ಟಾಲಿವುಡ್ ನಟ ಮಹೇಶ್ ಬಾಬು ತಮ್ಮ ಪತ್ನಿ ನಮ್ರತಾ ಜೊತೆ ಹೈದರಾಬಾದ್‌ನ ಏರ್‌ಪೋರ್ಟ್‌ನಲ್ಲಿ ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ಪತ್ನಿ ನಮ್ರತಾ ಶಿರೋಡ್ಕರ್ ಜೊತೆ ಹೈದರಾಬಾದ್‌ನ ಏರ್‌ಪೋರ್ಟ್‌ನಿಂದ ತಮ್ಮ ಸಿನಿಮಾದ ಶೂಟಿಂಗ್‌ಗಾಗಿ ಹೊರಟಿದ್ದಾರೆ ಎನ್ನಲಾಗ್ತಿದೆ. ಈ ವೇಳೆ ಕ್ಯಾಮೆರಾದ ಕಣ್ಣಲ್ಲಿ ಕ್ಯಾಪ್ಚರ್ ಆಗಿದೆ ಈ ಜೋಡಿ. ಮಹೇಶ್ ಬಾಬು ಕಣ್ಣಿಗೆ ಕೂಲಿಂಗ್ ಗ್ಲಾಸ್, ತಲೆಗೆ ಕ್ಯಾಪ್ ಹಾಕಿ ನಮ್ರತಾ ಜೊತೆ ನಡೆದಿದ್ದಾರೆ.
ಮಹೇಶ್ ಬಾಬು ಹಾಗೂ ನಿರ್ದೇಶಕ ರಾಜಮೌಳಿ ಕಾಂಬಿನೇಷನ್‌ನ ಎಸ್‌ಎಸ್‌ಎಂಬಿ-29 ಸಿನಿಮಾದ ಶೂಟಿಂಗ್ ವಿದೇಶದಲ್ಲಿ ಭರ್ಜರಿಯಾಗಿ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ದಟ್ಟವಾದ ಅರಣ್ಯಪ್ರದೇಶದಲ್ಲಿ ಸಿನಿಮಾದ ಶೂಟಿಂಗ್ ಕೂಡಾ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಇದಕ್ಕಾಗಿ ದಕ್ಷಿಣ ಆಫ್ರಿಕಾದಲ್ಲಿ ಶೂಟಿಂಗ್ ಮಾಡಲಿದೆ ಚಿತ್ರತಂಡ. ಅಂದಹಾಗೆ ಈ ಸಿನಿಮಾ 900-1000 ಕೋಟಿ ಬಂಡವಾಳದಲ್ಲಿ ಮೂಡಿಬರಲು ಸಜ್ಜಾಗಿದೆ.
ಮಹೇಶ್ ಬಾಬು ಜೊತೆಗೆ ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ, ಆರ್.ಮಾಧವನ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೆ ಪ್ರಿಯಾಂಕಾ ಛೋಪ್ರಾ ಭಾಗದ ಕೆಲ ದೃಶ್ಯಗಳನ್ನ ಹೈದರಾಬಾದ್‌ನ ಒಳಾಂಗಣ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಿದೆಯಂತೆ ಚಿತ್ರತಂಡ. ಸದ್ಯ ಎಸ್‌ಎಸ್‌ಎಂಬಿ-29 ಸಿನಿಮಾದ ಶೂಟಿಂಗ್‌ಗಾಗಿ ಪತ್ನಿ ನಮ್ರತಾ ಜೊತೆ ಮಹೇಶ್ ಬಾಬು ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗ್ತಿದೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿ 2026ರ ವೇಳೆಗೆ ಸಿನಿಮಾವನ್ನ ತೆರೆಗೆ ತರುವ ನಿಟ್ಟಿನಲ್ಲಿ ಕೆಲಸಗಳು ನಡೆದಿವೆ.
ಎಸ್‌ಎಸ್ ರಾಜಮೌಳಿ ಹಾಗೂ ಮಹೇಶ್‌ಬಾಬು (Mahesh Babu) ಕಾಂಬಿನೇಷನ್‌ನ ಎಸ್‌ಎಸ್‌ಎಂಬಿ29 ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸವು ಭರ್ಜರಿಯಾಗಿ ಸಾಗಿವೆ. ಸಿನಿಮಾಗೆ ಪಾತ್ರಗಳ ಆಯ್ಕೆ ಕೂಡಾ ಅಷ್ಟೇ ಬಿರುಸಿನಿಂದ ಸಾಗಿದೆ. ಮಹೇಶ್ ಬಾಬು ಅವರ ತಂದೆ ಪಾತ್ರಕ್ಕಾಗಿ ಚಿತ್ರತಂಡ ತಮಿಳು ನಟ ಚಿಯಾನ್ ವಿಕ್ರಂ ಅವರನ್ನ ಆಯ್ಕೆ ಮಾಡಿಕೊಂಡಿತ್ತು. ಈ ಸಿನಿಮಾದಲ್ಲಿ ನಟಿಸುವಂತೆ ಚಿಯಾನ್ ವಿಕ್ರಂ (Chiyaan Vikram) ಅವರನ್ನು ಕೇಳಿದಾಗ ಅವರು ನಟಿಸುವುದಿಲ್ಲ ಎಂದು ಹೇಳಿದ್ದಾರಂತೆ.
ತಮಿಳು ನಟ ಚಿಯಾನ್ ವಿಕ್ರಂ ಯಾಕೆ ನಟಿಸುವುದಿಲ್ಲ ಅನ್ನೋದಕ್ಕೆ ಕಾರಣ ಕೂಡಾ ಇದೆ. ಹೌದು, ವೀರ ಧೀರ ಸೂರನ್ ಸಿನಿಮಾದ ನಟ ವಿಕ್ರಂ ಎರಡು ಸಿನಿಮಾಗಳ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ರಾಜಮೌಳಿ ಸಿನಿಮಾದಲ್ಲಿ ನಟಿಸಲು ಡೇಟ್ ಕ್ಲ್ಯಾಶ್ ಆಗುವ ಕಾರಣದಿಂದ ಮಹೇಶ್ ಬಾಬು ತಂದೆ ಪಾತ್ರದಲ್ಲಿ ನಟಿಸೋಕೆ ಸಾಧ್ಯವಾಗುವುದಿಲ್ಲ ಎಂದು ನಟ ವಿಕ್ರಂ ಹೇಳಿದ್ದಾರಂತೆ. ಹೀಗಾಗಿ ಚಿತ್ರತಂಡ ಮಾಧವನ್ ಅವರನ್ನ ಸೂಪರ್ ಸ್ಟಾರ್ ತಂದೆ ಪಾತ್ರದಲ್ಲಿ ನಟಿಸುವಂತೆ ಅಪ್ರೋಚ್ ಮಾಡಿದೆ ಎನ್ನಲಾಗ್ತಿದೆ. ಇದನ್ನೂ ಓದಿ: `ಕಾಮದ ಬಣ್ಣ ಕೆಂಪು’ ಎಂದ ಯೋಗರಾಜ್ ಭಟ್
ಜೊತೆಗೆ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಮೊದಲ ಬಾರಿಗೆ ಒಂದಾಗ್ತಿದೆ. ಇನ್ನು ಈ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ಪ್ರಿಯಾಂಕ ಚೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಈ ಭಾಗದ ಕೆಲ ಸಾಹಸ ದೃಶ್ಯಗಳನ್ನ ಕೀನ್ಯಾದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿಯ ಸೀರಿಯಲ್ ಫಸ್ಟ್ ಲುಕ್ ಔಟ್
ಅಂದಹಾಗೆ ಚಿಯಾನ್ ವಿಕ್ರಂ ರಿಜೆಕ್ಟ್ ಮಾಡಿದ ನಂತರ ಆರ್.ಮಾಧವನ್ ಅವರನ್ನ ಈ ಪಾತ್ರಕ್ಕಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರಂತೆ. ಇನ್ನು ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ಈ ಬಗ್ಗೆ ನಿರ್ದೇಶಕರಾಗಲಿ ಅಥವಾ ಚಿತ್ರತಂಡವಾಗಲಿ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ. ಮಾಧವನ್ ಇಂತಹ ಪಾತ್ರಗಳಿಗೆ ನ್ಯಾಯ ಒದಗಿಸುತ್ತಾರೆ ಎನ್ನುವ ನಿರ್ಧಾರ ನಿರ್ದೇಶಕರದ್ದಾಗಿದೆ. ಈ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಚಿತ್ರತಂಡವೇ ಹೇಳಬೇಕಿದೆ.
ಹೈದರಾಬಾದ್: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಅವರಿಗೆ ಏ.28ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ (Real Estate) ಸಂಸ್ಥೆಗಳಾದ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ಮೇಲೆ ಹಣ ಅಕ್ರಮ ವಹಿವಾಟು ತಡೆ ಕಾಯ್ದೆ (PMLA) ಅಡಿ ಇಡಿ ಪ್ರಕರಣ ದಾಖಲಿಸಿ ದಾಳಿ ನಡೆಸಿತ್ತು. ಈ ಕಂಪನಿಗಳ ಜಾಹೀರಾತಿನಲ್ಲಿ (Advertisement) ಮಹೇಶ್ ಬಾಬು ನಟಿಸಿದ್ದರು.
ನಟಿಸಿದ್ದಕ್ಕೆ ಮಹೇಶ್ ಬಾಬು ಅವರಿಗೆ 5.9 ಕೋಟಿ ರೂ. ಸಂಭಾವನೆ ಸಿಕ್ಕಿತ್ತು. ಈ ಪೈಕಿ 3.4 ಕೋಟಿ ರೂ. ಚೆಕ್ ಮೂಲಕ ಮತ್ತು 2.5 ಕೋಟಿ ರೂ. ನಗದು ಮೂಲಕ ಪಾವತಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ನಗದು ವಹಿವಾಟಿನ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಮಹೇಶ್ ಬಾಬು ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಇದನ್ನೂ ಓದಿ: ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?
ಸಾಯಿ ಸೂರ್ಯ ರಿಯಲ್ ಎಸ್ಟೇಟ್ ಕಂಪನಿಯ ಪ್ರಚಾರದ ಜಾಹೀರಾತಿನಲ್ಲಿ ಮಹೇಶ್ ಬಾಬು
ತೆಲಂಗಾಣ ಪೊಲೀಸರು ಹೈದರಾಬಾದ್ ಪ್ರಾಪರ್ಟೀಸ್ ಲಿಮಿಟೆಡ್‌ನ ನರೇಂದ್ರ ಸುರಾನಾ ಮತ್ತು ಸಾಯಿ ಸೂರ್ಯ ಡೆವಲಪರ್ಸ್‌ನ ಸತೀಶ್ ಚಂದ್ರ ಗುಪ್ತಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅನಧಿಕೃತ ಲೇಔಟ್‌ಗಳಲ್ಲಿ ಪ್ಲಾಟ್‌ಗಳನ್ನು ಮಾರಾಟ ಮಾಡುವ ಮೂಲಕ ಖರೀದಿದಾರರನ್ನು ವಂಚಿಸಿದ್ದಾರೆ. ಒಂದೇ ಪ್ಲಾಟ್ ಅನ್ನು ಹಲವು ಬಾರಿ ಮಾರಾಟ ಮಾಡಿದ ಮತ್ತು ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಸುಳ್ಳು ಭರವಸೆಗಳನ್ನು ನೀಡಿದ ಆರೋಪ ಕಂಪನಿಯ ಮೇಲಿದೆ. ಇದನ್ನೂ ಓದಿ: ಖರ್ಗೆ ಕಾರ್ಯಕ್ರಮಕ್ಕೆ ಬಾರದ ಜನ – ಪಕ್ಷದಿಂದಲೇ ಜಿಲ್ಲಾಧ್ಯಕ್ಷ ಅಮಾನತು
ನಿಯಮ ಏನು ಹೇಳುತ್ತೆ?
ಯಾವುದೇ ವ್ಯಕ್ತಿಯು ಒಂದೇ ವಹಿವಾಟಿಗೆ ಅಥವಾ ಒಂದು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯಿಂದ ದಿನದಲ್ಲಿ 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ. ಈ ನಿಯಮವು ಶುಲ್ಕಗಳು, ದೇಣಿಗೆ, ಸಂಭಾವನೆ ಎಲ್ಲದ್ದಕ್ಕೂ ಅನ್ವಯವಾಗುತ್ತದೆ. ಈ ಮಿತಿಯನ್ನು ಉಲ್ಲಂಘಿಸಿದರೆ ಆದಾಯ ತೆರಿಗೆ ಕಾಯ್ದೆ 271DA ಅಡಿಯಲ್ಲಿ ಸ್ವೀಕರಿಸಿದ ಮೊತ್ತಕ್ಕೆ ಸಮಾನವಾದ ದಂಡ ವಿಧಿಸಲಾಗುತ್ತದೆ. 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು UPI, NEFT ಮತ್ತು RTGS ಮೂಲಕ ಪಾವತಿಸಬೇಕಾಗುತ್ತದೆ.
ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಸ್ಟಾರ್ ನಟಿಯರಾದ ಆಲಿಯಾ ಭಟ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ನಯನತಾರಾರನ್ನೇ ಹಿಂದಿಕ್ಕಿದ್ದಾರೆ. ಮಹೇಶ್ ಬಾಬು ನಟನೆಯ ಹೊಸ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ 30 ಕೋಟಿ ರೂ. ಸಂಭಾವನೆಗೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಸ್ಟಾರ್ ನಟಿಯರಿಗೆ ಪ್ರಿಯಾಂಕಾ ಸೆಡ್ಡು ಹೊಡೆದಿದ್ದಾರೆ.
ಕಿಯಾರಾ, ಆಲಿಯಾ, ದೀಪಿಕಾ ಪಡುಕೋಣೆ ಸೇರಿದಂತೆ ಕೆಲ ಟಾಪ್ ನಟಿಯರು ಒಂದು ಸಿನಿಮಾಗೆ 5ರಿಂದ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಹೀಗಿರುವಾಗ 30 ಕೋಟಿ ರೂ. ಸಂಭಾವನೆಯನ್ನು ಪ್ರಿಯಾಂಕಾ ಪಡೆಯುವ ಮೂಲಕ ಎಲ್ಲರ ಹುಬ್ಬೆರಿಸಿದ್ದಾರೆ. ಒಂದು ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆದ ಭಾರತದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ದೇಸಿ ಗರ್ಲ್ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ಮಹೇಶ್ ಬಾಬು (Mahesh Babu) ನಟನೆಯ 29ನೇ ಚಿತ್ರಕ್ಕೆ (SSMB29) ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ಒಡಿಶಾ, ವಿಶಾಖಪಟ್ಟಣಂ, ಹೈದರಾಬಾದ್‌ನಲ್ಲಿ ಈಗಾಗಲೇ ಶೂಟಿಂಗ್ ನಡೆಯುತ್ತಿದ್ದು, ನಟಿ ಕೂಡ ಭಾಗಿಯಾಗಿದ್ದಾರೆ. ಈ ಸಿನಿಮಾವನ್ನು ರಾಜಮೌಳಿ (Rajamouli) ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ:‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್
ಈ ಹಿಂದೆ ರಾಮ್ ಚರಣ್, ದಳಪತಿ ವಿಜಯ್ ಜೊತೆ ತೆಲುಗು ಸಿನಿಮಾಗಳಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ಈಗ ಮಹೇಶ್ ಬಾಬುಗೆ ನಾಯಕಿಯಾಗಿ ಬರೋಬ್ಬರಿ 20 ವರ್ಷಗಳ ಬಳಿಕ ಸೌತ್ ಸಿನಿಮಾರಂಗಕ್ಕೆ ನಟಿ ಕಮ್ ಬ್ಯಾಕ್ ಆಗ್ತಿದ್ದಾರೆ.
ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಮಹೇಶ್ ಬಾಬು ನಟನೆಯ ಸಿನಿಮಾಗಾಗಿ ಭಾರತಕ್ಕೆ ಬಂದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಹೊಕ್ಕಳಿಗೆ ಧರಿಸಿದ 2.7 ಕೋಟಿ ರೂ. ಮೌಲ್ಯದ ಡೈಮಂಡ್ ರಿಂಗ್ ವಿಚಾರವಾಗಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇದನ್ನೂ ಓದಿ:ಶಿವಣ್ಣ ನಿವಾಸಕ್ಕೆ ಯಶ್ ದಂಪತಿ ಭೇಟಿ
ಮುಂಬೈ ಏರ್‌ಪೋರ್ಟ್‌ನಿಂದ ಹೊರಬರುವಾಗ ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಕೋ-ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲೀಶ್ ಲುಕ್ ಫ್ಯಾನ್ಸ್ ಗಮನ ಸೆಳೆದಿದೆ. ಅದರಲ್ಲೂ ಪ್ರಿಯಾಂಕಾ ಹೊಕ್ಕಳಿಗೆ ಧರಿಸಿದ ಬೆಲ್ಲಿ ಬಟನ್ ಡೈಮಂಡ್ ಪಿನ್ ಇದರ ಬೆಲೆ ಕೇಳಿ ಗಾಬರಿಯಾಗಿದ್ದಾರೆ. ಇದರ ಬೆಲೆ ಬರೋಬ್ಬರಿ 2.7 ಕೋಟಿ ರೂ. ಮೌಲ್ಯದಾಗಿದೆ ಎಂದು ಕೇಳಿಯೇ ಅಭಿಮಾನಿಗಳು ದಂಗಾಗಿದ್ದಾರೆ.
ಇನ್ನೂ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದಲ್ಲಿ ಲೀಡ್ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಎಂದೂ ನಟಿಸಿರದ ವಿಭಿನ್ನ ಪಾತ್ರದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ತಿದ್ದಾರೆ.
ಈಗಾಗಲೇ ಹೈದರಾಬಾದ್, ಒಡಿಶಾ, ವಿಶಾಖಪಟ್ಟಣಂ ಸೇರಿದಂತೆ ಹಲವೆಡೆ ಚಿತ್ರೀಕರಣದಲ್ಲಿ ನಟಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಸಿನಿಮಾದ ಹೆಚ್ಚಿನ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಹಿಂದಿ ಸಿನಿಮಾದಲ್ಲಿ ನಟಿಸದೇ ಹಲವು ವರ್ಷಗಳೇ ಕಳೆದಿದೆ. ಹಾಲಿವುಡ್ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿರುವ ನಟಿ ಈಗ ಮತ್ತೆ ಸೌತ್ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ರಾಜಮೌಳಿ (Rajamouli) ನಿರ್ದೇಶನದಲ್ಲಿ ಮಹೇಶ್ ಬಾಬು (Mahesh Babu) ಜೊತೆ ನಟಿಸಲು 30 ಕೋಟಿ ರೂ. ಸಂಭಾವನೆಯನ್ನು ನಟಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪ್ರಿಯಾಂಕಾಗೆ 42 ವರ್ಷವಾದ್ರೂ ನಟಿಯ ಚಾರ್ಮ್ ಇನ್ನೂ ಕಮ್ಮಿಯಾಗಿಲ್ಲ. ಅವರಿಗೆ ಇನ್ನೂ ಬೇಡಿಕೆಯಿದೆ. ಹಾಲಿವುಡ್‌ನಲ್ಲಿ ಆ್ಯಕ್ಷನ್ ಕ್ವೀನ್ ಆಗಿ ಮಿಂಚುತ್ತಿದ್ದಾರೆ. ಹೀಗಿರುವಾಗ ಬಹುನಿರೀಕ್ಷಿತ ಸಿನಿಮಾ ರಾಜಮೌಳಿ ಮತ್ತು ಮಹೇಶ್ ಬಾಬು ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ 30 ಕೋಟಿ ರೂ. ಕೇಳಿದ್ದಾರೆ. ಅದಕ್ಕೆ ಚಿತ್ರತಂಡ ಕೂಡ ಸಮ್ಮತಿ ಸೂಚಿಸಿದೆ ಎನ್ನಲಾದ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ.
ಕನ್ನಡದ ಬಿಗ್ ಬಾಸ್ 11ರ ಆರಂಭಕ್ಕೆ ಕೌಂಟ್‌ಡೌನ್ ಶುರುವಾದ ಬೆನ್ನಲ್ಲೇ ‘ಹಿಂದಿ ಬಿಗ್ ಬಾಸ್ 18’ಕ್ಕೂ(Bigg Boss Hindi 18) ದಿನಗಣನೆ ಶುರುವಾಗಿದೆ. ಸಾಕಷ್ಟು ಸ್ಪರ್ಧಿಗಳ ಹೆಸರು ಮುನ್ನೆಲೆಗೆ ಬಂದಿದೆ. ಅದರಲ್ಲಿ ಮಹೇಶ್ ಬಾಬು ಸಂಬಂಧಿಯೊಬ್ಬರು ಹಿಂದಿ ಬಿಗ್ ಬಾಸ್ ಬರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದೇ ಅಕ್ಟೋಬರ್ 6ರಂದು ಸಲ್ಮಾನ್ ಖಾನ್ (Salman Khan) ನಿರೂಪಣೆಯಲ್ಲಿ ಹಿಂದಿ ಬಿಗ್ ಬಾಸ್ ಅದ್ಧೂರಿಯಾಗಿ ಲಾಂಚ್ ಆಗುತ್ತಿದೆ. ಪ್ರೋಮೋ ಕೂಡ ರಿಲೀಸ್ ಆಗಿ ಶೋ ಕುರಿತು ನಿರೀಕ್ಷೆ ಹುಟ್ಟಿಸಿದೆ. ಹೀಗಿರುವಾಗ ದೊಡ್ಮನೆಗೆ ಬರಲಿರುವ ಸ್ಪರ್ಧಿಗಳ ಹೆಸರಲ್ಲಿ ತೆಲುಗು ನಟ ಮಹೇಶ್ ಬಾಬು ಸಂಬಂಧಿ ಶಿಲ್ಪಾ ಶಿರೋಡ್ಕರ್ (Shilpa Shirodkar) ಕೇಳಿ ಬಂದಿದೆ. ಅವರು ಹಿಂದಿ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಗುಸು ಗುಸು ಶುರುವಾಗಿದೆ.
ಶಿಲ್ಪಾ ಅವರು ನಮ್ರತಾ ಶಿರೋಡ್ಕರ್ (Namrata Shirodkar) ಸಹೋದರಿಯಾಗಿದ್ದು, ಮಹೇಶ್ ಬಾಬುಗೆ (Mahesh Babu) ಅತ್ತಿಗೆ ಆಗಿದ್ದಾರೆ. 80-90ರ ದಶಕದಲ್ಲಿ ಶಿಲ್ಪಾ ನಟಿಯಾಗಿ ಮಿಂಚಿದವರು. 1989ರಲ್ಲಿ ತೆರೆಕಂಡ ‘ಭ್ರಷ್ಟಾಚಾರ್’ ಚಿತ್ರದಲ್ಲಿ ಮಿಥುನ್ ಚಿತ್ರವರ್ತಿ, ರೇಖಾ ಜೊತೆ ಅಂಧ ಹುಡುಗಿಯ ಪಾತ್ರದಲ್ಲಿ ಶಿಲ್ಪಾ ನಟಿಸಿದ್ದರು. ನಂತರ ಹಲವು ಸೀರಿಯಲ್‌ಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ.
ಹಾಗಾಗಿಯೇ ಶಿಲ್ಪಾರನ್ನು ‘ಬಿಗ್ ಬಾಸ್’ ತಂಡ ಅಪ್ರೋಚ್ ಮಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಟಿ ಒಪ್ಪಿಕೊಂಡಿದ್ದಾರಾ? ಅಸಲಿಗೆ ಈ ಸುದ್ದಿ ನಿಜನಾ? ಎಂಬುದು ಶೋ ಆರಂಭವಾದ್ಮೇಲೆ ಕುತೂಹಲಕ್ಕೆ ಉತ್ತರ ಸಿಗಲಿದೆ.
ಪುನೀತ್ ರಾಜ್ ಕುಮಾರ್ ಜೊತೆ ‘ಆಕಾಶ್’, ‘ಅರಸು’, ಪ್ರಜ್ವಲ್ ದೇವರಾಜ್ ನಟನೆಯ ‘ಮೆರವಣಿಗೆ’ಯಂತಹ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು (Mahesh Babu) ಹೊಸ ಸಿನಿಮಾದ ಟೈಟಲ್ ಬಿಡುಗಡೆ ಮಾಡಲಾಗಿದೆ. ವಿಭಿನ್ನವಾಗಿ ಚಿತ್ರತಂಡ ಶೀರ್ಷಿಕೆಯನ್ನು ಅನಾವರಣ ಮಾಡಿದೆ. ಪುದುಚೇರಿಯ 82 ಸಮುದ್ರದ ಆಳದಲ್ಲಿ ಸ್ಕೂಬಾ ಡೈಯಿಂಗ್ ಮೂಲಕ ಚಿತ್ರತಂಡ ಟೈಟಲ್ ರಿವೀಲ್ ಮಾಡಿದೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಭೀಮ ದುನಿಯಾ ವಿಜಯ್ ಕುಮಾರ್ ಮಹೇಶ್ ಬಾಬು ಅವರ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟರು.
ಮಹೇಶ್ ಬಾಬು ಅವರು ಪ್ರತಿ ಸಿನಿಮಾದಲ್ಲಿಯೂ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದಾರೆ. ಈಗ ಅವರು ಈ ಸಿನಿಮಾ ಮೂಲಕ ‘ಕನ್ನಡತಿ’, ‘ಅವನು ಮತ್ತೆ ಶ್ರಾವಣಿ 2’ ದಂತಹ ಧಾರಾವಾಹಿಗಳಲ್ಲಿ ನಟಿಸಿದ್ದ ‘ಸ್ಮೈಲ್ ಗುರು’ ರಕ್ಷಿತ್ (Smile Guru Rakshit) ಅವರನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಇದು ನಾಯಕನಾಗಿ ರಕ್ಷಿತ್ ಗೂ ಮೊದಲ ಹೆಜ್ಜೆ.ಮಹೇಶ್ ಬಾಬು ಹಾಗೂ ರಕ್ಷಿತ್ ಹೊಸ ಪಯಣಕ್ಕೆ ಅಮ್ಮು ಎಂಬ ಕ್ಲಾಸ್ ಶೀರ್ಷಿಕೆ ಇಡಲಾಗಿದೆ.
ದುನಿಯಾ ವಿಜಯ್ ಕುಮಾರ್ ಮಾತನಾಡಿ, ನಾನು, ಪ್ರೇಮ್ ಸಿನಿಮಾ ಆಳಕ್ಕೆ ಇಳಿದಿದ್ದೇವೆ. ನಮ್ಮ ಮಕ್ಕಳಿಗೆ ಒಳ್ಳೆದಾಗಲಿ ಎಂದು. ನಮಗೆ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ನಿಮ್ಮೆಲ್ಲರ ಆಶೀರ್ವಾದ , ಎಲ್ಲಾ ಹೀರೋ ಅಭಿಮಾನಿಗಳ ಆಶೀರ್ವಾದ ಈ ಮಕ್ಕಳ ಮೇಲೆ ಇರಲಿ. ಇವರು ಮುಂದೆ ಇಂಡಸ್ಟ್ರಿಯನ್ನು ಬೇರೆ ರೂಪಕ್ಕೆ ತೆಗೆದುಕೊಂಡು ಮುಂದೆ ಬರುತ್ತಿರುವುದು ನಿಮ್ಮ ಆಶೀರ್ವಾದ ಪಡೆಯಲು. ತಪ್ಪು ಮಾಡಿದರೆ ತಿದ್ದಿ. ನಾವು ಸಿನಿಮಾಗಾಗಿ ತುಂಬಾ ತ್ಯಾಗ ಮಾಡಿದ್ದೇವೆ. ಕಥೆ ಹೇಳದೆ ಮಹೇಶ್ ಅಣ್ಣನಿಗೆ ನಾವು ಸಿನಿಮಾ ಮಾಡಿ ಎಂದು ಕೇಳಿಕೊಳ್ಳುತ್ತೇವೆ. ತುಂಬಾ ಹಳೆ ನಿರ್ದೇಶಕರು. ಅದ್ಭುತ ವ್ಯಕ್ತಿತ್ವ. ಬದಲಾಗದೆ, ಏನೂ ಅಹಂ ಇಲ್ಲದೇ ಇರುವುವವರು. ಇಡೀ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದರು.
ನಿರ್ದೇಶಕರಾದ ಮಹೇಶ್ ಬಾಬು ಮಾತನಾಡಿ, ವಜ್ರೇಶ್ವರಿ ಕಂಬೈನ್ಸ್ ಮೂಲಕ ನನ್ನ ನಿರ್ದೇಶಕರಾಗಿ ಪರಿಚಯಿಸಿದವರು ಪಾರ್ವತಮ್ಮ, ರಾಜ್ ಕುಮಾರ್ ಸರ್ ಹಾಗೂ ಅವರ ಕುಟುಂಬ. ಶಿವಣ್ಣ, ರಾಘಣ್ಣ, ಎಲ್ಲದಕ್ಕಿಂತ ಹೆಚ್ಚಿನದಾಗಿ ಅಪ್ಪು ಸರ್. ಅನುರಾಗ್, ಮಿಥುನ್ ಹಾಗೂ ಬಚ್ಚನ್ ಚೇತು. ಈ ಮೂರು ಜನ ಸಿನಿಮಾ ಮಾಡಬೇಕು ಎಂದರು. ಈ ಚಿತ್ರ ಆಗಲು ಮುಖ್ಯ ಕಾರಣ ರಕ್ಷಿತ್. ಅವರು ಕಥೆ ಮಾಡಿ ನನ್ನ ಬಳಿ ಹೇಳಿದರು. ಕಥೆ ಕೇಳಿ ನನಗೆ ಸ್ಟ್ರೈಕ್ ಆಯ್ತು. ರಕ್ಷಿತ್ ಗೆ ಒಂದು ಬಿಗ್ ಚಪ್ಪಾಳೆ ಬೇಕು. ಈ ಚಿತ್ರಕ್ಕೆ ಫ್ಯಾಷನೇಟ್ ನಿರ್ಮಾಪಕರು ಸಿಕ್ಕಿದ್ದಾರೆ. ವರ್ಕ್ ಶಾಪ್ ಮಾಡಿದೆ. ಜೆರುಷಾ, ಅಮೃತಾ ಇಬ್ಬರು ಚೆನ್ನಾಗಿ ಆಕ್ಟ್ ಮಾಡುತ್ತಾರೆ. ರಕ್ಷಿತ್ ಒಳ್ಳೆ ನಟ. ಒಂದೊಳ್ಳೆ ತಂಡ ನನಗೆ ಸಿಕ್ಕಿದೆ ಎಂದರು.
ನಟ ಸ್ಮೈಲ್ ಗುರು ರಕ್ಷಿತ್ ಮಾತನಾಡಿ, ಈ ಸಮಯದಲ್ಲಿ ನಾನು ಇಬ್ಬರನ್ನೂ ನೆನಪು ಮಾಡಿಕೊಳ್ಳುತ್ತೇನೆ. ಸಂಕಲನಕಾರ ಮಹೇಶ್ ಅವರು. ಮೀಡಿಯಾದವರು. ನಾನು ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ನನ್ನ ಕರಿಯರ್ ಶುರು ಮಾಡಿದ್ದು. ಮನೆಗೆ ಬಂದು ಶಾರ್ಟ್ ಹುಡುಕುತ್ತಿದೆ. ನಾನು ಕಾಣಿಸುತ್ತಿರಲಿಲ್ಲ. ಆಗ ರಿಯಾಲಿಟಿ ಶೋ ಟ್ರೈ ಮಾಡಿದೆ. ಆಗಲೂ ಆಗಲಿಲ್ಲ. ಆ ಹಠದಲ್ಲಿ ಶುರು ಮಾಡಿದ್ದು ಸ್ಮೈಲ್ ಗುರು ಶಾರ್ಟ್ ಸಿನಿಮಾ. ಮಹೇಶ್ ಅವರು ಆಗ ಸಾಥ್ ಕೊಟ್ಟರು. ಪದ್ಮಾವತಿ ಕಲರ್ಸ್ ಕನ್ನಡದಿಂದ ನನ್ನ ಕರಿಯರ್ ಶುರುವಾಯ್ತು. ನಾನು ಸಿನಿಮಾ ಮಾಡುತ್ತೇನೆ ಎಂದು ಅಂದೇ ಅಂದುಕೊಂಡಿದ್ದೆ. ಈಗ ಅದು ಆಗಿದೆ. ಈಗ ಟೈಟಲ್ ರಿವೀಲ್ ಆಗಿದೆ. ವಿಭಿನ್ನವಾಗಿ ಟೈಟಲ್ ಲಾಂಚ್ ಮಾಡಿದ್ದೇವೆ ಎಂದರು.
ಅಮ್ಮು ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್ ಗೆ ಜೋಡಿಯಾಗಿ ಟಗರು ಪಲ್ಯ ಖ್ಯಾತಿಯ ಅಮೃತಾ ಪ್ರೇಮ್ (Amrita Prem) ಹಾಗೂ ವೀರಮದಕರಿ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ಸಾಥ್ ಕೊಡುತ್ತಿದ್ದಾರೆ. ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆ.ಎಸ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ, ಸತ್ಯ ಅವರು ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಲಿದ್ದಾರೆ.
ಸ್ಟಾರ್ ಡೈರೆಕ್ಟರ್ ರಾಜಮೌಳಿ ಜೊತೆಗಿನ ಮಹೇಶ್ ಬಾಬು (Mahesh Babu) ಸಿನಿಮಾದ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇದರ ನಡುವೆ ಮಹೇಶ್ ಬಾಬು ಹಾಲಿವುಡ್ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ‘ಮುಫಾಸಾ: ದಿ ಲಯನ್ ಕಿಂಗ್’ ಸಿನಿಮಾಗಾಗಿ ನಟ ಕೈಜೋಡಿಸಿದ್ದಾರೆ.
ಹಾಲಿವುಡ್‌ನ ‘ಮುಫಾಸಾ: ದಿ ಲಯನ್ ಕಿಂಗ್’ (Mufasa The Lion King) ಸಿನಿಮಾ ಬಹುಭಾಷೆಗಳಲ್ಲಿ ಮೂಡಿ ಬರಲಿದೆ. ಇದರ ತೆಲುಗು ವರ್ಷನ್‌ಗೆ ಮಹೇಶ್ ಬಾಬು ಧ್ವನಿ ನೀಡಲಿದ್ದಾರೆ. ಮುಫಾಸಾ ಪಾತ್ರಕ್ಕೆ ನಟ ವಾಯ್ಸ್ ನೀಡಲಿದ್ದಾರೆ. ಇದನ್ನೂ ಓದಿ:ಮಹೇಶ್ ಬಾಬು ಕುಟುಂಬದ ಮತ್ತೊಂದು ಕುಡಿ ಸಿನಿಮಾಗೆ ಎಂಟ್ರಿ
SUPERSTAR MAHESH BABU is the Telugu voice of Mufasa in Disney’s visually stunning family entertainer #MufasaTheLionKing. ????
Mark your calendars for the Telugu trailer launch on 26th August at 11:07 AM. ????
— ???????????????????????????????????????????? (@UrsVamsiShekar) August 21, 2024
ಪ್ರೀತಿಯ ತಂದೆಯಾಗಿ ಮಗನಿಗೆ ಮಾರ್ಗದರ್ಶನ ನೀಡುವ ಕಾಡಿನ ರಾಜನಾಗಿ ಕುಲವನ್ನು ನೋಡಿಕೊಳ್ಳುವ ಮುಫಾಸಾ ಪಾತ್ರವು ನನ್ನನ್ನು ಆಕರ್ಷಿಸಿದೆ. ಈ ತಂಡದ ಜೊತೆ ಕೈಜೋಡಿಸಿರುವುದು ವೈಯಕ್ತಿಕವಾಗಿ ನನಗೆ ತುಂಬಾ ಸ್ಪೆಷಲ್. ಏಕೆಂದರೆ ಇದನ್ನು ಮಕ್ಕಳೊಂದಿಗೆ ಕುಳಿತು ನೋಡಬಹುದು. ಅದನ್ನು ನಾನು ಎಂಜಾಯ್ ಮಾಡುತ್ತೇನೆ. ತೆಲುಗಿನ ‘ಮುಫಾಸಾ: ದಿ ಲಯನ್ ಕಿಂಗ್’ ಚಿತ್ರವನ್ನು ಪ್ರೇಕ್ಷಕರು ಯಾವಾಗ ನೋಡುತ್ತಾರೆ ಎಂದು ನಾನು ಕಾಯುತ್ತಿದ್ದೇನೆ ಎಂದು ಮಹೇಶ್ ಬಾಬು ತಿಳಿಸಿದ್ದಾರೆ.
ಇನ್ನೂ ‘ಮುಫಾಸಾ: ದಿ ಲಯನ್ ಕಿಂಗ್’ ತೆಲುಗು ವರ್ಷನ್ ಟ್ರೈಲರ್ ಆ.26ರಂದು ರಿಲೀಸ್ ಆಗಲಿದೆ. ಸಿನಿಮಾ ಡಿ.20ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಕೃಷ್ಣ (Super Star Krishna) ಕುಟುಂಬದ 3ನೇ ತಲೆಮಾರಿನ ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಮಹೇಶ್ ಬಾಬು (Mahesh Babu) ಅಣ್ಣ ರಮೇಶ್ ಬಾಬು ಪುತ್ರ ಟಾಲಿವುಡ್‌ಗೆ ಎಂಟ್ರಿ ಕೊಡಲು ಬಗ್ಗೆ ಲೇಟೆಸ್ಟ್ ಅಪ್‌ಡೇಟ್ ಸಿಕ್ಕಿದೆ.
ಸೂಪರ್ ಸ್ಟಾರ್ ಕೃಷ್ಣ ಅವರ ಮೊಮ್ಮಗ ಜಯ ಕೃಷ್ಣ (Jaya Krishna) ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾರೆ. ಅಮೆರಿಕದ ಫಿಲ್ಮ್ ಸ್ಕೂಲ್‌ನಲ್ಲಿ ದಿವಂಗತ ರಮೇಶ್ ಬಾಬು ಪುತ್ರ ಜಯ ಕೃಷ್ಣ ಅವರು ನಟನೆ ಜೊತೆ ಸಿನಿಮಾ ಮಾಡುವ ತರಬೇತಿಯನ್ನು ಪಡೆದುಕೊಂಡಿದ್ದಾರೆ. ನಾಯಕನಾಗಿ ಲಾಂಚ್ ಆಗಲು ಸಕಲ ರೀತಿಯಲ್ಲಿ ತಯಾರಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಹಿಂದಿ ಸಿನಿಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ: ರಿಷಬ್ ಶೆಟ್ಟಿ
ಪ್ರಸ್ತುತ ಜಯ ಕೃಷ್ಣ ಹೊಸ ಬಗೆಯ ಕಥೆಗಳನ್ನು ಕೇಳುತ್ತಿದ್ದಾರೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಜಯ ಕೃಷ್ಣನ ಹೊಸ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಉತ್ತಮ ಕಥೆಯ ಹುಡುಕಾಟದಲ್ಲಿದ್ದಾರೆ ಜಯ ಕೃಷ್ಣ. ಇನ್ನೂ ಅಣ್ಣನ ಮಗನನ್ನು ಲಾಂಚ್ ಮಾಡಲು ಮಹೇಶ್ ಬಾಬು ಕೂಡ ಸಾಥ್ ನೀಡುತ್ತಿದ್ದಾರೆ.