Tag: ಮಾಜಿ ಸೈನಿಕರು

  • ಮಾಜಿ ಸೈನಿಕನ ಮೇಲೆ ಹಲ್ಲೆ; ಎಎಸ್‌ಐ, ಕಾನ್ಸ್ಟೇಬಲ್‌ಗೆ ನ್ಯಾಯಾಂಗ ಬಂಧನ

    ಮಾಜಿ ಸೈನಿಕನ ಮೇಲೆ ಹಲ್ಲೆ; ಎಎಸ್‌ಐ, ಕಾನ್ಸ್ಟೇಬಲ್‌ಗೆ ನ್ಯಾಯಾಂಗ ಬಂಧನ

    – ಮಾಜಿ ಸೈನಿಕನ ವಿರುದ್ಧವೂ ಎಫ್‌ಐಆರ್

    ಧಾರವಾಡ: ಮಾಜಿ ಸೈನಿಕನ (Former Soldier) ಮೇಲೆ ಹಲ್ಲೆ ಪ್ರಕರಣಕ್ಕೆ ಎಎಸ್‌ಐ ಮತ್ತು ಓರ್ವ ಪೊಲೀಸ್ ಕಾನ್ಸ್ಟೇಬಲ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ ಇದೀಗ ಮಾಜಿ ಸೈನಿಕನ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

    ಅಮಾನತು ಮಾಡಿ ಆದೇಶ ಮಾಡಲಾಗಿದೆ. ಅಲ್ಲದೇ ಎಎಸ್‌ಐ ಮತ್ತು ಕಾನ್ಸ್ಟೇಬಲ್‌ಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದ್ಯ ಈ ಇಬ್ಬರನ್ನೂ ಕರ್ತವ್ಯದಿಂದ ವಜಾ ಮಾಡಬೇಕು ಎಂದು ಒತ್ತಾಯ ಮಾಡಲಾಗಿದೆ. ಇದನ್ನೂ ಓದಿ: ನನ್ನ ವಿರುದ್ಧ ಬೇಕಾದ್ರೆ ಸೇಡು ತೀರಿಸಿಕೊಳ್ಳಿ, ಬೆಂಬಲಿಗರಿಗೆ ಏನು ಮಾಡ್ಬೇಡಿ: ಸ್ಟಾಲಿನ್ ವಿರುದ್ಧ ವಿಜಯ್ ಕಿಡಿ

    ಧಾರವಾಡ (Dharwad) ಸಪ್ತಾಪುರದಲ್ಲಿರುವ ಸೈನಿಕ ಮೆಸ್ ಮಾಲೀಕ ರಾಮಪ್ಪ ನಿಪ್ಪಾಣಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಎಎಸ್‌ಐ ವಿದ್ಯಾನಂದ ಸುಬೇದಾರ ಹಾಗೂ ಪೊಲೀಸ್ ಕಾನ್ಸ್ಟೇಬಲ್ ರಾಚಪ್ಪ ಕಣಬೂರರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಜೊತೆಗೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಯಲ್ಲಿ ಕಳ್ಳತನ – 12 ಲಕ್ಷ ಮೌಲ್ಯದ ಚಿನ್ನ, 29 ಲಕ್ಷ ಕ್ಯಾಶ್ ಕಳವು

