Tag: ಮಾಂಕ್ ದಿ ಯಂಗ್

  • ‘ಮಾಂಕ್ ದಿ ಯಂಗ್’ ಚಿತ್ರದ ಟೀಸರ್ ರಿಲೀಸ್

    ‘ಮಾಂಕ್ ದಿ ಯಂಗ್’ ಚಿತ್ರದ ಟೀಸರ್ ರಿಲೀಸ್

    ನ್ನಡ ಚಿತ್ರರಂಗದಲ್ಲೀಗ ಹೊಸಬರ ಹೊಸಪ್ರಯತ್ನಕ್ಕೆ ನೋಡುಗರ ಬೆಂಬಲ ಸಿಗುತ್ತಿದೆ.  ‘ಮಾಂಕ್ ದಿ ಯಂಗ್’ (Monk The Young) ಚಿತ್ರ ಕೂಡ ಹೊಸ ಕಥೆಯೊಂದಿಗೆ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ (Teaser) ಬಿಡುಗಡೆಯಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್ ಟೀಸರ್ ಬಿಡುಗಡೆ ಮಾಡಿದರು. ನಟ ಪ್ರಥಮ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು‌. ಚಿತ್ರದಲ್ಲಿ ನಟಿಸಿರುವ ಪ್ರಣಯಮೂರ್ತಿ (Pranayamurthy) ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ಮಾಂಕ್ ದಿ ಯಂಗ್ ವಿಂಟೇಜ್ ಫ್ಯಾಮಿಲಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಇಂದು ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದೇವೆ. ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಅಂತಿಮ ಹಂತದಲ್ಲಿದೆ. ಇನ್ನು ಮೂರು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡುತ್ತಿರುವ ಚಿತ್ರತಂಡಕ್ಕೆ ನನ್ನ ಧನ್ಯವಾದ. ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸವಾಗದಂತಹ ಚಿತ್ರ ಮಾಡಿದ್ದೇವೆ.‌ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಮಾಸ್ಚಿತ್ ಸೂರ್ಯ. ಇದನ್ನೂ ಓದಿ:ಜನವರಿಯಲ್ಲಿ ಅರ್ಜುನ್ ಸರ್ಜಾ ಮಗಳ ಮದುವೆ: ಮಾವನ ಮನೆಯಿಂದ ಅಧಿಕೃತ ಘೋಷಣೆ

    ಈ ಚಿತ್ರದ ನಿರ್ದೇಶಕ ಮಾಸ್ಚಿತ್ ಸೂರ್ಯ (Maschit Surya), ನನ್ನನ್ನು ಈ ಚಿತ್ರದಲ್ಲಿ ಅಭಿನಯಿಸಲು ಕಥೆ ಹೇಳುವುದಕ್ಕೆ ಕರೆದಿದ್ದರು. ಕಥೆ ಚೆನ್ನಾಗಿತ್ತು. ನಟನೆಗೆ ಹೋದ ನಾನು ನಿರ್ಮಾಪಕನಾದೆ. ನನ್ನೊಂದಿಗೆ ನನ್ನ ಸ್ನೇಹಿತರು ನಿರ್ಮಾಣಕ್ಕೆ ಜೊತೆಯಾದರು. ಇಂದು ಟೀಸರ್ ಬಿಡುಗಡೆಯಾಗಿದೆ. ಸೆಪ್ಟೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ನಾನು ಸೇರಿದಂತೆ ಐದು ಜನ ನಿರ್ಮಾಪಕರು ಈ ಚಿತ್ರದಲ್ಲಿ ಅಭಿನಯಿಸಿದ್ದೇವೆ ಎಂದು ನಿರ್ಮಾಪಕರಲ್ಲೊಬ್ಬರಾದ  ರಾಜೇಂದ್ರನ್ ಹೇಳಿದರು. ನಿರ್ಮಾಪಕರಾದ ವಿನಯ್ ಬಾಬು ರೆಡ್ಡಿ, ಗೋಪಿಚಂದ್, ಲಾಲ್ ಚಂದ್ ಸಹ ಚಿತ್ರದ ಕುರಿತು ಮಾತನಾಡಿದರು.

     

    ನಾವು ಸೀಮಿತವಾದ ಜೀವನ ನಡೆಸುತ್ತಿರುತ್ತೇವೆ. ಆದರೆ ಅದರ ಆಚೆ ಬಂದು ನೋಡಿದಾಗ ಬೇರೆ ಜೀವನ ಇದೆ. ಹಾಗೆ ನಮ್ಮ ಚಿತ್ರ ಕೂಡ. ಮಾಮೂಲಿ ಜಾನರ್‌ ಗಿಂತ ಸ್ವಲ್ಪ ಭಿನ್ನವಾದ ಚಿತ್ರ ಎನ್ನಬಹುದು. ‌ನಾನು ಹಾಗೂ ಮಾಸ್ಚಿತ್ ಸೂರ್ಯ ಮೊದಲು ಸಣ್ಣದಾಗಿ ಈ ಚಿತ್ರ ಆರಂಭ ಮಾಡಿದ್ದೆವು. ಆನಂತರ ನಾಲ್ಕು ಜನ ನಿರ್ಮಾಪಕರು ಜೊತೆಯಾದರು. ನಾನು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬ. ಹಾಗೆ ನಾಯಕ ಕೂಡ. ನೋಡುಗರು ನಮ್ಮ ಚಿತ್ರವನ್ನು ಮೆಚ್ಚಿಕೊಳ್ಳುವ ಭರವಸೆಯಿದೆ ಎಂದು ಸರೋವರ್ ತಿಳಿಸಿದರು.  ನಾಯಕಿ ಸೌಂದರ್ಯ ಗೌಡ, ಸಂಕಲನಕಾರ ಧನುಷ್ ಎಲ್ ಬೇದ್ರೆ, ಹಿನ್ನೆಲೆ ಸಂಗೀತ ನೀಡಿರುವ  ಸ್ವಾಮಿನಾಥನ್ ಹಾಗೂ ವಿ ಎಫ್ ಎಕ್ಸ್ ಮಾಡಿರುವ ಜಯೇಂದ್ರ ವಾಕ್ವಾಡಿ ಚಿತ್ರದ ಕುರಿತು ಮಾತನಾಡಿದರು.

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಐಶ್ವರ್ಯ ರಂಗರಾಜನ್ ಧ್ವನಿಯಲ್ಲಿ ‘ಮಾಂಕ್ ದಿ ಯಂಗ್’ ಹಾಡು

    ಐಶ್ವರ್ಯ ರಂಗರಾಜನ್ ಧ್ವನಿಯಲ್ಲಿ ‘ಮಾಂಕ್ ದಿ ಯಂಗ್’ ಹಾಡು

    ಇತ್ತೀಚಿಗೆ ಈ ಚಿತ್ರದ ” ಕಣ್ ಗಳೆ ಸೋತು” ಎಂಬ ಹಾಡು ಬಿಡುಗಡೆಯಾಯಿತು.  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಹಾಗೂ ಹಿರಿಯ ನಟ ಸುಂದರರಾಜ್ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸುಪ್ರೀತ್ ಫಲ್ಗುಣ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡನ್ನು ಸುಮಧುರ ಕಂಠದ ಗಾಯಕಿ ಐಶ್ವರ್ಯ ರಂಗರಾಜನ್ ಇಂಪಾಗಿ ಹಾಡಿದ್ದಾರೆ. ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಮೆಚ್ಚುಗೆ ಪಡೆಯುತ್ತಿದೆ. ಅಶ್ವಿನ್ ಶಾನ್ ಭಾಗ್ ಈ ಹಾಡನ್ನು ಬರೆದಿದ್ದಾರೆ.

    ನಮ್ಮ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅಶ್ವಿನ್ ಶಾನ್ ಭಾಗ್ ಬರೆದಿದ್ದಾರೆ. ಖ್ಯಾತ ಗಾಯಕಿಯರಾದ ಐಶ್ವರ್ಯ ರಂಗರಾಜನ್ ಹಾಗೂ ಸಾದ್ವಿನಿ ಕೊಪ್ಪ ಈ ಹಾಡುಗಳನ್ನು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಸುಪ್ರೀತ್ ಫಲ್ಗುಣ ಮಾಹಿತಿ ನೀಡಿದರು. ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ,  ಎಲ್ಲರ ಸಹಕಾರದಿಂದ ಚೆನ್ನಾಗಿ ಬಂದಿದೆ‌. ಹಾಡುಗಳಂತೂ ಅದ್ಭುತವಾಗಿದೆ ಎಂದರು ನಿರ್ದೇಶಕ  ಮಾಸ್ಚಿತ್ ಸೂರ್ಯ. ನಾಯಕ ಸರೋವರ್,  ನಾಯಕಿ ಸೌಂದರ್ಯ ಗೌಡ, ನಟಿ ಉಷಾ ಭಂಡಾರಿ, ನಟ ಶಿವಪ್ಪ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಬಿಕಿನಿ ತೊಟ್ಟು ಪೋಸ್‌ ಕೊಟ್ಟ ನಿವೇದಿತಾಗೆ ಬೆವರಿಳಿಸಿದ ನೆಟ್ಟಿಗರು

    ನಿವೃತ್ತ ಆರ್ಮಿ ಆಫೀಸರ್ ರಾಜೇಂದ್ರನ್, ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳಿ, ಸರೋವರ್, ಗೋಪಿಚಂದ್,  ಲಾಲ್ ಚಂದ್ ಖತಾರ್ ಐದು ಜನ ಸೇರಿ “ಮಾಂಕ್ ದಿ ಯಂಗ್” ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  ಐದು ಜನ ನಿರ್ಮಾಪಕರು ಮಾತನಾಡಿ, ತಮ್ಮ ನೂತನ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು. ಛಾಯಾಗ್ರಾಹಕ ಕಾರ್ತಿಕ್ ಶರ್ಮ, ನೃತ್ಯ ನಿರ್ದೇಶಕ ಹರ್ಷವರ್ಧನ್  ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಿರ್ಮಾಪಕ ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಹಾಡು ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದರು. ನಾಡಿನ ಪ್ರಸಿದ್ದ ನೃತ್ಯಗಾರರು ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಿದರು.

    Live Tv
    [brid partner=56869869 player=32851 video=960834 autoplay=true]