Tag: ಮಾಧುರಿ ದೀಕ್ಷಿತ್

  • ರಾಜಕಾರಣಕ್ಕೆ ನಟಿ ಮಾಧುರಿ ದೀಕ್ಷಿತ್ ಎಂಟ್ರಿ

    ರಾಜಕಾರಣಕ್ಕೆ ನಟಿ ಮಾಧುರಿ ದೀಕ್ಷಿತ್ ಎಂಟ್ರಿ

    ಬಾಲಿವುಡ್ (Bollywood) ಖ್ಯಾತ ನಟಿ ಮಾಧುರಿ ದೀಕ್ಷಿತ್ (Madhuri Dixit) ರಾಜಕಾರಣಕ್ಕೆ (Politics) ಪ್ರವೇಶ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಹಲವಾರು ನಟ ನಟಿಯರು ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಮಾಧುರಿ ರಾಜಕೀಯ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಾಧುರಿ ದೀಕ್ಷಿತ್ ಸ್ಪರ್ಧಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಬಿಜೆಪಿಯಿಂದ ಟಿಕೆಟ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಜೆಪಿಯ ಮುಖಂಡರು ಮಾಧುರಿಯನ್ನು ಸಂಪರ್ಕಿಸಿದ್ದಾರಂತೆ. ಅಲ್ಲದೇ, ಪುಣೆಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ.

    ಪುಣೆಯ ಲೋಕಸಭಾ ಕ್ಷೇತ್ರವು ಅತ್ಯಂತ ಪ್ರತಿಷ್ಠಿತ ಕಣವಾಗಿದ್ದು, ಇಲ್ಲಿಂದಲೇ ಮಾಧುರಿ ಅವರನ್ನು ಅಖಾಡಕ್ಕೆ ಇಳಿಸಲು ಚಿಂತನೆ ಮಾಡಲಾಗುತ್ತಿದೆ. ಬಿಜೆಪಿ (BJP) ಮತ್ತು ಮಾಧುರಿ ನಡೆವೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ಮಾಡಲಾಗಿದೆ. ಬಹುತೇಕ ಬಿಜೆಪಿಯನ್ನು ಮಾಧುರಿ ಸೇರುವುದು ಪಕ್ಕಾ ಎನ್ನುವ ಮಾಹಿತಿ ಇದೆ.

  • ಮಾಧುರಿ ದೀಕ್ಷಿತ್ ಮೇಲೆ ಗರಂ ಆದ ಉರ್ಫಿ ಜಾವೇದ್

    ಮಾಧುರಿ ದೀಕ್ಷಿತ್ ಮೇಲೆ ಗರಂ ಆದ ಉರ್ಫಿ ಜಾವೇದ್

    ಇತ್ತೀಚಿನ ದಿನಗಳಲ್ಲಿ ಬಾಲಿವುಡ್ (Kangana Ranaut) ನಟ ನಟಿಯರ ಮೇಲೆ ಉರ್ಫಿ (Urfi Javed) ಆರೋಪ ಮಾಡುವುದು ಹೆಚ್ಚಾಗಿದೆ. ಮೊನ್ನೆಯಷ್ಟೇ ರಣಬೀರ್ ಕಪೂರ್ ಮೇಲೆ ಆರೋಪಗಳ ಸುರಿಮಳೆಗೈದಿದ್ದ ಉರ್ಫಿ ಇಂದು ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ (Madhuri Dixit) ಮೇಲೆ ಹರಿಹಾಯ್ದಿದ್ದಾರೆ. ಇದೇ ಸಮಯದಲ್ಲೇ ಕಂಗನಾ ರಣಾವತ್ (Kangana Ranaut) ಅವರನ್ನು ಹೊಗಳಿದ್ದಾರೆ.

    ಕಾರ್ಯಕ್ರಮವೊಂದಕ್ಕೆ ಉರ್ಫಿ ಅತಿಥಿಯಾಗಿ ಹೋಗಬೇಕಿತ್ತಂತೆ. ಮಾಧುರಿ ಕಾರಣದಿಂದಾಗಿ ಹೋಗಲು ಆಗಲಿಲ್ಲವಂತೆ. ತಮಗೆ ಇದರಿಂದಾಗಿ ಅವಮಾನ ಆಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಾಲಿವುಡ್ ಬಗ್ಗೆ ಕಂಗನಾ ಆಗಾಗ್ಗೆ ಉರಿದು ಬೀಳುತ್ತಾರೆ. ಅವರು ಯಾಕೆ ಹಾಗೆ ಮಾಡುತ್ತಾರೆ ಎಂದು ನನಗೆ ಬೇಸರ ಅನಿಸುತ್ತಿತ್ತು. ಈಗೀಗ ನನಗೆ ಅರ್ಥವಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ನಟಿ ಸಹನಾ ಶೆಟ್ಟಿ

    ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಉರ್ಫಿ, ‘ಕಾರ್ಯಕ್ರಮವೊಂದರ ಆಯೋಜಕರು ನನಗೆ ಕರೆ ಮಾಡಿ, ಅತಿಥಿಯಾಗಿ ಬರಬೇಕು ಎಂದು ಹೇಳಿದ್ದರು. ನಾನು ಕೂಡ ಒಪ್ಪಿಕೊಂಡಿದ್ದೆ. ನಿಗದಿ ಕೆಲಸಗಳನ್ನು ಮುಂದಕ್ಕೆ ಹಾಕಿ ರೆಡಿಯಾದೆ. ಕಾರ್ಯಕ್ರಮದ ದಿನ ಆಯೋಜಕರು ಕರೆ ಮಾಡಿ, ನಿಮಗೆ ಆಹ್ವಾನವಿಲ್ಲ ಅಂದರು. ಕಾರಣ ಕೇಳಿದೆ. ಮಾಧುರಿ ಅವರ ಅತಿಥಿ ಲಿಸ್ಟ್ ನಲ್ಲಿ ನೀವು ಇಲ್ಲ ಅಂದರು’ ಎಂದು ಬರೆದುಕೊಂಡಿದ್ದಾರೆ.

    ಮಾಧುರಿಗಿಂತ ನನಗೆ ಕಂಗನಾ ಗ್ರೇಟ್ ಅನಿಸುತ್ತಾರೆ. ಇಂತಹ ಅವಮಾನಗಳ ವಿರುದ‍್ಧ ಕಂಗನಾ ಧ್ವನಿ ಎತ್ತುತ್ತಲೇ ಇರುತ್ತಾರೆ. ಅವರು ಯಾಕೆ ಧ್ವನಿ ಎತ್ತುತ್ತಾರೆ ಎನ್ನುವುದು ಸ್ವಲ್ಪ ಸ್ವಲ್ಪ ನನಗೆ ಅರ್ಥವಾಗುತ್ತಿದೆ. ಕಂಗನಾ ಕಷ್ಟದ ಹಾದಿಯಲ್ಲಿ ಸಾಗಿ ಬಂದು ಸ್ಟಾರ್ ಆಗಿದ್ದಾರೆ ಎಂದು ಉರ್ಫಿ ಜಾವೇದ್ ಹೊಗಳಿದ್ದಾರೆ.

  • ನಟಿ ಮಾಧುರಿ ದೀಕ್ಷಿತ್‌ಗೆ ಮಾತೃ ವಿಯೋಗ

    ನಟಿ ಮಾಧುರಿ ದೀಕ್ಷಿತ್‌ಗೆ ಮಾತೃ ವಿಯೋಗ

    ಬಾಲಿವುಡ್ (Bollywood) ನಟಿ ಮಾಧುರಿ ದೀಕ್ಷಿತ್, ತಾಯಿ ಸ್ನೇಹಲತಾ ದೀಕ್ಷಿತ್ (Snehalatha Dixit) ಅವರು ನಿಧನರಾಗಿದ್ದಾರೆ. ಸಾಕಷ್ಟು ತಿಂಗಳುಗಳಿಂದ ವಯೋಸಹಜ ಕಾಯಿಲೆಯಿಂದ ಮಾಧುರಿ ತಾಯಿ ಬಳಲುತ್ತಿದ್ದರು. ಇದನ್ನೂ ಓದಿ: ಬಾಲಿವುಡ್ ನಂತರ ತಮಿಳಿನಲ್ಲೂ ಹವಾ ಸೃಷ್ಟಿಸಿದ ‘ಕಬ್ಜ’ ಸಿನಿಮಾ

    ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಾಧುರಿ ದೀಕ್ಷಿತ್ (Madhuri Dixit) ಗೆಲ್ಲಲು, ತಾಯಿ (Mother) ಸ್ನೇಹಲತಾ ಅವರ ಬೆಂಬಲ ಸಾಕಷ್ಟಿದೆ. ನಟಿ ಮಾಧುರಿಗೆ ತಾಯಿಯೇ ಶಕ್ತಿಯಾಗಿದ್ದರು.

    ಮಾಧುರಿ ತಾಯಿ ಸ್ನೇಹಲತಾ ದೀಕ್ಷಿತ್ ಅವರಿಗೆ 90 ವರ್ಷ ವಯಸ್ಸಾಗಿತ್ತು. ಮುಂಬೈನ ತಮ್ಮ ನಿವಾಸದಲ್ಲಿ ಭಾನುವಾರದಂದು (ಮಾ.12) ಬೆಳಿಗ್ಗೆ 8:30ರ ಸುಮಾರಿಗೆ ನಿಧನರಾಗಿದ್ದಾರೆ. ಮುಂಬೈನ ವರ್ಲಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಸ್ನೇಹಲತಾ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.

  • ಈ ವರ್ಷದಲ್ಲಿ ಅತೀ ದುಬಾರಿ ಫ್ಲ್ಯಾಟ್ ಖರೀದಿಸಿದ ನಟಿ ಮಾಧುರಿ ದೀಕ್ಷಿತ್

    ಈ ವರ್ಷದಲ್ಲಿ ಅತೀ ದುಬಾರಿ ಫ್ಲ್ಯಾಟ್ ಖರೀದಿಸಿದ ನಟಿ ಮಾಧುರಿ ದೀಕ್ಷಿತ್

    ನಿನ್ನೆಯಷ್ಟೇ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ದುಬಾರಿ ಫ್ಲ್ಯಾಟ್ ಖರೀದಿಸಿದ ಸುದ್ದಿ ಬಾಲಿವುಡ್ ಅಂಗಳದಿಂದ ಕೇಳಿ ಬಂದಿತ್ತು. ಇದೀಗ ಮತ್ತೊಂದು ಸುದ್ದಿ ಬಿ ಟೌನ್ ನಲ್ಲಿ ಹರಿದಾಡುತ್ತಿದ್ದು, ಈ ವರ್ಷದಲ್ಲೇ ಅತೀ ದುಬಾರಿ ಬೆಲೆಯ ಫ್ಲ್ಯಾಟ್ ಅನ್ನು ನಟಿ ಮಾಧುರಿ ದೀಕ್ಷಿತ್ ಖರೀದಿಸಿದ್ದಾರೆ. ಅದು ಪ್ರತಿಷ್ಠಿತ ಬಡಾವಣೆಯಲ್ಲಿ ಎನ್ನುವುದು ಮತ್ತೊಂದು ವಿಶೇಷ.

