Tag: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

  • ಕನ್ನಡಿಗರು ಎಂಬುದನ್ನು ಸಿ.ಟಿ.ರವಿ ಮರೆತು ಭಾರತೀಯರಾಗಿದ್ದಾರೆ: ಹೆಚ್‍ಡಿಕೆ

    ಕನ್ನಡಿಗರು ಎಂಬುದನ್ನು ಸಿ.ಟಿ.ರವಿ ಮರೆತು ಭಾರತೀಯರಾಗಿದ್ದಾರೆ: ಹೆಚ್‍ಡಿಕೆ

    – ಕೇಂದ್ರಕ್ಕೆ ನಮ್ಮ ಮೇಲೆ ಇರುವ ತಾರತಮ್ಯವನ್ನು ಸೂಚಿಸುತ್ತೆ

    ರಾಮನಗರ: ಸಿ.ಟಿ.ರವಿ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆದ ಮೇಲೆ ಕನ್ನಡಿಗರು ಎಂಬುದನ್ನು ಮರೆತು ಅವರು ಭಾರತೀಯರಾಗಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

    ಮೇಕೆದಾಟು ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಚಾರವಾಗಿ ರಾಜ್ಯಪಾಲರಿಗೆ ಮನವಿ ನೀಡಿದ್ದೇವೆ. ರಾಷ್ಟ್ರಪತಿಗಳು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಸಂಪೂರ್ಣ ಮಾಹಿತಿಯನ್ನು ನಾವು ಕೊಟ್ಟಿದ್ದೇವೆ. ಸದ್ಯದಲ್ಲೇ ನಾವು ಸಿಎಂ ಬಳಿಯು ಮಾತನಾಡಲು ಅವಕಾಶವನ್ನು ಕೇಳಿದ್ದೇನೆ. ಅದು ಅಲ್ಲದೇ ನೀರಾವರಿ ಮಂತ್ರಿ ಜೆ.ಸಿ ಮಾಧುಸ್ವಾಮಿ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮೇಕೆದಾಟು ಯೋಜನೆಯನ್ನು ಮಾಡಲು ಯಾರ ಅಪ್ಪಣೆ ಬೇಕಿಲ್ಲವೆಂದು ಹೇಳಿರುವುದನ್ನು ಗಮನಿಸಿದ್ದೇನೆ. ಆದರೆ ಅದು ಕಾರ್ಯರೂಪಕ್ಕೆ ಬರಬೇಕು. ಈಗಾಗಲೇ ತುಂಬಾ ಸಮಯವನ್ನು ವ್ಯರ್ಥ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ರವಿ ಅವರು ರಾಷ್ಟ್ರಮಟ್ಟದ ಪ್ರಧಾನ ಕಾರ್ಯದರ್ಶಿ ಆದ ಮೇಲೆ ಕನ್ನಡಿಗರು ಎಂಬುದನ್ನು ಮರೆತು ಅವರು ಭಾರತೀಯರಾಗಿದ್ದಾರೆ. ಅದು ಅವರ ಮಾತಿನಲ್ಲಿ ತಿಳಿಯುತ್ತೆ. ಮೊದಲು ಅವರು ನಮ್ಮ ತಾಯಿಯನ್ನು ಉಳಿಸಿಕೊಂಡರೆ ನಂತರ ಭಾರತದ ತಾಯಿಯನ್ನು ಉಳಿಸಬಹುದು. ಮೊದಲು ಅವರು ಇದನ್ನು ತಿಳಿಯಲಿ ಎಂದು ತಿರುಗೇಟು ಕೊಟ್ಟಿದ್ದಾರೆ.

    ನಾನು ಸಿಎಂ ಆಗಿದ್ದಾಗ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಅವರು ಡಿಪಿಆರ್‍ಅನ್ನು ಸಿದ್ಧಗೊಳಿಸಲು ಅನುಮತಿಯನ್ನು ಕೊಟ್ಟಿದ್ದರು. ಆದರೆ ಈಗ ಏಕೆ ಈ ರೀತಿಯಾಗುತ್ತಿದೆ ಎಂದು ನನಗೆ ಗೊತ್ತಿಲ್ಲ. ಈಗ ಬೇರೆ ಬೇರೆ ರೀತಿಯ ಕಾರಣಕೊಡುತ್ತಿರುವುದು ಕೇಂದ್ರಕ್ಕೆ ನಮ್ಮ ಮೇಲೆ ಇರುವ ತಾರತಮ್ಯವನ್ನು ಸೂಚಿಸುತ್ತೆ. ನಮ್ಮ ರಾಜ್ಯದ ಜನತೆಗೆ ದ್ರೋಹ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ:ನಮ್ಮನ್ನು ಬೆಂಬಲಿಸಿದ್ದರೆ ಸಿ.ಟಿ ರವಿ ದೊಡ್ಡವರಾಗುತ್ತಿದ್ದರು: ಎಂ.ಪಿ ಕುಮಾರಸ್ವಾಮಿ

    ಭಾರತದಂತಹ ಒಕ್ಕೂಟ ಸಮಾಜದಲ್ಲಿ ಈ ರೀತಿ ನಡೆದರೆ ನಾವು ಎಲ್ಲಿಗೆ ಹೋಗುವುದು. ಈ ರೀತಿ ಮಾಡಿದರೆ ದೇಶಕ್ಕೆ ಒಳ್ಳೆಯದಲ್ಲ ಎಂದು ಕೇಂದ್ರದವರು ಅರ್ಥ ಮಾಡಿಕೊಳ್ಳಬೇಕು ಎಂದು ಬೇಸರಗೊಂಡಿದ್ದಾರೆ. ಇದನ್ನೂ ಓದಿ:ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಪ್ರಕರಣ ಸಂಬಂಧ ಒಂದಿಷ್ಟು ಕ್ಲ್ಯೂ ಸಿಕ್ಕಿದೆ: ಕಮಲ್ ಪಂತ್

  • ರಾಜಕೀಯ ಮಾಡಲು ಬೇರೆ ಮಾರ್ಗಗಳಿವೆ, ಸಿಡಿ ಬಗ್ಗೆ ಮಾತನಾಡಲ್ಲ: ಹೆಚ್‍ಡಿಕೆ

    ರಾಜಕೀಯ ಮಾಡಲು ಬೇರೆ ಮಾರ್ಗಗಳಿವೆ, ಸಿಡಿ ಬಗ್ಗೆ ಮಾತನಾಡಲ್ಲ: ಹೆಚ್‍ಡಿಕೆ

    ಬೆಂಗಳೂರು: ರಾಜಕೀಯ ಮಾಡುವುದಕ್ಕೆ ಬೇರೆ ರೀತಿಯ ಮಾರ್ಗಗಳಿವೆ. ಸಿಡಿ ವಿಚಾರವಾಗಿ ಮಾತನಾಡುವುದು ನಮಗೆ ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ.

    ಸಚಿವ ರಮೇಶ್ ಜಾರಕಿಹೊಳಿ ರಾಸಲೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಸಿಡಿ ಬಗ್ಗೆ ಮಾತನಾಡುವುದು ನಮಗೆ ಶೋಭೆ ತರುವುದಿಲ್ಲ. ಇಂತಹ ವಿಷಯ ಇಟ್ಟುಕೊಂಡು ನಾನು ರಾಜಕೀಯ ಮಾಡುವುದಿಲ್ಲ. ರಾಜಕೀಯ ಮಾಡವುದಕ್ಕೆ ಬೇರೆ ಮಾರ್ಗಗಳಿವೆ ಎಂದು ಹೇಳಿದ್ದಾರೆ.

    ರಾಜಕೀಯ ವ್ಯಕ್ತಿಗಳ ಇಂತಹ ನಡವಳಿಕೆಗಳಿಂದ ಸಮಾಜದಲ್ಲಿ ಬೆಳವಣಿಗೆ ಬಗ್ಗೆ ಗೊತ್ತಾಗುತ್ತೆ. ನನ್ನ ಸರ್ಕಾರ ತೆಗೆದರು. ಆದರೆ ನನಗೆ ಯಾವುದೇ ಬೇಸರವಿಲ್ಲ. ಈಗ ಯಡಿಯೂರಪ್ಪನವರ ಸರ್ಕಾರ ಇದೆ. ಹಾಗಾಗಿ ಈ ವಿಚಾರವಾಗಿ ಉತ್ತರ ಯಡಿಯೂರಪ್ಪನವರು ನೀಡಬೇಕು. ಬಿಜೆಪಿ ನಾಯಕರಿಂದ ಉತ್ತರ ಪಡೆಯುವುದು ಸೂಕ್ತ ಎಂದರು.

    ವಿಶ್ವನಾಥ್‍ರವರು ಕರ್ನಾಟಕದಲ್ಲಿ ರಾಕ್ಷಸಿ ಸರ್ಕಾರ ಇತ್ತು. ರಾಕ್ಷಸಿ ಸರ್ಕಾರ ತೆಗೆಯಲು ನಾವು ಗುಂಪು ಮಾಡಿಕೊಂಡು ಬಾಂಬೆಗೆ ಹೋಗಿ ರಾಮ ರಾಜ್ಯ ತಂದಿದ್ದೇವೆ ಎಂದು ಹೇಳಿದ್ದರು. ಯಾವ ರಾಮ ರಾಜ್ಯ ತಂದಿದ್ದಾರೆ ಎಂದು ಇವರೆಲ್ಲ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಲಿ. ನಾನು ಈ ವಿಚಾರವಾಗಿ ಯಾವುದೇ ರಿಯಾಕ್ಷನ್ ಕೊಡುವುದಿಲ್ಲ ಎಂದು ಹೇಳಿದರು.