Tag: ಮಾಜಿ ಡಾನ್

  • ಡಾನ್ ಆಗಿದ್ದು ಹೇಗೆ?- ಕಥೆ ಬಿಚ್ಚಿಟ್ಟಿದ್ದ ಮುತ್ತಪ್ಪ ರೈ

    ಡಾನ್ ಆಗಿದ್ದು ಹೇಗೆ?- ಕಥೆ ಬಿಚ್ಚಿಟ್ಟಿದ್ದ ಮುತ್ತಪ್ಪ ರೈ

    – ನನ್ನ ಪಬ್ಲಿಸಿಟಿಗೆ ನನ್ನ ಸಿಂಪ್ಲಿಸಿಟಿಯೇ ಕಾರಣ
    – ಕೊಟ್ಟ ಮಾತು ತಪ್ಪಿದವನಲ್ಲ
    – ಜನರಿಗೆ ಸಹಾಯ ಮಾಡುವವ, ನ್ಯಾಯ ಕೊಡಿಸೋನೆ ಡಾನ್

    ಬೆಂಗಳೂರು: ಭೂಗತ ಜಗತ್ತಿನ ಮಾಜಿ ಡಾನ್, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68) ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ರೈ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಸುಕಿನ ಜಾವ 2.10ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.

    ಮುತ್ತಪ್ಪ ರೈ ಈ ಹಿಂದೆ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ತಾವು ಡಾನ್ ಆಗಿದ್ದ ಸ್ಟೋರಿಯನ್ನು ಬಿಚ್ಚಿಟ್ಟಿದ್ದರು. ಪುತ್ತೂರಿನಿಂದ ಬಂದು ಸಾಮಾನ್ಯ ಮುತ್ತಪ್ಪ ರೈ ಆಗಿದ್ದರು. ಇದುವರೆಗೂ ಮುತ್ತಪ್ಪ ರೈ ಮನೆಯಿಂದ ಯಾರಿಗೂ ಅನ್ಯಾಯ ಆಗಿಲ್ಲ. ನಮ್ಮ ಮನೆಯವರು ಅನೇಕರಿಗೆ ನ್ಯಾಯ ಕೊಡಿಸಿದ್ದಾರೆ. ನಾನು ವಿಜಯ ಬ್ಯಾಂಕಿಗೆ ಸೇರಿದ್ದೇ ಒಂದು ವಿಶೇಷ. ಬ್ಯಾಂಕಿನ ವಿರುದ್ಧವಾಗಿ ಧ್ವನಿ ಎತ್ತಿದ್ದವರನ್ನು ಅಡಗಿಸಲು ಬ್ಯಾಂಕ್ ಪರವಾಗಿ ನಾನು ಕೆಲಸಕ್ಕೆ ಹೋಗಿದ್ದೆ ಎಂದು ತಿಳಿಸಿದ್ದರು.

    ಬ್ಯಾಂಕಿನಲ್ಲಿ 6-7 ವರ್ಷ ಕೆಲಸ ಮಾಡಿ ರಾಜೀನಾಮೆ ಕೊಟ್ಟು ಹೊರಬಂದೆ ಎಂದು ಹೇಳಿದ್ದರು. ನನಗೆ ಡಾನ್ ಆಗಬೇಕೆಂಬ ಆಸೆಯೂ ಇರಲಿಲ್ಲ. ಡಾನ್ ಪದದ ಅರ್ಥವೂ ಗೊತ್ತಿರಲಿಲ್ಲ. ಜನರು ಪ್ರೀತಿಯಿಂದ ನನ್ನನ್ನು ಡಾನ್ ಆಗಿ ಮಾಡಿದರು. ಹೀಗಾಗಿ ನಾನು ಪ್ರೀತಿಯಿಂದ ಡಾನ್ ಆದೆ ಹೊರತು ಯಾವುದೇ ರೂಲ್, ಆರ್ಡರ್ ಮಾಡಿ ಡಾನ್ ಆಗಿಲ್ಲ. ಇವತ್ತು ನನ್ನ ಪಬ್ಲಿಸಿಟಿಗೆ ನನ್ನ ಸಿಂಪ್ಲಿಸಿಟಿಯೇ ಕಾರಣ ಎಂದಿದ್ದರು.

