Tag: ಮಾಡೆಲಿಂಗ್

  • ತಮಿಳು ಚಿತ್ರೋದ್ಯಮದತ್ತ ಮತ್ತೋರ್ವ ಕನ್ನಡದ ನಟಿ

    ತಮಿಳು ಚಿತ್ರೋದ್ಯಮದತ್ತ ಮತ್ತೋರ್ವ ಕನ್ನಡದ ನಟಿ

    ಶ್ಮಿಕಾ ಮಂದಣ್ಣ, ಶ್ರೀಲೀಲಾ, ನಭಾ ನಟೇಶ್ ಹೀಗೆ ಸಾಲು ಸಾಲು ನಾಯಕಿಯರು ಸ್ಯಾಂಡಲ್ ವುಡ್ ತೊರೆದು ತಮಿಳು (Tamil), ತೆಲುಗು ಚಿತ್ರೋದ್ಯಮಗಳತ್ತ ಮುಖ ಮಾಡಿದ್ದಾರೆ. ಇವರ ಸಾಲಿಗೆ ಇದೀಗ ಬೃಂದಾ ಆಚಾರ್ಯ (Brinda Acharya) ಕೂಡ ಸೇರ್ಪಡೆಗೊಂಡಿದ್ದಾರೆ. ಪ್ರೇಮಂ ಪೂಜ್ಯಂ, ಕೌಸಲ್ಯಾ ಸುಪ್ರಜಾ ರಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

    ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿರುವ ಬೃಂದಾ, ಎರಡು ಕನ್ನಡ ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಅದರಲ್ಲಿ ಒಂದು ಸಿನಿಮಾದ ಚಿತ್ರೀಕರಣ ಕೂಡ ನಡೆದಿದೆ. ಜೊತೆಗೆ ತಮಿಳು ಚಿತ್ರಕ್ಕೂ ಸಹಿ ಮಾಡಿದ್ದೇನೆ. ಅದರಲ್ಲಿ ಗ್ರಾಫಿಕ್ಸ್ ಜಾಸ್ತಿ ಇರುವುದರಿಂದ ತಡವಾಗಬಹುದು ಎಂದು ಹೇಳಿಕೊಂಡಿದ್ದಾರೆ. ಆದರೆ, ತಮಿಳು ಚಿತ್ರದ ಬಗ್ಗೆ ಅವರು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇದನ್ನೂ ಓದಿ:ಹಾಸ್ಯ ನಟ ನರಸಿಂಹರಾಜು ಜನ್ಮ ಶತಮಾನೋತ್ಸವ: ಸಿಎಂ ಸಿದ್ದರಾಮಯ್ಯ ಚಾಲನೆ

    ಸದ್ಯ ಬೃಂದಾ ಆಚಾರ್ಯ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಈ ಸಿನಿಮಾದ ನಾಯಕ. ಶಶಾಂಕ್ ಅವರ ನಿರ್ದೇಶನದಲ್ಲಿ  ಈ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಅವರು ಹೊಸ ಬಗೆಯ ಪಾತ್ರವನ್ನು ಮಾಡಿದ್ದಾರಂತೆ. ತೆರೆಯ ಮೇಲೆ ಹೇಗೆ ಕಾಣಿಸುತ್ತೇನೆ ಎಂದು ನೋಡಲು ಉತ್ಸುಕಳಾಗಿದ್ದೇನೆ ಎಂದಿದ್ದಾರೆ ಬೃಂದಾ.

    ಮಾಡೆಲಿಂಗ್ ಜಗತ್ತಿನ ಬಗ್ಗೆಯೂ ಮಾತನಾಡಿರುವ ಅವರು, ಮಾಡೆಲಿಂಗ್ ಮತ್ತು ಸಿನಿಮಾ ಎರಡೂ ವೃತ್ತಿ ಇಷ್ಟ, ಅಲ್ಲಿಯೂ ಅವಕಾಶ ಸಿಕ್ಕರೆ ಹೋಗುತ್ತೇನೆ. ಆ ಕಾರಣದಿಂದಾಗಿ ಮತ್ತಷ್ಟು ಸಿನಿಮಾಗೆ ಆಫರ್ ಬರಬಹುದು ಎನ್ನುವುದು ಬೃಂದಾ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂದುವರೆದ ಮಾಡೆಲ್ ಗಳ ಆತ್ಮಹತ್ಯೆ ಸರಣಿ : ಇಂದು ನೇಣು ಬಿಗಿದುಕೊಂಡ ಮಂಜುಷಾ ನಿಯೋಗಿ

