Tag: ಮಾನನಷ್ಟ ಕೇಸ್

  • ಖುದ್ದು ವಿಚಾರಣೆಗೆ ಹಾಜರಾಗಿ – ರಾಹುಲ್‌ ಗಾಂಧಿಗೆ ಬೆಂಗಳೂರು ಕೋರ್ಟ್‌ ಸಮನ್ಸ್‌

    ಖುದ್ದು ವಿಚಾರಣೆಗೆ ಹಾಜರಾಗಿ – ರಾಹುಲ್‌ ಗಾಂಧಿಗೆ ಬೆಂಗಳೂರು ಕೋರ್ಟ್‌ ಸಮನ್ಸ್‌

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಜಾಮೀನು ಮಂಜೂರು ಮಾಡಿದ 42 ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಖುದ್ದು ಹಾಜರಾಗಬೇಕೆಂದು ಸೂಚಿಸಿದೆ.

    ಬಿಜೆಪಿ ಸಲ್ಲಿಸಿದ್ದ ಮಾನನಷ್ಟ ಪ್ರಕರಣಕ್ಕೆ (Defamation Case) ಸಂಬಂಧಿಸಿದಂತೆ ಜೂನ್ 7 ರಂದು ಕಡ್ಡಾಯವಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕೆಂದು ಕೋರ್ಟ್‌ ಆದೇಶಿಸಿದೆ.

    ಈ ಹಿಂದೆ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ರಾಹುಲ್‌ ಗಾಂಧಿ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಈ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಕೋರ್ಟ್‌ ಹಾಜರಾಗಿದ್ದರೆ ರಾಹುಲ್‌ ಗಾಂಧಿ ಗೈರಾಗಿದ್ದರು. ಇದನ್ನೂ ಓದಿ: ಬಿಜೆಪಿ ವಿರುದ್ಧ 40% ಕಮಿಷನ್ ಭ್ರಷ್ಟಾಚಾರ ಜಾಹೀರಾತು ಕೇಸ್ – ಸಿಎಂ, ಡಿಸಿಎಂಗೆ ಜಾಮೀನು

    ಇಂದು ವಿಚಾರಣೆಯ ಸಂದರ್ಭದಲ್ಲಿ ಗಾಂಧಿ ಪರ ವಕೀಲರು INDIA ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಿರುವುದರಿಂದ ಅವರ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಕೋರಿದ್ದರು. ಆದರೆ ನ್ಯಾಯಾಲಯವು ಮನವಿಯನ್ನು ನಿರಾಕರಿಸಿತ್ತು. ಮಧ್ಯಾಹ್ನದ ವಿಚಾರಣೆಯನ್ನು ಮುಂದೂಡಿ ನಂತರ ಜೂನ್‌ 7 ರಂದು ಖುದ್ದು ಹಾಜರಾಗಬೇಕೆಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

     

    2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮುನ್ನಾದಿನದಂದು ಕಾಂಗ್ರೆಸ್ ಪಕ್ಷದ ಜಾಹೀರಾತುಗಳು ಮತ್ತು ಪ್ರಚಾರದ ಘೋಷಣೆಗಳನ್ನು ವಿರೋಧಿಸಿ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕ ಕೇಶವ ಪ್ರಸಾದ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

    ಬಿಜೆಪಿಯು ಸಾರ್ವಜನಿಕ ಕಾಮಗಾರಿಗಳ ನಿರ್ವಹಣೆಗಾಗಿ ಗುತ್ತಿಗೆದಾರರು ಮತ್ತು ಇತರರಿಂದ 40% ಕಮಿಷನ್ ಮಾಡುತ್ತಿದೆ ಎಂದು ಜಾಹೀರಾತುಗಳಲ್ಲಿ ಕಾಂಗ್ರೆಸ್ ಪಕ್ಷವು ಆರೋಪಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ತನ್ನ ಪಕ್ಷದ ಸದಸ್ಯರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕರು ಸುಳ್ಳು ಜಾಹೀರಾತನ್ನು ಪ್ರಕಟಿಸಿದೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಆರೋಪಿಸಿತ್ತು.

  • ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ಗೆ ಹಿನ್ನಡೆ – ಮುಂದಿನ ರಾಜಕೀಯ ಭವಿಷ್ಯ ಏನು?

    ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ಗೆ ಹಿನ್ನಡೆ – ಮುಂದಿನ ರಾಜಕೀಯ ಭವಿಷ್ಯ ಏನು?

    ನವದೆಹಲಿ: ಮಾನನಷ್ಟ ಪ್ರಕರಣದಲ್ಲಿ (Defamation Case) ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ವಜಾಗೊಳಿಸಿ, 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಸೂರತ್ ನ್ಯಾಯಾಲಯ ಆದೇಶವನ್ನು ಶುಕ್ರವಾರ ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿದೆ. ಅವರ ವಿರುದ್ಧ ಇನ್ನು 10 ಕ್ರಿಮಿನಲ್ ಕೇಸ್‌ಗಳು ಬಾಕಿ ಇವೆ ಎಂದು ಆದೇಶದ ವೇಳೆ ನ್ಯಾಯಮೂರ್ತಿ ಹೇಮಂತ್ ಪ್ರಚಕ್ ತಿಳಿಸಿದ್ದಾರೆ.

    ಪ್ರಸುತ್ತ ಗುಜರಾತ್ ಹೈಕೋರ್ಟ್ ಕೆಳಹಂತದ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿರುವ ಹಿನ್ನಲೆ ಅವರ ರಾಜಕೀಯ ಭವಿಷ್ಯ ಏನಾಗಬಹುದು ಎಂಬುದು ಎಲ್ಲರ ಕುತೂಹಲವಾಗಿದೆ. ಈ ಹಿಂದೆ ನಡೆದ ಹಲವು ಪ್ರಕರಣಗಳ ಆಧಾರದ ಮೇಲೆ ರಾಹುಲ್ ಗಾಂಧಿ ರಾಜಕೀಯ ಭವಿಷ್ಯ ಏನಾಗಬಹುದು ಎಂದು ಗಮನಿಸೋಣ.

    ಕೆಳ ಹಂತದ ಆದೇಶವನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿರುವ ಹಿನ್ನಲೆ ಸದ್ಯ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶಗಳಿದೆ. ಮೊದಲು ಅವರು ಜಾಮೀನು ಅರ್ಜಿ ಸಲ್ಲಿಸಬೇಕಾಗುತ್ತದೆ. ಜಾಮೀನು ಅರ್ಜಿ ಪುರಸ್ಕರಿಸಿ ಪ್ರಕರಣದ ವಿಚಾರಣೆ ನಡೆಸಿದರೆ ರಾಹುಲ್ ಗಾಂಧಿಗೆ ತಾತ್ಕಾಲಿಕ ರಿಲೀಫ್ ಸಿಗಲಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಜಾಮೀನು ನೀಡಲು ನಿರಾಕರಿಸಿದರೆ ಅವರು ಜೈಲಿಗೆ ಹೋಗಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ.

    ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ ರಾಹುಲ್ ಗಾಂಧಿ ಅವರನ್ನು ದೋಷಮುಕ್ತಗೊಳಿಸಿದರೆ ಇಡಿ ಪ್ರಕರಣದಿಂದ ಅವರು ಪಾರಾಗಲಿದ್ದಾರೆ. ಒಂದು ವೇಳೆ ಅವರು ತಪ್ಪಿತಸ್ಥರು ಎಂದು ಸುಪ್ರೀಂಕೋರ್ಟ್ ಕೂಡಾ ಆದೇಶ ನೀಡಿದರೆ ಅವರ ರಾಜಕೀಯ ಜೀವನ ಮಸುಕಾಗಲಿದೆ. ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ 2 ವರ್ಷದ ಶಿಕ್ಷೆ ನೀಡಿರುವ ಹಿನ್ನಲೆ 2 ವರ್ಷದ ಸೆರೆವಾಸದ ಜೊತೆಗೆ ಅವರು ಜನಪ್ರತಿನಿಧಿಗಳ ಕಾನೂನಿನ ಪ್ರಕಾರ 6 ವರ್ಷ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಲಿದ್ದಾರೆ. ಒಟ್ಟು 8 ವರ್ಷಗಳ ರಾಜಕೀಯ ಬದುಕು ನಾಶವಾಗಲಿದೆ. ಅವರ ಪ್ರಧಾನಿಯಾಗಬೇಕು ಎಂಬ ಕನಸಿಗೆ ದೊಡ್ಡ ಹಿನ್ನಡೆಯಾಗಲಿದೆ.

    ಇಂತಹ ಪ್ರಕರಣ ನ್ಯಾಯಾಲಯದ ಮುಂದೆ ಬಂದಿತ್ತು. 2013 ಮತ್ತು 2018ರ ಲಿಲಿ ಥಾಮಸ್ ಮತ್ತು ಲೋಕ ಪ್ರಹಾರಿ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್, ಕೆಳ ಹಂತದ ನ್ಯಾಯಾಲಯಗಳ ಶಿಕ್ಷೆಯನ್ನು ಅಮಾನತುಗೊಳಿಸಿದರೆ ಅಥವಾ ಮೇಲ್ಮನವಿ ನ್ಯಾಯಾಲಯವು ಶಿಕ್ಷೆಗೆ ತಡೆ ನೀಡಿದರೆ, ಜನಪ್ರತಿನಿಧಿ ಕಾಯ್ದೆಯಡಿ ಸಾರ್ವಜನಿಕ ಪ್ರತಿನಿಧಿಯ ಅನರ್ಹತೆಯನ್ನು ರದ್ದುಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಹಿನ್ನಡೆ- ಮಾನನಷ್ಟ ಪ್ರಕರಣದಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ

    ಈ ಹಿಂದೆ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಪ್ರಕರಣದಲ್ಲಿ ಈ ಬೆಳವಣಿಗೆಯಾಗಿದೆ. ಕೊಲೆ ಯತ್ನ ಪ್ರಕರಣದಲ್ಲಿ ಮೊಹಮ್ಮದ್ ಫೈಜಲ್‌ಗೆ ಕೆಳ ಹಂತದ ನ್ಯಾಯಾಲಯವು 10 ವರ್ಷಗಳ ಶಿಕ್ಷೆ ವಿಧಿಸಿತ್ತು, ಇದರಿಂದ ಸಂಸದ ಫೈಝಲ್ ತಮ್ಮ ಸಂಸತ್ ಸದಸ್ಯತ್ವ ಕಳೆದುಕೊಂಡಿದ್ದರು.

    ಫೈಝಲ್ ಕೆಳ ನ್ಯಾಯಾಲಯದ ವಿರುದ್ಧ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯದ ತೀರ್ಪಿಗೆ ಕೇರಳ ಉಚ್ಚ ನ್ಯಾಯಾಲಯ ತಡೆ ನೀಡಿತ್ತು. ಬಳಿಕ ಫೈಝಲ್ ಅವರ ಸಂಸತ್ತಿನ ಸದಸ್ಯತ್ವವನ್ನು ಸಹ ಪುನಃಸ್ಥಾಪಿಸಲಾಯಿತು. ರಾಹುಲ್ ಗಾಂಧಿ ವಿಚಾರದಲ್ಲಿ ಗುಜರಾತ್ ಹೈಕೋರ್ಟ್ ಮೇಲಿದ್ದ ಭರವಸೆ ಹುಸಿಯಾಗಿರುವ ಹಿನ್ನಲೆ ಅವರ ನಂಬಿಕೆ ಇನ್ನು ಸುಪ್ರೀಂಕೋರ್ಟ್ ಮಾತ್ರವಾಗಿದೆ. ಇದನ್ನೂ ಓದಿ: Karnataka Budget 2023: ರಾಜ್ಯಕ್ಕೆ 7,780 ಕೋಟಿ ರೂ. ನಷ್ಟ, 26,954 ಕೋಟಿ GST ಕೊರತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಹುಲ್ ಗಾಂಧಿಗೆ ಹಿನ್ನಡೆ- ಮಾನನಷ್ಟ ಪ್ರಕರಣದಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ

    ರಾಹುಲ್ ಗಾಂಧಿಗೆ ಹಿನ್ನಡೆ- ಮಾನನಷ್ಟ ಪ್ರಕರಣದಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ

    ಅಹಮದಾಬಾದ್: ಮಾನನಷ್ಟ ಪ್ರಕರಣದಲ್ಲಿ (Defamation Case) ಸೂರತ್ ನ್ಯಾಯಾಲಯ (Surat Court) ನೀಡಿದ್ದ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಇದೀಗ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ರಾಗಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಗುಜರಾತ್ ಹೈಕೋರ್ಟ್ (Gujarat High Court) ವಜಾ ಮಾಡಿದೆ.