    ಬ್ಯಾಂಕಿನಲ್ಲಿದ್ದಾಗ ಬ್ರಿಗೇಡ್ ರೋಡಿನಲ್ಲಿ ಹೋಟೆಲ್ ನಡೆಸಲು ಅವಕಾಶ ಸಿಕ್ಕಿತ್ತು. ನಾನು ಅಷ್ಟು ಹಣ ನನ್ನ ಬಳಿ ಇಲ್ಲ ಎಂದು ಕ್ಯಾನ್ಸಲ್ ಮಾಡಿದೆ. ಆದರೆ ಬಾಡಿಗೆ ಏನು ಬೇಡ ಒಂದು ವರ್ಷ ಹೋಟೆಲ್ ನಡೆಸಿ ಸಾಕು ಎಂದು ಕೊಟ್ಟರು. ಯಾಕೆಂದರೆ ಅಲ್ಲಿ ತುಂಬಾ ರೋಡಿಗಳಿದ್ದರು. ಕೊನೆಗೆ ನಾನು ಚಾಲೆಂಜ್ ರೀತಿ ಹೋಟೆಲ್ ನಡೆಸಲು ಶುರು ಮಾಡಿದೆ. ಆಗ ಬಂದ ರೌಡಿಗಳನ್ನು ಹೊಡೆದು ಓಡಿಸಿದೆ. ಈ ವೇಳೆ ನನಗೆ ಹೋಟೆಲ್ ನಡೆಸಲು ಕೊಟ್ಟವರೆ ಒಂದು ವರ್ಷ ಆದ ಮೇಲೆ ಬಿಟ್ಟುಕೊಡುತ್ತಾನೆ ಎಂದು ಅನುಮಾನಪಟ್ಟರು. ಒಂದು ವರ್ಷದ ಬಳಿಕ ಹೋಟೆಲ್ ಬಿಟ್ಟುಕೊಡಲು ಕೇಳಿದರು. ಆಗ ತಕ್ಷಣ ಹೋಟೆಲ್ ಕೀ ಕೊಟ್ಟೆ. ನನ್ನ ಜೀವನದಲ್ಲಿ ಯಾವತ್ತೂ ಕೊಟ್ಟ ಮಾತು ತಪ್ಪಿದವನಲ್ಲ ಎಂದು ಧೈರ್ಯದ ಬಗ್ಗೆ ಮಾತನಾಡಿದ್ದರು.

    ಆಗ ನನ್ನ ಧೈರ್ಯವನ್ನು ನೋಡಿ ಸರ್ಕಾರಕ್ಕೆ ಸಮಸ್ಯೆಯಾಗಿತ್ತು. ಬೆಂಗಳೂರಿನಲ್ಲಿ ಕೇರಳದ ರಶೀದ್ ಅವರು ಲಾಕ್ ಅಪ್‍ನಲ್ಲಿ ಮೃತಪಟ್ಟಿದ್ದರು. ಇದು ದೊಡ್ಡ ಸುದ್ದಿಯಾಗಿ ಹೋಮ್ ಮಿನಿಸ್ಟರ್‍ಗೆ ವಾರೆಂಟ್ ಜಾರಿಯಾಗುವ ಪರಿಸ್ಥಿತಿ ಬಂದಿತ್ತು. ಆಗ ಪೊಲೀಸರು ಬಂದು ಸಹಾಯ ಮಾಡಿ ಎಂದಿದ್ದರು. ನಾನು ಪೊಲೀಸರು ಹಿಂದೆ ಬೆಂಬಲವಾಗಿ ನಿಂತೆ. ಅಲ್ಲಿಂದ ನನಗೆ ಸಮಸ್ಯೆ ಶುರುವಾಯಿತು. ಪೊಲೀಸರಲ್ಲೇ ಮೂರು ಗುಂಪುಗಳಾಗಿತ್ತು. ಅದರಲ್ಲಿ ಒಂದು ಗುಂಪು ನನ್ನ ವಿರುದ್ಧವಾಗಿ ಅನೇಕ ಕೇಸ್‍ಗಳನ್ನು ಹಾಕಿ ಡಾನ್ ಆಗಿ ಮಾಡಿದರು. ಆದರೆ ಕೋರ್ಟಿನಲ್ಲಿ ಅದರಲ್ಲೂ ಪೊಲೀಸರು ಮುಂದೆಯೇ 5 ಗುಂಡು ನನಗೆ ಬಿದ್ದಿತ್ತು. ಆದರೂ ನಾನು ಮತ್ತೆ ಬದುಕಿದೆ ಎಂದು ಡಾನ್ ಆದ ಕಥೆ ಬಿಚ್ಚಿಟ್ಟಿದ್ದರು.

    ಜನರಿಗೆ ಸಹಾಯ ಮಾಡುವವನೇ ಡಾನ್, ಜನರಿಗೆ ನ್ಯಾಯ ಒದಗಿಸಿ ಕೊಡುತ್ತಾನೋ ಅವನೇ ಡಾನ್. ಸುಲಿಗೆ ಮಾಡುವುದು, ಬೆದರಿಸುವವನು ಡಾನ್ ಅಲ್ಲ. ನನ್ನ ನೋಡಿ ಭಯ ಪಡಿಸುವ ಜನರಿದ್ದರು. ಹೀಗಾಗಿ ಜನರು ಭಯಪಡುತ್ತಿದ್ದರು. ಆದರೆ ನಾನು ಜನರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಿದ್ದೆ. ಕೆಲವು ಅಹಸಾಯಕರಿಗೆ ಸಹಾಯ ಮಾಡುವಾಗ ನನಗೆ ಖುಷಿಯಾಗಿತ್ತು. ಡಾನ್ ಆಗಿದ್ದರಿಂದ ನನಗೆ ಬೇಸರ ಇರಲಿಲ್ಲ. ನನ್ನ ವಿರೋಧಿಗಳು ಹೋರಾಡುವುದು ಎಂದರೆ ನನಗೆ ಇಷ್ಟ. ನಾನು ಜೀವನದಲ್ಲೀ ಯಾವತ್ತೂ ಸೋತಿಲ್ಲ. ಹೀಗಾಗಿ ನಾನು ಕ್ಯಾನ್ಸರಿನಿಂದ ಗೆಲ್ಲಬೇಕೆಂದು ಹೋರಾಡುತ್ತಿದ್ದೇನೆ ಎಂದು ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದರು.