Tag: ಮಾಜಿ ಕ್ರಿಕೆಟಿಗ

  • ಅಕ್ರಮ ಬೆಟ್ಟಿಂಗ್‌ ಆ್ಯಪ್ ಪ್ರಕರಣ – ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌ಗೆ ಇಡಿ ಸಮನ್ಸ್‌

    ಅಕ್ರಮ ಬೆಟ್ಟಿಂಗ್‌ ಆ್ಯಪ್ ಪ್ರಕರಣ – ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌ಗೆ ಇಡಿ ಸಮನ್ಸ್‌

    ನವದೆಹಲಿ: ಅಕ್ರಮ ಬೆಟ್ಟಿಂಗ್‌ ಆ್ಯಪ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌ಗೆ (Shikhar Dhawan) ಜಾರಿ ನಿರ್ದೇಶನಾಲಯ (ED) ಸಮನ್ಸ್‌ ಜಾರಿಗೊಳಿಸಿದೆ.

    ಅಧಿಕಾರಿಗಳ ಪ್ರಕಾರ, ಪ್ರಕರಣದ ತನಿಖೆಯು ʻ1xBetʼ ಬೆಟ್ಟಿಂಗ್ ಆ್ಯಪ್‌ಗೆ (Illegal Betting App Case) ಸಂಬಂಧಿಸಿದೆ. ಶಿಖರ್‌ ಧವನ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳ ಮೂಲಕ ಬೆಟ್ಟಿಂಗ್‌ ಆ್ಯಪ್‌ ಪರ ಪ್ರಚಾರ ಮಾಡ್ತಿದ್ದಾರೆ. ಹೀಗಾಗಿ ʻ1xBetʼ ಆ್ಯಪ್‌ ಜಾಹೀರಾತಿಗೆ ಸಂಬಂಧಿಸಿದಂತೆ 39 ವರ್ಷದ ಧವನ್‌ ತಮ್ಮ ಪಾತ್ರ ಸ್ಪಷ್ಟಪಡಿಸಬೇಕಿದೆ. ಅದಕ್ಕಾಗಿ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್‌ ಜಾರಿ ಮಾಡಿದೆ. ಇದನ್ನೂ ಓದಿ: ದಿಗ್ಗಜರನ್ನ ಹಿಂದಿಕ್ಕಿದ ಸಿಕಂದರ್‌ ರಜಾ – ಪಾಕ್‌ ಮೂಲದ ಜಿಂಬಾಬ್ವೆ ಆಟಗಾರ ವಿಶ್ವದ ನಂ.1 ಆಲ್‌ರೌಂಡರ್‌

    ತನಿಖೆಯ ಭಾಗವಾಗಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (PMLA) ಅಡಿಯಲ್ಲಿ ಹೇಳಿಕೆ ದಾಖಲಿಸಲಾಗುವುದು ಎಂದು ಇಡಿ ತಿಳಿಸಿದೆ. ಇದನ್ನೂ ಓದಿ: ಆರ್‌ಸಿಬಿ ಐತಿಹಾಸಿಕ ಗೆಲುವಿನ ಸಂತೋಷದ ಕ್ಷಣ ದುರಂತವಾಯ್ತು – ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಕೊಹ್ಲಿ ಟ್ವೀಟ್

    ಏನಿದು ಕೇಸ್‌?
    ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಜೊತೆಗೆ ಭಾರೀ ಪ್ರಮಾಣದ ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಬೆಟ್ಟಿಂಗ್‌ ಆ್ಯಪ್‌ಗಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳ ತನಿಖೆ ನಡೆಸುತ್ತಿದೆ. ಈಗಾಗಲೇ ಬೆಟ್ಟಿಂಗ್‌ ಆ್ಯಪ್‌ಗಳ ಪ್ರಚಾರದಲ್ಲಿದ್ದ ಹಲವಾರು ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಲನಚಿತ್ರ ತಾರೆಯರು, ಕ್ರಿಕೆಟಿಗರಿಗೂ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುತ್ತಿದೆ.

    ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಹರ್ಭಜನ್ ಸಿಂಗ್, ಊರ್ವಶಿ ರೌಟೇಲಾ ಮತ್ತು ಸುರೇಶ್ ರೈನಾ ಕೂಡಾ ಈ ಪಟ್ಟಿಯಲ್ಲಿದ್ದಾರೆ. ಕಳೆದ ತಿಂಗಳು ಸುರೇಶ್‌ ರೈನಾ ವಿಚಾರಣೆ ಎದುರಿಸಿದ್ದರು. ಇದನ್ನೂ ಓದಿ: ಟಿ20 ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ ಮಿಚೆಲ್‌ ಸ್ಟಾರ್ಕ್

  • ಆಪರೇಷನ್ ಸಿಂಧೂರ | ಪ್ರಧಾನಿ ಹಾಗೂ ರಕ್ಷಣಾ ತಂಡಗಳನ್ನು ಶ್ಲಾಘಿಸಿದ – ತೆಂಡೂಲ್ಕರ್

    ಆಪರೇಷನ್ ಸಿಂಧೂರ | ಪ್ರಧಾನಿ ಹಾಗೂ ರಕ್ಷಣಾ ತಂಡಗಳನ್ನು ಶ್ಲಾಘಿಸಿದ – ತೆಂಡೂಲ್ಕರ್

    ನವದೆಹಲಿ: ಆಪರೇಷನ್ ಸಿಂಧೂರದ(Operation Sindoor) ಯಶಸ್ವಿಗೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ರಕ್ಷಣಾ ತಂಡಗಳ ಕುರಿತು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಪ್ರಶಂಸೆಯ ಬರಹವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಆಪರೇಷನ್ ಸಿಂಧೂರದ ಕಾರ್ಯಚರಣೆಯಲ್ಲಿ 1.6 ಬಿಲಿಯನ್‌ಗಿಂತಲೂ ಹೆಚ್ಚು ಜನರು ಒಗ್ಗಟ್ಟಿನಿಂದ ಹೋರಾಡಿದ್ದಾರೆ. ಭಾರತೀಯ ಸೇನೆ ಬಲವಾದ ದೃಢನಿಶ್ಚಯ ಮತ್ತು ಸಂಯಮದ ಹೋರಾಡಿದೆ. ಇದನ್ನೂ ಓದಿ: ಮೋದಿ ಭಾಷಣದ ಬೆನ್ನಲ್ಲೇ ಮತ್ತೆ ಪಾಕ್ ಡ್ರೋನ್ ದಾಳಿ

    ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಮೂರು ರಕ್ಷಣಾ ತಂಡಗಳ ಅವಿಶ್ರಾಂತ ಪರಿಶ್ರಮವು ಗಮನಾರ್ಹವಾಗಿದೆ. ಅಲ್ಲದೇ ನಮ್ಮ ಧೈರ್ಯಶಾಲಿ ಸೈನಿಕರು ಹಾಗೂ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ನಾಗರಿಕರ ಬಗ್ಗೆ ಇಲ್ಲಿ ನಾನು ವಿಶೇಷವಾಗಿ ಉಲ್ಲೇಖಿಸುತ್ತಿದ್ದೇನೆ. ಜೈ ಹಿಂದ್ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • ಗುರುದಾಸ್‌ಪುರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಯುವರಾಜ್‌ ಸಿಂಗ್ ಸ್ಪಷ್ಟನೆ

    ಗುರುದಾಸ್‌ಪುರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಯುವರಾಜ್‌ ಸಿಂಗ್ ಸ್ಪಷ್ಟನೆ

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ತಾರೆ ಸನ್ನಿ ಡಿಯೋಲ್ ಪ್ರತಿನಿಧಿಸುವ ಪಂಜಾಬ್‌ನ ಹೈ ಪ್ರೊಫೈಲ್ ಕ್ಷೇತ್ರ ಗುರುದಾಸ್‌ಪುರದಿಂದ ಸ್ಪರ್ಧಿಸುವ ವಿಚಾರವನ್ನು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಅವರು ತಳ್ಳಿಹಾಕಿದ್ದಾರೆ.

    ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಿಂಗ್‌, ನಾನು ಗುರುದಾಸ್‌ಪುರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ.  ನನ್ನ ಮುಖ್ಯ ಉದ್ದೇಶ ಜನರಿಗೆ ಸಹಾಯ ಮಾಡುವುದಾಗಿದೆ. ನನ್ನ ಫೌಂಡೇಶನ್ ಮೂಲಕ ನಾನು ಅದನ್ನು ಮುಂದುವರಿಸುತ್ತೇನೆ. ಹೀಗಾಗಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಒಟ್ಟಿಗೆ ಕೆಲಸ ಮುಂದುವರಿಸೋಣ ಎಂದಿದ್ದಾರೆ.

    ಬಿಜೆಪಿಯು ಲೋಕಸಭೆ ಚುನಾವಣೆಗೆ (Lokabha Election) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಗುರುದಾಸ್‌ಪುರದಿಂದ ಬಿಜೆಪಿ ಟಿಕೆಟ್‌ನಲ್ಲಿ ಯುವರಾಜ್‌ ಸಿಂಗ್ ಸ್ಪರ್ಧಿಸಬಹುದು ಎಂಬುದು ವರದಿಯಾಗಿತ್ತು. ಈ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಹಾಲಿ 100 ಬಿಜೆಪಿ ಸಂಸದರಿಗೆ ಸಿಗಲ್ಲ ಟಿಕೆಟ್‌

    ಗುರುದಾಸ್‌ಪುರವು ಪ್ರಸಿದ್ಧ ಸಂಸದರ ಇತಿಹಾಸವನ್ನು ಹೊಂದಿದೆ. ಸನ್ನಿ ಡಿಯೋಲ್ (Sunny Deol) ಅವರಿಗಿಂತ ಮೊದಲು , ಈ ಕ್ಷೇತ್ರವನ್ನು ದಿವಂಗತ ನಟ ವಿನೋದ್ ಖನ್ನಾ ಅವರು 1998, 1999, 2004 ಮತ್ತು 2014 ಹೀಗೆ ನಾಲ್ಕು ಬಾರಿ ಗೆದ್ದಿದ್ದಾರೆ. ಡಿಯೋಲ್ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಖರ್ ಅವರನ್ನು ಸೋಲಿಸಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದರು. ಜಾಖರ್ ನಂತರ ಮೇ 2022 ರಲ್ಲಿ ಬಿಜೆಪಿ ಸೇರಿದರು.

  • ತನಗಿಂತ 28 ವರ್ಷ ಚಿಕ್ಕವಳ ಕೈಹಿಡಿದ ಮಾಜಿ ಕ್ರಿಕೆಟಿಗ ಅರುಣ್ ಲಾಲ್

    ತನಗಿಂತ 28 ವರ್ಷ ಚಿಕ್ಕವಳ ಕೈಹಿಡಿದ ಮಾಜಿ ಕ್ರಿಕೆಟಿಗ ಅರುಣ್ ಲಾಲ್

    ಕೋಲ್ಕತ್ತಾ: ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ನಿನ್ನೆ ತನಗಿಂತ 28 ವರ್ಷ ಚಿಕ್ಕವಳಾಗಿರುವ ಶಿಕ್ಷಕಿ ಬುಲ್ ಬುಲ್ ಸಹಾಳನ್ನು ವರಿಸಿದ್ದಾರೆ.

    ಸೋಮವಾರ ಕೋಲ್ಕತ್ತಾದಲ್ಲಿ  ಬುಲ್ ಬುಲ್ ಶಾ ಅವರನ್ನು ಅರುಣ್ ಲಾಲ್ ಕೈಹಿಡಿದಿದ್ದಾರೆ. ಬಳಿಕ ನವದಂಪತಿ ಕೇಕ್ ಕಟ್ ಮಾಡಿದ್ದಾರೆ. ಇತ್ತ ಬುಲ್ ಬುಲ್ ಅವರು ಕೈಗೆ ಮೆಹಂದಿ ಹಾಕಿ ಫೋಟೋ ತೆಗೆಸಿಕೊಂಡಿದ್ದಾರೆ. ಇದೀಗ ಈ ಎರಡು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಅಲ್ಲದೆ ಕುಟುಂಬದವರಿಗೆ ಹಾಗೂ ಗೆಳೆಯರಿಗೆ ನವದಂಪತಿ ಸೋಶಿಯಲ್ ಮೀಡಿಯಾ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

    66 ವರ್ಷದ ಅರುಣ್ ಲಾಲ್ ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯ ಕೋಚ್ ಆಗಿದ್ದಾರೆ. ವರದಿಗಳ ಪ್ರಕಾರ, ಲಾಲ್ ಮತ್ತು ಸಹಾ ಬಹುಕಾಲದಿಂದ ಸಂಬಂಧ ಹೊಂದಿದ್ದರು. ಲಾಲ್ ಅವರ ಮೊದಲ ಪತ್ನಿ ರೀನಾ ಅವರಿಂದ ಒಪ್ಪಿಗೆ ಪಡೆದ ನಂತರವೇ ಅವರು ಈ 2ನೇ ಮದುವೆ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಬಂಧನದಲ್ಲಿರುವ ರಾಣಾ ದಂಪತಿ ನಿವಾಸದಲ್ಲಿ ಅಕ್ರಮ ಕಟ್ಟಡ – ಬಿಎಂಸಿ ನೋಟೀಸ್

    ಈಗಾಗಲೇ ಅವರು ತಮ್ಮ ಮೊದಲ ಪತ್ನಿಯೊಂದಿಗೆ ವಿಚ್ಛೇದನ ಪಡೆದಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮೊದಲ ಪತ್ನಿಯೊಂದಿಗೆ ಸದ್ಯಕ್ಕೆ ಲಾಲ್ ವಾಸಿಸುತ್ತಿದ್ದಾರೆ. ಲಾಲ್ ಅವರ ಮುದುವೆಯ ಆಮಂತ್ರಣ ಪತ್ರಿಕೆಯ ಚಿತ್ರವೂ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಭಾರೀ ಸುದ್ದಿಯಾಗಿತ್ತು.

    ಅರುಣ್ ಲಾಲ್ ಅವರು ಭಾರತಕ್ಕಾಗಿ ಒಟ್ಟು 29 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 850 ರನ್‍ಗಳನ್ನು ಗಳಿಸಿದ್ದಾರೆ ಮತ್ತು 7 ವಿಕೆಟ್‍ಗಳನ್ನು ಕಬಳಿಸಿದ್ದಾರೆ. ನಂತರ ಅವರು 2016ರಲ್ಲಿ ದವಡೆಯ ಕ್ಯಾನ್ಸರ್‌ ಗೆ ಒಳಗಾಗಿದ್ದರು. ಮೊದಲು ಬಹುಪಾಲು ದೇಶೀಯ ಮತ್ತು ಅಂತರಾಷ್ಟ್ರೀಯ ಪಂದ್ಯಗಳಿಗೆ ಕಾಮೆಂಟರಿ ಬಾಕ್ಸ್ ನಲ್ಲಿ ಪ್ರಮುಖ ಮುಖವಾಗಿದ್ದವರು.

  • ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ ಇನ್ನಿಲ್ಲ- ಬಿಎಸ್‍ವೈ, ಡಿಸಿಎಂ ಸಂತಾಪ

    ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ ಇನ್ನಿಲ್ಲ- ಬಿಎಸ್‍ವೈ, ಡಿಸಿಎಂ ಸಂತಾಪ

    ಬೆಂಗಳೂರು: ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ(71) ಇಂದು ಮುಂಜಾನೆ ನಗರದ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಜಯಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸಂತಾಪ ಸೂಚಿಸಿದ್ದಾರೆ.

    ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಿಜಯಕೃಷ್ಣ ಅವರು ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ 5.50ರ ಸುಮಾರಿಗೆ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ.

    ಕರ್ನಾಟಕದ ಪರ ಆಡುತ್ತಿದ್ದ ಕೆ. ನಾಗಭೂಷಣ್ ಅವರ ಪ್ರೋತ್ಸಾಹದಿಂದ ಮೈದಾನಕಿಳಿದಿದ್ದ ವಿಜಯಕೃಷ್ಣ ಅತ್ಯುತ್ತಮ ಆಲ್ ರೌಂಡರ್ ಆಗಿ ಪ್ರದರ್ಶನ ನೀಡಿದ್ದರು. ಕಾರ್ ಶೆಡ್‍ನಲ್ಲಿ ಟೆನ್ನಿಸ್ ಬಾಲ್ ಮೂಲಕ ಬೌಲಿಂಗ್ ಅಭ್ಯಾಸ ಮಾಡಿಕೊಂಡ ವಿಜಯಕೃಷ್ಣ 1968-69ನೇ ಸಾಲಿನಲ್ಲಿ ಆಡಿದ ಮೊದಲ ರಣಜಿ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಮೂರು ವಿಕೆಟ್ ಪಡೆದಿದ್ದರು. ಅಲ್ಲದೇ ಬಳಿಕ ಮದ್ರಾಸ್ ವಿರುದ್ಧದ ಪಂದ್ಯದಲ್ಲಿ ಆರು ವಿಕೆಟ್ ಪಡೆದು ಸೈ ಎನ್ನಿಸಿಕೊಂಡಿದ್ದರು. ಇದನ್ನೂ ಓದಿ: ರೂಲ್ಸ್ ಬ್ರೇಕ್ – 100 ‘ಕೈ’ ಕಾರ್ಯಕರ್ತರ ಮೇಲೆ ಕೇಸ್

    ಸದ್ಯ ವಿಜಯಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಮಾಜಿ ಕ್ರಿಕೆಟಿಗ ಬಿ.ವಿಜಯಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕ 2 ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನದಿಂದ ನಾಡು ಒಬ್ಬ ಅತ್ಯುತ್ತಮ ಕ್ರಿಕೆಟ್ ಆಟಗಾರನನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಇತ್ತ ಉಪಮುಖ್ಯಮಂತ್ರಿ ಡಾ. ಸಿ. ಎನ್ ಅಶ್ವಥ್ ನಾರಾಯಣ್ ಕೂಡ ಟ್ವೀಟ್ ಮಾಡಿ, ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಯಿತು. ಅವರ ಅತ್ಯುತ್ತಮ ಪ್ರದರ್ಶನದಿಂದ ಕರ್ನಾಟಕ 2 ಬಾರಿ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

  • ಬೇಜಾರಿನಲ್ಲಿದ್ದ, ಆತನಲ್ಲಿ ಅಂದು ಹೆಚ್ಚಿನ ಆತ್ಮವಿಶ್ವಾಸ ನನಗೆ ಕಾಣಿಸಲಿಲ್ಲ – ಸುಶಾಂತ್ ಬಗ್ಗೆ ಅಖ್ತರ್ ನುಡಿ

    ಬೇಜಾರಿನಲ್ಲಿದ್ದ, ಆತನಲ್ಲಿ ಅಂದು ಹೆಚ್ಚಿನ ಆತ್ಮವಿಶ್ವಾಸ ನನಗೆ ಕಾಣಿಸಲಿಲ್ಲ – ಸುಶಾಂತ್ ಬಗ್ಗೆ ಅಖ್ತರ್ ನುಡಿ

    ಮುಂಬೈ: ಮೃತ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಭೇಟಿಯಾದಾಗ ಮಾತನಾಡಿಸದೇ ಹೋಗಿದ್ದಕ್ಕೆ ನನಗೆ ವಿಷಾದವಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರು ಹೇಳಿದ್ದಾರೆ.

    ಕಳೆದ ಜೂನ್ 14ರಂದು ತಮ್ಮ ನಿವಾಸದಲ್ಲೇ ಸುಶಾಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ತಾನೇ ಬಾಲಿವುಡ್‍ನಲ್ಲಿ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದ ಸುಶಾಂತ್ ತಮ್ಮ 34ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ್ದಾರೆ. ಯುವ ನಟನ ಸಾವಿಗೆ ಇಡೀ ಭಾರತ ಚಿತ್ರರಂಗವೇ ಮರುಗಿತ್ತು. ಹಲವಾರು ಕ್ರಿಕೆಟಿಗರು ಕೂಡ ಸುಶಾಂತ್ ಸಾವಿಗೆ ಸಂತಾಪ ಸೂಚಿಸಿದ್ದರು.

    ಈಗ ಸುಶಾಂತ್ ಅವರ ವಿಚಾರವಾಗಿ ತನ್ನ ಯುಟ್ಯೂಬ್ ಚಾನೆಲ್‍ನಲ್ಲಿ ಮಾತನಾಡಿರುವ ಅಖ್ತರ್, 2016ರಲ್ಲಿ ನಾನು ಭಾರತಕ್ಕೆ ಹೋಗಿದ್ದಾಗ ಮುಂಬೈನ ಆಲಿವ್ ಹೋಟೆಲ್ ಅಲ್ಲಿ ಆತನನ್ನು ನೋಡಿದ್ದೆ. ಆಗ ಆತ ಯಾವುದೋ ಬೇಜಾರಿನಲ್ಲಿ ಇದ್ದ ಎನಿಸುತ್ತದೆ. ಆತನನಲ್ಲಿ ಅಂದು ಹೆಚ್ಚಿನ ಆತ್ಮವಿಶ್ವಾಸ ನನಗೆ ಕಾಣಿಸಿಲಿಲ್ಲ. ಎಂಎಸ್ ಧೋನಿ ಅವರ ಬಯೋಪಿಕ್ ಅಲ್ಲಿ ಈತನೇ ನಟಿಸುತ್ತಿರುವುದು ಎಂದು ನನ್ನ ಸ್ನೇಹಿತ ನನಗೆ ಹೇಳಿದ ಎಂದು ಅಖ್ತರ್ ತಿಳಿಸಿದ್ದಾರೆ.

    ಅಂದು ನನಗೆ ಆತನ ಬಗ್ಗೆ ಏನೂ ಅನಿಸಲಿಲ್ಲ. ಆದರೆ ಈಗ ಆತನ ನಟನೆಯನ್ನು ನೋಡಿದ್ದೇನೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಾಲಿವುಡ್‍ಗೆ ಬಂದು ಒಳ್ಳೆಯ ಸಿನಿಮಾಗಳನ್ನು ಆತ ಮಾಡಿದ್ದಾನೆ. ಅವನ ಸಿನಿಮಾಗಳು ಸಕ್ಸಸ್ ಆಗುತ್ತಿರುವ ಸಮಯದಲ್ಲಿ ಆತ ಹೀಗೆ ಮಾಡಿಕೊಳ್ಳಬಾರದಿತ್ತು. ಅಂದು ನಾನು ಆತನನ್ನು ಮಾತನಾಡಿಸಬೇಕಿತ್ತು. ಅಂದು ಆತನನ್ನು ಮಾತನಾಡಿಸದಕ್ಕೆ ಇಂದು ನನಗೆ ವಿಷಾದವಿದೆ ಎಂದು ಶೋಯೆಬ್ ವಿಡಿಯೋದಲ್ಲಿ ಹೇಳಿದ್ದಾರೆ.

    ಎಲ್ಲ ಸಮಸ್ಯೆಗಳಿಗೂ ಸಾಯುವುದೊಂದೆ ಪರಿಹಾರವಲ್ಲ. ನಿಮಗೆ ಆ ಮಟ್ಟದ ಸಮಸ್ಯೆ ಏನಾದರೂ ಬಂದರೆ ನಿಮ್ಮವರ ಜೊತೆ ಮತ್ತು ಕುಟುಂಬದವರ ಜೊತೆ ಕುಳಿತು ಚರ್ಚಿಸಬೇಕು. ಅದನ್ನು ಬಿಟ್ಟು ಪ್ರಾಣ ಕಳೆದುಕೊಳ್ಳಬಾರದು. ಹಾಗೇ ನೋಡಿದರೆ ನಟಿ ದೀಪಿಕಾ ಪಡುಕೋಣೆ ಕೂಡ ಸ್ವಲ್ಪ ದಿನ ಖಿನ್ನತೆಗೆ ಒಳಗಾಗಿದ್ದರು. ಆದರೆ ಅವರು ಅದನ್ನು ಕೆಲವರ ಸಹಾಯ ಪಡೆದು ಬಗೆಹರಿಸಿಕೊಂಡರು. ಹಾಗೇ ಸುಶಾಂತ್‍ಗೆ ಕೂಡ ಯಾರದರೂ ಸಹಾಯ ಮಾಡಬೇಕಿತ್ತು ಎಂದು ಶೋಯಬ್ ಅಭಿಪ್ರಾಯ ಪಟ್ಟಿದ್ದಾರೆ.

    ಜೂನ್ 14ರಂದು ಫ್ಯಾನಿಗೆ ನೇಣು ಹಾಕಿಕೊಂಡು ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ಜೂನ್ 15ರ ಸಂಜೆ ಮುಂಬೈನ ವಿಲೆ ಪಾರ್ಲೆ ಸೇವಾ ಸಮಾಜದಲ್ಲಿ ಸುಶಾಂತ್ ಅಂತ್ಯಕ್ರಿಯೆ ನಡೆದಿತ್ತು. ಶ್ರದ್ಧಾ ಕಪೂರ್, ಕೃತಿ ಸನನ್, ರಿಯಾ ಚಕ್ರವರ್ತಿ, ವಿವೇಕ್ ಒಬೇರಾಯ್, ರಾಜಕುಮಾರ್ ಹಿರಾಣಿ ಹಾಗೂ ಸುಶಾಂತ್ ಕುಟುಂಬದವರು ಮಾತ್ರ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದರು.

  • ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆ

    ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆ

    ಮುಂಬೈ: ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕರ್ನಾಟಕದ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಆಯ್ಕೆ ಆಗಿದ್ದಾರೆ.

    ಸುನಿಲ್ ಜೋಶಿ ಜೊತೆಗೆ ಹರ್ವಿಂದರ್ ಸಿಂಗ್ ಅವರಿಗೂ ಆಯ್ಕೆ ಸಮಿತಿಯಲ್ಲಿ ಅವಕಾಶ ಸಿಕ್ಕಿದೆ. ಈಗಾಗಲೇ ದೇವಾಂಗ್ ಗಾಂಧಿ, ಶರಣ್‍ದೀಪ್ ಸಿಂಗ್, ಜತಿನ್ ಪರಾಂಜಪೆ ಆಯ್ಕೆ ಸಮಿತಿಯಲ್ಲಿದ್ದಾರೆ. ಕರ್ನಾಟಕದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಕೇರಳದ ಮಾಜಿ ಸ್ಪಿನ್ನರ್ ಎಲ್ ಶಿವರಾಮಕೃಷ್ಣನ್ ಅವರನ್ನು ಹಿಂದಿಕ್ಕಿ ಜೋಷಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

    ಆಯ್ಕೆ ಸಮಿತಿಯ ಪ್ರಸ್ತುತ ಮೂವರು ಸದಸ್ಯರಾದ ಜತಿನ್ ಪರಂಜಪೆ (ಪಶ್ಚಿಮ ವಲಯ), ದೇವಾಂಗ್ ಗಾಂಧಿ (ಪೂರ್ವ ವಲಯ) ಮತ್ತು ಸರಂದೀಪ್ ಸಿಂಗ್ (ಉತ್ತರ ವಲಯ) ಮುಂದಿನ 1 ವರ್ಷದವರೆಗೆ ಈ ಹುದ್ದೆಯಲ್ಲಿ ಮುಂದುವರಿಸಲಿದ್ದಾರೆ.

    ಸುನಿಲ್ ಜೋಶಿ ಅವರ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯ ಮದನ್ ಲಾಲ್, ಮುಂದಿನ 1 ವರ್ಷದವರೆಗೆ ಪ್ರಸ್ತುತ ಆಯ್ಕೆ ಸಮಿತಿಯ ಕಾರ್ಯವೈಖರಿಯನ್ನು ಸಿಎಸಿ ನಿರ್ಣಯಿಸುತ್ತದೆ. ನಂತರ ಒಪ್ಪಂದವನ್ನು ವಿಸ್ತರಿಸಲು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಕೆಲಸಕ್ಕಾಗಿ ನಾವು ಇಬ್ಬರು ಅತ್ಯುತ್ತಮ ವ್ಯಕ್ತಿಗಳಾದ ಸುನಿಲ್ ಜೋಶಿ ಹಾಗೂ ಹರ್ವಿಂದರ್ ಸಿಂಗ್ ಆಯ್ಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಸುನಿಲ್ ಜೋಶಿ ಅವರ ಆಲೋಚನೆ ಬಹಳ ಸ್ಪಷ್ಟವಾಗಿದೆ. ವಿಶೇಷವಾಗಿ ಅವರು ಬಹಳ ಅನುಭವಿ ಆಟಗಾರ. ಬಾಂಗ್ಲಾದೇಶದ ಕ್ರಿಕೆಟ್ ತಂಡದೊಂದಿಗೆ ಅವರು ಕೆಲಸ ಮಾಡಿದ್ದಾರೆ ಎಂದು ಮದನ್ ಲಾಲ್ ತಿಳಿಸಿದ್ದಾರೆ.

    ಎಡಗೈ ಸ್ಪಿನ್ನರ್ ಸುನಿಲ್ ಜೋಶಿ ಭಾರತಕ್ಕಾಗಿ 15 ಟೆಸ್ಟ್ ಹಾಗೂ 69 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‍ನಲ್ಲಿ 41 ವಿಕೆಟ್ ಮತ್ತು ಏಕದಿನ ಪಂದ್ಯಗಳಲ್ಲಿ 69 ವಿಕೆಟ್‍ಗಳನ್ನು ಪಡೆದಿದ್ದಾರೆ. ಜೋಶಿ ಹೈದರಾಬಾದ್ ಹಾಗೂ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಬಾಂಗ್ಲಾದೇಶ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದರು. ಹರ್ವಿಂದರ್ ಸಿಂಗ್ ಭಾರತದ ಪರ 3 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಪಂಜಾಬ್ ಮತ್ತು ರೈಲ್ವೆ ಪರ ದೇಶೀಯ ಕ್ರಿಕೆಟ್ ಆಡಿದ್ದಾರೆ.

    ಮದನ್ ಲಾಲ್, ಆರ್.ಪಿ.ಸಿಂಗ್ ಮತ್ತು ಸುಲಕ್ಷನ ನಾಯಕ್ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯು ಸಂದರ್ಶನಕ್ಕೆ ಐದು ಅಭ್ಯರ್ಥಿಗಳನ್ನು ಕಿರು-ಪಟ್ಟಿ ಮಾಡಿತ್ತು. ಇದರಲ್ಲಿ ಭಾರತದ ಮಾಜಿ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್, ಮಾಜಿ ಸ್ಪಿನ್ನರ್ ರಾಜೇಶ್ ಚೌಹಾನ್ ಮತ್ತು ಕ್ರಿಕೆಟಿಗ, ನಿರೂಪಕ ಲಕ್ಷ್ಮಣ ಶಿವರಾಮಕೃಷ್ಣನ್ ಸೇರಿದ್ದರು. ಈ ಸಮಿತಿಯು ಅನುಭವಿ ಆಟಗಾರರಾದ ಅಜಿತ್ ಅಗರ್ಕರ್ ಮತ್ತು ನಯಾನ್ ಮೊಂಗಿಯಾ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಲಿಲ್ಲ. ಆದರೆ ಅಗರ್ಕರ್ ಸಂಪೂರ್ಣವಾಗಿ ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿದಿಲ್ಲ ಎಂದು ಮಂಡಳಿಯ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

  • ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್‌ರನ್ನು ಭೇಟಿ ಮಾಡಿದ ರಕ್ಷ್

    ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್‌ರನ್ನು ಭೇಟಿ ಮಾಡಿದ ರಕ್ಷ್

    ಬೆಂಗಳೂರು: ಕಿರುತೆರೆ ನಟ, ಗಟ್ಟಿಮೇಳ ಖ್ಯಾತಿಯ ವೇದಾಂತ್ ಪಾತ್ರಧಾರಿಯ ರಕ್ಷ್ ಅವರು ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್ ಅವರನ್ನು ಭೇಟಿ ಮಾಡಿದ್ದಾರೆ.

    ಇತ್ತೀಚೆಗೆ ರಕ್ಷ್, ಸುನೀಲ್ ಗವಾಸ್ಕರ್ ಅವರನ್ನು ಭೇಟಿ ಮಾಡಿದ್ದು, ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, ಈ ಲೆಜೆಂಡ್ ಅನ್ನು ಭೇಟಿ ಆದ ಕ್ಷಣ ಸುಂದರವಾಗಿತ್ತು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ನಿಮ್ಮ ಜೀವನದಲ್ಲಿ ನೀವು ಭೇಟಿಯಾದ ನೂರು ಜನರನ್ನು ಸೂಕ್ಷ್ಮವಾಗಿ ಗಮನಿಸಿದರೆ, ನೀವು ನೂರು ಪುಸ್ತಕಗಳನ್ನು ಓದಿದ್ದೀರಿ ಎಂದು ಅರ್ಥ. ನೀವು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಪುಸ್ತಕದಂತೆ. ಕೆಲವು ಬೋರಿಂಗ್, ಕೆಲವು ಅದ್ಭುತ, ಕೆಲವು ಶಕ್ತಿಯುತ, ಕೆಲವು ದುರ್ಬಲ. ಆದರೆ ಅವೆಲ್ಲವೂ ಬಹಳ ಉಪಯೋಗವಾಗಿದೆ. ಏಕೆಂದರೆ ಅವೆಲ್ಲವೂ ವಿಭಿನ್ನ ಅನುಭವಗಳನ್ನು ಹೊಂದಿದೆ ಎಂದು ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

    ಕಳೆದ ತಿಂಗಳು ರಕ್ಷ್ ತಮ್ಮ ಹುಟ್ಟುಹಬ್ಬಕ್ಕಾಗಿ ದುಬಾರಿ ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಖರೀದಿಸಿದ್ದರು. ಈ ಬಗ್ಗೆ ಸ್ವತಃ ರಕ್ಷ್ ತಮ್ಮ ಇನ್‍ಸ್ಟಾದಲ್ಲಿ ಹೇಳಿಕೊಂಡಿದ್ದರು. ಈ ಪೋಸ್ಟ್ ನಂತರ ರಕ್ಷ್ ಕ್ರೆಡಿಟ್ಸ್ ಕರುನಾಡ ಜನತೆಯ ಆಶೀರ್ವಾದ ಹಾಗೂ ಪ್ರೀತಿ ಎಂದು ಬರೆದಿದ್ದರು. ರಕ್ಷ್ ಅವರ ಪೋಸ್ಟ್‌ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭ ಕೋರಿದ್ದರು.

    ನಟ ರಕ್ಷ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಮಹೇಶ್ ಪಾತ್ರ ಮಾಡಿದ್ದು, ಪ್ರೇಕ್ಷಕರ ಮನ ಗೆದ್ದಿದ್ದರು. ಧಾರಾವಾಹಿ ಮುಗಿದ ಕೆಲವು ದಿನಗಳ ನಂತರ ರಕ್ಷಿತ್ ಎಂಬ ಹೆಸರನ್ನು ರಕ್ಷ್ ಎಂದು ಬದಲಾಯಿಸಿಕೊಂಡಿದ್ದರು. ಸದ್ಯ ರಕ್ಷ್ ಇದೀಗ `ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

  • ಅಜರುದ್ದೀನ್ ವಿರುದ್ಧ 20.96 ಲಕ್ಷ ರೂ. ವಂಚನೆ ಆರೋಪ – ದೂರು ದಾಖಲು

    ಅಜರುದ್ದೀನ್ ವಿರುದ್ಧ 20.96 ಲಕ್ಷ ರೂ. ವಂಚನೆ ಆರೋಪ – ದೂರು ದಾಖಲು

    ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜರುದ್ದೀನ್ ಹಾಗೂ ಇನ್ನಿಬ್ಬರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

    ಅಜರುದ್ದೀನ್ ಹಾಗೂ ಇನ್ನಿಬ್ಬರು ಬರೋಬ್ಬರಿ 20.96 ಲಕ್ಷ ವಂಚಿಸಿದ್ದಾರೆ ಎಂದು ಟ್ರಾವೆಲ್ ಏಜೆಂಟ್ ಮೊಹಮ್ಮದ್ ಶಹಾಬ್ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಜರುದ್ದೀನ್ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ ಮೊಹಮ್ಮದ್ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಅಜರುದ್ದೀನ್ ಅವರ ಪಿಎ ಮುಜಿಬ್ ಖಾನ್ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಅಜರುದ್ದೀನ್ ಹಾಗೂ ಮತ್ತೆ ಕೆಲವರ ಹೆಸರಿನಲ್ಲಿ 20.96 ಲಕ್ಷ ಮೊತ್ತದ ಹಲವು ಇಂಟೆರ್ ನ್ಯಾಷನಲ್ ಟಿಕೆಟ್ ಬುಕ್ ಮಾಡಿದ್ದರು. ಟಿಕೆಟ್ ಬುಕ್ ಮಾಡಿದ ಬಳಿಕ ಆನ್‍ಲೈನ್‍ನಲ್ಲಿ ಪೇಮೆಂಟ್ ಮಾಡುವುದಾಗಿ ಹೇಳುತ್ತಿದ್ದರು. ಆದರೆ ಇದುವರೆಗೂ ಯಾವುದೇ ಹಣ ನನಗೆ ಸಿಕ್ಕಿಲ್ಲ ಎಂದು ಡ್ಯಾನೀಶ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಏಜೆನ್ಸಿ ಮಾಲೀಕರಾಗಿರುವ ಮೊಹಮ್ಮದ್ ಶಾಹಬ್ ಆರೋಪಿಸಿದ್ದಾರೆ.

    ದೂರಿನಲ್ಲಿ ಶಹಾಬ್, ನಾನು ಪೇಮೆಂಟ್ ಬಗ್ಗೆ ಕೇಳುತ್ತಿದ್ದಾಗ ಮುಜಿಬ್ ಸಹದ್ಯೋಗಿ ಸುದೇಶ್ ಅವಕ್ಕಲ್ 10.6 ಲಕ್ಷ ರೂ. ವರ್ಗಾಯಿಸಿದ್ದೇನೆ ಎಂದು ಇಮೇಲ್ ಮಾಡಿದ್ದರು. ಆದರೆ ಇದುವರೆಗೂ ಯಾವುದೇ ಹಣ ಸಿಗಲಿಲ್ಲ. ನವೆಂಬರ್ 24ರಂದು ಸುದೇಶ್ ಚೆಕ್ ನೀಡುತ್ತಿರುವ ಫೋಟೋವನ್ನು ಶಹಾಬ್‍ಗೆ ಕಳುಹಿಸಿದ್ದರು. ಬಳಿಕ ನವೆಂಬರ್ 29ರಂದು ಮಜಿಬ್ ಕೂಡ ಇದೇ ರೀತಿ ಮಾಡಿದರು. ಶಹಾಬ್‍ಗೆ ಇದುವರೆಗೂ ಯಾವುದೇ ಚೆಕ್ ಸಿಗಲಿಲ್ಲ.

