Tag: ಮಹ್ಸಾ ಅಮಿನಿ

  • ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು

    ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು

    ಟೆಹ್ರಾನ್: ಇರಾನ್‍ನ (Iran) ಮೆಟ್ರೋ ನಿಲ್ದಾಣದಲ್ಲಿ (Metro Station) ಇರಾನ್ ಭದ್ರತಾ ಪಡೆಗಳು ಹಿಜಬ್ ವಿರೋಧಿ ಪ್ರತಿಭಟನಾಕಾರರ (Anti Hijab Protest) ಮೇಲೆ ಗುಂಡಿನ ದಾಳಿ ನಡೆಸಿದೆ.

    ಮಹ್ಸಾ ಅಮಿನಿಯ ( Mahsa Amini ) ಸಾವನ್ನು ವಿರೋಧಿಸಿ ಇರಾನ್‍ನಲ್ಲಿ ಇದೀಗ 3 ತಿಂಗಳಿಗೆ ತಲುಪಿದೆ. ಇರಾನ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದರ ನಡುವೆ ಪ್ರತಿಭಟನಾಕಾರರು ಮೆಟ್ರೋ ನಿಲ್ದಾಣಗಳಲ್ಲಿ ಹಿಜಬ್‍ಗೆ ಬೆಂಕಿ ಹಚ್ಚುತ್ತಿರುವುದು ಕಂಡುಬಂದಿತು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸಿದಾಗ ಜನರು ಅಲ್ಲಿಂದ ಓಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ರೈಲಿನೊಳಗೆ ಅಧಿಕಾರಿಗಳು ಮಹಿಳೆಯರನ್ನು ಲಾಠಿಗಳಿಂದ ಹೊಡೆದಿದ್ದಾರೆ. ಘಟನೆ ವೇಳೆ ಅನೇಕ ಜನರು ಬಿದ್ದು, ತುಳಿತಕ್ಕೊಳಗಾಗಿದ್ದಾರೆ.

    ಈಗಾಗಲೇ ಇರಾನ್ ದೇಶಲ್ಲಿ ಹಿಜಬ್ ಅನ್ನು ವಿರೋಧಿಸಿ ನಿರಂತರವಾಗಿ ಅಶಾಂತಿ ಮುಂದುವರಿದಿದ್ದು, ಸರ್ಕಾರಿ ವಿರೋಧಿ ಪ್ರತಿಭಟನೆ ನಡೆಸಿರುವ ಆರೋಪದಲ್ಲಿ ಕೆಲವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಕ್ಲೆರಿಕಲ್ ಆಡಳಿತವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿರುವವರನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಮೊದಲ ಬಾರಿಗೆ ಮರಣದಂಡನೆ ವಿಧಿಸಿದೆ. ಇದನ್ನೂ ಓದಿ: ಹನುಮಂತನ ಫೋಟೋ, ದೇವಾಲಯ ಆಕಾರದ ಕೇಕ್ ಕತ್ತರಿಸಿ ಕೈ ನಾಯಕನ ಬರ್ತ್‍ಡೇ ಸೆಲೆಬ್ರೇಷನ್

    ಇರಾನ್ ರಾಜಧಾನಿ ಟೆಹರಾನ್ ನಲ್ಲಿ ತಲೆಗೆ ಹಿಜಬ್ ಸರಿಯಾಗಿ ಧರಿಸದೇ ಇದ್ದಿದ್ದಕ್ಕೆ ಮಹ್ಸಾ ಅಮಿನಿಯನ್ನು ನೈತಿಕ ಪೊಲೀಸರು ಬಂಧಿಸಿದ್ದರು. ಪೊಲೀಸ್ ಬಂಧನದ ವೇಳೆ ಮಹ್ಸಾ ಸಾವನ್ನಪ್ಪಿದ್ದಳು. ಈಕೆಗೆ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೇ ಇರಾನ್ ಸರ್ಕಾರದ ವಿರುದ್ಧ ಮಹಿಳೆಯರು, ಮಕ್ಕಳು ಬೀದಿಗೆ ಇಳಿದು ಹೋರಾಟ ಆರಂಭಿಸಿ ಮೂರು ತಿಂಗಳೂ ಕಳೆದಿವೆ. ಇದನ್ನೂ ಓದಿ: ವೈಟ್‍ಫೀಲ್ಡ್ ಮೆಟ್ರೋ ಸಂಚಾರ – ವೋಲ್ವೋ ಬಸ್ ಸಂಚಾರಕ್ಕೆ ಹೊಡೆತ

    Live Tv
    [brid partner=56869869 player=32851 video=960834 autoplay=true]

