Tag: ಮಹೀಂದ್ರಾ ಕಂಪನಿ

  • ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    ತುಮಕೂರು: ವಾಹನ ಖರೀದಿಗೆ ಮಹೀಂದ್ರಾ ಶೋ ರೂಂಗೆ ಬಂದು ಅವಮಾನಕ್ಕೊಳಗಾದ ರೈತನ ಮನೆಗೆ ಇದೀಗ ಮಹೀಂದ್ರ ಗೂಡ್ಸ್ ವಾಹನ ಬಂದಿದೆ. ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ ಅವರು ಟ್ವೀಟ್ ಮಾಡಿ ರೈತನಿಗೆ ಶುಭ ಕೋರಿದ್ದಾರೆ.

    ರೈತ ಕೆಂಪೇಗೌಡಗೆ ಕಂಪನಿ ವಾಹನ ಡೆಲಿವರಿ ಮಾಡಿದೆ. ಈ ಕುರಿತು ಸ್ವತಃ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ರೈತ ಕೆಂಪೇಗೌಡರು ಮಹಿಂದ್ರಾ ಗೂಡ್ಸ್ ವಾಹನ ಖರೀದಿ ಮಾಡಿದ್ದಾರೆ. ಇಂದು ಮಹೀಂದ್ರಾ ಆಟೋಮೋಟಿವ್, ಕೆಂಪೇಗೌಡರಿಗೆ ವಾಹನ ಡೆಲಿವರಿ ನೀಡಿದೆ. ಈ ಬಗ್ಗೆ ರೈತ ಕೆಂಪೇಗೌಡರ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 165 ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ ಭಾರತ

    ಟ್ವೀಟ್‍ನಲ್ಲಿ ಏನಿದೆ?: ಜನವರಿ 21ರಂದು ನಮ್ಮ ಡೀಲರ್ ಬಳಿ ಕೆಂಪೇಗೌಡ ಮತ್ತು ಆತನ ಸ್ನೇಹಿತರು ಬಂದಾಗ ನಡೆದ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಭರವಸೆ ನೀಡಿದಂತೆ ಘಟನೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಮಹೀಂದ್ರಾ ಆಯ್ಕೆ ಮಾಡಿದ್ದಕ್ಕಾಗಿ ನಾವು ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸುತ್ತೇವೆ. ನಾವು ಅವರನ್ನು ಮಹೀಂದ್ರಾ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ.

    ನಡೆದಿದ್ದೇನು?: ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಯುವರೈತ ಕೆಂಪೇಗೌಡ, ತುಮಕೂರಿನ ರಾಮನಪಾಳ್ಯದಲ್ಲಿ ಮಹೀಂದ್ರಾ ಶೋ ರೂಂಗೆ ವಾಹನ ಖರೀದಿಗೆ ಹೋಗಿದ್ದರು. ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಅವಮಾನ ಮಾಡಿದ್ದರು. ಬೊಲೆರೋ ಗೂಡ್ಸ್ ವಾಹನ ಖರೀದಿಸಲು ಶೋರೂಂಗೆ ಬಂದಿದ್ದ ರೈತನಿಗೆ ಅವಮಾನ ಮಾಡಲಾಗಿತ್ತು.

    ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಎಂದು ಸೇಲ್ಸ್ ಏಜೆಂಟ್, ಕೆಂಪೇಗೌಡರನ್ನು ಅವಮಾನಿಸಿದ್ದರು. ಅವಮಾನಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದರು. ಇದೀಗ ಆನಂದ್ ಮಹೀಂದ್ರಾ ಅವರು ಗೋಡ್ಸ್ ಗಾಡಿಯನ್ನು ರೈತನ ಮನೆಗೆ ತಲುಪಿಸಿದ್ದಾರೆ.