    ಶಹಾಬ್ ಬುಧವಾರ ಸಿಟಿ ಚೌಕ್ ಪೊಲೀಸ್ ಠಾಣೆಯಲ್ಲಿ ಅಜುರುದ್ದೀನ್, ಮುಜಿಬ್ ಖಾನ್ ಹಾಗೂ ಸುದೇಶ್ ಅವಕ್ಕಲ್ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಮೂವರ ವಿರುದ್ಧ ಐಪಿಸಿ ಸೆಕ್ಷನ್ 420(ವಂಚನೆ), 406(ನಂಬಿಕೆ ದ್ರೋಹ) ಹಾಗೂ 34(ಒಂದೇ ಉದ್ದೇಶದಿಂದ ಅನೇಕ ವ್ಯಕ್ತಿಗಳಿಂದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಈ ಆರೋಪಗಳನ್ನು ಅಜರುದ್ದೀನ್ ತಳ್ಳಿ ಹಾಕಿದ್ದಾರೆ.

  • ಸಂಜಯ್ ದತ್ತ್ ಲುಕ್‍ನಲ್ಲಿ ಕಾಣಿಸಿಕೊಂಡ ಮಾಜಿ ಕ್ರಿಕೆಟಿಗ

    ಸಂಜಯ್ ದತ್ತ್ ಲುಕ್‍ನಲ್ಲಿ ಕಾಣಿಸಿಕೊಂಡ ಮಾಜಿ ಕ್ರಿಕೆಟಿಗ

    ನವದೆಹಲಿ: 13 ವರ್ಷಗಳ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ 2018ರಲ್ಲಿ ವಿದಾಯ ಹೇಳಿದ್ದ ಟೀಂ ಇಂಡಿಯಾ ಮಾಜಿ ಬೌಲರ್ ಪ್ರವೀಣ್ ಕುಮಾರ್, ನಟ ಸಂಜಯ್ ದತ್ತ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಹೊಸ ಲುಕ್ ಫೋಟೋವನ್ನು ಇನ್‍ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    33 ವರ್ಷದ ಪ್ರವೀಣ್ ಕುಮಾರ್ ತಮ್ಮ ಜೀವನದಲ್ಲಿ ಬೌಲಿಂಗ್ ಮಾತ್ರವಲ್ಲದೇ ಅವರು ಧರಿಸುತ್ತಿದ್ದ 50 ತೊಲೆ ಚಿನ್ನದ ಸರದಿಂದಲೂ ಹೆಚ್ಚು ಖ್ಯಾತಿ ಪಡೆದಿದ್ದರು. ಆದರೆ 8 ಲಕ್ಷ ರೂ. ಮೌಲ್ಯದ ಸರ 2014 ರಲ್ಲಿ ಕಳೆದು ಹೋಗಿತ್ತು. ವಿಜಯ್ ಹಜಾರೆ ಟೂರ್ನಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಪರ ಆಡುತ್ತಿದ್ದ ಪ್ರವೀಣ್ ಫೀಲ್ಡಿಂಗ್‍ಗೆ ತೆರಳುವ ಮುನ್ನ ಸರವನ್ನು ಬಿಚ್ಚಿಟ್ಟು ತೆರಳಿದ್ದರು. ಆದರೆ ಆ ಬಳಿಕ ಅದನ್ನು ಅಲ್ಲಿಯೇ ಮರೆತು ಹೋಟೆಲ್ ರೂಮ್‍ಗೆ ಮರಳಿದ್ದರು.

    https://www.instagram.com/p/B3gkR97jWdM/

    ತಾವು ಸರವನ್ನು ಮರೆತು ಬಂದ ಬಗ್ಗೆ ಪ್ರವೀಣ್ ಕ್ರೀಡಾಂಗಣದ ಅಧಿಕಾರಿಗಳಿಗೆ ದೂರು ನೀಡಿದರು ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ ಇತ್ತೀಚೆಗೆ ತಮ್ಮ ಫೋಟೋ ಪೋಸ್ಟ್ ಮಾಡಿರುವ ಪ್ರವೀಣ್ ಕುಮಾರ್, ‘ಸಂಜು ಬಾಬಾರನ್ನ ನಾನು ಗಂಭೀರವಾಗಿ ತೆಗೆದುಕೊಂಡಾಗ.. ನನ್ನ 50 ತೊಲದ ಸರವನ್ನ ನೋಡಿ’ ಎಂದು ಸಿನಿಮಾ ಡೈಲಾಂಗ್ ಹೇಳಿದ್ದಾರೆ. ಅಂದಹಾಗೇ ಈ ಡೈಲಾಗ್ ಸಂಜಯ್ ದಂತ್ ಅವರು 1999 ರಲ್ಲಿ ಬಿಡುಗಡೆಯಾಗಿದ್ದ ‘ವಾಸ್ತವ್’ ಸಿನಿಮಾದಲ್ಲಿ ಹೇಳಿದ್ದರು.

    2007 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಪ್ರವೀಣ್ ಕುಮಾರ್ ಅವರು, ನಿವೃತ್ತಿ ಬಳಿಕ ಟಿ10 ಲೀಗ್ ನಲ್ಲಿ ಭಾಗವಹಿಸಿದ್ದರು. ಭಾರತದ ಪರ 6 ಟೆಸ್ಟ್, 68 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನು ಪ್ರವೀಣ್ ಆಡಿದ್ದು ಕ್ರಮವಾಗಿ 27, 77, 8 ವಿಕೆಟ್ ಪಡೆದಿದ್ದಾರೆ. 2012 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಯಲ್ಲಿ ಅಂತಿಮವಾಗಿ ಆಡಿದ್ದರು.

    https://www.instagram.com/p/Bi_NibaFZ1i/

    https://www.instagram.com/p/BpJOJU3lD7y/