Tag: ಮಾಧುರಿ ದೀಕ್ಷಿತ್

  • ಶಿಲ್ಪಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ – ಬಾಲಿವುಡ್ ಗಣ್ಯರಿಂದ ಶುಭಾಶಯಗಳ ಸುರಿಮಳೆ

    ಶಿಲ್ಪಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ – ಬಾಲಿವುಡ್ ಗಣ್ಯರಿಂದ ಶುಭಾಶಯಗಳ ಸುರಿಮಳೆ

    ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಇಂದು 46ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಬಾಲಿವುಡ್‍ನ ಖ್ಯಾತ ನಟಿಯರು ಸೇರಿದಂತೆ ಅನೇಕ ಗಣ್ಯರು ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ವಿಶ್ ಮಾಡುತ್ತಿದ್ದಾರೆ.

    ಮೂಲತಃ ಕರ್ನಾಟಕದ ಕರಾವಳಿ ಮೂಲದವರೆ ಆಗಿದ್ದರೂ, ಶಿಲ್ಪಾ ಶೆಟ್ಟಿಯವರು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದರು. ಸದ್ಯ ಮುಂಬೈನಲ್ಲಿ ಬದುಕು ಕಟ್ಟಿಕೊಂಡು, ಸುಂದರವಾದ ಕುಟುಂಬ ಹೊಂದಿರುವ ಶಿಲ್ಪಾ ಶೆಟ್ಟಿ ಎಷ್ಟೇ ವಯಸ್ಸಾದರೂ ಇಂದಿನ ನಟಿಯರಿಗೆ ತಾವೇನು ಕಡಿಮೆ ಇಲ್ಲ ಎಂಬಂತೆ ಫಿಟ್‍ನೆಸ್ ಮೈನ್‍ಟೆನ್ ಮಾಡಿದ್ದಾರೆ.

    ಜೂನ್ 8ರಂದು ನಟಿ ಶಿಲ್ಪಾಶೆಟ್ಟಿಯವರು 46ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ವಿಶೇಷ ದಿನದಂದು ಬಾಲಿವುಡ್ ಸ್ಟಾರ್ ನಟಿ ಮಾಧುರಿ ದೀಕ್ಷಿತ್, ಹುಟ್ಟು ಹಬ್ಬದ ಶುಭಾಶಯಗಳು ಶಿಲ್ಪಾ. ಸಕಾರಾತ್ಮಕ ಆಲೋಚನೆಗಳು ನಿಮ್ಮದಾಗಿರಲಿ ಎಂದು ಶುಭಹಾರೈಸುತ್ತೇನೆ. ನೀವು ಮತ್ತು ನಿಮ್ಮವರು ಕ್ಷೇಮವಾಗಿದ್ದೀರಾ ಎಂದು ಭಾವಿಸುತ್ತೇನೆ. ಫಿಟ್ ಹಾಗೂ ಅದ್ಭುತವಾಗಿರಿ ಎಂದು ವಿಶ್ ಮಾಡಿದ್ದಾರೆ. ಇದನ್ನು ಓದಿ:ರಶ್ಮಿಕಾ ಬಗ್ಗೆ ಕಮೆಂಟ್ ಮಾಡಿದವರ ಚಳಿ ಬಿಡಿಸಿದ ರಕ್ಷಿತ್ ಶೆಟ್ಟಿ

    ರವೀನಾ ಟಂಡನ್‍ರವರು ಹುಟ್ಟು ಹಬ್ಬದ ಶುಭಾಶಯಗಳು ಶಿಲ್ಪಾ ಶೆಟ್ಟಿ. ಲವ್ ಯೂ ಲಾಟ್. ಈ ದಿನ ಅದ್ಭುತವಾಗಿರಲಿ ಎಂದು ವಿಶ್ ಮಾಡಿದ್ದಾರೆ. ಜೊತೆಗೆ ಬಾಲಿವುಡ್ ನಟಿ ಮಲೈಕಾ ಅರೋರಾ, ನಿರೂಪಕ ಮನೀಷ್ ಪೌಲ್ ಸೇರಿದಂತೆ ಅನೇಕ ಮಂದಿ ಶುಭಾಶಯ ತಿಳಿಸಿದ್ದಾರೆ.

