Tag: ಮಾಜಿ ಪ್ರಧಾನಿ ನೆಹರು

  • ಗೋ, ಹಂದಿ ಮಾಂಸ ಸೇವಿಸಿದ್ದರಿಂದ ನೆಹರೂ ಪಂಡಿತ್ ಅಲ್ಲ- ರಾಜಸ್ಥಾನ ಬಿಜೆಪಿ ಶಾಸಕ

    ಗೋ, ಹಂದಿ ಮಾಂಸ ಸೇವಿಸಿದ್ದರಿಂದ ನೆಹರೂ ಪಂಡಿತ್ ಅಲ್ಲ- ರಾಜಸ್ಥಾನ ಬಿಜೆಪಿ ಶಾಸಕ

    ನವದೆಹಲಿ: ತಮ್ಮ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗುವ ರಾಜಸ್ಥಾನದ ರಾಮಘಟ (ಅಲ್ವಾರ) ಪ್ಷೇತ್ರದ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಮತ್ತೊಮ್ಮೆ  ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ದೇಶದ ಮೊದಲ ಪ್ರಧಾನಿ ನೆಹರೂ ಪಂಡಿತ್ ಅಲ್ಲ. ಯಾರು ಗೋ ಮಾಂಸ ಹಾಗೂ ಹಂದಿ ಮಾಂಸ ಸೇವನೆ ಮಾಡಿದ್ದಾರೆಯೋ ಅವರನ್ನು ಪಂಡಿತ್ ಅಂತ ಕರೆಯಲು ಸಾಧ್ಯವಿಲ್ಲ. ಆದ್ರೆ ಕಾಂಗ್ರೆಸ್ ಪಕ್ಷ ನೆಹರೂ ಅವರ ಹೆಸರಿನ ಮುಂದೆ ಪಂಡಿತ್ ಅಂತ ಸೇರಿಸಿದೆ ಎಂದು ಹೇಳಿದ್ದಾರೆ.

    ಅಹುಜಾ ತಮ್ಮ ಶುಕ್ರವಾರ ಪಕ್ಷದ ಕಚೇರಿಗೆ ಭೇಟಿ ನೀಡಿದ ವೇಳೆ ಈ ಹೇಳಿಕೆಯನ್ನು ನೀಡಿದ್ದು, ಇದೇ ವೇಳೆ ಕಾಂಗ್ರೆಸ್ ಪಕ್ಷ ಜಾತಿ ಹೆಸರಿನಲ್ಲಿ ಚುನಾವಣೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

    ಕಾಂಗ್ರೆಸ್ ವಕ್ತಾರ ಸಚಿನ್ ಪೈಲಟ್ ಅವರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ ಅಹುಜಾ, ರಾಹುಲ್ ಗಾಂಧಿ ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿಲ್ಲ. ಇದನ್ನು ಸಾಬೀತು ಪಡಿಸಿದರೆ ತಮ್ಮ ಶಾಸಕ ಸ್ಥಾನ ತೋರೆಯುವುದಾಗಿ ಸವಾಲು ಎಸೆದರು. ರಾಜಸ್ಥಾನ ಕಾಂಗ್ರೆಸ್ ವಕ್ತಾರರರಾಗಿರುವ ಸಚಿನ್ ಪೈಲಟ್, ರಾಹುಲ್ ಗಾಂಧಿ ದೇವಾಲಯಕ್ಕೆ ಭೇಟಿ ನೀಡುವುದನ್ನು ಅವರ ಅಜ್ಜಿ ಇಂದಿರಾ ಗಾಂಧಿ ಅವರ ಮೂಲಕ ಕಲಿತಿದ್ದರು. ಅವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ಹೇಳಿಕೆ ನೀಡಿದ್ದರು.

    ಈ ಹಿಂದೆಯೂ ಕಾಂಗ್ರೆಸ್ ವಿರುದ್ಧ ಹಲವು ವಿವಾದಾತ್ಮಕ ಹೇಳಿಕೆ ನೀಡಿದ್ದ ಶಾಸಕ ಅಹುಜಾ, ಲವ್ ಜಿಹಾದ್ ಹಾಗೂ ಗೋ ಹತ್ಯೆ ಕುರಿತು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews