Tag: ಮಾದರಿ

  • ದೇಶದ ಹುಡುಗಿಯರು ಉರ್ಫಿ ಜಾವೇದ್ ನೋಡಿ ಕಲಿಯಿರಿ : ಯೋ ಯೋ ಹನಿ ಸಿಂಗ್

    ದೇಶದ ಹುಡುಗಿಯರು ಉರ್ಫಿ ಜಾವೇದ್ ನೋಡಿ ಕಲಿಯಿರಿ : ಯೋ ಯೋ ಹನಿ ಸಿಂಗ್

    ನ್ನ ವಿಚಿತ್ರ ಕಾಸ್ಟ್ಯೂಮ್ ಮೂಲಕ ಬಾಲಿವುಡ್ ಸಿನಿ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಉರ್ಫಿ ಜಾವೇದ್ ಮೇಲೆ ಉರಿದುಕೊಂಡವರೇ ಹೆಚ್ಚು. ಅವಳು ಧರಿಸುವ ಅರೆಬರೆ ಬಟ್ಟೆಯ ಬಗ್ಗೆ ಸಾಕಷ್ಟು ದೂರುಗಳು ಇವೆ. ಈ ವಿಚಾರವಾಗಿ ಅವಳು ಪೊಲೀಸ್ ಸ್ಟೇಶನ್ ಮೆಟ್ಟಿಲೂ ಹತ್ತಿದ್ದಾರೆ. ದುಬೈನಲ್ಲಿ ಪೊಲೀಸ್ ವಿಚಾರಣೆಗೂ ಒಳಗಾಗಿದ್ದಾರೆ. ಸದಾ ವಿವಾದವನ್ನೇ ಬೆನ್ನತ್ತಿ ಹೋಗುವ ಉರ್ಫಿ ಬಗ್ಗೆ ಮೊದಲ ಬಾರಿಗೆ ವ್ಯಕ್ತಿಯೊಬ್ಬರು ಹೆಮ್ಮೆಯಿಂದ ಮಾತನಾಡಿದ್ದಾರೆ. ಅವರನ್ನು ಮಾದರಿಯಾಗಿ ತಗೆದುಕೊಳ್ಳುವಂತೆ ಕರೆಕೊಟ್ಟಿದ್ದಾರೆ.

    ಬಾಲಿವುಡ್ ಸಿಂಗರ್ ಯೋ ಯೋ ಹನಿ ಸಿಂಗ್, ಸದ್ಯ ತಮ್ಮ ಆಲ್ಬಂವೊಂದರ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಉರ್ಫಿ ಜಾವೇದ್ ಬಗ್ಗೆ ಹಾಡಿಹೊಗಳಿದ್ದಾರೆ. ಉರ್ಫಿ ತನ್ನಿಷ್ಟದಂತೆ ಬದುಕುತ್ತಿರುವ ನಟಿ. ತುಂಬಾ ಧೈರ್ಯವಂತೆ. ಯಾರಿಗೂ ಹೆದರದೇ ತನ್ನ ಬದುಕನ್ನು ಕಟ್ಟಿಕೊಂಡಿದ್ದಾಳೆ. ಹಾಗಾಗಿ ದೇಶದ ಹುಡುಗಿಯರು ಅವಳನ್ನು ನೋಡಿ ಕಲಿತುಕೊಳ್ಳಬೇಕು’ ಎಂದು ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: ನೋರಾ ಫತೇಹಿ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಪಾಕಿಸ್ತಾನ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ

    ಹನಿ ಸಿಂಗ್ ಇಂಥದ್ದೊಂದು ಮಾತು ಹೇಳುತ್ತಿದ್ದಂತೆಯೇ ಬಾಲಿವುಡ್ ನ ಅನೇಕರು ಗರಂ ಆಗಿದ್ದಾರೆ. ದೇಶದ ಹೆಣ್ಣು ಮಕ್ಕಳು ಯಾರನ್ನು ಮಾದರಿಯಾಗಿ ತಗೆದುಕೊಳ್ಳಬೇಕು ಎಂದು ಗೊತ್ತಿದೆ. ಹನಿ ಸಿಂಗ್ ಬೇಕಾದರೆ ಉರ್ಫಿಯನ್ನು ಮಾದರಿಯಾಗಿ ತಗೆದುಕೊಳ್ಳಲಿ ಎನ್ನುವ ಮಾತುಗಳನ್ನು ಆಡಿದ್ದಾರೆ. ಉರ್ಫಿ ಒಬ್ಬ ಮಾನಸಿಕ ಖಾಯಿಲೆ ಇರುವ ಹುಡುಗಿ. ಆಕೆ ಬದುಕು ಯಾವತ್ತಿಗೂ ಮಾದರಿ ಆಗುವಂಥದ್ದು ಅಲ್ಲ ಎಂದಿದ್ದಾರೆ.

    ಅಶ್ಲೀಲ ರೀತಿಯ ಬಟ್ಟೆಗಳನ್ನು ಉರ್ಫಿ ಹಾಕುತ್ತಾರೆ ಎನ್ನುವ ಕಾರಣಕ್ಕಾಗಿ ಮುಂಬೈ ಸೇರಿದಂತೆ ಹಲವು ಕಡೆ ದೂರುಗಳು ದಾಖಲಾಗಿವೆ. ಈ ಕುರಿತು ಉರ್ಫಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೇಲೆ ಎಷ್ಟೇ ದೂರುಗಳು ಬಂದರೂ, ನನ್ನನ್ನು ಬದಲಿಸಲು ಆಗುವುದಿಲ್ಲ. ನಾನು ಹೇಗಿರಬೇಕೋ ಹಾಗೆಯೇ ಇರುವೆ. ಅದು ನನ್ನ ಸ್ವಾತಂತ್ರ್ಯ. ಯಾವ ದೂರಿಗೂ ನಾನು ಹೆದರುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನನಗೆ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿಯೇ ಮಾದರಿ- ಕೈ ಶಾಸಕ ಚಿಂಚೋರೆ

    ನನಗೆ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿಯೇ ಮಾದರಿ- ಕೈ ಶಾಸಕ ಚಿಂಚೋರೆ

    ಧಾರವಾಡ: ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆಗೆ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾದರಿಯಂತೆ. ಹೀಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

    ಹೌದು, ಧಾರವಾಡದ ಕಾಂಗ್ರೆಸ್ ಮುಖಂಡ ಚಿಂಚೋರೆಗೆ ಬಾಲಚಂದ್ರ ಜಾರಕಿಹೊಳಿ ಮಾದರಿಯಂತೆ. ಲಾಕ್‍ಡೌನ್ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೋಳಿ ಅವರು ಕೆಎಂಎಫ್‍ನಿಂದ ಉಚಿತ ಹಾಲನ್ನು ಕೊಟ್ಟಿದ್ದರು. ಇದನ್ನು ನೋಡಿದ ದೀಪಕ್ ಚೊಂಚೋರೆ ಕೂಡ ಬಡ ಜನರಿಗೆ ದಿನಸಿ ಕಿಟ್ ಕೊಟ್ಟಿದ್ದಾರೆ.

    ಸದ್ಯ ಲಾಕ್‍ಡೌನ್ ಆರಂಭವಾದಾಗಿನಿಂದ ಈ ಕಾಂಗ್ರೆಸ್ ಮುಖಂಡ 20 ಸಾವಿರ ದಿನಸಿ ಕಿಟ್‍ನ್ನು ಕೊಟ್ಟಿದ್ದಾರೆ. ರಂಜಾನ್ ಹಬ್ಬ ಇರುವ ಕಾರಣ, ಶಾವಿಗೆ ಕೂಡ ಕಿಟ್‍ನಲ್ಲಿ ಹಾಕಿ ಕೊಡುತಿದ್ದಾರೆ. ಬಾಲಚಂದ್ರ ಜಾರಕಿಹೊಳಿ ನನ್ನ ಗೆಳೆಯ, ಅವರು ಮಾಡಿದಂತೆಯೇ ನಾನು ಕೂಡ ಬಡವರಿಗೆ ಸಹಾಯ ಮಾಡುತ್ತಿದ್ದೇನೆ ಎಂದು ದೀಪಕ್ ಚಿಂಚೋರೆ ಹೇಳಿದ್ದಾರೆ.

  • ಶೌಚಾಲಯ ಸ್ವಚ್ಛಗೊಳಿಸಿ ನೌಕರರಿಗೆ ಮಾದರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ

    ಶೌಚಾಲಯ ಸ್ವಚ್ಛಗೊಳಿಸಿ ನೌಕರರಿಗೆ ಮಾದರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ

    ಕೋಲಾರ: ತನ್ನ ಕಚೇರಿಯ ಶೌಚಾಲಯವನ್ನು ತಾವೇ ಸ್ವಚ್ಛಗೊಳಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಡಿ-ಗ್ರೂಪ್ ನೌಕರರಿಗೆ ಸ್ವಚ್ಛತೆಯ ಪಾಠ ಹೇಳಿಕೊಟ್ಟಿದ್ದಾರೆ.

    ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸ್ವತಃ ತಮ್ಮ ಕಚೇರಿಯ ಶೌಚಾಲಯವನ್ನು ಇಂದು ಶುದ್ಧ ಮಾಡುವ ಮೂಲಕ ಸಾವಿರಾರು ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಕಚೇರಿಯ ಶೌಚಾಲಯವನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.

    ಶಿಕ್ಷಕರು ಹಾಗೂ ಸರ್ಕಾರಿ ಇಲಾಖೆಗಳಲ್ಲಿನ ಅಧಿಕಾರಿಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸಿಕೊಳ್ಳುವುದರಿಂದ ಸ್ವಚ್ಛ ಭಾರತ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ವಚ್ಛ ಭಾರತ ಕಲ್ಪನೆ ಪ್ರಧಾನಿ ಮೋದಿ ಅವರಿಂದ ಆರಂಭವಾಗಿದ್ದು, ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

    ಒಂದು ವರ್ಷದ ಹಿಂದೆ ಸರ್ಕಾರಿ ಶಾಲೆಯ ಶೌಚಾಲಯವನ್ನು ಸ್ವಚ್ಛ ಮಾಡುವ ಮೂಲಕ ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಮಾದರಿಯಾಗಿದ್ದರು. ಅದರಂತೆ ಕೋಲಾರ ಬಿಇಓ ಶೌಚಾಲಯ ಸ್ವಚ್ಛ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಬಿಇಓ ನಾಗರಾಜ್‍ಗೌಡ ಅವರ ಶೌಚಾಲಯ ಸ್ವಚ್ಛ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ತಿರುಪತಿ ಮಾದರಿಯಲ್ಲಿ ರಾಮನಗರದಲ್ಲಿ ತಲೆ ಎತ್ತಲಿದೆ ತಿಮ್ಮಪ್ಪನ ದೇವಾಲಯ

    ತಿರುಪತಿ ಮಾದರಿಯಲ್ಲಿ ರಾಮನಗರದಲ್ಲಿ ತಲೆ ಎತ್ತಲಿದೆ ತಿಮ್ಮಪ್ಪನ ದೇವಾಲಯ

    ಬೆಂಗಳೂರು: ವಿಶ್ವ ಪ್ರಸಿದ್ಧ ತಿರುಪತಿ ದೇವಸ್ಥಾನ ಮಾದರಿಯಲ್ಲಿ ರಾಜ್ಯದಲ್ಲೂ ತಿರುಪತಿ ತಿಮ್ಮಪ್ಪನ ದೇವಾಲಯ ತಲೆ ಎತ್ತಲಿದೆ.

    ಆಂಧ್ರಪ್ರದೇಶದ ತಿರುಪತಿಗೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಕೆಲ ಕ್ಷಣಗಳಷ್ಟೇ ದೇವರ ದರ್ಶನ ಪಡೆಯುವ ಅವಕಾಶ ಸಿಗುತ್ತದೆ. ಇದರಿಂದ ಗಂಟೆಗಂಟಲೇ ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುವ ಭಕ್ತರು ನಿರಾಸೆಯನ್ನ ಅನುಭವಿಸುತ್ತಾರೆ. ಇಂತಹ ಭಕ್ತರಿಗೆ ರಾಜ್ಯದಲ್ಲೇ ತಿಮ್ಮಪ್ಪನ ದರ್ಶನ ಪಡೆಯುವ ಅವಕಾಶ ಲಭಿಸಿದೆ.

    ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಮುಜರಾಯಿ ಇಲಾಖೆಯ ಸಭೆಯಲ್ಲಿ ರಾಮನಗರದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

    ರಾಮನಗರದಲ್ಲಿ ದೇವಾಲಯ ನಿರ್ಮಾಣಕ್ಕೆ ಬೇಕಾದ ಅಗತ್ಯವಾದ 15 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮಾದರಿಯಲ್ಲೇ ರಾಜ್ಯದಲ್ಲೂ ದೇವಸ್ಥಾನ ನಿರ್ಮಾಣವಾಗಲಿದೆ. ದೇವಸ್ಥಾನ ನಿರ್ಮಾಣ ಕಾರ್ಯವನ್ನ ಸಂಪೂರ್ಣವಾಗಿ ಟಿಟಿಡಿಯೇ ನೋಡಿಕೊಳ್ಳಲಿದ್ದು, ಅದರ ನಿರ್ವಹಣೆ ಕೂಡಾ ಟಿಟಿಡಿಯೇ ಮಾಡಲಿದೆ.

    ಉಳಿದಂತೆ ಇಂದು ನಡೆದ ಸಭೆಯಲ್ಲಿ ಸಚಿವ ರೇವಣ್ಣ, ಮುಜರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯಕ್ ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

  • ಕಲ್ಲಿನಲ್ಲೇ ಕೆತ್ತನೆಯಾಯ್ತು ಮತ್ತೊಂದು ಹಂಪಿಯ ಕಲ್ಲಿನ ರಥ!

    ಕಲ್ಲಿನಲ್ಲೇ ಕೆತ್ತನೆಯಾಯ್ತು ಮತ್ತೊಂದು ಹಂಪಿಯ ಕಲ್ಲಿನ ರಥ!

    ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥದ ಮಾದರಿಯ ಮತ್ತೊಂದು ಕಲ್ಲಿನ ರಥದ ಕಲಾಕೃತಿ ಮಾಡುವುದು ಕಷ್ಟಸಾಧ್ಯ. ಆದರೆ ಅಂತಹ ಮಾದರಿ ಕಲಾಕೃತಿಯನ್ನು ಬಳ್ಳಾರಿಯ ಶಿಲ್ಪಕಲಾ ಶಿಬಿರದಲ್ಲಿ ಕೆತ್ತನೆ ಮಾಡಲಾಗಿದೆ.

    ಹೌದು, ಜಿಲ್ಲೆಯ ಶಿಲ್ಪಕಲಾ ಅಕಾಡೆಮಿ ಹಾಗೂ ರಂಗಭಾರತಿ ವತಿಯಿಂದ ಹೂವಿನಹಡಗಲಿಯಲ್ಲಿ ನಡೆದ ಶಿಲ್ಪ ಕಲಾ ಶಿಬಿರದಲ್ಲಿ ಕೆತ್ತನೆ ಮಾಡಲಾಗಿದೆ. ದೇಶ ವಿದೇಶದಲ್ಲಿನ ಹಲವಾರು ಅಪರೂಪದ ಶಿಲ್ಪಕಲಾ ಕೃತಿಗಳ ಮಾದರಿ ಕಲಾಕೃತಿಗಳ ಕೆತ್ತನೆ ಮಾಡಿರುವುದು ಇದೀಗ ಎಲ್ಲರ ಕಣ್ಮನ ಸೆಳೆಯುತ್ತಿದೆ.

    13 ದಿನಗಳ ಕಾಲ ಹಗಲಿರುಳು ಎನ್ನದೇ ಕೆತ್ತನೆ ಮಾಡಿರುವ ಕಲಾಕೃತಿಗಳು ಇದೀಗ ಎಲ್ಲರ ಕಣ್ಮನ ಸೆಳೆಯುತ್ತಿದೆ. ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳು, ಬದಾಮಿ ಚಾಲುಕ್ಯರ ಕಾಲದ ಕಲ್ಲಿನ ಕಲಾಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ.

    ಹಾಸನ, ಉತ್ತರ ಕನ್ನಡ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗದ ಶಿಲ್ಪಕಲಾವಿದರು 13 ದಿನಗಳ ಶಿಬಿರದಲ್ಲಿ ಕೃಷ್ಣಶಿಲೆಯ ಕಲ್ಲಿನಲ್ಲಿ ಹಂಪಿಯ ಕಲ್ಲಿನ ರಥ, ಬದಾಮಿ ಚಾಲುಕ್ಯರ ಕಲಾಕೃತಿಗಳು. ಕಾಂಬೋಡಿಯಾದ ಬುದ್ದ, ಅಫ್ಘಾನಿಸ್ತಾನದ ಬುದ್ದ, ಪಾಸ್ಟಿಂಗ್ ಬುದ್ದ, ಗಾಂಧಾರ ಶೈಲಿಯ ಬುದ್ದ, ಜ್ಞಾನದ ಬೆಳವಣಿಗೆಗೆ ಪುಸ್ತಕಗಳೆ ಆಧಾರ ಎನ್ನುವಂತಹ ಸಮಕಾಲಿನ ಶಿಲ್ಪ ಕಲಾಕೃತಿಗಳನ್ನು ಕೆತ್ತನೆ ಮಾಡಿದ್ದಾರೆ. ಅಲ್ಲದೇ ಆಮೆ, ವಿಶ್ವ, ಪುಸ್ತಕ, ಮರ ಹೊಂದಿರುವ ಸಮಕಾಲಿನ ಶಿಲ್ಪಗಳ ಕಲಾಕೃತಿಗಳು ಸೇರಿದಂತೆ ವಿವಿಧ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

    ಇತಂಹ ಶಿಬಿರವನ್ನು ಆಯೋಜನೆ ಮಾಡಿದ್ದು ನಮಗೆ ಹೆಮ್ಮೆಯ ಸಂಗತಿಯಾಗಿದೆ. 13 ದಿನಗಳ ಅಲ್ಪ ಅವಧಿಯಲ್ಲೇ ಅಪರೂಪದ ಶಿಲ್ಪ ಕಲಾಕೃತಿಗಳನ್ನು ರಚಿಸಿರುವುದು ನಿಜಕ್ಕೂ ಅದ್ಭುತ ಸಾಧನೆಯಾಗಿದೆ. ಇಂತಹ ಇನ್ನಷ್ಟೂ ಶಿಲ್ಪಕಲಾ ಶಿಬಿರಗಳು ನಡೆದಲ್ಲಿ ಮತ್ತಷ್ಟೂ ಅಪರೂಪದ ಶಿಲ್ಲಕಲಾಕೃತಿಗಳು ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ ಎಂದು ಶಿಬಿರದ ಆಯೋಜಕರು ಹರ್ಷ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಿನಿಮಾಗಾಗಿ ಕನ್ನಡ ಕಲಿತು ಒಂದೇ ಟೇಕ್‍ನಲ್ಲಿ ಅಭಿನಯಿಸುತ್ತಿದ್ದ ಶ್ರೀದೇವಿ ನೋಡಿ ಅಚ್ಚರಿಯಾಗ್ತಿತ್ತು- ನಟ ಶ್ರೀನಾಥ್

    ಸಿನಿಮಾಗಾಗಿ ಕನ್ನಡ ಕಲಿತು ಒಂದೇ ಟೇಕ್‍ನಲ್ಲಿ ಅಭಿನಯಿಸುತ್ತಿದ್ದ ಶ್ರೀದೇವಿ ನೋಡಿ ಅಚ್ಚರಿಯಾಗ್ತಿತ್ತು- ನಟ ಶ್ರೀನಾಥ್

    ಬೆಂಗಳೂರು: 80ರ ದಶಕದಲ್ಲಿ ತೆರೆ ಮೇಲೆ ಮಿಂಚಿದ್ದ ಬಹುಭಾಷಾ ನಟಿ ಶ್ರೀದೇವಿ ಈಗ ಬರಿ ನೆನಪು ಮಾತ್ರ. ತಮ್ಮ 52ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಮೃತರಾಗಿದ್ದಾರೆ. ಶ್ರೀದೇವಿ ನಿಧನಕ್ಕೆ ಕನ್ನಡದ ಹಿರಿಯ ನಟ ಶ್ರೀನಾಥ್ ಕಂಬನಿ ಮಿಡಿದಿದ್ದಾರೆ.

    ಹಿರಿಯ ನಟ ಶ್ರೀನಾಥ್‍ರೊಂದಿಗೆ ಶ್ರೀದೇವಿ ತಮ್ಮ 13ನೇ ವಯಸ್ಸಿನಲ್ಲಿ “ಹೆಣ್ಣು ಸಂಸಾರದ ಕಣ್ಣು” ಸಿನಿಮಾದಲ್ಲಿ ಅವರ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾವನ್ನು ಶ್ರೀನಾಥ್ ನೆನೆದು, ಅಂದು ಹೇಗೆ ನನಗೆ ಶ್ರೀದೇವಿ ಗೌರವದಿಂದ ಮಾತನಾಡಿಸುತ್ತಿದ್ದರೋ ಹಾಗೆ ಇಂದು ಸಹ ಮಾತನಾಡಿಸುತ್ತಿದ್ದರು. ಶ್ರೀದೇವಿ ಒಳ್ಳೆಯ ಮನಸ್ಸಿನ ಹುಡುಗಿ ಎಂದು ಅವರನ್ನು ನೆನೆಪಿಸಿಕೊಂಡರು.

