Tag: ಮಾಜಿ ಶಾಸಕ ಎಂ.ಕೆ ಸೋಮಶೇಖರ್

  • ಬೀದಿಯಲ್ಲಿ ನರಳುತ್ತಿದ್ದ ವೃದ್ಧರನ್ನು ಆಸ್ಪತ್ರೆಗೆ ಸೇರಿಸಿದ ಮಾಜಿ ಶಾಸಕ

    ಬೀದಿಯಲ್ಲಿ ನರಳುತ್ತಿದ್ದ ವೃದ್ಧರನ್ನು ಆಸ್ಪತ್ರೆಗೆ ಸೇರಿಸಿದ ಮಾಜಿ ಶಾಸಕ

    ಮೈಸೂರು: ನಗರದ ಸಾರಿಗೆ ಬಸ್ ತಂಗುದಾಣದಲ್ಲಿ ನರಳುತ್ತಾ ಬಿದ್ದಿದ್ದ ವೃದ್ಧರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಮೈಸೂರಿನ ಕೆ.ಆರ್ ಕ್ಷೇತ್ರದ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಮಾನವೀಯತೆ ಮೆರೆದಿದ್ದಾರೆ.

    ಮೈಸೂರಿನ ರೈಲ್ವೆ ವರ್ಕ್‍ಶಾಪ್ ಬಳಿಯ ನಗರ ಬಸ್ ನಿಲ್ದಾಣದ ತಂಗುದಾಣದಲ್ಲಿ ವೃದ್ಧರೊಬ್ಬರು ನರಳುತ್ತಾ ಮಲಗಿದ್ದರು. ಅವರನ್ನು ಗಮನಿಸಿದ ಸೋಮಶೇಖರ್ ತಕ್ಷಣವೇ ಅಂಬುಲೆನ್ಸ್ ಕರೆಸಿ, ವೃದ್ಧರನ್ನು ಕೆ.ಆರ್ ಆಸ್ಪತ್ರೆಗೆ ಕಳುಹಿಸಿದರು.

    ಅಷ್ಟೇ ಅಲ್ಲದೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ, ವೃದ್ಧರಿಗೆ ಸರಿಯಾಗಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ವೃದ್ಧನ ಗಂಟಲಲ್ಲಿ ಗೆಡ್ಡೆ ಬೆಳೆದಿದ್ದು, ಅವರು ಮಾತನಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಯಾರು? ಯಾವ ಊರು ಎನ್ನುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ.