Tag: ಮಾಡೆಲ್ ಶ್ರೇಯಾ ಕಲ್ರಾ

  • ಟ್ರಾಫಿಕ್ ಸಿಗ್ನಲ್‍ನಲ್ಲಿ ಯುವತಿ ಫುಲ್ ಡ್ಯಾನ್ಸ್, ವೀಡಿಯೋ ವೈರಲ್- ಮುಂದೇನಾಯ್ತು?

    ಟ್ರಾಫಿಕ್ ಸಿಗ್ನಲ್‍ನಲ್ಲಿ ಯುವತಿ ಫುಲ್ ಡ್ಯಾನ್ಸ್, ವೀಡಿಯೋ ವೈರಲ್- ಮುಂದೇನಾಯ್ತು?

    – ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

    ಭೋಪಾಲ್: ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಯುವತಿ ಹುಚ್ಚೆದ್ದು ಕುಣಿದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಧ್ಯಪ್ರದೇಶದ ಇಂದೋರ್ ನ ರಸೋಮಾ ಸ್ಕ್ವೇರ್ ನಲ್ಲಿ ಘಟನೆ ನಡೆದಿದ್ದು, ಇಂದೋರ್ ನ ಬ್ಯುಸಿಯಸ್ಟ್ ರಸ್ತೆಗಳಲ್ಲಿ ಇದೂ ಒಂದು. ಇದ್ದಕ್ಕಿದ್ದಂತೆ ಯುವತಿ ಸಿಗ್ನಲ್ ಮಧ್ಯೆ ಕುಣಿಯುವುದನ್ನು ಕಂಡು ಜನ ದಂಗಾಗಿದ್ದಾರೆ. ಆದರೆ ಇದು ಮಾಸ್ಕ್ ಹಾಗೂ ಟ್ರಾಫಿಕ್ ರೂಲ್ಸ್ ಕುರಿತು ಜನರಲ್ಲಿ ಅರಿವು ಮೂಡಿಸಲು ಮಾಡಿದ ವೀಡಿಯೋ ಎಂದು ಮಾಡೆಲ್ ಶ್ರೇಯಾ ಕಲ್ರಾ ಹೇಳಿಕೊಂಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು, ಇದೊಂದು ಪಬ್ಲಿಸಿಟಿ ಸ್ಟಂಟ್ ಎಂದು ಕಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by Shreya Kalra (@shreyakalraa)

    ಮಾಡೆಲ್ ಶ್ರೇಯಾ ಕಲ್ರಾ ಡ್ಯಾನ್ಸ್ ಮಾಡಿರುವ 30 ಸೆಕೆಂಡ್‍ಗಳ ಕ್ಲಿಪ್ ಸಖತ್ ವೈರಲ್ ಆಗಿದೆ. ಸಿಗ್ನಲ್‍ನಲ್ಲಿ ರೆಡ್ ಲೈಟ್ ಆನ್ ಆಗುತ್ತಿದ್ದಂತೆ ಝಿಬ್ರಾ ಕ್ರಾಸ್‍ಗೆ ಇಳಿದು ಡ್ಯಾನ್ಸ್ ಮಾಡಲು ಆರಂಭಿಸಿದ್ದಾರೆ. ಅವರೊಂದಿಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿ ವೀಡಿಯೋವನ್ನು ರೆಕಾರ್ಡ್ ಮಾಡಿದ್ದಾನೆ. ಸಿಗ್ನಲ್‍ನಲ್ಲಿ ಹಸಿರು ಬಣ್ಣದ ದೀಪ ಉರಿಯುವವರೆಗೆ ಶ್ರೇಯಾ ಡ್ಯಾನ್ಸ್ ಮಾಡಿದ್ದಾರೆ. ಮಾಸ್ಕ್ ಧರಿಸುವಂತೆ ವೀಡಿಯೋದುದ್ದಕ್ಕೂ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಫಿಬಾ ಏಷ್ಯಾಕಪ್ ಮಹಿಳಾ ಬಾಸ್ಕೆಟ್ ಬಾಲ್ ಟೂರ್ನಿ- ಭಾರತ ತಂಡಕ್ಕೆ ಕೊಡಗಿನ ನವನೀತಾ ಆಯ್ಕೆ

    ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಅಧಿಕಾರಿಗಳು ಮಾಡೆಲ್‍ಗೆ ನೋಟಿಸ್ ನೀಡಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಈ ರೀತಿ ಮಾಡುವುದು ಸರಿಯಲ್ಲ ಎಂದು ಅಧಿಕಾರಿಗಳು ನೋಟಿಸ್‍ನಲ್ಲಿ ತಿಳಿಸಿದ್ದಾರೆ. ಇತರರಿಗೆ ಅಥವಾ ನಿಮಗೆ ಹಾನಿಯಾಗದ ರೀತಿ ಮನರಂಜನಾ ಚಟುವಟಿಕೆಗಳನ್ನು ಮಾಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಬಳಿಕ ಶ್ರೇಯಾ ಕಲ್ರಾ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದು, ವೀಡಿಯೋ ಮಾಡುವ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಅಲ್ಲಗಳೆದಿರುವ ಅವರು, ಮಾಸ್ಕ್ ಧರಿಸುವುದು ಹಾಗೂ ರೆಡ್ ಸಿಗ್ನಲ್ ಬಿದ್ದಾಗ ನಿಲ್ಲುವ ಕುರಿತು ಜಾಗೃತಿ ಮೂಡಿಸಲು ಈ ರೀತಿ ಮಾಡಿದೆ. ಇದೇ ರೀತಿ ಮಾಡಿ ಎಂದು ನಾನು ಯಾರಿಗೂ ಹೇಳಲು ಬಯಸುವುದಿಲ್ಲ, ವೀಡಿಯೋವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.