Tag: ಮಾಧ್ಯಮದವರು

  • ಮಾಧ್ಯಮಗಳ ಜೊತೆ ಸಿಎಂ ಯಡಿಯೂರಪ್ಪ ಕ್ಷಮೆ

    ಮಾಧ್ಯಮಗಳ ಜೊತೆ ಸಿಎಂ ಯಡಿಯೂರಪ್ಪ ಕ್ಷಮೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪೊಲೀಸರು ಮಾಡಿದ ತಪ್ಪಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಧ್ಯಮಗಳ ಜೊತೆ ಕ್ಷಮೆ ಕೇಳಿದ್ದಾರೆ.

    ಇಂದು ಶ್ರೀ ಗುರು ಸಿದ್ಧರಾಮೇಶ್ವರರ 847ನೇ ಜಯಂತಿಯ ಅಂಗವಾಗಿ ಸಿಎಂ ಯಡಿಯೂರಪ್ಪ ಅಜ್ಜಂಪುರಕ್ಕೆ ಆಗಮಿಸಿದ್ದರು. ಇದೇ ವೇಳೆ ವೇದಿಕೆ ಮುಂಭಾಗಕ್ಕೆ ಪತ್ರಕರ್ತರು ಹೋಗಲು ಯತ್ನಿಸಿದಾಗ ಅಲ್ಲಿದ್ದ ಪಿಎಸ್‍ಐ ಹಾಗೂ ಎಎಸ್‍ಐ ಪತ್ರಕರ್ತರನ್ನ ಒಳಗೆ ಬಿಡಲಿಲ್ಲ. ಪೊಲೀಸ್ ಇಲಾಖೆಯೇ ನೀಡಿರುವ ಪಾಸ್ ತೋರಿಸಿದರೂ ಪೊಲೀಸರು ಪತ್ರಕರ್ತರನ್ನ ಒಳಗಡೆ ಬಿಡಲಿಲ್ಲ.

    ಓರ್ವ ಪೊಲೀಸ್ ವರದಿಗಾರರ ಕುತ್ತಿಗೆಗೆ ಕೈಹಾಕಿ ತಳ್ಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪರ್ತಕರ್ತರು ವೇದಿಕೆ ಮುಂಭಾಗವೇ ಧರಣಿ ಕುಳಿತರು. ಆಗ ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯಲ್ಲಿ ಕೂತಿದ್ದ ಸಿಎಂ ಯಡಿಯೂರಪ್ಪ ವೇದಿಕೆ ಮುಂಭಾಗಕ್ಕೆ ಬಂದು ಎಸ್‍ಪಿಗೆ ಕ್ಲಾಸ್ ತೆಗೆದುಕೊಂಡರು.

    ಎಸ್‍ಪಿ ಹರೀಶ್ ಪಾಂಡೆ ವಿರುದ್ಧ ಗರಂ ಆದ ಸಿಎಂ, ನಿನ್ನನ್ನ ಸಸ್ಪೆಂಡ್ ಮಾಡಬೇಕಾಗುತ್ತೆ. ಮಾಧ್ಯಮದವರನ್ನ ಒಳಗೆ ಬಿಡೋದಕ್ಕೆ ನಿಮಗೇನು ಸಮಸ್ಯೆ. ಮೊದಲು ನಿಮ್ಮ ವರ್ತನೆಯನ್ನ ಸರಿಮಾಡಿಕೊಳ್ಳಿ ಎಂದು ವಾರ್ನಿಂಗ್ ನೀಡಿದರು. ಅಲ್ಲದೇ ಭಾಷಣ ಮಾಡುವ ವೇಳೆ ಕೂಡ ಈ ವಿಚಾರ ಪ್ರಸ್ತಾಪಿಸಿ, ಮಾಧ್ಯಮದವರ ಜೊತೆ ಪೊಲೀಸರು ಅನುಚಿತವಾಗಿ ನಡೆದುಕೊಂಡಿದ್ದಾರೆ. ನಿಮ್ಮ ಮನಸ್ಸಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದರು.

    ಮಾಧ್ಯಮದವರಿಗೆ ಅಡ್ಡಿ ಮಾಡಬಾರದು ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿದರೆ ಎಂತಹಾ ದೊಡ್ಡ ಅಧಿಕಾರಿಯಾದರೂ ಕ್ರಮ ಕೈಗೊಳ್ಳುತ್ತೇನೆಂದು ವೇದಿಕೆಯಲ್ಲೇ ಎಸ್‍ಪಿ ಹರೀಶ್ ಪಾಂಡೆಗೆ ಕ್ಲಾಸ್ ತೆಗೆದುಕೊಂಡರು. ಜೊತೆಗೆ ಮಾಧ್ಯಮದವರ ಜೊತೆ ಅನುಚಿತವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದರು.

