Tag: ಮಾಂಡಸ್ ಚಂಡಮಾರುತ

  • ಮುಂದುವರಿದ ಮಾಂಡಸ್ ಅಬ್ಬರ: ಇನ್ನೂ 3 ದಿನ ಮಳೆ, ಚಳಿ – ರಾಜ್ಯದ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ಮುಂದುವರಿದ ಮಾಂಡಸ್ ಅಬ್ಬರ: ಇನ್ನೂ 3 ದಿನ ಮಳೆ, ಚಳಿ – ರಾಜ್ಯದ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ಬೆಂಗಳೂರು: ಮಾಂಡಸ್ ಚಂಡಮಾರುತದ (Cyclone Mandous) ರೌದ್ರವತಾರ ಜೋರಾಗಿದೆ. ವಾತಾವರಣದ ಬದಲಾವಣೆಗೆ ರಾಜ್ಯದ ಜನ ಬೆಚ್ಚಿಬಿದ್ದಿದ್ದಾರೆ. ಈಗ ಮತ್ತೆ ಮಳೆಯ ಮುನ್ಸೂಚನೆಯನ್ನ ಹವಮಾನ ಇಲಾಖೆ ನೀಡಿದೆ. ಬೆಂಗಳೂರು (Bengaluru Rains) ಸೇರಿದಂತೆ ರಾಜ್ಯದ ಹಲವೆಡೆ ಇನ್ನೂ ಮೂರು ದಿನ ಚಳಿ ಜೊತೆಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ರಾಜ್ಯದ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

    ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮೋಡಕವಿದ ವಾತಾವರಣ, ತುಂತುರು ಮಳೆ, ವಿಪರೀತ ಚಳಿಯ ವಾತಾವರಣ ಇದೆ. ಮಾಂಡಸ್ ಚಂಡಮಾರುತದ ಎಫೆಕ್ಟ್ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಿಗೆ ತಟ್ಟಿದ್ದು, ಜನ ತತ್ತರಿಸಿ ಹೋಗಿದ್ದಾರೆ. ವೀಕೆಂಡ್ ಮಸ್ತಿಗೆ ಬ್ರೇಕ್ ಹಾಕಿರೋದಲ್ಲದೇ ಇದರ ಕಾಟ ಮುಂದುವರಿಯುವ ಎಚ್ಚರಿಕೆಯನ್ನ ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ಗೋಕಾಕ್ ತಹಶೀಲ್ದಾರ್ ಮನೆಯಲ್ಲಿ ಕಳ್ಳತನ – ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಎಗರಿಸಿ ಪರಾರಿ

    ಡಿಸೆಂಬರ್ 15ರವರೆಗೂ ಮೋಡ ಕವಿದ ವಾತಾವರಣ, ತುಂತುರು ಮಳೆ ಮತ್ತು ಚಳಿ ಇರುತ್ತೆ ಅಂತಾ ಹವಾಮಾನ ಇಲಾಖೆ ಹೈ ಅಲರ್ಟ್ ಅನ್ನು ನೀಡಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 14 ರವರೆಗೂ ಮಳೆ ಜೊತೆಗೆ ಮೋಡಕವಿದ ವಾತಾವರಣ ಇರೋ ಬಗ್ಗೆ ಕೂಡ ಎಚ್ಚರಿಸಿದೆ. ಇದಲ್ಲದೇ ಕರಾವಳಿ ಭಾಗದ ಮೀನುಗಾರರಿಗೆ ಡಿ. 15 ರವರೆಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲೂ ಬಿಟ್ಟು ಬಿಡದೆ ಮಳೆಯಾಗುವ ವರದಿಯನ್ನ ಹವಾಮಾನ ಇಲಾಖೆ ನೀಡಿದೆ.

    2016 ವಾದ್ರಾ ಚಂಡಮಾರುತ ವೇಳೆ ಬೆಂಗಳೂರಿನಲ್ಲಿ ಗರಿಷ್ಟ ತಾಪಮಾನ ಅತ್ಯಂತ ಕಡಿಮೆ ದಾಖಲಾಗಿತ್ತು. ಸಾಮಾನ್ಯವಾಗಿ ಚಳಿಗಾಲದ ಡಿಸೆಂಬರ್ ತಿಂಗಳು ಗರಿಷ್ಟ 25-27 ಡಿಗ್ರಿ ಇರುತ್ತೆ. ಮಾಂಡಸ್ ಚಂಡಮಾರುತ ಪರಿಣಾಮ ತಾಪಮಾನ ಇಳಿಕೆಯಾಗಿದೆ.‌ ಬಂಗಾಳ ಉಪಸಾಗರ ವಾಯುಭಾರ ಕುಸಿತದ ಪರಿಣಾಮ ಕಳೆದೆರಡು ದಿನಗಳಿಂದ ಗರಿಷ್ಟ ತಾಪಮಾನ ಇಳಿಮುಖದ ಜೊತೆಗೆ ಚಳಿ ವಾತಾವರಣ ಮೂರು ದಿನ ಮುಂದುವರಿಕೆಯಾಗಲಿದ್ದು, ಕನಿಷ್ಠ ತಾಪಮಾನ ಕೂಡ ಇಳಿಕೆಯ ಎಚ್ಚರಿಕೆಯನ್ನ ನೀಡಿದೆ. ಇನ್ನೊಂದು ವಾರ ಕನಿಷ್ಟ ಗರಿಷ್ಟ ತಾಪಮಾನ ಇರಲಿದೆ ಅಂತಾ ವರದಿಯಾಗಿದಡೆ. ಇದನ್ನೂ ಓದಿ: ಬೆಂಗಳೂರು – ಮಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ, ನಾಲ್ವರ ದುರ್ಮರಣ

    ಚಂಡಮಾರುತದ ಪರಿಣಾಮದಿಂದಾಗಿ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಶುರುವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಒಂದಡೆ ವ್ಯಾಪಾರವಿಲ್ಲದೇ ಅಂಗಡಿಗಳು ಖಾಲಿ ಖಾಲಿಯಾಗಿವೆ. ಮತ್ತೊಂದಡೆ ವಿಪರೀತ ಚಳಿ, ಜಿಟಿಜಿಟಿ ಮಳೆಗೆ ಮನೆಯಿಂದ ಹೊರಬಾರದೇ ಜನ ಮನೆಯಲ್ಲೇ ಉಳಿಯುವಂತಾಗಿದೆ. ನಿನ್ನೆ ವೀಕೆಂಡ್ ಇದ್ರೂ ಮಾಲ್‌ಗಳು ಸೇರಿ ಇತರೆ ಶಾಪಿಂಗ್ ಸ್ಪಾಟ್‌ಗಳು ಖಾಲಿ ಖಾಲಿಯಾಗಿದ್ದವು.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ 3 ದಿನ ಮಳೆ – ಹವಾಮಾನ ಇಲಾಖೆ

    ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ 3 ದಿನ ಮಳೆ – ಹವಾಮಾನ ಇಲಾಖೆ

    ಬೆಂಗಳೂರು: ಮಾಂಡಸ್‌ ಚಂಡಮಾರುತದ (Cyclone Mandous) ಎಫೆಕ್ಟ್ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ (Bengaluru Rains) ತಣ್ಣನೆಯ ವಾತಾವರಣ ಮುಂದುವರಿದಿದೆ. ನಿನ್ನೆಯಿಂದ ಜಡಿ ಮಳೆ ಕೂಡ ಹೆಚ್ಚಾಗಿದ್ದು, ಇನ್ನೂ ಮೂರು ದಿನ ಇದೇ ಪರಿಸ್ಥಿತಿ ಮುಂದುವರೆಯಲಿದೆ.

    ಇಷ್ಟು ದಿನ ಊಟಿ, ಮಲೆನಾಡು ಭಾಗದಲ್ಲಿ ಕಂಡುಬರುತ್ತಿದ್ದ ತಣ್ಣನೆ ವಾತಾವರಣ ಇದೀಗ ಬೆಂಗಳೂರಿಗೂ ಶಿಫ್ಟ್ ಆಗಿದೆ. ಕಳೆದ ಎರಡು ದಿನದಿಂದ ಸೂರ್ಯನನ್ನೇ ಕಾಣದೆ ಕಂಗೆಟ್ಟಿರೋ ಬೆಂಗಳೂರಿಗರಿಗೆ ಇನ್ನು ಎರಡು-ಮೂರು ದಿನ ಇದೇ ರೀತಿಯ ವಾತಾವರಣನ್ನ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಮೈಲಿಗೆ ಆಗುತ್ತೆ ಅಂತಾ ದತ್ತಪೀಠದಲ್ಲಿ ಮೌಲ್ವಿಗಳ ಪೂಜೆಗೆ ನಕಾರ – ಅರ್ಚಕರ ವಿರುದ್ಧ ಆರೋಪ

    ತಮಿಳುನಾಡು (TamilNadu), ಆಂಧ್ರಪ್ರದೇಶ ರಾಜ್ಯಗಳಲ್ಲಿ ಮಾಂಡಸ್ ಅಬ್ಬರದ ಎಫೆಕ್ಟ್ ಬೆಂಗಳೂರಿನ ಮೇಲೆ ಕೊಂಚ ಹೆಚ್ಚಾಗೆ ಬೀರುತ್ತಿದೆ. ಜೊತೆಗೆ ಇನ್ನೂ ಎರಡು ಮೂರು ದಿನಗಳ ಕಾಲ ಚಂಡಮಾರುತದ ಅಬ್ಬರ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ ಮೋಡದ ವಾತಾವರಣದ ಜೊತೆಗೆ ಶೀತಗಾಳಿ ಮತ್ತು ಕೆಲವೊಮ್ಮೆ ಜೋರು ಮಳೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ತಜ್ಞ ಪ್ರಸಾದ್‌ ಅವರು ತಿಳಿಸಿದ್ದಾರೆ.

    ಬೆಳಗ್ಗೆ ವೇಳೆಯಲ್ಲಿ ನಗರಾದ್ಯಂತ ಹೆಚ್ಚು ಮಂಜು ಮುಸುಕುವ ಸಾಧ್ಯತೆ ಇದೆ. ಈಗಾಗಲೇ ನಗರಾದ್ಯಂತ ಬೆಳಗ್ಗೆ ಸಂದರ್ಭದಲ್ಲಿ ಕಡಿಮೆ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಕಂಡಿದೆ. ಇದೇ ವಾತಾವರಣ ಇನ್ನೂ ಕೆಲ ದಿನ ಮುಂದುವರಿಯುವ ಸಾಧ್ಯತೆ ಇದ್ದು, ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: ವೋಟ್ ಹಾಕದಿದ್ರೆ ಯುಜಿಡಿ ಕಾಮಗಾರಿ ಮಾಡಲ್ಲ: ಶಾಸಕ ಪ್ರೀತಂಗೌಡ

    Live Tv
    [brid partner=56869869 player=32851 video=960834 autoplay=true]

  • ಇನ್ನೂ 5 ದಿನ ಬೆಂಗಳೂರಿನಲ್ಲಿ ಚಳಿ – ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ಇನ್ನೂ 5 ದಿನ ಬೆಂಗಳೂರಿನಲ್ಲಿ ಚಳಿ – ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ಬೆಂಗಳೂರು: ಸಿಲಿಕಾನ್ ಸಿಟಿ ಈಗ ಕೂಲ್ ಕೂಲ್ ಆಗಿದೆ. ರಾಜಧಾನಿ ಸೇರಿದಂತೆ ಇಡೀ ರಾಜ್ಯ ಚಳಿಗಾಳಿಗೆ ತತ್ತರಿಸಿದೆ. ಬಂಗಾಳಕೊಲ್ಲಿಯಲ್ಲಿ (Bangla Kolli Cyclone) ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ (Bengaluru) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಂಜೆಯ ಹೊತ್ತಿಗೆ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, 5 ದಿನ ಚಳಿಯೊಂದಿಗೆ ಮೋಡ ಕವಿದ ವಾತಾವರಣವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Meteorological Departmenthttps) ತಿಳಿಸಿದೆ.

    ಇನ್ನೂ ಮಾಂಡಸ್ ಚಂಡಮಾರುತ (Cyclone Mandus) ಕರ್ನಾಟಕ ಮೂಲಕ ಅರಬ್ಬೀ ಸಮುದ್ರದ ಕಡೆ ಹೋಗಲಿದೆ. ಈ ಚಂಡಮಾರುತದ ಎಫೆಕ್ಟ್ ದಕ್ಷಿಣ ಜಿಲ್ಲೆಗಳಿಗೆ ಉಂಟಾಗಲಿದೆ. ಇಂದು ಮತ್ತು ನಾಳೆ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಮಳೆ, ಚಳಿ ಮುಂದುವರಿಯುವ ಬಗ್ಗೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಒಂದೇ ರಾತ್ರೀಲಿ ಎರಡು ಬಾರಿ ಸೆಕ್ಸ್ ಮಾಡಲು ನಿರಾಕರಿಸಿದ್ದಕ್ಕೆ ಪತ್ನಿಯ ಕೊಲೆ

    ಇನ್ನೂ ತಮಿಳುನಾಡಿನಲ್ಲಿ (Tamilnadu) ಮಾಂಡಸ್ ಅಬ್ಬರ ಹೆಚ್ಚಾಗಿದ್ದು, ಕರ್ನಾಟಕಕ್ಕೂ ಸೈಕ್ಲೋನ್ ಎಫೆಕ್ಟ್ ತಟ್ಟಲಿದೆ. ಇಂದು ಮತ್ತು ನಾಳೆ ಕರಾವಳಿಯ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ 6 ಎಂಎಂ ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಹಲ್ಲೆಗೊಳಗಾದ ವಲಸೆ ಕಾರ್ಮಿಕ ಬಾಲಕನನ್ನು ಐಷಾರಾಮಿ ಕಾರಿನಲ್ಲಿ ಜಾಲಿ ರೈಡ್ ಮಾಡಿಸಿದ ಚಿನ್ನದಂಗಡಿ ಮಾಲೀಕ

    weather

    ಬೆಂಗಳೂರು, ಚಾಮರಾಜನಗರ, ಕೋಲಾರ, ಮಂಡ್ಯ, ತುಮಕೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (Yellow Alert) ಇರಲಿದೆ. ಸದ್ಯ ಬೆಂಗಳೂರಿನ ಉಷ್ಣಾಂಶ 23 ರಿಂದ 22ಕ್ಕೆ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆಯಿಂದ ಮಳೆಯ ಮುನ್ಸೂಚನೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]