    ಸುದೀರ್ಘ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್ ಶುಕ್ರವಾರ ತನ್ನ ಆದೇಶ ಪ್ರಕಟಿಸಿದೆ. ಸೂರತ್ ನ್ಯಾಯಾಲಯ ನೀಡಿದ ಆದೇಶ ಸರಿಯಾಗಿದೆ ಮತ್ತು ಕಾನೂನುಬದ್ಧವಾಗಿದೆ ಎನ್ನುವ ಮೂಲಕ ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

    ಶಿಕ್ಷೆಯ ತಡೆ ನಿರಾಕರಿಸುವುದರಿಂದ ರಾಹುಲ್ ಗಾಂಧಿ ಅವರಿಗೆ ಅನ್ಯಾಯವಾಗುವುದಿಲ್ಲ, ಶಿಕ್ಷೆಯನ್ನು ತಡೆಹಿಡಿಯಲು ಯಾವುದೇ ಸಮಂಜಸವಾದ ಕಾರಣವಿಲ್ಲ. ವಿಧಿಸಲಾದ ಆದೇಶವು ಸರಿ ಮತ್ತು ಕಾನೂನುಬದ್ಧವಾಗಿದೆ. ಅನರ್ಹತೆಯು ಕೇವಲ ಸಂಸದರು ಮತ್ತು ಶಾಸಕರಿಗೆ ಸೀಮಿತವಾಗಿಲ್ಲ. ಇದಲ್ಲದೆ ಅರ್ಜಿದಾರರ ವಿರುದ್ಧ ಹತ್ತು ಪ್ರಕರಣಗಳು ಬಾಕಿ ಉಳಿದಿವೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ 250 ರೂ. ತಲುಪಿದ ಟೊಮೆಟೋ ದರ- ಗ್ರಾಹಕರು ಕಂಗಾಲು

    ರಾಹುಲ್ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಅಥವಾ ಸಂಸದರಾಗಿ ತಮ್ಮ ಸ್ಥಾನಮಾನವನ್ನು ಅಮಾನತುಗೊಳಿಸಿರುವುದನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ಆದೇಶ ನೀಡುವ ವೇಳೆ ನ್ಯಾಯಾಲಯ ಹೇಳಿದೆ.

    ಎಲ್ಲಾ ಕಳ್ಳರು ಮೋದಿಯನ್ನು ಸಾಮಾನ್ಯ ಉಪನಾಮವನ್ನಾಗಿ ಮಾಡಿಕೊಂಡಿರುವುದು ಹೇಗೆ? ಎನ್ನುವ ಹೇಳಿಕೆ ವಿರುದ್ಧ ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸೂರತ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹೆಚ್‌ಹೆಚ್ ವರ್ಮಾ, ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿ ಮಾರ್ಚ್ 23 ರಂದು ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ಇದನ್ನೂ ಓದಿ: Karnataka Budget 2023: ಬೆಂಗಳೂರಿಗೆ ಸಿಂಹಪಾಲು ಸಾಧ್ಯತೆ- ಗರಿಗೆದರಿದ ಹಲವು ನಿರೀಕ್ಷೆಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಟಿ ರವಿ ವಿರುದ್ಧ ಡಿಕೆಶಿ ಮಾನನಷ್ಟ ಕೇಸ್?

    ಸಿಟಿ ರವಿ ವಿರುದ್ಧ ಡಿಕೆಶಿ ಮಾನನಷ್ಟ ಕೇಸ್?

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ವಿರುದ್ಧ ಡಿಕೆ ಶಿವಕುಮಾರ್‌ (DK Shivakumar) ಅವರು ಮಾನನಷ್ಟ ಮೊಕದ್ದಮೆ (Defamation Case) ಹೂಡುವ ಸಾಧ್ಯತೆಯಿದೆ.

    ಮೋದಿ ಸಮುದಾಯವನ್ನು (Modi Communty) ಕಳ್ಳರು ಎಂದು ಹೇಳಿ ನ್ಯಾಯಾಲಯದಿಂದ ದೋಷಿಯಾಗಿ 2 ವರ್ಷ ಶಿಕ್ಷೆಗೆ ರಾಹುಲ್‌ ಗಾಂಧಿ (Rahul Gandhi) ಗುರಿಯಾದ ಬಳಿಕ ವೈಯುಕ್ತಿಕ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ದ ಕಾನೂನು ಸಮರ ನಡೆಸಲು ಕೈ ನಾಯಕರು ಮುಂದಾಗಿದ್ದಾರೆ. ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ BMTC

    ದಾವಣಗೆರೆ ಸಮಾವೇಶದಲ್ಲಿ ಡಿಕೆಶಿ ಬ್ರದರ್ಸ್ ಕುಕ್ಕರ್ ಬಾಂಬ್ ಇಟ್ಟವರು ಎಂದು ಸಿಟಿ ರವಿ ಹೇಳಿದ್ದರು. ಕುಕ್ಕರ್ ಬಾಂಬ್ ಇಡುವ ಕೆಲಸವನ್ನ ಡಿಕೆ‌ಶಿ ಬ್ರದರ್ಸ್ ಮಾಡಿದ್ದರು ಎಂದು ಆರೋಪಿಸಿದ್ದರು.

    ಈ ಹೇಳಿಕೆ ಸಂಬಂಧ ಸಿ.ಟಿ.ರವಿ ವಿರುದ್ದ ಮಾನನಷ್ಟ ಮೊಕದ್ದಮೆ‌ ಹೂಡುವಂತೆ ಆಪ್ತರು ಡಿಕೆ ಶಿವಕುಮಾರ್‌ಗೆ ಸಲಹೆ ನೀಡಿದ್ದಾರೆ. ಆಪ್ತರ ಸಲಹೆಗೆ ವಕೀಲರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.

     

     

  • ಭ್ರಷ್ಟಾಚಾರದ ಆರೋಪ ಮಾಡಿ ಅರೆಸ್ಟ್‌ ಆಗಿದ್ದ ಕೆಂಪಣ್ಣಗೆ ಜಾಮೀನು

    ಭ್ರಷ್ಟಾಚಾರದ ಆರೋಪ ಮಾಡಿ ಅರೆಸ್ಟ್‌ ಆಗಿದ್ದ ಕೆಂಪಣ್ಣಗೆ ಜಾಮೀನು

    ಬೆಂಗಳೂರು: ಕ್ರಿಮಿನಲ್‌ ಮಾನನಷ್ಟ ಪ್ರಕರಣದಲ್ಲಿ(Criminal Defamation Case) ಬಂಧನಕ್ಕೆ ಒಳಗಾಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ(Kempanna) ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

    ಕೆಂಪಣ್ಣ ಸೇರಿ ಒಟ್ಟು 19 ಗುತ್ತಿಗೆದಾರರು ಸುದ್ದಿಗೋಷ್ಠಿ ಮಾಡಿ ತೋಟಗಾರಿಕಾ ಸಚಿವ ಮುನಿರತ್ನ(Munirathna) ವಿರುದ್ಧ ಕಮೀಷನ್ ಆರೋಪ ಮಾಡಿದ್ದರು. ಈ ಸಂಬಂಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಕೆಂಪಣ್ಣ ಸೇರಿ 19 ಗುತ್ತಿಗೆದಾರರ ವಿರುದ್ಧ ಮುನಿರತ್ನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕಿದ್ದರು.

    8ನೇ ಎಸಿಎಂಎಂ ನ್ಯಾಯಾಲಯ ಕೆಂಪಣ್ಣ ಸೇರಿ 19 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್‌ ಆರೋಪಿಗಳ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಿತ್ತು.

    ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗದ ಪೊಲೀಸರು ಆರೋಪಿಗಳಾದ ಕೆಂಪಣ್ಣ ಮತ್ತು ಇತರರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ರಾತ್ರಿ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಕೆಂಪಣ್ಣ, ಕೃಷ್ಣಾರೆಡ್ಡಿ, ನಟರಾಜು, ಗುರುಸಿದ್ದಪ್ಪ, ಅಂಬಿಕಾಪತಿ ಸೇರಿ ಐವರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದ್ದಾರೆ. ಇದನ್ನೂ ಓದಿ: 2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು

    ಜಾಮೀನು ಸಿಗುವ ಪ್ರಕರಣ ಆಗಿರುವ ಕಾರಣ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಮುನಿರತ್ನ ಪರ ವಕೀಲ ವಿವೇಕ್‌ ಸುಬ್ಬಾರೆಡ್ಡಿ ತಿಳಿಸಿದ್ದಾರೆ.

    court order law

    ಏನಿದು ಪ್ರಕರಣ?
    ಸರ್ಕಾರದ ವಿರುದ್ಧ ಶೇ.40 ಭ್ರಷ್ಟಾಚಾರ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತು 18 ಮಂದಿ (Kempanna and Contractors Association) ವಿರುದ್ಧ ಸೆಪ್ಟೆಂಬರ್‌ನಲ್ಲಿ ಮುನಿರತ್ನ ಕ್ರಿಮಿನಲ್‌ ಮಾನಷ್ಟ ಕೇಸ್‌(Criminal Defamation Case) ಹೂಡಿದ್ದರು.

    ಈ ಸಂಬಂಧ ಅಂದು ಸುದ್ದಿಗೋಷ್ಠಿ ನಡೆಸಿದ್ದ ಮುನಿರತ್ನ, ನನ್ನ ವಿರುದ್ಧ ಮಾಡಿದ ಆರೋಪವು ಸೇರಿದಂತೆ 40% ಕಮೀಷನ್(40 Percent Commission) ಆರೋಪಕ್ಕೆ ದಾಖಲೆ ಕೊಡಿ ಎಂದು ದಾವೆ ಹೂಡಿದ್ದೇನೆ. 50 ಕೋಟಿ ಮಾನನಷ್ಟ ಪ್ರಕರಣವನ್ನು 4 ತಿಂಗಳ ಒಳಗಡೆ ಇತ್ಯರ್ಥ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದರು.

    ಆಧಾರ ರಹಿತ ಆರೋಪ ಮಾಡಿದ್ದಕ್ಕೆ ಮುನಿರತ್ನ 7 ದಿನಗಳ ಒಳಗಡೆ ಕ್ಷಮೆ ಕೇಳುವಂತೆ ಕೆಂಪಣ್ಣಗೆ ಸೂಚಿಸಿದ್ದರು. ಆದರೆ ಕೆಂಪಣ್ಣ ಕ್ಷಮೆ ಕೇಳದ ಹಿನ್ನೆಲೆಯಲ್ಲಿ ಮುನಿರತ್ನ ಮಾನನಷ್ಟ ಕೇಸ್‌ ದಾಖಲಿಸಿದ್ದರು. ಅಷ್ಟೇ ಅಲ್ಲದೇ ಚುನಾವಣೆ ನಡೆಯುವ ಮುನ್ನ ಇತ್ಯರ್ಥ ಆಗಬೇಕಾಗಿರುವುದರಿಂದ 4 ತಿಂಗಳ ಒಳಗಡೆ ಪ್ರಕರಣವನ್ನು ಮುಗಿಸುವಂತೆ ಮುನಿರತ್ನ ಮನವಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕ್ಷಮೆ ಕೇಳದ ಕೆಂಪಣ್ಣ ಸೇರಿ 18 ಮಂದಿ ಮೇಲೆ 50 ಕೋಟಿ ಮಾನನಷ್ಟ ಕೇಸ್‌, ಶೀಘ್ರವೇ ಎಫ್‌ಐಆರ್‌: ಮುನಿರತ್ನ

    ಕ್ಷಮೆ ಕೇಳದ ಕೆಂಪಣ್ಣ ಸೇರಿ 18 ಮಂದಿ ಮೇಲೆ 50 ಕೋಟಿ ಮಾನನಷ್ಟ ಕೇಸ್‌, ಶೀಘ್ರವೇ ಎಫ್‌ಐಆರ್‌: ಮುನಿರತ್ನ

    ಬೆಂಗಳೂರು: ಸರ್ಕಾರದ ವಿರುದ್ಧ ಶೇ.40 ಭ್ರಷ್ಟಾಚಾರ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತು 18 ಮಂದಿ (Kempanna and Contractors Association) ವಿರುದ್ಧ ಕ್ರಿಮಿನಲ್‌ ಮಾನಷ್ಟ ಕೇಸ್‌(Criminal Defamation Case) ಹೂಡಿದ್ದೇನೆ. ಸೆ.21ಕ್ಕೆ ಕೋರ್ಟ್‌ನಲ್ಲಿ ನನ್ನ ಹೇಳಿಕೆ ದಾಖಲಾಗುತ್ತದೆ. ನಂತರ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತದೆ ಎಂದು ತೋಟಗಾರಿಕಾ ಸಚಿವ ಮುನಿರತ್ನ(Munirathna ) ಹೇಳಿದ್ದಾರೆ.

    ನನ್ನ ವಿರುದ್ಧ ಮಾಡಿದ ಆರೋಪವು ಸೇರಿದಂತೆ 40% ಕಮೀಷನ್(40 Percent Commission) ಆರೋಪಕ್ಕೆ ದಾಖಲೆ ಕೊಡಿ ಎಂದು ದಾವೆ ಹೂಡಿದ್ದೇನೆ. 50 ಕೋಟಿ ಮಾನನಷ್ಟ ಪ್ರಕರಣವನ್ನು 4 ತಿಂಗಳ ಒಳಗಡೆ ಇತ್ಯರ್ಥ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಕೆಂಪಣ್ಣ ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. ಆಧಾರ ರಹಿತ ಆರೋಪ ಮಾಡಿದ್ದಕ್ಕೆ ನಾನು 7 ದಿನಗಳ ಒಳಗಡೆ ಕ್ಷಮೆ ಕೇಳುವಂತೆ ಸೂಚಿಸಿದ್ದೆ. ಆದರೆ ಅವರು ಕ್ಷಮೆ ಕೇಳದ ಹಿನ್ನೆಲೆಯಲ್ಲಿ ಮಾನನಷ್ಟ ಕೇಸ್‌ ಹೂಡಿದ್ದೇನೆ. ಚುನಾವಣೆ ನಡೆಯುವ ಮುನ್ನ ಇತ್ಯರ್ಥ ಆಗಬೇಕಾಗಿರುವುದರಿಂದ 4 ತಿಂಗಳ ಒಳಗಡೆ ಪ್ರಕರಣವನ್ನು ಮುಗಿಸುವಂತೆ ಸೆಕ್ಷನ್ 227 ಅನ್ವಯ ರಿಟ್ ಅರ್ಜಿ ಹಾಕುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸುಮಲತಾ ಹೇಳಿದ ದಿನ ಆಣೆ ಮಾಡಲು ರೆಡಿ- ಮೇಲುಕೋಟೆ ಸನ್ನಿಧಿಯಲ್ಲಿ ಪುಟ್ಟರಾಜು ಸವಾಲು ಸ್ವೀಕಾರ

