Tag: ಮಾಟಗಾತಿ

  • ಮಾಟಗಾತಿಯೆಂದು 70ರ ವಿಧವೆಯನ್ನು ಬಡಿದು ಕೊಂದ್ರು!

    ಮಾಟಗಾತಿಯೆಂದು 70ರ ವಿಧವೆಯನ್ನು ಬಡಿದು ಕೊಂದ್ರು!

    ಜೈಪುರ: 70 ವರ್ಷದ ವಿಧವೆಯೊಬ್ಬರನ್ನು ಪಕ್ಕದ ಮನೆಯವರೇ ಹೊಡೆದು ಕೊಂದ ಘಟನೆ ರಾಜಸ್ಥಾನದ ಉದಯ್ ಪುರ ಜಿಲ್ಲೆಯಲ್ಲಿ ನಡೆದಿದೆ.

    ಮೃತ ವಿಧವೆಯನ್ನು ಚಂಪಾ ದೇವಿ ಎಂಬುವುದಾಗಿ ಗುರುತಿಸಲಾಗಿದ್ದು, ಮಾಟಗಾತಿ ಎಂದು ಆರೋಪಿಸಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಚಂಪಾ ದೇವಿ ಹಲಿ ಘಟಿ ಗ್ರಾಮದಲ್ಲಿ ಭಾನುವಾರ ಎಂದಿನಂತೆ ತನ್ನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪಕ್ಕದ ಮನೆಯವರು ಬಂದು ಆಕೆಯನ್ನು ನಿಂದಿಸಿ, ಕೋಲುಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.

    ತಮ್ಮ ಪುತ್ರನ ಮೇಲೆ ಆಕೆ ಮಾಟ ಪ್ರಯೋಗಿಸಿದ ಕಾರಣ ಆತ ಅನಾರೋಗ್ಯಕ್ಕೀಡಾಗಿದ್ದು ಎಂದು ಶಂಕಿಸಿ ರೊಚ್ಚಿಗೆದ್ದ ಕುಟುಂಬ ಈ ಕೃತ್ಯ ಎಸಗಿದೆಯೆಂದು ಪೊಲೀಸರು ಹೇಳಿದ್ದಾರೆ. ಸದ್ಯ ಮೃತಳ ಪುತ್ರ ಮೋಹನ್ ಲಾಲ್ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂಬುವುದಾಗಿ ಹಿರಿಯ ಪೊಲೀಸ್ ಅಧಿಕಾರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ರಾಜ್ಯದಲ್ಲಿ ಮಾಟಮಂತ್ರ ಮುಂತಾದವುಗಳನ್ನು ತಡೆಯುವ ನಿಟ್ಟಿನಲ್ಲಿ ಚಿತ್ತೋರ್ ಘರ್ ಹಾಗೂ ಭಿಲ್ವಾರ ಜಿಲ್ಲೆಯ ಕೆಲ ಪ್ರದೇಶಗಳಿಂದ ಕಳೆದೆರಡು ದಿನಗಳಿಂದ ಏಳು ಮಂದಿ ಮಾಟಗಾರರನ್ನು ಬಂಧಿಸಲಾಗಿದೆ.

  • ಹೈದ್ರಾಬಾದ್‍ನಲ್ಲಿ ಮಾಟಗಾತಿ ಪ್ರತ್ಯಕ್ಷ: ಭಾರತ ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಫೋಟೋ!

    ಹೈದ್ರಾಬಾದ್‍ನಲ್ಲಿ ಮಾಟಗಾತಿ ಪ್ರತ್ಯಕ್ಷ: ಭಾರತ ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಫೋಟೋ!

    ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ಸಾಮಾಜಿಕ ಜಾಲತಾಣದಲ್ಲಿ ಈಗ ಮಾಟಗಾತಿಯ ಫೋಟೋವೊಂದು ವೈರಲ್ ಆಗಿದೆ.

    ಕಟ್ಟಡದ ಗೋಡೆಯಲ್ಲಿ ಮಾಟಗಾತಿ ಕುಳಿತುಕೊಂಡಿದ್ದು, ಈಕೆಯ ಫೋಟೋವನ್ನು ಜನರು ಕ್ಲಿಕ್ಕಿಸುತ್ತಿದ್ದಾರೆ. ಹೈದರಾಬಾದ್‍ನಲ್ಲಿ ಈ ಫೋಟೋ ಕ್ಲಿಕ್ಕಿಸಲಾಗಿದೆ ಎಂದು ಬರೆದು ಜನರು ಶೇರ್ ಮಾಡುತ್ತಿದ್ದಾರೆ.

    ಈ ಫೋಟೋ ಜಾಸ್ತಿ ಈಗ ಶೇರ್ ಆಗಲು ಕಾರಣವಾಗಿದ್ದು ಪಾಕಿಸ್ತಾನದ ಗಾಯಕ ಫಕೀರ್ ಮೊಹಮ್ಮದ್ ಅವರ ಎಫ್‍ಬಿ ಪೋಸ್ಟ್. ಹೈದರಾಬಾದ್‍ನಲ್ಲಿ ಮಾಟಗಾತಿ ಪತ್ತೆಯಾಗಿದ್ದಾಳಂತೆ. ಈ ವಿಚಾರದ ಬಗ್ಗೆ ಯಾರಾದ್ರೂ ಪರಿಶೀಲನೆ ನಡೆಸಬಹುದಾ ಎಂದು ಪ್ರಶ್ನಿಸಿ ಸೋಮವಾರ ಪೋಸ್ಟ್ ಮಾಡಿದ್ದರು. ಈ ಪೋಸ್ಟನ್ನು 932 ಮಂದಿ ಶೇರ್ ಮಾಡಿದ್ದರೆ, 1900 ಮಂದಿ ಕಮೆಂಟ್ ಮಾಡಿದ್ದರು.

    ಈ ಫೋಟೋದ ಮೂಲ ಎಲ್ಲಿ?
    ಈ ಫೋಟೋದ ಮೂಲ ಮೊರಕ್ಕೋ ದೇಶವಾಗಿದ್ದು, ರಾತ್ರಿ ಕಳ್ಳರನ್ನು ಹೆದರಿಸಲು ಕಟ್ಟಡದ ಮೇಲೆ ಮಹಿಳೆಯೊಬ್ಬಳ ಗೊಂಬೆಯನ್ನು ಇರಲಿಸಲಾಗಿತ್ತು. ಈ ಬೊಂಬೆಯನ್ನು ನೋಡಿದ ಜನ ಫೋಟೋ ಕ್ಲಿಕ್ಕಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದೆ.

    ಹೀಗಾಗಿ ವಾಟ್ಸಪ್ ಮತ್ತು ಫೇಸ್‍ಬುಕ್ ನಲ್ಲಿ ಬರುವ ಫೋಟೋಗಳನ್ನು ಶೇರ್ ಮಾಡುವ ಮುನ್ನ ಮೊದಲು ಸ್ವಲ್ಪ ಪರಿಶೀಲಿಸಿ ಬಳಿಕ ಶೇರ್ ಮಾಡಿ.