    ಪೊಲೀಸರು ಕೂಡ ಆ ಮಾಜಿ ಸೈನಿಕ ನಿಪ್ಪಾಣಿ ಮೇಲೆ ದೂರು ದಾಖಲಿಸಿದ್ದಾರೆ. ಕರ್ತವ್ಯದ ಮೇಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಆತ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ. ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆ ರೀತಿ ಹಲ್ಲೆ ನಡೆಸಿದ್ದರೆ ಆ ಮಾಜಿ ಸೈನಿಕನ ಮೇಲೂ ಕ್ರಮ ಆಗಲಿದೆ. ಸದ್ಯ ಸಿಸಿಟಿವಿ ಡಿವಿಆರ್ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಏನಿದು ಪ್ರಕರಣ?
    ಭಾನುವಾರ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಏಷ್ಯಾ ಕಪ್ ಫೈನಲ್ ಪಂದ್ಯಾವಳಿ ನಡೆದಿತ್ತು. ಈ ವೇಳೆ ಯಾವುದೇ ಗಲಾಟೆಗಳು ಆಗದಂತೆ ಪೊಲೀಸರು ಗಸ್ತು ತಿರುಗುತ್ತಿದ್ದರು. ರಾತ್ರಿ 12 ಗಂಟೆಯಾದರೂ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ತಮ್ಮ ಮೆಸ್ ತೆಗೆದು ಊಟ ಕೊಡುತ್ತಿದ್ದರು. ಈ ವೇಳೆ ಮೆಸ್ ಬಂದ್ ಮಾಡುವಂತೆ ಹೇಳಲು ಹೋದ ಪೊಲೀಸರ ಮೇಲೆ ರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಅಲ್ಲದೇ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೇ ಜೀವ ಬೆದರಿಕೆ ಕೂಡ ಹಾಕಿದ್ದರು ಆರೋಪಿಲಾಗಿದೆ. ಇದನ್ನೂ ಓದಿ: ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕದಲ್ಲಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

    ಪೊಲೀಸರು ಮೆಸ್ ಬಂದ್ ಮಾಡುವಂತೆ ಹೇಳಿ ಹಲ್ಲೆ ಮಾಡಿದ್ದಾರೆ ಎಂದು ಮಾಜಿ ಸೈನಿಕ ಆರೋಪಿಸಿದ್ದಾರೆ. ಇದೀಗ ಪೊಲೀಸರು ನೀಡಿದ ದೂರಿನಾಧಾರ ಮಾಜಿ ಸೈನಿಕ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

  • ಯುದ್ಧದ ವೇಳೆ 36 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ – ಮಾಜಿ ಯೋಧರಿಗೆ 30 ವರ್ಷ ಜೈಲು ಶಿಕ್ಷೆ

    ಯುದ್ಧದ ವೇಳೆ 36 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ – ಮಾಜಿ ಯೋಧರಿಗೆ 30 ವರ್ಷ ಜೈಲು ಶಿಕ್ಷೆ

    ಗ್ವಾಟೆಮಾಲಾ ನಗರ: ದೇಶದ ಅಂತರ್ಯುದ್ಧದ ಸಂದರ್ಭದಲ್ಲಿ 36 ಸ್ಥಳೀಯ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಐವರು ಮಾಜಿ ಸೈನಿಕರಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

    ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ಸಂತ್ರಸ್ತೆಯರು ನೀಡಿರುವ ಸಾಕ್ಷ್ಯಗಳನ್ನು ನಾವು ದೃಢವಾಗಿ ನಂಬುತ್ತೇವೆ ಎಂದು ನ್ಯಾಯಾಧೀಶ ಗೆರ್ವಿ ಸಿಕಲ್‌ ತಿಳಿಸಿದ್ದಾರೆ. ಇದನ್ನೂ ಓದಿ: ಆಫ್ರಿಕಾ ಕ್ರೀಡಾಂಗಣದಲ್ಲಿ ಫುಟ್‌ಬಾಲ್‌ ವೀಕ್ಷಣೆಗಾಗಿ ನೂಕಾಟ, ಕಾಲ್ತುಳಿತ – 8 ಬಲಿ

    1981 ಮತ್ತು 1985ರ ಅವಧಿಯಲ್ಲಿ ಈ ಘಟನೆ ನಡೆದಿತ್ತು. ಅಪರಾಧಿಗಳಾದ ಬೆನ್ವೆನುಟೊ, ಬರ್ನಾರ್ಡೊ ರೂಯಿಜ್‌, ಡಾಮಿಯನ್‌, ಗೇಬ್ರಿಯಲ್‌ ಮತ್ತು ಫ್ರಾನ್ಸಿಸ್ಕೊ ಕುಕ್ಸಮ್‌ ಶಿಕ್ಷೆಗೆ ಗುರಿಯಾದ ಮಾಜಿ ಸೈನಿಕರು. ರಾಜಧಾನಿಯ ಜೈಲಿನಲ್ಲಿರುವ ಇವರು ವೀಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ತೀರ್ಪನ್ನು ಆಲಿಸಿದ್ದಾರೆ.

    ಯುದ್ಧದಿಂದಾಗಿ ರಬಿನಾಲ್‌ ಜನರಿಗೆ ಅಪಾರ ನಷ್ಟವುಂಟಾಗಿದೆ. ರಬಿನಾಲ್‌ ಪ್ರದೇಶದಲ್ಲಿ ಸುಮಾರು 3,000ಕ್ಕೂ ಹೆಚ್ಚು ನಾಗರಿಕರು ಹತ್ಯೆಯಾಗಿದ್ದಾರೆ. ಆಗ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಪರಾಧಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತೆಯರು ದೂರು ನೀಡಿದ್ದರು. ದಶಕಗಳ ನಂತರ (ಜ.5) ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ – 42 ಮಂದಿ ಸಾವು

    ನಾನು 19 ವಯಸ್ಸಿನ ಹುಡುಗಿಯಾಗಿದ್ದಾಗ ಸೇನೆಯಲ್ಲಿದ್ದ ಯೋಧರು ನನ್ನನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ್ದರು. ನಮ್ಮ ಗ್ರಾಮವನ್ನು ಕಾಯುತ್ತಿದ್ದ ಸೈನಿಕರೇ ಈ ಕೃತ್ಯ ಎಸಗಿದ್ದರು ಎಂದು ಈಗ 59ರ ವೃದ್ಧೆಯಾಗಿರುವ ಸಂತ್ರಸ್ತೆ ಮಾರ್ಗರಿಟಾ ಸಿಯಾನಾ ದೂರಿನಲ್ಲಿ ತಿಳಿಸಿದ್ದಾರೆ.

    3 ತಿಂಗಳು ಅವರಿಂದ ಚಿತ್ರಹಿಂಸೆ ಅನುಭವಿಸಿದ್ದೇವೆ. ಆ ಘಟನೆ ಈಗಲೂ ನಮ್ಮನ್ನು ಕಂಗೆಡಿಸಿದೆ. ನಾವು ಸುಳ್ಳು ಹೇಳುತ್ತಿಲ್ಲ ಎಂದು ಮತ್ತೊಬ್ಬ ಸಂತ್ರಸ್ತೆ ಹೇಳಿದ್ದಾರೆ. ಇದನ್ನೂ ಓದಿ: ವರ್ಕೌಟ್ ವೇಳೆ ವೃದ್ಧ ದಂಪತಿ ಕಿಸ್ಸಿಂಗ್ ವೀಡಿಯೋ ವೈರಲ್

    ಆದರೆ ಅಪರಾಧಿಗಳಾದ ಮಾಜಿ ಸೈನಿಕರ ಸಂಬಂಧಿಕರು ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಸಂತ್ರಸ್ತೆಯರ ವಿರುದ್ಧ ನ್ಯಾಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

  • ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

    ಕಾಬೂಲ್: ಯುಎಸ್ ಬೆಂಬಲಿತ ಆಡಳಿತದಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನು ತಾಲಿಬಾನಿಗಳು ರಹಸ್ಯವಾಗಿ ಕೊಂದಿದ್ದಾರೆ ಎಂದು ಆರೋಪಿಸಿ ಮಹಿಳೆಯರ ಗುಂಪೊಂದು ಮಂಗಳವಾರ ಅಫ್ಘಾನ್ ರಾಜಧಾನಿ ಕಾಬೂಲ್ ನಲ್ಲಿ ಪ್ರತಿಭಟನೆ ನಡೆಸಿದೆ.

    ಕಾಬೂಲ್‍ನ ಮಧ್ಯಭಾಗದಲ್ಲಿರುವ ಮಸೀದಿಯೊಂದರ ಬಳಿ ಸುಮಾರು 30 ಮಹಿಳೆಯರು ಜಮಾಯಿಸಿದ್ದು, ತಾಲಿಬಾನ್ ಪಡೆಗಳ ವಿರುದ್ಧ ‘ನ್ಯಾಯಬೇಕು’ ಎಂದು ಘೋಷಣೆಗಳನ್ನು ಕೂಗುತ್ತಾ ನೂರು ಮೀಟರ್ ಮೆರವಣಿಗೆ ನಡೆಸಿದ್ದಾರೆ.

    ತಾಲಿಬಾನಿಗಳು ಯುವಕರನ್ನು ನಿಗೂಢವಾಗಿ ಹತ್ಯೆ ಮಾಡಿದ್ದಾರೆ. ಅಲ್ಲದೇ ದೇಶದ ಮಾಜಿ ಸೈನಿಕರನ್ನು ಹತ್ಯೆ ಮಾಡಿದ್ದಾರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರವನ್ನು ಮಾಧ್ಯಮಗಳು ಪ್ರಕಟಿಸಬಾರದು ಎಂದು ತಾಲಿಬಾನ್ ಪ್ರಯತ್ನಿಸಿತ್ತು. ಇದಕ್ಕೆ ತಾಲಿಬಾನಿಗಳು ವರದಿಗಾರರನ್ನು ಮತ್ತು ಛಾಯಾಗ್ರಾಹಕರ ಉಪಕರಣಗಳನ್ನು ವಶಪಡಿಸಿಕೊಂಡಿದ್ದರು. ಕ್ಯಾಮರಾವನ್ನು ಹಿಂದಿರುಗಿಸುವ ಮೊದಲು ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿ ಅವರಿಗೆ ಕೊಟ್ಟಿದ್ದರು. ಇದನ್ನೂ ಓದಿ: ಪುರುಷ ಸಂಬಂಧಿಗಳು ಜೊತೆಯಲ್ಲಿ ಇಲ್ಲದಿದ್ರೆ ಮಹಿಳೆಯರು ದೂರ ಪ್ರಯಾಣಿಸುವಂತಿಲ್ಲ: ತಾಲಿಬಾನ್‌

    ಅಮ್ನೆಸ್ಟಿ ಇಂಟರ್‍ನ್ಯಾಶನಲ್ ಮತ್ತು ಹ್ಯೂಮನ್ ರೈಟ್ಸ್ ವಾಚ್, ತಾಲಿಬಾನ್ ಅಧಿಕಾರವನ್ನು ಸ್ವಾಧೀನಪಡಿಸಿಕೊಂಡ ನಂತರ 100 ಕ್ಕೂ ಹೆಚ್ಚು ಕಾನೂನುಬಾಹಿರ ಹತ್ಯೆಗಳು ಅಫ್ಘಾನ್ ನಲ್ಲಿ ನಡೆದಿದೆ ಎಂಬ ಆರೋಪಗಳಿವೆ ಎಂದು ವಿಶ್ವಸಂಸ್ಥೆ ವರದಿ ಮಾಡಿತ್ತು. ಈ ಹಿನ್ನೆಲೆ ಮಂಗಳವಾರ ತಾಲಿಬಾನ್ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.

    ಪ್ರತಿಭಟನಾಕಾರರಾದ ನಯೆರಾ ಕೊಹಿಸ್ತಾನಿ, ತಾಲಿಬಾನಿಗಳು ತಮ್ಮ ದೌರ್ಜನ್ಯವನ್ನು ನಿಲ್ಲಿಸಬೇಕು. ನಮಗೆ ಸ್ವಾತಂತ್ರ್ಯ ಬೇಕು, ನಮಗೆ ನ್ಯಾಯ ಬೇಕು. ನಮಗೆ ಮಾನವ ಹಕ್ಕುಗಳು ಬೇಕು ಎಂದು ಆಗ್ರಹಿಸಿದ್ದಾರೆ.

    ಆಗಸ್ಟ್‍ನಲ್ಲಿ ತಾಲಿಬಾನ್ ಘೋಷಿಸಿದ ಸಾಮಾನ್ಯ ಕ್ಷಮಾದಾನವನ್ನು ಉಲ್ಲಂಘಿಸಿ, ಮಾಜಿ ಸೈನಿಕರು ಮತ್ತು ಸರ್ಕಾರಿ ನೌಕರರನ್ನು ತಾಲಿಬಾನಿಗಳು ಹತ್ಯೆ ಮಾಡಲಾಗಿದೆ. ಅಲ್ಲದೇ ತಾಲಿಬಾನ್ ಆಳ್ವಿಕೆಯ ಅಡಿಯಲ್ಲಿ ಮಹಿಳೆಯರಿಗೆ ಹಲವು ನಿರ್ಬಂಧಗಳಿವೆ. ಇದರಿಂದ ಅವರು ಜೀವಿಸಲು ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದು ಬಂದ್‌ ಬದಲಿಗೆ ಬೃಹತ್‌ ರ‍್ಯಾಲಿ – MES ನಿಷೇಧಕ್ಕೆ ಸರ್ಕಾರಕ್ಕೆ ಗಡುವು

    ವಾರಾಂತ್ಯದಲ್ಲಿ ತಾಲಿಬಾನ್ ಸರ್ಕಾರವು, ಮಹಿಳೆಯರು ಪುರುಷ ಸಂಬಂಧಿ ಬೆಂಗಾವಲು ಹೊರತು ದೂರದ ಪ್ರಯಾಣವನ್ನು ನಿಷೇಧಿಸಲಾಗಿದೆ ಎಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದರಿಂದ ಆಕ್ರೋಶಗೊಂಡ ಮಹಿಳೆಯರು, ನಮ್ಮ ಹಕ್ಕುಗಳು ಮಾನವ ಹಕ್ಕುಗಳಾಗಿವೆ. ನಾವು ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.

  • ಮಾಜಿ ಸೈನಿಕನಿಗೆ ಅಪಮಾನ – ರಾಷ್ಟ್ರಧ್ವಜ ಹಿಡಿದು ಮಾಜಿ ಸೈನಿಕರಿಂದ ಟೋಲ್ ಗೆ ಮುತ್ತಿಗೆ

    ಮಾಜಿ ಸೈನಿಕನಿಗೆ ಅಪಮಾನ – ರಾಷ್ಟ್ರಧ್ವಜ ಹಿಡಿದು ಮಾಜಿ ಸೈನಿಕರಿಂದ ಟೋಲ್ ಗೆ ಮುತ್ತಿಗೆ

    ನೆಲಮಂಗಲ: ಎರಡು ದಿನದ ಹಿಂದೆ ಮಾಜಿ ಸೈನಿಕನಿಗೆ ಟೋಲ್ ಸಿಬ್ಬಂದಿ ಅಪಮಾನ ಮಾಡಿದ್ದನ್ನು ಖಂಡಿಸಿ ಮಾಜಿ ಸೈನಿಕ ಸಂಘದವರು ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿಯ ದೇವಿಹಳ್ಳಿ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ:ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್

    ನೆಲಮಂಗಲ – ಹಾಸನ ರಾಷ್ಟ್ರೀಯ ಹೆದ್ದಾರಿಯ ಟೋಲ್ ಕಂಪೆನಿ ಮುಂದೆ ಮಾಜಿ ಸೈನಿಕರು ರಾಷ್ಟ್ರಧ್ವಜ ಹಿಡಿದು ಟೋಲ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮಾಜಿ ಸೈನಿಕನಿಗೆ ಅಪಮಾನ ಮಾಡಿದ ಟೋಲ್ ಸಿಬ್ಬಂದಿಯನ್ನು ವಜಾ ಮಾಡುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು.

    ಟೋಲ್ ತಡೆಯಲು ಮುಂದಾದಾಗ ಪೆÇಲೀಸರು ಮತ್ತು ಮಾಜಿ ಸೈನಿಕರ ನಡುವೆ ವಾಗ್ವಾದ ನಡೆಯಿತು. ರಸ್ತೆಯಲ್ಲಿ ಪ್ರತಿಭಟನೆ ಮಾಡಲು ಅವಕಾಶವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದನ್ನು ವಿರೋಧಿಸಿದ ಪ್ರತಿಭಟನಾಕಾರರು ಸ್ಥಳಕ್ಕೆ ಟೋಲ್ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಡಿವೈಎಸ್ ಪಿ ಜಗದೀಶ್, ಸಿಪಿಐ ಹರೀಶ್ ಹಾಗೂ ಪಿಎಸ್‍ಐ ವಸಂತ್ ಪರಿಸ್ಥಿತಿಯನ್ನು ತಿಳಿಗೊಳಿಸಿ ಮನವಿಯನ್ನು ಸ್ವೀಕರಿಸಿದರು. ಇದನ್ನೂ ಓದಿ:ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!

    ಈ ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ ಅಧ್ಯಕ್ಷ ಡಾ.ಶಿವಣ್ಣ, ಶ್ರೀನಿವಾಸ್, ಜಗನ್ನಾಥ್, ಲಿಂಗಣ್ಣ ಸೇರಿದಂತೆ 30ಕ್ಕೂ ಹೆಚ್ಚು ನಿವೃತ್ತ ಸೈನಿಕರು ಭಾಗಿಯಾಗಿದ್ದರು.

  • ಕೊಡಗಿನ ಸೈನಿಕನ ಮೇಲೆ ಹಲ್ಲೆ ಖಂಡಿಸಿ ಮಾಜಿ ಸೈನಿಕರಿಂದ ಮೌನ ಪ್ರತಿಭಟನೆ

    ಕೊಡಗಿನ ಸೈನಿಕನ ಮೇಲೆ ಹಲ್ಲೆ ಖಂಡಿಸಿ ಮಾಜಿ ಸೈನಿಕರಿಂದ ಮೌನ ಪ್ರತಿಭಟನೆ

    ಹಾಸನ: ರಜೆಯಲ್ಲಿದ್ದ ಸೈನಿಕನೋರ್ವ ಆತನ ಕುಟುಂಬದ ಜೊತೆ ಪ್ರಯಾಣಿಸುತ್ತಿದ್ದ ವೇಳೆ ಹಿಂಸೆ ನೀಡಿ ಅಮಾನವೀಯವಾಗಿ ವರ್ತಿಸಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

    ಜುಲೈ 25 ರಂದು ಕುಶಾಲನಗರದಿಂದ ಮಡಿಕೇರಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ, ಭಾರತೀಯ ಸೈನಿಕನ ಕಾರಿಗೆ ಹಿಂಬದಿಯಿಂದ ಶುಂಠಿ ಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯ ರಫೀಕ್ ಕಾರು ಡಿಕ್ಕಿಯಾಗಿತ್ತು. ಆಗ ಇಬ್ಬರ ನಡುವೆ ಪರಸ್ಪರ ವಾಗ್ವಾದವಾಗಿ ಗಲಾಟೆ ನಡೆದಿತ್ತು. ಸೈನಿಕ ಮತ್ತು ಆತನ ಕುಟುಂಬದ ಸದಸ್ಯರ ಮೇಲೆ ಹಿಂಸೆ ಮತ್ತು ಅಮಾನವೀಯವಾಗಿ ಈ ವೇಳೆ ವರ್ತಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರು ಹೋಗುವುದಾಗಿ ಹೇಳಿ 3 ದಿನದ ಹಿಂದೆ ಮನೆ ಬಿಟ್ಟವ ಶವವಾಗಿ ಪತ್ತೆ

    ಇದನ್ನು ಖಂಡಿಸಿ ಹಾಸನದ ಮಾಜಿ ಸೈನಿಕರು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೌನ ಪ್ರತಿಭಟನಾ ಮೆರವಣಿಗೆ ಹೊರಟು, ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿದರು. ಬಳಿಕ ಯೋಧನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಶಿಕ್ಷೆ ವಿಧಿಸಿ ಮುಂದೆ ಇಂತಹ ಘಟನೆ ಮರುಕಳಿಸದಂತೆ ನಿಗಾವಹಿಸಬೇಕೆಂದು ಒತ್ತಾಯಿಸಿದರು.

    ಮೌನ ಪ್ರತಿಭಟನೆಯಲ್ಲಿ ನಿವೃತ್ತ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಜಿ.ಕೆ ಪುಟ್ಟರಾಜು, ಕಾರ್ಯದರ್ಶಿ ಎ.ಎಸ್ ಪ್ರದೀಪ್ ಸಾಗರ್, ಖಜಾಂಚಿ ಸಿ.ಇ. ಕಾಳೇಗೌಡ, ಟಿ.ಕೆ ಯೋಗೀಶ್, ಯು.ಎ ಗಂಗಾಧರ್ ಇತರರು ಪಾಲ್ಗೊಂಡಿದ್ದರು.

  • ಸೈನಿಕರಿಗೆ ಪಾದ ಪೂಜೆ ಮಾಡಿ ಬಿಜೆಪಿ ಮಾಜಿ ಶಾಸಕನಿಂದ ಹುಟ್ಟುಹಬ್ಬ ಆಚರಣೆ

    ಸೈನಿಕರಿಗೆ ಪಾದ ಪೂಜೆ ಮಾಡಿ ಬಿಜೆಪಿ ಮಾಜಿ ಶಾಸಕನಿಂದ ಹುಟ್ಟುಹಬ್ಬ ಆಚರಣೆ

    ರಾಯಚೂರು: ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಅವರು ಮಾಜಿ ಸೈನಿಕರಿಗೆ ಪಾದ ಪೂಜೆ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ನಗರದ ಐಡಿಎಸ್ ಎಂಟಿ ಲೇಔಟ್‍ನಲ್ಲಿರುವ ತಮ್ಮ ನಿವಾಸದಲ್ಲಿ ತಿಪ್ಪರಾಜು 15 ಮಂದಿ ಮಾಜಿ ಸೈನಿಕರಿಗೆ ಪಾದ ಪೂಜೆ ಮಾಡಿದ್ದಾರೆ. 42ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ತಿಪ್ಪರಾಜು ಯಾವುದೇ ಸಡಗರ ಸಂಭ್ರಮವಿಲ್ಲದೆ ತಮ್ಮ ಹುಟ್ಟುಹಬ್ಬವನ್ನ ಸರಳವಾಗಿ ಆರಿಸಿಕೊಂಡರು. ಪುಲ್ವಾಮ ಘಟನೆ ಹಾಗೂ ದೇಶದ ವೀರಯೋಧ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ವಶದಲ್ಲಿದ್ದರಿಂದ ಹುಟ್ಟು ಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ ಅಂತ ಆಚರಣೆಯನ್ನ ಕೈಬಿಟ್ಟಿದ್ದರು.

    ತಮ್ಮ ಅಭಿಮಾನಿಗಳು ಕಾರ್ಯಕರ್ತರಿಗೆ ಹಾರ ತುರಾಯಿಗಳನ್ನ ತರಬಾರದು ಎಂದು ಮೊದಲೆ ಸೂಚಿಸಿದ್ದರು. ಹೀಗಾಗಿ ಮಾಜಿ ಸೈನಿಕರಿಗೆ ಪಾದ ಪೂಜೆ ಮಾಡಿ ಆರತಿ ಬೆಳಗಿ, ಶಾಲು ಹೊದಿಸಿ ಸನ್ಮಾನ ಮಾಡಿ ಫಲಪುಷ್ಪ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ರಾಯಚೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ತಿಪ್ಪರಾಜು ಪ್ರಧಾನಿ ನರೇಂದ್ರ ಮೋದಿ ಪೌರಕಾರ್ಮಿಕರಿಗೆ ಪಾದಪೂಜೆ ಮಾಡಿದ್ದರ ಪ್ರೇರಣೆಯಿಂದ ಮಾಜಿ ಸೈನಿಕರ ಪಾದಪೂಜೆ ಮಾಡಿದ್ದಾರೆ.

    ಪುಲ್ವಾಮಾದಲ್ಲಿ ನಮ್ಮ ವೀರಯೋಧ ಗುರು ಸೇರಿದಂತೆ ಇಡೀ ದೇಶದ ಯೋಧರು ಹುತಾತ್ಮರಾದರು. ಇದರಿಂದ ಜನರು ದುಃಖದಲ್ಲಿದ್ದಾರೆ. ಹೀಗಾಗಿ ನನ್ನ ಬರ್ತ್ ಡೇಯನ್ನು ಆಚರಿಸಿಕೊಳ್ಳಬಾರದು ಎಂದು ನನ್ನ ಬೆಂಬಲಿಗರಿಗೆ, ಅಭಿಮಾನಿಗಳಿಗೆ ತಿಳಿಸಿದ್ದೆ. ಇಂದು ರಾಯಚೂರಿನಲ್ಲಿರುವ ಮಾಜಿ ಸೈನಿಕರನ್ನು ಕರೆದು ಅವರಿಗೆ ಗೌರವ ಸಪರ್ಮಣೆ ಮಾಡಿದ್ದೇನೆ. ಈ ಮೂಲಕ ದೇಶದ ಎಲ್ಲ ಸೈನಿಕರಿಗೆ ಗೌರವ ಸಲ್ಲಿಸುತ್ತೇನೆ ಎಂದು ತಿಪ್ಪರಾಜು ಹವಾಲ್ದಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv