Tag: ಮಾಂಸ

  • ಸಾರ್ವಜನಿಕ ಶೌಚಾಲಯದಲ್ಲಿ ಮೊಟ್ಟೆ, ಮಾಂಸ ಮಾರಾಟ

    ಸಾರ್ವಜನಿಕ ಶೌಚಾಲಯದಲ್ಲಿ ಮೊಟ್ಟೆ, ಮಾಂಸ ಮಾರಾಟ

    ಇಂದೋರ್: ಮೊಟ್ಟೆ ಮತ್ತು ಮಾಂಸವನ್ನು ಮಾರಲು ಸಾರ್ವಜನಿಕ ಶೌಚಾಲಯವನ್ನು ಬಳಸುತ್ತಿರುವ ಘಟನೆ ಇಂದೋರ್‍ನ ಮಧ್ಯ ಪ್ರದೇಶದಲ್ಲಿ ನಡೆದಿದೆ. ಸುಲಭ್ ಶೌಚಾಲಯದಲ್ಲಿನ ನಡೆಸಲಾಗುತ್ತಿದ್ದ ಈ ಅಕ್ರಮ ವ್ಯಾಪಾರ ಇಂದೋರ್ ಮುನ್ಸಿಪಲ್ ಕಾರ್ಪೋರೇಷನ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ನಾಗರಿಕ ಸೌಲಭ್ಯ ಮತ್ತು ಅವ್ಯವಸ್ಥೆ ವಿಚಾರವಾಗಿ ಕ್ರಮ ಕೈಗೊಂಡಿದ್ದು, ಸುಲಭ್ ಇಂಟರ್ ನ್ಯಾಷನಲ್ ಎಂಬ ಎನ್‍ಜಿಒ ವಿರುದ್ಧ ದಂಡ ವಿಧಿಸಿದೆ.

    ಈ ಕುರಿತಂತೆ ಮಾತನಾಡಿದ ಈಎಂಸಿಯ ಹೆಚ್ಚುವರಿ ಆಯುಕ್ತ ಅಭಯ್ ರಾಜಂಗಾಂವ್ಕರ್, ಪರಿಶೀಲನೆ ನಡೆಸುತ್ತಿದ್ದ ವೇಳೆ ಸಾರ್ವಜನಿಕ ಶೌಚಾಲಯವನ್ನು ಮೊಟ್ಟೆ ಮತ್ತು ಮಾಂಸ ಮಾರಾಟಕ್ಕೆ ದುರ್ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಹಾಗಾಗಿ ಆರೋಪಿಗೆ ಸ್ಥಳದಲ್ಲಿಯೇ 1,000 ರೂ. ದಂಡ ವಿಧಿಸಲಾಗಿದೆ. ಜೊತೆಗೆ ಎನ್‍ಜಿಒ ಸುಲಭ್ ಇಂಟರ್ ನ್ಯಾಷನಲ್‍ಗೆ ನೋಟಿಸ್ ಕಳುಹಿಸುವ ಮೂಲಕ 20,000 ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದರು.

    2017 ಅಂದರೆ ಕಳೆದ ನಾಲ್ಕು ವರ್ಷದಿಂದ ಸತತವಾಗಿ ಇಂದೋರ್ ದೇಶದಲ್ಲಿಯೇ ಸ್ವಚ್ಛನಗರ ಎಂದು ಕೇಂದ್ರ ಸರ್ಕಾರದ ಸ್ವಚ್ಛ ಸುರಕ್ಷನ್ ಸಮೀಕ್ಷೆ ಅಡಿ ತಿಳಿಸಲಾಗಿದೆ.

  • ಮೀನು ಸಾಗಾಟದ ಟೆಂಪೋದಲ್ಲಿ 12 ಟನ್ ಗೋಮಾಂಸ ಸಾಗಣೆ

    ಮೀನು ಸಾಗಾಟದ ಟೆಂಪೋದಲ್ಲಿ 12 ಟನ್ ಗೋಮಾಂಸ ಸಾಗಣೆ

    – ಭಜರಂಗದಳದ ಕಾರ್ಯಾಚರಣೆಯಿಂದ ಬಹಿರಂಗ

    ಮಂಗಳೂರು: ಮೀನು ಸಾಗಾಟದ ಟೆಂಪೋದಲ್ಲಿ ಬರೋಬ್ಬರಿ 12 ಟನ್ ಗೋಮಾಂಸ ಸಾಗಣೆ ಮಾಡುತ್ತಿದ್ದ ವೇಳೆ ಭಜರಂಗ ದಳದ ಕಾರ್ಯಕರ್ತರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದ್ದಾರೆ.

