Tag: ಮಾಡಾಳ್ ವರೀಪಾಕ್ಷಪ್ಪ

  • ಮಾಡಾಳ್ ಭ್ರಷ್ಟಾಚಾರ ಪಕ್ಷಕ್ಕೆ ಮುಜುಗರ; ಆರೋಪಿಗಳ ಪರ ಜೈಕಾರ ಹಾಕೋದು ಡಿಕೆಶಿ ಸಂಸ್ಕೃತಿ – ಸಿ.ಟಿ ರವಿ

    ಮಾಡಾಳ್ ಭ್ರಷ್ಟಾಚಾರ ಪಕ್ಷಕ್ಕೆ ಮುಜುಗರ; ಆರೋಪಿಗಳ ಪರ ಜೈಕಾರ ಹಾಕೋದು ಡಿಕೆಶಿ ಸಂಸ್ಕೃತಿ – ಸಿ.ಟಿ ರವಿ

    ಯಾದಗಿರಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Maadal Virupakshappa) ಭ್ರಷ್ಟಾಚಾರ ಪ್ರಕರಣ ನಮ್ಮ ಪಕ್ಷಕ್ಕೆ ಮುಜುಗರ ತಂದಿದೆ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಬೇಸರ ವ್ಯಕ್ತಪಡಿಸಿದ್ದಾರೆ.

    ಯಾದಗಿರಿಯ ಶಹಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡ್ತಿದೆ. ಯಾರನ್ನೂ ರಕ್ಷಿಸುವ ಅಥವಾ ಟಾರ್ಗೆಟ್ ಮಾಡೋ ಕೆಲಸ ಮಾಡಲ್ಲ. ಇದೇ ಪರಿಸ್ಥಿತಿ ಕಾಂಗ್ರೆಸ್ (Congress) ಶಾಸಕರಿಗೆ ಆಗಿದ್ದರೆ ಇ.ಡಿ, ಐಟಿ, ಸಿಬಿಐ (CBI) ಆಯ್ತು ಈಗ ಲೋಕಾಯುಕ್ತಗೂ ಛೂ ಬಿಟ್ಟಿದ್ದಾರೆ ಅಂತಿದ್ರು. ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಅನುಭವಿಸ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಮಾಡಾಳ್‌ ಮನೆಗೆ ವಾಪಸ್‌ – ತೆರೆದ ವಾಹನದಲ್ಲಿ ಮೆರವಣಿಗೆ

    KSDL Corruption Case BJP MLA Madal Virupakshappa returns home

    ಮಾಡಾಳ್ ಅಂತಹವರ ಪರ ಜೈಕಾರ ಹಾಕಿ ಸಂಭ್ರಮಿಸೋದು ನಮ್ಮ ಪಕ್ಷದ ಸಂಸ್ಕೃತಿ ಅಲ್ಲ. ಅದು ಡಿಕೆ ಶಿವಕುಮಾರ್ (DK Shivakumar), ಕಾಂಗ್ರೆಸ್ ಸಂಸ್ಕೃತಿ, ಅದನ್ನ ಯಾರೂ ಅನುಸರಿಸಬಾರದು. ಡಿಕೆಶಿ ಜೈಲಿನಿಂದ ಹೊರ ಬಂದಾಗ ಅವರ ಬೆಂಬಲಿಗರು ಈ ರೀತಿ ಸಂಭ್ರಮಿಸಿದ್ದರು. ಆ ರೀತಿ ವೈಭವಿಕರಿಸೋದು ತಪ್ಪು. ಅದನ್ನ ಯಾರೂ ಮಾಡಬಾರದು ಎಂದು ಪಕ್ಷದ ಕಾರ್ಯಕರ್ತರಿಗೆ ಹಾಗೂ ಮಾಡಾಳ್ ಬೆಂಬಲಿಗರಿಗೆ ಖಡಕ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಪಾಕ್ ಇತಿಹಾಸ ಪುಸ್ತಕಗಳಲ್ಲಿ ಭಾರತ, ಹಿಂದೂ ವಿರೋಧಿ ನಿಲುವು – ಪಠ್ಯದಲ್ಲಿ ಗಾಂಧಿ ಹಿಂದೂ ನಾಯಕ ಎಂದು ಪರಿಚಯ

    Congress 1

    ಸಂಸದೆ ಸುಮಲತಾ (Sumalatha) ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಅದಕ್ಕಿನ್ನೂ 24 ಗಂಟೆ ಸಮಯವಿದೆ. ಗೊತ್ತಿಲ್ಲದ ಮಾಹಿತಿಯ ಬಗ್ಗೆ ನಾನು ಹ್ಹಾ ಅಂತಾನೂ ಹೇಳಲ್ಲ, ಹೂ ಅಂತಾನೂ ಹೇಳಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಸಾಮರ್ಥ್ಯ ಇರುತ್ತೆ. ಸಾಮರ್ಥ್ಯ ಇದ್ದವರು ಸೇರಿದಾಗ ಪಕ್ಷಕ್ಕೆ ಸಹಾಯ ಆಗುತ್ತೆ ಎಂದ ಅವರು, ಸೋಮಣ್ಣ ಪಕ್ಷ ಬಿಡ್ತಾರೆ ಅನ್ನೋದು ಊಹಾಪೋಹ. ಅದಕ್ಕೆ ನಾನು ಉತ್ತರಿಸಲ್ಲ ಎಂದು ಜಾರಿಕೊಂಡರು.