    ಪ್ರಕರಣದ ಆರೋಪಿಗಳು ಯಾವುದೇ ಆಸ್ತಿ ಪರಭಾರೆ ಮಾಡುವಂತಿಲ್ಲ. ಯಾವುದೇ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಿದ್ದರೆ ಅದರ ಬಿಲ್ ಬಿಡುಗಡೆ ಆಗಬಾರದು. ಅವರ ಕುಟುಂಬದಲ್ಲಿ ಯಾವುದೇ ವಿಲ್ ಮಾಡುವಂತಿಲ್ಲ. ಎಲ್ಲದಕ್ಕೂ ಇನ್‌ಜಂಕ್ಷನ್‌ ಆರ್ಡರ್‌ ತರಲಾಗಿದ್ದು ಎಲ್ಲಾ 18 ಮಂದಿಗೂ ಇದು ಅನ್ವಯವಾಗಲಿದೆ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ದಾಖಲೆ ಇಟ್ಟು ಮಾತನಾಡಿದರೆ ಅವರ ಘನೆ ಹೆಚ್ಚಾಗಲಿದೆ. ಈ ಪ್ರಕರಣದಲ್ಲಿ ಈಗ ಎರಡೇ ಉಳಿದಿದೆ. ದಾಖಲೆ ನೀಡಿ ನನಗೆ ಶಿಕ್ಷೆ ಕೊಡಿಸಿ, ದಾಖಲೆ ಇಲ್ಲದಿದ್ದರೆ ಅವರಿಗೆ ಶಿಕ್ಷೆ ಆಗಲಿ ಎಂದು ಹೇಳಿದರು.

     ಈಗಾಗಲೇ ಕಾಂಗ್ರೆಸ್ ನಾಯಕರನ್ನು ಜನ ತಿರಸ್ಕಾರ ಮಾಡಿದ್ದು, ಇವರು ಯಾಕೆ ಇಷ್ಟೊಂದು ಆಸೆ ಪಡ್ತಿದ್ದಾರೆ ಅಂತ ಗೊತ್ತಿಲ್ಲ. ಇವರು ಅಧಿಕಾರಕ್ಕಂತೂ ಬರುವುದಿಲ್ಲ. 2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. 2023ರ ಡಿಸೆಂಬರ್ ನಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನಲ್ಲಿ ಹುಡುಕಬೇಕು ಎಂದು ವ್ಯಂಗ್ಯವಾಡಿದರು.

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಆಸ್ತಿ ಖರೀದಿಸಿಲ್ಲ – 3 ಕೋಟಿ ಮಾನನಷ್ಟ ಕೇಸ್‌ ಹಾಕ್ತೀನಿ ಎಂದ ಚನ್ನಣ್ಣನವರ್‌

    ಅಕ್ರಮ ಆಸ್ತಿ ಖರೀದಿಸಿಲ್ಲ – 3 ಕೋಟಿ ಮಾನನಷ್ಟ ಕೇಸ್‌ ಹಾಕ್ತೀನಿ ಎಂದ ಚನ್ನಣ್ಣನವರ್‌

    ಬೆಂಗಳೂರು: ನನ್ನ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡಲಾಗಿದೆ. ಸುಳ್ಳು ಆರೋಪ ಮಾಡಿದವರ ವಿರುದ್ಧ 3 ಕೋಟಿ ರೂ. ಮಾನನಷ್ಟ (Defamation)ಪ್ರಕರಣ ದಾಖಲಿಸಲಾಗುವುದು ಎಂದು ಐಪಿಎಸ್‌ ಅಧಿಕಾರಿ ರವಿ ಡಿ ಚನ್ನಣ್ಣನವರ್‌(Ravi D Channannavar) ಹೇಳಿದ್ದಾರೆ.

    ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಚನ್ನಣ್ಣನವರ್‌ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ಹೇಳಿಕೆಯಲ್ಲಿ ಏನಿದೆ?
    ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ಕೆಲ ವ್ಯಕ್ತಿಗಳು ನನ್ನ ಮೇಲೆ ಮತ್ತು ನನ್ನ ಕುಟುಂಬದ ಮೇಲೆ ಆಧಾರರಹಿತ ಆರೋಪ ಮಾಡಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಇವೆಲ್ಲವೂ ಸುಳ್ಳಾಗಿದ್ದು, ದುರುದ್ದೇಶದಿಂದ ಕೂಡಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ, ನನ್ನ ತಂದೆ-ತಾಯಿಯವರ ಹೆಸರಲ್ಲಿರುವ ಕೆಲ ಪಹಣಿ ಹಾಕಿ, ಆರೋಪಿಸಿದ್ದು, ಅವುಗಳೆಲ್ಲ ಕಾನೂನು ಬದ್ಧವಾಗಿಯೇ ಖರೀದಿಸಿದ್ದೇನೆ. ಇವುಗಳು ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಗಳಾಗಿವೆ. ಅವುಗಳನ್ನೆಲ್ಲ ಆಯಾ ವರ್ಷವೇ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.

    ಇವುಗಳನ್ನು ನಾನು ಭ್ರಷ್ಟ ರೀತಿಯಿಂದ ಸಂಪಾದಿಸಿದ್ದೇನೆ ಎಂದು ಸುಳ್ಳು ಸುದ್ದಿಗಳನ್ನು ಹರಡಿ ನನ್ನನ್ನು ತೇಜೋವಧೆ ಮಾಡಬೇಕೆಂದೇ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುತ್ತಿದ್ದು, ನಾನೊಬ್ಬ ಅಖಿಲ ಭಾರತೀಯ ಸೇವಕನಾಗಿದ್ದು, ಸೇವಾ ನಿಯಮಗಳ ಅಡಿ ವರ್ತಿಸಬೇಕಾದ್ದು ನನ್ನ ಕರ್ತವ್ಯ. ಆದ್ದರಿಂದ ಈ ಕುರಿತಂತೆ ನಾನು ಇದಾವುದಕ್ಕೂ ನಾನು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸದೇ ಕಾನೂನುಬದ್ಧವಾಗಿ ಕ್ರಮ ಕೈಗೊಂಡಿರುತ್ತೇನೆ.

