Tag: ಮಹೇಶ್ ಕುಮಠಳ್ಳಿ

  • ಮಹೇಶ್ ಕುಮಠಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ: ರಮೇಶ್ ಜಾರಕಿಹೊಳಿ

    ಮಹೇಶ್ ಕುಮಠಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ: ರಮೇಶ್ ಜಾರಕಿಹೊಳಿ

    ಚಿಕ್ಕೋಡಿ: ಮಹೇಶ್ ಕುಮಠಳ್ಳಿ (Mahesh Kumathalli) ಅವರಿಗೆ ಟಿಕೆಟ್ ಸಿಗದೆ ಇದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ತಿಳಿಸಿದರು.

    ಅಥಣಿ ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಲಕ್ಷ್ಮಣ ಸವದಿ (Laxman Savadi) ಬುದ್ಧಿವಂತ ರಾಜಕಾರಣಿ, ಅವರು ಹಿಂಗ್ಯಾಕೆ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ಅವರಿಗೆ ಕನಿಷ್ಠ ಜ್ಞಾನ ಇರಬೇಕು. ಎಂಎಲ್‌ಸಿ ಆಗಿದ್ದರೂ, ವರಿಷ್ಠರ ಹತ್ತಿರ ಟಿಕೆಟ್ ಕೇಳುತ್ತೇನೆ ಎಂದು ಹೇಳಿಕೆ ನೀಡಿರುವುದು ನನಗೆ ಅಚ್ಚರಿಯಾಗಿದೆ. ಮಹೇಶ್ ಕುಮಠಳ್ಳಿ ತ್ಯಾಗದಿಂದ ಈ ಸರ್ಕಾರ ರಚನೆಯಾಗಿದೆ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಥಣಿ (Athani) ಮುಂದಿನ ಬಿಜೆಪಿ (BJP) ಅಭ್ಯರ್ಥಿ ಮಹೇಶ್ ಕುಮಠಳ್ಳಿ. ಒಂದು ವೇಳೆ ಮಹೇಶ್ ಕುಮಠಳ್ಳಿಗೆ ಟಿಕೆಟ್ ಕೊಡದಿದ್ದರೆ, ನಾನು ಗೋಕಾಕ್ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂಬ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂಬುದು ಗೊತ್ತಿಲ್ಲ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆದರೂ ಪಕ್ಷದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಮಹೇಶ್ ಕುಮಠಳ್ಳಿ ಅವರಿಗೆ ಟಿಕೆಟ್ ತಪ್ಪುವಂತ ಯಾವುದೇ ಸಮಸ್ಯೆಯಿಲ್ಲ, ಬಿಜೆಪಿಯಲ್ಲಿ ಆ ರೀತಿ ಯಾವುದೇ ಚರ್ಚೆ ನಡೆದಿಲ್ಲ. ಕೆಲವರು ಸುಮ್ಮನೆ ಗೊಂದಲ ಮೂಡಿಸುತ್ತಿದ್ದಾರೆ. ಅಥಣಿಯಿಂದ ಮಹೇಶ್ ಕುಮಠಳ್ಳಿ, ಗೋಕಾಕದಿಂದ ರಮೇಶ್ ಜಾರಕಿಹೊಳಿ, ಕಾಗವಾಡದಿಂದ ಶ್ರೀಮಂತ ಪಾಟೀಲ್ ಸ್ಪರ್ಧೆ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಗೆ ಚಿಂಚನಸೂರ್‌ ರಾಜೀನಾಮೆ ನೀಡಿದ್ಯಾಕೆ?

    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮೊನ್ನೆ ದೆಹಲಿಯಲ್ಲಿ ಭೇಟಿ ಮಾಡಿದ್ದೇನೆ. ಕೆಲವು ವಿಚಾರಗಳನ್ನು ಹೇಳುವುದಕ್ಕೆ ಬರುವುದಿಲ್ಲ. ನಾನು ಅವರ ಮುಖಾಂತರ ಬಿಜೆಪಿಗೆ ಬಂದೆ. ತುಂಬಾ ದಿನದಿಂದ ಭೇಟಿ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಭೇಟಿ ಆಗಿ ಬಂದಿದ್ದೇನೆ. ಮಾ. 28ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಥಣಿಗೆ ಭೇಟಿ ನೀಡಿ 1,250 ಕೋಟಿ ರೂ. ವೆಚ್ಚದಲ್ಲಿ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ವಯಸ್ಸಾದ ವೃದ್ಧರಿಗೆ ಸೇರಬೇಕಾದ ಪಿಂಚಣಿ ವಯಸ್ಕರ ಜೇಬಿಗೆ – ಓರ್ವ ಅರೆಸ್ಟ್

  • ಅಮಿತ್ ಶಾ ಭೇಟಿ ಬಳಿಕ ಬೆಳಗಾವಿ ಬಿಜೆಪಿ ಪಾಳಯದಲ್ಲಿ ಒಗ್ಗಟ್ಟಿನ ಮಂತ್ರ

    ಅಮಿತ್ ಶಾ ಭೇಟಿ ಬಳಿಕ ಬೆಳಗಾವಿ ಬಿಜೆಪಿ ಪಾಳಯದಲ್ಲಿ ಒಗ್ಗಟ್ಟಿನ ಮಂತ್ರ

    ಚಿಕ್ಕೋಡಿ: ಅಮಿತ್ ಶಾ (Amit Shah) ಖಡಕ್ ವಾರ್ನಿಂಗ್ ಬಳಿಕ ಬೆಳಗಾವಿ (Belagavi) ಬಿಜೆಪಿ (BJP) ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗಿದ್ದಾರೆ. ಇಷ್ಟು ದಿನ ನಾ ಒಂದು ದಿಕ್ಕು ತಾ ಒಂದು ದಿಕ್ಕು ಎಂದು ಮುಖ ತಿರುಗಿಸಿ ಓಡಾಡುತ್ತಿದ್ದ ಅಥಣಿ ಶಾಸಕ ಮಹೇಶ್ ಕುಮಠಳ್ಳಿ (Mahesh Kumathalli) ಹಾಗೂ ಲಕ್ಷ್ಮಣ ಸವದಿ (Laxman Savadi) ಇದೀಗ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

    ಅಥಣಿ ಪಟ್ಟಣದಲ್ಲಿ ಇಬ್ಬರು ನಾಯಕರು ಜೊತೆ ಜೊತೆಯಾಗಿ ಸಂಚಾರ ನಡೆಸಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಇಷ್ಟು ದಿನ ಒಬ್ಬರ ಕಾರ್ಯಕ್ರಮಕ್ಕೆ ಒಬ್ಬರು ಗೈರಾಗುತ್ತಿದ್ದರು. ಆದರೆ ಅಮಿತ್ ಶಾ ಖಡಕ್ ವಾರ್ನಿಂಗ್ ಬಳಿಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

    ಇದೀಗ ಇಬ್ಬರು ನಾಯಕರು ಒಗ್ಗಟ್ಟಿನಿಂದ ಮುದುವರಿಯುತ್ತಿರುವುದಕ್ಕೆ ಪಕ್ಷದ ಕಾರ್ಯಕರ್ತರ ಗೊಂದಲ ನಿವಾರಣೆ ಆದಂತಾಗಿದೆ. ಬೆಳಗಾವಿಗೆ ಅಮಿತ್ ಶಾ ಭೇಟಿ ನಂತರ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಕೂಡಾ ಭಿನ್ನಮತ ಶಮನಕ್ಕೆ ಯತ್ನಿಸಿದ್ದರು. ಇಬ್ಬರು ರಾಷ್ಟ್ರೀಯ ನಾಯಕರ ಭೇಟಿ ನಂತರ ಬಿಜೆಪಿ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ತಾಯಿ ಬಂಜೆಯಾಗಿದ್ದಾಳೆ, ಇಲ್ಲಿ ಮಕ್ಕಳು ಹುಟ್ಟುವ ಪ್ರಶ್ನೆಯೇ ಇಲ್ಲ: ಲಕ್ಷ್ಮಣ ಸವದಿ

    ಈ ಸಂದರ್ಭದಲ್ಲಿ ಶಾಸಕ ಮಹೇಶ್ ಕುಮಠಳ್ಳಿ, ಸವದಿ ಎಂಎಲ್‌ಸಿ. ನಾನು ಅಥಣಿ ಎಂಎಲ್‌ಎ ಎನ್ನುವ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದ್ದಾರೆ. ಇದಕ್ಕೆ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಕೂಡಾ ಸಹಮತ ಸೂಚಿಸಿದ ಮಾತುಗಳನ್ನು ಕಾರ್ಯಕರ್ತರ ಮುಂದೆ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸವದಿ ಅವರನ್ನು ಕುಮಠಳ್ಳಿ ಸೋಲಿಸಿ ಬಳಿಕ ಬಿಜೆಪಿ ಸೇರಿ ಅಥಣಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಬಳಿಕ ಅಥಣಿ ಕ್ಷೇತ್ರದ ಇಬ್ಬರ ನಡುವಿನ ಭಿನ್ನಮತ ಹಾಗೇ ಮುಂದುವರಿದಿತ್ತು. ಸದ್ಯ ಅಮಿತ್ ಶಾ ಭೇಟಿ ಬಳಿಕ ಇಬ್ಬರು ನಾಯಕರು ಒಂದಾಗಿದ್ದಾರೆ. ಇದನ್ನೂ ಓದಿ: 13 ಜನರನ್ನ ಮಂಚದ ಮೇಲೆ ಮಲಗಿಸಿ ಸರ್ಕಾರ ತಂದ್ರಲ್ಲ ನಾಚಿಕೆ ಆಗ್ಬೇಕು ನಿಮ್ಗೆ – ಸಿಎಂ ಇಬ್ರಾಹಿಂ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k