Tag: ಮಾಝ್

  • ರಿಲಯನ್ಸ್ ಬ್ರ‍್ಯಾಂಡ್ಸ್ ಸಹಯೋಗದೊಂದಿಗೆ ಮಾಝ್‌ನಿಂದ ಭಾರತದಲ್ಲಿ ಮೊದಲ ಮಳಿಗೆ ಶುರು

    ರಿಲಯನ್ಸ್ ಬ್ರ‍್ಯಾಂಡ್ಸ್ ಸಹಯೋಗದೊಂದಿಗೆ ಮಾಝ್‌ನಿಂದ ಭಾರತದಲ್ಲಿ ಮೊದಲ ಮಳಿಗೆ ಶುರು

    ನವದೆಹಲಿ: ಪ್ಯಾರಿಸ್‌ನ ಹೆಸರಾಂತ ಬ್ರ‍್ಯಾಂಡ್ ಆದ ಮಾಝ್ (Maje) ರಿಲಯನ್ಸ್ ಬ್ರ‍್ಯಾಂಡ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಭಾರತದಲ್ಲಿ ತನ್ನ ಮೊದಲ ಮಳಿಗೆಯನ್ನು ಆರಂಭಿಸುತ್ತಿದೆ.

    ಮಾಝ್ ಮಳಿಗೆ ಆರಂಭಿಸುತ್ತಿರುವುದು ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವಂತಹ ಸಂಗತಿಯಾಗಿದೆ. ಮುಂಬೈನಲ್ಲಿ ಇರುವಂತಹ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿ ಮಾಝ್ ತನ್ನ ಮಳಿಗೆ ಆರಂಭಿಸಲಿದೆ. ಇನ್ನು ಮುಂದೆ ಭಾರತೀಯ ಮಹಿಳೆಯರಿಗೆ ವಿಲಾಸಿ ಹಾಗೂ ದಿಟ್ಟ ಕ್ರಿಯೇಟಿವ್ ಉತ್ಪನ್ನಗಳು ದೊರೆಯಲಿವೆ.

    1998ನೇ ಇಸವಿಯಲ್ಲಿ ಜುಡಿತ್ ಮಿಲ್ ಗ್ರೋಮ್ ಅವರು ಮಾಝ್ ಬ್ರ‍್ಯಾಂಡ್‌ನ್ನು ಪ್ರಾರಂಭಿಸಿದ್ದರು. ಮಾಝ್ ಎಂಬುದು ಗ್ಲಾಮರಸ್ ಸ್ಟೈಲ್, ಸಮಕಾಲೀನ ಟ್ರೆಂಡ್ ಜೊತೆಗೆ ಆರಾಮದಾಯಕ ತಂಪಾದ ಅನುಭವ ತರುವಂಥ ವಿಶಿಷ್ಟ, ಪ್ಯಾರಿಸ್ ಜೀವನಶೈಲಿಗೆ ಸಮಾನಾರ್ಥಕ ಪದ ಎಂಬಂತೆಯೇ ಈ ಬ್ರ್ಯಾಂಡ್‌ ಹೆಸರು ಉಳಿಸಿಕೊಂಡಿದೆ.ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಹೊಸ ಮಸೂದೆ – ಸುಗ್ರೀವಾಜ್ಞೆಗೆ ಸಿಎಂ ಒಪ್ಪಿಗೆ

    ಈ ಮಾಝ್ ಭಾರತಕ್ಕೆ ಕಾಲಿಡುತ್ತಿರುವುದರಿಂದ ಅತ್ಯುತ್ತಮ ಫ್ರೆಂಚ್ ಫ್ಯಾಷನ್ ಅನ್ನು ಭಾರತೀಯ ಮಹಿಳೆಯರು ಅನುಭವಕ್ಕೆ ಪಡೆಯಬಹುದು. ಜುಡಿತ್ ಮಿಲ್ ಗ್ರೋಮ್ ಕುಟುಂಬ ಸದಸ್ಯರ ಪರಂಪರೆಯನ್ನು ಇದು ಮುಂದುವರಿಸಿಕೊಂಡು ಬಂದಿದೆ. ಮಾಝ್ ಎಂಬ ಹೆಸರು ಅವರ ಹೆಸರಿನ ಮೊದಲ ಅಕ್ಷರಗಳನ್ನು ಪ್ರತಿನಿಧಿಸುತ್ತದೆ. ಜೊತೆಗೆ ಇದು ಅವರಲ್ಲಿನ ಒಗ್ಗಟ್ಟಿನ ಸಂಕೇತ ಕೂಡ ಹೌದು.

    ಈ ಬ್ರ್ಯಾಂಡ್‌ನ್ನು ಪ್ರಾರಂಭಿಸಿದ್ದ ಜುಡಿತ್, ಮಾಝ್ ಎನ್ನುವ ಬ್ರ‍್ಯಾಂಡ್ ಮೂಲಕ ಒಂದು ಹೆಣ್ಣು ದಿನದ ವಿವಿಧ ಸಮಯದಲ್ಲಿ ಬೇಕಾದಂತೆ ವಿವಿಧ ರೀತಿಯಲ್ಲಿ ಸಿದ್ಧಗೊಳ್ಳಲು ಸಾಧ್ಯವಾಗಬೇಕು ಹಾಗೂ ಅದು ಆಧುನಿಕವಾಗಿಯೂ ಮತ್ತು ಧರಿಸುವುದಕ್ಕೆ ಸುಲಭವಾಗಿಯೂ ಇರಬೇಕು ಎಂಬುದು ಆಲೋಚನೆಯಿತ್ತು. ಆರಂಭದಲ್ಲಿ ಹೆಣ್ಣುಮಕ್ಕಳನ್ನು ಅತ್ಯುತ್ತಮವಾದ ಧಿರಿಸಿನೊಂದಿಗೆ ಸಿದ್ಧಗೊಳಿಸುವುದು ಬಹಳ ನೆಚ್ಚಿನ ಕೆಲಸವಾಗಿತ್ತು. ರೋಮಾಂಚಕ ಹಾಗೂ ವೈವಿಧ್ಯತೆಯಿದಿಂದ ಕೂಡಿದ ಭಾರತದ ಮಾರುಕಟ್ಟೆಗೆ ಮಾಝ್ ಪರಿಚಯಿಸುವುದಕ್ಕೆ ನಾವು ಬಹಳ ಉತ್ಸಾಹದಿಂದ ಇದ್ದೇವೆ, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯ ಮತ್ತು ಆಧುನಿಕತೆಯ ಕ್ರಿಯಾತ್ಮಕ ಮಿಶ್ರಣದೊಂದಿಗೆ ಸೇರಿ ಸ್ಪೂರ್ತಿದಾಯಕವಾಗಿದೆ. ಈ ಮಳಿಗೆಯು ಭಾರತೀಯ ಗ್ರಾಹಕರ ಜೊತೆಗೆ ಸಂಪರ್ಕ ಸಾಧಿಸುವ ನಮ್ಮ ಅವಕಾಶವನ್ನು ಪ್ರತಿನಿಧಿಸುತ್ತದೆ. ಅಲ್ಲಿ ಫ್ಯಾಷನ್ ಕೇವಲ ಸ್ಟೈಲ್ ಸ್ಟೇಟ್‌ಮೆಂಟ್ ಅಲ್ಲ. ಪ್ರತಿ ವ್ಯಕ್ತಿಗೂ ತಾನು ಹೇಗೆ ಮತ್ತು ಏನು ಎಂಬುದನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಭಾರತದ ಸ್ಫೂರ್ತಿಯನ್ನು ಆಚರಿಸಲು ಮತ್ತು ಇಲ್ಲಿ ಮಹಿಳೆಯರಿಗೆ ಮಾಝ್ ಅನುಭವವನ್ನು ನೀಡುತ್ತದೆ ಎಂದಿದ್ದಾರೆ.

    ಮಾಝ್ ಮಳಿಗೆ ವೈಶಿಷ್ಟ್ಯ ಏನೆಂದರೆ, ಪ್ರತಿ ಗ್ರಾಹಕರಿಗೂ ವೈಯಕ್ತಿಕವಾದದ್ದು ಮತ್ತು ವಿಶಿಷ್ಟವಾದ ಸ್ಥಾನವನ್ನು ಒದಗಿಸುತ್ತದೆ. ಇದೊಂದು ರೀತಿಯಲ್ಲಿ ಮತ್ತೊಂದು ಮನೆಯ ಹಾಗೇ ಎನಿಸುತ್ತದೆ. ಇಲ್ಲಿ ಮಹಿಳೆಯರಿಗೆ ಧರಿಸುವುದಕ್ಕೆ ಸಿದ್ಧವಾದಂಥದ್ದು, ಪರಿಕರಗಳ ಸಂಗ್ರಹ, ದಿಟ್ಟ ಹಾಗೂ ಆಫ್ ಬೀಟ್ ಬೇಕಾದದ್ದು ದೊರೆಯುತ್ತವೆ.ಇದನ್ನೂ ಓದಿ: ಸಿಎಂ ಸಲಹೆಗಾರ ಬಿ.ಆರ್ ಪಾಟೀಲ್ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ- ಪರಮೇಶ್ವರ್

    ಮಾಝ್ ಭಾರತದಲ್ಲಿ ತನ್ನ ಹೆಜ್ಜೆಯನ್ನು ಇಡುತ್ತಿದೆ ಎಂಬುದನ್ನು ಸಂಭ್ರಮಿಸುವುದಕ್ಕಾಗಿ ಬ್ರ‍್ಯಾಂಡ್ ಕೆಲವು ಎಕ್ಸ್ಕ್ಲೂಸಿವ್ ಸಂಗ್ರಹಗಳ ಆಯ್ಕೆಯನ್ನು ತರುತ್ತಿದೆ. ಅದರಲ್ಲಿ ಮಾಝ್ 2025ರ ಬೇಸಿಗೆ ಸಂಗ್ರಹ, ಗ್ಲಾಮ್ ಆಫೀಸ್- ಅದು ಪ್ಯಾರಿಸ್‌ನಿಂದ ಮಿಲಾನ್ ತನಕದ ಸಂಗ್ರಹ ಒಳಗೊಂಡಿರುತ್ತದೆ. ಆಫೀಸಿಗೆ ತೆರಳುವಾಗ ಬೇಕಾದ ಸ್ಟೈಲ್‌ನಿಂದ ಸಂಜೆ ವೇಳೆ ಬದಲಾಗುವ ವಾತಾವರಣಕ್ಕೆ ಏನು ಬೇಕೋ ಆ ರೀತಿ ಮಹಿಳೆಯರಿಗೆ ಅದ್ಭುತವಾದ ಫ್ಯಾಷನ್ ಸಂಗ್ರಹವನ್ನು ಒದಗಿಸಲಾಗುತ್ತದೆ.

    ಅಂದ ಹಾಗೆ, ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ (ಆರ್‌ಬಿಎಲ್) ಎಂಬುದು ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ಅಂಗಸAಸ್ಥೆ. ಇದು 2007ರಲ್ಲಿ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಐಷಾರಾಮಿ ಹಾಗೂ ಪ್ರೀಮಿಯಂ ವಿಭಾಗಗಳಲ್ಲಿ ಜಾಗತಿಕ ಬ್ರ‍್ಯಾಂಡ್‌ಗಳನ್ನು ಪ್ರಾರಂಭಿಸುವ ಮತ್ತು ರೂಪಿಸುವ ಉದ್ದೇಶದೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸದ್ಯಕ್ಕೆ ಇದರ ಪೋರ್ಟ್ಫೋಲಿಯೊದಲ್ಲಿ ಅರ್ಮಾನಿ ಎಕ್ಸ್ಚೇಂಜ್, ಬಾಲೆನ್ಸಿಯಾಗ, ಬ್ಯಾಲಿ, ಬೊಟ್ಟೆಗಾ ವೆನೆಟಾ, ಬರ್ಬೆರಿ, ಕೆನಾಲಿ, ಕೋಚ್, ಡೀಸೆಲ್, ಜಾರ್ಜಿಯೊ ಅರ್ಮಾನಿ, ಹ್ಯೂಗೋ ಬಾಸ್, ಜಿಮ್ಮಿ ಚೂ, ಮೈಕೆಲ್ ಕೋರ್ಸ್, ಮುಜಿ, ಪಾಲ್ ಸ್ಮಿತ್, ಸಾಲ್ವಟೋರ್ ಫೆರಾಗಾಮೊ, ಟಿಫಾನಿ ಅಂಡ್ ಕಂ., ಟೋರಿ ಬರ್ಚ್, ವ್ಯಾಲೆಂಟಿನೋ, ವರ್ಸೇಸ್, ಜೆಗ್ನಾ ಮತ್ತು ಇನ್ನೂ ಅನೇಕವುಗಳು ಸೇರಿಕೊಂಡಿವೆ.

    ಆರ್‌ಬಿಎಲ್ ಇಂದು ಭಾರತದಲ್ಲಿ 934 ಮಳಿಗೆಗಳು ಮತ್ತು 687 ಶಾಪ್-ಇನ್-ಶಾಪ್‌ಗಳಾಗಿ ವಿಭಜಿಸಲ್ಪಟ್ಟು, 1,621ರ ಸಂಖ್ಯೆಯಲ್ಲಿ ಮಳಿಗೆಗಳ ನಿರ್ವಹಣೆ ಮಾಡುತ್ತಿದೆ. ಕಳೆದ ಐದು ವರ್ಷಗಳಲ್ಲಿ, ಆರ್‌ಬಿಎಲ್ ಬ್ರಿಟಿಷ್ ಆಟಿಕೆ ರೀಟೇಲ್ ಹ್ಯಾಮ್ಲೀಸ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಜೊತೆಗೆ ಸ್ವದೇಶಿ ವಿನ್ಯಾಸಕ ಬ್ರ‍್ಯಾಂಡ್‌ಗಳನ್ನು ಸೃಷ್ಟಿಸಲು ಮತ್ತು ನಿರ್ವಹಿಸಲು ಹೂಡಿಕೆ ಮಾಡಿದೆ, ಇದು ಈಗ 14 ದೇಶಗಳಲ್ಲಿ 191 ಮಳಿಗೆಗಳನ್ನು ಹೊಂದಿದೆ.ಇದನ್ನೂ ಓದಿ: ಭಾರತದ ಗಡಿಯೊಳಗೆ ಚೀನಾ ಪ್ರವೇಶ ಮಾಡಿರುವುದೇ ʻಮೇಕ್ ಇನ್ ಇಂಡಿಯಾʼ ವೈಫಲ್ಯಕ್ಕೆ ಕಾರಣ: ರಾಗಾ ವಾಗ್ದಾಳಿ

  • ಕುಕ್ಕರ್ ಸ್ಫೋಟ ಕೇಸ್ – ಮಂಗಳೂರಿನ ಎಂಜಿನಿಯರಿಂಗ್ ಕಾಲೇಜ್ ಮೇಲೆ NIA ದಾಳಿ, ಓರ್ವ ವಶ

    ಕುಕ್ಕರ್ ಸ್ಫೋಟ ಕೇಸ್ – ಮಂಗಳೂರಿನ ಎಂಜಿನಿಯರಿಂಗ್ ಕಾಲೇಜ್ ಮೇಲೆ NIA ದಾಳಿ, ಓರ್ವ ವಶ

    ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆ ಚುರಕುಕೊಂಡಿದ್ದು, ಎನ್‍ಎಐ (NIA) ಅಧಿಕಾರಿಗಳು ಗುರುವಾರ ಮಂಗಳೂರು (Mangaluru) ಹೊರವಲಯದ ಕೊಣಾಜೆ ಬಳಿಯಿರುವ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ (PA Engineering College) ಮೇಲೆ ದಾಳಿ ನಡೆಸಿದ್ದಾರೆ.

    ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಶಂಕಿತ ಉಗ್ರ ಶಾರೀಕ್‍ನನ್ನು (Shariq) ವಿಚಾರಣೆಗೆ ಒಳಪಡಿಸಿದ್ದ ವೇಳೆ ಸಾಕಷ್ಟು ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಪಿಎ ಎಂಜಿನಿಯರಿಂಗ್ ಕಾಲೇಜ್ ಮೇಲೆ 7 ಮಂದಿ ಎನ್‍ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

    ದಾಳಿಯ ಬಳಿಕ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಎನ್‍ಐಎ ವಶಕ್ಕೆ ಪಡೆದುಕೊಂಡಿದೆ. ಈ ವೇಳೆ ವಶಕ್ಕೆ ಪಡೆದ ವಿದ್ಯಾರ್ಥಿಯನ್ನು ಉಡುಪಿ ಮೂಲದ ರಿಹಾನ್ ಶೇಖ್ ಎಂದು ಗುರುತಿಸಲಾಗಿದೆ.

    ದಾಳಿ ಯಾಕೆ?: ಈ ಕಾಲೇಜಿನಲ್ಲಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ನ ಆರೋಪಿ ಮಾಝ್ ಮುನೀರ್ ಶಿಕ್ಷಣ ಪಡೆದಿದ್ದು, ಈ ವೇಳೆ ಕಾಲೇಜಿನಲ್ಲಿ ಉಗ್ರ ಚಟುವಟಿಕೆಯ ಪ್ಲಾನ್ ನಡೆಸಿರುವ ಮಾಹಿತಿ ದೊರೆತಿದೆ. ಶಂಕಿತ ಉಗ್ರ ಮಾಝ್ ಮುನೀರ್ ಮಂಗಳೂರು ನಗರದ ಬಲ್ಮಠದಲ್ಲಿ ವಾಸವಾಗಿದ್ದುಕೊಂಡು ಪಿ.ಎ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ. ಇದನ್ನೂ ಓದಿ: ನನ್ನನ್ನ `ಟಗರು’ ಅಂತಾರೆ, ನಾನು ಯಾರಿಗೆ ಗುಮ್ಮಿದ್ದೇನೆ – ಸಿದ್ದು ಪ್ರಶ್ನೆ

    ಮಾಝ್ ಜೊತೆ ಉಗ್ರ ಚಟುವಟಿಕೆಯಲ್ಲಿ ರಿಹಾನ್ ಶೇಖ್ ಕೂಡ ಭಾಗಿಯಾಗಿದ್ದರ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಕ್ಕೂ ನಂಟು ಸಾಧ್ಯತೆಯಿದ್ದು, ಸದ್ಯ ಶಿವಮೊಗ್ಗ ಕೇಸ್ ಸಂಬಂಧಿಸಿದಂತೆ ಪಿ.ಎ ಕಾಲೇಜಿನಲ್ಲಿ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಜೋಶಿಮಠದಲ್ಲಿ ಬಿರುಕು ಬಿಟ್ಟ 500ಕ್ಕೂ ಹೆಚ್ಚು ಮನೆಗಳು – ನಗರ ಮುಳುಗುವ ಆತಂಕದಲ್ಲಿ ಜನರು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಷ್ಟ್ರಧ್ವಜ ಕಂಡರೆ ಬೆಂಕಿ ಹಚ್ಚುತ್ತಿದ್ದ ಶಾರೀಕ್ ಗ್ಯಾಂಗ್

    ರಾಷ್ಟ್ರಧ್ವಜ ಕಂಡರೆ ಬೆಂಕಿ ಹಚ್ಚುತ್ತಿದ್ದ ಶಾರೀಕ್ ಗ್ಯಾಂಗ್

    ಬೆಂಗಳೂರು: ಮಂಗಳೂರು (Mangaluru) ಕುಕ್ಕರ್ ಬಾಂಬರ್ ಶಾರೀಕ್‍ನ (Shariq) ಮುಖವಾಡ ಇನ್ನಷ್ಟು ಬಯಲಾಗಿದೆ. ಪಕ್ಕಾ ಮತೀಯವಾದಿ ಆಗಿದ್ದ ಶಾರೀಕ್, ತುಂಗಾನದಿ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ಬಳಿಕ ತಲೆಮರೆಸಿಕೊಂಡಿದ್ದ. ಈತ ಹಾಗೂ ಈತನ ಗ್ಯಾಂಗ್ ಕೇವಲ ಸಾರ್ವಜನಿಕರ ಜೀವ ತೆಗೆಯೋದು ಮಾತ್ರವಲ್ಲದೇ, ರಾಷ್ಟ್ರಧ್ವಜವನ್ನು ಸುಡುವುದು ಇವರ ಖಯಾಲಿ ಆಗಿತ್ತು. ಈಗಾಗಲೇ ರಾಷ್ಟ್ರಧ್ವಜ ಸುಟ್ಟಿರುವ ಬಗ್ಗೆ ಎನ್‍ಐಎ (NIA) ಎಫ್‍ಐಆರ್‌ನಲ್ಲಿ (FIR) ಉಲ್ಲೇಖಿಸಿದೆ.

    ನವೆಂಬರ್ 15ರಂದು ಎನ್‍ಐಎ ಎಫ್‍ಐಆರ್ ದಾಖಲಿಸಿದೆ. ಮಂಗಳೂರು ಆಟೋ ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಎರಡು ದಿನದಲ್ಲಿ ಎನ್‍ಐಎ ತನಿಖೆಗೆ ವಹಿಸೋ ಸಾಧ್ಯತೆ ಇದೆ. ತನಿಖೆ ಬಳಿಕ ಶಾರೀಕ್ ಪಾತ್ರದ ಇನ್ನಷ್ಟು ಸ್ಫೋಟಕ ಸತ್ಯಗಳು ಹೊರಬರಬೇಕಿದೆ. ಇದೀಗ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿರುವ ಎಫ್‍ಐಆರ್‌ನಲ್ಲಿ ಶಿವಮೊಗ್ಗದ ಮಾಝ್, ಯಾಸಿನ್ ಜೊತೆಯಲ್ಲಿ ಶಾರೀಕ್ ಕೂಡ ಭಾಗಿಯಾಗಿದ್ದ. ಆದರೆ ಆ ಸಂದರ್ಭದಲ್ಲಿ ಶಾರೀಕ್‌ ತಪ್ಪಿಸಿಕೊಂಡಿದ್ದ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಈತ ಸುಟ್ಟು ಹಾಕಿರುವ ಭಾರತದ ಧ್ವಜದ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಅಷ್ಟೇ ಅಲ್ಲದೇ ಮಾಝ್ ಮನೆಯಲ್ಲಿ ಸ್ಫೋಟಕ ವಸ್ತುಗಳ ವಶಕ್ಕೆ ಪಡೆದಿದ್ದ ಪೊಲೀಸರಿಗೆ ಸುಟ್ಟಿರುವ ರಾಷ್ಟ್ರಧ್ವಜವು ಸಿಕ್ಕಿದ್ದು, ಅದನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕುಕ್ಕರ್‌ ಬಾಂಬರ್‌ ಶಾರೀಕ್‌ ಗುಣಮುಖನಾಗಲು 25 ದಿನ ಬೇಕು

    ಇನ್ನೂ ಭಾರತದ ಬಾವುಟ ಕಂಡರೆ ಶಾರೀಕ್‍ಗೆ ಆಗುತ್ತಿರಲಿಲ್ಲ. ಭಾರತದ ಬಾವುಟ ಸುಡಬೇಕು. ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಬೇಕು ಎಂಬ ಉದ್ದೇಶವನ್ನು ಈತ ಇಟ್ಟುಕೊಂಡಿದ್ದ. ಈ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜದಲ್ಲಿರುವ ಕೇಸರಿ, ಬಿಳಿ, ಹಸಿರು ಈತನಿಗೆ ಕಣ್ಣು ಕುಕ್ಕುತ್ತಾ ಇತ್ತಂತೆ. ಅದಕ್ಕೆ ಗ್ರಾಹಕನ ಸೋಗಿನಲ್ಲಿ ಭಾರತದ ಬಾವುಟ ತರೋದು, ಅದಕ್ಕೆ ಬೆಂಕಿ ಹಚ್ಚಿ ವಿಕೃತ ಸಂತೋಷ ಪಡುತ್ತಾ ಇದ್ದ ಎಂಬ ಸ್ಫೋಟಕ ವಿಷಯ ಬಯಲಾಗಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್‌ – ತಮಿಳುನಾಡು, ಕೇರಳದಲ್ಲೂ ತನಿಖೆ ಚುರುಕು : ಪ್ರವೀಣ್ ಸೂದ್

    Live Tv
    [brid partner=56869869 player=32851 video=960834 autoplay=true]

  • ಬಂಧಿತ ಶಂಕಿತ ಉಗ್ರನ ತಂದೆ ನಿಧನ- ಅಂತ್ಯಕ್ರಿಯೆಗೆ ಪುತ್ರ ಮಾಝ್‌ ಹಾಜರು

    ಬಂಧಿತ ಶಂಕಿತ ಉಗ್ರನ ತಂದೆ ನಿಧನ- ಅಂತ್ಯಕ್ರಿಯೆಗೆ ಪುತ್ರ ಮಾಝ್‌ ಹಾಜರು

    ಶಿವಮೊಗ್ಗ: ಶಂಕಿತ ಉಗ್ರನ ತಂದೆ ನಿಧನ ಹಿನ್ನೆಲೆಯಲ್ಲಿ ಪೊಲೀಸರು ಅಂತ್ಯಕ್ರಿಯೆಗಾಗಿ ಮಾಝ್‌ನನ್ನು(Maz) ಶಿವಮೊಗ್ಗದಿಂದ (Shivamogga) ತೀರ್ಥಹಳ್ಳಿಗೆ ಕರೆದೊಯ್ಯುತ್ತಿದ್ದಾರೆ.

    ಶಿವಮೊಗ್ಗ ಪೊಲೀಸರಿಂದ ಬಂಧಿತನಾಗಿದ್ದ ಶಂಕಿತ ಉಗ್ರ (Suspected Terrorist) ಮಾಝ್ ತಂದೆ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆ ಮಾಝ್‌ನನ್ನು ಕರೆತರಲು ಶುಕ್ರವಾರ ನ್ಯಾಯಾಲಯದಿಂದ ಆದೇಶವನ್ನು ಪಡೆದಿದ್ದಾರೆ. ಘಟನೆ ಸಂಬಂಧಿಸಿ ನ್ಯಾಯಾಲಯವು ಮಾಝ್‌ನನ್ನು ಬೆಳಿಗ್ಗೆ ಕರೆದುಕೊಂಡು ಹೋಗಿ ಸಂಜೆ 7 ಗಂಟೆಯೊಳಗೆ ವಾಪಸ್ ಕರೆದುಕೊಂಡು ಬರಲು ಸೂಚಿಸಿದೆ.

    ಶಂಕಿತ ಉಗ್ರ ಮಾಝ್‌ ತಂದೆ ನಿಧನ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತೀರ್ಥಹಳ್ಳಿಯಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಮಾಡಿದ್ದು, ತಂದೆಯ ಅಂತ್ಯಕ್ರಿಯೆಗೆ ಮಾಝ್‌ನನ್ನು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಪೊಲೀಸರು ಕರೆದೊಯ್ಯಲಿದ್ದಾರೆ. ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಬಂಧಿತ ಶಂಕಿತ ಉಗ್ರ ಮಾಝ್ ತಂದೆ ನಿಧನ

    ಮಗನ ಬಂಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಮುನೀರ್ ಅಹಮದ್ ಶನಿವಾರ ಸಂಜೆ ಎದೆನೋವಿನ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮಾಝ್ ತಂದೆಗೆ 53 ವರ್ಷ ವಯಸ್ಸಾಗಿದ್ದು, ಮಗನ ಬಂಧನದ ಬಳಿಕ ಕುಗ್ಗಿಹೋಗಿದ್ದರು. ಹೀಗಾಗಿ ಅವರಿಗೆ ಹೃದಯಾಘಾತ ಉಂಟಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಂಧಿತ ಶಂಕಿತ ಉಗ್ರ ಮಾಝ್ ತಂದೆ ನಿಧನ

    ಬಂಧಿತ ಶಂಕಿತ ಉಗ್ರ ಮಾಝ್ ತಂದೆ ನಿಧನ

    ಶಿವಮೊಗ್ಗ/ಮಂಗಳೂರು: ಶಿವಮೊಗ್ಗ ಪೊಲೀಸರಿಂದ‌ (Shivamogga Police) ಬಂಧಿತನಾಗಿದ್ದ ಶಂಕಿತ ಉಗ್ರ (Suspected Terrorist) ಮಾಝ್  (Maz) ತಂದೆ ಶುಕ್ರವಾರ ಮಂಗಳೂರಿನ (Mangaluru) ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ.

    ಮಗನ ಬಂಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಮುನೀರ್ ಅಹಮದ್ ಇಂದು ಸಂಜೆ ಎದೆನೋವಿನ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಹಿನ್ನಲೆ ಮಾಝ್‌ನನ್ನು ಶಿವಮೊಗ್ಗ ಪೊಲೀಸರು ಇಂದು ರಾತ್ರಿಯೇ ಮಂಗಳೂರಿಗೆ ಕರೆದೊಯ್ಯಲಿದ್ದಾರೆ.

    ಮಾಝ್ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದಿದ್ದ ಮುನೀರ್, ಆತನ ಶಿಕ್ಷಣಕ್ಕಾಗಿ ತೀರ್ಥಹಳ್ಳಿಯಿಂದ ಮಂಗಳೂರಿಗೆ ಶಿಫ್ಟ್ ಆಗಿದ್ದರು. ತಮ್ಮ ಮಗ ಸೆಪ್ಟೆಂಬರ್ 14 ರಿಂದ ನಾಪತ್ತೆಯಾಗಿದ್ದಾನೆ ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕೂಡಾ ಸಲ್ಲಿಸಿದ್ದರು. ಮನೆ ಕೆಳಗೆ ಪಾರ್ಸೆಲ್ ತೆಗೆದುಕೊಂಡು ಬರಲು ಹೋದವನು ವಾಪಸ್ ಬಂದಿರಲೇ ಇಲ್ಲ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಮೈಸೂರಿನಲ್ಲಿ ಮತ್ತೆ DC Vs MLA ಫೈಟ್- ಬಗಾದಿ ವರ್ಗಾವಣೆಗೆ ರಾಮದಾಸ್ ಪಟ್ಟು

    ಮಾಝ್ ತಂದೆಗೆ 53 ವರ್ಷ ವಯಸ್ಸಾಗಿದ್ದು, ಮಗನ ಬಂಧನದ ಬಳಿಕ ಕುಗ್ಗಿಹೋಗಿದ್ದರು. ಹೀಗಾಗಿ ಅವರಿಗೆ ಹೃದಯಾಘಾತ ಉಂಟಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ. ಇನ್ನೂಬ್ಬ ಬಂಧಿತ ಶಾರೀಕ್ ತಂದೆ ಕೂಡಾ ಒಂದೂವರೆ ತಿಂಗಳ ಹಿಂದಷ್ಟೆ ನಿಧನರಾಗಿದ್ದರು. ಇದನ್ನೂ ಓದಿ: ಅಂಗಾಂಗ ದಾನ ಮಾಡಿ 9 ಜೀವಗಳಿಗೆ ಬೆಳಕಾದ ರಕ್ಷಿತಾ ಕುಟುಂಬಕ್ಕೆ ಸರ್ಕಾರದಿಂದ 8 ಲಕ್ಷ ರೂ. ಪರಿಹಾರ

    Live Tv
    [brid partner=56869869 player=32851 video=960834 autoplay=true]