Tag: ಮಾಚೋಹಳ್ಳಿ

  • ಫಿಲ್ಮಿ ಸ್ಟೈಲ್‍ನಲ್ಲಿ ದರೋಡೆ- ಮಾರಕಾಸ್ತ್ರಗಳಿಂದ ಬೆದರಿಸಿ 500 ಗ್ರಾಂ ಚಿನ್ನ ದೋಚಿದ್ರು!

    ಫಿಲ್ಮಿ ಸ್ಟೈಲ್‍ನಲ್ಲಿ ದರೋಡೆ- ಮಾರಕಾಸ್ತ್ರಗಳಿಂದ ಬೆದರಿಸಿ 500 ಗ್ರಾಂ ಚಿನ್ನ ದೋಚಿದ್ರು!

    ಬೆಂಗಳೂರು: ಐವರು ಮುಸುಕುಧಾರಿಗಳು ಆಭರಣದ ಅಂಗಡಿಯಲ್ಲಿ ದರೋಡೆ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ನಡೆದಿದೆ.

    ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬೆದರಿಸಿ ಸುಮಾರು 500 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದಾರೆ. ಮಾಚೋಹಳ್ಳಿಯ ಅಮ್ಮ ಜ್ಯುವೆಲರಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಅಂಗಡಿ ಬಳಿ ಬಂದಾಗ ದರೋಡೆಕೋರರು ಎಸ್ಕೇಪ್ ಆಗಿದ್ದಾರೆ.

    ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಓರ್ವ ದರೋಡೆಕೋರನನ್ನು ಸೆರೆ ಹಿಡಿದಿದ್ದಾರೆ. ದರೋಡೆಕೋರರನ್ನ ಹಿಡಿಯುವ ವೇಳೆ ಓರ್ವ ಸ್ಥಳೀಯ ವ್ಯಕ್ತಿಗೆ ಗಾಯವಾಗಿದೆ.