Tag: ಮಾಜಿ ಯೋಧ

  • ಮದ್ಯದ ಅಮಲಿನಲ್ಲಿ ತಮ್ಮನ ಪತ್ನಿ, ಪುತ್ರನನ್ನು ಗುಂಡಿಕ್ಕಿ ಕೊಂದ ಮಾಜಿ ಯೋಧ

    ಮದ್ಯದ ಅಮಲಿನಲ್ಲಿ ತಮ್ಮನ ಪತ್ನಿ, ಪುತ್ರನನ್ನು ಗುಂಡಿಕ್ಕಿ ಕೊಂದ ಮಾಜಿ ಯೋಧ

    ಕಾರವಾರ: ಮದ್ಯ ಅಮಲಿನಲ್ಲಿ ಮಾಜಿ ಯೋಧನೊಬ್ಬ ತಮ್ಮನ ಪತ್ನಿ ಹಾಗೂ ಪುತ್ರನನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.

    ಅಂಕೋಲಾದ ಮಠಾಕೇರಿ ಬಡಾವಣೆಯ ನಿವಾಸಿ ಅಜೀತ್ ಅವರ ಪತ್ನಿ ಮೇಧಾ (40) ಹಾಗೂ ಪುತ್ರ ಅನುಜ್ (09) ಕೊಲೆಯಾದವರು. ಅಜಯ್ ಪ್ರಭು ಕೊಲೆ ಮಾಡಿದ ಮಾಜಿ ಯೋಧ.

    ಅಜಯ್ ಪ್ರಭು 2009ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದ್ದ. ಆದರೆ ಕೌಟುಂಬಿಕ ಕಲಹದಿಂದಾಗಿ ಕೆಲ ತಿಂಗಳ ಹಿಂದೆ ಪತ್ನಿ ಆತನನ್ನು ಬಿಟ್ಟು ತವರು ಮನೆ ಹೋಗಿದ್ದಾಳೆ. ಹೀಗಾಗಿ ನಿತ್ಯವೂ ಅಜಯ್ ಪ್ರಭು ಮದ್ಯ ಸೇವನೆ ಮಾಡುತ್ತಿದ್ದ. ಅಷ್ಟೇ ಅಲ್ಲದೆ ಕೆಳಗಿನ ಮನೆಯಲ್ಲಿ ವಾಸವಿದ್ದ ತಮ್ಮ ಅಜೀತ್ ಹಾಗೂ ಆತನ ಪತ್ನಿಯ ಜೊತೆಗೆ ಆಗಾಗ ಜಗಳವಾಡುತ್ತಿದ್ದ.

    ಅಜಯ್ ಎಂದಿನಂತೆ ಶನಿವಾರವೂ ಮದ್ಯದ ಸೇವಿಸಿ ಮನೆಗೆ ಬಂದಿದ್ದ. ಈ ವೇಳೆ ತನ್ನ ಬಳಿ ಇದ್ದ ಗನ್‍ನಿಂದ ಅನುಜ್ ಹಾಗೂ ಮೇಧಾ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ಇಬ್ಬರಿಗೂ ಗುಂಡು ತಗುಲಿ ಅನುಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೇಧಾ ಗಂಭೀರವಾಗಿ ಗಾಯಗೊಂಡಿದ್ದರು. ಗುಂಡಿನ ಸದ್ದು ಕೇಳಿದ ತಕ್ಷಣವೇ ಸ್ಥಳೀಯರು ಘಟನಾ ಸ್ಥಳಕ್ಕೆ ಬಂದಿದ್ದು, ರಕ್ತಸ್ರಾವದಿಂದ ಬಳಲುತ್ತಿದ್ದ ಮೇಧಾ ಅವರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೇಧಾ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೇಧಾ ಸಾವನ್ನಪ್ಪಿದ್ದಾರೆ. ಈ ಸಂಬಂಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಜಯ್ ಪ್ರಭುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • 50 ಕೋಟಿ ಕೊಟ್ರೆ ಮೋದಿಯನ್ನು ಕೊಲ್ಲುತ್ತೇನೆ- ತೇಜ್‍ ಬಹದ್ದೂರ್ ವೀಡಿಯೋ ವೈರಲ್

    50 ಕೋಟಿ ಕೊಟ್ರೆ ಮೋದಿಯನ್ನು ಕೊಲ್ಲುತ್ತೇನೆ- ತೇಜ್‍ ಬಹದ್ದೂರ್ ವೀಡಿಯೋ ವೈರಲ್

    ನವದೆಹಲಿ: ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದು ನಾಮಪತ್ರ ತಿರಸ್ಕೃತಗೊಂಡಿರುವ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಅವರದ್ದು ಎನ್ನಲಾದ ವಿವಾದಿತ ವಿಡಿಯೋ ಈಗ ವೈರಲ್ ಆಗಿದೆ.

    50 ಕೋಟಿ ಕೊಟ್ಟರೆ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ತೇಜ್ ಬಹುದ್ದೂರ್ ಗೆಳೆಯನ ಮುಂದೆ ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಆದರೆ ವಿಡಿಯೋ ಎರಡು ವರ್ಷದ ಹಳೆಯದ್ದಾಗಿದ್ದು, ವಿಡಿಯೋದಲ್ಲಿರುವುದು ನಾನೇ ಎಂದು ತೇಜ್ ಬಹುದ್ದೂರ್ ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ವಿಡಿಯೋ ರಿಲೀಸ್ ಹಿಂದೆ ಯಾರದ್ದೋ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.

    ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಜಿವಿಎಲ್ ನರಸಿಂಹ ರಾವ್, ತೇಜ್ ಬಹದ್ದೂರ್ ಹೇಳಿಕೆಯಿಂದ ಭಯಗೊಂಡಿದ್ದೇವೆ. ತೇಜ್‍ಬಹದ್ದೂರ್‍ನಂತಹ ಸಮಾಜದ್ರೋಹಿಗಳ ಹಿಂದೆ ಇರೋದು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಸ್ಪರ್ಧಿಸಿದ್ದ ಮೈತ್ರಿ ಅಭ್ಯರ್ಥಿ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕೃತ

    ವಿಡಿಯೋದಲ್ಲೇನಿದೆ?:
    ತನ್ನ ಗೆಳೆಯರೊಂದಿಗೆ ಕುಳಿತುಕೊಂಡು ಮದ್ಯಪಾನ ಮಾಡುತ್ತಾ ತನ್ನ ಸ್ನೇಹಿತನೊಬ್ಬನ ಜೊತೆ ತೇಜ್ ಬಹದ್ದೂರ್ ಯಾದವ್ ನಡೆಸಿರುವ ಸಂಭಾಷಣೆ ಈ ರೀತಿ ಇದೆ.
    ತೇಜ್ ಬಹದ್ದೂರ್:  ನನಗೆ ಹಣ ಕೊಟ್ರೆ ಮೋದಿಯನ್ನು ಕೊಲ್ಲುತ್ತೇನೆ.
    ಸ್ನೇಹಿತ: ಮೋದಿಯನ್ನು ಕೊಲ್ಲಲು ಆಗುತ್ತಾ..?
    ತೇಜ್ ಬಹದ್ದೂರ್: ನನಗೆ 50 ಕೋಟಿ ಕೊಡು..
    ಸ್ನೇಹಿತ: 50 ಕೋಟಿನಾ..? ನಮ್ ದೇಶದಲ್ಲಿ ಅಷ್ಟೊಂದು ಹಣ ಸಿಗೋದು ಬಹಳ ಕಷ್ಟ.. ಅದೇ ಪಾಕಿಸ್ತಾನದಲ್ಲಾದ್ರೆ 50 ಕೋಟಿ ಕೊಡ್ತಾರೆ

    ತೇಜ್ ಬಹದ್ದೂರ್: ಇಲ್ಲ, ನಾನು ಅಂತಹ ಕೆಲಸ ಮಾಡಲ್ಲ. ನಾನು ನನ್ನ ದೇಶಕ್ಕೆ ನಿಷ್ಠ..
    ಸ್ನೇಹಿತ: ಆದರೆ, ಮೋದಿ ಭಾರತದ ಪ್ರಧಾನಿ..
    ತೇಜ್ ಬಹದ್ದೂರ್: ಇಲ್ಲ, ನನ್ನ ದೇಶಕ್ಕೆ ನಾನು ವಿಶ್ವಾಸದ್ರೋಹ ಬಗೆಯಲ್ಲ. ಹಣ ನನಗೆ ಒಂದು ವಿಷಯವೇ ಅಲ್ಲ.
    ಸ್ನೇಹಿತ: ನಾನು ಇದನ್ನು ಯಾಕೆ ಕೇಳಿದೆ ಅಂದ್ರೆ, 50 ಕೋಟಿ ಕೊಟ್ರೆ ಮೋದಿಯವರನ್ನು ಕೊಲ್ಲುವುದಾಗಿ ನೀನೇ ಹೇಳುತ್ತಾ ಇದ್ದೀಯಲ್ಲ ಅದಕ್ಕೆ.
    ತೇಜ್ ಬಹದ್ದೂರ್ : ದೇಶದ ಬಗ್ಗೆ ನನಗಿರುವ ನಿಷ್ಠೆ ಅಚಲ. ಹಾಗಾಗಿ ನಾನು ಭಾರತೀಯರು ಹಣ ಕೊಟ್ಟರೆ ಮಾತ್ರ ಕೆಲಸ ಮಾಡುತ್ತೇನೆ.