ದಕ್ಷಿಣ ಭಾರತದ ಹೆಸರಾಂತ ನಟಿ, ನಿರ್ಮಾಪಕಿ ಜ್ಯೋತಿಕಾ (Jyothika) ಬರೋಬ್ಬರಿ 25 ವರ್ಷಗಳ ಬಳಿಕ ಬಾಲಿವುಡ್ ಗೆ ಮರಳಿದ್ದಾರೆ. ಶೈತಾನ್ (Shaitan) ಸಿನಿಮಾದಲ್ಲಿ ಅವರು ಹೊಸ ಬಗೆಯ ಪಾತ್ರ ಮಾಡಿದ್ದು, ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಹಾರರ್ ಕಥಾನಕ ಹೊಂದಿರುವ ಈ ಸಿನಿಮಾದ ದೃಶ್ಯಗಳು ಬೆಚ್ಚಿ ಬೀಳಿಸುತ್ತಿವೆ. ವಶೀಕರಣದ ವಿಷಯವನ್ನೂ ಈ ಸಿನಿಮಾ ಒಳಗೊಂಡಿದೆ.

ಜ್ಯೋತಿಕಾ ಈ ಹಿಂದೆ ಹಿಂದಿ, ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ, ಆನಂತರ ಚಿತ್ರೋದ್ಯಮದಿಂದಲೇ ದೂರವಾಗಿದ್ದರು. ಇದೀಗ ಬಾಲಿವುಡ್ (Bollywood) ಶೈತಾನ್ ಸಿನಿಮಾವನ್ನು ಒಪ್ಪಿಕೊಳ್ಳುವ ಮೂಲಕ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗುತ್ತಿದ್ದಾರೆ.

ಅಜಯ್ ದೇವಗನ್ (Ajay Devgn) ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಜ್ಯೋತಿಕಾ ಇವರ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾರರ್ ಚಿತ್ರವಾಗಿದ್ದು, ಆರ್. ಮಧುವನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜ್ಯೋತಿಕಾ ಮತ್ತು ಪತಿ ಕಂ ನಟ ಸೂರ್ಯ ತಮಿಳಿನಲ್ಲಿ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಜ್ಯೋತಿಕಾ ಬಹುತೇಕ ನಿರ್ಮಾಣದಲ್ಲೇ ಬ್ಯುಸಿಯಾಗಿದ್ದರು. ಅಭಿಮಾನಿಗಳ ಒತ್ತಾಸೆಯಂತೆ ಬಾಲಿವುಡ್ ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಸಿನಿಮಾ ಸಾಕಷ್ಟು ಕುತೂಹಲವನ್ನಂತೂ ಮೂಡಿಸಿದೆ.













ಬ್ರಿಟಿಷರ (British) ವಿರುದ್ಧ ತೊಡೆ ತಟ್ಟಿದ ಸಿ. ಶಂಕರನ್ ನಾಯರ್ (C.Shankaran Nair) ಎಂಬ ಜನಪ್ರಿಯ ವಕೀಲರ ಕುರಿತು ಬಾಲಿವುಡ್‌ನಲ್ಲಿ ಬಯೋಪಿಕ್ ಮಾಡಲು ತಯಾರಿ ನಡೆಯುತ್ತಿದೆ. ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಶಂಕರನ್ ನಾಯರ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಇದನ್ನೂ ಓದಿ: 




ಮಹಿಳೆಯರು ಮತ್ತು ಪುರುಷರು ಬೆಳೆದು ಬರುವ ವಾತಾವರಣದಿಂದ ವ್ಯಕ್ತಿತ್ವ ನಿರ್ಧಾರವಾಗುತ್ತೆ. ಇದರಲ್ಲಿ ಜನರದ್ದು ಏನೂ ತಪ್ಪಿಲ್ಲ. ಕುಟುಂಬವೂ ಮೊದಲು ಶಿಕ್ಷಣ ಕೊಡಬೇಕು. ಕುಟುಂಬವೇ ಮಹಿಳೆಯರನ್ನು ಕೆಲವೊಮ್ಮೆ ನಿರ್ಬಂಧಿಸುವ ವಿಷಯಗಳು ಇವೆ ಎಂಬುದು ನನ್ನ ಭಾವನೆ ಎಂದು ಹೇಳಿದ್ದಾರೆ.