    ಮಂಗಳೂರಿನಲ್ಲಿ ಘಟನೆ ನಡೆದಿದ್ದು, ಭಾರೀ ಪ್ರಮಾಣದಲ್ಲಿ ಗೋಮಾಂಸವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಂಗಳೂರಿನ ಭಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ನಗರದ ಹೊರವಲಯದ ಅಡ್ಯಾರ್ ನಿಂದ ಮೀನು ಸಾಗಟದ ಟೆಂಪೋವನ್ನು ಭಜರಂಗದಳದ ಕಾರ್ಯಕರ್ತರು ಬೆನ್ನಟ್ಟಿಕೊಂಡು ಬಂದಿದ್ದರು. ಇದೇ ವೇಳೆ ಕಂಕನಾಡಿ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ನಗರದ ಪಡೀಲ್ ನಲ್ಲಿ ಟೆಂಪೋವನ್ನು ತಡೆದಿದ್ದಾರೆ.

    ಬಳಿಕ ತಪಾಸಣೆ ನಡೆಸಿದಾಗ ಮೀನು ಸಾಗಾಟದ ಟೆಂಪೋದಲ್ಲಿ ಬರೋಬ್ಬರಿ 12 ಟನ್ ಗೋಮಾಂಸ ಪತ್ತೆಯಾಗಿದ್ದು, ಪೊಲೀಸರು ಗೋಮಾಂಸವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯಿಂದ ಮಂಗಳೂರಿಗೆ ಈ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರೋದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

    ಕಳೆದ ಒಂದು ವಾರದ ಹಿಂದೆ ಇದೇ ರೀತಿ ಹಾಲು ಸಾಗಾಟದ ಟೆಂಪೋದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರು ಅಡ್ಡ ಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿತ್ತು.

  • ಚಿಕ್ಕಮಗಳೂರಿನಲ್ಲಿ ಮಾಂಸ, ಮೀನಿನಂಗಡಿ ತೆರೆದಿದ್ದರೂ ಕೊಳ್ಳೋರಿಲ್ಲ

    ಚಿಕ್ಕಮಗಳೂರಿನಲ್ಲಿ ಮಾಂಸ, ಮೀನಿನಂಗಡಿ ತೆರೆದಿದ್ದರೂ ಕೊಳ್ಳೋರಿಲ್ಲ

    – ಲಾಕ್‍ಡೌನ್ ಹಿನ್ನೆಲೆ ಮನೆಯಿಂದ ಹೊರ ಬಾರದ ಜನ

    ಚಿಕ್ಕಮಗಳೂರು: ಕೊರೊನಾ ಆತಂಕದಿಂದಾಗಿ ಸರ್ಕಾರ ನಾಲ್ಕನೇ ಹಂತದ ಲಾಕ್‍ಡೌನ್ ವಿಸ್ತರಿಸಿದೆ. ಆದರೆ ಕೆಲ ಸಡಿಲಿಕೆಯನ್ನು ನೀಡಿದ್ದು, ಅಗತ್ಯ ವಸ್ತುಗಳ ಖರೀದೆಗೆ ಅವಕಾಶ ಕಲ್ಪಿಸಿದೆ. ಅಲ್ಲದೆ ಇಡೀ ವಾರ ಓಡಾಡಲು ಅವಕಾಶ ನೀಡಲಾಗಿದೆ. ಭಾನುವಾರ ಮಾತ್ರ ಕಟ್ಟುನಿಟ್ಟಿನ ಲಾಕ್‍ಡೌನ್ ವಿಧಿಸಲು ನಿರ್ಧರಿಸಲಾಗಿದೆ. ಅದರಂತೆ ಚಿಕ್ಕಮಗಳೂರಿನಲ್ಲಿ ಮಳಿಗೆಗಳು ತೆರೆದಿವೆ ಆದರೆ ಭಾನುವಾರ ಲಾಕ್‍ಡೌನ್ ಇರುವುದರಿಂದ ಜನ ಮನೆಯಿಂದ ಹೊರ ಬರುತ್ತಿಲ್ಲ.

    ತರಕಾರಿ, ಹಣ್ಣು, ಚಿಕನ್-ಮಟನ್, ಮೀನು ಸೇರಿದಂತೆ ಅಗತ್ಯ ಹಾಗೂ ದಿನಬಳಕೆ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದೆ. ಸರ್ಕಾರ ಅನುಮತಿ ನೀಡಿದ್ದರೂ ಲಾಕ್‍ಡೌನ್ ಹಿನ್ನೆಲೆ ಜನ ಹೊರಗಡೆ ಬರುತ್ತಿಲ್ಲ. ಹೀಗಾಗಿ ಅಂಗಡಿ ಮುಂಗಟ್ಟುಗಳು ಬಿಕೋ ಎನ್ನುತ್ತಿವೆ. ಇದರಿಂದಾಗಿ ವರ್ತಕರಿಗೆ ನಷ್ಟದ ಆತಂಕ ಎದುರಾಗಿದೆ.

    ಲಾಕ್‍ಡೌನ್ ಹಿನ್ನೆಲೆ ಜನ ಮನೆಯಿಂದ ಹೊರ ಬರುತ್ತಿರುವುದು ತೀರಾ ವಿರಳವಾಗಿದ್ದು, ಸಾವಿರರು ರೂ. ಮೌಲ್ಯದ ಚಿಕನ್, ಮಟನ್, ಮೀನು ತಂದು ವ್ಯಾಪಾರ ಮಾಡುತ್ತಿರುವ ವರ್ತಕರಿಗೆ ನಷ್ಟ ಉಂಟಾಗಿದೆ. ಮಧ್ಯಾಹ್ನ 2 ಗಂಟೆ ವೇಳೆಗೆ ವ್ಯಾಪಾರ ಮುಗಿಸಿ ಮನೆಗೆ ಹೋಗುತ್ತಿದ್ದೆವು. ಆದರೆ ಇಂದು ಬೆಳಗ್ಗೆಯಿಂದ ಶೇ20ರಷ್ಟು ಸಹ ವ್ಯಾಪಾರವಾಗಿಲ್ಲ ಎಂದು ಚಿಂತಾಕ್ರಾಂತರಾಗಿದ್ದಾರೆ. ಚಿಕ್ಕಮಗಳೂರು ಮೀನು ಮಾರುಕಟ್ಟೆಯಲ್ಲಂತೂ ಜನರೇ ಇಲ್ಲದಂತಾಗಿದೆ.

  • ಮಾಂಸ ಮಾರಾಟದಲ್ಲಿ ಗೊಂದಲ- ಬೆಂಗ್ಳೂರಲ್ಲಿ ಪರ್ಮಿಷನ್, ಜಿಲ್ಲೆಗಳಲ್ಲಿ ಕನ್‍ಫ್ಯೂಷನ್

    ಮಾಂಸ ಮಾರಾಟದಲ್ಲಿ ಗೊಂದಲ- ಬೆಂಗ್ಳೂರಲ್ಲಿ ಪರ್ಮಿಷನ್, ಜಿಲ್ಲೆಗಳಲ್ಲಿ ಕನ್‍ಫ್ಯೂಷನ್

    – ಮಂಡ್ಯದಲ್ಲಿ ಕೋಳಿ ಮಾರಂಗಿಲ್ಲ

    ಬೆಂಗಳೂರು: ಹೊಸತೊಡಕಿನಲ್ಲಿ ಮಾಂಸ ಮಾರಾಟದಲ್ಲೂ ಗೊಂದಲ ಉಂಟಾಗಿದೆ. ಬೆಂಗಳೂರಿನಲ್ಲಿ ಲಾಕ್‍ಡೌನ್ ಆದೇಶದಂತೆ ಮಾಂಸ ಮಾರಾಟಕ್ಕೆ ಅವಕಾಶ ನೀಡಿದ್ರೆ, ಕೆಲ ಜಿಲೆಗಳಲ್ಲಿ ಗೊಂದಲ ಎದುರಾಗಿದೆ.

    ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮನಗರ, ಚಿಕ್ಕಮಗಳೂರು, ಉಡುಪಿಯಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಕನಿಷ್ಠ ಅಂತರ ಕಾಯ್ದುಕೊಳ್ಳಬೇಕು, ಮುಗಿಬೀಳುವಂತ್ತಿಲ್ಲ ಎಂದು ಸೂಚನೆ ನೀಡಲಾಗಿದೆ.

    ಭಾರತ ಲಾಕ್‍ಡೌನ್ ನಡುವೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಾಂಸ ಮಾರಾಟಕ್ಕೆ ಅವಕಾಶ ಮಾಡಿಕೊಡಿಲಾಗಿದೆ. ಯುಗಾದಿ ಹಬ್ಬದ ಮಾರನೇ ದಿನವಾದ ಇಂದು ಮಾಂಸ ಖರೀದಿಗೆ ಜನ ಹಿಂದೇಟು ಹಾಕಿದ್ದು, ಮಾಂಸದ ಮಾರುಕಟ್ಟೆಗಳಲ್ಲಿ ಜನ ವಿರಳವಾಗಿದ್ದಾರೆ. ಆದರೆ ಮಾಂಸ ಖರೀದಿಗೆ ಬಂದವರು ಸಾಮಾಜಿಕ ಅಂತರ ಕಾಪಾಡುವುದನ್ನು ಬಿಟ್ಟು ಕಾಟಾಚಾರಕ್ಕೆ ಸಾಮಾಜಿಕ ಅಂತರ ಎಂಬತೆ ವರ್ತಿಸುತ್ತಿದ್ದಾರೆ.

    ರಾಯಚೂರಿನಲ್ಲಿ ಮಾಂಸವನ್ನು ಹೋಂ ಡೆಲಿವರಿ ಮಾಡಲು ಜಿಲ್ಲಾಧಿಕಾರಿ ಅವಕಾಶ ನೀಡಿದ್ದಾರೆ. ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ. ಆದರೆ ಹಕ್ಕಿ ಜ್ವದ ಹಿನ್ನೆಲೆ ಮಂಡ್ಯದಲ್ಲಿ ಕೋಳಿ ಮಾರಾಟಕ್ಕೆ ಅನುಮತಿ ಇಲ್ಲ. ಜೊತೆಗೆ ಮಾಂಸ ಖರೀದಿಗೆ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

    ಕೊರೊನಾ ಭೀತಿ ನಡುವೆಯೂ ಯುಗಾದಿ ವರ್ಷ ತೊಡಕಿಗೆ, ಹಾಸನದಲ್ಲಿ ಮಟನ್‍ಗೆ ಭರ್ಜರಿ ಬೇಡಿಕೆ ಶುರುವಾಗಿದ್ದು ಪೊಲೀಸ್ ಮತ್ತು ನಗರಸಭೆ ಸಿಬ್ಬಂದಿ ಜನರನ್ನು ನಿಯಂತ್ರಿಸುತ್ತಿದ್ದಾರೆ. ಮಾಸ್ಕ್ ಹಾಕಿದವರಿಗೆ ಮಾತ್ರ ಮಟನ್ ಮಾರ್ಕೆಟ್ ಒಳಗೆ ಬಿಡಲಾಗುತ್ತಿದೆ. ಜನ ಕೂಡ ಸರಿ ಸಾಲಿನಲ್ಲಿ ಅಂತರ ಕಾಯ್ದುಕೊಂಡು ಬರುವಂತೆ ಲೈನ್ ಹಾಕಲಾಗಿದೆ. ನೂರಾರು ಜನ ಸರತಿ ಸಾಲಲ್ಲಿ ನಿಂತು ಮಟನ್ ಖರೀದಿಸುತ್ತಿದ್ದಾರೆ.

  • ಜಿಂಕೆ ಬೇಟೆಯಾಡಿ ಮಾಂಸ ಹಂಚಿಕೊಳ್ಳುವಾಗ ಸಿಕ್ಕಿ ಬಿದ್ರು

    ಜಿಂಕೆ ಬೇಟೆಯಾಡಿ ಮಾಂಸ ಹಂಚಿಕೊಳ್ಳುವಾಗ ಸಿಕ್ಕಿ ಬಿದ್ರು

    ಕಾರವಾರ: ಜಿಂಕೆಯನ್ನು ಬೇಟೆಯಾಡಿ ಮಾಂಸ ಹಂಚಿಕೊಳ್ಳುತ್ತಿದ್ದ ಐವರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಯಲ್ಲಾಪುರದ ಮಹಮ್ಮದ್ ಹನೀಫ್ ಶೇಖ್, ಮೌಸಿಮ್ ಅಬ್ದುಲ್ ರಜಾಕ್ ಶೇಖ್, ಮಂಚಿಕೇರಿ ಗ್ರಾಮದ ಇಸ್ಮಾಯಿಲ್ ಶೇಖ್, ಅಬ್ದುಲ್ ಖಾದರ್ ಶೇಖ್ ಹಾಗೂ ಬೊಮ್ಮನಹಳ್ಳಿಯ ಮಹಮ್ಮದ್ ಹುಸೇನ್ ಶೇಖ್ ಬಂಧಿತ ಆರೋಪಿಗಳು.

    ಬಂಧಿತರಿಂದ ಜಿಂಕೆ ಮಾಂಸ ಹಾಗೂ ಬೇಟೆಗೆ ಬಳಸಿದ ದ್ವಿಚಕ್ರ ವಾಹನ ಸೇರಿದಂತೆ ಕೃತ್ಯಕ್ಕೆ ಬಳಸಿದ ಸಲಕರಣೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಬಂಧಿತ ಆರೋಪಿಗಳು ಶನಿವಾರ ತಡರಾತ್ರಿ ಬೇಡ್ತಿ ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದರು. ಆದರೆ ಜಿಂಕೆಗಳನ್ನು ನೋಡಿ, ಆರೋಪಿಗಳು ಮೀನು ಹಿಡಿಯುವುದನ್ನು ಬಿಟ್ಟು ಜಿಂಕೆ ಬೇಟೆಯಾಗಿದ್ದಾರೆ. ಜಿಂಕೆಯನ್ನು ಹೊತ್ತು ಮಂಚಿಕೇರಿಗೆ ಬಂದ ಐವರು, ಭಾನುವಾರ ಬೆಳಿಗ್ಗೆ ಮಾಂಸವನ್ನು ಹಂಚಿಕೆ ಮಾಡಿಕೊಳ್ಳುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬೆಲೆ ಏರಿಕೆಯಾದ್ರೂ ಕಡಿಮೆಯಾಗಿಲ್ಲ ಮಟನ್ ಡಿಮ್ಯಾಂಡ್

    ಬೆಲೆ ಏರಿಕೆಯಾದ್ರೂ ಕಡಿಮೆಯಾಗಿಲ್ಲ ಮಟನ್ ಡಿಮ್ಯಾಂಡ್

    ರಾಮನಗರ: ಒಂದೆಡೆ ಲೋಕಸಭಾ ಚುನಾವಣೆಯ ನಡುವೆ ಬಂದಿರುವ ಯುಗಾದಿಯ ಹೊಸ ತೊಡಕಿನ ದಿನ ಮಾಂಸದ ಖರೀದಿ ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಜೋರಾಗಿಯೇ ಇದೆ.

    ಬಹುತೇಕ ಎಲ್ಲ ಮಟನ್ ಸ್ಟಾಲ್ ಹಾಗೂ ಚಿಕನ್ ಪೌಲ್ಟ್ರಿ ಸೆಂಟರ್ ಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಮಾಂಸವನ್ನ ಖರೀದಿ ಮಾಡುತ್ತಿದ್ದಾರೆ. ರಾಮನಗರದ ಪ್ರತಿ ಮಟನ್ ಸ್ಟಾಲ್‍ಗಳು ಜನರಿಂದ ಕಿಕ್ಕಿರಿದು ತುಂಬಿದ್ದು, ಮಾಂಸ ಖರೀದಿಯಲ್ಲಿ ನಿರತರಾಗಿದ್ದಾರೆ.

    ಸಾಮಾನ್ಯ ದಿನಗಳಲ್ಲಿ ಮೇಕೆ ಹಾಗೂ ಕುರಿ ಮಾಂಸ ಕೆ.ಜಿಗೆ 380 ರಿಂದ 410 ರೂಪಾಯಿಗಳ ವರೆಗೆ ಇರುತ್ತಿತ್ತು. ಆದರೆ ಇದೀಗ ಹಬ್ಬದ ವಿಶೇಷವಾಗಿರುವುದರಿಂದ ಪ್ರತಿ ಮಟನ್ ಸ್ಟಾಲ್‍ಗಳಲ್ಲೂ ಮಾಂಸದ ದರವನ್ನ ಏರಿಕೆ ಮಾಡಿದ್ದಾರೆ. ಪ್ರತಿ ಕೆ.ಜಿ ಮಾಂಸಕ್ಕೆ 450 ರೂ.ಗಳಿಂದ 500 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಮಾಂಸದ ದರ ಏರಿಕೆಯಾದರೂ ಸಹ ಜನರು ತಾ ಮುಂದು ನಾ ಮುಂದು ಎಂದು ಬೆಳಗ್ಗಿನಿಂದಲೂ ಮಾಂಸ ಖರೀದಿಗೆ ನಿಂತಿದ್ದಾರೆ.

    ಇತ್ತ ಹಬ್ಬಕ್ಕೆ ಮಾಂಸದಡುಗೆ ಮಾಡಲು ಮಂಡ್ಯದ ಎಲ್ಲ ಮಾಂಸದಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನೂರಾರು ಜನ ನಿಂತು ಮಟನ್ ಖರೀದಿಸುತ್ತಿದ್ದಾರೆ. ಸದ್ಯ ಜನರು ಚುನಾವಣೆಯ ಯೋಚನೆ ಬಿಟ್ಟು ಮಾಂಸದಡುಗೆ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ.

  • ಮಾಂಸದ ಅಡುಗೆ ಮಾಡದ್ದಕ್ಕೆ ಪತಿ ಆತ್ಮಹತ್ಯೆ

    ಮಾಂಸದ ಅಡುಗೆ ಮಾಡದ್ದಕ್ಕೆ ಪತಿ ಆತ್ಮಹತ್ಯೆ

    ಬೆಂಗಳೂರು: ಮಾಂಸದ ಅಡುಗೆ ಮಾಡಲಿಲ್ಲ ಎಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗಂಗಮ್ಮನಗುಡಿಯ ಕಲಾನಗರದಲ್ಲಿ ನಡೆದಿದೆ.

    ರಾಜು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಾಜು ಭಾನುವಾರ ಮಧ್ಯಾಹ್ನ ಮಾಂಸದ ಅಡುಗೆ ಮಾಡುವಂತೆ ತನ್ನ ಪತ್ನಿಗೆ ಹೇಳಿ ಹೊರಗೆ ಹೋಗಿದ್ದನು. ಬಳಿಕ ರಾಜು ಕುಡಿದ ಮತ್ತಿನಲ್ಲಿ ಸಂಜೆ ಮನೆಗೆ ಬಂದಾಗ ಹೆಂಡತಿ ಮಾಂಸದ ಅಡುಗೆ ಮಾಡಿರಲಿಲ್ಲ.

    ಪತಿ ರಾಜು ಮನೆಗೆ ಬಂದಿದ್ದನು ನೋಡಿ ಪತ್ನಿ ಆಗತಾನೆ ಮಾಂಸ ತರಲು ಹೊರಗೆ ಹೋಗಿದ್ದಳು. ಮನೆಯಲ್ಲಿ ಮಾಂಸದ ಅಡುಗೆ ಮಾಡಿರದ್ದನ್ನು ಗಮನಿಸಿ ರಾಜು ಕೋಪಗೊಂಡು ಕುಡಿದ ಮತ್ತಿನಲ್ಲಿ ಟಿನ್ನರ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಂಸಾಹಾರ ಸೇವಿಸಬೇಡಿ ಎಂದಿದ್ದಕ್ಕೆ ನಿವೃತ್ತ ಪೊಲೀಸ್ ಆತ್ಮಹತ್ಯೆ!

    ಮಾಂಸಾಹಾರ ಸೇವಿಸಬೇಡಿ ಎಂದಿದ್ದಕ್ಕೆ ನಿವೃತ್ತ ಪೊಲೀಸ್ ಆತ್ಮಹತ್ಯೆ!

    ಮಡಿಕೇರಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮಾನಸಿಕವಾಗಿ ನೊಂದವರೇ ಹೆಚ್ಚು ಇರುತ್ತಾರೆ. ಆದರೆ ಮಾಂಸಾಹಾರ ಸೇವನೆ ಮಾಡಬೇಡಿ ಎಂದು ಸಲಹೆ ನೀಡಿದ್ದಕ್ಕೆ ನಿವೃತ್ತ ಪೊಲೀಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬಲಮುರಿ ನಿವಾಸಿ ಬೆಳ್ಳಿಯಪ್ಪ (64) ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬೆಳ್ಳಿಯಪ್ಪ ಕಳೆದ ಹಲವು ವರ್ಷಗಳಿಂದ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕೆ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತ್ತೀಚೆಗೆ ಡಾಕ್ಟರ್ ನೀವು ಮಾಂಸಾಹಾರ ಸೇವನೆ ಮಾಡಬಾರದು ಅಂತ ಸಲಹೆ ನೀಡಿದ್ದಾರೆ.

    ವೈದ್ಯರು ಮಾಂಸಾಹಾರವನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದ ಬಳಿಕ ಬೆಳ್ಳಿಯಪ್ಪ ಮಾನಸಿಕ ಖಿನ್ನತೆಗೆ ಜಾರಿದ್ದರು. ಸೋಮವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮರುನಾಮಕರಣ ಬೆನ್ನಲ್ಲೇ ಅಯೋಧ್ಯಾದಲ್ಲಿ ಮದ್ಯ, ಮಾಂಸಹಾರ ನಿಷೇಧಕ್ಕೆ ಯೋಗಿ ಸರ್ಕಾರ ಚಿಂತನೆ

    ಮರುನಾಮಕರಣ ಬೆನ್ನಲ್ಲೇ ಅಯೋಧ್ಯಾದಲ್ಲಿ ಮದ್ಯ, ಮಾಂಸಹಾರ ನಿಷೇಧಕ್ಕೆ ಯೋಗಿ ಸರ್ಕಾರ ಚಿಂತನೆ

    ಲಕ್ನೋ: ಫೈಜಾಬಾದ್ ನಗರವನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಮದ್ಯ ಹಾಗೂ ಮಾಂಸಹಾರ ಮಾರಾಟವನ್ನು ನಿಷೇಧ ಮಾಡಲು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಸ್ಥಳೀಯ ಶ್ರೀಗಳಿಂದ ಜಿಲ್ಲೆಯಲ್ಲಿ ಮದ್ಯ ಹಾಗೂ ಮಾಂಸಹಾರ ನಿಷೇಧ ಮಾಡುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸರ್ಕಾರದ ಈ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉತ್ತರ ಪ್ರದೇಶ ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ, ಸ್ಥಳೀಯ ಶ್ರೀಗಳು ಸರ್ಕಾರ ಮುಂದಿಟ್ಟಿರುವ ಬೇಡಿಕೆ ಬಗ್ಗೆ ನಮಗೆ ಅರಿವಿದೆ. ಸರ್ಕಾರ ಕಾನೂನಾತ್ಮಕವಾಗಿ ಮದ್ಯ ಹಾಗೂ ಮಾಂಸಮಾರಾಟ ನಿಷೇಧ ಮಾಡಲಿದೆ ಎಂದು ತಿಳಿಸಿದ್ದಾರೆ.

    ಅಯೋಧ್ಯಾ ನಗರ ಧಾರ್ಮಿಕ ಕೇಂದ್ರವಾಗಿದ್ದು, ಇಂತಹ ನಗರದಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ಮಾಡಬಾರದು. ಇವುಗಳನ್ನು ನಿಷೇಧ ಮಾಡುವುದು ನಗರದ ಜನತೆಗೆ ಆರೋಗ್ಯಕರ ಜೀವನ ಶೈಲಿ ಮಾಡಲು ಕಾರಣವಾಗಲಿದೆ. ಇದರಿಂದ ನಗರದ ಸ್ವಚ್ಛತೆ ಹೆಚ್ಚಾಗಲಿದ್ದು, ಮಾಲಿನ್ಯ ಕಡಿಮೆ ಮಾಡಿ ಶುದ್ಧತೆಯ ಭಾವನೆ ಮೂಡಿಸುತ್ತದೆ ಎಂದು ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.