    ಮುಂದುವರೆದ ಮಾಡೆಲ್ ಗಳ ಆತ್ಮಹತ್ಯೆ ಸರಣಿ : ಇಂದು ನೇಣು ಬಿಗಿದುಕೊಂಡ ಮಂಜುಷಾ ನಿಯೋಗಿ

    ನಿನ್ನೆಯಷ್ಟೇ ಬಂಗಾಳಿ ಮಾಡೆಲ್ ಬಿದಿಶಾ ಡಿ ಮಂಜುದಾರ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಿದಿಶಾ ಅಂತ್ಯಸಂಸ್ಕಾರ ಇನ್ನೂ ಆಗಿಯೇ ಇಲ್ಲ, ಆಗಲೇ ಮತ್ತೊಬ್ಬ ಮಾಡೆಲ್ ಆತ್ಮಹತ್ಯೆ ಮಾಡಿಕೊಂಡು ಆಘಾತ ಮೂಡಿಸಿದ್ದಾರೆ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    ಕೋಲ್ಕತ್ತಾ ಮೂಲದ ಮಂಜುಷಾ ನಿಯೋಗಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಆಗಿದ್ದು, ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಸೀಲಿಂಗ್ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇಂದು ಅವರ ಶವವು ಪಟುಲಿ ಪ್ರದೇಶದಲ್ಲಿರುವ ನಿವಾಸದ ಮಂಜುಷಾ ಕೊಠಡಿಯಲ್ಲಿ ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

    ಈ ಸಾವಿಗೆ ಇವರ ಆಪ್ತ ಸ್ನೇಹಿತೆ ಬಿದಿಶಾ ಡಿ ಮಂಜುನಾಥ್ ಅವರ ಸಾವೇ ಕಾರಣ ಎಂದಿದ್ದಾರೆ ಮಂಜುಷಾ ಪೋಷಕರು. ಆಪ್ತ ಸ್ನೇಹಿತೆ ಬಿದಿಶಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ, ಮಂಜುಷಾ ಖಿನ್ನತೆಗೆ ಒಳಗಾಗಿದ್ದರಂತೆ. ಈ ಖಿನ್ನತೆಯೇ ಸಾವಿಗೆ ಕಾರಣವಾಗಿದೆ ಎಂದು ಮಂಜುಷಾ ತಾಯಿ ತಿಳಿಸಿದ್ದಾರೆ. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ

    ನನ್ನ ಮಗಳು ಯಾವಾಗಲೂ ಬಿದಿಶಾ ಬಗ್ಗೆಯೇ ಮಾತನಾಡುತ್ತಿದ್ದಳು. ಇದ್ದರೆ ಅವಳಂತೆಯೇ ಇರಬೇಕು ಎಂದು ಹೇಳುತ್ತಿದ್ದಳು. ಇಬ್ಬರೂ ಜೀವದ ಗೆಳೆತಿಯರಂತೆ ಬದುಕುತ್ತಿದ್ದರು. ಈ ಗೆಳೆತನವೇ ನನ್ನ ಮಗಳ ಸಾವಿಗೆ ಕಾರಣವಾಗಿದೆ ಎಂದಿದ್ದಾರೆ ಪೋಷಕರು.

    ಮೊನ್ನೆಯಷ್ಟೇ ತಮ್ಮ ಅಪಾರ್ಟಮೆಂಟ್ ನಲ್ಲಿ ಬಿದಿಶಾ ಡಿ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದರು. 21 ವರ್ಷದ ಈ ನಟಿ ಕಂ ಮಾಡೆಲ್ ಸಾವಿಗೆ ಇಡೀ ಮಾಡೆಲಿಂಗ್ ಜಗತ್ತು ಕಂಬನಿ ಮಿಡಿದಿತ್ತು. ಇದೀಗ ಮತ್ತೋರ್ವ ಮಾಡೆಲ್ ಅನ್ನು ಆ ಕ್ಷೇತ್ರ ಕಳೆದುಕೊಂಡಿದೆ. ಇಪ್ಪತ್ತು ದಿನಗಳ ಅಂತರದಲ್ಲಿ ಒಟ್ಟು ಐದು ಮಾಡೆಲ್ ಗಳು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಮಾಡೆಲಿಂಗ್ ಕ್ಷೇತ್ರಕ್ಕೆ ಶಾಕ್ ನೀಡಿದ್ದಾರೆ.

  • ಮಾಡೆಲಿಂಗ್‍ನ್ನು ವೃತ್ತಿ ಮಾಡಿಕೊಂಡಿದ್ದಕ್ಕೆ ಸಹೋದರಿಯನ್ನೇ ಹತ್ಯೆಗೈದ ಸಹೋದರ

    ಮಾಡೆಲಿಂಗ್‍ನ್ನು ವೃತ್ತಿ ಮಾಡಿಕೊಂಡಿದ್ದಕ್ಕೆ ಸಹೋದರಿಯನ್ನೇ ಹತ್ಯೆಗೈದ ಸಹೋದರ

    ಇಸ್ಲಾಮಾಬಾದ್: ನೃತ್ಯ ಹಾಗೂ ಮಾಡೆಲಿಂಗ್‍ನ್ನು ವೃತ್ತಿಜೀವನವಾಗಿ ಮುಂದುವರಿಸಿದ್ದ ಯುವತಿಯನ್ನು ಆಕೆಯ ಸಹೋದರನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

    ರೆನಾಲಾ ಖುರ್ದ್ ಒಕಾರಾ ಮೂಲದ ಸಿದ್ರಾ (21) ಮೃತ ಯುವತಿ ಹಾಗೂ ಹಮ್ಜಾ ಬಂಧಿತ ಆರೋಪಿ. ಸಿದ್ರಾ ಸ್ಥಳೀಯ ಬಟ್ಟೆ ಬ್ರ್ಯಾಂಡ್‍ಗಾಗಿ ಮಾಡೆಲಿಂಗ್ ಮಾಡುತ್ತಿದ್ದಳು. ಅಷ್ಟೇ ಅಲ್ಲದೇ ಫೈಸಲಾಬಾದ್ ನಗರದ ಚಿತ್ರಮಂದಿರಗಳಲ್ಲಿ ನೃತ್ಯ ಮಾಡುತ್ತಿದ್ದಳು. ಆದರೆ ಇದಕ್ಕೆ ಅವಳ ಕುಟುಂಬದವರು ವಿರೋಧಿಸಿದ್ದರು. ಸಿದ್ರಾಳ ಕುಟುಂಬದವರು ಮಾಡೆಲಿಂಗ್ ಹಾಗೂ ನೃತ್ಯ ಸಂಪ್ರದಾಯದ ವಿರುದ್ಧವಾಗಿದೆ. ಇದರಿಂದಾಗಿ ವೃತ್ತಿ ತೊರೆಯುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು. ಆದರೂ ಅವಳು ಮನೆಯವರ ವಿರೋಧದ ನಡುವೆಯೂ ವೃತ್ತಿಯನ್ನು ಮುಂದುವರಿಸಿದ್ದಳು.

    crime

    ಕಳೆದ ವಾರ ಸಿದ್ರಾ ತನ್ನ ಕುಟುಂಬದವರೊಂದಿಗೆ ಈದ್ ಆಚರಿಸಲು ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ವೃತ್ತಿ ಬದಲಿಸಬೇಕು. ಇದು ಕುಟುಂಬದ ಮರ್ಯಾದೆಯ ಪ್ರಶ್ನೆ ಎಂದು ಸಿದ್ರಾಳಿಗೆ ಕುಟುಂಬದವರು ತಿಳಿಸಿದ್ದರು. ಇದರಿಂದಾಗಿ ಮನೆಯಲ್ಲಿ ದೊಡ್ಡ ಜಗಳವೇ ನಡೆದಿತ್ತು. ಅಷ್ಟೆ ಅಲ್ಲದೇ ಈ ಜಗಳ ತಾರಕಕ್ಕೆ ಏರಿದ್ದು, ಕುಟುಂಬದವರು ಅವಳನ್ನು ಥಳಿಸಿದ್ದರು. ಇದನ್ನೂ ಓದಿ:  ಬಿಜೆಪಿಯವರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡ್ತಿದ್ದಾರೆ: ಪ್ರಿಯಾಂಕ್ ಖರ್ಗೆ

    ಇದಾದ ಸ್ವಲ್ಪ ದಿನಗಳ ಬಳಿಕ ಸಿದ್ರಾಳ ಸಹೋದರ ಹಮ್ಜಾ ಮೊಬೈಲ್‍ನಲ್ಲಿ ನೃತ್ಯ ಪ್ರದೇಶವನ್ನು ಬೇರೆಯವರಿಗೆ ಕಳಿಸಿದ್ದನ್ನು ನೋಡಿ ಕೋಪಗೊಂಡಿದ್ದಾನೆ. ಆವೇಶದಲ್ಲಿ ಅವಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಮ್ಜಾನ್ನು ಬಂಧಿಸಿದ್ದಾರೆ.

    KILLING CRIME

    ಈ ಬಗ್ಗೆ ಪೊಲೀಸ್ ಅಧಿಕಾರಿ ಫ್ರಾಝ್ ಹಮೀದ್ ಮಾತನಾಡಿ, ಸಿಂದ್ರಾ ಅವಳು ಸಂಬಂಧಿಕರೊಬ್ಬರಿಗೆ ನೃತ್ಯ ಪ್ರದರ್ಶನವನ್ನು ಕಳಿಸಿದ್ದನ್ನು ನೋಡಿ ಹಮ್ಜಾ ಕೋಪಗೊಂಡಿದ್ದ. ಕೋಪದ ಭರದಲ್ಲಿ ತನ್ನ ಸಹೋದರಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಯೂಬಾದ ಹೆಸರಾಂತ ಹೋಟೆಲ್‌ನಲ್ಲಿ ಭೀಕರ ಸ್ಫೋಟ – 22 ಮಂದಿ ಸಾವು

  • ಸೋನಲ್ ಬಣ್ಣದ ಹೆಜ್ಜೆಗೆ ಐದು ವಸಂತದ ಸಂಭ್ರಮ!

    ಸೋನಲ್ ಬಣ್ಣದ ಹೆಜ್ಜೆಗೆ ಐದು ವಸಂತದ ಸಂಭ್ರಮ!

    ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದ ಮೂಲಕವೇ ನಾಯಕಿಯಾಗಿ ಗುರುತಾದವರು ಸೋನಲ್ ಮೊಂತೆರೋ. ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಹಲವಾರು ಪ್ರತಿಭೆಗಳನ್ನು ಕೊಡುಗೆಯಾಗಿ ಕೊಡಮಾಡಿರುವ ಮಂಗಳೂರಿನ ಹುಡುಗಿ ಸೋನಲ್. ಹೊರ ಜಗತ್ತಿನ ಪಾಲಿಗೆ ಪಂಚತಂತ್ರದ ಪ್ರಭೆ ಮಾತ್ರವೇ ಸೋನಲ್ ಸುತ್ತ ಗೋಚರಿಸುತ್ತೆ. ನಟಿಸಿದ ಮೊದಲ ಚಿತ್ರದಿಂದಲೇ ಟೇಕಾಫ್ ಆದ ಬಗ್ಗೆ ಹಲವರಲ್ಲೊಂದು ಅಚ್ಚರಿಯೂ ಇದೆ. ವಾಸ್ತವವಾಗಿ ಮಾಡೆಲಿಂಗ್ ಲೋಕದಿಂದ ತುಳು ಚಿತ್ರರಂಗವನ್ನು ಹಾದು ಬಂದು ಕನ್ನಡದಲ್ಲಿ ನೆಲೆ ಕಂಡುಕೊಂಡಿರುವ ಸೋನಲ್ ಈ ಹಂತ ತಲುಪಿಕೊಳ್ಳಲು ಒಂದಷ್ಟು ಸರ್ಕಸ್ಸು ನಡೆಸಿದ್ದಾರೆ. ಅಷ್ಟೆಲ್ಲ ಪರಿಶ್ರಮ ಮತ್ತು ತುಂಬು ಆಹ್ಲಾದವನ್ನು ಮೆತ್ತಿಕೊಂಡಂತಿರೋ ಸೋನಲ್‍ರ ಬಣ್ಣದ ಹೆಜ್ಜೆಗೀಗ ಭರ್ತಿ ಐದು ವರ್ಷ ತುಂಬಿದೆ.

    ಸೋನಲ್ ಮೊಂತೆರೋ ಈಗ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದಾಗ ತುಳು ಚಿತ್ರಪ್ರೇಮಿಗಳಿಗೆ ಬಿಟ್ಟರೆ ಬೇರೆಲ್ಲರಿಗೂ ಈಕೆ ಅಪರಿಚಿತೆಯಾಗಿದ್ದರು. ಆದರೆ ಅದರಲ್ಲಿನ ಪಾತ್ರ ಮತ್ತು ಅದನ್ನವರು ನಿರ್ವಹಿಸಿದ್ದ ರೀತಿಗಳನ್ನೆಲ್ಲ ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದರು. ಕೆಲವೊಮ್ಮೆ ಕೆಲ ನಟ ನಟಿಯರು ಹಲವಾರು ವರ್ಷಗಳ ಕಾಲ ಸೈಕಲ್ಲು ಹೊಡೆದರೂ ದಕ್ಕಿಸಿಕೊಳ್ಳಲಾಗದಂಥಾ ಗೆಲುವನ್ನು ಸೋನಲ್ ಪಂಚತಂತ್ರದ ಮೂಲಕ ಗಿಟ್ಟಿಸಿಕೊಂಡಿದ್ದರು.

    ಇದೊಂದೇ ಸಿನಿಮಾದ ನಂತರದಲ್ಲಿ ಅವರು ಪಡೆದುಕೊಳ್ಳುತ್ತಾ ಸಾಗಿ ಬರುತ್ತಿರೋ ಅವಕಾಶಗಳನ್ನು ಕಂಡರೆ ಯಾರೇ ಆದರೂ ಚಕಿತರಾಗುವಂತಿದೆ. ಯಾಕೆಂದರೆ, ದೊಡ್ಡ ಸಿನಿಮಾಗಳಲ್ಲಿ, ಸ್ಟಾರ್ ನಟರ ಜೊತೆ ನಟಿಸೋ ಅವಕಾಶಗಳನ್ನು ಸೋನಲ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿಯೂ ಅವರು ನಾಯಕಿಯರಲ್ಲೊಬ್ಬರಾಗಿದ್ದಾರೆ. ಅದೇ ಹೊತ್ತಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಬುದ್ಧಿವಂತ-2 ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಪರಭಾಷೆಗಳಿಂದಲೂ ಕೂಡಾ ಸೋನಲ್‍ಗೆ ಬಿಗ್ ಆಫರ್‌ಗಳು ಬರಲಾರಂಭಿಸಿವೆ. ಇಂಥಾದ್ದೊಂದು ಸಂಕ್ರಮಣ ಕಾಲದಲ್ಲಿಯೇ ತಮ್ಮ ಸಿನಿಮಾ ಯಾನಕ್ಕೆ ಐದು ವರ್ಷ ತುಂಬಿದ ಖುಷಿಯೂ ಅವರನ್ನಾವರಿಸಿಕೊಂಡಿದೆ.