  • ಮನೆ ವಿಚಾರಗಳನ್ನು ಬೀದಿಯಲ್ಲಿ ಮಾತನಾಡಲು ಸಾಧ್ಯವಿಲ್ಲ: ಮಾಧ್ಯಮ ನಿರ್ಬಂಧಕ್ಕೆ ಸಿಎಂ ಸ್ಪಷ್ಟನೆ

    ಮನೆ ವಿಚಾರಗಳನ್ನು ಬೀದಿಯಲ್ಲಿ ಮಾತನಾಡಲು ಸಾಧ್ಯವಿಲ್ಲ: ಮಾಧ್ಯಮ ನಿರ್ಬಂಧಕ್ಕೆ ಸಿಎಂ ಸ್ಪಷ್ಟನೆ

    ರಾಮನಗರ: ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದಾಗಿ ತೋರಿಸುವ ಹಿನ್ನೆಲೆಯಲ್ಲಿ ನಾನೇ ಮಾಧ್ಯಮಗಳನ್ನು ದೂರವಿಡಲು ಸೂಚಿಸಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

    ಆಹ್ವಾನಿಸಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪಕ್ಷ ಎಂದರೆ ನಮ್ಮ ಮನೆ. ಹೀಗಾಗಿ ಅದು ನಮ್ಮ ಮನೆಯ ಕಾರ್ಯಕ್ರಮ ಇದಾಗಿದೆ. ಸಣ್ಣಪುಟ್ಟ ಗೊಂದಲಗಳು ಸಹಜ. ಈ ಗೊಂದಲಗಳನ್ನೇ ಮಾಧ್ಯಮಗಳು ದೊಡ್ಡವಾಗಿ ಪ್ರಚಾರ ಮಾಡುತ್ತವೆ. ಹೀಗಾಗಿ ನಾನೇ ಮಾಧ್ಯಮಗಳನ್ನು ದೂರವಿಡಲು ಸೂಚಿಸಿದ್ದೇನೆ ಎಂದು ಸ್ಟಷ್ಟನೆ ನೀಡಿದ್ದಾರೆ.

    ಮನೆ ವಿಷಯಗಳನ್ನು ತೆಗೆದುಕೊಂಡು ಹೋಗಿ ಬೀದಿಯಲ್ಲಿ ಮಾತನಾಡಲು ಸಾಧ್ಯವಿಲ್ಲ. ಹೀಗಾಗಿ ಮಾಧ್ಯಮಗಳನ್ನು ದೂರವಿಟ್ಟಿದ್ದೇನೆ. ಸಂಜೆ 5 ಗಂಟೆಯ ನಂತರ ಎಲ್ಲಾ ಮಾಹಿತಿಗಳನ್ನು ನಿಮ್ಮ ಮುಂದೆ ಇಡುತ್ತೇನೆ ಎಂದು ಸಿಎಂ ಹೇಳಿದರು.

    ರಾಮನಗರದ ಚುನಾವಣೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕೆ ಸಭೆ ಕರೆದಿಲ್ಲ. ಬಿಡುವಿಲ್ಲದೇ ಇರುವ ಕಾರ್ಯಕ್ರಮಗಳ ನಡುವೆ ಮನೆ ಹತ್ತಿರ ಬರುವ ಕಾರ್ಯಕರ್ತರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಅದರ ಹಿನ್ನೆಲೆ ಬೆಳಗ್ಗೆ ಚನ್ನಪಟ್ಟಣ ಕಾರ್ಯಕರ್ತರ ಸಭೆ, ಮಾಧ್ಯಾಹ್ನ ರಾಮನಗರದ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಕಾರ್ಯಕರ್ತರಿಗೆ ಏನಾದರೂ ಅಸಮಾಧಾನವಿದ್ದರೆ ವಿಚಾರಿಸುವ ದೃಷ್ಟಿಯಿಂದ ಬಂದಿದ್ದೇವೆ ಹೊರತು ಬೇರೆ ಏನೂ ಇಲ್ಲ ಎಂದು ಹೇಳಿದರು.

    ಬಿಡದಿಯ ಕೇತಗಾನಹಳ್ಳಿ ಸಮೀಪದ ಸಿಎಂ ಕುಮಾರಸ್ವಾಮಿ ಅವರ ಫಾರ್ಮ್ ಹೌಸ್‍ನಲ್ಲಿ ಬುಧವಾರ ಸಭೆಯನ್ನು ಕರೆಯಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಮಾಧ್ಯಮಗಳಿಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗಿನ ಸಿಎಂ ಸಭೆಯ ಮಾಹಿತಿಯನ್ನು ಮೊದಲೇ ತಿಳಿಸಲಾಗಿತ್ತು. ಹೀಗಾಗಿ ಬೆಳಗ್ಗೆ ಸಭೆ ಆಯೋಜನೆಗೊಂಡಿದ್ದ ಫಾರ್ಮ್ ಹೌಸ್‍ಗೆ ಮಾಧ್ಯಮದವರು ತೆರಳಿದಾಗ ಅಲ್ಲಿದ್ದ ಪೊಲೀಸರು ಮಾಧ್ಯಮಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಫಾರ್ಮ್ ಹೌಸ್ ಗೇಟ್ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಗೇಟ್ ಬಳಿಯೇ ಮಾಧ್ಯಮದವರನ್ನ ತಡೆಯಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv