Tag: ಮಾಂಜ್ರಾ ನದಿ

  • ಧನ್ನೆಗಾಂವ್ ಜಲಾಶಯದಿಂದ 1,300 ಕ್ಯುಸೆಕ್ ನೀರು ಬಿಡುಗಡೆ – ಮಾಂಜ್ರಾ ನದಿಪಾತ್ರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ

    ಧನ್ನೆಗಾಂವ್ ಜಲಾಶಯದಿಂದ 1,300 ಕ್ಯುಸೆಕ್ ನೀರು ಬಿಡುಗಡೆ – ಮಾಂಜ್ರಾ ನದಿಪಾತ್ರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ

    ಬೀದರ್: ಮಹಾರಾಷ್ಟ್ರದ (Maharashtra) ಧನ್ನೆಗಾಂವ್ ಜಲಾಶಯದಿಂದ (Dhanegaon) ಮಾಂಜ್ರಾ ನದಿಗೆ (Manjra River) ಅಪಾರ ಪ್ರಮಾಣ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವನದಿ ಮಾಂಜ್ರಾ ಉಕ್ಕಿ ಹರಿಯುತ್ತಿದೆ. 1,300ಕ್ಕೂ ಅಧಿಕ ಕ್ಯುಸೆಕ್ ನೀರು ಮಾಂಜ್ರಾ ನದಿಗೆ ಬಿಡಲಾಗಿದ್ದು, ಇದರ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ

    ಐದಾರು ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿರುವ ಮಾಂಜ್ರಾ ನದಿಯನ್ನು ಕಣ್ತುಂಬಿಕೊಂಡು ಜನರು ಖುಷಿ ಪಡುತ್ತಿದ್ದಾರೆ. ಜೊತೆಗೆ ಮಾಂಜ್ರಾ ಉಕ್ಕಿ ಹರಿಯುತ್ತಿರುವ ಪರಿಣಾಮ ನದಿ ಪಾತ್ರದಲ್ಲಿ ಅಕ್ಷರಶಃ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಇಸ್ಲಾಂಗೆ ಮತಾಂತರವಾಗುವಂತೆ ವೈದ್ಯನಿಂದ ಕಿರುಕುಳ – ಉಡುಪಿಯಲ್ಲಿ ಆರೋಪಿ ಬಂಧನ

    ಮೈದುಂಬಿ ಹರಿಯುತ್ತಿರುವ ಮಾಂಜ್ರಾ ನದಿ ಪಕ್ಕದಲ್ಲಿರುವ ರೈತರ ಜಮೀನುಗಳು ಕೂಡ ಸಂಪೂರ್ಣ ಜಲಾವೃತಗೊಂಡಿವೆ. ಜಿಲ್ಲೆಯಲ್ಲಿ ಇಂದು ಕೂಡಾ ಮಳೆ ಮುಂದುವರಿದಿದ್ದು, ಮಹಾರಾಷ್ಟ್ರದಲ್ಲಿ ಮತ್ತೆ ಮಹಾ ಮಳೆಯಾದರೆ ಗಡಿ ಜಿಲ್ಲೆ ಬೀದರ್‌ನಲ್ಲಿ ಮಹಾ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಈ ಸರ್ಕಾರ ಪಾಪರ್ ಸರ್ಕಾರ- ಗುಂಡಿ ಮುಚ್ಚೋಕು ಕಾಸಿಲ್ಲ: ಅಶೋಕ್ ಕಿಡಿ

  • ಮಾಂಜ್ರಾ ನದಿಗೆ ಬಿಟ್ಟಿದ್ದ ನೀರು ಬಂದ್ – ನೆಮ್ಮದಿಯ ನಿಟ್ಟುಸಿರು ಬಿಟ್ಟ ರೈತರು

    ಮಾಂಜ್ರಾ ನದಿಗೆ ಬಿಟ್ಟಿದ್ದ ನೀರು ಬಂದ್ – ನೆಮ್ಮದಿಯ ನಿಟ್ಟುಸಿರು ಬಿಟ್ಟ ರೈತರು

    ಬೀದರ್: ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾನದಿಗೆ ಬಿಡಲಾಗುತ್ತಿದ್ದ ಅಪಾರ ಪ್ರಮಾಣದ ನೀರು ಬಂದ್ ಮಾಡಲಾಗಿದ್ದು, ಮಾಂಜ್ರಾನದಿಯ ದಡದಲ್ಲಿರುವ ಹೆಚ್ಚಿನ ರೀತಿಯ ಬೆಳೆಗಳನ್ನು ಕಳೆದುಕೊಳುತ್ತಿದ್ದ ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾನದಿಗೆ ಬಿಡಲಾಗುತ್ತಿದ್ದ 50 ರಿಂದ 60 ಸಾವಿರ ಕ್ಯೂಸೆಕ್ ನೀರು ಬಂದ್ ಆಗಿದ್ದು, ಬೀದರ್ ನ ಮಾಂಜ್ರಾನದಿ ದಡದಲ್ಲಿ ನೀರಿನ ಮಟ್ಟ ತಗ್ಗಿದೆ. ಧನ್ನೆಗಾಂವ್ ಜಲಾಶಯದಿಂದ ಹೆಚ್ಚಿನ ನೀರು ಮಾಂಜ್ರಾನದಿಗೆ ಬಿಡುಗಡೆಯಾಗಿದ್ದರೆ, ಹೆಚ್ಚಿನ ಬೆಳೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದ ಮಾಂಜ್ರಾನದಿ ದಡದಲ್ಲಿರುವ ರೈತರು ಮಹಾ ಪ್ರವಾಹದಿಂದ ಬಚಾವಾಗಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ: ಕಾಂಗ್ರೆಸ್‍ನಲ್ಲೂ ಫೈನಲ್ ಆಗಿಲ್ಲ ಅಭ್ಯರ್ಥಿ ಹೆಸರು 

    ಮಹಾ ಮಳೆ, ಧನ್ನೆಗಾಂವ್ ಹಾಗೂ ಕಾರಂಜಾ ಜಲಾಶಯದ ಎಫೆಕ್ಟ್‍ನಿಂದಾಗಿ ಲಕ್ಷಾಂತರ ಬೆಳೆ ಕಳೆದುಕೊಂಡ ಬೀದರ್ ರೈತರು ಕಂಗಾಲಾಗಿದ್ದರು. ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆ ಧನ್ನೆಗಾಂವ್ ಜಲಾಶಯದ ಎಲ್ಲ ಗೇಟುಗಳು ಬಂದ್ ಮಾಡಲಾಗಿದ್ದು, ಮಾಂಜ್ರಾನದಿ ದಡದಲ್ಲಿ ನೆರೆ ಇಳಿಕೆಯಾಗಿದೆ. ಇದನ್ನೂ ಓದಿ:  ತುಕುಡೆ ಗ್ಯಾಂಗಿನ ನಾಯಕರ ಸಮಾಧಿ ಮೇಲೆ ಬಿಜೆಪಿ, ಸಂಘ ಬಲವಾಗಿ ಬೆಳೆದಿದೆ: ಸಿ.ಟಿ.ರವಿ

    ಡ್ಯಾಮ್‍ನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಔರಾದ್, ಭಾಲ್ಕಿ ತಾಲೂಕಿನಲ್ಲಿ ರೈತರು ಬೆಳೆದ ಬೆಳೆಗೆ ನೀರು ನುಗ್ಗಿತ್ತು. ಪರಿಣಾಮ ಉದ್ದು, ತೊಗರಿ, ಕಬ್ಬು ಬೆಳೆ ನೀರುಪಾಲಾಗಿತ್ತು.

  • ಮಾಂಜ್ರಾ ನದಿಗೆ ಮತ್ತೆ ಭಾರೀ ಪ್ರಮಾಣದ ನೀರು ಬಿಡುಗಡೆ – ನೆರೆ ಭೀತಿ

    ಮಾಂಜ್ರಾ ನದಿಗೆ ಮತ್ತೆ ಭಾರೀ ಪ್ರಮಾಣದ ನೀರು ಬಿಡುಗಡೆ – ನೆರೆ ಭೀತಿ

    ಬೀದರ್: ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾ ನದಿಗೆ ಮತ್ತೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾಂಜ್ರಾ ನದಿ ತೀರ ಪ್ರದೇಶದಲ್ಲಿ ಅಕ್ಷರಶಃ ಮಹಾ ನೆರೆಯ ಭೀತಿ ಶುರುವಾಗಿದರೆ.

    ಧನ್ನೆಗಾಂವ್ ಜಲಾಶಯದಿಂದ ಸುಮಾರು 40 ರಿಂದ 50 ಸಾವಿರ ಕ್ಯೂಸೆಕ್ಸ್ ನೀರನ್ನು ಮಾಂಜ್ರಾನದಿಗೆ ಬಿಡುಗಡೆ ಮಾಡಲಾಗಿದೆ. ಪರಿಣಾಮ ಮಾಂಜ್ರಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಇದನ್ನೂ ಓದಿ: ವಿಜಯಪುರದ ಸಿಂದಗಿಯಲ್ಲಿ ಭೂಕಂಪನ ಅನುಭವ – ಜನರಲ್ಲಿ ಆತಂಕ

    ಭಾಲ್ಕಿ ತಾಲೂಕಿನ ಸಾಯಿಗಾಂವ್, ಇಂಚೂರು ಸೇತುವೆ ಸಂಪರ್ಕ ಕಡಿತಗೊಂಡಿದೆ. ಸಾಯಿಗಾಂವ್, ಇಂಚೂರು ಸೇತುವೆ ಮೇಲಿಂದ ನೀರು ಹರಿಯುತ್ತಿದೆ. ಕಾರಣ ಸಾಯಿಗಾಂವ್ ಹಾಗೂ ಇಂಚೂರಿನಿಂದ ಹೂಲಸೂರಿಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂಚೂರು ಸೇತುವೆ ಮೇಲೆ ಹೆಚ್ಚು ನೀರು ಬಂದ ಕಾರಣ ಸೇತುವೆಯ ರಸ್ತೆ ಕೆರೆಯಂತಾಗಿದೆ. ಬೀದರ್ ತಾಲೂಕಿನ ಕಂದಗೊಳ, ಖಾನಾಪೂರ, ಕೌಠಾ ಸೇರಿದಂತೆ ಮಾಂಜ್ರಾ ನದಿ ದಡದಲ್ಲಿನ ಸಾವಿರಾರು ಎಕರೆಯಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.

  • ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾ ನದಿಗೆ 30 ಸಾವಿರ ಕ್ಯೂಸೆಕ್ ನೀರು- ಪ್ರವಾಹ ಪರಿಸ್ಥಿತಿ

    ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾ ನದಿಗೆ 30 ಸಾವಿರ ಕ್ಯೂಸೆಕ್ ನೀರು- ಪ್ರವಾಹ ಪರಿಸ್ಥಿತಿ

    – ಬೆಳೆಗಳು ನೀರು ಪಾಲು, ರೈತರು ಕಂಗಾಲು

    ಬೀದರ್: ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾ ನದಿಗೆ 20 ರಿಂದ 30 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಮಾಂಜ್ರಾನದಿ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಭಾಲ್ಕಿ ತಾಲೂಕಿನ ವಾಂಜರ್ ಖೇಡ್ ಸೇತುವೆ ಸಂಪರ್ಕ ಕಡಿತಗೊಂಡಿದ್ದು, ವಾಂಜರ್ ಖೇಡ್ ಟು ಹಲಸಿತೂಗಾಂವ್ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡು ವಾಂಜರ್ ಖೇಡ್ ಸೇತುವೆ ಮೇಲಿಂದ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಮತ್ತೆ ರಣ ಮಳೆ- ಪ್ರವಾಹ ಪರಿಸ್ಥಿತಿ

    ಮಾಂಜ್ರಾ ನದಿಯ ದಡದಲ್ಲಿರುವ ಸಾಯಿಗಾಂವ್, ಕೊಗಳಿ, ಕೌಠ, ಚಂದಾಪೂರ್ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಹಾನಿಯಾಗಿವೆ.

    ಗುಲಾಬ್ ಚಂಡಮಾರುತದ ಎಫೆಕ್ಟ್ ನಿಂದಾಗಿ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಬಿಡಲಾಗಿದೆ. ಪರಿಣಾಮ ಜಮೀನಿಗೆ ನೀರು ನುಗ್ಗಿ ಬೆಳೆಗಳು ಕೊಚ್ಚಿ ಹೋಗಿದ್ದು, ರೈತರು ಕಂಗಾಲಾಗಿದ್ದಾರೆ.