Tag: ಮಾತೆ ಮಹಾದೇವಿ

  • ಲಿಂಗಾಯತರೆಲ್ಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‍ಗೆ ಮತ ಹಾಕಿ -ಮಾತೆ ಮಹಾದೇವಿ ಕರೆ

    ಲಿಂಗಾಯತರೆಲ್ಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‍ಗೆ ಮತ ಹಾಕಿ -ಮಾತೆ ಮಹಾದೇವಿ ಕರೆ

    ಬೆಂಗಳೂರು: ಚುನಾವಣೆ ಸನೀಹದಲ್ಲಿ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಧರ್ಮ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ. ಆ ಪಕ್ಷಕ್ಕೆ ಮತ ನೀಡಿ ಎಂದು ಲಿಂಗಾಯತರಿಕೆ ಕರೆ ನೀಡಿದ್ದಾರೆ.

    ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಕ್ಷೇಪ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ತುರ್ತು ಸಭೆಯಲ್ಲಿ ಮಾತೆ ಮಹಾದೇವಿ ಈ ಘೋಷಣೆ ಹೊರಡಿಸಿದ್ದಾರೆ. ಸ್ವತಂತ್ರ ಧರ್ಮ ಮಾನ್ಯತೆಗೆ ಶ್ರಮಿಸೋ ಪಕ್ಷಕ್ಕೆ ಮತ. ಎಲ್ಲರು ಕಾಂಗ್ರೆಸ್ ಬೆಂಬಲಿಸಬೇಕು ಅಂತಾ ಹೇಳಿದ್ರು.

    ಅಮಿತ್ ಶಾ ರಾಜ್ಯದ ಶಿಫಾರಸ್ಸು ನಮಗೆ ತಲುಪಿಯೇ ಇಲ್ಲ ಎನ್ನುತ್ತಿದ್ದಾರೆ. ಈ ರೀತಿಯಾಗಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಶಾ ವಿರುದ್ಧ ಮಾತೆ ಕಿಡಿಕಾರಿದ್ರು. ಮುಂದಿನ ಬಸವ ಜಯಂತಿಯಂದು ನಮಗೆ ಸಿಹಿ ಸುದ್ದಿ ನೀಡಬೇಕು ಅಂತಾ ಕೇಂದ್ರ ಸರ್ಕಾರಕ್ಕೆ ಡೆಡ್‍ಲೈನ್ ನೀಡಿದ್ರು. ಇದೇ ವೇಳೆ ಮಾತನಾಡಿದ ಸಾರಂಗ ಶ್ರೀಗಳು, “ಗಂಡಸು” ಅಂದ್ರ್ರೆ ಸಿದ್ದರಾಮಯ್ಯ ಅಂತಾ ಹೊಗಳಿದ್ರು. ಇನ್ನು ಶೀಘ್ರವೇ ಪ್ರಧಾನಿ ಭೇಟಿಯಾಗಲು ಲಿಂಗಾಯಿತ ಮಹಾಸಭಾ ನಿರ್ಧಾರ ಕೈಗೊಂಡಿದೆ ಅಂತಾ ಸಭೆಯಲ್ಲಿ ತಿಳಿಸಲಾಯಿತು.

  • ಮಾತೆ ಮಹಾದೇವಿಗೆ ಬುದ್ಧಿಭ್ರಮಣೆಯಾಗಿದೆ- ರಾಯಚೂರಿನಲ್ಲಿ ಸ್ವಾಮಿಜಿಗಳು ಕಿಡಿ

    ಮಾತೆ ಮಹಾದೇವಿಗೆ ಬುದ್ಧಿಭ್ರಮಣೆಯಾಗಿದೆ- ರಾಯಚೂರಿನಲ್ಲಿ ಸ್ವಾಮಿಜಿಗಳು ಕಿಡಿ

    ರಾಯಚೂರು: ಮಾತೆ ಮಹಾದೇವಿಗೆ ಬುದ್ಧಿ ಭ್ರಮಣೆಯಾಗಿದ್ದು ಹೇಳುವುದೇ ಒಂದು ಮಾಡುವುದು ಇನ್ನೊಂದು ಅಂತ ರಾಯಚೂರಿನ ವಿವಿಧ ಮಠಗಳ ಸ್ವಾಮಿಜಿಗಳು ಕಿಡಿಕಾರಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಕಿಲ್ಲೆ ಬೃಹನ್ ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿ ಈಗಾಗಲೇ ಅವರ ಪಾದಪೂಜೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಲಿಂಗಾಯತ ಧರ್ಮ ಕಟ್ಟುತ್ತೇನೆ ಅಂತ ಅಡ್ಡಪಲ್ಲಕ್ಕಿ, ಪಾದಪೂಜೆಗಳನ್ನ ವಿರೋಧಿಸುವ ಮಾತೆ ಮಹಾದೇವಿ ಸ್ವತಃ ಸಿಂಹಾಸನ ಮೇಲೆ ಕುಳಿತು ತಾವೇ ಪಾದಪೂಜೆ ಮಾಡಿಸಿಕೊಳ್ಳುತ್ತಾರೆ ಅಂತ ಹೇಳಿದ್ದಾರೆ.

    ಬಸವಣ್ಣನವರನ್ನ ಸ್ವತಃ ಕಡೆಗಣಿಸಿರುವ ಮಾತೆ ಮಹಾದೇವಿ ಕೂಡಲಸಂಗಮದಲ್ಲಿ ಲಿಂಗದೇವರು ಹಾಗೂ ತನ್ನ ಫೋಟೋದ ಕೆಳಗೆ ಬಸವಣ್ಣನ ಫೋಟೋ ಇಟ್ಟು ಅವಮಾನ ಮಾಡಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದರು.

    ಜಾಲಹಳ್ಳಿ ಜಯಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ಲಿಂಗಾಯತ ಧರ್ಮದ ನಾಟಕ ಕೇವಲ ರಾಜಕೀಯ ಗಿಮಿಕ್, ಇದು ಚುನಾವಣೆವರೆಗೆ ಮಾತ್ರ ನಡೆಯುತ್ತದೆ. ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಸಚಿವರುಗಳೇ ಸ್ವತಃ ಲಿಂಗ ಕಟ್ಟಿಲ್ಲ. ಲಿಂಗಪೂಜೆಯನ್ನ ಮಾಡದೆ, ಲಿಂಗ ತತ್ವವೇ ಗೊತ್ತಿಲ್ಲದೆ ರಾಜಕೀಯ ಮಾಡುತ್ತಿದ್ದಾರೆ. ವೀರಶೈವ ಪುರಾತನ ತತ್ವ ಇದು ಜಾತಿ, ಧರ್ಮ ಅಲ್ಲ ಅಂತ ಹೇಳಿದ್ದಾರೆ.

  • ಸಿದ್ದಗಂಗಾ ಶ್ರೀಗಳ ಜ್ಞಾಪಕ ಶಕ್ತಿ ಕೆಲವರಿಂದ ದುರುಪಯೋಗ: ಮಾತೆ ಮಹಾದೇವಿ

    ಸಿದ್ದಗಂಗಾ ಶ್ರೀಗಳ ಜ್ಞಾಪಕ ಶಕ್ತಿ ಕೆಲವರಿಂದ ದುರುಪಯೋಗ: ಮಾತೆ ಮಹಾದೇವಿ

    ಬಾಗಲಕೋಟೆ: ಸಿದ್ದಗಂಗಾ ಶ್ರೀಗಳಿಗೆ ವಯೋಮಾನದ ದೃಷ್ಟಿಯಿಂದ ನೆನಪಿನ ಶಕ್ತಿ ಉಳಿದಿಲ್ಲ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿಕೆ ನೀಡಿದ್ದಾರೆ.

    ಸ್ವಾಮೀಜಿಗಳ ಜ್ಞಾಪಕ ಶಕ್ತಿಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಿದ್ದಗಂಗಾ ಶ್ರೀಗಳ ಪಕ್ಕ ಇರುವ ವೀರಶೈವ ಮಹಾಸಭಾದವರು ಒತ್ತಡ ತಂದಿದ್ದಾರೆ. ಪೂಜ್ಯ ಶ್ರೀಗಳ ಸಹಿಮಾತ್ರ ಪಡೆದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಹಾಗೊಂದು ವೇಳೆ ಶ್ರೀಗಳೇ ಈ ರೀತಿ ಹೇಳಿಕೆ ನೀಡಿದ್ದರೆ ಅದನ್ನು ನಾವು ಒಪ್ಪುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸುತ್ತೇವೆ. ಹೀಗಾಗಿ ವೀರಶೈವ ಮಹಾಸಭಾದಂತೆ ನಡೆಯಿರಿ ಎಂದು ಯಡಿಯೂರಪ್ಪ ಮತ್ತು ಸೋಮಣ್ಣ ಮಠದ ಕಡೆಯವರಿಗೆ ಒತ್ತಡ ಹಾಕಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ ಎಂದು ಆರೋಪಿಸಿದರು.

    ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರ ಏಳಿಗೆಯನ್ನ ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮ ವಿಚಾರವಾಗಿ ಕಲಬುರಗಿ ಹಾಗೂ ಹೈದರಾಬಾದ್ ನಲ್ಲಿಯೂ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಿದ್ದೇವೆ ಎಂದು ಮಾತೆ ಮಹಾದೇವಿ ಹೇಳಿದರು.

  • ಮಾತೆ ಮಹಾದೇವಿ ಅಲ್ಲ, ಆಕೆ ಮಾತಿನ ದೆವ್ವ: ಶಾಂತವೀರ ಸ್ವಾಮೀಜಿ

    ಮಾತೆ ಮಹಾದೇವಿ ಅಲ್ಲ, ಆಕೆ ಮಾತಿನ ದೆವ್ವ: ಶಾಂತವೀರ ಸ್ವಾಮೀಜಿ

    ಬಾಗಲಕೋಟೆ: ಗುರುದ್ರೋಹ ಕೆಲಸ ಮಾಡಿದ ಆಕೆ ಮಾತೆ ಮಹಾದೇವಿ ಅಲ್ಲ. ಅವಳೊಬ್ಬಳು ಮಾತಿನ ದೆವ್ವ ಎಂದು ಕೊಳದ ಮಠದ ಶಾಂತವೀರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ಹೇಳಿದ್ದಾರೆ.

    ಜಿಲ್ಲೆಯ ಬದಾಮಿ ತಾಲೂಕಿನ ಶಿವಯೋಗಮಂದಿರಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾತೆ ಮಹಾದೇವಿಗೂ ವೀರಶೈವ ಧರ್ಮಕ್ಕೂ ಯಾವುದೇ ಸಂಬಂಧವೇ ಇಲ್ಲ. ಅವರು ಗುರುದ್ರೋಹಿ, ಕೂಡಲಸಂಗಮದೇವ ಎಂಬ ಅಂಕಿತನಾಮ ತೆಗೆದುಹಾಕಿ ಲಿಂಗದೇವ ಅಂತಾ ಹೇಳುತ್ತಿದ್ದಾರೆ. ಆ ಲಿಂಗದೇವ ಯಾರು? ಅವನು ಎಲ್ಲಿದ್ದಾನೆ? ಇವಳಿಗೂ ಆ ಲಿಂಗದೇವರಿಗೂ ಏನು ಸಂಬಂಧ ಎಂದು ಏಕವಚನದಲ್ಲಿ ಮಾತೆ ಮಹಾದೇವಿ ಅವರನ್ನು ಪ್ರಶ್ನೆಮಾಡಿದ್ದಾರೆ.

    ಅಲ್ಲದೇ ಮಾತೆ ಮಹಾದೇವಿಗೂ ಲಿಂಗದೇವರ ಸಂಭಂದ ಎಂತಹದ್ದೂ ಎಂದು ಅವರೇ ಹೇಳಬೇಕು. ವೀರಶೈವ ಧರ್ಮ ಪ್ರಾಚೀನವಾದ ಧರ್ಮ, ವೀರಶೈವ ಲಿಂಗಾಯತ ನಾವೆಲ್ಲರೂ ಒಂದೇ. ಮಾತೆ ಮಹಾದೇವಿ ಹುಡುಗಾಟವನ್ನು ಬಿಟ್ಟು ನ್ಯಾಯಯುತವಾಗಿ ಬಂದ ವೀರಶೈವ ಧರ್ಮದ ಅನುಯಾಯಾಗಿ ಬಾಳಬೇಕಾದ್ದದು ಕರ್ತವ್ಯ ಎಂದು ತಿಳಿಸಿದರು.

    https://youtu.be/5xeheZN7YoQ

     

  • ಲಿಂಗಾಯತ ಕೋಟಾದಡಿ ಟಿಕೆಟ್ ತಗೆದುಕೊಳ್ಳುವಾಗ ಪ್ರತ್ಯೇಕ ಧರ್ಮ ಯಾಕಾಗಬಾರದು: ಮಾತೆ ಮಹಾದೇವಿ

    ಲಿಂಗಾಯತ ಕೋಟಾದಡಿ ಟಿಕೆಟ್ ತಗೆದುಕೊಳ್ಳುವಾಗ ಪ್ರತ್ಯೇಕ ಧರ್ಮ ಯಾಕಾಗಬಾರದು: ಮಾತೆ ಮಹಾದೇವಿ

    ಬೆಳಗಾವಿ: ಜಗವ ಬದುಕಲು ನಮ್ಮ ಆದಿ ಬಸವಾದಿ ಶರಣರು ವಚನ ಸಾಹಿತ್ಯ ನೀಡಿದರು. ಆದ್ರೆ ಜಾತಿ ವಾದಿಗಳಿಂದ ಅದಕ್ಕೆ ಆಪತ್ತು ಬಂದು ಎರಗಿತು ಎಂದು ಬಸವಧರ್ಮ ಪೀಠಾಧ್ಯಕ್ಷೆ ಡಾ. ಮಾತೆ ಮಹಾದೇವಿ ಹೇಳಿದ್ದಾರೆ.

    ಲಿಂಗಾಯತ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ವೀರಶೈವರು ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಉಪಚಾರ ಮಾಡಿಕೊಂಡಿದ್ದಾರೆ. ನೀವು ಟಿಕೆಟ್ ಪಡೆದುಕೊಳ್ಳುವಾಗ ಲಿಂಗಾಯತ ಕೋಟಾ ಅಡಿ ಟಿಕೆಟ್ ಪಡೆದುಕೊಳ್ಳುತ್ತೀರಿ. ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕು. ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಒಳ್ಳೆಯ ಸ್ಥಾನದಲ್ಲಿದ್ದಾರೆ. ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಹೇಳಿ ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ಕೊಡಿಸಲು ಒತ್ತಾಯ ಮಾಡಬೇಕು ಎಂದು ಅವರು ಆಗ್ರಹಿಸಿದರು.

    ಮುಂದಿನ ದಿನಗಳಲ್ಲಿ ಸರ್ಕಾರಿ ಜಾತಿ ಪ್ರಮಾಣ ಪತ್ರದಲ್ಲಿ ವೀರಶೈವ ಲಿಂಗಾಯತ ಎಂದು ನಮೂದು ಮಾಡಲಾಗುತ್ತಿದೆ. ಅದನ್ನ ತೆಗೆದು ಹಾಕಲು ಮುಂದಿನ ದಿನಗಳಲ್ಲಿ ಅದರ ವಿರುದ್ಧ ಹೋರಾಟ ಮಾಡಲಾಗುತ್ತದೆ. ಮುಂದಿನ ಲಿಂಗಾಯತ ಸಮಾವೇಶ ಸೆಪ್ಟೆಂಬರ್ 10ರಂದು ಕಲಬುರಗಿಯಲ್ಲಿ ನಡೆದರೆ, ಅಕ್ಟೋಬರ್ 22 ರಂದು ಮೈಸೂರಲ್ಲಿ ನಡೆಯಲಿದೆ ಎಂದರು.

    ಈ ವೇಳೆ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಯಾವುದನ್ನು ತಲೆಕೆಡಿಸಿಕೊಳ್ಳುವುದು ಬೇಡ. ಲಿಂಗಾಯತ ಧರ್ಮ ಸ್ವತಂತ್ರವಾಗಿದೆ. ಲಿಂಗಾಯತರು ಮತ್ತು ವೀರಶೈವ ಲಿಂಗಾಯತರು ಒಂದೇ ಅಲ್ಲ. ಮಾತೆ ಮಹಾದೇವಿ ಮತ್ತು ತೋಂಟದಾರ್ಯ ಶ್ರೀಗಳು ಈ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ರಾಜ್ಯ ಸರ್ಕಾರ ಮೊದಲು ಲಿಂಗಾಯತ ಧರ್ಮ ಸ್ವತಂತ್ರವೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲವಾದರೇ ರಾಜ್ಯ ಸರ್ಕಾರಕ್ಕೆ ಲಿಂಗಾಯತರು ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