    ಮಂಗಳೂರಿನ ಚೆಲುವೆ ಸೋನಲ್ ಮೊಂತೇರೋ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದೇ ಮಾಡೆಲಿಂಗ್ ಲೋಕದ ಮುಖಾಂತರ. ಮಂಗಳೂರು ಮಂದಿಗೆ ಯಕ್ಷಗಾನ, ನಾಟಕ ಮತ್ತು ಸಿನಿಮಾ ಗೀಳು ಇದ್ದೇ ಇರುತ್ತದೆ. ಅಂಥಾ ವಾತಾವರಣದಲ್ಲಿಯೇ ಬೆಳೆದು ಬಂದಿದ್ದ ಸೋನಲ್ ಮನಸು ಕಲಿಕೆಯ ದಿನಗಳಲ್ಲಿಯೇ ಬಣ್ಣದ ಲೋಕದತ್ತ ವಾಲಿಕೊಂಡಿತ್ತು. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದವರು ತುಳುವಿನ ಚಿತ್ರದಲ್ಲಿ ನಾಯಕಿಯಾಗೋ ಅವಕಾಶ ಪಡೆದುಕೊಂಡಿದ್ದರು. ಆ ಮೊದಲ ಚಿತ್ರವೇ ನೂರು ದಿನ ಯಶಸ್ವೀ ಪ್ರದರ್ಶನ ಕಾಣುವ ಮೂಲಕ ತುಳು ನಾಡಿನ ತುಂಬ ಸೋನಲ್ ಹೆಸರುವಾಸಿಯಾಗಿದ್ದರು.

    ಆ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸಬೇಕೆಂಬುದು ಸೋನಲ್ ಅವರ ಮಹಾ ಕನಸಾಗಿತ್ತು. ಅದೇ ಗುಂಗಿನಲ್ಲಿ ಚಿತ್ರರಂಗದೊಳಕ್ಕೆ ಪ್ರವೇಶ ಪಡೆಯಲು ಪ್ರಯತ್ನಿಸಿದರೂ ಆರಂಭದಲ್ಲಿ ದೊರೆತದ್ದು ಸಣ್ಣ ಪುಟ್ಟ ಅವಕಾಶಗಳು ಮಾತ್ರ. ಅದರ ನಡುವೆಯೂ ಅಭಿಸಾರಿಕೆ, ಎಂಎಲ್‍ಎ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರಾದರೂ ಹೇಳಿಕೊಳ್ಳುವಂಥ ಗೆಲುವೇನೂ ಸಿಕ್ಕಿರಲಿಲ್ಲ. ಆದರೆ ಒಂದಷ್ಟು ಕಾಲದ ಸರ್ಕಸ್ಸುಗಳೆಲ್ಲವೂ ಸಾರ್ಥಕವಾಗುವಂಥ ಗೆಲುವನ್ನು ಪಂಚತಂತ್ರ ತಂದುಕೊಟ್ಟಿದೆ. ಸದ್ಯ ಲಾಕ್‍ಡೌನ್ ಸಮಯವನ್ನು ಬಹು ಕಾಲದ ನಂತರ ಕುಟುಂಬಿಕರ ಜೊತೆ ಕಳೆಯುತ್ತಿರೋ ಸೋನಲ್ ಅದರ ನಡುವೆಯೇ ಮುಂದಿನ ಸಿನಿಮಾಗಳಿಗೆ ತಯಾರಿ ನಡೆಸುತ್ತಿದ್ದಾರೆ. ಈ ಔದರ ಸಂಭ್ರಮವನ್ನವರು ಮುಂದಿನ ದಿನಗಳಲ್ಲಿ ಮತ್ತೊಂದಷ್ಟು ಚಿತ್ರಗಳೊಂದಿಗೆ ಸಂಪನ್ನಗೊಳಿಸಿಕೊಳ್ಳಲಿದ್ದಾರೆ.

  • ಬಿಕಿನಿ ಧರಿಸಿ ಕುಟುಂಬಸ್ಥರಿಂದ ದೂರವಾದ ನಟಿ

    ಬಿಕಿನಿ ಧರಿಸಿ ಕುಟುಂಬಸ್ಥರಿಂದ ದೂರವಾದ ನಟಿ

    ಮುಂಬೈ: ಅಂಜುಮ್ ಫಕೀಹ ಹಿಂದಿ ಕಿರುತೆರೆಯಲ್ಲಿ ಪರಿಚಿತ ಹೆಸರು. ಸಾಲು ಸಾಲು ಧಾರಾವಾಹಿಗಳ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಅಂಜುಮ್ ಬಿಕಿನಿ ಧರಿಸಿ ಕ್ಯಾಟ್ ವಾಕ್ ಮಾಡಿದ್ದಕ್ಕೆ ಕುಟುಂಬಸ್ಥರಿಂದ ದೂರವಾಗಿದ್ದಾರೆ.

    ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅಂಜುಮ್ ತಮ್ಮ ನೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇಂದು ನನ್ನ ಬಳಿ ಹಣ, ಕಾರು, ಮನೆ ಎಲ್ಲವೂ ಇದೆ. ನನಗೆ ಎಲ್ಲವನ್ನು ನೀಡಿದ ಈ ವೃತ್ತಿಯೇ ನನ್ನನ್ನು ನನ್ನವರಿಂದ ದೂರ ಮಾಡಿದೆ ಎಂದು ಅಂಜುಮ್ ಬೇಸರ ವ್ಯಕ್ತಪಡಿಸುತ್ತಾರೆ.