    ಮುಂಬೈನ ಲೋವರ್ ಪರೇಲ್ ಪ್ರದೇಶದಲ್ಲಿ ಈ ಫ್ಲ್ಯಾಟ್ ಅನ್ನುವ ಖರೀದಿ ಮಾಡಿದ್ದು, ಅದಕ್ಕೆ ಬರೋಬ್ಬರಿ 48 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಮೊನ್ನೆಯಷ್ಟೇ ಈ ಫ್ಲ್ಯಾಟ್ ಮಾಧುರಿ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಇಂಡಿಯಾ ಬುಲ್ಸ್ ಬ್ಲೂ ಪ್ರಾಜೆಕ್ಟರ್ ನವರಿಂದ ಈ ಫ್ಲ್ಯಾಟ್ ಅನ್ನು ಸೆಪ್ಟೆಂಬರ್ 28 ರಂದು ಮಾಧುರಿ ತಮ್ಮ ಹೆಸರಿಗೆ ಆ ಫ್ಲ್ಯಾಟ್ ಅನ್ನು ನೋಂದಾಯಿಸಿಕೊಂಡಿದ್ದಾರೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಈ ಫ್ಲ್ಯಾಟ್ ನ ವಿಶೇಷ ಅಂದರೆ, ಸಮುದ್ರದ ಸಮೀಪದಲ್ಲೇ ಅದು ಇದ್ದು, ಸಮುದ್ರವನ್ನು ಸಮೀಪದಲ್ಲೇ ಸುಂದರವಾಗಿ ನೋಡಬಹುದಂತೆ. ಅಲ್ಲದೇ, ಜಿಮ್, ಸ್ಪಾ, ಕ್ಲಬ್ ಹೌಸ್, ಈಜುಗೊಳ ಸೇರಿದಂತೆ ಅನೇಕ ಸೌಲಭ್ಯಗಳನ್ನು ಅದು ಹೊಂದಿದೆ. 5384 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಫ್ಲ್ಯಾಟ್ ಅಪಾರ್ಟ್ಮೆಂಟ್ ನ 53ನೇ ಮಹಡಿಯಲ್ಲಿ ಇದೆ ಎನ್ನುವುದು ಮತ್ತೊಂದು ವಿಶೇಷ.

    ಈ ಹಿಂದೆಯೂ ಮಾಧುರಿ ಇಂಥದ್ದೇ ಫ್ಲ್ಯಾಟ್ ವಿಚಾರಕ್ಕಾಗಿ ಸುದ್ದಿ ಆಗಿದ್ದರು. ಬರೋಬ್ಬರಿ 12.5 ಲಕ್ಷ ರೂಪಾಯಿಯಂತೆ ಬಾಡಿಗೆ ಮನೆಯಲ್ಲಿ ಅವರು ವಾಸವಿದ್ದರು. ಅತೀ ದುಬಾರಿ ಬಾಡಿಗೆ ಕೊಡುವ ನಟಿ ಎಂದೂ ಅವರನ್ನು ಕರೆಯಲಾಗುತ್ತಿತ್ತು. ಇದೀಗ ಈ ವರ್ಷದಲ್ಲಿ ದುಬಾರಿ ಫ್ಲ್ಯಾಟ್ ಖರೀದಿಸಿದ  ನಟಿ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾಧುರಿ ದೀಕ್ಷಿತ್ ಇರೋದು ಮನೇಲಿ ಅಲ್ಲ, ಅರಮನೆಯಲ್ಲಿ: ಹೊಸ ಮನೆಗೆ ದೇವದಾಸ್ ಬೆಡಗಿ

    ಮಾಧುರಿ ದೀಕ್ಷಿತ್ ಇರೋದು ಮನೇಲಿ ಅಲ್ಲ, ಅರಮನೆಯಲ್ಲಿ: ಹೊಸ ಮನೆಗೆ ದೇವದಾಸ್ ಬೆಡಗಿ

    ದ್ಯ ಬಿಟೌನ್ ನಲ್ಲಿ ಹಾಟ್ ಟಾಪಿಕ್ ಅಂದರೆ  ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ಹೊಸ ಮನೆಗೆ ಕಾಲಿಡಲಿದ್ದಾರೆ ಎನ್ನುವುದು. ಹೊಸ ಮನೆಗೆ ಹೋಗಬೇಕು ಎನ್ನುವುದು ಅವರ ಹಲವು ತಿಂಗಳ ಕನಸಂತೆ. ಅದನ್ನು ಪತಿ ಈಡೇರಿಸಿದ್ದಾರೆ. ಹೊಸ ಮನೆಗೂ ಶಿಫ್ಟ್ ಆಗಿದ್ದಾರೆ. ಈ ಮಾಹಿತಿಯನ್ನು ಮಾಧುರಿ ಅವರ ಮನೆಗೆ ಇಂಟಿರಿಯರ್ ಡಿಸೈನ್ ಮಾಡಿರುವ ಅಪೂರ್ವ ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ : ಈ ವಾರ ಕರ್ನಾಟಕದಲ್ಲೇ 250ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ‘ಆರ್.ಆರ್.ಆರ್’: ಪುನೀತ್ ‘ಜೇಮ್ಸ್’ ಏನಾಗತ್ತೆ?

    ಮಾಧುರಿ ದೀಕ್ಷಿತ್ ಅವರು ಒಪ್ಪುವಂತೆ ಇಂಟಿರಿಯರ್ ಡಿಸೈನ್ ಮಾಡುವುದು ಸುಲಭವಾಗಿರಲಿಲ್ಲ. ಕೊನೆಗೂ ಅವರ ಇಷ್ಟದಂತೆಯೇ ಡಿಸೈನ್ ಮಾಡಿದ್ದಾರಂತೆ ಅಪೂರ್ವ. ಈ ಮೂಲಕ ಆ ಮನೆ ಎಷ್ಟು ದೊಡ್ಡದು, ಏನೆಲ್ಲ ಇವೆ. ಎಷ್ಟನೇ ಮಹಡಿಯಲ್ಲಿ ಆ ಮನೆ ಇದೆ. ಬಾಡಿಗೆ ಎಷ್ಟು ಕಟ್ಟುತ್ತಿದ್ದಾರೆ ಇತ್ಯಾದಿ, ಇತ್ಯಾದಿ ಮಾಹಿತಿಗಳನ್ನೂ ಅಪೂರ್ವ ಹೊರ ಹಾಕಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಪತಿ ಶ್ರೀರಾಮ್ ನೆನೆ ಅವರ ಜೊತೆ ಹೊಸ ಮನೆಗೆ ಶಿಫ್ಟ್ ಆಗಿರುವ ಮಾಧುರಿ ದೀಕ್ಷಿತ್ ಅವರ ಮನೆಯ ಒಟ್ಟು ವಿಸ್ತೀರಣ 5500 ಚದರ ಅಡಿಗಳಿಗಿಂತಲೂ ಹೆಚ್ಚಿದೆಯಂತೆ. ಇದೊಂದು ಬಹುಮಡಿಯ ಕಟ್ಟದಲ್ಲಿದ್ದು, ಮುಂಬೈನ ಐಷಾರಾಮಿ ಪ್ರದೇಶವಾದ ವಾರ್ಲಿಯಲ್ಲಿದೆ. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಬಹುಮಹಡಿ ಕಟ್ಟಡದ 29ನೇ ಮಹಡಿಯಲ್ಲಿ ಮಾಧುರಿ ದೀಕ್ಷಿತ್ ಅವರ ಮನೆಯಿದ್ದು, ಐದು ಐಷಾರಾಮಿ ಬೆಡ್ ರೂಮ್ ಗಳನ್ನು ಮತ್ತು ವಿಶಾಲವಾದ ಹಾಲ್, ಅಡುಗೆ ಮನೆ, ಪುಟ್ಟದೊಂದು ಆಫೀಸು ಕೂಡ ಹೊಂದಿದೆಯಂತೆ. ಇದನ್ನೂ ಓದಿ : ಪುನೀತ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ

    ಹಾಗಂತ ಇದು ಅವರ ಸ್ವಂತ ಮನೆಯಲ್ಲಿ. ತಿಂಗಳಿಗೆ ಬರೋಬ್ಬರಿ 12.5 ಲಕ್ಷ ರೂಪಾಯಿ ಬಾಡಿಗೆ ಕೊಟ್ಟು ಈ ಮನೆಯಲ್ಲಿ ಇರುತ್ತಿದ್ದಾರಂತೆ ಮಾಧುರಿ ದಂಪತಿ. ಈ ವಿಷಯವನ್ನೂ ಸ್ವತಃ ಅಪೂರ್ವ ಅವರೇ ಹೇಳಿಕೊಂಡಿದ್ದು, ಇಂಟಿರಿಯರ್ ಗೆ ಮಾಡಿದ ಖರ್ಚನ್ನು ಮಾತ್ರ ಅವರು ಬಾಯ್ಬಿಟ್ಟಿಲ್ಲ.

  • 54 ವರ್ಷವಾದ್ರೂ ಪಡ್ಡೆ ಹುಡುಗರ ನಿದ್ದೆ ಕದಿಯುವ ಮಾಧುರಿ ದೀಕ್ಷಿತ್

    54 ವರ್ಷವಾದ್ರೂ ಪಡ್ಡೆ ಹುಡುಗರ ನಿದ್ದೆ ಕದಿಯುವ ಮಾಧುರಿ ದೀಕ್ಷಿತ್

    ಮುಂಬೈ: ನಟಿ ಮಣಿಯರಿಗೆ ವಯಸ್ಸೆ ಆಗಲ್ಲ, ಎನ್ನುವಷ್ಟರ ಮಟ್ಟಿಗೆ ಸೌಂದರ್ಯವನ್ನು ಹೊಂದಿರುತ್ತಾರೆ. ಹೀಗಿರುವಾಗ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರು 54 ವರ್ಷದಲ್ಲಿಯೂ ಯಾವ ನಟಿಗೂ ಕಮ್ಮಿ ಎಲ್ಲ ಎನ್ನವಂತೆ ಕಾಣಿಸುತ್ತಾರೆ. ಲೆಟೆಸ್ಟ್ ಆಗಿ ಫೋಟೋಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಮಾಲ್ ಮಾಡುತ್ತಿದ್ದಾರೆ.

    ವಯಸ್ಸು 54 ಆದರೂ ಮಾಧುರಿ ದೀಕ್ಷಿತ್ ಅವರ ಸೌಂದರ್ಯ ಮಾತ್ರ ಚೂರು ಮಾಸಿಲ್ಲ, ಹಾಗೇ ಇದ್ದಾರೆ. ಇದೀಗ ಕೆಂಪುನ ಕಲರ್ ಗೌನ್ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದನ್ನೂ ಓದಿ : ಡಿಸೆಂಬರ್ ನಲ್ಲಿ ರಶ್ಮಿಕಾ ಮಂದಣ್ಣ -ದೇವರಕೊಂಡ ಮದುವೆ? ಏನಿದು ಮ್ಯಾರೇಜ್ ಕಹಾನಿ

    ಬಾಲಿವುಡ್ ಚಿತ್ರರಂಗ ಕಂಡ ಅಪ್ರತಿಮ ಕಲಾವಿದೆ ಮಾಧುರಿ ದೀಕ್ಷಿತ್. ರೆಟ್ರೋ ಕಾಲದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದ ಈ ಚೆಲುವೆಗೆ ಬೇರೆ ಯಾರೂ ಸಾಟಿ ಇಲ್ಲ. ಏಕ್ ದೋ ತೀನ್.. ಎಂದು ಕುಣಿದು, ಪಡ್ಡೆಗಳ ನಿದ್ದೆ ಕೆಡಿಸಿದ ಮಾಧುರಿ ದೀಕ್ಷಿತ್ ಅಂದು ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿದ್ದರು. ಇಂದಿಗೂ ಕೂಡಾ ಇವರ ಚಾರ್ಮ್ ಹಾಗೆಯೇ ಇದೆ ಎಂದು ಹೇಳಿದರೆ ತಪ್ಪಾಗಲಾರದು. ಇದನ್ನೂ ಓದಿ : ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusive

    ಮಾಧುರಿ ಅವರು ಸಿನಿಮಾಗೆ ಎಂಟ್ರಿಕೊಟ್ಟಾಗ ಅವರಿಗೆ  ಕೇವಲ 17 ವರ್ಷವಾಗಿತ್ತು. 1984ರಲ್ಲಿ ಅಬೋದ್ ಸಿನಿಮಾ ಮೂಲಕ ಮಾಧುರಿ ದೀಕ್ಷಿತ್ ಅವರು ಬಾಲಿವುಡ್‍ಗೆ ಕಾಲಿಟ್ಟರು. ಆರಂಭದಲ್ಲೇ ತಮ್ಮ ನಟನೆ ಮೂಲಕ ಅವರು ಗಮನ ಸೆಳೆದರು.  ನಂತರ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ತೇಜಾಬ್ ಸಿನಿಮಾ ಮೂಲಕ. ಆ ಚಿತ್ರದ ಏಕ್ ದೋ ತೀನ್.. ಹಾಡು ಸೂಪರ್ ಹಿಟ್ ಆಯಿತು. ಆ ಮೂಲಕ ಮಾಧುರಿ ದೀಕ್ಷಿತ್  ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದುಕೊಂಡರು. ಸಿನಿಪ್ರೇಮಿಗಳಿಗೆ ಇಂದಿಗೂ ಆ ಹಾಡು ಫೇವರಿಟ್ ಆಗಿ ಉಳಿದುಕೊಂಡಿದೆ.

  • ಪಂಡಿತ್ ಬಿರ್ಜೂ ಮಹಾರಾಜ್ ನನ್ನ ಗುರುಗಳು ಮಾತ್ರವಲ್ಲ, ಸ್ನೇಹಿತರು ಹೌದು: ಮಾಧುರಿ ದೀಕ್ಷಿತ್

    ಪಂಡಿತ್ ಬಿರ್ಜೂ ಮಹಾರಾಜ್ ನನ್ನ ಗುರುಗಳು ಮಾತ್ರವಲ್ಲ, ಸ್ನೇಹಿತರು ಹೌದು: ಮಾಧುರಿ ದೀಕ್ಷಿತ್

    ಮುಂಬೈ: ಹೃದಯಾಘಾತದಿಂದ ಮೃತಪಟ್ಟ ಪಂಡಿತ್ ಬಿರ್ಜೂ ಮಹಾರಾಜ್(83)ಅವರನ್ನು ನೆನೆದು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಭಾವುಕರಾಗಿದ್ದಾರೆ.

    ಇನ್‍ಸ್ಟಾಗ್ರಾಮ್ ನಲ್ಲಿ ಮಾಧುರಿ, ಅವರು ಮುಗ್ಧ ಮಗುವಿನಂತೆ. ಅವರು ನನ್ನ ಗುರುವೂ ಹೌದು, ಆದರೆ ಅದಕ್ಕಿಂತ ಹೆಚ್ಚು ನನ್ನ ಸ್ನೇಹಿತರಾಗಿದ್ದರು ಎಂದು ನೆನೆದಿದ್ದಾರೆ. ಇದನ್ನೂ ಓದಿ: ಲೆಜೆಂಡರಿ ಕಥಕ್ ಡಾನ್ಸರ್ ಪಂಡಿತ್ ಬಿರ್ಜೂ ಮಹಾರಾಜ್ ನಿಧನ

    ಪಂಡಿತ್ ಅವರು ನನಗೆ ನೃತ್ಯ ಮತ್ತು ಅಭಿನಯವನ್ನು ಕಲಿಸಿದರು. ಅವರು ಯಾವಾಗಲೂ ನನ್ನನ್ನು ನಗಿಸುತ್ತಿದ್ದರು. ಅವರು ತಮಾಷೆಯ ವ್ಯಕ್ತಿಯಾಗಿದ್ದರು. ಪಂಡಿತ್ ಅವರು ಅಗಲಿದ್ದರೂ, ಅವರು ತಮ್ಮ ಅಭಿಮಾನಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಕಲಿಸಿದ ಪಾಠವನ್ನು ನಾವು ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದಿದ್ದಾರೆ.

    ನಿಮ್ಮ ನಮ್ರತೆ, ಲಾಲಿತ್ಯ ನನಗೂ ಕಲಿಸಿದ್ದೀರಿ. ಎಲ್ಲದಕ್ಕೂ ಧನ್ಯವಾದಗಳು ಮಹಾರಾಜಜೀ. ಕೋಟಿ ಕೋಟಿ ಧನ್ಯವಾದಗಳು ಎಂದು ಬರೆದು ಪಂಡಿತ್ ಅವರ ಜೊತೆಗಿದ್ದ ಥ್ರೋಬ್ಯಾಕ್ ಫೋಟೋವನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Madhuri Dixit (@madhuridixitnene)

    ಪಂಡಿತ್ ಬಿರ್ಜೂ ಮಹಾರಾಜ್ ಅವರು ಮಾಧುರಿ ದೀಕ್ಷಿತ್ ಅವರ ಅನೇಕ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅವುಗಳಲ್ಲಿ ‘ದೇವದಾಸ್’ ಸಿನಿಮಾದ ‘ಕಾಹೆ ಛೇದ್ ಮೋಹೆ’ ಮತ್ತು ‘ದೇಧ್ ಇಷ್ಕಿಯಾದಿಂದ ಜಗವೇ ಸಾರಿ ರೈನಾ’ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ.

    ಪಂಡಿತ್ ಬಿರ್ಜೂ ಮಹಾರಾಜ್ ಅವರನ್ನು ಪಂಡಿತ್‍ಜೀ, ಮಹಾರಾಜ್‍ಜೀ ಎಂದು ಅವರ ಶಿಷ್ಯರು ಮತ್ತು ಅನುಯಾಯಿಗಳು ಪ್ರೀತಿಯಿಂದ ಕರೆಯುತ್ತಿದ್ದರು. ಭಾರತದ ಪ್ರಸಿದ್ಧ ಕಲಾವಿದರಲ್ಲಿ ಇವರು ಒಬ್ಬರಾಗಿದ್ದರು. ಇದನ್ನೂ ಓದಿ:  ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!

    ಪಂಡಿತ್ ಬಿರ್ಜೂ ಮಹಾರಾಜ್ ಅವರು ಪ್ರಸಿದ್ಧ ಶಾಸ್ತ್ರೀಯ ಗಾಯಕರೂ ಆಗಿದ್ದರು. ಕಥಕ್ ನೃತ್ಯಗಾರರ ಮಹಾರಾಜ್ ಕುಟುಂಬದ ವಂಶಸ್ಥರಾದ ಪಂಡಿತ್ ಬಿರ್ಜೂ ಮಹಾರಾಜ್ ಅವರು ತಮ್ಮ ತಂದೆ ಮತ್ತು ಗುರು ಅಚ್ಚನ್ ಮಹಾರಾಜ್ ಮತ್ತು ಚಿಕ್ಕಪ್ಪರಾದ ಶಂಭು ಮಹಾರಾಜ್ ಮತ್ತು ಲಚ್ಚು ಮಹಾರಾಜ್ ಅವರಲ್ಲಿ ತರಬೇತಿ ಪಡೆದುಕೊಂಡಿದ್ದರು. ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ, ಭಾರತ ಸರ್ಕಾರವು ಅವರಿಗೆ 1986 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ನೀಡಿ ಗೌರವಿಸಿತ್ತು.

  • ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್ ಪುತ್ರ

    ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್ ಪುತ್ರ

    ಮುಂಬೈ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು (ನವೆಂಬರ್ 7) ತಮ್ಮ ತಲೆ ಕೂದಲನ್ನು ದಾನ ಮಾಡಿದ್ದಾರೆ.

    ರಿಯಾನ್ ತಲೆ ಕೂದಲು ಕ್ಷೌರ ಮಾಡುತ್ತಿರುವ ವೀಡಿಯೋವನ್ನು ತಾಯಿ ಮಾಧುರಿ ದೀಕ್ಷತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಅವಶ್ಯಕವಾದ ಉದ್ದದ ತಲೆ ಕೂದಲನ್ನು ದಾನ ಮಾಡಲು 2 ವರ್ಷಗಳಿಂದ ತಮ್ಮ ಮಗ ರಾಯನ್ ತಲೆ ಕೂದಲು ಕತ್ತರಿಸಿಲ್ಲ. ರಿಯಾನ್ ಈ ನಿರ್ಧಾರ ನಮಗೆ ಆಶ್ಚರ್ಯವನ್ನುಂಟು ಮಾಡಿದೆ. ಅಲ್ಲದೆ ಅತಿ ಹೆಚ್ಚು ಹೆಮ್ಮೆ ಉಂಟು ಮಾಡಿದೆ ಎಂದು ಮಾಧುರಿ ದೀಕ್ಷಿತ್ ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ರಾಯನ್ ಈ ಕಾರ್ಯಕ್ಕೆ ಸೋಶಿಯಲ್ ಮೀಡಿಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:  ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ

     

    View this post on Instagram

     

    A post shared by Madhuri Dixit (@madhuridixitnene)

    ನೆಟ್ಟಿಗರು ಕೂಡ ಕಮೆಂಟ್ ಮೂಲಕ ಶ್ಲಾಫಿಸಿದ್ದು, ಅದರಲ್ಲಿ ಒಬ್ಬರು, ಉತ್ತಮ ಚಿಂತನೆ ಮತ್ತು ಕೊಡುಗೆ, ರಿಯಾನ್‍ಗೆ ಆಲ್ ದಿ ಬೆಸ್ಟ್ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಿಮ್ಮ ಮಗನ ಬಗ್ಗೆ ಹೆಮ್ಮೆಯಾಗುತ್ತದೆ ಮತ್ತು ಉತ್ತಮ ಪೋಷಕರಿಗೆ ಅಭಿನಂದನೆಗಳು ಎಂದು ಕಮೆಂಟ್ ಮಾಡಿ ಶ್ಲಾಫಿಸಿದ್ದಾರೆ. ಇದನ್ನೂ ಓದಿ:  ಆರೋಗ್ಯಕರವಾದ ಸೌತೆಕಾಯಿ ತಂಬುಳಿ ಮಾಡುವ ವಿಧಾನ

  • ಮಾಧುರಿಯ ಮಾಡೆಲಿಂಗ್ ವೀಡಿಯೋ ನೋಡಿ ಫಿದಾ ಆದ ಅನುಷ್ಕಾ ಶರ್ಮಾ

    ಮಾಧುರಿಯ ಮಾಡೆಲಿಂಗ್ ವೀಡಿಯೋ ನೋಡಿ ಫಿದಾ ಆದ ಅನುಷ್ಕಾ ಶರ್ಮಾ

    ಮುಂಬೈ: ಬಾಲಿವುಡ್ ಮೋಹಕ ತಾರೆ ಮಾಧುರಿ ದೀಕ್ಷಿತ್ ಮಾಡೆಲಿಂಗ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅದಕ್ಕೆ ಅನುಷ್ಕಾ ಶರ್ಮಾ ಫಿದಾ ಆಗಿದ್ದಾರೆ.

    ಇನ್‍ಸ್ಟಾಗ್ರಾಮ್ ನಲ್ಲಿ ಇತ್ತೀಚೆಗೆ ಮಾಡೆಲ್ ಫೇಸ್ ವೀಡಿಯೋ ಮಾಡುವ ಚಾಲೆಂಜಿಂಗ್ ಟ್ರೆಂಡ್ ಪ್ರಾರಂಭವಾಗಿದೆ. ಈ ಚಾಲೆಂಜ್ ಅನ್ನು ಮಾಧುರಿ ಸಹ ತೆಗೆದುಕೊಂಡಿದ್ದು, ಮಾಡೆಲ್‍ಫೇಸ್ ವೀಡಿಯೋವನ್ನು ಮಾಡಿ ಇನ್‍ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ‘ತಮಾಷೆಗಾಗಿ, ಮಾಡೆಲ್‍ಫೇಸ್’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ನಿಮ್ಮನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:  ವಿಕ್ರಾಂತ್ ರೋಣ ಡಿಸೆಂಬರ್ ನಲ್ಲಿ ಬಿಡುಗಡೆ ಸಾಧ್ಯತೆ

     

    View this post on Instagram

     

    A post shared by Madhuri Dixit (@madhuridixitnene)

    ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರು ಕೂಡ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮಾಧುರಿ ಪೋಸ್ಟ್ ಹಂಚಿಕೊಂಡಿದ್ದು, ಕ್ವೀನ್ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಪ್ರೀತಿ ಝಿಂಟಾ, ಹುಮಾ ಖುರೇಷಿ ಎಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ.

    ಮಾಧುರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಅವರು ಶೂಟಿಂಗ್ ಸಮಯ ಸೆಟ್‍ನಲ್ಲಿ ಮಾಡಿದ ತರಲೆಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅದು ಅಲ್ಲದೇ ಸೆಟ್ ನಲ್ಲಿ ಸಖತ್ ಆಕ್ಟಿವ್ ಇರುವ ಮಾಧುರಿ ತಮ್ಮ ತಂಡದ ಜೊತೆಗೆ ರೀಲ್ಸ್ ಗಳನ್ನು ಮಾಡಿ ಹಾಕುತ್ತಿರುತ್ತಾರೆ. ಇದರಿಂದ ಅವರ ಸರಳತೆ ಏನು ಎಂಬುದು ಗೊತ್ತಗುತ್ತೆ. ಖಾಸಗಿ ಶೋವೊಂದರಲ್ಲಿ ತೀರ್ಪುಗಾರರಾಗಿರುವ ಇವರು ಅಭಿಮಾನಿಗಳನ್ನು ರಂಜಿಸುವುದರಲ್ಲಿ ಯಾವಾಗಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇದನ್ನೂ ಓದಿ:  ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್

    ಮಾಧುರಿ ಸೂಪರ್ ಹಿಟ್ ಸಿನಿಮಾಗಳಾದ ತೇಜಾಬ್, ದೇವದಾಸ್, ದಿಲ್ ತೋ ಪಾಗಲ್ ಹೈ, ದೇವದಾಸ್, ಹಮ್ ಆಪ್ಕೆ ಹೇ ಕೌನ್, ಖಲ್ನಾಯಕ್, ಸಾಜನ್, ಬೀಟಾ, ಕೊಯ್ಲಾ, ಪುಕರ್, ಪ್ರೇಮ್ ಗ್ರಂಥ್ ಸರಣಿಗಳು ಓಟಿಟಿಯಲ್ಲಿ ಬರುತ್ತಿದ್ದು, ಅದನ್ನು ನಿರ್ದೇಶಕ ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಅದು ಅಲ್ಲದೇ ಮಾಧುರಿ ಆಗಸ್ಟ್ 15 ಹೆಸರಿನ ಮರಾಠಿ ನಾಟಕವನ್ನು ನಿರ್ಮಾಣ ಮಾಡಿದ್ದು, ಇದು ಇವರ ಚೊಚ್ಚಲ ಓಟಿಟಿ ನಿರ್ಮಾಣದ ಸಿನಿಮಾವಾಗಿದೆ. ಇದನ್ನೂ ಓದಿ:  ಆಹಾರ, ಸೆಕ್ಸ್ ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತೀರಾ..?: ಶೃತಿ ಕೊಟ್ರು ಬೋಲ್ಡ್ ಆನ್ಸರ್

  • 75 ಸಾವಿರದ ಚೆರ್ರಿ ರೆಡ್ ಘರಾರಾ ಡ್ರೆಸ್‍ನಲ್ಲಿ ಮಿಂಚಿದ ಚಂದ್ರಮುಖಿ

    75 ಸಾವಿರದ ಚೆರ್ರಿ ರೆಡ್ ಘರಾರಾ ಡ್ರೆಸ್‍ನಲ್ಲಿ ಮಿಂಚಿದ ಚಂದ್ರಮುಖಿ

    ವಯಸ್ಸು ಕೇವಲ ಸಂಖ್ಯೆ ಅನ್ನೋದನ್ನ ಪ್ರೂವ್ ಮಾಡಿದರಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಸಹ ಒಬ್ಬರು. ತಮ್ಮ ಆಕರ್ಷಕ ಕಣ್ಣುಗಳಿಂದಲೇ ನೋಡುಗರ ಮಂತ್ರ ಮುಗ್ಧರನ್ನ ಮಾಡುವ ಚೆಲುವೆ ಮಾಧುರಿ ದೀಕ್ಷಿತ್. ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿರುವ ಮಾಧುರಿ ದೀಕ್ಷಿತ್ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದು. ಇನ್ನು ಎಷ್ಟೋ ಜನರು ಮಾಧುರಿ ತುಟಿಯಂಚಿನ ಕಿರುನಗೆಗಾಗಿ ಈ ಶೋ ನೋಡೋದುಂಟು. ಇನ್ನು ಕೆಲವೊಮ್ಮೆ ಶೋನಲ್ಲಿ ಸ್ಪರ್ಧಿಗಳ ಜೊತೆ ಮಾಧುರಿ ಹೆಜ್ಜೆ ಹಾಕಿದ್ರೆ, ನೋಡುಗರ ಹೃದಯದಲ್ಲಿ ಪ್ರೇಮ ಸಿಂಚನ ಆಗೋದರಲ್ಲಿ ಸಂದೇಹವಿಲ್ಲ..

    ಈ ವಾರದ ಕಾರ್ಯಕ್ರಮಕ್ಕೆ ಮಾಧುರಿ ದೀಕ್ಷಿತ್ 75 ಸಾವಿರ ರೂ.ಮೌಲ್ಯದ ಚೆರ್ರಿ ರೆಡ್ ಘರಾರಾ ಡ್ರೆಸ್ ನಲ್ಲಿ ಮಿಂಚಿದ್ದರು.

    ಈ ಡ್ರೆಸ್ ಪುನಿತ್ ಬಾಲಾನ ಡಿಸೈನ್ ಮಾಡಿದ್ದು, ಅವರ ವೆಬ್‍ಸೈಟ್ ನಲ್ಲಿ ಲಭ್ಯವಿದೆ.

    ಡ್ರೆಸ್‍ಗೆ ಮ್ಯಾಚಿಂಗ್ ಗಾಗಿ ಕುಂದನ್ ಜೆವೆಲ್ಲರಿಯ ಹರಳುಗಳ ವಿಶೇಷ ವಿನ್ಯಾಸದ ಕತ್ತಿನ ಸರ ಮತ್ತು ಸಿಂಪರ್ ಕಿವಿಯೊಲೆ ಧರಿಸಿದ್ದ ಮಾಧುರಿ ವಧುವಿನಂತೆ ಕಂಗೊಳಿಸುತ್ತಿದ್ದರು.

    ಕಾರ್ಯಕ್ರಮ ಮುಗಿದ ಬಳಿಕ ಹೊರ ಬಂದ ಮಾಧುರಿ ಸೌಂದರ್ಯವನ್ನು ಕ್ಯಾಮೆರಾಗಳು ತಮ್ಮ ಕಣ್ಣಲ್ಲಿ ಭದ್ರ ಮಾಡಿಕೊಂಡವು.

    ಇದೇ ಕಾರ್ಯಕ್ರಮದಲ್ಲಿ ಮಾಧುರಿಗೆ ಜೊತೆಯಾಗಿ ಧರ್ಮೇಶ್, ತುಷಾರ್ ಕಾಲಿಯಾ ಸಹ ಜಡ್ಜ್ ಆಗಿದ್ದಾರೆ.

    ಇನ್ನು ಹಾಸ್ಯ ಕಲಾವಿದೆ ಭಾರತಿ ಸಿಂಗ್ ಪತಿ ಹರ್ಷ ಜೊತೆ ಶೋನ ನಿರೂಪಣೆ ಮಾಡ್ತಿದ್ದಾರೆ.

    ಕನ್ನಡದ ಚಿಕ್ಕಮಗಳೂರಿನ ಡ್ಯಾನ್ಸರ್ ಕಿಶನ್ ಸಹ ಈ ಶೋನಲ್ಲಿ ಭಾಗವಾಗಿದ್ದರು. ಕಳೆದ ಸೀಸನ್ ಕಿಶನ್ ವಿನ್ನರ್ ಆಗಿದ್ರು. ಇದನ್ನೂ ಓದಿ: ರಶ್ಮಿಕಾ ಜೊತೆ ಫೋಟೋಗೆ ಮುಗಿಬಿದ್ದ ಫ್ಯಾನ್ಸ್