ನವದೆಹಲಿ: ಮಾದಕವಸ್ತು ಜಾಲದ ಮೇಲೆ ದೆಹಲಿ ಪೊಲೀಸರು (Delhi Police) ಯಶಸ್ವಿ ಕಾರ್ಯಾಚರಣೆ ನಡೆಸಿ, 63 ಜನರನ್ನು ಬಂಧಿಸಿದ್ದಾರೆ. ಈ ವೇಳೆ ವಿವಿಧ ಮಾದರಿಯ ಡ್ರಗ್ಸ್, 15 ಪಿಸ್ತೂಲ್ ಸೇರಿ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶುಕ್ರವಾರ (ಸೆ.19) ರಾತ್ರಿ ನಡೆದ ಈ ಕಾರ್ಯಾಚರಣೆಯಲ್ಲಿ 40 ವಿಶೇಷ ತಂಡಗಳು ಹಾಗೂ 500 ಪೊಲೀಸ್ ಸಿಬ್ಬಂದಿ ಒಳಗೊಂಡಿದ್ದರು. ದೆಹಲಿ ನಗರದಾದ್ಯಂತ ನಡೆಸಿದ ದಾಳಿಯಲ್ಲಿ 15 ಪಿಸ್ತೂಲ್‌ಗಳು, ಅಧಿಕ ಪ್ರಮಾಣದ ವಿವಿಧ ಮಾದರಿಯ ಡ್ರಗ್ಸ್‌ಗಳಾದ MBMA, ಕೊಕೇನ್, ಹೆರಾಯಿನ್ ಹಾಗೂ ನಗದು ಜಪ್ತಿ ಮಾಡಿದ್ದಾರೆ ಹಾಗೂ ದಾಳಿಯಲ್ಲಿ ಒಟ್ಟು 63 ಜನರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: 18,000 ಬದಲಿಗೆ 8,000 ರೂ. ವೇತನ – ಗುತ್ತಿಗೆದಾರನಿಂದ ಬೇಸತ್ತು ಪೌರಕಾರ್ಮಿಕ ಆತ್ಮಹತ್ಯೆಗೆ ಯತ್ನ
ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಮಾದಕ ವಸ್ತುಗಳ ಕಳ್ಳಸಾಗಣೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ. ನಿಖರವಾದ ಮಾಹಿತಿ ಮೇರೆಗೆ ಆಗ್ನೇಯ ದೆಹಲಿಯಲ್ಲಿರುವ ಜಾಲಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಇಸ್ಲಾಮಾಬಾದ್/ ನವದೆಹಲಿ: ಪಾಕಿಸ್ತಾನದ (Pakistan) ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರ ಪ್ರಮುಖ ಆಪ್ತ ಸಹಾಯಕ ಭಾರತದ ಗಡಿಯುದ್ದಕ್ಕೂ ಡ್ರಗ್ಸ್ (Drugs) ಪೂರೈಕೆಯನ್ನು ಹೆಚ್ಚಿಸಲು ಡ್ರೋನ್‌ಗಳನ್ನು (Drone) ಬಳಸಲಾಗುತ್ತಿರುವುದಾಗಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮಿರ್ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಷರೀಫ್ ಅವರ ರಕ್ಷಣಾ ವಿಶೇಷ ಸಹಾಯಕ ಮಲಿಕ್ ಮೊಹಮ್ಮದ್ ಅಹ್ಮದ್ ಖಾನ್ (Malik Muhammad Ahmad Khan) ಪಾಕಿಸ್ತಾನ-ಭಾರತ ಗಡಿಯ ಬಳಿ ಕಸೂರ್‌ನ ಪ್ರವಾಹ ಪೀಡಿತ ಪ್ರದೇಶದಲ್ಲಿ ಡ್ರೋನ್‌ಗಳನ್ನು ಬಳಸಿ ಹೆರಾಯಿನ್ ಅನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಪ್ರವಾಹ ಸಂತ್ರಸ್ತರ ಪುನರ್ವಸತಿಗಾಗಿ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಲಾಗಿದ್ದು, ಇಲ್ಲದೇ ಹೋದರೆ ಸಂತ್ರಸ್ತರು ಕಳ್ಳಸಾಗಣೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂದು ತಿಳಿಸಿರುವುದಾಗಿ ಹಮೀದ್ ಮಿರ್ ಜುಲೈ 17ರಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮಿರ್, ಮೊಹಮ್ಮದ್ ಅಹ್ಮದ್ ಖಾನ್ ಅವರು ಕಸೂರ್‌ನಿಂದ ಎಂಪಿಎ ಆಗಿದ್ದಾರೆ. ಅವರು ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ಸ್ಥಾಪನೆಗೆ ಬಹಳ ಹತ್ತಿರವಾಗಿದ್ದಾರೆ. ಅವರು ಹಿಂದಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಈಗಿನ ಮಿಲಿಟರಿ ಶ್ರೇಣಿಗೆ ತುಂಬಾ ಹತ್ತಿರವಾಗಿದ್ದರು ಎಂದಿದ್ದಾರೆ. ಇದನ್ನೂ ಓದಿ: ಟೇಕಾಫ್ ಬಳಿಕ ರನ್ ವೇನಲ್ಲಿ ಟಯರ್ ಭಾಗಗಳು ಪತ್ತೆ – ದೆಹಲಿಗೆ ವಿಮಾನ ವಾಪಸ್
ಕಸೂರ್ ಹಳ್ಳಿಗರಿಗೆ ಮೊಬೈಲ್ ಸಿಗ್ನಲ್‌ಗಳು ಸಿಗುವುದಿಲ್ಲ ಎಂದು ಹೇಳುತ್ತಾರೆ. ಅವರು ಡ್ರೋನ್‌ಗಳ ಚಲನೆ, ಪಾಕಿಸ್ತಾನದಿಂದ ಭಾರತಕ್ಕೆ ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ಭಾರತದಿಂದ ಪಾಕಿಸ್ತಾನಕ್ಕೆ ಮದ್ಯದ ಸಾಗಾಟದ ಬಗ್ಗೆ ಮಾತನಾಡುತ್ತಾರೆ. ಗಡಿಯಾಚೆಗಿನ ಡ್ರೋನ್ ಚಲನವಲನಗಳಿಂದಾಗಿ ಇಲ್ಲಿನ ಮೊಬೈಲ್ ಸಿಗ್ನಲ್‌ಗಳು ಭದ್ರತಾ ಏಜೆನ್ಸಿಗಳಿಂದ ಜಾಮ್ ಆಗಿವೆ ಎಂದು ಖಾನ್ ನನಗೆ ತಿಳಿಸಿದ್ದಾರೆ ಎಂದು ಮಿರ್ ಹೇಳಿದ್ದಾರೆ.
ಕಸೂರ್ ಪಂಜಾಬ್‌ನ ಖೇಮ್‌ಕರನ್ ಮತ್ತು ಫಿರೋಜ್‌ಪುರ ಪ್ರದೇಶದ ಗಡಿಗೆ ಅಂಟಿಕೊಂಡಿದೆ. ಪಂಜಾಬ್ ಪೊಲೀಸರ ಅಂಕಿಅಂಶಗಳ ಪ್ರಕಾರ ಫಿರೋಜ್‌ಪುರ ಜಿಲ್ಲೆಯೊಂದರಲ್ಲೇ 2022-2023 ಜುಲೈ ವರೆಗೆ ಎನ್‌ಡಿಪಿಎಸ್ ಕಾಯ್ದೆಯಡಿ 795 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಪಾಕಿಸ್ತಾನದ ಗಡಿಯಲ್ಲಿರುವ ಪಂಜಾಬ್‌ನ ಆ ಜಿಲ್ಲೆಗಳಿಂದ ಹೆಚ್ಚಿನ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದತ್ತಾಂಶವು ತೋರಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಹುಲ್‌ಗೆ ಮೊಣಕಾಲು ನೋವು – ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ
ಬೆಂಗಳೂರು: ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಖ್ಯಾತ ಉದ್ಯಮಿ ಆದಿಕೇಶವಲು ಮಗ ಶ್ರೀನಿವಾಸ್ ಅವರನ್ನು ಬಂಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಎನ್‍ಸಿಬಿ ಇಂದು ನ್ಯಾಯಾಧೀಶರ ಮುಂದೆ ಶ್ರೀನಿವಾಸ್ ಅವರನ್ನು ಹಾಜರುಪಡಿಸಿದೆ. ಈ ಹಿನ್ನೆಲೆಯಲ್ಲಿ ಉದ್ಯಮಿ ಆದಿಕೇಶವಲು ಮಗ ಶ್ರೀನಿವಾಸ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪಾರ್ಟ್‍ಮೆಂಟ್‌ವೊಂದರಲ್ಲಿ ಪಾರ್ಟಿ ಮಾಡುವಾಗ ಶ್ರೀನಿವಾಸ್ ನಾಯ್ಡು ಸಿಕ್ಕಿಬಿದ್ದಿದ್ದರು. ಈ ಸಮಯದಲ್ಲಿ ಮಾದಕ ವಸ್ತು ದೊರಕಿತ್ತು. ನಂತರ ಅಪಾರ್ಟ್‌ಮೆಂಟ್‍ನಿಂದ ಎನ್‍ಸಿಬಿ ಮನೆಗೆ ಕರೆದುಕೊಂಡು ಬಂದಿದ್ದರು. ಸದಾಶಿವನಗರ ಮನೆಯಲ್ಲೂ ಎನ್‍ಸಿಬಿ ದಾಳಿ ನಡೆಸಿತ್ತು. ಎನ್‍ಸಿಬಿ ನಿನ್ನೆ ತಡರಾತ್ರಿ ವಶಕ್ಕೆ ಪಡೆದು ವಿಚಾರಣೆ ಮಾಡಿತ್ತು. ಇದನ್ನೂ ಓದಿ: ಕಾಂಗ್ರೆಸ್ ತೊರೆದ ಕಪಿಲ್ ಸಿಬಲ್- ರಾಜ್ಯಸಭೆಗೆ SPಯಿಂದ ನಾಮಪತ್ರ ಸಲ್ಲಿಕೆ
ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಶೇರ್ ಹೋಲ್ಡರ್ ಆಗಿರುವ ಉದ್ಯಮಿ ಶ್ರೀನಿವಾಸ್ ಅವರ ವಿರುದ್ಧ ಮಾದಕ ವಸ್ತು ವ್ಯಸನದ ಆರೋಪವಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಂಧಿಸಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಸಿಇಟಿ ಪರೀಕ್ಷೆಗೂ ಹಿಜಬ್ ನಿಷೇಧ – ಕೆಇಎ
ಮೆಕ್ಸಿಕೊ: ಗ್ಯಾಂಗ್ ವಾರ್ ದ್ವೇಷಕ್ಕೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಮೆಕ್ಸಿಕೊದಲ್ಲಿ ನಡೆದಿದೆ.
ಮಂಗಳವಾರ ತಡರಾತ್ರಿ ಬೈಕ್‍ನಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ಗ್ವಾನಾಜುವಾಟೊ ರಾಜ್ಯದ ಸಿಲಾವೊ ಪುರಸಭೆಯ ವ್ಯಾಪ್ತಿಯ ಮನೆಗಳ ಬಳಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ಜನರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ಒಂದು ವರ್ಷದ ಮಗು ಮತ್ತು 16 ವರ್ಷದ ಬಾಲಕಿ ಸೇರಿದಂತೆ 8 ಜನರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ 6 ಭಯೋತ್ಪಾದಕರ ಹತ್ಯೆ
ಕಾರಣವೇನು?
ಸಾಂಟಾ ರೋಸಾ ಡಿ ಲಿಮಾ ಮತ್ತು ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್‍ಗಳ ನಡುವಿನ ಸಂಘರ್ಷದಿಂದಾಗಿ ಗ್ವಾನಾಜುವಾಟೊ ಮೆಕ್ಸಿಕೊ ಅತ್ಯಂತ ಹಿಂಸಾತ್ಮಕ ರಾಜ್ಯಗಳಲ್ಲಿ ಒಂದಾಗಿದೆ.
ಈ ಗ್ಯಾಂಗ್‍ಗಳು ಲಾಭದಾಯಕ ಮಾದಕವಸ್ತುಗಳ ಕಳ್ಳಸಾಗಣೆ ವಿಚಾರದಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಆಗಾಗ ಘರ್ಷಣೆಯಾಗುತ್ತಿದೆ. ಇದೇ ರೀತಿ ನವೆಂಬರ್‍ನಲ್ಲಿಯೂ ಎರಡು ದಾಳಿಗಳು ಸಿಲಾವೊದಲ್ಲಿ ನಡೆದಿದ್ದು, ಈ ವೇಳೆ 11 ಜನರು ಹತ್ಯೆಯಾಗಿದ್ದರು. ಇದನ್ನೂ ಓದಿ: ಇಂದು 566 ಪ್ರಕರಣ – ಬೆಂಗಳೂರಿನಲ್ಲಿ 400 ಕೇಸ್, 4 ಸಾವು
2006ರಿಂದ ಸರ್ಕಾರವು ಮಾದಕ ದ್ರವ್ಯ ವಿರೋಧಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ವಿಜಯಪುರ: ಅಕ್ರಮವಾಗಿ ಗಾಂಜಾ ಬೆಳದಿದ್ದ ಜಮೀನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವಿಜಯಪುರ ತಾಲೂಕಿನ ನಾಗಠಾಣಾ ಗ್ರಾಮದ ಜಮೀನಿನಲ್ಲಿ ಘಟನೆ ನಡೆದಿದ್ದು, ಜಮೀನಿನ ಮಾಲೀಕನನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ವಿಜಯಪುರ ಗ್ರಾಮೀಣ ಪೊಲೀಸರು ದಾಳಿ ಮಾಡಿ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಮಂಜುನಾಥ ಪಾಟೀಲ್ ಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯಲಾಗಿತ್ತು.
ಜಮೀನು ಮಾಲೀಕ ಮಂಜುನಾಥ ಪಾಟೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ. 50 ಕೆ.ಜಿ. ಹಸಿ ಗಾಂಜಾ ವಶಕ್ಕೆ ಪಡೆದಿದ್ದು, ಅಂದಾಜು 1 ಲಕ್ಷ ರೂ. ಮೌಲ್ಯದ್ದಾಗಿರಬುಹುದೆಂದು ಅಂದಾಜಿಸಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಮಾದಕವಸ್ತುಗಳನ್ನ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇಜಾಕ್ ನ್ಯೂಜಿಗೂವ್ (40) ಬಂಧಿತ ವಿದೇಶಿ ಪ್ರಜೆ. ಆರೋಪಿಯು ನೈಜೀರಿಯಾ ಮೂಲದವನಾಗಿದ್ದು, ವಿದ್ಯಾರ್ಥಿ ವೀಸಾದ ಅಡಿ ಬೆಂಗಳೂರಿಗೆ ಬಂದಿದ್ದಾನೆ. ಪೊಲೀಸರು ಬಂಧಿತ ಆರೋಪಿಯಿಂದ ಒಂದು ಕೆಜಿ ಗಾಂಜಾ, 19 ಗ್ರಾಂ ಕೊಕೇನ್ ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಎಟಿಎಂ ದೋಚಿ ಐಶಾರಾಮಿ ಜೀವನ ನಡೆಸುತ್ತಿದ್ದ 3 ವಿದೇಶಿಯರು ಸೇರಿ ಐವರು ಅರೆಸ್ಟ್
ವಿಲಾಸಿ ಜೀವನದ ಗೀಳು ಹೊಂದಿದ್ದ ಇಜಾಕ್ ನ್ಯೂಜಿಗೂವ್ ಕಡಿಮೆ ಬೆಲೆಗೆ ಗಾಂಜಾ, ಕೊಕೇನ್ ತಂದು ಪ್ರತಿಷ್ಠಿತ ಕಾಲೇಜು ಹಾಗೂ ಶಾಲೆಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಇಜಾಕ್ ಬೆಂಗಳೂರು ಹೊರವಲಯದ ಬಾಗಲೂರು ಸುತ್ತಮುತ್ತ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಇಜಾಕ್ ನ್ಯೂಜಿಗೂವ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಭರ್ಜರಿ ಕಾರ್ಯಾಚರಣೆ ಮೂಲಕ ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ.
ಇಜಾಕ್ ನ್ಯೂಜಿಗೂವ್ ವಿರುದ್ಧ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅಹಮದಾಬಾದ್: ಗುಜರಾತ್ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಸಿಐಡಿ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
1998ರಲ್ಲಿ ಸಂಜೀವ್ ಭಟ್ ಡಿಸಿಪಿಯಾಗಿದ್ದಾಗ ವಕೀಲರೊಬ್ಬರ ಮೇಲೆ ಮಾದಕವಸ್ತು ಮಾರಾಟದ ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಈ ಪ್ರಕರಣ ಸುಳ್ಳು ಎನ್ನುವ ಆರೋಪ ಸಂಜೀವ್ ಭಟ್ ಮೇಲಿದ್ದು, ಈ ಪ್ರಕರಣದ ವಿಚಾರಣೆ ಗುಜರಾತ್ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸಿಐಡಿ ಪೊಲೀಸರು ಸಂಜೀವ್ ಭಟ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
2002ರ ಗುಜರಾತ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಬಳಿಕ 2015ರಲ್ಲಿ ಸಂಜೀವ್ ಭಟ್ ಅವರನ್ನು ಐಪಿಎಸ್ ಸೇವೆಯಿಂದಲೂ ವಜಾ ಮಾಡಲಾಗಿತ್ತು. ಆರ್‌ಎಸ್‌ಎಸ್, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಟೀಕಿಸಿ ಸಂಜೀವ್ ಭಟ್ ಸುದ್ದಿಯಾಗುತ್ತಿದ್ದರು.
Dismissed IPS officer Sanjiv Bhatt has been detained by CID (Crime) of Gujarat in connection with Palanpur drug planting case of 1998. Probe underway after HC orders. Interrogation of Sanjiv Bhatt & seven others underway. 2 more former police officers also involved.