    ಮಹಾರಾಷ್ಟ್ರದ ರತ್ನಗಿರಿಯ ಮುಸ್ಲಿಂ ಸಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಅಂಜುಮ್, ಇಂದು ಬಣ್ಣದ ಲೋಕದಿಂದಾಗಿ ಮನೆಯವರಿಂದ ದೂರವಾಗಿದ್ದಾರೆ. ಆರಂಭದಲ್ಲಿ ಅಂಜುಮ್ ಮನೆಯಲ್ಲಿ ಟಿವಿ ಸಹ ಇರಲಿಲ್ಲ. ಮಗಳು 15 ವರ್ಷದವಳಾದಾಗ ತಂದೆ ಮನೆಗೆ ಟಿವಿ ತಂದಿದ್ದಾರೆ. ಇದರಿಂದ ಕೋಪಗೊಂಡ ಅಜ್ಜ ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದ್ದರಂತೆ. ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ಅಂಜುಮ್ ಮುಂದಾದಾಗ ಕುಟುಂಬಸ್ಥರು ವಿರೋಧಿಸಿದ್ದಾರೆ. ವಿರೋಧದ ನಡುವೆಯೂ ಮನೆಯಿಂದ ಹೊರ ಬಂದ ಅಂಜುಮ್ ಆರಂಭದ ದಿನಗಳಲ್ಲಿ ಮುಂಬೈನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು.

    ತನಗೆ ಮೊದಲ ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶ ಸಿಕ್ಕಾಗ ಬಿಕಿನಿ ಧರಿಸಿ ಕ್ಯಾಟ್ ವಾಕ್ ಮಾಡಿದೆ. ಅಂದಿನಿಂದ ಸಂಪೂರ್ಣವಾಗಿ ನಾನು ಕುಟುಂಬದಿಂದ ದೂರವಾಗಿದ್ದೇನೆ. ಈ ಹಿಂದೆ ಇದೇ ಮುಂಬೈನಲ್ಲಿ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದ ನನಗೆ ಬಣ್ಣದ ಲೋಕ ಒಂದು ಗುರುತು ನೀಡಿದೆ. ಜನರು ಇಂದು ನನ್ನನ್ನು ಗುರುತಿಸುತ್ತಿದ್ದಾರೆ ಎಂದು ಅಂಜುಮ್ ಸಂದರ್ಶನದಲ್ಲಿ ಹೇಳಿದ್ದಾರೆ.

  • ವಯಸ್ಸು ಅರವತ್ತಾದರೂ ಸೂಪರ್ ಮಾಡೆಲ್- ದಿನೇಶ್ ಮೋಹನ್ ಫಿಟ್‍ನೆಸ್‍ಗೆ ಎಲ್ಲರೂ ಫಿದಾ

    ವಯಸ್ಸು ಅರವತ್ತಾದರೂ ಸೂಪರ್ ಮಾಡೆಲ್- ದಿನೇಶ್ ಮೋಹನ್ ಫಿಟ್‍ನೆಸ್‍ಗೆ ಎಲ್ಲರೂ ಫಿದಾ

    ಚಂಡೀಗಢ್: ವಯಸ್ಸು ಅರವತ್ತಾದರೂ ಯುವ ಮಾಡೆಲ್‍ಗಳೇ ನಾಚುವಂತೆ ಮಾಡೆಲಿಂಗ್ ಕ್ಷೇತ್ರದಲ್ಲಿ ಹರ್ಯಾಣದ ದಿನೇಶ್ ಮೋಹನ್ ಮಿಂಚುತ್ತಿದ್ದಾರೆ. ಸರ್ಕಾರಿ ಉದೋಗ್ಯದಲ್ಲಿದ್ದವರು ಈಗ ಸೂಪರ್ ಮಾಡೆಲ್ ಆಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.

    60ರ ವಯಸ್ಸಿನಲ್ಲೂ ಕಟ್ಟುಮಸ್ತಾಗಿ ದೇಹ ಮಾಡಿಕೊಂಡಿರುವ ಸೂಪರ್ ಮಾಡೆಲ್ ದಿನೇಶ್ ಮೋಹನ್ ಈಗ ಎಲ್ಲರ ಗಮನ ಸೆಳೆದಿದ್ದಾರೆ. ಈ ಹಿಂದೆ ದಿನೇಶ್ ಮೋಹನ್ ಹರ್ಯಾಣ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಕೆಲಸ ಒತ್ತಡದಿಂದ ಹಾಗೂ ಸರಿಯಾಗಿ ಆರೋಗ್ಯ ನೋಡಿಕೊಳ್ಳದ ಕಾರಣಕ್ಕೆ ಅತಿಯಾದ ದಪ್ಪವಾಗಿ ಹಾಸಿಗೆ ಹಿಡಿದಿದ್ದರು.

    ಬಳಿಕ ವೈದ್ಯರ ಸಲಹೆ ಪಡೆದು ಆರೋಗ್ಯವನ್ನು ಚೇತರಿಸಿಕೊಂಡು, ದಢೂತಿ ದೇಹವನ್ನು ಇಳಿಸಿಕೊಂಡರು. ಬರೋಬ್ಬರಿ 50 ಕೆ.ಜಿ. ತೂಕ ಕಡಿಮೆ ಮಾಡಿಕೊಂಡರು. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿ ಸಾಕಾಗಿ, ತಮಗೆ ಇಷ್ಟವಾಗಿದನ್ನ ಮಾಡಬೇಕೆಂದು ನಿರ್ಧಾರ ಮಾಡಿದರು. ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅವರು 2016ರಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಹೊಸ ಜರ್ನಿ ಶುರು ಮಾಡಿದರು.