    ನಮ್ಮ ವಿಚಾರಗಳಲ್ಲಿ ತಲೆ ತೋರಿಸುವ ಕೆಲಸ ಮಾಡದಂತೆ ಲಿಂಗಾಯತ ಧರ್ಮಕ್ಕೆ ವಿರೋಧಿಸುವವರಿಗೆ ಎಚ್ಚರಿಕೆ. ಒಡೆದಾಳುವ ನೀತಿ ಇಲ್ಲೇ ನಿಲ್ಲಬೇಕು. ಹರಿಬ್ರಹ್ಮ ಬಂದರೂ ಲಿಂಗಾಯತ ಧರ್ಮ ಸ್ವತಂತ್ರ ಎಂದು ಘೋಷಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.

  • ರಂಭಾಪುರಿ ಶ್ರೀಗಳ ವಿರುದ್ಧ ಭುಗಿಲೆದ್ದ ಆಕ್ರೋಶ – ಬೆಂಗ್ಳೂರಲ್ಲಿ ರಾತ್ರೋರಾತ್ರಿ ಪ್ರತಿಭಟನೆ

    ರಂಭಾಪುರಿ ಶ್ರೀಗಳ ವಿರುದ್ಧ ಭುಗಿಲೆದ್ದ ಆಕ್ರೋಶ – ಬೆಂಗ್ಳೂರಲ್ಲಿ ರಾತ್ರೋರಾತ್ರಿ ಪ್ರತಿಭಟನೆ

    – ಇತ್ತ ರಂಭಾಪುರಿ ಶ್ರೀಗಳ ಬೆಂಬಲಿಗರಿಂದಲೂ ಹೋರಾಟ

    ಬೆಂಗಳೂರು: ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅನೈತಿಕತೆ ಪ್ರಶ್ನೆ ಮಾಡಿ ಅವರ ವಿರುದ್ಧ ಗಂಭೀರ ಆರೋಪ ಹೊರಿಸಿರುವ ರಂಭಾಪುರಿ ಶ್ರೀಗಳ ವಿರುದ್ಧ ಮಾತೆಯ ಭಕ್ತರು ಬೆಂಗಳೂರಿನ ಬಸವ ಮಂಟಪದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

    ಮಾತೆ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಅವರ ತೇಜೋವಧೆಗೆ ರಂಭಾಪುರಿ ಶ್ರೀಗಳು ಯತ್ನಿಸುತ್ತಿದ್ದಾರೆ ಅಂತ ಮಾತೆ ಭಕ್ತರು ಕಿಡಿಕಾರಿದ್ರು. ರಂಭಾಪುರಿ ಶ್ರೀಗಳಿಗೆ ಧಿಕ್ಕಾರ ಕೂಗಿ, ಮೊಬೈಲ್‍ನಲ್ಲಿದ್ದ ರಂಭಾಪುರಿ ಶ್ರೀಗಳ ಫೋಟೋಗೆ ಚಪ್ಪಲಿಯಿಂದ ಹೊಡೆದು, ರಸ್ತೆ ಮಧ್ಯೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು.

    ಅಲ್ಲದೇ ರಂಭಾಪುರಿ ಶ್ರೀಗಳು ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ರು. ಇಂದು ಬೆಳಗ್ಗೆ 10.30ಕ್ಕೆ ಮೌರ್ಯ ಸರ್ಕಲ್‍ನಲ್ಲಿ ಪ್ರತಿಭಟಿಸಲಿದ್ದಾರೆ.

    ಇತ್ತ ಮಾತೆ ಮಹಾದೇವಿ ಮತ್ತು ಬಸವ ಪೀಠದ ಸದಸ್ಯರು ರಂಭಾಪುರಿ ಶ್ರೀಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಅಂತಾ ಆರೋಪಿಸಿ ಬೆಂಗಳೂರಲ್ಲಿ ರಂಭಾಪುರಿ ಶ್ರೀಗಳ ಬೆಂಬಲಿಗರು ಪ್ರತಿಭಟಿಸಿದ್ದಾರೆ. ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ವೃತ್ತದಲ್ಲಿ ಪ್ರತಿಭಟಿಸಿ ಮಾತೆ ಮಹಾದೇವಿ ವಿರುದ್ಧ ಧಿಕ್ಕಾರ ಕೂಗಿದ್ರು.

    ಮಾತೆ ಮಹಾದೇವಿ ಹಾಗೂ ಲಿಂಗಾನಂದರ ನಡುವಿನ ಸಂಬಂಧವನ್ನು ರಂಭಾಪುರಿ ಶ್ರೀಗಳು ಅನುಮಾನದ ದೃಷ್ಟಿಯಿಂದ ನೋಡಿದ್ದಾರೆ. ಅಲ್ಲದೆ, ಈ ಸಂಬಂಧ ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

    ಮಾತೆ ಮಹಾದೇವಿ ಹಾಗೂ ಲಿಂಗಾನಂದ ನಡುವಿನ ಸಂಬಂಧ ಎಷ್ಟು ಅನೈತಿಕಯಿಂದ ಕೂಡಿದೆ ಎಂಬುದಕ್ಕೆ ಸ್ವತಃ ಲಿಂಗಾನಂದರೇ ಶಿಷ್ಯರೊಬ್ಬರಿಗೆ ಬರೆದ ರಹಸ್ಯ ಪತ್ರವನ್ನು ಅವರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, ಮಾತೆ ಮಹಾದೇವಿ ಚಾರಿತ್ರ್ಯಧ ಬಗ್ಗೆ ಪ್ರಸ್ತಾಪಿಸಲಾಗಿದೆ. ಪಬ್ಲಿಕ್ ಟಿವಿಗೆ ಈ ಪತ್ರಗಳು ಸಿಕ್ಕಿದ್ದು ಅವುಗಳನ್ನು ಇಲ್ಲಿ ನೀಡಲಾಗಿದೆ.

  • ಮಾತೆ ಮಹಾದೇವಿಗೆ ಅನೈತಿಕ ಸಂಬಂಧ ಇತ್ತು: ಅಲ್ಲೋಲಕಲ್ಲೋಲ ಸೃಷ್ಟಿಸಿದ ರಂಭಾಪುರಿ ಶ್ರೀ

    ಮಾತೆ ಮಹಾದೇವಿಗೆ ಅನೈತಿಕ ಸಂಬಂಧ ಇತ್ತು: ಅಲ್ಲೋಲಕಲ್ಲೋಲ ಸೃಷ್ಟಿಸಿದ ರಂಭಾಪುರಿ ಶ್ರೀ

    ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿವಾದಕ ಈಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಆಗ್ರಹಿಸುತ್ತಿರುವ ಮಾತೆ ಮಹಾದೇವಿ ವಿರುದ್ಧ ರಂಭಾಪುರಿ ಶ್ರೀಗಳು ಗಂಭೀರ ಆರೋಪ ಮಾಡಿದ್ದಾರೆ.

    ಮಾತೆ ಮಹಾದೇವಿ ಹಾಗೂ ಲಿಂಗಾನಂದರ ನಡುವಿನ ಸಂಬಂಧವನ್ನು ರಂಭಾಪುರಿ ಶ್ರೀಗಳು ಅನುಮಾನದ ದೃಷ್ಟಿಯಿಂದ ನೋಡಿದ್ದಾರೆ. ಅಲ್ಲದೆ, ಈ ಸಂಬಂಧ ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

    ಮಾತೆ ಮಹಾದೇವಿ ಹಾಗೂ ಲಿಂಗಾನಂದ ನಡುವಿನ ಸಂಬಂಧ ಎಷ್ಟು ಅನೈತಿಕಯಿಂದ ಕೂಡಿದೆ ಎಂಬುದಕ್ಕೆ ಸ್ವತಃ ಲಿಂಗಾನಂದರೇ ಶಿಷ್ಯರೊಬ್ಬರಿಗೆ ಬರೆದ ರಹಸ್ಯ ಪತ್ರವನ್ನು ಅವರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, ಮಾತೆ ಮಹಾದೇವಿ ಚಾರಿತ್ರ್ಯಧ ಬಗ್ಗೆ ಪ್ರಸ್ತಾಪಿಸಲಾಗಿದೆ. ಪಬ್ಲಿಕ್ ಟಿವಿಗೆ ಈ ಪತ್ರಗಳು ಸಿಕ್ಕಿದ್ದು ಅವುಗಳನ್ನು ಇಲ್ಲಿ ನೀಡಲಾಗಿದೆ.