳುತ್ತೇವೆ. ಅವನ ಕುಟುಂಬದ ಇತಿಹಾಸವನ್ನು ತೆಗೆಸಬೇಕು, ತೆಗೆಸುತ್ತೇವೆ. ನಮ್ಮ ಇತಿಹಾಸವನ್ನು ಸಹ ಅವರು ತೆಗೆದು ನೋಡಲಿ. ನಾನು ಯಾರ ಮೇಲೂ ಪ್ರಭಾವ ಬೀರುವ ಕೆಲಸ ಮಾಡಿಲ್ಲ, ಘಟನೆಯಲ್ಲಿ ನನ್ನ ಮಗನ ತಪ್ಪು ಇಲ್ಲ. ಇದೇ ಎಂದು ಸಾಬೀತಾದರೆ ಕ್ರಮ ತೆಗೆದುಕೊಳ್ಳಲಿ ಎಂದು ಮಾನಪ್ಪ ವಜ್ಜಲ್ ಹೇಳಿದ್ದಾರೆ. ಇದನ್ನೂ ಓದಿ: ಹಟ್ಟಿ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಪುತ್ರನ ಗುಂಡಾಗಿರಿ, ಎಫ್‍ಐಆರ್ ದಾಖಲು
ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಆಂಜನೇಯ ಮಾನಪ್ಪ ವಜ್ಜಲ್ ವಿರುದ್ಧ ಹಲ್ಲೆಗೆ ಒಳಗಾದ ಉದ್ಯಮಿ ದೀಪಕ್ ರೈ ಪುತ್ರ ವಿಕ್ರಮ್ ರೈ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ. ಪಂಚ್ ಮಾಡುವ ಆಯುಧದಿಂದ ಹಲ್ಲೆ ನಡೆಸಿದ್ದು, ಬರೋಬ್ಬರಿ ಮೂರು ಕಾರುಗಳಿಂದ ಪಂಚ್ ಆಯುಧ ಹೊರತೆಗೆದು ಹಲ್ಲೆ ಮಾಡಿದ್ದಾರೆ. ಸುಮಾರು 10 ರಿಂದ 15 ಹುಡುಗರನ್ನು ಕರೆಸಿ ಉದ್ಯಮಿ ದೀಪಕ್ ಪುತ್ರ ವಿಕ್ರಮ್ ರೈ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ.
ಇತ್ತ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ಸಹ ಪ್ರತಿ ದೂರು ನೀಡಿದ್ದಾರೆ. ಗಲಾಟೆ ಸಂಬಂಧ ಇಬ್ಬರ ದೂರುಗಳ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 124, 324, 504, 506, 149 ಅಡಿ ಎಫ್‍ಐಆರ್ ಮಾಡಿದ್ದಾರೆ.
ಏನಿದು ಪ್ರಕರಣ?
ವಸಂತನಗರದಲ್ಲಿರುವ ಮಾನಪ್ಪ ವಜ್ಜಲ್ ರ ಎಂಬೆಸಿ ಹ್ಯಾಬಿಟೆಟ್ ಅಪಾರ್ಟ್ ಮೆಂಟ್ ಬಳಿ ಗಲಾಟೆಯಾಗಿತ್ತು. ಸೆ.12ರಂದು ರಾತ್ರಿ 10 ಗಂಟೆಗೆ ಸ್ನೇಹಿತ ರೋಲ್ಟ್ ಮೆರೇನ್ ರನ್ನು ಡ್ರಾಪ್ ಮಾಡಲು ವಿಕ್ರಮ್ ಎಂಬೆಸಿ ಹ್ಯಾಬಿಟೆಟ್ ಅಪಾರ್ಟ್ ಮೆಂಟ್ ಬಳಿ ಬಂದಿದ್ದ. ಈ ವೇಳೆ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ಹಿಂದೆಯೇ ಪಾರ್ಕಿಂಗ್ ವಿಚಾರವಾಗಿ ಮಾನಪ್ಪ ವಜ್ಜಲ್ ಪುತ್ರ ಎರಡು ಬಾರಿ ಗಲಾಟೆ ಮಾಡಿದ್ದರಂತೆ. ಇದನ್ನೂ ಓದಿ: ವಿಜಯೇಂದ್ರ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ: ಬಿಎಸ್‍ವೈ
ಇದೀಗ ಆಂಜನೇಯ ಮತ್ತು ಮೌನೇಶ್ ಸೇರಿ 10 ರಿಂದ 15 ಜನ ಹುಡುಗರನ್ನು ಕರೆಸಿ ಹಲ್ಲೆ ನಡೆಸಿದ್ದಾರೆ. ಬೆಂಜ್, ಸೆಲ್ಟೋಸ್ ಮತ್ತು ಫಾಚ್ರ್ಯೂನರ್ ಕಾರುಗಳಿಂದ ಪಂಚ್ ಮಾಡುವ ಆಯುಧ ಹೊರತೆಗೆದು ಹಲ್ಲೆ ಮಾಡಿದ್ದಾರೆ. ತಲೆ, ಕಣ್ಣು ಮತ್ತು ದೇಹದ ಇತರೆ ಭಾಗಗಳಿಗೆ ಹಲ್ಲೆ ಮಾಡಿದ್ದಾರೆ. ಕಣ್ಣಿನ ಮೇಲ್ಭಾಗಕ್ಕೆ ರಕ್ತ ಬರುವಂತೆ ಗಾಯಗೊಳಿಸಿದ್ದಾರೆ. ಅಲ್ಲದೆ ನೀನು ಎಲ್ಲಿಗೆ ಹೋದರು ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ನೀನು ಪೊಲೀಸ್ ಠಾಣೆಗೆ ಹೋದರೂ ನಮಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಧಮಕಿ ಹಾಕಿದ್ದಾರೆ. ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ಚೇತನ್ ಅವರು ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು.
ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹಲ್ಲೆ ನಂತರ ಎರಡೂ ಕಡೆಯವರು ರಾಜಿಗೆ ಮುಂದಾಗಿದ್ದರು. ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆಸಿದ್ದರು. ಈ ವೇಳೆ ದೂರು ಕೊಟ್ಟರೆ ತೆಗೆದುಕೊಳ್ಳುವುದಾಗಿ ಪೊಲೀಸರು ಹೇಳಿ ಕಳುಹಿಸಿದ್ದರು.
ರಾಯಚೂರು: ರಸ್ತೆ ಕಾಮಗಾರಿ ಭೂಮಿ ಪೂಜೆ ಹಿನ್ನೆಲೆ ಜಿಲ್ಲೆಯ ಲಿಂಗಸುಗೂರಿನ ಹಾಲಿ ಶಾಸಕ ಡಿ.ಎಸ್ ಹೂಲಗೇರಿ ಹಾಗೂ ಮಾಜಿ ಶಾಸಕ ಮಾನಪ್ಪ ವಜ್ಜಲ್ ಬೆಂಬಲಿಗರ ನಡುವೆ ಜಟಾಪಟಿ ಏರ್ಪಟ್ಟು ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಲಿಂಗಸುಗೂರು ತಾಲೂಕಿನ ಹಟ್ಟಿ- ಚಿಂಚರಕಿ ರಸ್ತೆ ಭೂಮಿ ಪೂಜೆ ವೇಳೆ ಗಲಾಟೆ ನಡೆದಿದ್ದು, ಶಾಸಕರು ಹಾಗೂ ಅಧಿಕಾರಿಗಳು ಮಾಹಿತಿ ನೀಡದೇ ಭೂಮಿ ಪೂಜೆ ಮಾಡುತ್ತಿದ್ದಾರೆ ಅಂತ ಮಾನಪ್ಪ ವಜ್ಜಲ್ ಬೆಂಬಲಿಗರು ಕಿಡಿಕಾರಿದ್ದಾರೆ. ವಜ್ಜಲ್ ಅವಧಿಯಲ್ಲಿ ರಸ್ತೆ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಆದರೆ ಅವರನ್ನೇ ಕರೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ಜಿಟಿಡಿ ಪುತ್ರನ ಭಾವಚಿತ್ರ
ಭೂಮಿ ಪೂಜೆಗೆ ಬಂದಿದ್ದ ಡಿ.ಎಸ್. ಹೂಲಗೇರಿಗೆ ಮಾನಪ್ಪ ವಜ್ಜಲ್ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಜಟಾಪಟಿಯ ಮಧ್ಯೆಯೇ ಡಿ.ಎಸ್ ಹೂಲಗೇರಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಭೂಮಿ ಪೂಜೆ ನಂತರ ಡಿ.ಎಸ್ ಹೂಲಗೇರಿಯನ್ನು ಕಾರ್ಯಕರ್ತರು ಮೇಲಕ್ಕೆ ಎತ್ತಿ ಕುಣಿದಿದ್ದಾರೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಇದನ್ನೂ ಓದಿ:ಮಹಿಳೆಯರನ್ನು ಚುಡಾಯಿಸುತ್ತಿದ್ದ ವ್ಯಕ್ತಿಯ ತಲೆ ಬೋಳಿಸಿದ ಗ್ರಾಮಸ್ಥರು
ಬೆಂಗಳೂರು: ರಾಯಚೂರು ಜಿಲ್ಲೆಯ ಲಿಂಗಸಗೂರಿನ ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ 16 ಜೀವಂತ ಗುಂಡುಗಳ ಜೊತೆ ಸಿಕ್ಕಿಬಿದ್ದಿದ್ದಾರೆ.
ಬುಧವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಎ1 568 ವಿಮಾನದಲ್ಲಿ ಮಾನಪ್ಪ ವಜ್ಜಲ್ ಹೈದಾರಾಬಾದ್‍ಗೆ ಹೊರಟಿದ್ದರು. ಪರಿಶೀಲನೆ ವೇಳೆ ಸಿಐಎಸ್‍ಎಫ್ ಸಿಬ್ಬಂದಿಗೆ .32 ಎಂಎಂ ಕ್ಯಾಲಿಬರ್ ಪಿಸ್ತೂಲ್ ಗೆ ಬಳಸುವ ಬುಲೆಟ್ ಗಳು ಪತ್ತೆಯಾಗಿವೆ.