    ಅಂದಿನಿಂದ ಉತ್ತಮ ಆರೋಗ್ಯ, ಕಟ್ಟುಮಸ್ತಾದ ದೇಹವನ್ನು ಮಾಡಿಕೊಂಡು ಸೂಪರ್ ಮಾಡೆಲ್ ಆದರು. ಹಲವು ರ್ಯಾಂಪ್ ವಾಕ್, ಫೋಟೋಶೂಟ್‍ನಲ್ಲಿ ಮಿಂಚಿ ಹೆಸರು ಮಾಡಿದರು. ಸದ್ಯ ಇಳಿ ವಯಸ್ಸಿನಲ್ಲೂ ತಮ್ಮ ಖಡಕ್ ಲುಕ್ ಮೂಲಕ ದಿನೇಶ್ ಅವರು ಎಲ್ಲರ ಮನ ಗೆದ್ದಿದ್ದಾರೆ. ಯುವ ಮಾಡೆಲ್‍ಗಳೇ ನಾಚುವಂತೆ ರ್ಯಾಂಪ್ ವಾಕ್‍ನಲ್ಲಿ ಮಿಂಚಿ ಎಲ್ಲರ ಫೆವರೆಟ್ ಆಗಿಬಿಟ್ಟಿದ್ದಾರೆ.

    ಇವರು ಕೇವಲ ಯುವಕರಿಗೆ ಮಾತ್ರವಲ್ಲ ವಯಸ್ಸಾದವರಿಗೂ ಕೂಡ ಮಾದರಿಯಾಗಿದ್ದಾರೆ. ಯಾವ ವಯಸ್ಸಿನಲ್ಲಿ ಬೇಕಿದ್ದರೂ ಫಿಟ್‍ನೆಸ್ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಮನೋಬಲ ದೃಢವಾಗಿದ್ದರೆ ವಯಸ್ಸು ಲೆಕ್ಕಕ್ಕೆ ಬರಲ್ಲ, ನಾವು ಅಂದುಕೊಂಡಿರುವುದನ್ನು ಸಾಧಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

  • ‘ಮಿಸ್ಸಿಂಗ್ ಬಾಯ್’ ಜೋಡಿಯಾದವಳು ಮಲೆಯಾಳಿ ಕನ್ಯೆ!

    ‘ಮಿಸ್ಸಿಂಗ್ ಬಾಯ್’ ಜೋಡಿಯಾದವಳು ಮಲೆಯಾಳಿ ಕನ್ಯೆ!

    ಬೆಂಗಳೂರು: ರಘುರಾಮ್ ಯಾವ ಚಿತ್ರ ಮಾಡಿದರೂ ಪ್ರತೀ ಪಾತ್ರವನ್ನೂ ಕಾಡುವಂತೆ, ಸದಾ ನೆನಪಿಟ್ಟುಕೊಳ್ಳುವಂತೆ ರೂಪಿಸುತ್ತಾರೆ. ಅವರೊಂದು ಚಿತ್ರ ಮಾಡುತ್ತಾರೆಂದಾಕ್ಷಣವೇ ಜನ ಕಾತರಗೊಳ್ಳುವುದೂ ಈ ಕಾರಣದಿಂದಲೇ. ಹಾಗಿದ್ದ ಮೇಲೆ ಈ ಸಿನಿಮಾದ ಕೇಂದ್ರ ಬಿಂದುವಿನಂತಿರೋ ನಾಯಕಿಯ ಪಾತ್ರವನ್ನೂ ಅವರು ಅಷ್ಟೇ ಆಸ್ಥೆಯಿಂದ ರೂಪಿಸಿರುತ್ತಾರೆ. ಇದಕ್ಕಾಗಿ ಭಾರೀ ಹುಡುಕಾಟ ನಡೆಸಿ ಕಡೆಗೂ ಮಲೆಯಾಳಿ ಬೆಡಗಿ, ಮಾಡೆಲ್ ಅರ್ಚನಾ ಜಯಕೃಷ್ಣನ್ ಅವರನ್ನು ಕರೆ ತಂದಿದ್ದಾರೆ!

    ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ಕೇರಳ ಹುಡುಗಿಯ ಆಗಮನವಾದಂತಿದೆ. ಭಾವನಾ ಮೆನನ್, ನಿತ್ಯಾ ಮೆನನ್, ಪಾರ್ವತಿ, ಮೀರಾ ಜಾಸ್ಮಿನ್, ರಮ್ಯಾ ನಂಬೀಶನ್… ಹೀಗೆ ಕನ್ನಡದಲ್ಲಿ ಮಿಂಚಿರೋ ಮಲೆಯಾಳಿ ಹುಡುಗೀರ ಪಟ್ಟಿ ದೊಡ್ಡದಿದೆ. ಇದೀಗ ಆ ಸಾಲಿಗೆ ಅರ್ಚನಾ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

