Tag: ಮಾದಕ ದ್ರವ್ಯ

  • ಪೇನ್ ಕಿಲ್ಲರ್ ಮಾತ್ರೆಗಳಿಂದ ಆತಂಕ, ನಿಯಂತ್ರಣಕ್ಕೆ ಕ್ರಮ: ಪರಮೇಶ್ವರ್

    ಪೇನ್ ಕಿಲ್ಲರ್ ಮಾತ್ರೆಗಳಿಂದ ಆತಂಕ, ನಿಯಂತ್ರಣಕ್ಕೆ ಕ್ರಮ: ಪರಮೇಶ್ವರ್

    – ರಾಜ್ಯದಲ್ಲಿ ಡ್ರಗ್ಸ್ ದಂಧೆ ಹತೋಟಿಗೆ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಡ್ರಗ್ಸ್ ದಂಧೆಯನ್ನು (Drug Trafficking) ತೀವ್ರ ಹತೋಟಿಗೆ ತಂದಿದ್ದೇವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G Parameshwar) ಹೇಳಿದರು.

    ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯನ್ನು ಹತ್ತಿಕ್ಕಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಈಗ ಮೆಡಿಕಲ್ ಶಾಪ್‌ಗಳಲ್ಲಿ ಸಿಗುತ್ತಿರುವ ನೋವು ನಿವಾರಕ ಮಾತ್ರೆಗಳಿಂದ (Pain Killer Tablets) ನಮಗೆ ಆತಂಕವಿದೆ. ಪೇನ್ ಕಿಲ್ಲರ್ ಮಾತ್ರೆಗಳನ್ನು ಬೇರೆಬೇರೆ ಕಂಪನಿಗಳು ತಯಾರಿಸುತ್ತಿವೆ. ಅದು ಈಗ ಸುಲಭವಾಗಿ ಕೈಗೆ ಸಿಗುತ್ತಿವೆ. ಯಾವ ರೀತಿ ನಿಯಂತ್ರಿಸಬೇಕು ಎಂಬುದರ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರು ಸಭೆ ಕರೆದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ ಮಸೂದೆಗೆ ಕ್ಯಾಬಿನೆಟ್‌ ಒಪ್ಪಿಗೆ

    ನೋವು ನಿವಾರಕ ಮಾತ್ರೆಗಳನ್ನು ಮೆಡಿಸಿನ್ ಅಂತ ಮಾರಾಟ ಮಾಡಲಾಗುತ್ತಿದೆ. ವೈದ್ಯರು ಪ್ರಿಸ್‌ಕ್ರೈಬ್ ಮಾಡಿರುವುದನ್ನು ಸುಲಭವಾಗಿ ಪಡೆಯಲಾಗುತ್ತಿದೆ. ಇದಕ್ಕೆ ಕಾನೂನು ಬೇರೆ ಇದೆ. ಈ ಕುರಿತು ಡ್ರಗ್ ಕಂಟ್ರೋಲರ್ಸ್‌ಗಳಿಗೆ ಯಾವ ರೀತಿ ಹೇಳಬೇಕಾಗುತ್ತದೆ ಎಂಬುದರ ಕುರಿತು ಚರ್ಚಿಸಲಾಗುವುದು ಎಂದರು. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ಗೆ ಡಿಸಿಎಂ ಪಟ್ಟ – ಶೀಘ್ರವೇ ಘೋಷಣೆ ಸಾಧ್ಯತೆ

    ರಾಜ್ಯದಲ್ಲಿ ಗಾಂಜಾ ಸೇರಿದಂತೆ ಇನ್ನಿತರ ಮಾದಕ ದ್ರವ್ಯಗಳನ್ನು ನಿಯಂತ್ರಿಸಿದ್ದೇವೆ. ಪ್ರಕರಣಗಳ ಅಂಕಿ-ಅಂಶಗಳನ್ನು ಗಮನಿಸಿದಾಗ ಬಹಳಷ್ಟು ಕಡಿಮೆಯಾಗಿದೆ. ಎಲ್ಲಾ ರೀತಿಯ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಸುಮಾರು ಪ್ರಕರಣಗಳಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕ ಸುರಕ್ಷಿತವಲ್ಲ, ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ: ರವಿಕುಮಾರ್ ಕಿಡಿ

  • ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ನವದೆಹಲಿ: ಮಾದಕ ವಸ್ತು ಖರೀದಿ, ಮಾರಾಟ, ಸೇವೆನೆ ವಿದುದ್ಧ ಕಠಿಣ ಕ್ರಮಕ್ಕೆ ದೇಶಾದ್ಯಂತ ಒತ್ತಾಯ ಹೆಚ್ಚುತ್ತಿರುವ ನಡುವೆಯೇ, ವೈಯಕ್ತಿಕ ಉದ್ದೇಶಕ್ಕಾಗಿ ಸಣ್ಣಪ್ರಮಾಣದ ಡ್ರಗ್ಸ್ ಸೇವಿಸುತ್ತಿರುವ ವ್ಯಕ್ತಿಗಳನ್ನು ಅಪರಾಧದಿಂದ(ಜೈಲು ಶಿಕ್ಷೆಯಿಂದ) ಹೊರಗಡೆ ಇಡುವ ಮಹತ್ವ ಶಿಫಾರಸನ್ನು ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ ಮಾಡಿದೆ. ಈ ಶಿಫಾರಸನ್ನು ಕೇಂದ್ರ ಕಂದಾಯ ಇಲಾಖೆಗೆ ಕಳಿಸಲಾಗಿದ್ದು, ಮಾದಕ ವಸ್ತು ನಿಗ್ರಹ ಕಾಯ್ದೆಎನ್‍ಡಿಪಿಎಸ್( Narcotic Drugs and Psychotropic Substances Act)ತಿದ್ದು ಪಡಿ ಮಾಡಬೇಕು ಎಂದು ತಿಳಿಸಿದೆ.

    ಇದೀಗ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಇದಕ್ಕೂ ಮುನ್ನ ಕನ್ನಡದ ಚಿತ್ರರಂಗದ ಹಲವು ಕಲಾವಿದರು ಕೂಡಾ ಇದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಹೀಗಾಗಿ ಈ ಹೊಸ ಪ್ರಸ್ತಾಪಕ್ಕೆ ಮಹತ್ವ ಬಂದಿದೆ. ಇದನ್ನೂ ಓದಿ:  ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

    ಈಗ ಇರುವ ಎನ್‍ಡಿಪಿಎಸ್(NDPS) ಕಾಯ್ದೆ ಪ್ರಕಾರ ಮಾದಕ ವಸ್ತು ವ್ಯಸನಿಗಳನ್ನು ಅಪರಾಧಿಗಳು ಎಂದೇ ಪರಿಗಣಿಸಲಾಗುತ್ತದೆ. ಆದರೆ ತಾವಾಗೇ ಈ ವ್ಯಸನಿಗಳು ಮನಃಪರಿವರ್ತನೆ ಮಾಡಿಕೊಂಡು ಮರುವಸತಿ ಕೇಂದ್ರಗಳಲ್ಲಿ ತಮ್ಮ ಚಟವನ್ನು ಬಿಟ್ಟರೆ ಅವರಿಗೆ ತನಿಖೆ ಹಾಗೂ ಜೈಲಿನಿಂದ ವಿನಾಯ್ತಿ ದೊರಕುತ್ತದೆ. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ಈಗ ಹೊಸ ಪ್ರಸ್ತಾವದ ಪ್ರಕಾರ, ವೈಯಕ್ತಿಕ ಕಾರಣಗಳಿಗೆ ಸಣ್ಣ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸೆ ಕೊಡಿಸಬೇಕು. ಜೈಲುವಾಸದ ಬಲೆಗೆ ಈ ಆಯ್ಕೆಯುನ್ನು ಅವರಿಗೆ ನೀಡಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ. ಈಗಿನ ಎನ್‍ಡಿಪಿಎಸ್ ಕಾಯ್ದೆಯ 27ನೇ ಪರಿಚ್ಛೇದ ಹೇಳುವಂತೆ ಯಾವುದೇ ಮಾದಕ ವಸ್ತು ಇಟ್ಟುಕೊಂಡವರಿಗೆ 1ವರ್ಷದವರೆಗೆ ಕೈಲು ಶಿಕ್ಷೆ ಹಾಗೂ 20 ಸಾವಿರವರೆಗೆ ದಂಡ ವಿಧಿಸಲಾಗುತ್ತಿದೆ.

  • ವಶಪಡಿಸಿಕೊಂಡ ಡ್ರಗ್ಸ್, ಗಾಂಜಾ ವಿಲೇವಾರಿ ಹೇಗೆ? ನಿಯಮ ಏನು?

    ವಶಪಡಿಸಿಕೊಂಡ ಡ್ರಗ್ಸ್, ಗಾಂಜಾ ವಿಲೇವಾರಿ ಹೇಗೆ? ನಿಯಮ ಏನು?

    ಬೆಂಗಳೂರು: ನಗರ ಪೊಲೀಸರು ಗುರುವಾರ ಕಲಬುರಗಿಯಲ್ಲಿ ಒಂದು ಟನ್‍ಗೂ ಅಧಿಕ ಗಾಂಜಾವನ್ನು ಕುರಿ ಸಾಕುವ ಕೊಟ್ಟಿಗೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಇಷ್ಟು ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದ ಬಳಿಕ ಅದರ ವಿಲೇವಾರಿಯನ್ನು ಹೇಗೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಏಳುವುದು ಸಹಜ ಸಂದರ್ಭದಲ್ಲಿ

    2018ಕ್ಕೂ ಮುನ್ನ ಬೆಂಗಳೂರು ಪೊಲೀಸರು ನ್ಯಾಯಾಲಯದ ಆದೇಶವನ್ನು ಪಡೆದು ಸೀಜ್ ಮಾಡಿದ್ದ ಮಾದಕ ವಸ್ತುಗಳನ್ನು ಆಯಾ ಪೊಲೀಸ್ ಠಾಣೆಗಳ ಬಳಿ ಸುಡುತ್ತಿದ್ದರು. ಆದರೆ ಬೃಹತ್ ಪ್ರಮಾಣದ ಮಾದಕ ದ್ರವ್ಯಗಳನ್ನು ಸುಡುವುದು ನಾರ್ಕೊಟಿಕ್ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‍ಸ್ಟೆನ್ಸಸ್ (ಎನ್‍ಡಿಪಿಎಸ್) ಕಾಯ್ದೆಗೆ ವಿರುದ್ಧವಾಗಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮತ್ತು ಉಪ ಪೊಲೀಸ್ ಆಯುಕ್ತರು ನೋಡಲ್ ಅಧಿಕಾರಿಗಳೊಂದಿಗೆ ಮಾದಕ ವಸ್ತುಗಳನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡುತ್ತಾರೆ. ಇದನ್ನೂ ಓದಿ: ಕೋತಿ ಮೊಸರು ತಿಂದು ಮೇಕೆಯ ಮೂತಿಗೆ ಮೆತ್ತಿದಂತೆ- ಬಿಜೆಪಿಗೆ ಕೈ ಟಾಂಗ್

    ಬೃಹತ್ ಪ್ರಮಾಣದ ಮಾದಕ ವಸ್ತು ಸೀಜ್ ಮಾಡಿದಾಗ ಏನಾಗುತ್ತೆ?
    2015ರಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಕಂದಾಯ ಇಲಾಖೆಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಯಾವುದೇ ಸಂದರ್ಭದಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ತಕ್ಷಣವೇ ವಿಲೇವಾರಿ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಮಾದಕ ವಸ್ತುಗಳ ದುರುಪಯೋಗ ತಪ್ಪಿಸಲು ಕೇಂದ್ರ ಆದೇಶ ನೀಡಿದೆ. ಸಣ್ಣ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಸಂಗ್ರಹಿಸಿಟ್ಟ ಸ್ಥಳದಿಂದಲೇ ಹಲವು ಬಾರಿ ಅವು ನಾಪತ್ತೆಯಾಗಿರುವ ಉದಾಹರಣೆಗಳಿವೆ. ಆದ್ದರಿಂದ ವಶಪಡಿಸಿಕೊಂಡ ವಸ್ತುಗಳ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಅದನ್ನು ನಾಶಪಡಿಸಬೇಕಿದೆ.

    ಸದ್ಯ ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದಿರುವ ಮಾದಕ ದ್ರವ್ಯಗಳನ್ನು ಪೊಲೀಸ್ ಆಯುಕ್ತರ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದೆ. ಈ ರೀತಿ ಸಂಗ್ರಹಿಸಿದ ಎಲ್ಲಾ ವಸ್ತುಗಳ ಫೋಟೋ ಹಾಗೂ ವಿಡಿಯೋ ಮಾಡಿ ಮ್ಯಾಜಿಸ್ಟ್ರೇಟರ್ ಗೆ ಸಲ್ಲಿಸಲಾಗುತ್ತದೆ. ಆ ಬಳಿಕ ಅವರು ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲು ಆದೇಶ ನೀಡುತ್ತಾರೆ. ನ್ಯಾಯಾಲಯದ ಆದೇಶವಿಲ್ಲದೇ ವಶಕ್ಕೆ ಪಡೆದ ಮಾದಕ ವಸ್ತುಗಳನ್ನು ನಾಶಪಡಿಸಲು ಅವಕಾಶವಿಲ್ಲ ಎಂದು 2015ರ ಸರ್ಕಾರದ ಆದೇಶ ತಿಳಿಸುತ್ತದೆ. ಇದನ್ನೂ ಓದಿ: 6 ಕೋಟಿ ಗಾಂಜಾ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಕಾರ್ಯಕರ್ತ

    ವಿಲೇವಾರಿ ಪ್ರಕ್ರಿಯೆ ಹೇಗೆ?
    2015ರ ಆದೇಶದ ಅನ್ವಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾನದಂಡಗಳಿಗೆ ಅನುಗುಣವಾಗಿ ಮಾದಕ ವಸ್ತುಗಳ ವಿಲೇವಾರಿ ಪ್ರತಿಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸಮಿತಿಯನ್ನು ಸ್ಥಾಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಸಮಿತಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ, ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಜಂಟಿ ಆಯುಕ್ತರು ಹಾಗೂ ಪಿಸಿಬಿ ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆಯ ಗುಪ್ತಚರ ನಿರ್ದೇಶನಾಲಯದ ಜಂಟಿ ನಿರ್ದೇಶಕರು ಇರುತ್ತಾರೆ. ಮಾದಕ ವಸ್ತುಗಳು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಹೊಂದಿದ್ದಾರೆ ಮಾತ್ರ ಪೊಲೀಸರಿಗೆ ವಿಲೇವಾರಿ ಮಾಡಲು ಅನುಮತಿ ಇದೆ.

    ಮಾದಕ ವಸ್ತುಗಳಾದ ಹೆರಾಯಿನ್ 5 ಕೆಜಿ, ಚರಸ್ 100 ಕೆಜಿ, ಹಶೀಶ್ ಆಯಿಲ್ 20 ಕೆಜಿ, ಗಾಂಜಾ 1 ಟನ್, ಕೊಕೇನ್ 2 ಕೆಜಿ, ಮ್ಯಾಂಡ್ರಾಕ್ಸ್ 3 ಟನ್, ಪೋಪಿಪಿ ಸ್ಟ್ರಾ 3 ಟನ್ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡರೆ ನಿಯಮಗಳ ಅನ್ವಯ ವಿಲೇವಾರಿ ಮಾಡಬೇಕಾಗುತ್ತದೆ.

    ವಿಲೇವಾರಿ ಹೇಗೆ?
    2018ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯದಿಂದ ಮಾಗಡಿಯಲ್ಲಿ ಕಾರ್ಖಾನೆಯನ್ನು ಗುರುತಿಸಲಾಗಿದ್ದು, ಅಲ್ಲಿ ಮಾದಕ ವಸ್ತುಗಳ ವಿಲೇವಾರಿ ಮಾಡಲಾಗುತ್ತದೆ. ಇಲ್ಲಿ ಸುಮಾರು 1000 ಡಿಗ್ರಿ ತಾಪಮಾನ ಹೊಂದಿರುವ ಬಾಯ್ಲರ್ ಬಳಸಿ ವಿಲೇವಾರಿ ಮಾಡಲಾಗುತ್ತದೆ. ಆದರೆ ಸಿಂಥೆಟಿಕ್ ಡ್ರಗ್ಸ್ ಗಳನ್ನು ಮರುಬಳಕೆ ಮಾಡಲು ಎನ್‍ಡಿಪಿಎಸ್ ಕಾಯ್ದೆಯ ಅನ್ವಯ ಹರಾಜು ಹಾಕಲು ಅವಕಾಶವಿದೆ. ಆದರೆ ಡ್ರಗ್ಸ್ ದುರುಪಯೋಗವಾಗುವ ಭಯದಿಂದ ನಾವು ಹರಾಜು ಹಾಕಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ‘ಕೆಜಿಎಫ್’ ರೌಡಿ ತಂಗಂ ಕುಟುಂಬದವರಿಂದ ಗಾಂಜಾ ದಂಧೆ

    ಉಳಿದಂತೆ ಸಣ್ಣ ಪ್ರಮಾಣದಲ್ಲಿ ಪೊಲೀಸರು ವಶಪಡಿಸಿಕೊಳ್ಳುವ, ಅಂದರೆ 100 ಅಥವಾ 200 ಗ್ರಾಂ ತೂಕದ ಗಾಂಜಾ, ಹಶೀಶ್ ಅಥವಾ ಹ್ಯಾಶ್ ಆಯಿಲ್ ಗಳಂತಹ ಮಾದಕ ವಸ್ತುಗಳನ್ನು ಪೊಲೀಸರೇ ವಿಲೇವಾರಿ ಮಾಡುತ್ತಾರೆ. ಈ ಪ್ರಕ್ರಿಯೆಯನ್ನು ಖಾಲಿ ಸ್ಥಳದಲ್ಲಿ, ಅದು ತಡರಾತ್ರಿಯಲ್ಲಿ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.