    ಸತ್ಯೇಂದ್ರ ದಾಸ್ ಅವರ ಹೇಳಿಕೆಗೆ ಹಲವು ಶ್ರೀಗಳು ತಮ್ಮ ಸಹಮತಿಯನ್ನು ವ್ಯಕ್ತಪಡಿಸಿದ್ದು, ಇಡೀ ಜಿಲ್ಲೆಗೆ ಅನ್ವಯ ಆಗುವಂತೆ ಇದನ್ನು ನಿಷೇಧ ಮಾಡಬೇಕು ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಾಬ್ರಿ ಮಸೀದಿ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಮೊಹಮ್ಮದ್ ಇಕ್ಭಾಲ್ ಅನ್ಸಾರಿ ಅವರು ಈ ಕುರಿತು ರಾಜ್ಯ ಸರ್ಕಾರವೇ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಆಯೋಧ್ಯಾನಗರದಲ್ಲಿ ಮದ್ಯ ಮತ್ತು ಮಾಂಸಹಾರ ಮಾರಾಟ ನಿಷೇಧ ಕ್ರಮದ ಕುರಿತು ಸಾರ್ವಜನಿಕರ ವಲಯದಿಂದ ಮಿಶ್ರಾ ಪ್ರತಿಕ್ರಿಯೆ ಕೇಳಿಬಂದಿದ್ದು, ಎರಡು ಉದ್ಯಮಗಳಲ್ಲಿ ತೊಡಗಿರುವವರು ಸರ್ಕಾರ ಚಿಂತನೆ ತಪ್ಪು. ಈಗಾಗಲೇ ನಗರದಲ್ಲಿ 200 ರಿಂದ 250 ಮಾಂಸ ಮಾರಾಟ ಮಳಿಗೆಗಳಿದ್ದು, ಕೇವಲ ಹೆಸರು ಬದಲಿಸಿದ ಮಾತ್ರಕ್ಕೆ ಇಂತಹ ನಿರ್ಧಾರ ಮಾಡುವುದು ಉತ್ತಮವಲ್ಲ. ಇದರಿಂದ ನಮ್ಮಂತಹ ಕುಟುಂಬಗಳು ಆದಾಯವನ್ನು ಕಳೆದುಕೊಳ್ಳಲಿದೆ. ಸರ್ಕಾರ ಈ ನಿರ್ಧಾರ ಕೈಗೊಂಡರೆ ನಮಗೇ ಸೂಕ್ತ ಉದ್ಯೋಗ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿಡಿಯೋ: ಆನಂದ್ ಗುರೂಜಿ ನಿವಾಸದ ಮೇಲೆ ಮಾಂಸದ ತುಂಡು, ಬಿಯರ್ ಬಾಟಲ್ ಎಸೆದ ಕಿಡಿಗೇಡಿಗಳು!

    ವಿಡಿಯೋ: ಆನಂದ್ ಗುರೂಜಿ ನಿವಾಸದ ಮೇಲೆ ಮಾಂಸದ ತುಂಡು, ಬಿಯರ್ ಬಾಟಲ್ ಎಸೆದ ಕಿಡಿಗೇಡಿಗಳು!

    ಬೆಂಗಳೂರು: ಮಹರ್ಷಿ ಆನಂದ್ ಗುರೂಜಿ ಮನೆ ಮೇಲೆ ದುಷ್ಕರ್ಮಿಗಳು ಬಿಯರ್ ಬಾಟಲಿ ಮತ್ತು ಮಾಂಸದ ತುಂಡನ್ನು ಎಸೆದಿರುವ ಘಟನೆ ನಡೆದಿದೆ.

    ಬನಶಂಕರಿ ಮೂರನೇ ಹಂತದ ಕಾಮಾಕ್ಯ ಬಡವಾಣೆಯಲ್ಲಿರುವ ಆನಂದ್ ಗುರುಜಿ ನಿವಾಸದ ಮೇಲೆ ದುಷ್ಕರ್ಮಿಗಳು ಬಿಯರ್ ಬಾಟಲಿ ಮತ್ತು ಮಾಂಸದ ತುಂಡನ್ನು ಎಸೆದಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯ ಮೇಲೆ ಮತ್ತು ಬಾಗಲಿಗೆ ಬಿಯರ್ ಬಾಟಲಿ ಒಡೆದು ಮಾಂಸ ಎಸೆದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯ ಆನಂದ್ ಗುರುಜಿ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಗೋವಿನ ಬಗ್ಗೆ ಆನಂದ್ ಗುರೂಜಿಯ ವಿಶೇಷ ಕಾರ್ಯಕ್ರಮ ನಾಳೆ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಈ ರೀತಿಯ ಕೃತ್ಯವೆಸಗಿರಬಹುದು ಅಂತ ಆನಂದ್ ಗುರೂಜಿ ಶಂಕೆ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=gwXEy-dY6SA&feature=youtu.be