  • ಇರಾನ್‍ ಜೈಲಿನಲ್ಲಿ ಅಗ್ನಿ ಅವಘಡ- ಹಿಜಬ್‌ ವಿರೋಧಿಯ ಬೆಂಬಲಿಗರು ಸಾವು

    ಇರಾನ್‍ ಜೈಲಿನಲ್ಲಿ ಅಗ್ನಿ ಅವಘಡ- ಹಿಜಬ್‌ ವಿರೋಧಿಯ ಬೆಂಬಲಿಗರು ಸಾವು

    ತೆಹ್ರಾನ್: ಇರಾನ್‍ನ (Iran) ಕುಖ್ಯಾತ ಎವಿನ್ ಜೈಲಿನಲ್ಲಿ (Evin Prison) ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ವರು ಕೈದಿಗಳು ಸಾವನ್ನಪ್ಪಿದ್ದು, 61 ಕೈದಿಗಳು ಗಾಯಗೊಂಡಿರುವ ಘಟನೆ ನಡೆದಿದೆ.

    ಈ ಜೈಲು ರಾಜಕೀಯ ಕೈದಿಗಳಿಗೆ ಹೆಸರುವಾಸಿಯಾಗಿದೆ. ಕಳೆದ ಕೆಲವು ವಾರಗಳ ಹಿಂದೆ ಹಿಜಬ್ ಧರಿಸದೇ ಇದ್ದಿದ್ದಕ್ಕೆ 22ರ ಹರೆಯದ ಮಹ್ಸಾ ಅಮಿನಿ ( Mahsa Amini) ಹೆಸರಿನ ಯುವತಿ ನೈತಿಕ ಪೊಲೀಸ್‍ಗಿರಿಗೆ ಬಲಿಯಾಗಿದ್ದಳು. ಆಕೆ ಸಾವಿನ ವಿರುದ್ಧ ಇರಾನ್‍ನಲ್ಲಿ ಪ್ರತಿಭಟನೆ ಭುಗಿಲೆದ್ದಿತು. ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು.

    ಈ ವೇಳೆ ಕೆಲವರನ್ನು ಬಂಧಿಸಿ ಇದೇ ಜೈಲಿನಲ್ಲಿ ಇಡಲಾಗಿತ್ತು. ಆದರೆ ಬೆಂಕಿ ಅವಘಡದಿಂದಾಗಿ ನಾಲ್ವರು ಸಾವನ್ನಪ್ಪಿದ್ದು, 61 ಮಂದಿಗೆ ಗಂಭೀರ ಗಾಯವಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಿವಾಹಿತನೊಂದಿಗೆ ಓಡಿ ಹೋಗಿದ್ದಕ್ಕೆ ಕಲ್ಲೆಸೆದು ಕೊಲ್ಲುವ ಶಿಕ್ಷೆ – ತಾನೇ ನೇಣಿಗೆ ಶರಣಾದ ಅಫ್ಘಾನ್ ಮಹಿಳೆ

    ಆದರೆ ಇರಾನ್ ಮಾಧ್ಯಮವು ಎವಿನ್ ಜೈಲಿನಲ್ಲಿ ಉಂಟಾದ ಬೆಂಕಿ ಅವಘಡಕ್ಕೆ ಹಾಗೂ ಇರಾನ್‍ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕಾಂಗ್ರೆಸ್‍ನ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ, ನನಗೆ ಗೆಲ್ಲುವ ಭರವಸೆ ಇದೆ: ಶಶಿ ತರೂರ್

    Live Tv
    [brid partner=56869869 player=32851 video=960834 autoplay=true]

  • ಮಹ್ಸಾ ಅಮಿನಿ ಸಾವು ಖಂಡಿಸಿ ಪ್ರತಿಭಟನೆ – ಇರಾನ್‌ ಸರ್ಕಾರಿ ಟಿವಿ ಹ್ಯಾಕ್‌ ಮಾಡಿದ ಪ್ರತಿಭಟನಾಕಾರರು

    ಮಹ್ಸಾ ಅಮಿನಿ ಸಾವು ಖಂಡಿಸಿ ಪ್ರತಿಭಟನೆ – ಇರಾನ್‌ ಸರ್ಕಾರಿ ಟಿವಿ ಹ್ಯಾಕ್‌ ಮಾಡಿದ ಪ್ರತಿಭಟನಾಕಾರರು

    ತೆಹ್ರಾನ್: ಇರಾನ್‌ನ (Iran) ಸರ್ಕಾರಿ ದೂರದರ್ಶನವನ್ನು ಶನಿವಾರ ನೇರ ಪ್ರಸಾರದ ಸಂದರ್ಭದಲ್ಲಿ ಪ್ರತಿಭಟನಾಕಾರರು ಹ್ಯಾಕ್ ಮಾಡಿದ್ದಾರೆ. ದೇಶಾದ್ಯಂತ ಉಂಟಾಗಿರುವ ಅಶಾಂತಿಯ ನಡುವೆ ಸರ್ಕಾರದ ವಿರೋಧಿ ಸಂದೇಶವನ್ನು ಪ್ರದರ್ಶಿಸುವ ಸಲುವಾಗಿ ಪ್ರಸಾರಕ್ಕೆ ಅಡ್ಡಿಪಡಿಸಲಾಗಿದೆ.

    ಇರಾನ್‌ನ ಅರೆ-ಅಧಿಕೃತ ತಸ್ನಿಮ್ ನ್ಯೂಸ್ ಏಜೆನ್ಸಿಯು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (ಐಆರ್‌ಐಬಿ) ಅಡಿಯಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ್ಯೂಸ್ ನೆಟ್‌ವರ್ಕ್ (ಐಆರ್‌ಐಎನ್‌ಎನ್) ನಡೆಸಿದ ಸುದ್ದಿ ಪ್ರಸಾರವನ್ನು ಕ್ರಾಂತಿಕಾರಿ ವಿರೋಧಿಗಳು ಕೆಲವು ಕ್ಷಣಗಳಿಗೆ ಹ್ಯಾಕ್ ಮಾಡಿದ್ದಾರೆ. ಇದನ್ನೂ ಓದಿ: ಗುಡ್‌ನ್ಯೂಸ್ – ಭಾರತೀಯರಿಗೆ ಜರ್ಮನ್ ವೀಸಾ ಶುಲ್ಕ ಕಡಿತ

    ಹಿಜಬ್‌ ಧರಿಸದೇ ಇದ್ದಿದ್ದಕ್ಕೆ 22ರ ಹರೆಯದ ಮಹ್ಸಾ ಅಮಿನಿ (Mahsa Amini) ಹೆಸರಿನ ಯುವತಿ ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದಳು. ಆಕೆ ಸಾವಿನ ವಿರುದ್ಧ ಇರಾನ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿತು. ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು.

    ಇರಾನ್‌ನಲ್ಲಿ ಹಿಜಬ್‌ (Hijab) ಸುಟ್ಟು, ತಮ್ಮ ಜಡೆಯನ್ನು ಕತ್ತರಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಇಬ್ಬರು ಹುಡುಗಿಯರು ಸೇರಿ ಮೂವರು ಮೃತಪಟ್ಟರು. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆ ಉಡೀಸ್ -ಕ್ರಿಮಿಯಾ ಸಂಪರ್ಕ ಕಡಿತ

    Live Tv
    [brid partner=56869869 player=32851 video=960834 autoplay=true]

  • ಇರಾನ್‍ ಹಿಜಬ್ ಹೋರಾಟ – ಪೊಲೀಸರ ಗುಂಡಿಗೆ 8 ಮಂದಿ ಬಲಿ

    ಇರಾನ್‍ ಹಿಜಬ್ ಹೋರಾಟ – ಪೊಲೀಸರ ಗುಂಡಿಗೆ 8 ಮಂದಿ ಬಲಿ

    ತೆಹ್ರಾನ್: ಕಟ್ಟರ್‌ವಾದಿ ಮುಸ್ಲಿಮ್ ದೇಶ ಇರಾನ್‍ನಲ್ಲಿ (Iran) ಇದೀಗ ಕ್ರಾಂತಿಯೊಂದು ನಡೆಯುತ್ತಿದೆ. ಮಹ್ಸಾ ಅಮಿನಿ (Mahsa Amini) ಲಾಕಪ್ ಡೆತ್ ನಂತರ ಹಿಜಬ್ (Hijab) ವಿರುದ್ಧ ಸಿಡಿದಿರುವ ಮಹಿಳಾ ಲೋಕ ಅಲ್ಲಿನ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

    ಸತತ ಆರನೇ ದಿನ ಇರಾನ್‍ನ ಬಹುತೇಕ ನಗರ, ಪಟ್ಟಣಗಳಲ್ಲಿ ಮಹಿಳೆಯರ ಪ್ರತಿಭಟನೆಗಳು ಮುಂದುವರಿದಿವೆ. ಸಾವಿರ ಸಾವಿರ ಮಂದಿ ಮಹಿಳೆಯರು ಹಗಲು ರಾತ್ರಿ ಎನ್ನದೇ ಕೆರ್ಮಾನ್‍ನ ಆಜಾದಿ ವೃತ್ತದಲ್ಲಿ, ಸರ್ವಾಧಿಕಾರ ನಶಿಸಲಿ. ಹಿಜಬ್ ಕಟ್ಟುಪಾಡು ನಶಿಸಲಿ ಎಂದು ಘೋಷಣೆ ಕೂಗುತ್ತಿದ್ದಾರೆ. ಕತ್ತರಿ ಹಿಡಿದು ಕೂದಲು ಕತ್ತರಿಸಿಕೊಳ್ಳುವ ಅಭಿಯಾನವನ್ನು ಮುಂದುವರಿಸಿದ್ದಾರೆ. ಹಿಜಬ್ ಸುಟ್ಟು ಆಕ್ರೋಶ ಹೊರಹಾಕುತ್ತಿದ್ದಾರೆ. ನಾವು ಯುದ್ಧ ಭೂಮಿಯಲ್ಲಿ ಹುಟ್ಟಿದವರು. ಬನ್ನಿ ನಮ್ಮನ್ನು ಎದುರಿಸಿ ಎಂದು ಸರ್ಕಾರಕ್ಕೆ ಸವಾಲು ಹಾಕುತ್ತಿದ್ದಾರೆ. ಪ್ರತಿಭಟನೆ ದಮನಿಸಲು ರೈಸಿ ಸರ್ಕಾರ ಬಲಪ್ರಯೋಗ ಮಾಡುತ್ತಿದೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ. ಈವರೆಗೂ ಪೊಲೀಸರ ಗುಂಡಿಗೆ ದೇಶದ ವಿವಿಧೆಡೆ 8 ಮಂದಿ ಬಲಿ ಆಗಿದ್ದಾರೆ. ಪ್ರತಿಭಟನಾಕಾರರು ಮಾತ್ರ ಹಿಂದೆ ಸರಿಯಲು ಸಿದ್ಧರಿಲ್ಲ. ಇದು ಇರಾನ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದನ್ನೂ ಓದಿ: ಹಿಂದೂ, ಮುಸ್ಲಿಮರು ಸಹೋದರ, ಸಹೋದರಿಯರಂತೆ ಇದ್ದೇವೆ- ಬ್ರಿಟನ್‌ನಲ್ಲಿ ಒಗ್ಗಟ್ಟಿನ ಮಂತ್ರ

    ಇತ್ತ ಭಾರತದಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಇವತ್ತು ಕೂಡ ಹಿಜಬ್ ವಿಚಾರಣೆ ನಡೀತು. ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರೆಲ್ ನಟರಾಜ್, ಶಾಲೆಗಳಲ್ಲಿ ಧರ್ಮದ ಆಧಾರದ ಮೇಲೆ ವರ್ಗೀಕರಿಸಲು ಅನುಮತಿಸಲಾಗುವುದಿಲ್ಲ. ಏಕತೆಯನ್ನು ಉತ್ತೇಜಿಸಲು ಹಿಜಬ್ ನಿಷೇಧಿಸಿ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ. ಇದರ ವಿರುದ್ಧ ಯಾರೂ ದೂರು ನೀಡಲು ಸಾಧ್ಯವಿಲ್ಲ ಎಂದರು. ಬಳಿಕ ವಾದಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಹಿಜಬ್ ಕಡ್ಡಾಯ ಅಂತಾ ಕುರಾನ್ ಹೇಳಿಲ್ಲ. ಹಲವರು ಹಿಜಬ್ ಧರಿಸಲ್ಲ. ಹಿಜಬ್ ಧರಿಸುವುದು ಧಾರ್ಮಿಕ ವಿಚಾರವೇ ಆಗಿರಬಹುದು. ಆದ್ರೆ ಅದು ಧರ್ಮಕ್ಕೆ ಅತ್ಯಗತ್ಯವೇ? ಎಂದರೆ ಇಲ್ಲ ಎಂದು ಹೈಕೋರ್ಟ್ ಹೇಳಿದೆ ಎಂದು ವಾದ ಮಂಡಿಸಿದ್ರು. ನಾಳೆಯೂ ವಿಚಾರಣೆ ಮುಂದುವರಿಯಲಿದೆ. ಇದನ್ನೂ ಓದಿ: ಸೇನೆಯನ್ನು ಭಾಗಶಃ ಸಜ್ಜುಗೊಳಿಸಿ – ಅಣ್ವಸ್ತ್ರ ಬಳಕೆಯ ಸುಳಿವು ನೀಡಿದ ಪುಟಿನ್

    Live Tv
    [brid partner=56869869 player=32851 video=960834 autoplay=true]