Tag: ಮಾದೇವ ಸಿನಿಮಾ

  • ಮಂತ್ರಾಲಯದಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದ ನಟ ವಿನೋದ್ ಪ್ರಭಾಕರ್

    ಮಂತ್ರಾಲಯದಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದ ನಟ ವಿನೋದ್ ಪ್ರಭಾಕರ್

    ರಾಯಚೂರು: ತಮ್ಮ ಮುಂದಿನ ಸಿನಿಮಾ ಯಶಸ್ಸಿಗಾಗಿ ನಟ ವಿನೋದ್ ಪ್ರಭಾಕರ್ (Vinod Prabhakar) ಮಂತ್ರಾಲಯಕ್ಕೆ (Mantralaya) ಭೇಟಿ ನೀಡಿ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದ್ದಾರೆ.

    ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಸಿನಿಮಾ ತಂಡದೊಂದಿಗೆ ವಿನೋದ್ ಪ್ರಭಾಕರ್ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಅದೇ ರೀತಿ ಮಂತ್ರಾಲಯ ಹಾಗೂ ರಾಯಚೂರಿನ (Raichur) ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮನೆಗಳ್ಳತನ ಮಾಡಿದ್ದ ಇಬ್ಬರು ಅರೆಸ್ಟ್ – 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ

    ರಾಯಚೂರಿನ ಗಾಂಧಿ ವೃತ್ತದಲ್ಲಿನ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿನೋದ್ ಪ್ರಭಾಕರ್, ನನಗೆ ನಮ್ಮ ತಂದೆಯವರಿಗೆ ಉತ್ತರ ಕರ್ನಾಟಕದಿಂದ ಒಳ್ಳೆಯ ಅಭಿಮಾನ ಬಳಗ ಇದೆ. ಈ ಕಡೆ ಜನ ನಮಗೆ ತುಂಬಾ ಬೆಂಬಲ ಕೊಡುತ್ತಾರೆ. ಬೆಳಗ್ಗೆ ಮಂತ್ರಾಲಯ ರಾಯರ ಮಠಕ್ಕೆ ಹೋಗಿ ಆಶಿರ್ವಾದ ಪಡೆದಿದ್ದೇವೆ. ಜೂನ್ 6 ಕ್ಕೆ ಮಾದೇವ ಸಿನಿಮಾ ತೆರೆಗೆ ಬರುತ್ತಿದೆ. ಇಡೀ ಚಿತ್ರ ತಂಡ ಪ್ರಚಾರ ನಡೆಸಿದ್ದೇವೆ. ಎಲ್ಲರೂ ಹರಸಿ ಹಾರೈಸಬೇಕು ಎಂದರು. ಇದನ್ನೂ ಓದಿ: ಅರಣ್ಯ ಇಲಾಖೆ ರಾಯಭಾರಿಯಾಗಿ ಅನಿಲ್ ಕುಂಬ್ಳೆ: ಈಶ್ವರ್ ಖಂಡ್ರೆ

    ರಾಯರ ಮಠದಲ್ಲಿ ಉರುಳು ಸೇವೆ ಮಾಡಬೇಕು ಎಂದು ಮೊದಲೇ ಅಂದುಕೊಂಡಿದ್ದೆ. ಮಠಕ್ಕೆ ಬರಲು ಆಗಿರಲಿಲ್ಲ. ಹಾಗಾಗಿ ಈಗ ಉರುಳು ಸೇವೆ ಮಾಡಿದ್ದೇನೆ. ನಾನು ರಾಯರು ಹಾಗೂ ಬಾಬಾ ಭಕ್ತ. ನಮ್ಮ ಸಿನಿಮಾಗೆ ಗುರು ಬಲ ಸಿಗಲಿ ಎಂದು ಬೇಡಿಕೊಂಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರವನ್ನ ಕ್ಯಾಮೆರಾ ಮುಂದೆಯೇ ಮಾಡಲಾಯ್ತು ಆದ್ದರಿಂದ ಯಾರೂ ಪುರಾವೆ ಕೇಳಲ್ಲ: ವಿಪಕ್ಷಗಳಿಗೆ ತಿವಿದ ಮೋದಿ

    ಇನ್ನೂ ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ಭಾಟಿಯಾ ಬ್ರ‍್ಯಾಂಡ್ ಅಂಬಾಸಿಡರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪುನೀತ್ ಸರ್ ನಮ್ಮ ನಂದಿನಿ ಹಾಲಿಗೆ ಬ್ರ‍್ಯಾಂಡ್ ಅಂಬಾಸಿಡರ್ ಆಗಿದ್ದರು. ನಮ್ಮಲ್ಲೂ ಚರ್ಚೆ ನಡೆದಿದೆ, ಚಿತ್ರರಂಗದವರು ಚರ್ಚೆ ಮಾಡುತ್ತಿದ್ದಾರೆ. ನಮ್ಮವರು ಬ್ರ‍್ಯಾಂಡ್ ಅಂಬಾಸಿಡರ್ ಖಂಡಿತ ಆಗೇ ಆಗುತ್ತಾರೆ. ಅವಕಾಶ ಸಿಕ್ಕರೆ ನಮ್ಮ ಕನ್ನಡದ್ದು ನಾನು ಪ್ರಮೋಷನ್ ಮಾಡೇ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸಮಾಜದಲ್ಲಿ ಅಶಾಂತಿ, ಒಡಕು ಮೂಡಿಸೋದು ಬಿಜೆಪಿ ಉದ್ದೇಶ: ಶರಣಪ್ರಕಾಶ್ ಪಾಟೀಲ್

  • ‘ಮಾದೇವ’ನ ಮಾಸ್ ಟೀಸರ್- ಭರ್ಜರಿ ಆ್ಯಕ್ಷನ್ ಮೂಲಕ ಮರಿ ಟೈಗರ್ ಎಂಟ್ರಿ

    ‘ಮಾದೇವ’ನ ಮಾಸ್ ಟೀಸರ್- ಭರ್ಜರಿ ಆ್ಯಕ್ಷನ್ ಮೂಲಕ ಮರಿ ಟೈಗರ್ ಎಂಟ್ರಿ

    ರಿ ಟೈಗರ್ ವಿನೋದ್ ಪ್ರಭಾಕರ್ (Vinnod Prabhakar) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಮಾದೇವ’. ಪೋಸ್ಟರ್‌ಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ‘ಮಾದೇವ’ (Maadeva Film) ಟೀಸರ್ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಯಕ ವಿನೋದ್ ಪ್ರಭಾಕರ್, ನಾಯಕಿ ಸೋನಲ್, ಹಿರಿಯ ನಟಿ ಶೃತಿ, ನಿರ್ದೇಶಕ ನವೀನ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ನಿರ್ದೇಶಕ ತರುಣ್ ಸುಧೀರ್, ನಟರಾದ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ಝೈದ್ ಖಾನ್ ಸಾಥ್ ಕೊಟ್ಟರು.

    ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ತರುಣ್ ಸುಧೀರ್, ವಿನೋದ್ ಜೊತೆ ನನಗೆ ಒಳ್ಳೆಯ ಬಾಂಧವ್ಯ ಇದೆ. ರಿಯಲ್ ಲೈಫ್ ಫೈಟರ್ ವಿನೋದ್. ಮಾದೇವ ಪ್ರಸೆಂಟೇಷನ್, ಅವರ ಲುಕ್ ಬಹಳ ಚೆನ್ನಾಗಿದೆ. ಬಿಯರ್ಡ್ ಲುಕ್‌ನಲ್ಲಿ ಅವರು ಚೆನ್ನಾಗಿ ಕಾಣಿಸುತ್ತಾರೆ. ಕೆಲಸದ ವಿಚಾರದಲ್ಲಿ ಪ್ರಾಮಾಣಿಕ, ಹಾರ್ಡ್ ವರ್ಕರ್. ಸಿನಿಮಾಗೆ ತುಂಬಾ ಎಫರ್ಟ್ ಹಾಕಿ ಕೆಲಸ ಮಾಡುತ್ತಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು. ಇದನ್ನೂ ಓದಿ:ಡ್ರೋನ್ ದೋಖಾ ಆರೋಪ: ಸದ್ಯಕ್ಕೆ ದೂರು ನೀಡಲ್ಲ ಎಂದ ಸಾರಂಗ್

    ನಟ ಅಭಿಷೇಕ್ ಅಂಬರೀಶ್ (Abhishek Ambareesh) ಮಾತನಾಡಿ, ಟೈಗರ್ ಅವರ ನಟನೆ, ಫೈಟ್ ಬಗ್ಗೆ ಅಥವಾ ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಮಾತನಾಡುವ ಬಗ್ಗೆ ದೊಡ್ಡವನಲ್ಲ ನಾನು. ನಮ್ಮೆಲ್ಲರಿಗಿಂತ ಅವರು ಹಿರಿಯರು. ಆದರೆ ಯುವಕರಾಗಿ ಕಾಣಿಸಿಕೊಳ್ಳುತ್ತಾರೆ. ವಿಷ್ಯುವಲ್ಸ್, ಕ್ಯಾಮೆರಾ ವರ್ಕ್, ಮ್ಯೂಸಿಕ್ ಚೆನ್ನಾಗಿದೆ. ಸಬ್ಜೆಕ್ಟ್ ಬೇರೆ ತರ ಇದೆ. ಇತ್ತೀಚಿಗಿನ ದಿನ 70ರ ಕಥೆ ಸಕ್ಸಸ್ ಆಗಿದೆ. ಈಗ 80ರ ಕಥೆಗೆ ಬಂದಿದ್ದೇನೆ. 2023 ಹಿಟ್ ಕಾಟೇರ ಸಿನಿಮಾ. 2024ರ ಹಿಟ್ ನಿಮ್ಮದಾಗಲಿ ಎಂದು ವಿನೋದ್ ಪ್ರಭಾಕರ್ ಚಿತ್ರಕ್ಕೆ ಶುಭ ಹಾರೈಸಿದರು.

    ನಾಯಕ ವಿನೋದ್ ಪ್ರಭಾಕರ್ (Vinod Prabhakar) ಮಾತನಾಡಿ, ನಾವು ಏನ್ ಅನ್ನೋದನ್ನು ಕೆಲಸದಲ್ಲಿ ತೋರಿಸುತ್ತೇವೆ. ಇದು ಬೇರೆ ರೀತಿಯ ಜಾನರ್ ಸಿನಿಮಾ. ಬಹಳಷ್ಟು ಜನ ಟಚ್ ಮಾಡಲು ಆಗದ ಕಥೆ. ನನ್ನ ಗೆಟಪ್ ನಿಮಗೆ ಇಷ್ಟ ಆಗಿದೆ ಅಂದುಕೊಳ್ಳುತ್ತೇನೆ. ಬೆಸ್ಟ್ ಲುಕ್ ಮಾದೇವ ಅಂತಾ ನನಗೆ ಅನಿಸುತ್ತದೆ. ನಿರ್ಮಾಪಕ ಕೇಶವಣ್ಣ ಬಹಳಷ್ಟು ಕಷ್ಟ ಎದುರಿಸಿ ಸಿನಿಮಾ ಮಾಡಿದ್ದೀರಾ? ನಿಮಗೆ ಒಳ್ಳೆಯದಾಗಲಿ. ಸಿನಿಮಾ ಬಗ್ಗೆ ಮಾತಾನಾಡುವುದು ತುಂಬಾ ಇದೆ. ಟ್ರೈಲರ್ ಇವೆಂಟ್‌ನಲ್ಲಿ ಮಾತನಾಡುತ್ತೇನೆ ಎಂದರು.

    ನಾಯಕಿ ಸೋನಲ್ (Sonal Monteiro) ಮಾತನಾಡಿ, ರಾಬರ್ಟ್ (Robert) ಆದ್ಮೇಲೆ ನನಗೆ ವಿನೋದ್‌ಗೆ ಜೋಡಿಯಾಗಿ ನಟಿಸಲು ತುಂಬಾ ಸಿನಿಮಾಗಳು ಬಂದವು. ಆದರೆ ಯಾವುದು ಸೆಟ್ ಆಗಲಿಲ್ಲ. ಮಾದೇವ ಸಿನಿಮಾ ವಿನೋದ್‌ಗೆ ಬಂದಿದ್ದು, ಅವರು ನನ್ನ ಕಾಸ್ಟ್ ಮಾಡಿದರೆ ಚೆನ್ನಾಗಿ ಇರುತ್ತದೆ ಎಂದಾಗ ನನ್ನ ಜರ್ನಿ ಶುರುವಾಯ್ತು. ಹಳ್ಳಿ ಹುಡುಗಿ ಪಾತ್ರ ನನ್ನದು. ನಾನು ತುಂಬಾ ಎಂಜಾಯ್ ಮಾಡಿ ನನ್ನ ಪಾತ್ರ ಮಾಡಿದ್ದೇನೆ ಎಂದು ತಿಳಿಸಿದರು.

    ನಿರ್ದೇಶಕ ನವೀನ್ ರೆಡ್ಡಿ ಮಾತನಾಡಿ, ಶೃತಿ ಮೇಡಂ ಪಾತ್ರ ಚಾಲೆಂಜಿಂಗ್ ಆಗಿದೆ. ಇಡೀ ಸಿನಿಮಾವನ್ನು ವಿನೋದ್ ಸರ್ ಭುಜದ ಮೇಲೆ ಹಾಕಿ ತೆಗೆದುಕೊಂಡು ಹೋಗುತ್ತಾರೆ. ಅಚ್ಯುತ್ ಸರ್ ಗೆಸ್ಟ್ ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ಕಿಟ್ಟಿ ಸರ್ ನಟಿಸಿದ್ದಾರೆ. ಇಡೀ ತಂಡದ ಶ್ರಮ ಇದು ಎಂದರು. ಇದನ್ನೂ ಓದಿ:ಹೊಸ ಪಕ್ಷ ಕಟ್ಟಲು ಹೊರಟ ದಳಪತಿ ಖ್ಯಾತ ನಟ ವಿಜಯ್

    ‘ಮಾದೇವ’ ಟೀಸರ್ ಮಾಸ್ ಅಂಶಗಳಿಂದ ಕೂಡಿದೆ. ವಿನೋದ್ ಪ್ರಭಾಕರ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಕಂಡಿರದಂತಹ ಗೆಟಪ್‌ನಲ್ಲಿ ಮರಿ ಟೈಗರ್ ಮಿಂಚಿದ್ದಾರೆ. ಖಳನಾಯಕನಾಗಿ ಶ್ರೀನಗರ ಕಿಟ್ಟಿ, ಶ್ರುತಿ ಮತ್ತು ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ರಾಬರ್ಟ್’ ಸಿನಿಮಾದಲ್ಲಿ ರಾಘವ್ ಮತ್ತು ತನು ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದ್ದ ವಿನೋದ್ ಪ್ರಭಾಕರ್ ಮತ್ತು ಸೋನಲ್ ಮೊಂಥೆರೋ ಮಾದೇವ’ ಚಿತ್ರದಲ್ಲೂ ಜೋಡಿಯಾಗಿ ಅಭಿನಯಿಸಿದ್ದಾರೆ.

    ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ ಈ ಸಿನಿಮಾದ ಕಥೆಯು 1965, 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯಲಿದೆ. ಕನಕಪುರ, ಚನ್ನಪಟ್ಟಣ, ಶಿವಮೊಗ್ಗ, ರಾಮೋಜಿ ಫಿಲ್ಮಂಸಿಟಿ, ಹೆಸರಘಟ್ಟ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಾಹುಬಲಿ, ಆರ್‌ಆರ್‌ಆರ್ ಸಿನಿಮಾಗಳ ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ತೋಟ ‘ಮಾದೇವ’ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ರಾಧಾಕೃಷ್ಣ ಬ್ಯಾನರ್ ನಡಿ ಆರ್ ಆರ್ ಕೇಶವ ದೇವಸಂದ್ರ ಚಿತ್ರಕ್ಕೆ ಹಣ ಹಾಕಿದ್ದಾರೆ. ಮಾರ್ಚ್ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.