    ಸುಮಾರು 13 ವರ್ಷಗಳ ಬಳಿಕ ಶಿಲ್ಪಾಶೆಟ್ಟಿಯವರು ನಿಕ್ಕಾಮಾ ಸಿನಿಮಾದ ಮೂಲಕ ಮತ್ತೆ ಬಾಲಿವುಡ್‍ಗೆ ಕಮ್ ಬ್ಯಾಕ್ ಮಾಡಿದ್ದು, ಜೂನ್ 5 ರಂದು ಚಿತ್ರ ತೆರೆ ಕಾಣಬೇಕಾಗಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಗಿದೆ. ಇದನ್ನು ಓದಿ:ಕೊರೊನಾ ಲಸಿಕೆ ಇಂಜೆಕ್ಷನ್‍ಗೆ ಹೆದರಿಕೊಂಡ್ರಾ ನಿರ್ದೇಶಕ ಪ್ರಶಾಂತ್ ನೀಲ್?

  • ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಮಾಧುರಿ ದೀಕ್ಷಿತ್

    ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಮಾಧುರಿ ದೀಕ್ಷಿತ್

    ಮುಂಬೈ: ಬಾಲಿವುಡ್ ಎವರ್ ಗ್ರೀನ್ ನಟಿ ಮಾಧುರಿ ದೀಕ್ಷಿತ್ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮಕ್ಕಳು, ಮೊಮ್ಮಕ್ಕಳಿದ್ದರೂ ಕೂಡ ಮಾಧುರಿ ದೀಕ್ಷಿತ್ ಇಂದಿನ ನಟಿಯರಿಗೆ ಪೈಪೋಟಿ ನೀಡುವಂತ ಸುಂದರ ನಟಿ. ಅಲ್ಲದೆ ಮಾಧುರಿ ದೀಕ್ಷಿತ್ ಫಿಟ್ ನೆಸ್ ಬಗ್ಗೆ ಹೇಳುವುದಾದರೆ ಇಂದಿನ ಯುವತಿಯರು ನಾಚುವಂತೆ ಮೆಂಟೇನ್ ಮಾಡಿದ್ದಾರೆ. ಸಾಮಾಜಿಕ ಜಾಲಾತಾಣಗಳಲ್ಲಿ ಅಷ್ಟಾಗಿ ಹೆಚ್ಚು ಸುದ್ದಿಯಲ್ಲಿರದಿದ್ದರೂ, ಮಾಧುರಿ ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಕುರಿತಂತೆ ಅಭಿಮಾನಿಗಳ ಕೆಲ ಪ್ರಶ್ನೆಗಳಿಗೆ ಇನ್‍ಸ್ಟಾಗ್ರಾಮ್ ಮೂಲಕ ಉತ್ತರಿಸಿದ್ದಾರೆ. ಈ ಕುರಿತಂತೆ ನನ್ನ ಬಗ್ಗೆ ತಿಳಿದುಕೊಳ್ಳಬೇಕಾ? ಎಂದು ಕ್ಯಾಪ್ಷನ್ ಹಾಕಿ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮೊಡಾಕ್‍ನಿಂದ ಸಬುದಾನ ಕಿ ಖಿಚ್ಡಿವರೆಗೂ ನಿಮ್ಮ ಫೇವರಿಟ್ ಫುಡ್ ಯಾವುದು ಎಂದು ಅಭಿಮಾನಿಯೊಬ್ಬರು ಕೇಳಿದ ಮೊದಲ ಪ್ರಶ್ನೆಗೆ, ನಾನು ಮಹಾರಾಷ್ಟ್ರಿಯನ್ ಫುಡ್‍ನನ್ನು ಬಹಳ ಪ್ರೀತಿಸುತ್ತೇನೆ ಎಂದು ಉತ್ತರಿಸಿದ್ದಾರೆ. ನೀವು ಇತ್ತೀಚೆಗೆ ನೋಡಿದ ಸಿನಿಮಾ ಯಾವುದು ಎಂದು ಕೇಳಿದ ಎರಡನೇ ಪ್ರಶ್ನೆಗೆ, ನಾನು ನೆಟ್‍ಫ್ಲಿಕ್ಸ್ ಸಿರಿಸ್‍ನಲ್ಲಿ ಬರುವ ಕ್ವೀನ್ಸ್ ಗ್ಯಾಂಬಿಟ್‍ನನ್ನು ನೋಡಿದೆ ಅದು ನನಗೆ ತುಂಬಾ ಇಷ್ಟವಾಯಿತು ಎಂದರು.

    ಕೊನೆಯದಾಗಿ ನಿಮ್ಮ ಪತಿ ಶ್ರೀರಾಮ್‍ರಲ್ಲಿ ನೀವು ಬಹಳ ಇಷ್ಟಪಡುವ ವಿಚಾರ ಯಾವುದು ಎಂದು ಕೇಳಿದ ಕೊನೆಯ ಪ್ರಶ್ನೆಗೆ, ಮಾಧುರಿ ನಾಚಿ ನಗುತ್ತಾ ನನಗೆ ಅವರಲ್ಲಿರುವ ಪ್ರಾಮಾಣಿಕತೆ ಬಹಳ ಇಷ್ಟ ಎಂದು ಪ್ರತಿಕ್ರಿಯಿಸಿದರು. ಇನ್ನೂ ಏನಾದರೂ ತಿಳಿದುಕೊಳ್ಳಬೇಕಾ? ಎಂದು ಪ್ರಶ್ನಿಸುವ ಮೂಲಕ ಕ್ಯಾಪ್ಷನ್ ಹಾಕಿ ಮಾಧುರಿ ವೀಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Madhuri Dixit (@madhuridixitnene)

    ನಟಿ ಮಾಧುರಿ ದೀಕ್ಷಿತ್ ಅಭಿನಯಿಸಿದ್ದ ರಾಮ್ ಲಖಾನ್ ಸಿನಿಮಾ ಬಿಡುಗೆಡೆಯಾಗಿ ಜನವರಿ 27ಕ್ಕೆ 32 ವರ್ಷ ತುಂಬಿದ್ದು, ಹಿಂದೆ ಚಿತ್ರತಂಡದೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಅನಿಲ್ ಕಪೂರ್, ಜಾಕಿ ಶ್ರಾಫ್, ಅನುಪಮ್ ಖೇರ್, ಸತೀಶ್ ಕೌಶಿಕ್, ಗುಲ್ಶನ್ ಗ್ರೋವರ್, ಮಾಧುರಿ ಮತ್ತು ರಾಮ್ ಲಖನ್ ಸೇರಿದಂತೆ ನಿರ್ದೇಶಕ ಸುಭಾಷ್ ಘೈ ಕಾಣಿಸಿಕೊಂಡಿದ್ದರು.

     

    View this post on Instagram

     

    A post shared by Madhuri Dixit (@madhuridixitnene)

    ಜೊತೆಗೆ 32 ವರ್ಷ ಪೂರೈಸಿರುವ ಹಿನ್ನೆಲೆ ಪಾರ್ಟಿ ಮಾಡಿರುವ ರಾಮ್ ಲಖನ್ ಸಿನಿಮಾ ತಂಡ, ಈ ಫೋಟೋವನ್ನು ಹಿಂದಿನ ಫೋಟೋ ಜೊತೆ ಕೊಲಾಜ್ ಮಾಡಿ ಶೇರ್ ಮಾಡಿಕೊಂಡಿದೆ.

  • ಅಕ್ಷಯ್ ಕುಮಾರ್ ಸೀಕ್ರೆಟ್ ರಿವೀಲ್ ಮಾಡಿದ ಮಾಧುರಿ

    ಅಕ್ಷಯ್ ಕುಮಾರ್ ಸೀಕ್ರೆಟ್ ರಿವೀಲ್ ಮಾಡಿದ ಮಾಧುರಿ

    ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಸೀಕ್ರೆಟ್ ಮೋಹಕ ಬೆಡಗಿ ಮಾಧುರಿ ದೀಕ್ಷಿತ್ ರಿವೀಲ್ ಮಾಡಿದ್ದಾರೆ.

    ಅಕ್ಷಯ್ ಕುಮಾರ್ ಮತ್ತು ಮಾಧುರಿ ದೀಕ್ಷಿತ್ ಬಾಲಿವುಡ್ ಅಂಗಳದ ಪ್ರತಿಭಾನ್ವಿತ ಕಲಾವಿದರು. ಇಬ್ಬರು ಜೊತೆಯಾಗಿ ಆರಜೂ ಮತ್ತು ದಿಲ್ ತೋ ಪಾಗಲ್ ಹೈ ಸಿನಿಮಾದಲ್ಲಿ ಮಾತ್ರ ನಟಿಸಿದ್ದಾರೆ. ಇಬ್ಬರ ನಡುವಿನ ಸ್ನೇಹ ಇಂದಿಗೂ ಇದೆ. ಸಂದರ್ಶನದಲ್ಲಿ ಮಾತನಾಡಿದ್ದ ಮಾಧುರಿ ದೀಕ್ಷಿತ್ ಯಾರಿಗೂ ಗೊತ್ತಿರದ ಅಕ್ಷಯ್ ಕುಮಾರ್ ಸೀಕ್ರೆಟ್ ಎಲ್ಲರ ಮುಂದೆ ರಿವೀಲ್ ಮಾಡಿದ್ದರು.

    ಅಕ್ಷಯ್ ಕುಮಾರ್ ಜೊತೆಯಲ್ಲಿದ್ದವರ ವಾಚ್ ಕದಿಯುತ್ತಾರೆ. ಎಲ್ಲರ ಜೊತೆಯಲ್ಲಿದ್ದಾಗಲೇ ಗಡಿಯಾರ ತೆಗೆದುಕೊಂಡಿರುತ್ತಾರೆ. ಆದ್ರೆ ಈ ವಿಷಯ ಯಾರಿಗೂ ಗೊತ್ತಾಗಿರಲಿಲ್ಲ. ಕೊನೆಗೆ ಅಕ್ಷಯ್ ಹೇಳಿದಾಗಲೇ ನಮ್ಮ ಗಡಿಯಾರ ಮಿಸ್ ಆಗಿರೋದು ಗೊತ್ತಾಗುತ್ತೆ ಎಂದು ಹೇಳಿದ್ದರು. ಇದೇ ಮಾತನ್ನು ರಿಯಾಲಿಟಿ ಶೋ ವೇದಿಕೆಯಲ್ಲಿ ಹೇಳಿ ಅಕ್ಷಯ್ ಕಾಲೆಳೆದಿದ್ದರು.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಕ್ಷಯ್ ಮತ್ತು ಮಾಧುರಿ ತಮ್ಮ ಕುಟುಂಬಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ತೆರೆ ಕಾಣಲು ಸಿದ್ಧವಾಗಿದೆ. ಬೆಲ್ ಬಾಟಂ ಸಿನಿಮಾ ಸೆಟ್ಟೇರಿದ್ದು, ಲಂಡನ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

  • ಹಾರ್ಟ್ ಬೀಟ್ ಹೆಚ್ಚಿಸ್ತು ಮಾಧುರಿ ಫೋಟೋ

    ಹಾರ್ಟ್ ಬೀಟ್ ಹೆಚ್ಚಿಸ್ತು ಮಾಧುರಿ ಫೋಟೋ

    ಮುಂಬೈ: ಬಾಲಿವುಡ್ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ಅವರ ಅಪೂರ್ವ ಸೌಂದರ್ಯ 18ರ ಯುವತಿಯರನ್ನು ನಾಚಿಸುವಂತಿದೆ. 52 ವರ್ಷದ ಮಾಧುರಿ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಹಳೆಯ ಫೋಟೋ ನೋಡುಗರ ಹಾರ್ಟ್ ಬೀಟ್ ಹೆಚ್ಚು ಮಾಡಿದೆ.

    ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ತಮ್ಮ ಹಳೆಯ ಸಿನಿಮಾದ ಫೋಟೋವನ್ನು ಅಭಿಮಾನಿಗಳೊಂದಿಗೆ ಮಾಧುರಿ ದೀಕ್ಷಿತ್ ಹಂಚಿಕೊಂಡಿದ್ದಾರೆ. ಫೋಟೋಗೆ ಕಣ್ಣುಗಳು ಸೇರಿದಾಗ ಹೃದಯ ಬಡಿತ ಹೆಚ್ಚಾಗುತ್ತೆ ಎಂಬ ಹಿಂದಿ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಸದ್ಯ ಖಾಸಗಿ ವಾಹಿನಿಯ ಡ್ಯಾನ್ಸಿಂಗ್ ರಿಯಾಲಿಟಿ ಶೋದ ತೀರ್ಪುಗಾರರಾಗಿ ಮಾಧುರಿ ಕಾಣಿಸಿಕೊಳ್ಳುತ್ತಿದ್ದಾರೆ. 2019ರಲ್ಲಿ ಬಿಡುಗಡೆಯಾಗಿದ್ದ ‘ಕಳಂಕ್’ ಸಿನಿಮಾದಲ್ಲಿ ಸಂಜಯ್ ದತ್ ಗೆ ಜೋಡಿಯಾಗಿ ಮಾಧುರಿ ಕಾಣಿಸಿಕೊಂಡಿದ್ದರು. ಬಹುತೇಕರು ಮಾಧುರಿಗಾಗಿಯೇ ‘ಕಳಂಕ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತೆರಳಿದ್ದು ಮಾತ್ರ ಸುಳ್ಳಲ್ಲ.

  • 24 ವರ್ಷಗಳ ನಂತ್ರ ಅಕ್ಕನೊಂದಿಗೆ ನಟಿಸಿದ ಮಾಧುರಿ!

    24 ವರ್ಷಗಳ ನಂತ್ರ ಅಕ್ಕನೊಂದಿಗೆ ನಟಿಸಿದ ಮಾಧುರಿ!

    ಮುಂಬೈ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಬಹಳ ಸಮಯದ ನಂತರ ‘ಬಕೆಟ್ ಲಿಸ್ಟ್’ ಎಂಬ ಮರಾಠಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. 24 ವರ್ಷಗಳ ನಂತರ ಮಾಧುರಿ ಈ ಚಿತ್ರದಲ್ಲಿ ತನ್ನ ಅಕ್ಕನ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವುದು ವಿಶೇಷ.

    1994 ರಲ್ಲಿ ಬಿಡುಗಡೆಯಾದ ಹಮ್ ಆಪ್ಕೆ ಹೇ ಕೋನ್ ಚಿತ್ರದಲ್ಲಿ ಮಾಧುರಿಗೆ ಸಹೋದರಿಯಾಗಿ ರೇಣುಕಾ ಶಹಾಣೆ ನಟಿಸಿದ್ದರು. ಈಗ 24 ವರ್ಷಗಳ ಬಳಿಕ ಈ ಸಹೋದರಿಯರು ಮತ್ತೊಮ್ಮೆ ಜೊತೆಯಾಗಿ ನಟಿಸಿದ್ದಾರೆ. ಮರಾಠಿಯ ಬಕೆಟ್ ಲಿಸ್ಟ್ ಚಿತ್ರದಲ್ಲಿ ಅಕ್ಕನ ಜೊತೆ ಸ್ಕ್ರೀನ್ ಶೇರ್ ಮಾಡಿರುವುದು ಮಾಧುರಿಗೆ ಬಹಳ ಖುಷಿ ನೀಡಿದೆ.

    ಈ ಚಿತ್ರದ ಪ್ರಮುಖ ಪಾತ್ರಕ್ಕಾಗಿ ಚಿತ್ರತಂಡ ರೇಣುಕಾ ಅವರನ್ನು ಅಪ್ರೋಚ್ ಮಾಡಿದ್ದನ್ನು ಕೇಳಿ ನನಗೆ ಬಹಳ ಸಂತೋಷವಾಯಿತು. ಆಗ ನಾನು ರೇಣುಕಾ ಈ ಪಾತ್ರಕ್ಕೆ ಪರ್ಫೆಕ್ಟ್ ಎಂದು ಚಿತ್ರತಂಡಕ್ಕೆ ಹೇಳಿದೆ. ನಂತರ ನಾನೇ ಸ್ವತಃ ರೇಣುಕಾಗೆ ಕರೆ ಮಾಡಿ ಚಿತ್ರದ ಪಾತ್ರದ ಬಗ್ಗೆ ಹೇಳಿದೆ. ಆಗ ರೇಣುಕಾ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡರು ಎಂದು ಮಾಧುರಿ ತಿಳಿಸಿದ್ದಾರೆ.

    ಹಮ್ ಆಪ್ಕೆ ಹೇ ಕೋನ್ ಚಿತ್ರದ ಚಿತ್ರೀಕರಣದಿಂದ ನಾವಿಬ್ಬರು ಆತ್ಮೀಯವಾಗಿದ್ದೇವೆ. ಚಿತ್ರದಲ್ಲಿ ನಾವಿಬ್ಬರು ಸಹೋದರಿಯರ ಪಾತ್ರವನ್ನು ನಿರ್ವಹಿಸಿದ್ದೇವು. ಆದರೆ ನಿಜ ಜೀವನದಲ್ಲೂ ನಾವು ಒಬ್ಬರಿಗೊಬ್ಬರು ಸಹೋದರಿಯರಂತೆ ಇದ್ದೇವೆ ಎಂದು ಮಾಧುರಿ ದೀಕ್ಷಿತ್ ಹೇಳಿದ್ದಾರೆ.

    ಬಕೆಟ್ ಲಿಸ್ಟ್ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರವನ್ನು ತೇಜಸ್ಸ್ ಪ್ರಭಾ ವಿಜಯ್ ದೇವಸ್ಕರ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರ ಮೇ 25ರಂದು ಬಿಡುಗಡೆ ಆಗಲಿದೆ.

  • ಏಕ್, ದೋ, ತೀನ್..! ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಸರೋಜ್ ಖಾನ್

    ಏಕ್, ದೋ, ತೀನ್..! ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಸರೋಜ್ ಖಾನ್

    ಮುಂಬೈ: ಹಿರಿಯ ನೃತ್ಯ ನಿರ್ದೇಶಕಿ ಸರೋಜ್ ಖಾನ್‍ರವರು ಏಕ್ ದೋ ತೀನ್ ಗೀತೆಯ ವಿವಾದದ ಬಗ್ಗೆ ಮಾತನಾಡಿದ್ದಾರೆ. ನೃತ್ಯ ನಿರ್ದೇಶಕರಾದ ಅಹ್ಮದ್ ಖಾನ್ ಮತ್ತು ಗಣೇಶ್ ಆಚಾರ್ಯರ ಪರಿಶ್ರಮದ ಬಗ್ಗೆ ಹೆಮ್ಮೆ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಅವರಿಗೆ ನನ್ನ ಆಶೀರ್ವಾದ ಎಂದಿಗೂ ಇರುತ್ತದೆ ಎಂದು ಹೇಳಿದ್ದಾರೆ.

    ಏಕ್, ದೋ, ತೀನ್,  ಚಾರ್ ಹಾಡಿನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ನನ್ನ ಮತ್ತು ಅಹ್ಮದ್ ಖಾನ್ ನಡುವೆ ಗುರು ಶಿಷ್ಯರ ಸಂಬಂಧವಿದೆ. ಇಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನವಾಗಿದ್ದು, ಯಾವುದೇ ರೀತಿಯ ಸ್ಪರ್ಧೆ ಇರುವುದಿಲ್ಲ. ಹಳೆ ಗೀತೆಗಿಂತ ಹೊಸ ಹಾಡು ಉತ್ತಮವೆಂಬ ಅಂಶ ತಪ್ಪು ಏಕೆಂದರೆ ಈ ಗೀತೆಯನ್ನು ಏಕ್ ದೋ ತೀನ್ ತಂಡಕ್ಕೆ ಸಮರ್ಪಿಸಿದ್ದಾರೆ ಮತ್ತು ಬಾಘೀ-2 ಚಿತ್ರ ತಂಡವು ಬಹಳ ಶ್ರಮಪಟ್ಟಿದೆ ಅಂತಾ ಸರೋಜ್ ಖಾನ್ ಅಂದಿದ್ದಾರೆ.

    ಈ ಹಿಂದೆ ಸರೋಜ್ ಖಾನ್ ಇದೇ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದರು. ಅಂದು ಇದೇ ಗೀತೆಗೆ ಅಹ್ಮದ್ ಖಾನ್‍ರವರು ಸಹಾಯಕ ನೃತ್ಯ ನಿರ್ದೇಶಕರಾಗಿ ಮತ್ತು ಗಣೇಶ್ ಆಚಾರ್ಯರವರು ಗೀತೆಯ ಹಿನ್ನೆಲೆ ನರ್ತಕರಾಗಿ ಕಾಣಿಸಿಕೊಂಡಿದ್ದರು. ಬಾಘೀ-2 ಚಿತ್ರದಲ್ಲಿ ಸಾಜಿದ್ ನಾಡಿಯದ್ವಾಲ ಮತ್ತು ನಿರ್ದೇಶಕ ಅಹ್ಮದ್ ಖಾನ್ ಈ ಗೀತೆಯನ್ನು ಅಳವಡಿಸಿಕೊಂಡಿದ್ದಾರೆ.

    ಏನಿದು ವಿವಾದ: ಮಾಧುರಿ ದೀಕ್ಷಿತ್ ನರ್ತಿಸಿದ ಹಾಡಿನ ನ್ಯೂ ವರ್ಷನ್ ಗೆ ಮರ್ಡರ್-2 ಖ್ಯಾತಿಯ ಸುಂದರಿ ಜಾಕ್ವೇಲಿನ್ ತುಂಬಾ ಸೆಕ್ಸಿಯಾಗಿ ಕಾಣಿಸಿಕೊಂಡಿದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನವನ್ನ ಹೊರಹಾಕಿದ್ರು. ಮಾಧುರಿ ದೀಕ್ಷಿತ್ ಸಹ ತಮ್ಮ ಹಾಡಿಗೆ ಜಾಕ್ವೇಲಿನ್ ಮಾಡಿರುವ ಡ್ಯಾನ್ಸ್ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜಾಕ್ವೇಲಿನ ‘ಏಕ್ ದೋ ತೀನ್ ಚಾರ್’ ಹಾಡಿನ ಮೂಲಕ ನಾನು ನಿಮಗೆ ಗೌರವ ಸಲ್ಲಿಸುತ್ತಿದ್ದೇನೆ ಎಂಬ ಸಂದೇಶವನ್ನು ಸಹ ರವಾನೆ ಮಾಡಿದ್ದು, ಮಾಧುರಿ ಮಾತ್ರ ಯಾವುದಕ್ಕೂ ಉತ್ತರ ನೀಡಿಲ್ಲ ಅಂತಾ ಹೇಳಲಾಗುತ್ತಿದೆ.

  • ‘ಏಕ್ ದೋ ತೀನ್ ಚಾರ್’ ರೀಮೇಕ್ ಹಾಡಿಗೆ ಹೆಜ್ಜೆ ಹಾಕಿ ಮಾಧುರಿಗೆ ಕಾಲ್ ಮಾಡಿದ ಜಾಕ್ವೇಲಿನ್!

    ‘ಏಕ್ ದೋ ತೀನ್ ಚಾರ್’ ರೀಮೇಕ್ ಹಾಡಿಗೆ ಹೆಜ್ಜೆ ಹಾಕಿ ಮಾಧುರಿಗೆ ಕಾಲ್ ಮಾಡಿದ ಜಾಕ್ವೇಲಿನ್!

    ಮುಂಬೈ: ಬಾಲಿವುಡ್ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ಅವರ 80 ರ ದಶಕದ ಫೇಮಸ್ `ಎಕ್ ದೋ ತೀನ್ ಚಾರ್’ ಹಾಡಿನ ರಿಮೇಕ್‍ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಇತ್ತ ಮಾಧುರಿ ದೀಕ್ಷಿತ್ ಸಹ ಮುನಿಸಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ.

    ಕೆಲವು ದಿನಗಳ ಹಿಂದೆ ಟೈಗರ್ ಶ್ರಾಫ್ ಅಭಿನಯದ `ಭಾಗಿ-2′ ಸಿನಿಮಾದ ಹಾಡೊಂದು ರಿಲೀಸ್ ಆಗಿದೆ. ಈ ಹಿಂದೆ ಮಾಧುರಿ ದೀಕ್ಷಿತ್ ನರ್ತಿಸಿದ ಹಾಡಿನ ನ್ಯೂ ವರ್ಷನ್ ಗೆ ಮರ್ಡರ್-2 ಖ್ಯಾತಿಯ ಸುಂದರಿ ಜಾಕ್ವೇಲಿನ್ ಹಜ್ಜೆ ಹಾಕಿದ್ದಾರೆ. ಆದ್ರೆ ಜಾಕ್ವೇಲಿನ್ ತುಂಬಾ ಸೆಕ್ಸಿಯಾಗಿ ಕಾಣಿಸಿಕೊಂಡಿದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

    ಮಾಧುರಿಗೆ ಕಾಲ್ ಮಾಡಿದ ಜಾಕ್ವೇಲಿನ್: ಜಾಕ್ವೇಲಿನ್ ಯೂ ಟ್ಯೂಬ್ ನಲ್ಲಿ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದ್ದಂತೆ ಮಾಧುರಿ ದೀಕ್ಷಿತ್ ಅವ್ರಿಗೆ ಕಾಲ್ ಮಾಡಿದ್ದಾರೆ. ಆದ್ರೆ ಮಾಧುರಿ ಮಾತ್ರ ಕಾಲ್ ರಿಸೀವ್ ಮಾಡದೇ ಅಸಮಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೂ ಸುಮ್ಮನಾಗದ ಜಾಕ್ವೇಲಿನ ‘ಏಕ್ ದೋ ತೀನ್ ಚಾರ್’ ಹಾಡಿನ ಮೂಲಕ ನಾನು ನಿಮಗೆ ಗೌರವ ಸಲ್ಲಿಸುತ್ತಿದ್ದೇನೆ ಎಂಬ ಸಂದೇಶವನ್ನು ಸಹ ರವಾನೆ ಮಾಡಿದ್ದು, ಮಾಧುರಿ ಮಾತ್ರ ಯಾವುದಕ್ಕೂ ಉತ್ತರ ನೀಡಿಲ್ಲ ಅಂತಾ ಹೇಳಲಾಗುತ್ತಿದೆ.

    1988ರಲ್ಲಿ ತೆರೆಕಂಡ ‘ತೇಜಾಬ್’ ಚಿತ್ರದಲ್ಲಿನ ಏಕ್ ದೋ ತೀನ್ ಹಾಡಿಗೆ ಬಾಲಿವುಡ್‍ನ ಖ್ಯಾತ ನೃತ್ಯ ಸಂಯೋಜಕಿಯಾದ ಸರೋಜ್ ಖಾನ್ ಕೊರಿಯೊಗ್ರಾಫಿ ಮಾಡಿದ್ರು. ಸರೋಜ್ ಖಾನ್ ಸಹ ಜಾಕ್ವೇಲಿನ್ ನ ಸೆಕ್ಸಿ ಮೂವ್ ಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜನ ಇಂದಿಗೂ ಮಾಧುರಿ ದೀಕ್ಷಿತ್ ರನ್ನು ಏಕ್ ದೋ ತೀನ್ ಹಾಡಿನ ಮೂಲಕವೇ ಗುರುತಿಸ್ತಾರೆ.

    ಈ ಹಿಂದೆ ಮಾಧುರಿ ಅಭಿನಯದ ‘ಥಾಣೇದಾರ್’ ಸಿನಿಮಾದ ‘ತಮ್ಮಾ.. ತಮ್ಮಾ..’ ಹಾಡಿಗೆ `ಬದ್ರಿನಾಥ್ ಕೀ ದುಲ್ಹನಿಯಾ’ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ವರುಣ್ ಧವನ್ ಹೆಜ್ಜೆ ಹಾಕಿದ್ರು. ಈ ವೇಳೆ ಮಾಧುರಿ ದೀಕ್ಷಿತ್ ಇಬ್ಬರ ಡ್ಯಾನ್ಸ್ ಗೂ ಮೆಚ್ಚುಗೆಯನ್ನು ಸೂಚಿಸಿದ್ರು. ಆದ್ರೆ ಈ ಬಾರಿ ಜಾಕ್ವೇಲಿನ್ ಸೆಕ್ಸಿ ಮೂವ್ಸ್ ಗಳಿಗೆ ಮಾಧುರಿ ದೀಕ್ಷಿತ್ ಬೇಸರವಾದಂತೆ ಕಾಣಿಸುತ್ತಿದೆ.

    https://youtu.be/MS5BLS2sIDM