  • ಕಿಕ್‌ ಸ್ಟಾರ್ಟ್‌ ಜೀಪ್‌ ತಯಾರಿಸಿದ ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್‌ ನೀಡಿದ ಆನಂದ್‌ ಮಹೀಂದ್ರಾ

    ಕಿಕ್‌ ಸ್ಟಾರ್ಟ್‌ ಜೀಪ್‌ ತಯಾರಿಸಿದ ಬಡ ಪ್ರತಿಭೆಗೆ ಬೊಲೆರೋ ಗಿಫ್ಟ್‌ ನೀಡಿದ ಆನಂದ್‌ ಮಹೀಂದ್ರಾ

    ಮುಂಬೈ: ಕಿಕ್-ಸ್ಟಾರ್ಟಿಂಗ್ ಜೀಪ್ ತಯಾರಿಸಿದ ಬಡ ಪ್ರತಿಭೆಗೆ ಆನಂದ್ ಮಹೀಂದ್ರಾ ಬೊಲೆರೋ ಗಿಫ್ಟ್ ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.

    ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ತಯಾರಿಸಿದ ಕಿಕ್-ಸ್ಟಾರ್ಟಿಂಗ್  ಜೀಪ್‍ನ ವೀಡಿಯೋ ಹಂಚಿಕೊಂಡು, ಅವರಿಗೆ ಬೊಲೆರೋ ಕಾರು ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದ ಆನಂದ್ ಮಹೀಂದ್ರಾ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

    ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಹಳೆಯ ವಾಹನದ ಬಿಡಿ ಭಾಗಗಳನ್ನ ಬಳಸಿ, ದ್ವಿ-ಚಕ್ರ ವಾಹನ ಸಿದ್ಧಪಡಿಸಿದ್ದರು. ಇದಕ್ಕಾಗಿ 60 ಸಾವಿರ ರೂ. ಖರ್ಚು ಮಾಡಿದ್ದರು. ಇದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಶಿವಸೇನಾ ಹಿಂದುತ್ವದ ಹೆಸರಲ್ಲಿ ಚುನಾವಣೆ ಎದುರಿಸಿದ ಮೊದಲ ಪಕ್ಷ: ಸಂಜಯ್ ರಾವತ್

    ನಮ್ಮ ಜನರ ಜಾಣ್ಮೆ ಮತ್ತು ಕನಿಷ್ಠ ಸಂಪನ್ಮೂಲಗಳನ್ನು ಬಳಸಿಕೊಂಡಿರುವ ಈ ಕ್ರೀಯಾಶೀಲತೆಯನ್ನು ನಾನು ಪ್ರಶಂಸಿಸುತ್ತೇನೆ. ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇನೆ ಎಂದು ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಟ್ವೀಟ್‌ ಮಾಡಿದ್ದಾರೆ. ಇದರ ಜೊತೆಗೆ ಹಳೆಯ ವಾಹನದ ಬದಲಾಗಿ ಬೊಲೆರೋ ಕಾರನ್ನು ಗಿಫ್ಟ್ ಆಗಿ ನೀಡುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ದತ್ತಾತ್ರೇಯ ಅವರಿಗೆ ಹೊಸ ಕಾರು ನೀಡಿದ್ದಾರೆ. ಇದನ್ನೂ ಓದಿ: ಆಟೋ ಚಾಲಕನಿಂದ ಮಹಿಳೆಗೆ ಕಿರುಕುಳ – ಆರೋಪಿ ಅರೆಸ್ಟ್

    ಪ್ರತಿಭೆಗಳಿಗೆ ಕೊರತೆ ಇಲ್ಲ, ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ತೋರಿರುವ ಅನೇಕ ನಿದರ್ಶನಗಳಿವೆ. ಗ್ರಾಮೀಣ ಪ್ರದೇಶಗಳಲ್ಲೂ ಅನೇಕರು ಎಲೆಮರೆಕಾಯಿಯಂತೆ ವಿಭಿನ್ನ ರೀತಿಯ ಅನ್ವೇಷಣೆ ಮಾಡುತ್ತಿರುತ್ತಾರೆ. ಬಡ ಪ್ರತಿಭೆಗೆ ಇದೀಗ ಮಹೀಂದ್ರಾ ಕಂಪನಿ ಎಂಡಿ ಆನಂದ್ ಮಹೀಂದ್ರಾ ಬೊಲೆರೋ ಕಾರು ಗಿಫ್ಟ್ ನೀಡುವ ಮೂಲಕ ಪ್ರತಿಭೆಯನ್ನು ಪ್ರೋತ್ಸಾಹಿಸಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷಗಳು ಮಾಫಿಯಾವನ್ನು ರಕ್ಷಿಸುತ್ತಿದೆ: ಮಾಯಾವತಿ