Tag: ಮಹೇಶ್ ಬಾಬು

  • ಪ್ರೇಮ್ ಪುತ್ರಿ 2ನೇ ಸಿನಿಮಾ: ಸ್ಮೈಲ್ ಗುರು ರಕ್ಷಿತ್ ಗೆ ಅಮೃತಾ ನಾಯಕಿ

    ಪ್ರೇಮ್ ಪುತ್ರಿ 2ನೇ ಸಿನಿಮಾ: ಸ್ಮೈಲ್ ಗುರು ರಕ್ಷಿತ್ ಗೆ ಅಮೃತಾ ನಾಯಕಿ

    ಟಗರು ಪಲ್ಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟಿದ್ದ ಲವ್ಲಿ ಸ್ಟಾರ್ ಪ್ರೇಮ್ ಮುದ್ದಿನ ಗೊಂಬೆ ಅಮೃತಾ ಪ್ರೇಮ್. ಚೊಚ್ಚಲ ಚಿತ್ರದಲ್ಲಿಯೇ ಭರವಸೆ ಮೂಡಿಸಿದ್ದ ಈ ಸೂರ್ಯಕಾಂತಿ ಮುಂದಿನ ಸಿನಿಮಾ ಯಾವುದು ಎಂದು ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಅಮೃತಾ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅಳೆದು ತೂಗಿ ಕಥೆ ಆಯ್ಕೆ ಮಾಡಿಕೊಂಡು ನಿರ್ದೇಶಕ ಮಹೇಶ್ ಬಾಬು ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಸಮ್ಮತಿ ಸೂಚಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಸುಸಂದರ್ಭದಲ್ಲಿ ಚಿತ್ರತಂಡ ಅಮೃತಾ ಪ್ರೇಮ್ ಅವರನ್ನು ಸ್ವಾಗತಿಸಿದೆ. ಸ್ಮೈಲ್ ಗುರು ರಕ್ಷಿತ್ ಗೆ ಜೋಡಿಯಾಗಿ ಅಮೃತಾ ಸಾಥ್‌ ಕೊಡುತ್ತಿದ್ದಾರೆ. ನಿರ್ದೇಶಕ ಮಹೇಶ್ ಬಾಬು ಸಾರಥ್ಯದಲ್ಲಿ ನಡೆದ 15 ದಿನಗಳ ವರ್ಕ್ ಶಾಪ್ ನಲ್ಲಿ ನಾಯಕ ರಕ್ಷಿತ್, ನಾಯಕಿ ಅಮೃತಾ ಪ್ರೇಮ್ ಸೇರಿದಂತೆ ಇಡೀ ತಂಡ ಭಾಗಿಯಾಗಿದೆ. ಇನ್ನೂ ಅಮೃತಾ ಪ್ರೇಮ್ ತಮ್ಮ ಪಾತ್ರಕ್ಕೆ ಬೇಕಾದ ಕಸರತ್ತಿನೊಂದಿಗೆ ಶೀಘ್ರದಲ್ಲಿಯೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

    ಅಮೃತಾ ಪ್ರೇಮ್ (Amrita Prem) ನಾಯಕಿಯಾಗಿ ಅಭಿನಯಿಸಿದ್ದ ಟಗರು ಪಲ್ಯ ಸಿನಿಮಾ ವಿಶೇಷವಾಗಿಯೇ ಇತ್ತು. ಹಳ್ಳಿ ಹುಡುಗಿಯಾಗಿಯೆ ಅಮೃತಾ ಪ್ರೇಮ್ ತುಂಬಾನೆ ಹೆಚ್ಚು ಗಮನ ಸೆಳೆದಿದ್ದರು. ಮೊದಲ ಚಿತ್ರದಲ್ಲಿಯೇ ದೊಡ್ಡ ಕಲಾವಿದರ ಮುಂದೆ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.  ಚಿತ್ರದ ಮೂಲಕವೇ ಸೌತ್ ಫಿಲ್ಮಂ ಫೇರ್ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ. ದಕ್ಷಿಣದ ವಿವಿಧ ಭಾಷೆಯ ಸಿನಿಮಾಗಳಿಗೆ ವಿವಿಧ ವಿಭಾಗದಲ್ಲಿಯೇ ಪ್ರಶಸ್ತಿಯನ್ನ ಕೊಡಲಾಗುತ್ತದೆ. ಆ ರೀತಿ ಕನ್ನಡದ ಟಗರು ಪಲ್ಯದ ಚಿತ್ರದಲ್ಲಿ ನಟಿಸಿರೋ ನಟಿ ಅಮೃತಾ ಪ್ರೇಮ್, ಅತ್ಯುತ್ತಮ ಡೆಬ್ಯು ಪ್ರಶಸ್ತಿ ಪಡೆದುಕೊಂಡಿದ್ದಾರೆ.

    ಕಿರುಚಿತ್ರ, ಧಾರಾವಾಹಿ, ರಿಯಾಲಿಟಿ ಶೋ ಅಂತಿದ್ದ ಸ್ಮೈಲ್ ಗುರು ರಕ್ಷಿತ್ ನಾಯಕನಾಗಿ ಇಂಡಸ್ಟ್ರಿಗೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರ ಚೊಚ್ಚಲ ಸಿನಿಮಾಗೆ ‘ಆಕಾಶ್’, ‘ಅರಸು’ ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮಹೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ.

    ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾ ಕೊಡಬೇಕು ಎಂಬ ಉದ್ದೇಶದಿಂದ ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆ.ಎಸ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದರೆ, ಸತ್ಯ ಅವರು ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

  • ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಹೇಶ್ ಬಾಬು ಪತ್ನಿ

    ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಹೇಶ್ ಬಾಬು ಪತ್ನಿ

    ತೆಲುಗು ನಟ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ (Namrata Shirodkar) ಅವರು ಮಕ್ಕಳೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವೇಳೆ, ನಟಿಯ ಜೊತೆಗಿನ ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:ಲಿಪ್‌ಲಾಕ್ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ ದಂಪತಿ

    ತಿರುಪತಿ ಬಾಲಾಜಿ ದೇವರ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಕ್ಕಳಾದ ಗೌತಮ್, ಸಿತಾರಾ ಮತ್ತು ಆಪ್ತರ ಜೊತೆ ತಿರುಪತಿ ಸನ್ನಿಧಿಯಲ್ಲಿರುವ ಸುಂದರ ಫೋಟೋಗಳನ್ನು ಶೇರ್ ಮಾಡಿ ನಟಿ ನಮ್ರತಾ ಶಿರೋಡ್ಕರ್ ಸಂಭ್ರಮಿಸಿದ್ದಾರೆ.

     

    View this post on Instagram

     

    A post shared by Namrata Shirodkar (@namratashirodkar)


    ಅಂದಹಾಗೆ, ಸದ್ಯದಲ್ಲೇ ರಾಜಮೌಳಿ (Rajamouli) ಜೊತೆ ಮಹೇಶ್‌ ಬಾಬು (Mahesh Babu) ಸಿನಿಮಾ ಶುರುವಾಗಲಿದೆ. ಹೊಸ ಆರಂಭಕ್ಕೂ ಮುನ್ನ ನಟನ ಪತ್ನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    ಇನ್ನೂ ತೆಲುಗಿನ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರು ನಟಿ, ನಿರ್ಮಾಪಕಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ‘ಚೋರ ಚಿತ್ತ ಚೋರ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಹುಭಾಷಾ ನಟಿಯಾಗಿ ಗಮನ ಸೆಳೆದಿದ್ದಾರೆ.

  • ಪ್ರಿನ್ಸ್ ಫ್ಯಾನ್ಸ್‌ಗೆ ಸಿಹಿಸುದ್ದಿ- ರಾಜಮೌಳಿ ಜೊತೆಗಿನ ಮಹೇಶ್ ಬಾಬು ಚಿತ್ರಕ್ಕೆ ಮುಹೂರ್ತ ಫಿಕ್ಸ್

    ಪ್ರಿನ್ಸ್ ಫ್ಯಾನ್ಸ್‌ಗೆ ಸಿಹಿಸುದ್ದಿ- ರಾಜಮೌಳಿ ಜೊತೆಗಿನ ಮಹೇಶ್ ಬಾಬು ಚಿತ್ರಕ್ಕೆ ಮುಹೂರ್ತ ಫಿಕ್ಸ್

    ‘ಗುಂಟೂರು ಖಾರಂ’ ಸಿನಿಮಾದ ಸಕ್ಸಸ್ ನಂತರ ಮಹೇಶ್ ಬಾಬು (Mahesh Babu) ಅವರು ‘ಬಾಹುಬಲಿ’ (Bahubali) ಖ್ಯಾತಿಯ ರಾಜಮೌಳಿ (Rajamouli) ಜೊತೆ ಕೈಜೋಡಿಸಿದ್ದಾರೆ. ಇದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇಬ್ಬರ ಕಾಂಬಿನೇಷನ್ ಸಿನಿಮಾ ಶುರುವಾಗೋದು ಯಾವಾಗ ಎಂಬ ಪ್ರಶ್ನೆಗೆ ಈಗ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ:ಸಂದೇಶ್ ಪ್ರೊಡಕ್ಷನ್ಸ್ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್

    ರಾಜಮೌಳಿ ಜೊತೆಗಿನ ಸಿನಿಮಾಗಾಗಿ ಮಹೇಶ್ ಬಾಬು ಭರ್ಜರಿ ಸಿದ್ಧತೆ ಮಾಡಿಕೊಳ್ತಿದ್ದಾರೆ. ಸಿನಿಮಾಗಾಗಿ ಕೆಲ ತಿಂಗಳುಗಳ ಹಿಂದೆ ಮಹೇಶ್ ಬಾಬು ಜರ್ಮನಿಗೆ ಹೋಗಿದ್ದರು. ಈಗಲೂ ಈ ಚಿತ್ರದ ತಯಾರಿ ಮುಗಿದಿಲ್ಲ. ಎಲ್ಲಾ ಪಕ್ಕಾ ಆದ್ಮೇಲೆಯೇ ಅಖಾಡಕ್ಕೆ ಇಳಿಯಲು ಮಹೇಶ್ ಬಾಬು ನಿರ್ಧರಿಸಿದ್ದಾರೆ. ಹಾಗಾಗಿ ಆಗಸ್ಟ್ ವೇಳೆಗೆ ಸಿನಿಮಾ ಸೆಟ್ಟೇರಲಿದೆ. ಮುಂದಿನ ವರ್ಷ ಚಿತ್ರ ರಿಲೀಸ್ ಆಗಲಿದೆ.

    ಮೂಲಗಳ ಪ್ರಕಾರ, ಈ ಸಿನಿಮಾ ಹೆಚ್ಚು ಕಮ್ಮಿ ಇಪ್ಪತ್ತು ದೇಶಗಳಲ್ಲಿ ಇದರ ಶೂಟಿಂಗ್ ನಡೆಯಲಿದೆ. ಬಹುತೇಕ ಕಾಡಿನಲ್ಲಿ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಅದಷ್ಟೇ ಅಲ್ಲ, 8 ಗೆಟಪ್‌ನಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ. ಪಾತ್ರ ಹೀಗೆ ಬರಬೇಕು ಅದಕ್ಕೆ ಏನೆಲ್ಲಾ ಮಾಡಬೇಕೋ ಅದರ ತಯಾರಿಯಲ್ಲಿದ್ದಾರೆ. ಅದು ಎಲ್ಲೆಲ್ಲಿ ಎನ್ನುವುದು ನಿಗೂಢ. ಹೀಗಾಗಿ ಮಹೇಶ್ ಬಾಬು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದಾರೆ. ಅದಕ್ಕೆ ಏನೇನು ಮಸಾಲೆ ಬೇಕು ರಾಜಮೌಳಿ ತುಂಬಿದ್ದಾರೆ. ಭರ್ತಿ ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇಷ್ಟು ಕೋಟಿ ಖರ್ಚು ಮಾಡುತ್ತಿರುವುದು ಇದೇ ಮೊದಲು. ಗ್ಲೋಬಲ್ ಸಿನಿಮಾ ಎನ್ನುವ ಹೆಗ್ಗಳಿಕೆ ಕೂಡ ಇದೆ. ಇದರಲ್ಲಿ ಹೀರೋ ಬಿಟ್ಟರೆ ಇನ್ಯಾರ ಹೆಸರೂ ಗೊತ್ತಾಗಿಲ್ಲ. ಅದಕ್ಕೂ ಅಂತಿಮ ತೆರೆ ಬೀಳುವ ದಿನ ದೂರ ಇಲ್ಲ.

  • ಸ್ಮೈಲ್ ಗುರು ರಕ್ಷಿತ್ ಚೊಚ್ಚಲ ಚಿತ್ರಕ್ಕೆ ಅನುರಾಗ್, ಮಿಥುನ್ ಸಾಥ್

    ಸ್ಮೈಲ್ ಗುರು ರಕ್ಷಿತ್ ಚೊಚ್ಚಲ ಚಿತ್ರಕ್ಕೆ ಅನುರಾಗ್, ಮಿಥುನ್ ಸಾಥ್

    ಸಿನಿಮಾ ನಿರ್ಮಾಣವೆಂದರೇನೇ ಅದೊಂದು ಉದ್ಯಮ. ಬರೀಯ ಲಾಭದ ದೃಷ್ಟಿಯಿಂದ, ಕೇವಲ ಬ್ಯುಸಿನೆಸ್‌ನ ಭಾಗವಾಗಿಯಷ್ಟೇ ಸಿನಿಮಾ ನಿರ್ಮಾಣ ಮಾಡುವವರ ಸಂಖ್ಯೆ ಸಾಕಷ್ಟಿದೆ. ಅವರ ನಡುವಲ್ಲಿಯೇ ಬಹಳ ವರ್ಷಗಳ ಸಿನಿಮಾ ಕನಸನ್ನು ಬಚ್ಚಿಟ್ಟುಕೊಂಡು, ಅಪ್ಪಟ ಕಲಾ ಪ್ರೇಮದೊಂದಿಗೆ ನಿರ್ಮಾಣ ಮಾಡುವವರೂ ಇದ್ದಾರೆ. ಅಂಥವರ ಸಾಲಿಗೆ ಸೇರ್ಪಡೆಯಾಗಬಲ್ಲ ಅನುರಾಗ್ ಆರ್ ಹಾಗೂ ಮಿಥುನ್‌ ಕೆಎಸ್.

    ಎ ಕ್ಲಾಸ್ ರಿಯಲ್ ಎಟರ್ಸ್ಸ್  ಸಂಸ್ಥಾಪರಾಗಿರುವ ಅನುರಾಗ್ ಆರ್ ಅತೀವ ಸಿನಿಮಾ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಮೂಲತಃ ಬೆಂಗಳೂರಿನವರಾಗಿರುವ ಅನುರಾಗ್ ಸಿನಿಮಾ ಮೇಲಿನ ಒಲವು ಅವರನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದಿದೆ. ಈ ಮೂಲಕ ಚಿತ್ರರಂಗಕ್ಕೆ ಓರ್ವ ಸದಭಿರುಚಿ ನಿರ್ಮಾಪಕರ ಆಗಮನವಾಗುತ್ತಿದೆ. ಒಂದೊಳ್ಳೆ‌ ಚಿತ್ರ ನಿರ್ಮಾಣ ಮಾಡುತ್ತಿರುವ ಖುಷಿ ಅವರಲ್ಲಿದೆ. ಮಹೇಶ್ ಬಾಬುರಂತಹ ದಿಗ್ಗಜ ನಿರ್ದೇಶಕರ ಜೊತೆ ಅವರೀಗ ಕೈ ಜೋಡಿಸಿದ್ದಾರೆ. ಎ ಕ್ಲಾಸ್ ಸಿನಿ ಫಿಲ್ಮಂಸ್ ಹಾಗೂ ಎಂಎಂಎಂ ಪಿಕ್ಚರ್ಸ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

    ದಕ್ಷಿಣ ಭಾರತ ಪ್ರತಿಷ್ಠಿತ ಸ್ಟ್ಯಾಂಡಿ ಮೇಕರ್ಸ್ಸ್ ಎಂಎಂಎಂ ಗ್ರೂಪ್ಸ್‌ನ ಒಡೆಯ ಮಿಥುನ್ ಕೆ.ಎಸ್ ಕೂಡ ಅನುರಾಗ್‌ಗೆ ಸಾಥ್ ಕೊಡುತ್ತಿದ್ದಾರೆ. ಎಂಎಂಎಂ ಪಿಕ್ಚರ್ಸ್ ಮೂಲಕ ಮಿಥುನ್ ಚಿತ್ರ ನಿರ್ಮಾಣದಲ್ಲಿ ಅವರು ಅನುರಾಗ್ ಜೊತೆ ಕೈ ಜೋಡಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡಿ ಅನುಭವವಿರುವ ಮಿಥುನ್ ಈಗ ಚಿತ್ರ‌ ನಿರ್ಮಾಣಕ್ಕಿಳಿದಿದ್ದಾರೆ.

    ಕಿರುಚಿತ್ರ, ಧಾರಾವಾಹಿ, ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಸ್ಮೈಲ್ ಗುರು ರಕ್ಷಿತ್ (Smile Guru Rakshit) ಈಗ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಇವರ ಚೊಚ್ಚಲ ಸಿನಿಮಾಗೆ ‘ಆಕಾಶ್’, ‘ಅರಸು’ ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮಹೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ವೀರ ಮದಕರಿಯಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ನಾಯಕಿಯಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.  ಮಹೇಶ್ ಬಾಬು ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಚೊಚ್ಚಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಕ್ಷಿತ್ ಅದಕ್ಕೆ ಬೇಕಾಗಿರೋ ಸಂಪೂರ್ಣ ತಯಾರಿಯನ್ನು ಮಾಡಿಕೊಂಡಿದ್ದಾರೆ.  ಶೀಘ್ರದಲ್ಲೇ ಟೈಟಲ್ ರಿವೀಲ್ ಮಾಡಲಿರುವ ಚಿತ್ರತಂಡ, ಮತ್ತೊಬ್ಬ ಹೀರೋಯಿನ್ ಇಂಟ್ರೂಡ್ಷನ್ ಮಾಡಲಿದ್ದಾರೆ. ಜೂನ್ 15ರಿಂದ ಶೂಟಿಂಗ್ ಶುರು ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.

  • ರಾಜಮೌಳಿ, ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್

    ರಾಜಮೌಳಿ, ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್

    ಮಾಲಿವುಡ್ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran)  ಸದ್ಯ ‘ಸಲಾರ್’, ‘ಆಡುಜೀವಿತಂ’ ಸಿನಿಮಾದ ಮೂಲಕ ಜನರ ಮನಗೆದ್ದಿದ್ದಾರೆ. ಹೀಗಿರುವಾಗ ಅವರ ಮುಂದಿನ ಸಿನಿಮಾದ ಅಪ್‌ಡೇಟ್‌ವೊಂದು ಸಿಕ್ಕಿದೆ. ತೆಲುಗಿನ ನಟ ಮಹೇಶ್ ಬಾಬು ಮುಂಬರುವ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಅಬ್ಬರಿಸಲಿದ್ದಾರೆ.

    ಮಲಯಾಳಂ ಸಿನಿಮಾರಂಗದ ಪ್ರತಿಭಾನ್ವಿತ ನಟ ಪೃಥ್ವಿರಾಜ್ ಸುಕುಮಾರನ್ ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುವ ಕಲಾವಿದ. ವಿಭಿನ್ನ ಕಂಟೆಂಟ್‌ಗಳ ಮೂಲಕ ಪೃಥ್ವಿರಾಜ್ ಸುಕುಮಾರನ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗಾಗಿ ಮಲಯಾಳಂನಲ್ಲಿ ಸೀಮಿತವಾಗದೇ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಗಮನ ಸೆಳೆದಿದ್ದಾರೆ. ಈಗ ಮಹೇಶ್ ಬಾಬು ಜೊತೆಗಿನ ಸಿನಿಮಾ ಮೂಲಕ ‘ಸಲಾರ್’ ನಟ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಸಣ್ಣ ವಯಸ್ಸಿನಲ್ಲಿಯೇ ನನ್ನ ಫೋಟೋ ಅಶ್ಲೀಲ ವೆಬ್‌ಸೈಟ್‌ಗೆ ಹಾಕಿದ್ರು ಎಂದ ಜಾನ್ವಿ ಕಪೂರ್

    ಮಹೇಶ್ ಬಾಬು ನಟನೆಯ 29ನೇ ಚಿತ್ರಕ್ಕೆ ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಪೃಥ್ವಿರಾಜ್‌ರನ್ನು ಚಿತ್ರತಂಡ ಸಂಪರ್ಕಿಸಿದೆ. ಮಹೇಶ್ ಬಾಬು ಮುಂದೆ ವಿಲನ್ ಆಗಿ ನಟಿಸಲು ಪೃಥ್ವಿರಾಜ್‌ಗೆ ಚಾನ್ಸ್ ಸಿಕ್ಕಿದೆ. ಎಂದೂ ಕಾಣಿಸಿಕೊಂಡಿರದ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಿದೆ.

    ಒಂದು ವೇಳೆ, ಈ ಸುದ್ದಿ ನಿಜವಾಗಿದ್ದಲ್ಲಿ ಪೃಥ್ವಿರಾಜ್ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ಕೊಡೋದು ಗ್ಯಾರಂಟಿ.

  • ಬೆಂಗಳೂರಿನಲ್ಲಿ ಹೂಡಿಕೆ ಮಾಡಿದ ತೆಲುಗಿನ ಸ್ಟಾರ್ ನಟ

    ಬೆಂಗಳೂರಿನಲ್ಲಿ ಹೂಡಿಕೆ ಮಾಡಿದ ತೆಲುಗಿನ ಸ್ಟಾರ್ ನಟ

    ತೆಲುಗಿನ ಬಹುತೇಕ ಖ್ಯಾತ ನಟರು ತಾವು ದುಡಿದು ಬಂದ ಹಣವನ್ನು ಸಿನಿಮಾ ರಂಗದಲ್ಲೇ ವಿನಿಯೋಗಿಸುವ ಮೂಲಕ ಮಾದರಿಯಾಗಿದ್ದಾರೆ. ಕೇವಲ ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿದ್ದವರು, ಇದೀಗ ಗಡಿ ದಾಟಿ ಕರ್ನಾಟಕಕ್ಕೂ ಹೆಜ್ಜೆ ಇಟ್ಟಿದ್ದಾರೆ. ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಕನ್ನಡ ಚಿತ್ರೋದ್ಯಮದಲ್ಲಿ ಹಣ ಹೂಡಿದ್ದಾರೆ.

    ಬೆಂಗಳೂರಿನ ಸಿನಿಮಾದ ಏರಿಯಾ ಎಂದೇ ಖ್ಯಾತವಾಗಿರುವ ಗಾಂಧಿನಗರದ ಪ್ರಮುಖ ರಸ್ತೆಯಲ್ಲಿ ಮಾಲ್ ವೊಂದನ್ನು ನಿರ್ಮಾಣ ಮಾಡಿದ್ದು, ಅಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ನಲ್ಲಿ ಮಹೇಶ್ ಬಾಬು ಹಣ ಹೂಡಿದ್ದಾರೆ. ಈಗಾಗಲೇ ಮಹೇಶ್ ಬಾಬು ಹೈದರಾಬಾದ್ ನಲ್ಲೂ ಈ ಬ್ಯುಸಿನೆಸ್ ಆರಂಭಿಸಿದ್ದಾರೆ.

     

    ನಿನ್ನೆಯಷ್ಟೇ ಥಿಯೇಟರ್ ಪೂಜೆಯನ್ನು ಮಾಡಿದ್ದು, ಕನ್ನಡದ ಹೆಸರಾಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಹಿಂದೆ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲೇ ಈ ಕಟ್ಟಡ ತಲೆಯೆತ್ತಿದೆ. ಇನ್ನೂ ಕೆಲವೇ ತಿಂಗಳಲ್ಲಿ ಮಲ್ಟಿಪ್ಲೆಕ್ಸ್ ತನ್ನ ಕಾರ್ಯಾರಂಭ ಮಾಡಲಿದೆ.

  • ‘ವೀರ ಮದಕರಿ’ ಬಾಲನಟಿ ಈಗ ನಾಯಕಿ- ಮಹೇಶ್ ಬಾಬು, ರಕ್ಷಿತ್ ಸಿನಿಮಾದಲ್ಲಿ ಜೆರುಶಾ

    ‘ವೀರ ಮದಕರಿ’ ಬಾಲನಟಿ ಈಗ ನಾಯಕಿ- ಮಹೇಶ್ ಬಾಬು, ರಕ್ಷಿತ್ ಸಿನಿಮಾದಲ್ಲಿ ಜೆರುಶಾ

    ಹೇಶ್ ಬಾಬು (Mahesh Babu) ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ. ಆಕಾಶ್, ಅರಸು, ಪರಮೇಶ ಪಾನ್ ವಾಲ ಮುಂತಾದ ಸ್ಟಾರ್ ಸಿನಿಮಾಗಳನ್ನು ಮಾಡಿರುವ ಅವರು, ಈಗ ಮತ್ತೊಂದು ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅಪರೂಪ ಎಂಬ ಸಿನಿಮಾ ಮೂಲಕ ಯುವ ಪ್ರತಿಭೆಗಳನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದ ಅವರೀಗ ಸ್ಮೈಲ್ ಗುರು ರಕ್ಷಿತ್ ಅನ್ನು (Smile Guru Rakshith) ನಾಯಕನಾಗಿ ಕನ್ನಡ ಸಿನಿಮಾ ಪ್ರೇಮಿಗಳ ಎದುರು ತರುತ್ತಿದ್ದಾರೆ.

    ಮಹೇಶ್ ಬಾಬು, ರಕ್ಷಿತ್ ಹೊಸ ಸಿನಿಮಾ ಈಗಾಗಲೇ ಅನೌನ್ಸ್ ಆಗಿದೆ. ಇದೀಗ ಹೊಸ ಸಮಾಚಾರ ಏನಂದರೆ ಈ ಚಿತ್ರದ ಮೂಲಕ ಮತ್ತೊಬ್ಬ ಯುವ ನಟಿಯನ್ನು ಲಾಂಚ್ ಮಾಡುತ್ತಿದ್ದಾರೆ ಮಹೇಶ್. ಮೆರವಣಿಗೆ ಸಿನಿಮಾ ಮೂಲಕ ಐಂದ್ರಿತಾ ರೇ, ಚಿರು (Chiru Film) ಸಿನಿಮಾ ಮೂಲಕ ಕೃತಿ ಕರಬಂಧ, ಅಜಿತ್ ಚಿತ್ರದ ಮೂಲಕ ನಿಕ್ಕಿ ಗಲ್ರಾನಿ, ಕ್ರೇಜಿ ಬಾಯ್ (Crazy Boy) ಮೂಲಕ ಆಶಿಕಾ ರಂಗನಾಥ್ ಹೀಗೆ ಹಲವಾರು ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಮಹೇಶ್ ಬಾಬು ಇದೀಗ ಹೊಸ ಮುಖ ಜೆರುಶಾರನ್ನು ನಾಯಕಿಯಾಗಿ ಲಾಂಚ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಕಿಚ್ಚನ ಕುಟುಂಬದ ಜೊತೆ ಊಟ ಸವಿದ ವಿನಯ್ ಗೌಡ

    ಅಂದಹಾಗೆ, ಜೆರುಶಾ ಕ್ಯಾಮೆರಾ ಹೊಸದೇನಲ್ಲ. ಈಗಾಗಲೇ ಸುದೀಪ್ ಅಭಿನಯದ ‘ವೀರ ಮದಕರಿ’ (Veera Madakari) ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಜಾಹೀರಾತುಗಳು ಮತ್ತು ರಂಗಭೂಮಿ ಹಿನ್ನೆಲೆ ಹೊಂದಿರುವ ಜೆರುಶಾ (Jerusha Christopher) ಇದೀಗ ಮಹೇಶ್ ಬಾಬು ನಿರ್ದೇಶನದ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

    ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳಲು ಹೆಸರಾಗಿರುವ ಸ್ಮೈಲ್ ಗುರು ರಕ್ಷಿತ್‌ಗೆ ಜೋಡಿಯಾಗಿ ಜೆರುಶಾ ಮಿಂಚಲಿದ್ದಾರೆ. ಮಹೇಶ್ ಬಾಬು ಅವರು ಪ್ರಮುಖ ಪಾತ್ರವೊಂದಕ್ಕೆ ಮತ್ತೊಬ್ಬ ಪ್ರತಿಭಾವಂತ ನಟಿ ಆಯ್ಕೆಯಲ್ಲಿ ತೊಡಗಿದ್ದು, ಅದರ ವಿವರಗಳನ್ನು ಶೀಘ್ರದಲ್ಲೇ ಅನಾವರಣಗೊಳಿಸಲಾಗುವುದು.

    ಅಂದಹಾಗೆ, ಮಹೇಶ್ ಬಾಬು ಹೊಸ ಕಥೆಗೆ ಸದ್ಯ ಶೀರ್ಷಿಕೆ ಫೈನಲ್ ಆಗಿಲ್ಲ. ಈ ಚಿತ್ರಕ್ಕೆ ಚೇತನ್ ಮತ್ತು ಅನುರಾಗ್ ಬಂಡವಾಳ ಹೂಡಲಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಮತ್ತು ಸತ್ಯ ಛಾಯಾಗ್ರಾಹಣವಿರಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಮೇ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

  • ಮಹೇಶ್ ಬಾಬು ಫೋಟೋಗೆ ರಶ್ಮಿಕಾರನ್ನು ಹೋಲಿಸಿದ ನೆಟ್ಟಿಗರು

    ಮಹೇಶ್ ಬಾಬು ಫೋಟೋಗೆ ರಶ್ಮಿಕಾರನ್ನು ಹೋಲಿಸಿದ ನೆಟ್ಟಿಗರು

    ಪ್ಯಾನ್ ಇಂಡಿಯಾ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ‘ಪುಷ್ಪ 2’ (Pushpa 2) ಸಿನಿಮಾ ಲುಕ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಶ್ರೀವಲ್ಲಿ ಲುಕ್ ವೈರಲ್ ಆಗುತ್ತಿದ್ದಂತೆ ಮಹೇಶ್ ಬಾಬು ಫೋಟೋಗೆ ಹೋಲಿಸಿ ಮಾತನಾಡಿದ್ದಾರೆ.

    ‘ಗಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್ ಬಾಬು (Mahesh Babu) ಕಣ್ಣಿನ ಬಳಿ ಸೂಪರ್ ಎಂದು ಪೋಸ್ ಕೊಟ್ಟಿದ್ದರು. ಈ ಸೀನ್ ಸಿನಿಮಾದಲ್ಲಿಯೂ ಗಮನ ಸೆಳೆದಿತ್ತು. ಇದೀಗ ಅದೇ ಲುಕ್ ಪುಷ್ಪ 2ನಲ್ಲಿಯೂ ರಿಪೀಟ್ ಆಗಿದೆ. ಮಹೇಶ್ ಬಾಬು ಫೋಟೋಗೆ ಶ್ರೀವಲ್ಲಿ ಫೋಟೋ ಹೋಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ನೆಟ್ಟಿಗರು. ಅದಕ್ಕೆ, ಓಹ್ ನೈಸ್, ಈ ಫೋಟೋ ಇಷ್ಟ ಆಯ್ತು ಎಂದು ರಶ್ಮಿಕಾ ಮಂದಣ್ಣ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಅಂದಹಾಗೆ, ‘ಪುಷ್ಪ’ (Pushpa) ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಶ್ರೀವಲ್ಲಿ ಮಿಂಚಿದ್ದರು. ಪುಷ್ಪ ಪಾರ್ಟ್ ಒನ್‌ಗಿಂತ ಭಾಗ 2ರಲ್ಲಿ ನಟಿಯ ಲುಕ್ ವಿಭಿನ್ನವಾಗಿದೆ. ಕತ್ತಿನಲ್ಲಿ ಬಂಗಾರ ಹೇರಿಕೊಂಡು ಕಣ್ಣಿನ ಬಳಿ ಕೈ ಹಿಡಿದು ಸೂಪರ್ ಎಂದು ರಶ್ಮಿಕಾ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ನಟಿಗೆ ಚಿತ್ರತಂಡ ಹುಟ್ಟುಹಬ್ಬಕ್ಕೆ ಶುಭಕೋರಿದೆ. ಮುಗ್ಧ ಹುಡುಗಿಯಂತಿದ್ದ ಶ್ರೀವಲ್ಲಿ ಇದೀಗ ರೆಬೆಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಕೈ ಸರ್ಜರಿ ಸಕ್ಸಸ್

    ಪುಷ್ಪ ಪಾರ್ಟ್ 2ಗೆ `ಪುಷ್ಪ: ದಿ ರೈಸ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಮೊದಲ ಭಾಗದಲ್ಲಿ ಕೇವಲ ಕಾರ್ಮಿಕನಂತಿದ್ದ ಪುಷ್ಪರಾಜ್ ಈಗ ರಕ್ತಚಂದನದ ಕಳ್ಳಸಾಗಣೆಯಲ್ಲಿ ಆತನೇ ಕಿಂಗ್‌ಪಿನ್ ಆಗಿ ಬೆಳೆದಿರುತ್ತಾನೆ. ಮೊದಲ ಭಾಗದಲ್ಲಿ ವಿದೇಶದ ರೆಫರೆನ್ಸ್ ನೀಡಲಾಗಿತ್ತು. ರಕ್ತಚಂದನ ಜಪಾನ್‌ಗೆ ರಫ್ತಾಗಲಿದೆ ಎಂದು ತೋರಿಸಲಾಗಿತ್ತು. ಈಗ ಎರಡನೇ ಭಾಗದಲ್ಲಿ ಸಿನಿಮಾದ ಒಂದಷ್ಟು ಕಥೆ ವಿದೇಶದಲ್ಲೇ ನಡೆದಿದೆ ಎನ್ನಲಾಗಿದೆ. ಮೊದಲ ಭಾಗಕ್ಕಿಂತ 2ನೇ ಭಾಗ ದೊಡ್ಡದಾಗಿ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.

    ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಕನ್ನಡದ ಡಾಲಿ ಧನಂಜಯ್ ಸೇರಿದಂತೆ ಹಲವರು ನಟಿಸಿದ್ದಾರೆ. ಇದೇ ಆಗಸ್ಟ್ 15ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

  • ಜಪಾನ್‌ನಲ್ಲಿ ಮಹೇಶ್ ಬಾಬು ಜೊತೆಗಿನ ಚಿತ್ರದ ಬಗ್ಗೆ ರಾಜಮೌಳಿ ಅಪ್‌ಡೇಟ್

    ಜಪಾನ್‌ನಲ್ಲಿ ಮಹೇಶ್ ಬಾಬು ಜೊತೆಗಿನ ಚಿತ್ರದ ಬಗ್ಗೆ ರಾಜಮೌಳಿ ಅಪ್‌ಡೇಟ್

    ‘ಆರ್‌ಆರ್‌ಆರ್’ ಸಿನಿಮಾದ ಅಲೆ ಇನ್ನೂ ಕಮ್ಮಿಯಾಗಿಲ್ಲ. ಮಾ.18ರಂದು ಜಪಾನ್‌ನಲ್ಲಿ ‘ಆರ್‌ಆರ್‌ಆರ್’ (RRR) ಚಿತ್ರದ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ ತಮ್ಮ ಮುಂಬರುವ ಸಿನಿಮಾ ಬಗ್ಗೆ ರಾಜಮೌಳಿ ಮಾಹಿತಿ ನೀಡಿದ್ದಾರೆ. ಮಹೇಶ್‌ ಬಾಬು ಜೊತೆಗಿನ ಚಿತ್ರದ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ. ಇದನ್ನೂ ಓದಿ:ಹೆಸರಾಂತ ನಟ, ನಟಿಯರಿಗೆ ಗೇಟ್ ಪಾಸ್ ಕೊಟ್ಟ ನಿರ್ಮಾಪಕ

    ಜಪಾನ್‌ನಲ್ಲಿ ನಡೆದ ಸ್ಕ್ರೀನಿಂಗ್‌ನಲ್ಲಿ ಮಾತನಾಡಿದ ಎಸ್‌ಎಸ್ ರಾಜಮೌಳಿ, ನಮ್ಮ ಮುಂದಿನ ಚಿತ್ರದ ಸ್ಕ್ರೀಪ್ಟ್ ಕೆಲಸ ಮುಗಿಸಿದ್ದೇವೆ. ಚಿತ್ರ ಪ್ರಿ-ಪ್ರೊಡಕ್ಷನ್ ಪ್ರಕ್ರಿಯೆಯಲ್ಲಿದೆ. ಇನ್ನೂ ಕಾಸ್ಟಿಂಗ್ ಪೂರ್ಣಗೊಂಡಿಲ್ಲ. ಚಿತ್ರದ ಹೀರೋ ಅಂದರೆ ಮಹೇಶ್ ಬಾಬು (Mahesh Babu) ಅವರು ಮಾತ್ರ ಫೈನಲ್ ಆಗಿದ್ದಾರೆ. ಆತ ತುಂಬಾ ಒಳ್ಳೆಯ ನಟ. ಸುಂದರ ಕೂಡ. ಸಿನಿಮಾ ಬಿಡುಗಡೆ ಸಮಯದಲ್ಲಿ ಅವರನ್ನು ಇಲ್ಲಿಗೆ ಕರೆತಂದು ನಿಮಗೆ ಪರಿಚಯಿಸುತ್ತೇನೆ ಎಂದು ರಾಜಮೌಳಿ ಮಾಹಿತಿ ನೀಡಿದರು.

    ಮೂಲಗಳ ಪ್ರಕಾರ, ಈ ಸಿನಿಮಾ ಹೆಚ್ಚು ಕಮ್ಮಿ ಇಪ್ಪತ್ತು ದೇಶಗಳಲ್ಲಿ ಇದರ ಶೂಟಿಂಗ್ ನಡೆಯಲಿದೆ. ಬಹುತೇಕ ಕಾಡಿನಲ್ಲಿ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.  ಅದಷ್ಟೇ ಅಲ್ಲ, 8 ಗೆಟಪ್‌ನಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ. ಪಾತ್ರ ಹೀಗೆ ಬರಬೇಕು ಅದಕ್ಕೆ ಏನೆಲ್ಲಾ ಮಾಡಬೇಕೋ ಅದರ ತಯಾರಿಯಲ್ಲಿದ್ದಾರೆ. ಅದು ಎಲ್ಲೆಲ್ಲಿ ಎನ್ನುವುದು ನಿಗೂಢ. ಹೀಗಾಗಿ ಮಹೇಶ್ ಬಾಬು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದಾರೆ. ಅದಕ್ಕೆ ಏನೇನು ಮಸಾಲೆ ಬೇಕು ರಾಜಮೌಳಿ ತುಂಬಿದ್ದಾರೆ. ಭರ್ತಿ ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇಷ್ಟು ಕೋಟಿ ಖರ್ಚು ಮಾಡುತ್ತಿರುವುದು ಇದೇ ಮೊದಲು. ಗ್ಲೋಬಲ್ ಸಿನಿಮಾ ಎನ್ನುವ ಹೆಗ್ಗಳಿಕೆ ಕೂಡ ಇದೆ. ಇದರಲ್ಲಿ ಹೀರೋ ಬಿಟ್ಟರೆ ಇನ್ಯಾರ ಹೆಸರೂ ಗೊತ್ತಾಗಿಲ್ಲ. ಅದಕ್ಕೂ ಅಂತಿಮ ತೆರೆ ಬೀಳುವ ದಿನ ದೂರ ಇಲ್ಲ. ಪ್ರಿನ್ಸ್ ಈ ಸಿನಿಮಾದಿಂದ ಇನ್ನೆಲ್ಲಿಗೆ ಹೋಗಿ ಮುಟ್ಟುತ್ತಾರೊ? ಏನಾಗಲಿದೆಯೋ? ಎಲ್ಲವೂ ಸಿನಿಮಾ ತೆರೆ ಕಂಡ ನಂತರ ಗೊತ್ತಾಗಲಿದೆ.

  • ಬಾಲಿವುಡ್ ಆಫರ್ ತಿರಸ್ಕರಿಸಿದ್ದು ನಿಜ : ನಟ ಮಹೇಶ್ ಬಾಬು

    ಬಾಲಿವುಡ್ ಆಫರ್ ತಿರಸ್ಕರಿಸಿದ್ದು ನಿಜ : ನಟ ಮಹೇಶ್ ಬಾಬು

    ತೆಲುಗಿನ ಹೆಸರಾಂತ ನಟ ಮಹೇಶ್ ಬಾಬು ಅವರಿಗೆ ಬಾಲಿವುಡ್ (Bollywood) ನಿಂದ ಆಫರ್ ಬಂದಿರೋ ವಿಚಾರ ತೆಲುಗು ಚಿತ್ರೋದ್ಯಮದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿತ್ತು. ಬಾಲಿವುಡ್ ಬಗ್ಗೆ ಸದಾ ತಾತ್ಸಾರದ ಮಾತುಗಳನ್ನು ಆಡುವ ಮಹೇಶ್ ಬಾಬು ಅವರಿಗೆ ನಿಜವಾಗಿಯೂ ಬಾಲಿವುಡ್ ನಿಂದ ಆಫರ್ ಬಂದಿದ್ಯಾ ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೆ ಮಹೇಶ್ ಬಾಬು ಉತ್ತರಿಸಿದ್ದಾರೆ. ಆಫರ್ ಬಂದಿದ್ದು ನಿಜ. ಆದರೆ, ನಾನು ಅದನ್ನು ಒಪ್ಪಿಕೊಳ್ಳಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಈ ಪ್ರತಿಕ್ರಿಯೆ ಏನೇ ಇದ್ದರೂ, ಇವರ ಮತ್ತೊಂದು ಚಿತ್ರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ನ ಚಿತ್ರ ಇನ್ನೂ ಸೆಟ್ಟೇರಿಲ್ಲ. ಕಥೆ ಕೂಡ ಲಾಕ್ ಆಗಿಲ್ಲ. ಆದರೂ, ಈ ಚಿತ್ರದ ಬಗ್ಗೆ ನಿರಂತರವಾಗಿ ನಾನಾ ರೀತಿಯ ಸುದ್ದಿಗಳು ಬರುತ್ತಲೇ ಇವೆ. ಇದೀಗ ಮಹೇಶ್ ಬಾಬು ಈ ಸಿನಿಮಾಗಾಗಿ ಸಿಕ್ಸ್ ಪ್ಯಾಕ್ (Six Pack) ಮಾಡಿಕೊಳ್ಳುತ್ತಿದ್ದಾರಂತೆ. ಈ ಸಿನಿಮಾದಲ್ಲಿ ಅವರದ್ದು ಹೊಸ ಬಗೆಯ ಪಾತ್ರವಾಗಿದ್ದರಿಂದ ಬಹಿರಂಗವಾಗಿ ಕಾಣಿಸಿಕೊಳ್ಳದಂತೆ ನಟನಿಗೆ ರಾಜಮೌಳಿ ಷರತ್ತು ಕೂಡ ಹಾಕಿದ್ದಾರಂತೆ.

    ಈ ನಡುವೆ ಚಿತ್ರದ ಟೈಟಲ್ ಬಗ್ಗೆಯೂ ಸುದ್ದಿಯೊಂದು ಹರಿದಾಡುತ್ತಿದೆ. ರಾಜಮೌಳಿ (Rajamouli) ಮತ್ತು ಮಹೇಶ್ ಬಾಬು (Mahesh Babu) ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಸಿಂಪಲ್ ಆಗಿರುವಂತಹ ಶೀರ್ಷಿಕೆ (Title) ಇಡಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಾಜಮೌಳಿ ಎರಡು ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರಲ್ಲಿ ಒಂದನ್ನು ಪಕ್ಕಾ ಮಾಡಲಿದ್ದಾರೆ. ಮಹಾರಾಜ್ ಅಥವಾ ಚಕ್ರವರ್ತಿ ಎನ್ನುವ ಹೆಸರನ್ನು ರಾಜಮೌಳಿ ಆಯ್ಕೆ ಮಾಡಿದ್ದಾರೆ.

    ಒಂದು ಕಡೆ ಶೀರ್ಷಿಕೆ ಪಕ್ಕಾ ಮಾಡುವಲ್ಲಿ ರಾಜಮೌಳಿ ತೊಡಗಿದ್ದರೆ ಮತ್ತೊಂದು ಕಡೆ ಈ ಸಿನಿಮಾಗೆ ಇಂಡೋನೇಷಿಯಾದ ನಟಿ ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ (Chelsea Elizabeth Islan) ಅವರನ್ನು ನಾಯಕಿಯಾಗಿ ಚಿತ್ರತಂಡ ಫೈನಲ್ ಮಾಡಿದೆ ಎನ್ನುವ ಸುದ್ದಿಯೂ ಇದೆ. ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಇದರ ಜೊತೆಗೆ ಚಿತ್ರಕ್ಕೆ ಬೇಕಾಗಿರೋ ಪಾತ್ರಧಾರಿಗಳ ಹುಡುಕಾಟ ಕೂಡ ನಡೆಯುತ್ತಿದೆ.

     

    ನಟಿ ಚೆಲ್ಸಿಯಾ ಅವರನ್ನು ಕೆಲದಿನಗಳ ಹಿಂದೆ ಸ್ಕ್ರೀನ್ ಟೆಸ್ಟ್ ಕೂಡ ಮಾಡಿದ್ದರು ಎನ್ನಲಾಗುತ್ತಿದೆ. ಇಂಡೋನೇಷಿಯಾದ ಮೂಲದ ಈ ನಟಿ ‘ಟೇಂಟಂಗಾ ಮೆಸಾ ಗಿಟು’ ಹೆಸರಿನ ಟಿವಿ ಸರಣಿ ಮೂಲಕ ಜನಪ್ರಿಯತೆ ಗಳಿಸಿದವರು. ನಟ ಮಹೇಶ್ ಬಾಬುಗೆ ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ ನಾಯಕಿ ಎಂಬ ಸುದ್ದಿ ಚಿತ್ರತಂಡದಿಂದ ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ ಸುದ್ದಿ ಕೇಳಿರೋ ಪ್ರಿನ್ಸ್ ಮಾತ್ರ ಸಖತ್ ಖುಷಿಪಟ್ಟಿದ್ದಾರೆ. ವಿಷ್ಯ ಏನೇ ಇರಲಿ ಸಿನಿಮಾ ಬೇಗ ತೆರೆಯ ಮೇಲೆ ನೋಡಬೇಕು ಅಂತ ಅಭಿಮಾನಿಗಳು ಕಾಯ್ತಿದ್ದಾರೆ.