ಅಲಹಾಬಾದ್: ಮಥುರಾ ನಗರದಲ್ಲಿ ಮಾಂಸ ಮತ್ತು ಮದ್ಯ ಸಾಗಣಿಕೆ ವೇಳೆ ಸಾರ್ವಜನಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಮಾಂಸ ಮದ್ಯ ನಿಷೇಧದ ಹೆಸರಿನಲ್ಲಿ ಪೊಲೀಸರು ನೀಡುತ್ತಿರುವ ಕಿರುಕುಳ ತಡೆಯುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಶುತೋಷ್ ಶ್ರೀವಾಸ್ತವ ಮತ್ತು ನ್ಯಾ.ಪ್ರಿಟಿಂಕರ್ ದಿವಾಕರ್ ಅವರ ಪೀಠವು ಎಲ್ಲರ ಬಗ್ಗೆಯೂ ಸಹಿಷ್ಣುತೆ ಇರಬೇಕು ಎಂದು ಅರ್ಜಿದಾರರು ವಿರುದ್ಧ ಚಾಟಿ ಬೀಸಿ, ಅರ್ಜಿ ವಜಾ ಮಾಡಿತು.
ಮಥುರಾದಲ್ಲಿ ಮಾಂಸ ಮತ್ತು ಮೊಟ್ಟೆಗಳ ಮೇಲೆ ಸಂಪೂರ್ಣ ನಿಷೇಧವಿಲ್ಲ, ನಿರ್ಬಂಧವು ಮಥುರಾದ 22 ವಾರ್ಡ್‍ಗಳಿಗೆ ಮಾತ್ರ ಸಂಬಂಧಿಸಿದೆ, ಇತರೆ ವಾರ್ಡ್‍ಗಳಿಗೆ ಇದು ಅನ್ವಯವಾಗುವುದಿಲ್ಲ, ಭಾರತವು ದೊಡ್ಡ ವೈವಿಧ್ಯತೆಯ ದೇಶವಾಗಿದೆ ಎಲ್ಲಾ ಸಮುದಾಯಗಳು ಮತ್ತು ಪಂಗಡಗಳು ಸಹಿಷ್ಣುತೆ ಹೊಂದಬೇಕು. ಇದನ್ನೂ ಓದಿ: ಕುಪ್ವಾರದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ವಶ
ಭಾರತವು ಶ್ರೇಷ್ಠ ವೈವಿಧ್ಯತೆಯ ದೇಶವಾಗಿದೆ. ಮಥುರಾ, ವೃಂದಾವನ ಪವಿತ್ರ ತೀರ್ಥಯಾತ್ರಾ ಸ್ಥಳ ಘೋಷಿಸಬಹುದು. ಘೋಷಿಸುವಲ್ಲಿ ಯಾವುದೇ ಸಾಂವಿಧಾನಿಕ ನಿಬಂಧನೆಯನ್ನು ಉಲ್ಲಂಘಿಸಲಾಗಿಲ್ಲ, ಪವಿತ್ರ ಸ್ಥಳದಲ್ಲಿ ನಿರ್ಬಂಧ ಹೇರುವುದು ಕಾನೂನು ಬಾಹಿರ ಅಲ್ಲ ಎಂದು ಹೇಳಿರುವ ಹೈಕೋರ್ಟ್ ಸರ್ಕಾರದ ಕ್ರಮ ಎತ್ತಿಹಿಡಿಯಿತು. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ
22 ವಾರ್ಡ್‍ಗಳಲ್ಲಿ ನಿರ್ಬಂಧಗಳ ಕಾರಣದಿಂದಾಗಿ, ಅಧಿಸೂಚಿತ ವಾರ್ಡ್‍ಗಳಲ್ಲಿ ವಾಸಿಸುವ ಮಾಂಸಾಹಾರಿಗಳು ತಮ್ಮ ಊಟದ ಆಯ್ಕೆಯಿಂದ ಮತ್ತು ಅವರ ಜೀವನೋಪಾಯದಿಂದ ವಂಚಿತರಾಗುತ್ತಿದ್ದಾರೆ, ನಿಬರ್ಂಧವು ಸಂವಿಧಾನದ 19 (1) (ಜಿ) ಮತ್ತು 21 ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದ ಮಂಡಿಸಿದ್ದರು.
ಶ್ರೀರಾಮನವಮಿಯಂದು ಪ್ರಾಣಿ, ವಧೆ ಮತ್ತು ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಕಸಾಯಿಖಾನೆಯಲ್ಲೂ ಪಾಣಿವಧೆ, ಮಾರಾಟಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಈ ನಿಯಮಗಳ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಜಂಟಿ ನಿರ್ದೇಶಕ ಪಶುಪಾಲನಾ ವಿಭಾಗದಿಂದ ಆದೇಶ ಹೊರಡಿಸಲಾಗಿದೆ.
ಮೈಸೂರು: ಧರ್ಮದ ಮುಖವಾಡದಲ್ಲಿ ಅಧರ್ಮ ಕುಣಿದು ಕುಪ್ಪಳಿಸುತ್ತಿದೆ. ಜನ ಸಮುದಾಯದ ವಿವೇಕ ಕಡಿಮೆಯಾಗುತ್ತಿದೆ. ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬಂತು ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹಲಾಲ್ ವಿವಾದದ ಕುರಿತು ಪ್ರಶ್ನಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಾಹಿತಿ, ಕಾನೂನು ಹಾಗೂ ಸುವ್ಯವಸ್ಥೆ ಇದೆ ಎಂದಾದರೆ ಸರ್ಕಾರ ಇಂತಹ ವಿಚಾರವಾಗಿ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ದೇಶದ ಮೊದಲ ಹಸಿರು ಸಂಚಾರಿ ಪಥ ಕಾಮಗಾರಿ: ಜಗದೀಶ್ ಶೆಟ್ಟರ್
ಸರ್ಕಾರ ಜನ ಸಮುದಾಯವನ್ನು ಒಡೆದು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ವಿರೋಧ ಪಕ್ಷಗಳು ಇದನ್ನೆಲ್ಲಾ ನೋಡಿಕೊಂಡು ಮಂಕಾಗಿ ಕೂತಿದೆ. ಮಾಂಸವನ್ನು ಹಾಗೆ ಕತ್ತರಿಸಬೇಕು ಹೀಗೆ ಕತ್ತರಿಸಬೇಕು ಎಂದು ಹೇಳಲು ಅವರು ಯಾರು ಎಂದು ಮಾಂಸ ತಿನ್ನುವವರೇ ಪ್ರಶ್ನಿಸಿದ್ದಾರೆ. ಮಾಂಸವನ್ನು ಕತ್ತರಿಸುವ ರೀತಿಯಲ್ಲೂ ಮಾನವೀಯತೆ ಇದೆ ಎನ್ನುತ್ತಾರೆ. ಪ್ರಾಣಿ ವಧೆ ಮಾಡಿ ತಿನ್ನುವುದರಲ್ಲಿ ಮಾನವೀಯತೆ ಎಲ್ಲಿಂದ ಬರುತ್ತೆ? ಎಂದು ದೇಮ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಚ್ಚೇ ದಿನ್ ಕೊಡ್ತೀವಿ ಎಂದ ಕೇಂದ್ರ ನರಕ ದಿನ ತೋರಿಸುತ್ತಿದೆ: ಡಿಕೆಶಿ
ಬೆಂಗಳೂರು: ಯುಗಾದಿ ಹಬ್ಬದ ಹೊಸ ತೊಡಕಿನ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಾಂಸ ಮಾರಾಟ ಜೋರಾಗಿದೆ. ಮಾಂಸದ ಮಳಿಗೆಗಳಲ್ಲಿ ಜನರ ದಂಡೇ ನೆರೆದಿದೆ. ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿವಾದದ ಮಧ್ಯೆಯೇ ಈ ಬಾರಿ ಮಾಂಸ ಮಾರಾಟ ಭರ್ಜರಿಯಾಗಿ ಸಾಗಿದೆ.
ಬೆಂಗಳೂರು, ಮೈಸೂರು, ತುಮಕೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಧ್ಯರಾತ್ರಿಯಿಂದಲೇ ಮಾಂಸ ಮಾರಾಟ ಅಂಗಡಿಗಳಲ್ಲಿ ಸಿದ್ಧತೆ ನಡೆದಿತ್ತು. ಬೆಳಗ್ಗೆ ಮಾಂಸದಂಗಡಿಗಳತ್ತ ಜನರ ದಂಡು ಬರಲಾರಂಭಿಸಿತು. ಸರತಿ ಸಾಲಿನಲ್ಲಿ ನಿಂತು ಮಾಂಸ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು. ಇದನ್ನೂ ಓದಿ: ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ: ಗುಜರಾತ್ ಸಿಎಂ ಸಮರ್ಥನೆ
ಬೆಂಗಳೂರಿನ ಯಶವಂತ ಮಾರುಕಟ್ಟೆ, ಮೈಸೂರಿನ ಪಾಪಣ್ಣ ಮಟನ್ ಸ್ಟಾಲ್, ಕೆ.ಜಿ.ಕೊಪ್ಪಲಿನಲ್ಲಿ ಗುಡ್ಡೆ ಮಾಂಸ ಖರೀದಿ, ತುಮಕೂರಿನ ಹಿಂದೂ ಮೀಟ್ ಮಾರ್ಟ್ ಸೇರಿದಂತೆ ವಿವಿಧ ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಮಾಂಸ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಕೆಲ ಮಳಿಗೆಗಳಲ್ಲಿ ಹಲಾಲ್ ಕಟ್, ಜಟ್ಕಾ ಕಟ್ ಎಂಬ ಬೋರ್ಡ್‍ಗಳನ್ನೂ ಹಾಕಿದ್ದು, ಜಟ್ಕಾಕಟ್‍ಗೆ ಬೇಡಿಕೆ ಹೆಚ್ಚಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ನಿರಾಶೆಗೊಂಡಿದ್ದ ವ್ಯಾಪಾರಿಗಳ ಮೊಗದಲ್ಲೂ ಹರುಷ ತುಂಬಿದೆ. ಬರುವ ಗ್ರಾಹಕರಿಗೆ ಸಂತಸದಿಂದಲೇ ಮಾಂಸ ನೀಡಿ ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹನುಮ ಹುಟ್ಟಿದ ದಿನ ಗೊತ್ತಾ, ಸುಮ್ನೆ ತಿನ್ಲಾ- ಮಾಂಸಾಹಾರ ಭೋಜನ ಸವಿದ ಸಿದ್ದು
ದಾವಣಗೆರೆಯಲ್ಲಿ ವ್ಯಾಪಾರಿಗಳಿಗೆ ನಿರಾಶೆ
ಯುಗಾದಿ ಹಬ್ಬದಂದು ಚಂದ್ರದರ್ಶನವಾಗದ ಹಿನ್ನಲೆಯಲ್ಲಿ ದಾವಣೆಗೆರೆ ಜಿಲ್ಲೆಯ ಜನರು ಚಿಕನ್, ಮಟನ್ ಖರೀದಿಗೆ ನಿರುತ್ಸಾಹ ತೋರಿದ್ದಾರೆ. ಪ್ರತಿ ವರ್ಷ ಹೊಸ ತೊಡಕಿನ ಸಂದರ್ಭದಲ್ಲಿ ಕಾಲಿಡಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿರುತ್ತಿತ್ತು. ಆದರೆ, ಇಂದು ಭಾನುವಾರವಾದರೂ ಮಾರುಕಟ್ಟೆ ಖಾಲಿ-ಖಾಲಿ ಹೊಡೆಯುತ್ತಿದೆ. ಇದರಿಂದ ಅಲಾಲ್ ಕಟ್, ಜಟ್ಕಾ ಕಟ್ ವಿವಾದ ಇಲ್ಲದಂತಾಗಿದೆ. ಚಂದ್ರದರ್ಶನವಾಗಿದ್ದರೆ ವ್ಯಾಪಾರ ಜಾತ್ರೆಯಂತಿರುತ್ತಿತ್ತು. ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಮಾಂಸ ಖರೀದಿಗೆ ಜನ ಹಿಂದೇಟು ಹಾಕಿದ್ದಾರೆ. ಮುಂದೆ ಎಲ್ಲರೂ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದೇ ರೀತಿ ನಾವು ವ್ಯಾಪಾರ ಮಾಡುತ್ತೇವೆ. ಎಲ್ಲರೂ ಸಾಮರಸ್ಯದಿಂದ ಹಳೇ ಪದ್ದತಿಯಲ್ಲೇ ವ್ಯಾಪಾರ ವಹಿವಾಟು ನಡೆಸುತ್ತೇವೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಸ್ಥರು.
ಬೆಂಗಳೂರು: ರೈತರ ಬದುಕಿನ ಮೇಲೆ ಗದಾಪ್ರಹಾರ ನಡೆಯುತ್ತಿದೆ. ಸಮಾಜದಲ್ಲಿ ಅಶಾಂತಿ ಮೂಡಿಸಲು, ರಾಜಕೀಯದ ಗುರಿ ಇಟ್ಟುಕೊಂಡು ಒಂದು ಧರ್ಮದ ಮೇಲೆ ಪ್ರಯೋಗ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸದಾಶಿವನಗರದ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಕಳೆದ ಕೆಲ ವರ್ಷಗಳಿಂದ ನಾವು ಕೋವಿಡ್‍ನಿಂದ ನರಳಿದ್ದೇವೆ. ಹೊಸ ವರ್ಷಕ್ಕೆ ಕಾಲಿಟ್ಟಿದ್ದು, ಎಲ್ಲರ ಬದುಕು ಆರೋಗ್ಯಕರವಾಗಿ ಉತ್ತಮವಾಗಲಿ. ವ್ಯಾಪಾರ-ವಹಿವಾಟು, ಶಿಕ್ಷಣ, ಉದ್ಯೋಗ, ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಕಳೆದುಕೊಂಡವರೆಲ್ಲರಿಗೂ ಈ ವರ್ಷ ಭಾಗ್ಯ ಮರುಕಳಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಇದನ್ನೂ ಓದಿ: ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ಮಗುವಿನ ನೆರವಿಗೆ ಬಂದ ರೈಲ್ವೆ ಅಧಿಕಾರಿಗಳು
ಕಳೆದ ಒಂದು ವಾರದಿಂದ ರೈತರ ಬದುಕಿನ ಮೇಲೆ ಗದಾಪ್ರಹಾರ ನಡೆಯುತ್ತಿದೆ. ಸಮಾಜದಲ್ಲಿ ಅಶಾಂತಿ ಮೂಡಿಸಲು, ರಾಜಕೀಯದ ಗುರಿ ಇಟ್ಟುಕೊಂಡು ಒಂದು ಧರ್ಮದ ಮೇಲೆ ಪ್ರಯೋಗ ನಡೆಸಲಾಗುತ್ತಿದೆ. ನಿನ್ನೆ ಪಶುಸಂಗೋಪನಾ ಇಲಾಖೆಯಿಂದ ಆದೇಶ ಹೊರಡಿಸಿ, ಪೊಲೀಸ್ ಹಾಗೂ ಇತರ ಅಧಿಕಾರಿಗಳು ಸೇರಿ ಕೋಳಿ, ಕುರಿ ವ್ಯಾಪಾರ ನಡೆಸುತ್ತಿರುವವರ ಮೇಲೆ ನಿಯಂತ್ರಣ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರು ಹಾಗೂ ಇತರ ಎಲ್ಲಾ ಕಡೆಗಳಲ್ಲಿ ಇನ್ನು ಮುಂದೆ ಮಾಂಸದ ವ್ಯಾಪಾರ ಮಾಡುವವರು ಪ್ರಾಣಿ ವಧೆ ಮಾಡುವ ಮುನ್ನ ಸ್ಟನ್ನಿಂಗ್ (ಪ್ರಜ್ಞೆ ತಪ್ಪಿಸುವ) ಮಾಡಬೇಕು. ಇನ್ನು ಮುಂದೆ ಎಲ್ಲ ವ್ಯಾಪಾರಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ವ್ಯವಸ್ಥೆ ಇದ್ದರಷ್ಟೇ ಇನ್ನು ಮುಂದೆ ಪರವಾನಗಿ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಡೀ ರಾಜ್ಯದ ರೈತರು ಕೋಳಿ, ಕುರಿ, ಮೇಕೆಗಳನ್ನು ಸಾಕುತ್ತಾರೆ. ಅದು ಅನೇಕರ ಉಪ ಕಸುಬಾಗಿದೆ. ಮಾಂಸದ ವ್ಯಾಪಾರ ಮಾಡುವವರಿಗೆ ರೈತರು ತಾವು ಸಾಕಿದ ಕೋಳಿ, ಕುರಿಗಳನ್ನು ಮಾರಾಟ ಮಾಡುತ್ತಾರೆ. ಕೆಲವರು ಹಲಾಲ್ ಮಾಡುತ್ತಾರೆ. ಮತ್ತೆ ಕೆಲವರು ಹಲಾಲ್ ಮಾಡುವುದಿಲ್ಲ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದರು. ಇದನ್ನೂ ಓದಿ: RSS, ಬಿಜೆಪಿಯವರಿಗೆ ಯಾರೂ ಹೆದರಬೇಡಿ, ಕಾಂಗ್ರೆಸ್ ನಿಮ್ಮೊಂದಿಗಿದೆ: ಡಿಕೆಶಿ
ಈ ದೇಶದಲ್ಲಿ ಯಾರು ಹೇಗೆ ಬದುಕಬೇಕು, ಯಾರು ಏನನ್ನು ತಿನ್ನಬೇಕು ಎಂಬುದು ಸಾವಿರಾರು ವರ್ಷಗಳಿಂದ ಪರಂಪರೆಯಾಗಿ ನಡೆದುಕೊಂಡು ಬಂದಿದೆ. ಅವರೆಲ್ಲ ಅನಾದಿ ಕಾಲದಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ವಸ್ತುಗಳ ವಿನಿಮಯ ವ್ಯಾಪಾರ ಪದ್ಧತಿ ಕೂಡ ಇತ್ತು ಎಂದು ತಿಳಿಸಿದರು.
ರಾಜ್ಯದ ವಿವಿಧ ಕಡೆಗಳಿಂದ ರೈತರು ಕರೆ ಮಾಡಿ, ಸರ್ಕಾರದ ಈ ಆದೇಶದಿಂದ ನಮ್ಮ ಕುರಿ, ಕೋಳಿಗಳನ್ನು ಕೊಳ್ಳುವವರಿಲ್ಲದಂತಾಗಿದೆ. ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಒಂದು ಪಕ್ಷದ ಅಧ್ಯಕ್ಷನಾಗಿ ನೀವು ಯಾಕೆ ಸುಮ್ಮನೆ ಕೂತಿದ್ದೀರಿ ಅಂತ ಕೇಳುತ್ತಿದ್ದಾರೆ ಎಂದು ಹೇಳಿದರು.
ಹಳ್ಳಿಗಳಲ್ಲಿ ಪಶು ಸಂಗೋಪನೆ ಮಾಡಿ ಎಂದು ಉತ್ತೇಜನ ನೀಡಿದವರು ಯಾರು? ಆಂಧ್ರ ಪ್ರದೇಶದ ಗಡಿ ಪ್ರದೇಶದಲ್ಲಿ ಹೆಚ್ಚಾಗಿ ಇದನ್ನೇ ಅವಲಂಬಿಸಿದ್ದಾರೆ. ಈ ಕೋಳಿ, ಕುರಿಗಳು ಸರಿಯಾದ ಸಮಯಕ್ಕೆ ಮಾರಾಟವಾಗದಿದ್ದರೆ, ಅವುಗಳಿಗೆ ನಿತ್ಯ ಹಾಕುವ ಮೇವು, ಸಾಕಣೆ ಮಾಡುವವನಿಗೆ ಹೊರೆಯಾಗುತ್ತದೆ ಎಂದು ನುಡಿದರು.
ಬಟ್ಟೆ ಹೊಲಿಯುವವನು ಬಟ್ಟೆ ಹೊಲಿಯುತ್ತಾನೆ, ಮೊಟ್ಟೆ ಮಾರುವವನು ಮೊಟ್ಟೆ ಮಾರುತ್ತಾನೆ. ಹೀಗೆ ಒಬ್ಬೊಬ್ಬರು ಒಂದೊಂದು ವ್ಯಾಪಾರ ಮಾಡುತ್ತಿದ್ದಾರೆ. ಒಬ್ಬರು ತಮ್ಮ ವ್ಯಾಪಾರ ಬಿಟ್ಟು ಬೇರೆಯದನ್ನು ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಮ್ಮ ರೈತರು, ವರ್ತಕರು, ಅವರು ಯಾವುದೇ ಸಮುದಾಯದವರಿರಲಿ, ತಮ್ಮ ಬದುಕನ್ನು ಯಾವ ರೀತಿ ನಡೆಸಿಕೊಂಡು ಹೋಗುತ್ತಿದ್ದಾರೋ ಅದರಂತೆ ಸಾಗಲು ಸರ್ಕಾರ ಅವಕಾಶ ನೀಡಬೇಕು. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಇದನ್ನು ಹಾಳು ಮಾಡುವುದು ಬೇಡ. ಈ ಹೊಸ ತೊಡುಕು ಆಚರಣೆಯನ್ನು ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಮಾತನಾಡಿದರು.
ಹಲಾಲ್ ಕಟ್‍ಗೆ ಅವಕಾಶ ನೀಡಬಾರದು ಎಂದು ಕೆಲವು ಸಂಘಟನೆಗಳು ಆಗ್ರಹಿಸುತ್ತಿವೆ ಎಂಬ ಪ್ರಶ್ನೆಗೆ, ‘ಕೋಳಿ ಮತ್ತು ಕುರಿಗಳಿಗೆ ಪ್ರಜ್ಞೆ ತಪ್ಪಿಸಬೇಕಂತೆ. ಹೇಗೆ ತಪ್ಪಿಸಬೇಕು? ತಲೆಗೆ ಹೊಡೆದರೆ ಅವು ಸಾಯುವುದಿಲ್ಲವೇ? ಅದು ಹಿಂಸೆ ಅಲ್ಲವೇ? ಮಾಂಸ ವ್ಯಾಪಾರದಲ್ಲೂ ಅನೇಕ ಉಪ ವ್ಯಾಪಾರಗಳಿವೆ. ಇವು ಸಾಮಾಜಿಕವಾಗಿ ಬೆಸೆದುಕೊಂಡಿರುವ ವ್ಯಾಪಾರಗಳು. ನಾನು ಈ ವಿಚಾರದಲ್ಲಿ ಧ್ವನಿ ಎತ್ತದಿದ್ದರೆ ನನ್ನ ಸ್ಥಾನ ಹಾಗೂ ಜವಾಬ್ದಾರಿಗೆ ದ್ರೋಹ ಬಗೆದಂತಾಗುತ್ತದೆ. ಮುಖ್ಯಮಂತ್ರಿಗಳು ಸಂಜೆ ಒಳಗಾಗಿ ಉತ್ತರ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.
ಬೆಂಗಳೂರು: ಕರಾವಳಿಯಲ್ಲಿ ಹಿಜಬ್‌ನಿಂದ ಆರಂಭಗೊಂಡ ವಿವಾದ ಈಗ ಎಲ್ಲೆಲ್ಲೋ ಹೋಗುತ್ತಿದೆ. ದೇವಸ್ಥಾನಗಳಲ್ಲಿ ಹಿಂದೂಯೇತರರಿಗೆ ನಿರ್ಬಂಧ ಅಭಿಯಾನ ಹೊಸ ರೂಪ ಪಡೆದುಕೊಂಡಿದೆ. ಯುಗಾದಿ ಹೊಸತೊಡಕು ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ, ಹಿಂದೂಗಳ ಬಳಿಯೇ ಮಾಂಸ ಖರೀದಿ ಮಾಡುವಂತೆ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಅಭಿಯಾನವೇ ನಡೆದಿದೆ.
