Tag: ಮಹೀಂದ್ರ ಗ್ರೂಪ್

  • ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

    ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

    ಮುಂಬೈ: ಬಾಲಿವುಡ್ ಸ್ಟಾರ್ ನಟ ಮತ್ತು ಮಹೀಂದ್ರಾ ಗ್ರೂಪ್‍ನ ರಾಯಭಾರಿ ಅಜಯ್ ದೇವಗನ್ ಶೂಟಿಂಗ್ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ.

    ಮಹೀಂದ್ರಾ ಟ್ರಕ್ ಮತ್ತು ಬಸ್ ತಯಾರಿಕಾ ವಿಭಾಗದ ರಾಯಭಾರಿ ಅಜಯ್ ದೇವಗನ್ ಅವರನ್ನು ಒಳಗೊಂಡ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ, ಜಾಹೀರಾತನ್ನು ಚಿತ್ರೀಕರಿಸುವಾಗ ಅಜಯ್ ದೇವಗನ್ ಸಿಟ್ಟು ಮಾಡಿಕೊಳ್ಳುವ ರೀತಿಯಲ್ಲಿಯೇ ಸ್ಕ್ರಿಪ್ಟ್ ಮಾಡಲಾಗಿತ್ತು. ಇದನ್ನೂ ಓದಿ:  1.35 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶ್ರೀಮಂತ ಪಾಟೀಲ್

    ವೀಡಿಯೋದಲ್ಲಿ ಏನಿದೆ?
    ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ, ಅಜಯ್ ‘ಯೆ ಬಾರ್ ಬಾರ್ ಸ್ಕ್ರಿಪ್ಟ್ ಕ್ಯೂನ್ ಬದಲ್ ರಹೇ ಹೋ?(ಸ್ಕ್ರಿಪ್ಟ್ ಏಕೆ ನಿರಂತರವಾಗಿ ಬದಲಾಯಿಸಲಾಗುತ್ತಿದೆ?) ಎಂದು ಸಿಟ್ಟಾಗಿ ಶೂಟಿಂಗ್ ವೇಳೆ ಗರಂ ಆಗಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆಗ ಶೂಟಿಂಗ್‍ನಲ್ಲಿದ್ದ ಒಬ್ಬರು ಸ್ಕ್ರಿಪ್ಟ್ ಕೇವಲ ನಾಲ್ಕು ಬಾರಿ ಬದಲಾಯಿಸಲಾಗಿದೆ ಎಂದು ಪ್ರತಿಕ್ರಿಯಿಸುತ್ತಾರೆ. ಆಗ ಅಜಯ್ ನಿಟ್ಟುಸಿರು ಬಿಡುತ್ತಾರೆ. ವೀಡಿಯೋ ನಂತರ ‘ವೀಕ್ಷಿಸುತ್ತಿರಿ’ ಇನ್ನೂ ಹೆಚ್ಚು ಬರಲಿದೆ ಎಂದು ಬರೆದುಕೊಳ್ಳಲಾಗಿದೆ.

    ಈ ಮೂಲಕ ಮಹೀಂದ್ರ ಗ್ರೂಪ್ ಅಜಯ್ ಸಿಟ್ಟಾಗುವ ರೀತಿಯಲ್ಲಿಯೇ ಸ್ಕ್ರಿಪ್ಟ್ ಮಾಡಿದ್ದು, ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ಈ ಮೂಲಕ ತಿಳಿಯುತ್ತೆ. ಈ ವೀಡಿಯೋ ಶೇರ್ ಮಾಡಿದ ಅವರು, ಮಹೀಂದ್ರಾ ಟ್ರಕ್ ಬಸ್ ಚಿತ್ರೀಕರಣದಲ್ಲಿ ಅಜಯ್ ದೇವಗನ್ ಅವರು ತಮ್ಮ ಶಾಂತತೆಯನ್ನು ಕಳೆದುಕೊಂಡಿದ್ದಾರೆ ಎಂದು ನನಗೆ ತಿಳಿಸಲಾಯಿತು. ಕೊನೆಗೆ ಇದು ತಮಾಷೆಗಾಗಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಹೊಸ ರೀತಿಯ ಪ್ರಚಾರದ ವೀಡಿಯೋ ನೋಡಿದ ನೆಟ್ಟಿಗರು ಒಂದು ನಿಮಿಷ ಶಾಕ್ ಆಗಿದ್ದು, ಪೂರ್ತಿ ವೀಡಿಯೋ ನೋಡಿದ ಮೇಲೆ ಇದನ್ನು ಪ್ರಚಾರಕ್ಕೆ ಮಾಡಿದ್ದಾರೆ ಎಂಬುದು ತಿಳಿದುಬರುತ್ತೆ. ನೆಟ್ಟಿಗರು, ‘ಜಾಹೀರಾತು ಮಾಡಲು ಉತ್ತಮ ಮಾರ್ಗ’ ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಇಂದಿರಾನಗರ ಕಾ ಗುಂಡಾ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ಈ ಟ್ವೀಟ್ ರೀ-ಟ್ವೀಟ್ ಮಾಡಿ ಅಜಯ್, ಈ ಶೂಟ್ ಅದ್ಭುತವಾಗಿತ್ತು ಎಂದು ಬರೆದುಕೊಂಡಿದ್ದಾರೆ.