ಸಿಐಎಸ್‍ಎಫ್ ಸಿಬ್ಬಂದಿ ಮಾನಪ್ಪ ವಜ್ಜಲ್ ಮತ್ತು ಜೀವಂತ ಗುಂಡುಗಳನ್ನ ವಿಮಾನ ನಿಲ್ದಾಣದ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಾನಪ್ಪ ವಜ್ಜಲ್ ಬಳಿಯಲ್ಲಿರುವ ಗನ್ ಗೆ ಲೈಸನ್ಸ್ ಪಡೆದಿರೋದನ್ನ ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ. ಜೀವಂತ ಗುಂಡುಗಳನ್ನ ಹೈದರಾಬಾದ್ ಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಯಚೂರು: ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ತಮ್ಮ ಪುತ್ರನ ಮದುವೆ ಹಿನ್ನೆಲೆಯಲ್ಲಿ ಲಿಂಗಸುಗೂರಿನಲ್ಲಿ ಆಯೋಜಿಸಿದ್ದ 501 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಚಿತ್ರನಟ ಯಶ್, ರಾಧಿಕಾ ಪಂಡಿತ್ ದಂಪತಿ ಭಾಗವಹಿಸಿದ್ದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವ ಜೋಡಿಗಳಿಗೆ ಯಶ್ ದಂಪತಿಗಳು ಶುಭ ಹಾರೈಸಿದರು. ಯಶ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರಿಂದ ಸ್ಥಳದಲ್ಲಿ ನೂಕುನುಗ್ಗಲು ಉಂಟಾಯಿತು. ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಈ ಕಾರ್ಯಕ್ರಮಕ್ಕೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೇರಿ ಹಲವಾರು ರಾಜಕೀಯ ಮುಖಂಡರು ಭಾಗವಹಿಸಿ ನವ ಜೋಡಿಗಳಿಗೆ ಶುಭಕೋರಿದರು.
ಬೆಂಗಳೂರು: ಪಬ್ಲಿಕ್ ಟಿವಿ ಇಂದು ಬೆಳಗ್ಗೆ ಪ್ರಸಾರ ಮಾಡಿದ ರಾಯಚೂರು ಸಿಇಓ ಕೂರ್ಮಾರಾವ್ ಪ್ರಕರಣದ ಸುದ್ದಿ ಇಂದು ಸದನದಲ್ಲಿ ಪ್ರತಿಧ್ವನಿಸಿದ್ದು, ಸಿಇಓ ವಿರುದ್ಧ ಎಲ್ಲ ಶಾಸಕರು ಪಕ್ಷಭೇದ ಮರೆತು ಚರ್ಚೆಯಲ್ಲಿ ಭಾಗವಹಿಸಿ ಕ್ರಮಕ್ಕೆ ಆಗ್ರಹಿಸಿದರು.
ಮೊದಲಿಗೆ ರಾಯಚೂರು ಜಿಲ್ಲೆಯ ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಈ ಅಧಿಕಾರಿಯ ನಡವಳಿಕೆಯಿಂದ ರಾಜ್ಯದ ಜನರಿಗೆ ಅಪಮಾನವಾಗಿದೆ. ಇಂತಹ ಅಧಿಕಾರಿಗಳಿಗೆ ಬುದ್ಧಿಕಲಿಸಬೇಕು. ಕಾಲಿಗೆ ಬೂಟು ಹಾಕಿಕೊಂಡು ರೈತರ ಹೆಗಲ ಮೇಲೆ ಕುಳಿತುಕೊಂಡು ನಾಲೆ ದಾಟಿದ್ದಾರೆ. ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಸ್ಪೀಕರ್ ಕೋಳಿವಾಡ ಮಧ್ಯ ಪ್ರವೇಶಿಸಿ, ಇದೊಂದು ಅಮಾನವೀಯ ಘಟನೆ. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಕ್ರಮಕೈಗೊಳ್ಳಿ ಎಂದು ಸರ್ಕಾರಕ್ಕೆ ಆದೇಶಿಸಿದರು.
ಇದೊಂದು ಅಮಾನವೀಯ ಘಟನೆಯಾಗಿದ್ದು ಇದೇನು ಗುಲಾಮಗಿರಿ ಅಂದ್ಕೊಂಡಿದ್ದಾರಾ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗರಂ ಆಗಿಯೇ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಪ್ರಕರಣದ ಬಗ್ಗೆ ಈಗಲೇ ವರದಿಯನ್ನು ಪಡೆದುಕೊಳ್ಳುತ್ತೇವೆ. ವರದಿ ಬಂದ ನಂತರ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಇಓ ಕೂರ್ಮರಾವ್ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.