Tag: ಮಾಜಿ ಸ್ಪೀಕರ್ ರಮೇಶ್ ಕುಮಾರ್

  • ಅರಣ್ಯ ಭೂಮಿ ಒತ್ತುವರಿ ತೆರವಿಗೆ ಪ್ರತಿಭಟನೆ – ರೈತ ಸಂಘದ ಸದಸ್ಯರ ಮೇಲೆ ಕೈ ಮುಖಂಡರಿಂದ ಹಲ್ಲೆ

    ಅರಣ್ಯ ಭೂಮಿ ಒತ್ತುವರಿ ತೆರವಿಗೆ ಪ್ರತಿಭಟನೆ – ರೈತ ಸಂಘದ ಸದಸ್ಯರ ಮೇಲೆ ಕೈ ಮುಖಂಡರಿಂದ ಹಲ್ಲೆ

    ಕೋಲಾರ: ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವಿಗೆ ನಡೆಸಿದ್ದ ಪ್ರತಿಭಟನಾ ನಿರತ ರೈತ ಸಂಘದ ಮುಖಂಡರ ಮೇಲೆ ಕಾಂಗ್ರೆಸ್ (Congress) ಮುಖಂಡರು ಹಲ್ಲೆ ನಡೆಸಿದ್ದಾರೆ.

    ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರದ (Srinivasapura) ತಾಲ್ಲೂಕು ಕಚೇರಿ (Taluka Office) ಎದುರಿಗೆ ಇಂದು (ಡಿ.09) ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿಗರು ಹಾಗೂ ರೈತ ಸಂಘದ ಮುಖಂಡರ ಮೇಲೆ ಗಲಾಟೆ ನಡೆದಿದೆ.ಇದನ್ನೂ ಓದಿ: ಭಾರತ ವಿರೋಧಿ ಸೊರೊಸ್‌ ಸಂಸ್ಥೆಯ ಜೊತೆ ಸೋನಿಯಾಗೆ ನಂಟು – ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಕಿರಣ್‌ ರಿಜಿಜು

    ಕೆಲಕಾಲ ತಳ್ಳಾಟ ನೂಕಾಟ ನಡೆಸಿದ್ದು, ರೈತ ಮುಖಂಡ ನಾರಾಯಣಗೌಡ, ಮಂಜುನಾಥ್ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೇ ಕಾಂಗ್ರೆಸ್ ಮುಖಂಡರು ಹಲ್ಲೆ ಮಾಡಿದ್ದಾರೆ. ಶ್ರೀನಿವಾಸಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪ್ರತಿಭಟನೆ ಯಾಕೆ?
    ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ತಾಲೂಕಿನ ಜಿನಗಲಕುಂಟೆ ಗ್ರಾಮದ ಬಳಿಯಿರುವ ಸರ್ವೇ ನಂ.1 ಮತ್ತು 2ರಲ್ಲಿ 122 ಎಕರೆಯನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ (Former Speaker Ramesh Kumar) ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಏಳು ಜನ ಒತ್ತುವರಿದಾರರಲ್ಲಿ ರಮೇಶ್ ಕುಮಾರ್‌ಗೆ 61 ಎಕರೆ ಅರಣ್ಯ ಭೂಮಿ ಸೇರಿತ್ತು. ಈ ಹಿನ್ನೆಲೆ ನ.6ರಂದು ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ (Forest Department) ಸರ್ವೇ ನಡೆಸಲು ಸುಪ್ರೀಂ ಕೋರ್ಟ್ (Supreme Court) ಸೂಚನೆ ನೀಡಿತ್ತು. ಜೊತೆಗೆ ಸರ್ವೇ ಮಾಡಿ ವರದಿ ಸಲ್ಲಿಸುವಂತೆ ತಿಳಿಸಿತ್ತು. ಆದರೆ ಕಾರಣಾಂತರಗಳಿಂದ ಸರ್ವೇ ಕಾರ್ಯ ನಡೆದಿರಲಿಲ್ಲ. ಈ ಹಿನ್ನೆಲೆ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಇದನ್ನೂ ಓದಿ: BBK 11: ಮತ್ತೆ ಬಿಗ್‌ ಬಾಸ್‌ಗೆ ತನಿಷಾ, ಪ್ರತಾಪ್‌, ಸಂತು ಪಂತು ಎಂಟ್ರಿ

  • ರಮೇಶ್‌ಕುಮಾರ್ ಊರೂರು ಅಲೆಯುವ ಕೊಕ್ಕರೆ ಇದ್ದಂತೆ: ಸುಧಾಕರ್

    ರಮೇಶ್‌ಕುಮಾರ್ ಊರೂರು ಅಲೆಯುವ ಕೊಕ್ಕರೆ ಇದ್ದಂತೆ: ಸುಧಾಕರ್

    ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್‌ಕುಮಾರ್ ನೀತಿ ಹೇಳಲಷ್ಟೇ ಲಾಯಕ್. ಅವರು ಅದನ್ನು ಎಂದಿಗೂ ಕಾರ್ಯಾಚರಣೆಗೆ ತಂದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಟೀಕಿಸಿದರು.

    ಚಿಕ್ಕಬಳ್ಳಾಪುರ ತಾಲ್ಲೂಕಿನ ಗೋಪಿನಾಥ ಬೆಟ್ಟದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಊರೂರು ಅಲೆಯುವ ಕೊಕ್ಕರೆ ಇದ್ದಂತೆ. ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವುದರಲ್ಲೆ ಇಡೀ ಜೀವನವನ್ನು ಕಳೆದುಬಿಡುತ್ತಾರೆ. ಇಂಥವರು ಇವತ್ತು ನೀತಿ ಪಾಠ ಹೇಳಿಕೊಡುತ್ತಿದ್ದಾರೆ. ಅವರು ಹೇಳಿದ್ದಂತೆ ನಿಜ ಜೀವನದಲ್ಲಿ ಎಂದಿಗೂ ನಡೆದುಕೊಂಡಿಲ್ಲ. ರಮೇಶ್ ಕುಮಾರ್ ಏನು ಎಂದು ಇಡೀ ಜಗತ್ತಿಗೆ ಅರ್ಥ ಆಗಿದೆ. ಅವರು ಕೇವಲ ನೀತಿ ಪಾಠ ಹೇಳೋದು ಆ ರೀತಿ ನಡೆದುಕೊಳ್ಳಲ್ಲ ಎಂದರು.

    ದೇವರಾಜು ಅರಸು ಬಿಟ್ಟು ಹೋದಾಗ ರಮೇಶ್ ಕುಮಾರ್ ಅವರ ಹಿಂದೆ ಹೋಗಿದ್ದರಾ? ದೇವೇಗೌಡರು ಅವರನ್ನು ಸ್ಪೀಕರ್ ಮಾಡಿದ್ದರು. ದೇವೇಗೌಡರು ಪದವಿ ಇಳಿದಾಗ ಎತ್ತ ಸಾಗಿದ್ದರು. ಇದರಿಂದ ರಮೇಶ್ ಕುಮಾರ್ ಫಕೀರ ಅಲ್ಲ. ಫಕೀರ ಆಗಲು ಯೋಗ್ಯತೆ ಇಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

    ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರವಾಗಿ ಮಾತನಾಡಿದ ಅವರು, ಮೊಟ್ಟೆ ವಿತರಣೆಗೆ ಕೆಲವರ ವಿರೋಧ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ವಿಚಾರಕ್ಕೆ ಧಕ್ಕೆ ತರುವಂತೆ ಸರ್ಕಾರ ಯಾರಿಗೂ ಒತ್ತಾಯ ಮಾಡುವುದಿಲ್ಲ. ಕೆಲವರು ಮೊಟ್ಟೆ ತಿನ್ನಲ್ಲ, ಕೆಲವರು ಹಾಲು ಕುಡಿಯೋದಿಲ್ಲ. ಅದು ಅವರವರ ಆಹಾರ ಪದ್ಧತಿಯಾಗಿದೆ. ಮೊಟ್ಟೆ ಪೌಷ್ಟಿಕಾಂಶವುಳ್ಳ ಆಹಾರ. ಆದರೆ ನಾವು ಯಾರಿಗೂ, ಯಾವುದನ್ನೂ ಬಲವಂತ ಮಾಡೋದಿಲ್ಲ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ:  ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

  • ‘ಶ್ರೀರಾಮಚಂದ್ರನಾ ಇಲ್ಲ, ರಾಜಕಾರಣಿನಾ? ಇನ್ನೂ ತೀರ್ಮಾನ ಮಾಡಿಲ್ಲ’- ರಾಜಕೀಯ ನಿವೃತ್ತಿ ಕುರಿತು ರಮೇಶ್ ಕುಮಾರ್ ಸ್ಪಷ್ಟನೆ

    ‘ಶ್ರೀರಾಮಚಂದ್ರನಾ ಇಲ್ಲ, ರಾಜಕಾರಣಿನಾ? ಇನ್ನೂ ತೀರ್ಮಾನ ಮಾಡಿಲ್ಲ’- ರಾಜಕೀಯ ನಿವೃತ್ತಿ ಕುರಿತು ರಮೇಶ್ ಕುಮಾರ್ ಸ್ಪಷ್ಟನೆ

    ಕೋಲಾರ: ಈ ಹಿಂದೆ ಇದೆ ನನ್ನ ಕೊನೆ ಚುನಾವಣೆ ಎಂದು ಹೇಳಿದ್ದೆ ನಿಜ. ಈಗಲೂ ನೆನಪಿದೆ. ಆದರೆ ಶ್ರೀ ರಾಮಚಂದ್ರನಾ, ರಾಜಕಾರಣಿನಾ ಎಂಬುವುದನ್ನು ನಾನಿನ್ನೂ ತೀರ್ಮಾನ ಮಾಡಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಾಜಕೀಯ ನಿವೃತ್ತಿ ವಿಚಾರದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನ್ ರಾಜಕಾರಣಿಗಳೆಲ್ಲಾ ಹೇಳಿದಂಗೆ ನಡೆದುಕೊಳ್ಳಬೇಕಿದಿಯಾ ಹೆಂಗೆ. ಹೇಳಿದಂಗೆ ನಡೆದುಕೊಂಡರೆ ಶ್ರೀ ರಾಮಚಂದ್ರ ಆಗಿ ಬಿಡ್ತಾ ಇದ್ದೆ. ನಡೆದುಕೊಳ್ಳದೆ ಇದ್ದರೆ ರಾಜಕಾರಣಿ ಆಗುತ್ತೇನೆ. ನಾನು ಇನ್ನೂ ನಿವೃತ್ತಿ ಬಗ್ಗೆ ತೀರ್ಮಾನ ಮಾಡಿಲ್ಲ. ಶ್ರೀರಾಮಚಂದ್ರನಾ ಅಥವಾ ರಾಜಕಾರಣಿನಾ ಅಂತಾ ನೋಡೋಣ. ಅದಕ್ಕೆ ಇನ್ನೂ 3 ವರ್ಷ ಸಮಯ ಇದೆ ಎಂದು ನಿವೃತ್ತಿ ವಿಚಾರದ ಚರ್ಚೆಗೆ ತೆರೆ ಎಳೆದರು.

    ಸದ್ಯಕ್ಕೆ ನನ್ನ ಜಮೀನಿನಲ್ಲಿ ನಾನು, ನನ್ನ ಚಾಲಕ, ಮಗ ಎಲ್ಲರೂ ಸೇರಿ ತೋಟದ ಕೆಲಸ ಮಾಡಿಕೊಂಡಿದ್ದೇವೆ. 300 ಕುರಿ ಇದೆ, ಕೊಳವೆ ಬಾವಿ ಬತ್ತಿದೆ. ಕೋಳಿ ಫಾರ್ಮ್ ಮಾಡುತ್ತಿದ್ದೇನೆ. ಸದ್ಯಕ್ಕೆ ನೀರಿಲ್ಲ, ಎಲ್ಲಾ ಬೆಳೆ ಒಣಗಿದೆ. ಹಾಗಾಗಿ ಮೇವು ಬೆಳೆಯುತ್ತಾ ಇದ್ದೀನಿ ಎಂದರು.

  • ಜೈಪಾಲ್ ರೆಡ್ಡಿಗೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್

    ಜೈಪಾಲ್ ರೆಡ್ಡಿಗೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್

    ಹೈದರಾಬಾದ್: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಜೈಪಾಲ್ ರೆಡ್ಡಿ ಅವರಿಗೆ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅಂತಿಮ ನಮನ ಸಲ್ಲಿಸಿದರು.

    ಜೈಪಾಲ್ ರೆಡ್ಡಿ ಅವರ ಅಂತಿಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಅಂತಿಮ ಯಾತ್ರೆ ವೇಳೆಗೆ ಹೆಗಲು ಕೊಟ್ಟರು. ಭಾನುವಾರ ಮುಂಜಾನೆ ಹೈದರಾಬಾದಿನ ಆಸ್ಪತ್ರೆಯಲ್ಲಿ 77 ವರ್ಷದ ಜೈಪಾಲ್ ರೆಡ್ಡಿ ನಿಧನರಾಗಿದ್ದರು.

    ನ್ಯೂಮೋನಿಯಾದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಜೈಪಾಲ್ ರೆಡ್ಡಿ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. 1984 ರಿಂದ ಐದು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ಅವರು 2 ಬಾರಿ ರಾಜ್ಯಸಭೆಗೂ ಆಯ್ಕೆ ಆಗಿದ್ದರು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದರು.

    ಹೈದರಾಬಾದ್ ನೆಕ್ಲೇಸ್ ರೋಡ್‍ನಲ್ಲಿರುವ ಸರ್ಕಾರಿ ಸ್ಥಳದಲ್ಲಿ ಅವರ ಅಂತಿಮ ವಿಧಿ ವಿಧಾನಗಳು ನಡೆಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರಿಗೆ ಅಂತಿಮ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಅಂತಿಮ ಕಾರ್ಯದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಹಾಗೂ ಮಾಜಿ ಸ್ಪೀಕರ್ ಅವರು ಅಂತಿಮ ವಿಧಿ ವಿಧಾನದ ವೇಳೆ ಹೆಗಲು ನೀಡಿ ಅವರೊಂದಿಗೆ ಇದ್ದ ಅನುಬಂಧವನ್ನು ನೆನಪಿಸಿಕೊಂಡಿದ್ದಾರೆ. ಒಂದು ಕಡೆ ರಮೇಶ್ ಕುಮಾರ್ ಮತ್ತೊಂದು ಬದಿಯಲ್ಲಿ ಸಿದ್ದರಾಮಯ್ಯ ಅವರು ಹೆಗಲು ನೀಡಿರುವುದನ್ನು ಕಾಣಬಹುದಾಗಿದೆ.

    ವಿಧಾನಸೌಧದಲ್ಲಿ ನಿನ್ನೆ ತುರ್ತು ಸುದ್ದಿಗೋಷ್ಠಿ ನಡೆಸಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು, ಜೈಪಾಲ್ ರೆಡ್ಡಿ ಅವರನ್ನು ಕಳೆದುಕೊಂಡಿದ್ದು ನನಗೆ ಅತ್ಯಂತ ದುಃಖದ ದಿನವಾಗಿದೆ. ನನ್ನ ಸಾರ್ವಜನಿಕ ಬದುಕಿಗೆ ಬಹಳಷ್ಟು ಪರಿಣಾಮಕಾರಿಯಾದ ಸಲಹೆ, ಮಾರ್ಗದರ್ಶನ ಕೊಟ್ಟಿದ್ದರು. ವೈಯಕ್ತಿಕ ಬದುಕಿನಲ್ಲಿ ಸುಮಾರು 35 ವರ್ಷದಿಂದ ನನಗೆ ಹಿರಿಯ ಸಹೋದರನಂತೆ ನನ್ನನ್ನು ಪ್ರೀತಿಸಿದ್ದರು. ಅಲ್ಲದೇ ಅತ್ಯುತ್ತಮ ಸಂಸದೀಯ ಪಟುವಾಗಿದ್ದರು ಎಂದು ನೆನೆದು ಕಣ್ಣೀರಿಟ್ಟಿದ್ದರು.

    ಇಂದು ಸಿಎಂ ಬಿಎಸ್ ಯಡಿಯೂರಪ್ಪನವರು ವಿಶ್ವಾಸ ಮತಯಾಚನೆಗೂ ಮುನ್ನ ವಿಧಾನಸಭೆಯಲ್ಲಿ ಮಾತನಾಡಿದ್ದ ರಮೇಶ್ ಕುಮಾರ್, ಜೈಪಾಲ್ ರೆಡ್ಡಿ ಅವರ ಅಂತ್ಯ ಸಂಸ್ಕಾರ ಕಾರ್ಯಕ್ರಮಕ್ಕೆ ತೆರಳಬೇಕಿದೆ. ಹೀಗಾಗಿ ಸದನವನ್ನು ಬೇಗನೇ ಮುಗಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಆರಂಭದಲ್ಲೇ ಹೇಳಿ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದರು. ಸದಸ್ಯರ ನಡುವೆ ಚರ್ಚೆ ಜಾಸ್ತಿಯಾದಾಗ ಈ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡುತ್ತಿದ್ದರು. ಹೀಗಾಗಿ ಇಂದು ಸದನದಲ್ಲಿ ಜಾಸ್ತಿ ಚರ್ಚೆಯಾಗದೇ ಧನ ವಿಧೇಯಕ ಮತ್ತು ಪೂರಕ ಬಜೆಟ್ ಧ್ವನಿ ಮತದ ಮೂಲಕ ಅಂಗೀಕಾರಗೊಂಡಿತ್ತು. ಬಳಿಕ ರಮೇಶ್ ಕುಮಾರ್ ವಿದಾಯ ಭಾಷಣ ಮಾಡಿ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದರು. ವಿಧಾನಸಭಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯ ಹೈದರಾಬಾದಿಗೆ ತೆರಳಿದ್ದರು.

    https://www.youtube.com/watch?v=KyifPvdzz9A