    ಅರ್ಚನಾ ಮೂಲತಃ ಮಾಡೆಲ್. ಇದರೊಂದಿಗೇ ಒಂದಷ್ಟು ಮಲೆಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದ ಅವರು ಸದ್ಯಕ್ಕೆ ಬೆಂಗಳೂರಿನಲ್ಲಿಯೇ ನೆಲೆ ನಿಂತಿದ್ದಾರೆ. ಮಾಡೆಲಿಂಗನ್ನು ಪ್ರಧಾನವಾಗಿ ಪರಿಗಣಿಸಿದ್ದಾರೆ. ಇಂಥಾ ಅರ್ಚನಾ ಮಿಸ್ಸಿಂಗ್ ಬಾಯ್ ಚಿತ್ರದ ನಿರ್ಮಾಪಕರಿಗೆ ಪರಿಚಿತೆಯಾಗಿದ್ದವರು. ಆ ಕಾರಣದಿಂದಲೇ ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ. ಮಿಸ್ಸಿಂಗ್ ಬಾಯ್ ಮೂಲಕ ಅರ್ಚನಾ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ನೆಲೆ ನಿಲ್ಲೋ ಸೂಚನೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಾಡೆಲಿಂಗ್ ಕ್ಷೇತ್ರದಲ್ಲಿ 4 ವರ್ಷದ ಕನ್ನಡ ಪೋರನ ಕಮಾಲ್

    ಮಾಡೆಲಿಂಗ್ ಕ್ಷೇತ್ರದಲ್ಲಿ 4 ವರ್ಷದ ಕನ್ನಡ ಪೋರನ ಕಮಾಲ್

    ಬೆಂಗಳೂರು: ನಗರದ ನಾಲ್ಕು ವರ್ಷದ ಪುಟ್ಟ ಪೋರನ ಮಾಡೆಲಿಂಗ್ ಕ್ಷೇತ್ರದಲ್ಲಿನ ಸಾಧನೆ ಇಂದು ಅಂತರಾಷ್ಟ್ರೀಯ ಮಟ್ಟ ತಲುಪಿದೆ.

    ನಗರದ ನಿವಾಸಿಯಾದ ನಿಶಾಂತ್ ಮತ್ತು ನಿಕ್ಕು ದಂಪತಿಯ ನಾಲ್ಕು ವರ್ಷದ ಪುತ್ರ ನಿಲ್ ಎಲ್‍ಕೆಜಿ ಓದುತ್ತಿದ್ದು ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾನೆ.

    ಮಾಡೆಲಿಂಗ್‍ನಲ್ಲಿ ಚಿಕ್ಕ ಬಾಲಕರಿಗಾಗಿ ಜೂನಿಯರ್ ಮಾಡೆಲಿಂಗ್ ಸ್ಫರ್ಧೆ ಇದೆ. ಕಳೆದ ತಿಂಗಳು ಕೇರಳದ ಕ್ಯಾಲಿಕ್ಯಾಟ್‍ನಲ್ಲಿ ನಡೆದ ಜ್ಯೂನಿಯರ್ ಮಾಡೆಲ್ ಇಂಟರ್ ನ್ಯಾಷನಲ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಮೆಡಲ್ ಪಡೆದಿದ್ದಾನೆ. ಇನ್ನೂ 2015-16 ನೇ ಸಾಲಿನಲ್ಲಿ ನಡೆದ ಜ್ಯೂನಿಯರ್ ಮಾಡೆಲ್ ಇಂಟರ್ ನ್ಯಾಷನಲ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದು ಈ ಬಾರಿಯ ಸ್ಪರ್ಧೆಯಲ್ಲಿ ವಿಜೇತನಾಗಿದ್ದಾನೆ.

    ಓದಿನ ಜೊತೆಗೆ ಪೋರನ ಫ್ಯಾಶನ್ ಪ್ರೀತಿ ಕಂಡು ತಾಯಿ ಮಾಡೆಲಿಂಗ್ ಕ್ಷೇತ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಕಮಾಲ್ ಮಾಡಿದ ಪೋರ ಎರಡು ಬಾರಿ ಹ್ಯಾಂಡ್ಸಮ್ ಮಾಡೆಲ್ ಪ್ರಶಸ್ತಿ ಪಡೆದಿದ್ದಾನೆ. ಮುಂದಿನ ಜುಲೈ ತಿಂಗಳಲ್ಲಿ ಥೈಲ್ಯಾಂಡ್‍ನಲ್ಲಿ ನಡೆಯೋ ಲಿಟಲ್ ಪ್ರಿನ್ಸ್ ಅಂಡ್ ಪ್ರಿನ್ಸಸ್ ವರ್ಲ್ಡ್ ಫೀನಾಲೆಗೆ ಆಯ್ಕೆಯಾಗಿದ್ದಾನೆ.

    ನಾಲ್ಕು ವರ್ಷಕ್ಕೆ ಅಂತರರಾಷ್ಟ್ರೀಯ ಮಟ್ಟದವರೆಗೂ ಗುರುತಿಸಿಕೊಂಡಿರುವ ನಿಲ್ ಮುಂದಿನ ಜುಲೈ ತಿಂಗಳಲ್ಲಿ ಥೈಲ್ಯಾಂಡ್ ಅಲ್ಲಿ ನಡೆಯೋ ಮಾಡೆಲಿಂಗ್ ಸ್ಫರ್ಧೆಯಲ್ಲಿ ಜಯಗಳಿಸಲಿ ಎಂದು ಆಶಿಸೋಣ.