    1975ರಲ್ಲಿ ನನ್ನ ಜೊತೆ ಶ್ರೀದೇವಿ ತಮ್ಮ 13ನೇ ವಯಸ್ಸಿನಲ್ಲಿ “ಹೆಣ್ಣು ಸಂಸಾರದ ಕಣ್ಣು” ಸಿನಿಮಾಗಾಗಿ ಕನ್ನಡ ಕಲಿತು ಒಂದೇ ಟೇಕ್‍ನಲ್ಲಿ ಅಭಿನಯಿಸುತ್ತಿದ್ದ ಮಗು ಶ್ರೀದೇವಿಯನ್ನು ನೋಡಿ ನನಗೆ ಅಚ್ಚರಿಯಾಗುತ್ತಿತ್ತು ಎಂದು ಶ್ರೀದೇವಿ ಅವರ ಸಾಮರ್ಥ್ಯವನ್ನು ಕೊಂಡಾಡಿದರು.

    ಈ ಸಿನಿಮಾ ಮಾಡುವಾಗ ಅವರ ತಾಯಿ ರಾಜೇಶ್ವರಿಯವರು ಬಂದಿದ್ದರು. ರಾಜೇಶ್ವರಿಯವರು ನನ್ನ ಹೆಂಡತಿ ಗೀತಾಗೆ ಸ್ನೇಹಿತರಾಗಿದ್ದರು. ಇವರು ಏನೇ ಖರೀದಿಸಬೇಕಾದರೂ ಗೀತಾನೇ ಕರೆದುಕೊಂಡು ಹೋಗುತ್ತಿದ್ದಳು. ಅವರ ಅಮ್ಮ ಸಹ ನಮ್ಮೊಡನೆ ಬಂದರೆ ಯಾವುದೇ ಭಯವಿಲ್ಲದೇ ಕಳುಹಿಸಿಕೊಡುತ್ತಿದ್ದರೆಂದು ಸ್ಮರಿಸಿದರು.

    ನಾನು ಶ್ರೀದೇವಿ ಭೇಟಿಯಾದಾಗಲೆಲ್ಲ ಹಳೆಯ ದಿನಗಳನ್ನು ನೆನೆದು ಖುಷಿಪಡುತ್ತಿದ್ದೆವು. ಅವರನ್ನು ಕಳೆದ ವರ್ಷ ಭೇಟಿ ಮಾಡಿದಾಗ ಸಹ ತುಂಬಾ ಆತ್ಮೀಯವಾಗಿ ಮಾತನಾಡಿಸಿದ್ದರು. ಅವರೆಂದೂ ನಾನು ದೊಡ್ಡ ನಟಿಯೆಂದು ತೋರಿಸಿಕೊಂಡಿಲ್ಲ. ಅದೇ ನನಗೆ ಅವರಲ್ಲಿ ಇಷ್ಟವಾದ ಗುಣವೆಂದು ಶ್ರೀದೇವಿಯವರ ಹೃದಯವಂತಿಕೆಯನ್ನು ಹೊಗಳಿದರು.

    ಶ್ರೀದೇವಿ ನಟನೆಯಲ್ಲಿ ಹತ್ತಿದ ಶಿಖರ, ಅವರಿಗೆ ನಟನೆಯ ಮೇಲಿದ್ದ ಗೌರವ ಈಗಿನ ಕಾಲದ ನಾಯಕಿಯರಿಗೆ ಮಾದರಿಯಾಗಿದೆ. ಅವರು ಅಭಿನಯಿಸಿದ ಭಾಷೆಯಲ್ಲಿ ಪರಿಚಯವಾದ ಎಲ್ಲ ಸ್ನೇಹಿತರನ್ನು ಅವರು ಉಳಿಸಿಕೊಂಡಿದ್ದಾರೆ. ಇದೇ ಅವರ ಹೃದಯವಂತಿಕೆಗೆ ಉದಾಹರಣೆ ಎಂದು ಹೇಳಿದರು.

    ಅನಾರೋಗ್ಯ ಇದ್ದರೆ ನಮಗೆ ತಿಳಿಯುತ್ತಿತ್ತು. ಆದರೆ ಶ್ರೀದೇವಿಗೆ ಆರೋಗ್ಯ ಚೆನ್ನಾಗಿ ಇದ್ದಾಗಲೇ ಮೃತಪಟ್ಟಿರುವುದು ನನಗೂ ಸಹ ಅಘಾತ ತಂದಿದೆ ಎಂದು ಹೇಳಿ ಭಾವುಕರಾದರು.

    https://www.youtube.com/watch?v=l95rpcvpl_E