    ನಾನು ಈಗಾಗಲೇ ಕಾನೂನಾತ್ಮಕವಾಗಿ ನಮ್ಮ ನ್ಯಾಯವಾದಿಗಳ ಮೂಲಕ ಲೀಗಲ್ ನೋಟಿಸ್ ನೀಡಿರುತ್ತೇನೆ. ಇದಕ್ಕೆ ಉತ್ತರ ಬಂದಿರುವುದಿಲ್ಲ ಈ ಕುರಿತು ಸಂಬಂಧಪಟ್ಟ ಮಾನ್ಯ ನ್ಯಾಯಾಲಯದಲ್ಲಿ 3 ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು(Criminal Defamation) ದಾಖಲಿಸಲಿದ್ದೇನೆ. ಹಾಗೆಯೇ ಸುಳ್ಳು ಆಪಾದನೆ ಮಾಡಿದ್ದಕ್ಕೆ, ಎರಡು ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಕೇಸ್ ಹೂಡಲಿದ್ದೇನೆ.

    ನನಗೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದೆ. ನ್ಯಾಯಾಲಯ ತೀರ್ಪು ಕೊಡುವವರಿಗೆ, ಎಲ್ಲಾ ಸುಳ್ಳು ಸುದ್ದಿಗಳನ್ನು ನಂಬದಂತೆ, ಎಲ್ಲ ಆತ್ಮೀಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

    ಮಾಧ್ಯಮಗಳು ಪ್ರಚಾರ ಮಾಡದಂತೆ ತಡೆಯಜ್ಞೆ ತಂದದ್ದು ಅವುಗಳ ಅಭಿವ್ಯಕ್ತಿ ಸತ್ವವನ್ನು ಕುಗ್ಗಿಸಲು ಅಲ್ಲ. ಅನೇಕ ಸಂಕಷ್ಟಗಳ ನಡುವೆ ಬೆಳೆದ ನಾನು ನನ್ನ ಸ್ವಾಭಿಮಾನ ಮತ್ತು ವ್ಯಕ್ತಿತ್ವದ ಬಗ್ಗೆ ಸದಾ ಎಚ್ಚರದಲ್ಲಿ ಇದ್ದೇನೆ. ಕೆಲವು ಸುಳ್ಳು ಸುದ್ದಿಗಳು ನನ್ನ ಬಗ್ಗೆ ಹರಿದಾಡಿದ ಕಾರಣ ನಾನು ತಡೆಯಜ್ಞೆ ತಂದದ್ದನ್ನು ಅನ್ಯತಾ ಭಾವಿಸಬಾರದೆಂದು ಈ ಮೂಲಕ ತಮ್ಮ ಗಮನಕ್ಕೆ ತರಲು ಇಚ್ಚಿಸಿದ್ದೇನೆ.

    ನನಗೆ ನ್ಯಾಯವಾದಿಗಳ ಬಗ್ಗೆ ಸ್ವಚ್ಛ ವ್ಯವಸ್ಥೆ ಬಯಸುವವರ ಬಗ್ಗೆ, ಅಪಾರ ಗೌರವವಿದೆ, ಈ ಮೂಲಕ ನನ್ನ ಆತ್ಮೀಯರೆಲ್ಲರಿಗೂ ಮನವಿ ಮಾಡುವುದೇನೆಂದರೆ, ತಾವು ದಯಮಾಡಿ ಯಾವುದೇ ಪ್ರತಿಕ್ರಿಯೆ ನೀಡಬಾರದು, ಅಶ್ಲೀಲ ಪದ ಬಳಕೆ, ಹೀಯಾಳಿಸುವುದನ್ನು ಮಾಡಬಾರದು. ಎಂದು ಎಲ್ಲಾ ಮಾಧ್ಯಮಗಳ ಮೂಲಕ ಕೇಳಿಕೊಳ್ಳುತ್ತೇನೆ.

  • ಕೊರೊನಾ ಲಸಿಕೆಯಿಂದ ತಲೆನೋವು – ವ್ಯಕ್ತಿಯ ವಿರುದ್ಧ 100 ಕೋಟಿ ಕೇಸ್‌ ಹೂಡಿದ ಸೀರಂ

    ಕೊರೊನಾ ಲಸಿಕೆಯಿಂದ ತಲೆನೋವು – ವ್ಯಕ್ತಿಯ ವಿರುದ್ಧ 100 ಕೋಟಿ ಕೇಸ್‌ ಹೂಡಿದ ಸೀರಂ

    ನವದೆಹಲಿ: ಕೋವಿಶೀಲ್ಡ್‌ ಕೋವಿಡ್‌ ಲಸಿಕೆ ಪಡೆದ ಬಳಿಕ ಆರೋಗ್ಯ ಸಮಸ್ಯೆಯಾಗಿದೆ ಎಂದು ದೂಷಿಸಿದ ವ್ಯಕ್ತಿಯ ವಿರುದ್ಧ ಸೀರಂ ಇನ್‌ಸ್ಟಿಟ್ಯೂಟ್‌ 100 ಕೋಟಿ ರೂ. ಮಾನನಷ್ಟ ಕೇಸ್‌ ಹೂಡಿದೆ.

    ಚೆನ್ನೈ ಮೂಲದ 40 ವರ್ಷದ ಸ್ವಯಂಸೇವಕರೊಬ್ಬರು ಕೋವಿಶೀಲ್ಡ್‌ ಲಸಿಕೆಯನ್ನು ಪಡೆದುಕೊಂಡಿದ್ದರು. ಲಸಿಕೆ ಪಡೆದ ಬಳಿಕ ನನಗೆ ತಲೆ ಸಿಡಿತ ಕಾಣಿಸಿಕೊಂಡಿದೆ. ಹೀಗಾಗಿ ನನಗೆ ಸೀರಂ ಸಂಸ್ಥೆ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು.

    ಈ ವಿಚಾರಕ್ಕೆ ಪ್ರತಿಕ್ರಿಯಿಸಿದರುವ ಸೀರಂ ಕಂಪನಿ ಲಸಿಕೆ ಪರೀಕ್ಷೆಗೆ ಒಳಗಾದ ಸ್ವಯಂಸೇವಕನ ಆರೋಗ್ಯ ಸ್ಥಿತಿಗೂ ಕೋವಿಡ್‌ ಲಸಿಕೆಗೆ ಯಾವುದೇ ಸಂಬಂಧವಿಲ್ಲ. ಇದು ದೂರುದ್ದೇಶಪೂರಿತ ಆರೋಪವಾಗಿದ್ದು ತನ್ನ ಆರೋಗ್ಯ ಸಮಸ್ಯೆಗೆ ಈ ಲಸಿಕೆಯನ್ನು ದೂಷಿಸುತ್ತಿದ್ದಾನೆ ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

    ಸುಳ್ಳು ಆರೋಪ ಮಾಡಿ ಸಂಸ್ಥೆಯ ಘನತೆಗೆ ಧಕ್ಕೆ ತಂದಿದ್ದಕ್ಕೆ ಸೀರಂ ಕಂಪನಿ 100 ಕೋಟಿ ರೂ. ಕ್ರಿಮಿನಲ್‌ ಮಾನನಷ್ಟ ಕೇಸ್‌ ಹೂಡಿದ್ದು ಇಂದು ಸ್ವಯಂಸೇವಕನಿಗೆ ನೋಟಿಸ್‌ ಜಾರಿಯಾಗುವ ಸಾಧ್ಯತೆಯಿದೆ.

    ಸೀರಂ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ವಿಶ್ವ ಪ್ರಸಿದ್ಧ ಸಂಸ್ಥೆಯ ವಿರುದ್ಧ ಹಣ ಪಡೆಯಲು ಸುಳ್ಳು ಆರೋಪ ಮಾಡಿದ್ದಾನೆ. ಸ್ವಯಂಸೇವಕನ ಮೇಲೆ ಈಗಾಗಲೇ ಪ್ರಯೋಗ ನಡೆಸಿ ಹಲವು ದಿನಗಳು ನಡೆದಿದೆ. ಈಗ ಸಂಪೂರ್ಣವಾಗಿ ಚೇತರಿಕೆಯಾಗಿದ್ದಾನೆ ಎಂದು ತಿಳಿಸಿದ್ದಾರೆ.

    ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ (ಐಸಿಎಂಆರ್‌)  ಹಿರಿಯ‌ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಸ್ವಯಂಸೇವಕನ ಆರೋಪದ ಹಿನ್ನೆಲೆಯಲ್ಲಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದು, ಸ್ವಯಂ ಸೇವಕನ ಆರೋಗ್ಯ ಸಮಸ್ಯೆಗೂ ಲಸಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.

    ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಜೊತೆಯಾಗಿ ಕೋವಿಶೀಲ್ಡ್‌ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು, ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನಲ್ಲಿ ತಯಾರಾಗುತ್ತಿದೆ.

  • ಯೂಟ್ಯೂಬರ್‌ ವಿರುದ್ಧ 500 ಕೋಟಿ ಮಾನನಷ್ಟ ಕೇಸ್‌ ಹಾಕಿದ ಅಕ್ಷಯ್‌ ಕುಮಾರ್‌

    ಯೂಟ್ಯೂಬರ್‌ ವಿರುದ್ಧ 500 ಕೋಟಿ ಮಾನನಷ್ಟ ಕೇಸ್‌ ಹಾಕಿದ ಅಕ್ಷಯ್‌ ಕುಮಾರ್‌

    – 4 ತಿಂಗಳಿನಲ್ಲಿ ಲಕ್ಷಗಟ್ಟಲೇ ಹಣ ಸಂಪಾದನೆ
    – ಸಬ್‌ಸ್ಕ್ರೈಬರ್ಸ್ ಸಂಖ್ಯೆ 2 ಲಕ್ಷ ‌ ಏರಿಕೆ

    ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ತನ್ನ ವಿರುದ್ಧವಾಗಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದಕ್ಕೆ ಯೂಟ್ಯೂಬರ್‌ ವಿರುದ್ಧ ಕೋಟಿಗಟ್ಟಲೇ ಮಾನನಷ್ಟ ಪ್ರಕರಣವನ್ನು ದಾಖಲಿಸಿದ್ದಾರೆ.

    ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ತನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಪ್ರಸ್ತಾಪ ಮಾಡಿದ್ದಕ್ಕೆ ಯೂಟ್ಯೂಬರ್‌ ರಶೀದ್ ಸಿದ್ದಿಕಿ ವಿರುದ್ಧ 500 ಕೋಟಿ ರೂ. ಮಾನನಷ್ಟ ಕೇಸ್‌ ಹೂಡಿದ್ದಾರೆ.

    ಸಿದ್ದಿಕಿ ಹೇಳಿದ್ದು ಏನು?
    ಎಂಎಸ್ ಧೋನಿ: ದಿ ಅನ್‌ ಟೋಲ್ಡ್‌ ಸ್ಟೋರಿಯಂತಹ ಹಿಟ್‌ ಚಿತ್ರದಲ್ಲಿ ಸುಶಾಂತ್‌ ನಟಿಸಿದ್ದಕ್ಕೆ ಅಕ್ಷಯ್‌ ಕುಮಾರ್‌ ಅಸಮಾಧಾನವನ್ನು ಹೊಂದಿದ್ದರು. ಅಷ್ಟೇ ಅಲ್ಲದೇ ಅಕ್ಷಯ್ ಕುಮಾರ್ ಅವರು ಸುಶಾಂತ್‌ ಪ್ರಕರಣದ ಸಂಬಂಧ ಆದಿತ್ಯ ಠಾಕ್ರೆ ಮತ್ತು ಮುಂಬೈ ಪೊಲೀಸರೊಂದಿಗೆ ರಹಸ್ಯ ಸಭೆಯನ್ನು ನಡೆಸಿದ್ದರು.

    ಸುಶಾಂತ್‌ ಸಿಂಗ್‌ ಗೆಳತಿ ರಿಯಾ ಚಕ್ರವರ್ತಿ ಜೊತೆ ಅಕ್ಷಯ್‌ ಕುಮಾರ್‌ ಸಂಪರ್ಕ ಹೊಂದಿದ್ದರು. ರಿಯಾ ಕೆನಡಾಗೆ ತೆರಳಲು ಅಕ್ಷಯ್‌ ಕುಮಾರ್‌ ಸಹಾಯ ಮಾಡಿದ್ದರು ಎಂದು ಸಿದ್ದಿಕಿ ವಿಡಿಯೋದಲ್ಲಿ ಆರೋಪಿಸಿದ್ದ.

     

    ಈ ಹಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಸಚಿವ ಆದಿತ್ಯ ಠಾಕ್ರೆ ಅವರ ವಿರುದ್ಧ ನಕಲಿ ಸುದ್ದಿ ಹರಡಿದ ಆರೋಪದ ಹಿನ್ನೆಲೆಯಲ್ಲಿ ರಶೀದ್ ಸಿದ್ದಿಕಿಯನ್ನು ಬಂಧಿಸಲಾಗಿತ್ತು. ನ್ಯಾಯಾಲಯ ಈತನಿಗೆ ಈ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದ್ದು ಪೊಲೀಸ್‌ ತನಿಖೆಗೆ ಸಹಕಾರ ನೀಡಬೇಕೆಂದು ಸೂಚಿಸಿದೆ.

    ಎಷ್ಟು ಹಣ ಸಂಪಾದನೆ?
    ಬಿಹಾರ ಮೂಲದ ಸಿವಿಲ್ ಎಂಜಿನಿಯರ್ ಸಿದ್ದಿಕಿ ಎಫ್‌ಎಫ್‌ ನ್ಯೂಸ್‌ ಹೆಸರಿನಲ್ಲಿ ಯೂ ಟ್ಯೂಬ್‌ ಚಾನೆಲ್‌ ತೆರೆದಿದ್ದಾನೆ. ಸಬ್‌ ಸ್ಕ್ರೈಬರ್ಸ್‌ ಸಂಖ್ಯೆ ಲಕ್ಷಕ್ಕೂ ಹೆಚ್ಚು ಇರುವ ಕಾರಣ ಯೂ ಟ್ಯೂಬ್‌ನಿಂದ ಅಧಿಕೃತ ಟಿಕ್‌ ಮಾರ್ಕ್‌ ಸಹ ಸಿಕ್ಕಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 15 ಲಕ್ಷ ರೂ. ಗಳಿಸಿದ್ದ. ಸುಶಾಂತ್‌ ಸಿಂಗ್‌ ಪ್ರಕರಣದಿಂದಾಗಿ ಆತನ ಸಬ್‌ಸ್ಟ್ರೈಬರ್ಸ್‌ ಸಂಖ್ಯೆ 1 ಲಕ್ಷದಿಂದ 3 ಲಕ್ಷಕ್ಕೆ ಏರಿಕೆಯಾಗಿತ್ತು.

    ಯಾವ ತಿಂಗಳಿನಲ್ಲಿ ಎಷ್ಟು?
    ಸುಶಾಂತ್‌ ಸಿಂಗ್‌ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈ ವರ್ಷದ ಜೂನ್‌ 20ರಂದು. ಶುಶಾಂತ್‌ ಸಿಂಗ್‌ ಪ್ರಕರಣದಿಂದಾಗಿ ಈತನ ವಿಡಿಯೋಗಳ ವ್ಯೂ ಜಾಸ್ತಿಯಾಗಿ ದಿಢೀರ್‌ ಲಕ್ಷಗಟ್ಟಲೇ ಹಣವನ್ನು ಸಂಪಾದನೆ ಮಾಡಿದ್ದಾನೆ.

    ಏಪ್ರಿಲ್‌ನಲ್ಲಿ 7,120 ರೂ., ಮೇ 296 ರೂ. ಜೂನ್‌ 38,200 ರೂ., ಜುಲೈ 2,75,025 ರೂ., ಆಗಸ್ಟ್‌ 5,57,658 ರೂ., ಸೆಪ್ಟೆಂಬರ್‌ 6,50,898 ರೂ., ಅಕ್ಟೋಬರ್‌ 2,38,180 ರೂ., ನವೆಂಬರ್ ತಿಂಗಳಿನಲ್ಲಿ‌ 35,901 ರೂ. ಹಣವನ್ನು ಸಿದ್ದಿಕಿ ಸಂಪಾದಿಸಿದ್ದಾನೆ ಎಂದು ಮಾಧ್ಯಮ ವರದಿ ಮಾಡಿದೆ.

  • ಸೈನಿಕನಿಗೆ ಎದುರಾಯ್ತು ಟ್ರಬಲ್ ಶೂಟರ್‌ರಿಂದ ಟ್ರಬಲ್

    ಸೈನಿಕನಿಗೆ ಎದುರಾಯ್ತು ಟ್ರಬಲ್ ಶೂಟರ್‌ರಿಂದ ಟ್ರಬಲ್

    ಬೆಂಗಳೂರು: ಸೈನಿಕ ಯೋಗೇಶ್ವರ್ ಹಾಗೂ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ನಡುವಿನ ಫೈಟ್ ಈಗ ಕೋರ್ಟ್ ಮೆಟ್ಟಿಲೇರುವ ಹಂತಕ್ಕೆ ಹೋಗಿದೆ. ರಾಮನಗರ ಜಿಲ್ಲಾ ರಾಜಕಾರಣದ ಜಿದ್ದಾಜಿದ್ದಿ ಕೋರ್ಟ್ ನಲ್ಲಿ ಮುಖಾಮುಖಿಯಾಗುವಂತಾಗಿದೆ.

    ಜನವರಿ 13 ರಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯೋಗೇಶ್ವರ್ ಹೇಳಿಕೆ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಲು ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ. ಯೋಗೇಶ್ವರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದರು. ಈ ಸಂಬಂಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜೊತೆ ಡಿಕೆಶಿ ಚರ್ಚೆ ಕೂಡ ನಡೆಸಿದ್ದರು. ಆದರೆ ಯೋಗೇಶ್ವರ್ ಸದನದ ಸದಸ್ಯರಲ್ಲದ ಕಾರಣ ಹಕ್ಕು ಚ್ಯುತಿ ಮಂಡನೆ ಬೇಡ ಮಾನನಷ್ಟ ಮೊಕದ್ದಮೆ ಹೂಡುವಂತೆ ರಮೇಶ್ ಕುಮಾರ್ ಸಲಹೆ ನೀಡಿದ್ದಾರೆ.

    ಯೋಗೇಶ್ವರ್ ಹೇಳಿದ್ದು ಏನು?
    ಕನಕಪುರದಲ್ಲಿ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ವಿರೋಧಿಸಿ ಜನವರಿ 13 ರಂದು ಬಿಜೆಪಿ ನಾಯಕರುಗಳು ಕನಕಪುರದಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕನಕಪುರದಲ್ಲಿ ಡಿಕೆಶಿ ಸಹೋದರರು ನೂರಾರು ಕೊಲೆ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

    ಈ ಹೇಳಿಕೆಯನ್ನೇ ಇಟ್ಟುಕೊಂಡು ಸಿ.ಪಿ.ಯೋಗೇಶ್ವರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಡಿಕೆಶಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪಬ್ಲಿಕ್ ಟಿವಿಯ ಜೊತೆಗಿನ ಯೋಗೇಶ್ವರ್ ಸಂದರ್ಶನದ ವಿಡಿಯೋ ಆಧಾರವಾಗಿಟ್ಟುಕೊಂಡು ಮಾನ ನಷ್ಟ ಮೊಕದ್ದಮೆ ಹೂಡಲು ಡಿಕೆಶಿ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.