ಇದಿಗ ಹಲಾಲ್ ತ್ಯಜಿಸಿ, ಜಟ್ಕಾ ಬಾಡು ಖರೀದಿಸಿ ಎಂದು ಹಿಂದೂ ಸಮುದಾಯದವರು ಕರೆ ನೀಡುತ್ತಿದ್ದಾರೆ. ಇದಕ್ಕೆ ಬಿಜೆಪಿಯೂ ಬಹಿರಂಗ ಬೆಂಬಲ ನೀಡಿದೆ. ಹಲಾಲ್ ಅನ್ನು ಆರ್ಥಿಕ ಜಿಹಾದ್ ಎಂದು ಸಿಟಿ ರವಿ ಆರೋಪಿಸಿದ್ದಾರೆ. ಹಲಾಲ್ ಮಾಂಸವನ್ನು ಉಪಯೋಗಿಸಬಾರದು ಅಂದರೆ ತಪ್ಪೇನು? ಮುಸಲ್ಮಾನರು ಹಿಂದೂಗಳ ಬಳಿ ಮಾಂಸ ಖರೀದಿ ಮಾಡಲ್ಲ. ಹಿಂದೂಗಳೇಕೆ ಮುಸ್ಲಿಮರ ಬಳಿ ಮಾಂಸ ಖರೀದಿ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಯಾವ ಅಂಶ ಪ್ರಚೋದನೆ ಕೊಡ್ತಿದೆ ನೀವೇ ಹೇಳಿ ಎಂದು ಸಿಟಿ ರವಿ ಕೇಳಿದ್ದಾರೆ. ಇದನ್ನೂ ಓದಿ: ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಕಲ್ಲಡ್ಕ ಭಟ್‌ಗೆ ಆಹ್ವಾನ – ಎಸ್‌ಎಫ್‌ಐ ವಿರೋಧ
ಹಲಾಲ್ ಮಾಂಸದ ವಿಚಾರ ವಿವಾದ ಆಗಿರೋದು ಹೋಟೆಲ್ ಮಾಲೀಕರಿಗೆ ಹೊಸ ಪೀಕಲಾಟ ತಂದಿಟ್ಟಿದೆ. ಬೆಂಗಳೂರಿನ ಜಿಎಫ್‌ಸಿ ಬಿರಿಯಾನಿ ಮಳಿಗೆಯ ಬೋರ್ಡ್‌ನಲ್ಲಿ ಉಲ್ಲೇಖಿಸಿದ್ದ ಹಲಾಲ್ ಎಂಬ ಪದ ಮುಚ್ಚಲಾಗಿದೆ. ಹಲಾಲ್ ಬಹಿಷ್ಕಾರ ಅಭಿಯಾನಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ಆಯ್ತು ಹಲಾಲ್ ತ್ಯಜಿಸುತ್ತೇವೆ. ಆರ್‌ಎಸ್‌ಎಸ್‌ನವರು ಪ್ರತಿ ಹಳ್ಳಿಯಲ್ಲೂ ಮಾಂಸದಂಗಡಿ ತೆರೆಯಲಿ. ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್ ನೀಡಲಿ ಎಂಬ ಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದೀಗ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ಎಂದರೇನು ಎಂಬ ಪ್ರಶ್ನೆ ಎದ್ದಿದೆ. ಹಲಾಲ್ ಕಟ್ ಹಾಗೂ ಜಟ್ಕಾ ಕಟ್‌ಗೆ ಇರುವ ವ್ಯತ್ಯಾಸ ಇಲ್ಲಿದೆ.
ಹಲಾಲ್ ಕಟ್:
ಹಲಾಲ್ ಎಂಬುದು ಅರೇಬಿಕ್ ಪದ. ಇದರ ಅರ್ಥ ಅನುಮತಿ ಇದೆ ಎಂಬುದು. ಹಲಾಲ್ ಕಟ್ ಪ್ರಕಾರ ಪ್ರಾಣಿಯ ಗಂಟಲು ಸೀಳಿ ರಕ್ತ ಬರಿದಾಗಿಸಿ ಕೊಲ್ಲಲಾಗುತ್ತದೆ. ಪ್ರಾಣಿ ಮೊದಲೇ ಸತ್ತಿದ್ದರೆ ಅಥವಾ ಅನಾರೋಗ್ಯವಿದ್ದರೆ ಇದನ್ನು ಪರಿಗಣಿಸಲಾಗುವುದಿಲ್ಲ.
ಹಲಾಲ್ ಕಟ್ ಮಾಡುವವರು ಇಸ್ಲಾಂ ಧರ್ಮಕ್ಕೆ ಸೇರಿದವರಾಗಬೇಕು. ಪ್ರಾಣಿಯನ್ನು ಕೊಲ್ಲುವಾಗ ಮುಸಲ್ಮಾನರ ಪವಿತ್ರ ಸ್ಥಳ ಮೆಕ್ಕಾದ ದಿಕ್ಕಿಗೆ ಮುಖ ಮಾಡಿ ಪ್ರಾರ್ಥನೆ ಮಾಡಬೇಕು. ಮಾಂಸ ತಿನ್ನುವವರೂ ಪ್ರಾಣಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಬೇಕು.
ಜಟ್ಕಾ ಕಟ್:
ಜಟ್ಕಾ ಕಟ್ ಎಂದರೆ ಬಲಿ ಅಥವಾ ದೈವ ಬಲಿ ಎಂದರ್ಥ. ಈ ರೀತಿಯ ಪ್ರಾಣಿ ಬಲಿ ಬಗ್ಗೆ ಸನಾತನ ಹಿಂದೂ ಪದ್ಧತಿಯಲ್ಲಿ ಉಲ್ಲೇಖವಿದೆ. ಜಟ್ಕಾ ಕಟ್ ಪ್ರಕಾರ ಒಂದೇ ಏಟಿಗೆ ಪ್ರಾಣಿಯ ರುಂಡ ಹಾಗೂ ಮುಂಡವನ್ನು ಬೇರ್ಪಡಿಸಲಾಗುತ್ತದೆ. ಈ ರೀತಿಯಲ್ಲಿ ಪ್ರಾಣಿಯ ಜೀವ ಒಂದೇ ಬಾರಿಗೆ ಹೋಗುತ್ತದೆ.
ಇವೇ ಹಲಾಲ್ ಕಟ್ ಹಾಗೂ ಜಟ್ಕಾ ಕಟ್‌ಗೂ ಇರುವ ವ್ಯತ್ಯಾಸ. ಮಾಂಸದ ಖರೀದಿಯಲ್ಲೂ ಧರ್ಮದ ವೈವಿಧ್ಯತೆ ಇರುವ ಕಾರಣಕ್ಕೆ ಇದೀಗ ಮತ್ತೆ ಹಿಂದೂ-ಮುಸ್ಲಿಂ ವಿವಾದ ಭುಗಿಲೇಳುತ್ತಿದೆ.
ಹಿಜಬ್ ಗಲಾಟೆಯ ಬಳಿಕ ಮುಸ್ಲಿಂ ವರ್ತಕರಿಗೆ ಹಿಂದೂಗಳ ಜಾತ್ರೆಯಲ್ಲಿ ಬಹಿಷ್ಕಾರ ಹಾಕಲಾಯಿತು. ಬಹಿಷ್ಕಾರದ ಮುಂದುವರಿದ ಭಾಗವಾಗಿ ಈಗ ಹಲಾಲ್ ಮಾಂಸಗಳನ್ನು ಬಹಿಷ್ಕರಿಸುವಂತೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.
ಯುಗಾದಿ ಮರು ದಿವಸ ಕರ್ನಾಟಕದ ಕೆಲ ಭಾಗಗಳಲ್ಲಿ ಆಚರಿಸುವ ಹೊಸತೊಡಕು ವೇಳೆ ಮಾಂಸ ತಿನ್ನಲಾಗುತ್ತದೆ. ಈ ವೇಳೆ ಹಲಾಲ್ ಮಾಂಸವನ್ನು ಸೇವಿಸದಂತೆ ಕರೆ ನೀಡಿದೆ. ಮುಸ್ಲಿಮ್ ದೇವರಿಗೆ ಅರ್ಪಣೆ ಮಾಡಿದ ಬಳಿಕ ಹಿಂದೂ ದೇವರಿಗೆ ಅರ್ಪಣೆ ಮಾಡುವುದು ಸರಿಯಲ್ಲ ಎಂದು ಹಿಂಜಾವೇ ಹೇಳಿದೆ. ಹೀಗಾಗಿ ಇಲ್ಲಿ ಹಲಾಲ್ ಮಾಂಸದ ಬಗ್ಗೆ ಕಿರು ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ
ಹಲವು ಮಾಂಸದಂಗಡಿಗಳು ಹಾಗೂ ಮುಸ್ಲಿಂ ಅಂಗಡಿಗಳ ಬ್ಯಾನರ್‍ಗಳಲ್ಲಿ ಹಲಾಲ್ ಪದ ಇರುತ್ತದೆ. ಮಾಂಸಗಳ ಗುಣಮಟ್ಟ ತೋರಿಸಲು ಹಲವು ಕಂಪನಿಗಳು ಹಲಾಲ್ ಕಟ್ ಪದವನ್ನು ಉಪಯೋಗಿಸುತ್ತವೆ. ಆದರೆ ಚೀನಾ ದೇಶದಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಹಲಾಲ್ ಮಾಂಸ, ಹಲಾಲ್ ಕಟ್ ಅಂದರೇನು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಇದನ್ನೂ ಓದಿ: ಎಚ್‍ಡಿಡಿ ಪತ್ನಿಗೆ ಐಟಿ ನೋಟಿಸ್
ಹಲಾಲ್ ಮಾಂಸ ಯಾವುದು?
ಇಸ್ಲಾಮ್ ಧರ್ಮಬದ್ಧವಾಗಿರುವ ಆಹಾರ ಕ್ರಮವೇ ಹಲಾಲ್. ಇಸ್ಲಾಮ್ ಧರ್ಮದಲ್ಲಿ ಪರಿಶುದ್ಧ ಆಹಾರವೆಲ್ಲವೂ ಹಲಾಲ್ ಎಂದು ಪರಿಗಣಿಸಲಾಗಿದೆ. ಪರಿಶುದ್ಧತೆ ಇಲ್ಲದ ಆಹಾರವು ಇಸ್ಲಾಮ್‍ನಲ್ಲಿ ನಿಷಿದ್ಧ. ಮಾಂಸದ ವಿಚಾರಕ್ಕೆ ಬಂದರೆ ಹಂದಿ, ಮನುಷ್ಯ, ಹುಲಿ, ಸಿಂಹ ಇತ್ಯಾದಿ ಮಾಂಸಗಳು ನಿಷಿದ್ಧವಾಗಿವೆ. ಕಾನೂನುಬದ್ಧವೆನಿಸಿದ ಕುರಿ, ಕೋಳಿ, ಒಂಟೆ, ದನ, ಮೀನು ಇತ್ಯಾದಿ ಪ್ರಾಣಿಗಳ ಮಾಂಸವು ಹಲಾಲ್ ಎನಿಸುತ್ತವೆ. ವಧಿಸುವ ಮೊದಲೇ ಸತ್ತಿದ್ದ ಪ್ರಾಣಿಗಳು ಹಾಗೂ ವಧಿಸುವ ವೇಳೆ ರೋಗ, ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳನ್ನು ಮುಸ್ಲಿಮರು ತಿನ್ನುವಂತಿಲ್ಲ.
ಹಲಾಲ್ ಕಟ್ ಎಂದರೇನು?
ತಿನ್ನುವ ಪ್ರಾಣಿಗಳನ್ನ ಕೊಲ್ಲುವುದಕ್ಕೂ ಇಸ್ಲಾಮ್‍ನಲ್ಲಿ ನಿರ್ದಿಷ್ಟ ಕ್ರಮ ಮತ್ತು ನಿಯಮಗಳಿವೆ. ಒಂದೊಂದು ಪ್ರಾಣಿಯ ವಧೆಗೂ ಪ್ರತ್ಯೇಕ ನಿಯಮವಿರುತ್ತದೆ. ಒಂದು ಸಾಮಾನ್ಯ ನಿಯಮವೆಂದರೆ ವಧಿಸಲ್ಪಟ್ಟ ಪ್ರಾಣಿಯ ದೇಹದಿಂದ ರಕ್ತವೆಲ್ಲವೂ ಹೊರಬರಬೇಕು. ಸೌದಿಯಲ್ಲಿರುವ ಮೆಕ್ಕಾ ಮಸೀದಿಯತ್ತ ಮುಖ ಮಾಡಿ ಪ್ರಾಣಿಯನ್ನು ವಧಿಸಲಾಗುತ್ತದೆ.
ವಧಿಸುವ ವ್ಯಕ್ತಿಯು ಅಲ್ಲಾಹುವಿನ ನಾಮೋಚ್ಛಾರ ಮಾಡುತ್ತಾ ವಧಿಸಬೇಕು. ತಲೆಯನ್ನು ಒಡೆಯದೇ ಗಂಟಲು ಸೀಳಿ ಸಾಯಿಸಬೇಕು ಎಂಬಿತ್ಯಾದಿ ನಿಯಮಗಳು ಕುರಾನ್‍ನಲ್ಲಿ ತಿಳಿಸಲಾಗಿದೆ. ಕೋಳಿ ಅಥವಾ ಕುರಿಯನ್ನು ಕಡಿಯುವ ಮುಂಚೆ ಮುಸ್ಲಿಂ ಧರ್ಮದಲ್ಲಿ ಕುರಾನಿನ ಕೆಲ ಸಾಲುಗಳನ್ನು ಉಚ್ಚರಿಸಿ ಕೊಲ್ಲಲಾಗುತ್ತದೆ.
ಹಿಂದೂ ಸಂಪ್ರದಾಯದಲ್ಲಿ ಪ್ರಾಣಿಗಳನ್ನು ನೇರವಾಗಿಯೇ ವಧಿಸುತ್ತಾರೆ. ಆದರೆ ಮುಸ್ಲಿಂ ಧರ್ಮದಲ್ಲಿ ಕೆಲ ರೀತಿ ರಿವಾಜುಗಳಿವೆ. ಮುಸ್ಲಿಂ ಧರ್ಮಗಳಲ್ಲಿ ಏಡಿಯನ್ನು ಹೆಚ್ಚಾಗಿ ತಿನ್ನಲು ಬಯಸುವುದಿಲ್ಲ. ಏಕೆಂದರೆ ತಲೆ ಇಲ್ಲದ ಪ್ರಾಣಿಗಳನ್ನು ತಿನ್ನುವುದು ಅವರಲ್ಲಿ ಮಹಾ ಪಾಪ ಎಂಬುವ ವಾಡಿಕೆಯಿದೆ. ಮುಸ್ಲಿಂ ಮಾಂಸದಂಗಡಿಗಳಲ್ಲಿ ಪ್ರಾಣಿಯನ್ನು ವಧಿಸುವ ಮೊದಲು ಅದರ ಬಾಯಿಗೆ ನೀರು ಹಾಕುತ್ತಾರೆ. ನಂತರ ಆ ಪ್ರಾಣಿಯ ಕತ್ತನ್ನು ಕತ್ತರಿಸುತ್ತಾರೆ. ಒಂದೊಂದು ಪ್ರಾಣಿಯನ್ನು ಸಾಯಿಸುವ ಕ್ರಮದಲ್ಲಿ ವ್ಯತ್ಯಾಸವಿರುತ್ತದೆ. ಆಯಾ ಪ್ರಾಣಿಗೆ ಅನುಗುಣವಾಗಿ ಈ ನಿಯಮವನ್ನು ಮಾಡಲಾಗಿದೆ.
ಲಕ್ನೋ: ಮಟನ್ ಚೀಲ ಹೊತ್ತೊಯ್ದ ಬೀದಿ ನಾಯಿಯನ್ನು ಕೋಲಿನಿಂದ ಹೊಡೆದು ಕೊಂದು ಹಾಕಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ.
ಜಗದೀಶ್ ಚೌಹಾಣ್ ಅಲಿಯಾಸ್ ಠಾಕೂರ್(40) ಬಂಧಿತ ಆರೋಪಿಯಾಗಿದ್ದಾನೆ. ಈತನ ಮನೆಗೆ ನುಗ್ಗಿದ್ದ ನಾಯಿ ಮೇಕೆ ಮಾಂಸದ ಚೀಲದೊಂದಿಗೆ ಪರಾರಿಯಾಗಿತ್ತು. ಬೀದಿ ನಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ
ವಿಜಯ ನಗರ ಪೊಲೀಸ್ ಠಾಣೆಯ ಪ್ರಭಾರಿ ತಹಜೀಬ್ ಖಾಜಿ ಮಾತನಾಡಿ, ಬೀದಿಯಲ್ಲಿ ತಿರುಗಾಡಿಕೊಂಡಿದ್ದ ನಾಯಿ ಭಾನುವಾರ ರಾತ್ರಿ ಜಗದೀಶ್ ಚೌಹಾಣ್ ಅಲಿಯಾಸ್ ಠಾಕೂರ್ ಮನೆಗೆ ನುಗ್ಗಿ ಕುರಿ ಮಾಂಸದ ಚೀಲವನ್ನು ಬಾಯಿಗೆ ತುರುಕಿಕೊಂಡು ಅಲ್ಲಿಂದ ಪರಾರಿಯಾಗಿತ್ತು. ಇದರಿಂದ ಆಕ್ರೋಶಗೊಂಡ ಜಗದೀಶ್ ಹಿಂಬಾಲಿಸಿಕೊಂಡು ಬಂದು ನಾಯಿ ಸಾಯುವವರೆಗೂ ಕೋಲಿನಿಂದ ನಿರ್ದಯವಾಗಿ ಥಳಿಸಿದ್ದಾನೆ ಎಂದು ಹೇಳಿದರು.
ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಚೌಹಾಣ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಎಸ್‍ಎಚ್‍ಒ ಹೇಳಿದರು. ಪೀಪಲ್ ಫಾರ್ ಅನಿಮಲ್ಸ್ ಇಂದೋರ್ ಘಟಕದ ಅಧ್ಯಕ್ಷ ಪ್ರಿಯಾಂಶು ಜೈನ್ ಅವರ ದೂರಿನ ಮೇರೆಗೆ ದೂರು ದಾಖಲಿಸಲಾಗಿದೆ ಎಂದರು.
ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಸ್ಕ್ರೀನ್ ಮೇಲೆ ಹೇಗೆ ಹೀರೋನೋ ಅದೇ ರೀತಿ ರಿಯಲ್ ಲೈಫ್‍ನಲ್ಲಿಯೂ ಹೀರೋ ಎಂದೇ ಹೇಳಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಯಶ್ ಸೋಶಿಯಲ್ ಮೀಡಿಯಾದಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ನೋಡಿ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.
ಹೌದು, ಯಶ್ ಹಾಗೂ ರಾಧಿಕ ಪಂಡಿತ್ ದುಬೈ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಸುಂದರವಾದ ತಾಣಗಳಿಗೆ ಭೇಟಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಈ ಮಧ್ಯೆ ಯಶ್ ಸಿಂಹಕ್ಕೆ ಕಡ್ಡಿಯಲ್ಲಿರುವ ಮಾಂಸವನ್ನು ತಿನ್ನಿಸುತ್ತಿರುವ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದುಬೈ ಕಾಫಿಯಲ್ಲಿ ಯಶ್ ಭಾವಚಿತ್ರ
ಈ ವೀಡಿಯೋದಲ್ಲಿ ಯಶ್ ಕೊಂಚವು ಭಯವಿಲ್ಲದೇ ಕಡ್ಡಿಯಲ್ಲಿ ಸಿಕ್ಕಿಸಿದ್ದ ಮಾಂಸವನ್ನು ಸಿಂಹಕ್ಕೆ ತಿನ್ನಿಸುತ್ತಿದ್ದರೆ, ಸಿಂಹ ತನ್ನ ಚೂಪಾದ ಹಲ್ಲುಗಳ ಮೂಲಕ ಯಶ್ ತಿನ್ನಿಸುತ್ತಿರುವ ಮಾಂಸವನ್ನು ಕಚ್ಚಿ, ಕಚ್ಚಿ ತಿನ್ನುತ್ತಿರುವುದನ್ನು ಕಾಣಬಹುದಾಗಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿ ಅಭಿಮಾನಿಗಳು ಅಚ್ಚರಿಗೊಳ್ಳುವುದರ ಜೊತೆಗೆ ಯಶ್ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ ಈ ವೀಡಿಯೋ ನೋಡುತ್ತಿದ್ದರೆ, ಯಶ್ ಕೇವಲ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ. ರಿಯಲ್ ಲೈಫ್‍ನಲ್ಲಿ ಕೂಡ ಪವರ್ ಫುಲ್ ಹೀರೋ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ಯಶ್, ರಾಧಿಕಾ ದುಬೈ ಟ್ರಿಪ್
ಇತ್ತೀಚೆಗಷ್ಟೇ ಯಶ್ ದಂಪತಿ ದುಬೈ ಮಾಲ್‍ವೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ವಿಶೇಷ ಖಾದ್ಯಗಳು ಹಾಗೂ ಕಾಫಿ ಸವಿದರು. ಜೊತೆಗೆ ಕಾಫಿ ತುಂಬಿದ್ದ ಕಪ್‍ನಲ್ಲಿ ಯಶ್ ಅವರ ಭಾವಚಿತ್ರ ಇರುವುದನ್ನು ನೋಡಿ ಸಿಕ್ಕಾಪಟ್ಟೆ ಸಂತೋಷ ಪಟ್ಟರು. ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಬೆಂಗಳೂರು: ನಗರದಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಕೂಡ ಕ್ಯಾರೆ ಇಲ್ಲದೆ ಶಿವಾಜಿನಗರದ ಫಿಶ್ ಮಾರ್ಕೆಟ್ ನಲ್ಲಿ ಜನ ಮೈ ಮರೆತು ಮಾಂಸ ಖರೀದಿಯಲ್ಲಿ ತೊಡಗಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಸಾರ್ವಜನಿಕರು ಕೊರೊನಾ ನಿಯಮವನ್ನು ಮರೆತಂತಿದೆ.
ವೀಕೆಂಡ್ ಕರ್ಫ್ಯೂ ಹಾಗೂ ಭಾನುವಾರ ಇರುವುದರಿಂದ ಜನ ಮಾಂಸ ಖರೀದಿಗೆ ಮುಗಿಬಿದ್ದಿದ್ದಾರೆ. ಮಾಂಸದಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿರುವ ಜನ ಸಾಮಾಜಿಕ ಅಂತರವಿಲ್ಲದೆ, ನೂರಾರು ಜನ ಮಾಂಸ ಖರೀದಿ ಭರಾಟೆಯಲ್ಲಿ ಕೊರೊನಾ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ಇದನ್ನೂ ಓದಿ: 16 ಜಿಲ್ಲೆಗಳಲ್ಲಿ ಸಂಜೆ 5ರವರೆಗೆ ಅನ್‍ಲಾಕ್- ನಿಯಮಗಳೇನು?
ಸಾರ್ವಜನಿಕರು ಸರಿಯಾಗಿ ಮಾಸ್ಕ್ ಗಳನ್ನು ಧರಿಸದೇ ಒಬ್ಬರಿಗೊಬ್ಬರು ಅಂಟಿಕೊಂಡು, ಗ್ರಾಹಕರು ವ್ಯಾಪಾರ ಮಾಡುತ್ತಿದ್ದಾರೆ. ಜನರ ಗುಂಪು ನಿಯಂತ್ರಿಸಲು, ಪೊಲೀಸರು, ಮಾರ್ಷಲ್ ಗಳು ಕೂಡ ಸ್ಥಳದಲ್ಲಿ ಇಲ್ಲ. ಸೋಂಕು ಇಳಿಕೆಯಾಗುತ್ತಿರುವ ಹೊತ್ತಲ್ಲೇ, ಜನ ಮತ್ತೆ ನಿರ್ಲಕ್ಷ್ಯ ತೋರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜನರ ಬೇಜವಾಬ್ದಾರಿ ಹೀಗೆ ಮುಂದುವರೆದರೆ ಮುಂದಿನ ದಿನಗಳು ಆಪಾಯಕ್ಕೆ ದಾರಿಮಾಡಿಕೊಟ್ಟಂತಾಗಲಿದೆ.