Tag: ಮಾಂಸ

  • ವಿಡಿಯೋ: ಚಿಕನ್ ತಿನ್ನುವ ಮೊದಲು ಈ ಸುದ್ದಿ ಓದಿ!

    ವಿಡಿಯೋ: ಚಿಕನ್ ತಿನ್ನುವ ಮೊದಲು ಈ ಸುದ್ದಿ ಓದಿ!

    ಮೈಸೂರು: ನೀವು ಚಿಕನ್ ಪ್ರೀಯರೇ? ಹಾಗಾದರೆ ನೀವು ಈ ಸುದ್ದಿಯನ್ನು ತಪ್ಪದೆ ನೋಡಬೇಕು. ಮಾಂಸದ ಅಂಗಡಿಯಿಂದ ಅದರಲ್ಲೂ ಬ್ರ್ಯಾಂಡ್ ಇರುವ ಮಾಂಸದ ಅಂಗಡಿಯಿಂದ ತಂದ ಮಾಂಸವನ್ನು ಸರಿಯಾಗಿ ಗಮನಿಸದೆ ಇದ್ದರೆ ನಿಮ್ಮ ಕಥೆ ಮುಗಿಯಿತು.

    ಮಾಂಸದ ಜೊತೆಗೆ ಹುಳದ ಮಾಂಸವು ನಿಮ್ಮ ಹೊಟ್ಟೆ ಸೇರುತ್ತೆ. ಹಸಿ ಮಾಂಸದಲ್ಲಿ ಹುಳ ಕಂಡು ಗ್ರಾಹಕಿಯೊಬ್ಬರು ಬೆರಗಾಗಿಬಿಟ್ಟಿದ್ದಾರೆ. ಹುಳಗಳ ಸಮೇತ ಚಿಕನ್ ಅಂಗಡಿಗೆ ಬಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮೈಸೂರಿನ ಟಿಕೆ ಲೇಔಟ್‍ನ ವಿಜಯ್ ಚಿಕನ್ ಸ್ಟಾಲ್‍ನಲ್ಲಿ ಮಹಿಳೆಗೆ ಇಂತಹ ಹುಳ ಇರುವ ಮಾಂಸ ನೀಡಲಾಗಿದೆ.

    ಈ ಘಟನೆಯಿಂದ ಎಚ್ಚೆತ್ತು ಚಿಕನ್ ಅಂಗಡಿ ನೌಕರರು ಗ್ರಾಹಕರಲ್ಲಿ ಕ್ಷಮೆಯಾಚಿಸಿದ್ದಾರೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ ವಿಚಾರವನ್ನು ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಗ್ರಾಹಕಿ ತಿಳಿಸಿದ್ದಾರೆ.

    https://youtu.be/LSNq-8EfMtQ

  • ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಜನ್ರು ಛೀ.. ಥೂ.. ಅನ್ನೋ ಕೆಲಸ ಎನಾಗಿದೆ ಗೊತ್ತಾ..?

    ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಜನ್ರು ಛೀ.. ಥೂ.. ಅನ್ನೋ ಕೆಲಸ ಎನಾಗಿದೆ ಗೊತ್ತಾ..?

    ವಿಜಯಪುರ: ಸರ್ಕಾರಿ ಆಸ್ಪತ್ರೆ ಅಂದ್ರೆ ಸಾಕು ಜನಾ ಮೂಗು ಮುರಿಯುತ್ತಾರೆ. ಅಂತಹದರಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಜನ್ರು ಛೀ.. ಥೂ.. ಎನ್ನುವಂತಹ ಕೆಲಸ ನಡೆಯುತ್ತಿದೆ.

    ನಗರದ ಜಿಲ್ಲಾ ಆಸ್ಪತ್ರೆ ಹಿಂಭಾಗದಲ್ಲಿರುವ ಶವಾಗಾರದ ಎದುರು ದಿನನಿತ್ಯ ಮಾಂಸದ ತುಂಡುಗಳು ಬೀಳುತ್ತಿವೆ. ಪ್ರತಿದಿನ ನಡೆಯುವ ಶಸ್ತ್ರಚಿಕಿತ್ಸೆಯಲ್ಲಿ ತೆಗೆಯುವ ದೇಹದ ಅಂಶಗಳೋ ಅಥವಾ ಸತ್ತ ವ್ಯಕ್ತಿಯ ಶವಪರೀಕ್ಷೆ ವೇಳೆ ಕತ್ತರಿಸಿದ ಮಾಂಸದ ತುಂಡುಗಳೋ ಗೊತ್ತಿಲ್ಲ. ಆದರೆ ಅವುಗಳನ್ನು ನಿಯಮಬದ್ಧವಾಗಿ ಆಸ್ಪತ್ರೆ ನಿರ್ವಹಣೆ ಮಾಡಬೇಕಿದೆ. ಆದ್ರೆ ಎಲ್ಲ ನಿಯಮವನ್ನು ಗಾಳಿಗೆ ತೂರಿ ಇಲ್ಲಿನ ಆಸ್ಪತ್ರೆಯ ಶವಾಗಾರದ ಮುಂದೆ ದೇಹದ ತುಣುಕುಗಳನ್ನು ಎಸೆಯಲಾಗುತ್ತಿದೆ.

    ಮಾಂಸದ ತುಂಡನ್ನು ತಿನ್ನಲು ಹಂದಿ, ನಾಯಿಗಳು ಮುಗಿ ಬೀಳುತ್ತಿವೆ. ಶವಪರೀಕ್ಷೆ ಕಾನೂನಿನ ನಿಯಮದಂತೆ ನಡೆಸಬೇಕು. ಅಲ್ಲದೆ ಎಲ್ಲೆಂದರಲ್ಲಿ ಹೀಗೆ ಸತ್ತ ವ್ಯಕ್ತಿಗಳ ದೇಹದ ಭಾಗವನ್ನು ಎಸೆಯಬಾರದು. ಆದರೂ ಸಹ ಅದು ಹೇಗೆ ಇಲ್ಲಿನ ಸಿಬ್ಬಂದಿ ಇಷ್ಟೊಂದು ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವುದೆ ಎಲ್ಲರಿಗೂ ಯಕ್ಷಪ್ರಶ್ನೆಯಾಗಿದೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಗೋ ಹತ್ಯೆ ನಿಷೇಧ: ಕೇಂದ್ರದ ಆಧಿಸೂಚನೆಗೆ ಸುಪ್ರೀಂ ತಡೆ

    ಗೋ ಹತ್ಯೆ ನಿಷೇಧ: ಕೇಂದ್ರದ ಆಧಿಸೂಚನೆಗೆ ಸುಪ್ರೀಂ ತಡೆ

    ನವದೆಹಲಿ: ಮಾಂಸದ ಉದ್ದೇಶಕ್ಕಾಗಿ ಜಾನುವಾರು ಮಾರಾಟ ಮತ್ತು ಖರೀದಿ ಮೇಲೆ ನಿರ್ಬಂಧ ಹೇರಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

    ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ಈ ಹಿಂದೆ ಈ ಅಧಿಸೂಚನೆಗೆ 4 ವಾರಗಳ ತಡೆ ನೀಡಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾ. ಖೇಹರ್ ಅವರಿದ್ದ ಪೀಠ ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದುದಿದು ದೇಶಾದ್ಯಂತ ಅನ್ವಯಿಸಲಿದೆ ಎಂದು ಹೇಳಿದೆ.

    ಮಾಂಸದ ಉದ್ದೇಶಕ್ಕಾಗಿ ಜಾನುವಾರು ಮಾರಾಟ ಮತ್ತು ಖರೀದಿ ಮೇಲೆ ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ ಮೇ 26ರಂದು ಅಧಿಸೂಚನೆ ಹೊರಡಿಸಿತ್ತು. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದನ್ನು ಪ್ರಶ್ನಿಸಿ ಹೈದರಾಬಾದ್ ಮೂಲದ ಫಾಹಿಮ್ ಖುರೇಷಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಕೇಂದ್ರ ಸರ್ಕಾರದ ನಿರ್ಧಾರ ಅಸಂವಿಧಾನಿಕವಾಗಿದ್ದು, ಈ ನಿರ್ಧಾರದಿಂದ ಮಾಂಸ ವ್ಯಾಪಾರೋದ್ಯಮಿಗಳಿಗೆ ಸಮಸ್ಯೆ ಆಗುತ್ತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದ್ದು, ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

  • ಬೀಫ್ ರಫ್ತಿನಲ್ಲಿ ಭಾರತ ನಂಬರ್ 1 ಅನ್ನೋದು ಸುಳ್ಳು: ನಿರ್ಮಲಾ ಸೀತಾರಾಮನ್

    ಬೀಫ್ ರಫ್ತಿನಲ್ಲಿ ಭಾರತ ನಂಬರ್ 1 ಅನ್ನೋದು ಸುಳ್ಳು: ನಿರ್ಮಲಾ ಸೀತಾರಾಮನ್

    ಉಡುಪಿ: ಬೀಫ್ ರಫ್ತಿನಲ್ಲಿ ಭಾರತ ನಂಬರ್ 1 ಎನ್ನುವುದು ಸುಳ್ಳು ಆರೋಪ ಎಂದು ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಇದೊಂದು ತಪ್ಪು ಕಲ್ಪನೆ. ಬೀಫ್ ಅಂದ್ರೆ ದನದ ಮಾಂಸ. ದನದ ಮಾಂಸ ರಫ್ತು ಮಾಡೋದು ನಿಷೇಧವಾಗಿದೆ. ಆದ್ರೆ ನಮ್ಮಿಂದ ರಫ್ತಾಗುತ್ತಿರುವುದು ಖಾರ ಬೀಫ್ ಎಂದು ತಿಳಿಸಿದರು.

    ಖಾರ ಬೀಫ್ ಅಂದ್ರೆ ಎಮ್ಮೆ ಮತ್ತು ಕೋಣದ ಮಾಂಸ. ಖಾರ ಬೀಫ್ ರಫ್ತು ನಿಷೇಧವಾಗಿಲ್ಲ. ಇಷ್ಟಾದ್ರೂ ಗೊಂದಲ ಸೃಷ್ಟಿಸಲಾಗುತ್ತಿದೆ. ಹಲವು ಬಾರಿ ಸ್ಪಷ್ಟೀಕರಣ ನೀಡಿದರೂ ಕೆಲವರು ಖಾರ ಪದವನ್ನು ಬಳಸದೇ ಕೇವಲ ಬೀಫ್ ಪದವನ್ನು ಮಾತ್ರ ಬಳಸುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

     

  • ನೀವು ಹಂದಿ, ಕುರಿ ಮಾಂಸ ತಿನ್ನುತ್ತೀರಾ? ಹಾಗಾದ್ರೆ ಈ ಸುದ್ದಿ ಓದಿ

    ನೀವು ಹಂದಿ, ಕುರಿ ಮಾಂಸ ತಿನ್ನುತ್ತೀರಾ? ಹಾಗಾದ್ರೆ ಈ ಸುದ್ದಿ ಓದಿ

    ಮಂಗಳೂರು: ನೀವು ಹಂದಿ, ಕುರಿ ಮಾಂಸ ತಿನ್ನುವುವರಾದರೆ ಈ ಸುದ್ದಿ ನೋಡಲೇ ಬೇಕು. ಈ ಮಾಂಸಗಳನ್ನು ತಿನ್ನುವವರು ಎಚ್ಚರ ವಹಿಸಲೇಬೇಕು. ಯಾಕಂದ್ರೆ ರೆಡ್ ಮೀಟ್ ತಿಂದರೆ ನಿಮಗೆ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ. ಮಂಗಳೂರಿನ ಎಂಐಓ ಕ್ಯಾನ್ಸರ್ ಆಸ್ಪತ್ರೆಯು ಇಂತಹದ್ದೊಂದು ಆಘಾತಕಾರಿ ಸಂಶೋಧನಾ ವರದಿ ನೀಡಿದೆ.

    ಮಂಗಳೂರಿನ ಇನ್ಸ್ ಟಿಟ್ಯೂಟ್ ಆಫ್ ಒಂಕಾಲಜಿ ಆಸ್ಪತ್ರೆಯ ನುರಿತ ತಜ್ಞರ ತಂಡವೊಂದು ಆಘಾತಕಾರಿ ವರದಿ ನೀಡಿದೆ. ಪ್ರದೇಶವಾರು ಸುಮಾರು 900 ಕ್ಯಾನ್ಸರ್ ರೋಗಿಗಳನ್ನ ವೈದ್ಯರು ಸರ್ವೇ ಮಾಡಿದ್ದಾರೆ. ಕೇರಳ, ಕಾಸರಗೋಡು, ಮಂಜೇಶ್ವರ ಭಾಗದ ಜನ ಕುರಿ, ದನ, ಹಂದಿ ಮಾಂಸ ತಿನ್ನುತ್ತಿದ್ದು, ಅಂಥವರಲ್ಲಿ ಅತಿಹೆಚ್ಚು ಸ್ತನ ಹಾಗೂ ಕರಳು ಕ್ಯಾನ್ಸರ್ ಕಂಡುಬಂದಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ.

    ರೆಡ್ ಮೀಟ್‍ನಲ್ಲಿರುವ ಕೊಬ್ಬಿನ ಅಂಶ ಹಾಗೂ ಪದೇ ಪದೇ ಬೇಯಿಸಿ ತಿನ್ನೋದ್ರಿಂದ ಕ್ಯಾನ್ಸರ್ ಬರುತ್ತಂತೆ. ಹೀಗಾಗಿ ರೆಡ್ ಮೀಟ್ ಆಹಾರದ ಬಗ್ಗೆ ಜಾಗ್ರತೆ ವಹಿಸುವಂತೆ ಹಾಗೂ ವಾರಕ್ಕೆ 500 ಗ್ರಾಂ ಮಾತ್ರ ಸೇವಿಸುವಂತೆ ಸೂಚನೆ ನೀಡಿದ್ದಾರೆ. ಮಂಗಳೂರು ವೈದ್ಯರ ತಂಡ ಮಾಂಸ ಪ್ರಿಯರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

     

  • ಉಲ್ಲಾಳ ಕೆರೆಯಂಗಳದಲ್ಲಿ ಎಲ್ಲಿ ನೋಡಿದ್ರೂ ಮಾಂಸ, ಮೆಡಿಕಲ್ ವೇಸ್ಟ್; ಅನಾಹುತದ ಬಗ್ಗೆ ಸ್ಥಳೀಯರ ಆತಂಕ

    ಉಲ್ಲಾಳ ಕೆರೆಯಂಗಳದಲ್ಲಿ ಎಲ್ಲಿ ನೋಡಿದ್ರೂ ಮಾಂಸ, ಮೆಡಿಕಲ್ ವೇಸ್ಟ್; ಅನಾಹುತದ ಬಗ್ಗೆ ಸ್ಥಳೀಯರ ಆತಂಕ

    – ಪವಿತ್ರ ಕಡ್ತಲ
    ಬೆಂಗಳೂರು: ಇಲ್ಲಿನ ಬೆಂಗಳೂರಿನ ಉಲ್ಲಾಳ ಕೆರೆಯಂಗಳದಲ್ಲಿ ಜೀವ ಉಳಿಸುವ ಆಸ್ಪತ್ರೆಗಳು ಇಲ್ಲಿನ ಜನ್ರ ಪಾಲಿಗೆ ಜೀವ ತೆಗೆಯಲು ಸಜ್ಜಾಗಿದೆ.

    ಹೌದು. ಬೆಂಗಳೂರಿನ ಉಲ್ಲಾಳ ಕೆರೆ ಪಕ್ದಲ್ಲಿರೋ ರಸ್ತೆ ಬದಿ ಎಲ್ಲಿ ನೋಡಿದ್ರೂ ಬರೀ ಇಂಜೆಕ್ಷನ್, ಮೆಡಿಸಿನ್ ಬಾಟಲ್‍ಗಳು, ಮಾತ್ರೆಗಳು, ಕಪ್ಪು ಕವರ್‍ನಲ್ಲಿ ಸುತ್ತಿದ ತ್ಯಾಜ್ಯಗಳೇ ಕಾಣಸಿಗುತ್ತವೆ. ಈ ಏರಿಯಾದ ಸುತ್ತುಮುತ್ತ ಇರುವ ನರ್ಸಿಂಗ್ ಹೋಂಗಳು ರಾತ್ರೋರಾತ್ರಿ ಮೆಡಿಕಲ್ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ.

    ನರ್ಸಿಂಗ್ ಹೋಂಗಳಷ್ಟೇ ಅಲ್ಲ, ಮಾಂಸದಂಗಡಿಗಳು ವೇಸ್ಟೇಜ್‍ಗಳನ್ನು ಎಸೆದು ಹೋಗ್ತಾರೆ. ಈ ಬಗ್ಗೆ ಇಲ್ಲಿನ ಸ್ಥಳೀಯರು ಪಾಲಿಕೆಗೆ ದೂರು ನೀಡಿದ್ರೂ ಯಾವ್ದೆ ಪ್ರಯೋಜನವಾಗಿಲ್ಲ. ಇದ್ರಿಂದ ಎಲ್ಲಿ ಭೂಮಿ ಕಾದ ಕೆಂಡಂತಾಗಿ ಅನಾಹುತ ಸಂಭವಿಸುತ್ತೋ ಅಂತಾ ಇಲ್ಲಿನ ಸ್ಥಳೀಯರು ಆತಂಕಗೊಂಡಿದ್ದಾರೆ. ಅಲ್ಲದೆ ರಸ್ತೆಯಲ್ಲಿ ಓಡಾಡೋಕು ಸಾಧ್ಯವಾಗ್ತಿಲ್ಲ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ.

    ಮೆಡಿಕಲ್ ತ್ಯಾಜ್ಯ ಸಂಸ್ಕರಣೆಗೆ ಅದ್ರದ್ದೇ ಆದ ವಿಧಾನವಿದೆ. ಈ ರೀತಿ ಸಿಕ್ಕಸಿಕ್ಕಲ್ಲಿ ಮೆಡಿಕಲ್ ತ್ಯಾಜ್ಯವನ್ನ ಎಸೆಯುವಂತಿಲ್ಲ. ಆದ್ರೆ ಸಮಾಜದ ಸ್ವಾಸ್ಥ್ಯದ ಬಗ್ಗೆ ಗಮನಹರಿಸಬೇಕಾದ ಆಸ್ಪತ್ರೆಯವರೇ ಈ ರೀತಿ ವರ್ತನೆ ತೋರಿರೋದು ನಿಜಕ್ಕೂ ನಾಚಿಕೆಗೇಡು.