Tag: ಮಹೇಂದ್ರಸಿಂಗ್ ಧೋನಿ

  • ಪಾಕಿಸ್ತಾನದ ಆಟಗಾರನಿಗೆ ಸಿಎಸ್‍ಕೆ ಟೀ-ಶರ್ಟ್ ಗಿಫ್ಟ್ ಕೊಟ್ಟ ಕ್ಯಾಪ್ಟನ್ ಕೂಲ್

    ಪಾಕಿಸ್ತಾನದ ಆಟಗಾರನಿಗೆ ಸಿಎಸ್‍ಕೆ ಟೀ-ಶರ್ಟ್ ಗಿಫ್ಟ್ ಕೊಟ್ಟ ಕ್ಯಾಪ್ಟನ್ ಕೂಲ್

    ಇಸ್ಲಾಮಾಬಾದ್: ಪಾಕಿಸ್ತಾನ ತಂಡದ ಬೌಲರ್ ಹ್ಯಾರಿಸ್ ರೌಫ್‍ಗೆ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್‍ನ ಟೀ-ಶರ್ಟ್‍ನ್ನು ಉಡುಗೊರೆಯಾಗಿ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ವಲಯದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇವರನ್ನು ಕ್ರಿಕೆಟ್ ಲೋಕದಲ್ಲೇ ಶ್ರೇಷ್ಠ ನಾಯಕನೆಂದು ಗುರುತಿಸಲಾಗಿದೆ. ಈಗ ಧೋನಿ ತಮ್ಮ ಟೀ-ಶರ್ಟ್‍ನ್ನು ಪಾಕಿಸ್ತಾನದ ಆಟಗಾರನಿಗೆ ಉಡುಗೊರೆಯಾಗಿ ನೀಡಿರುವುದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಶುಕ್ರವಾರ ಧೋನಿ ಸಹಿ ಮಾಡಿದ ಸಿಎಸ್‍ಕೆ ಜರ್ಸಿಯೊಂದನ್ನು ಪಾಕಿಸ್ತಾನ ತಂಡದ ಆಟಗಾರ ಹ್ಯಾರಿಸ್ ರೌಫ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಟ್ವಿಟ್ಟರ್‌ನಲ್ಲಿ ಏನಿದೆ?: ಕ್ರಿಕೆಟ್ ಲೋಕದ ಕ್ಯಾಪ್ಟನ್ ಕೂಲ್ ಎಂದೇ ಹೆಸರುವಾಸಿಯಾಗಿರುವ ಎಂ.ಎಸ್.ಧೋನಿಯವರು ಸಿಎಸ್‍ಕೆ ತಂಡದ ಟೀ-ಶರ್ಟ್‍ನ್ನು ನನಗೆ ನೀಡಿದ್ದಾರೆ. ಈ ಉಡುಗೊರೆಯನ್ನು ನಾನು ಖುಷಿಯಿಂದ ಸ್ವೀಕರಿಸಿದ್ದೇನೆ. ಟೀ-ಶರ್ಟ್ ನಂಬರ್-7 ಎಲ್ಲರ ಮನಸನ್ನು ಗೆದ್ದಿದೆ. ವಿಶೇಷವಾಗಿ ಬೆಂಬಲ ನೀಡಿದ ರಸೆಲ್ ಅವರಿಗೆ ತುಂಬು ಹೃದಯದ ಧನ್ಯವಾದ ಎಂದು ಹ್ಯಾರಿಸ್ ರೌಫ್ ಟ್ವೀಟ್ ಮಾಡಿದ್ದಾರೆ.

    ಟಿ20 ವಿಶ್ವಕಪ್‍ನಲ್ಲಿ ಭಾರತದ ವಿರುದ್ಧ ರೌಫ್ ಭರ್ಜರಿ ಪ್ರದರ್ಶನ ತೋರಿದ್ದರು. ನಾಲ್ಕು ಓವರ್‍ಗಳಲ್ಲಿ 25 ರನ್‍ಗಳನ್ನು ನೀಡಿ 1 ವಿಕೆಟ್ ಪಡೆದಿದ್ದರು. ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್‍ಗಳ ಜಯ ಸಾಧಿಸಿತ್ತು. ಸೆಮಿಫೈನಲ್‍ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಕಂಡಿತ್ತು. ಈ ಆವೃತ್ತಿಯಲ್ಲಿ ಪಾಕಿಸ್ತಾನ ತಂಡದಲ್ಲಿ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿ ಹೊರಹೊಮ್ಮಿದ್ದರು. ಇದನ್ನೂ ಓದಿ: ಜೈಲು ಅಧಿಕಾರಿಗಳ ಕಣ್ತಪ್ಪಿಸಲು ಮೊಬೈಲ್ ನುಂಗಿದ ಕೈದಿ!

    ಧೋನಿ ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಆಡುವ ನಿರೀಕ್ಷೆಯಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಈ ವರ್ಷದ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಮೊದಲು ಉಳಿಸಿಕೊಂಡಿರುವ ನಾಲ್ವರು ಆಟಗಾರರಲ್ಲಿ ಸಿಎಸ್‍ಕೆ ನಾಯಕ ಧೋನಿ ಅವರು ಒಬ್ಬರಾಗಿದ್ದಾರೆ. ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!