Tag: ಮಹೇಶ್ ಮಂಜ್ರೇಕರ್

  • ದರ್ಶನ್ ಸಿನಿಮಾದಲ್ಲಿ ಬಾಲಿವುಡ್ ನಟ ಮಹೇಶ್ ಮಂಜ್ರೇಕರ್

    ದರ್ಶನ್ ಸಿನಿಮಾದಲ್ಲಿ ಬಾಲಿವುಡ್ ನಟ ಮಹೇಶ್ ಮಂಜ್ರೇಕರ್

    ಬಾಲಿವುಡ್ ನ ಹೆಸರಾಂತ ಹಿರಿಯ ನಟ ಮಹೇಶ್ ಮಂಜ್ರೇಕರ್ (Mahesh Manjrekar) ಬರೋಬ್ಬರಿ 19 ವರ್ಷಗಳ ನಂತರ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಿದ್ದಾರೆ. ಈ ಹಿಂದೆ ಅವರು ಎನ್ ಕೌಂಟರ್ ದಯಾನಾಯಕ ಸಿನಿಮಾದಲ್ಲಿ ಪಾತ್ರ ಮಾಡಿದ್ದರು. ಈಗ ದರ್ಶನ್ ನಟನೆಯ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

    ಡೆವಿಲ್ ಈಗಾಗಲೇ ಮೊದಲನೇ ಹಂತದ ಚಿತ್ರೀಕರಣ ಮುಗಿಸಿದೆ. ಈ ಸಮಯದಲ್ಲೇ ನಟ ದರ್ಶನ್ (Darshan) ಅವರ ಕೈಗೆ ಏಟಾಗಿತ್ತು. ಈಗ ಶಸ್ತ್ರ ಚಿಕಿತ್ಸೆ ಪಡೆದಿರುವ ದರ್ಶನ್, ಒಂದು ತಿಂಗಳ ವಿಶ್ರಾಂತಿ ಪಡೆದುಕೊಳ್ಳಬೇಕಿದೆ. ಹಾಗಾಗಿ ದರ್ಶನ್ ಇಲ್ಲದ ದೃಶ್ಯಗಳನ್ನು ಚಿತ್ರೀಕರಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಈಗಾಗಲೇ ‘ಡೆವಿಲ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡ್ತಿದೆ. ದಚ್ಚು ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಇದೊಂದು ಸರ್ಪ್ರೈಸ್ ಗಿಫ್ಟ್ ಆಗಿತ್ತು. ದರ್ಶನ್ ‘ಡೆವಿಲ್’ನಲ್ಲಿ (Devil Film) ವಿಭಿನ್ನ ಲುಕ್‌ನಲ್ಲಿ ಕಾಣಿಸ್ಕೊಂಡಿದ್ದಾರೆ.

    ದರ್ಶನ್ ಹುಟ್ಟುಹಬ್ಬದ ದಿನವೇ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಯ್ತು. ಅಬ್ಬರಿಸುವ ಡೈಲಾಗ್ ಮೂಲಕ ದಚ್ಚು ಎಂಟ್ರಿ ಬಹಳ ಕುತೂಹಲಕಾರಿಯಾಗಿತ್ತು. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು’ ಎಂಬ ವಿಭಿನ್ನ ಡೈಲಾಗ್ ಹೇಳುವ ಮೂಲಕ ದರ್ಶನ್ ಉಗ್ರವಾಗಿ ಕಾಣಿಸಿಕೊಂಡಿದ್ದಾರೆ.

     

    ಮಿಲನ ಪ್ರಕಾಶ್ (Milana Prakash) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

  • ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ

    ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ

    ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಜೊತೆ ನಟಿಸಲು ನನಗೆ ಇಷ್ಟವಿರಲಿಲ್ಲ ಎಂದು ಸಲ್ಲು ಸೋದರ ಮಾವ ಆಯುಷ್ ಶರ್ಮಾ ಮಾಧ್ಯಮಗಳ ಮುಂದೆ ಹೇಳಿಕೊಂಡರು.

    ಸಲ್ಮಾನ್ ಖಾನ್ ಮತ್ತು ಆಯುಷ್ ಶರ್ಮಾ ಅವರು ‘ಅಂತಿಮ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು, ಈ ಚಿತ್ರದ ಪ್ರಮೋಷನ್ ಗೆ ಬಂದಾಗ ಶರ್ಮಾ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಲು ನಾನು ಆರಂಭದಲ್ಲಿ ಹಿಂಜರಿದಿದ್ದೆ. ನನಗೆ ಮೊದಲು ಆತಂಕವಿತ್ತು. ಏಕೆಂದರೆ ಸಲ್ಮಾನ್ ಅವರಿಗೆ ಚಿತ್ರದಲ್ಲಿ ನಾನು ಹೊಡೆಯುವ ಸನ್ನಿವೇಶವೆಲ್ಲವಿತ್ತು. ಇದನ್ನು ನಾನು ತೀವ್ರವಾಗಿ ವಿರೋಧಿಸಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಿದ ಪೊಲೀಸ್ – ವೀಡಿಯೋ ವೈರಲ್

    ಸಲ್ಮಾನ್ ಭಾಯ್‍ಯನ್ನು ಹೊಡೆಯಲು ನಾನು ಕಲ್ಪನೆಯನ್ನು ಸಹ ಮಾಡಿಕೊಂಡಿರಲಿಲ್ಲ. ಆದರೆ ವೃತ್ತಿಜೀವನದಲ್ಲಿ ಅದು ಸರಿಯಿಲ್ಲ ಎಂದು ನನಗೆ ಅನಿಸಿತು. ಅದರಲ್ಲಿಯೂ ನನಗೆ ‘ಸ್ವಜನಪಕ್ಷಪಾತ’ ದ ಬಗ್ಗೆ ತುಂಬಾ ಭಯವಿತ್ತು ಎಂದು ತಮ್ಮ ಆತಂಕದ ಬಗ್ಗೆ ಹೇಳಿಕೊಂಡರು.

    ‘ಆರಂಭದಲ್ಲಿ, ಸಲ್ಮಾನ್ ಭಾಯ್ ‘ಅಂತಿಮ್’ ನಲ್ಲಿ ಇರುವುದನ್ನು ನಾನು ವಿರೋಧಿಸಿದ್ದೆ. ಈ ಚಿತ್ರ ಮಾಡದಂತೆ ನನ್ನ ಕುಟುಂಬವು ಮನವೊಲಿಸಿತ್ತು. ಇದಕ್ಕೆ ಮುಖ್ಯ ಕಾರಣ ನನ್ನ ‘ಲವ್‍ಯಾತ್ರಿ’ ಚಿತ್ರಕ್ಕಿಂತ ಈ ಚಿತ್ರದಲ್ಲಿ ನನ್ನ ಪಾತ್ರ ಭಿನ್ನವಾಗಿದ್ದು, ಸಲ್ಲಾನ್ ಅವರ ಉಪಸ್ಥಿತಿಯಲ್ಲಿ ನಾನು ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂಬ ಧೈರ್ಯ ನನಗೆ ಇರಲಿಲ್ಲ’ ಎಂದು ಹೇಳಿದರು.

    ‘ಅಂತಿಮ್’ ಒಂದು ಹೈ-ಆಕ್ಟೇನ್ ಆಕ್ಷನ್ ಚಿತ್ರವಾಗಿದೆ. ಈ ಸಿನಿಮಾಗೆ ಮಹೇಶ್ ಮಂಜ್ರೇಕರ್ ಆಕ್ಷನ್ ಕಟ್ ಹೇಳುತ್ತಿದ್ದು, ನವೆಂಬರ್ 26 ರಂದು ಚಿತ್ರ ತೆರೆಗೆ ಬರಲಿದೆ. ಈ ಚಿತ್ರಕ್ಕಾಗಿ ಸಲ್ಲು ಅಭಿಮಾನಿಗಳು ಕಾಯುತ್ತಿದ್ದು, ಬಹುನಿರೀಕ್ಷಿತ ಚಿತ್ರಗಳಲ್ಲಿ ಇದು ಒಂದಾಗಿದೆ. ಇದನ್ನೂ ಓದಿ: ಉಗ್ರಗಾಮಿ ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿ

    ಆಯುಷ್ ಶರ್ಮಾ 2018 ರ ‘ಲವ್‍ಯಾತ್ರಿ’ ಚಿತ್ರದ ಮೂಲಕ ಬಾಲಿವುಡ್‍ಗೆ ಕಾಲಿಟ್ಟಿದ್ದು, ಸಲ್ಮಾನ್ ತಂಗಿ ಅರ್ಪಿತಾ ಖಾನ್ ಅವರ ಪತಿಯಾಗಿದ್ದಾರೆ. ಪ್ರಸ್ತುತ ಸಲ್ಲು ನಿರ್ಮಿಸುತ್ತಿರುವ ‘ಅಂತಿಮ್’ ಸಿನಿಮಾದಲ್ಲಿ ನಟಿಸುತ್ತಿರುವ ಇವರು, ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.