ವರಲಕ್ಷ್ಮಿ ಅವರು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಹೋಟೆಲ್‌ವೊಂದರಲ್ಲಿ ಅದ್ಧೂರಿಯಾಗಿ ಬರ್ತ್‌ಡೇ ನಡೆದಿದ್ದು, ಕೇಕ್ ಕತ್ತರಿಸಿ ನಟಿ ಸಂಭ್ರಮಿಸಿದ್ದಾರೆ. ಈ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಭಾಗಿಯಾಗಿ ನಟಿಗೆ ಶುಭಕೋರಿದ್ದಾರೆ.
ಅಂದಹಾಗೆ, ಮಾಣಿಕ್ಯ, ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಜೊತೆ ನಟಿಸಿರೋ ವರಲಕ್ಷ್ಮಿಗೆ ನಟನ ಕುಟುಂಬದ ಜೊತೆ ಉತ್ತಮ ಒಡನಾಟವಿದೆ. ಕಳೆದ ವರ್ಷ ಹಸೆಮಣೆ ಏರಿದ ವರಲಕ್ಷ್ಮಿ ಮದುವೆಗೆ ಸುದೀಪ್ ಹಾಗೂ ಪತ್ನಿ ಹಾಜರಿ ಹಾಕಿದ್ದರು.
ತಮಿಳಿನ ಖ್ಯಾತ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಬಹುಕಾಲದ ಗೆಳೆಯನ ಜೊತೆ ಜುಲೈ 2ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಬ್ಬರ ವಿವಾಹ ಥೈಲ್ಯಾಂಡ್‌ನಲ್ಲಿ ಅದ್ಧೂರಿಯಾಗಿ ಜರುಗಲಿದೆ. ಈ ಸಂಭ್ರಮದಲ್ಲಿ ತಮಿಳಿನ ಸ್ಟಾರ್ ಕಲಾವಿದರ ದಂಡೇ ಸಾಕ್ಷಿಯಾಗಲಿದೆ. ಇದನ್ನೂ ಓದಿ:ಹ್ಯಾಟ್ರಿಕ್ ಹೀರೋ ಶಿವಣ್ಣ ಫ್ಯಾನ್ಸ್‌ಗೆ ಸಿಹಿಸುದ್ದಿ- ಏನದು?
ಹಿರಿಯ ನಟ ಶರತ್‌ಕುಮಾರ್ ಮತ್ತು ರಾಧಿಕಾ ದಂಪತಿ ಪುತ್ರಿ ವರಲಕ್ಷ್ಮಿ ವಿವಾಹ ಪೂರ್ವ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯುತ್ತಿದೆ. ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ಉದ್ಯಮಿ ನಿಕೋಲಾಯ್ (Nicholai Sachdev) ಜೊತೆ ವರಲಕ್ಷ್ಮಿ ಮದುವೆಗೆ (Wedding) ಭರ್ಜರಿ ತಯಾರಿ ನಡೆಯುತ್ತಿದೆ.
ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಟಾರ್ ನಟಿ ನಯನತಾರಾ ದಂಪತಿ, ರವಿತೇಜ, ತಮಿಳು ನಟ ಸಿದ್ಧಾರ್ಥ್, ಎ.ಆರ್ ಮುರುಗದಾಸ್, ಮುರಳಿ ಶರ್ಮಾ, ಸಮಂತಾ, ಕನ್ನಡದ ನಟ ಸುದೀಪ್ ಸೇರಿದಂತೆ ಅನೇಕರಿಗೆ ನಟಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅದಷ್ಟೇ ಅಲ್ಲ, ಪಿಎಂ ನರೇಂದ್ರ ಮೋದಿಗೂ ನಟಿಯ ಕುಟುಂಬ ವಿಶೇಷವಾಗಿ ಆಮಂತ್ರಣ ನೀಡಿದೆ.
ಅಂದಹಾಗೆ, ಮಾಣಿಕ್ಯ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.
ಇನ್ನೂ ‘ಮಾಣಿಕ್ಯ’ ಸಿನಿಮಾದ ನಂತರ ಮತ್ತೆ ಸುದೀಪ್ ಜೊತೆ ನಟಿ ಕೈಜೋಡಿಸಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
ಬಹುಭಾಷಾ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಮದುವೆ ನಿಶ್ಚಿತಾರ್ಥವಾಗಿದೆ. ನಿಕೋಲಾಯ್ ಸಚ್‌ದೇವ್ (Nicholai Sachdev) ಎಂಬುವರ ಜೊತೆ ಮದುವೆ ನಿಶ್ಚಯವಾಗಿದೆ. ಇವರು ಅಥ್ಲೆಟ್ ಆಗಿದ್ದು ವೇಟ್‌ಲಿಫ್ಟಿಂಗ್‌ನಲ್ಲಿ ಹೆಸರು ಮಾಡಿದ್ದಾರೆ. ಈಗಾಗಲೇ ಅವರಿಗೆ ಮದುವೆಯಾಗಿದ್ದು, 15 ವರ್ಷದ ಮಗಳಿದ್ದಾಳೆ ಎನ್ನಲಾಗ್ತಿದೆ. ಇವರ ಜೊತೆ ವರಲಕ್ಷ್ಮಿ ನಿಶ್ಚಿತಾರ್ಥ ಹಲವು ಚರ್ಚೆಗೆ ಕಾರಣವಾಗಿದೆ.
ನಿಕೋಲಾಯ್ ಅವರು ಖ್ಯಾತ ಮಾಡೆಲ್ ಕವಿತಾ (Kavitha) ಅವರನ್ನು ಮದುವೆಯಾಗಿದ್ದರು. ಅವರಿಗೆ 15 ವರ್ಷದ ಮಗಳೂ ಸಹ ಇದ್ದಾರೆ ಎನ್ನಲಾಗಿದೆ. ಈ ಜೋಡಿಗೆ ಮದುವೆ ಬಳಿಕ ಹೊಂದಾಣಿಕೆ ಸಮಸ್ಯೆ ಎದುರಾಗಿತ್ತು. ಹೀಗಾಗಿ ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆ ಬಳಿಕ ವರಲಕ್ಷ್ಮಿ ಜೊತೆ ಎಂಗೇಜ್ ಆದರು. ನಿಕೋಲಾಯ್ ಹಾಗೂ ಕವಿತಾ ಡಿವೋರ್ಸ್ ಬಳಿಕವಷ್ಟೇ ವರಲಕ್ಷ್ಮಿ ಜೊತೆ ಡೇಟಿಂಗ್ ಶುರುವಾಗಿತ್ತು ಎಂದು ವರದಿಯಾಗಿವೆ. ಇದನ್ನೂ ಓದಿ:ನಟಿ ವೈಜಯಂತಿ ಮಾಲಾರನ್ನು ಭೇಟಿಯಾಗಿ ನಮಿಸಿದ ನರೇಂದ್ರ ಮೋದಿ
ವರಲಕ್ಷ್ಮಿ ಶರತ್‌ಕುಮಾರ್ ತಮ್ಮ ಅಭಿಮಾನಿಗಳಿಗೆ ಮಾರ್ಚ್ 1ರಂದು ಗುಡ್ ನ್ಯೂಸ್ ಕೊಟ್ಟಿದ್ದರು. ಆಪ್ತರ ಸಮ್ಮುಖದಲ್ಲಿ ನಟಿ ಬಹುಕಾಲದ ಗೆಳೆಯನ ಜೊತೆ ಎಂಗೇಜ್ ಆದರು. ಎಂಗೇಜ್‌ಮೆಂಟ್‌ನ ಸುಂದರ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ವರಲಕ್ಷ್ಮಿ ಅವರು ಆರ್ಟ್ ಗ್ಯಾಲರಿ ಮಾಲೀಕ ನಿಕೋಲಾಯ್ ಸಚ್‌ದೇವ್ ಜೊತೆ ಎಂಗೇಜ್ ಆಗಿದ್ದಾರೆ. ಅಂದಹಾಗೆ, ಕಳೆದ 14 ವರ್ಷದಿಂದ ನಿಕೋಲಾಯ್ ಪರಿಚಯವಿತ್ತು. ಮುಂಬೈನ ಖಾಸಗಿ ರೆಸಾರ್ಟ್‌ವೊಂದರಲ್ಲಿ ವರಲಕ್ಷ್ಮಿ ನಿಶ್ಚಿತಾರ್ಥ ಸಮಾರಂಭ ಜರುಗಿದೆ.
ಈ ವರ್ಷದ ಅಂತ್ಯದಲ್ಲಿ ವರಲಕ್ಷ್ಮಿ ಮದುವೆ ಸಮಾರಂಭ ನಡೆಯಲಿದೆ. ತಮಿಳಿನ ಹಿರಿಯ ನಟ ಶರತ್ ಕುಮಾರ್ ಅವರ ಪುತ್ರಿಯಾಗಿದ್ದು, ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯ ಧನುಷ್ ನಟನೆಯ ‘ರಾಯನ್’ (Raayan) ಚಿತ್ರದಲ್ಲಿ ವರಲಕ್ಷ್ಮಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ.
ಸುದೀಪ್ ಜೊತೆ ‘ಮಾಣಿಕ್ಯ’ ಮಾತ್ರವಲ್ಲ, ರನ್ನ ಸಿನಿಮಾದಲ್ಲೂ ವರಲಕ್ಷ್ಮಿ ಶರತ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಇವಿಷ್ಟು ಮಾತ್ರವಲ್ಲದೆ ಕನ್ನಡದ ವಿಸ್ಮಯ, ರಣಂ ಚಿತ್ರದಲ್ಲಿ ನಟಿಸಿದ್ದಾರೆ.
ತಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಹಾಗೂ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan) ವಿರುದ್ಧ ಅವರ ಸಂಬಂಧಿಕರೇ ದೂರು ನೀಡಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ನಯನತಾರಾ ಮತ್ತು ವಿಘ್ನೇಶ್ ಶಿವನ್ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಘ್ನೇಶ್ ಶಿವನ್ ಮೂಲತಃ ತಮಿಳುನಾಡು ತಿರು (Trichy)ಚ್ಚಿ ಜಿಲ್ಲೆ, ಲಾಕ್ ಕುಡಿ ಹಳ್ಳಿಗೆ ಸೇರಿದವರು. ಅಲ್ಲಿಯೇ ಅವರ ತಂದೆ ಮತ್ತು ಪೂರ್ವಜರು ಬಾಳಿ ಬದುಕಿದ್ದಾರೆ. ವಿಘ್ನೇಶ್ ಶಿವನ್ ತಂದೆ ಶಿವಕೋಲುಂದು ಅವರಿಗೆ ಒಟ್ಟು ಒಂಬತ್ತು ಜನ ಸಹೋದರರು. ಆ ಸಹೋದರರಿಗೆ ಗೊತ್ತಾಗದಂತೆ ಪೂರ್ವಜರ ಜಮೀನು ಮಾರಾಟ ಮಾಡಲಾಗಿದೆ ಎನ್ನುವ ಆರೋಪ ಸಹೋದರರದ್ದು. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ
ಪೊಲೀಸ್ ಇನ್ಫಾರ್ಮರ್ ಆಗಿ ಕೆಲಸ ಮಾಡುತ್ತಿದ್ದ ಶಿವಕೋಲುಂದು ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಅವರು ಬದುಕಿದ್ದಾಗಲೇ ಸಹೋದರರಿಗೆ ಗೊತ್ತಾಗದಂತೆ ಆಸ್ತಿ ಮಾರಿದ್ದಾರೆ ಎನ್ನುವುದು ಸಂಬಂಧಿಗಳ ಆರೋಪ. ತಿರುಚ್ಚಿ ಡಿ.ಎಸ್.ಪಿ ಕಚೇರಿಯಲ್ಲಿ ದೂರು ದಾಖಲಾಗಿದ್ದು, ಆ ದೂರಿನಲ್ಲಿ ಸ್ಟಾರ್ ಜೋಡಿಯ ಹೆಸರು ಸೇರ್ಪಡೆಯಾಗಿದೆ. ಶಿವಕೋಲುಂದು ಸಹೋದರ ಮಾಣಿಕ್ಯಂ ಎನ್ನುವವರು ದೂರು ನೀಡಿದ್ದಾರೆ.
ಮಾಣಿಕ್ಯಂ (Manikyam)ಕೊಟ್ಟ ದೂರಿನಲ್ಲಿ ವಿಘ್ನೇಶ್ ತಾಯಿ ಮೀನಾ ಕುಮಾರಿ, ಮಗಳು ಐಶ್ವರ್ಯ ಹಾಗೂ ವಿಘ್ನೇಶ್ ಮತ್ತು ನಯನತಾರಾ ಹೆಸರು ಕೂಡ ಇದೆ. ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಡಿಜಿಪಿ ಪೊಲೀಸ್ ಸಿಬ್ಬಂದಿಗೆ ಆದೇಶ ನೀಡಿದ್ದಾರೆ. ಹೀಗಾಗಿ ಸ್ಟಾರ್ ದಂಪತಿಗೆ ಮತ್ತೊಂದು ತಲೆ ನೋವು ಎದುರಾಗಿದೆ.