ಬಳ್ಳಾರಿ: ಓವರ್‌ಟೇಕ್ ಮಾಡೋ ಭರದಲ್ಲಿ ಅಂಬುಲೆನ್ಸ್ ವಾಹನಕ್ಕೆ ಮಹೀಂದ್ರಾ ಪಿಕಪ್ ಡಿಕ್ಕಿ ಹೊಡೆದಿರಿವ ಘಟನೆ ಬಳ್ಳಾರಿ-ಸಿರುಗುಪ್ಪ ರಸ್ತೆಯ ತೆಕ್ಕಲಕೋಟೆ ಮಾರಮ್ಮ ದೇವಸ್ಥಾನ ಬಳಿ ನಡೆದಿದೆ.
ಅಪಘಾತವಾದ ಪರಿಣಾಮ ಒಬ್ಬ ಗಂಭೀರವಾಗಿ ಗಾಯಗೊಂಡರೆ ಮತ್ತೊಬ್ಬನ ಬೆನ್ನಿಗೆ ತೀವ್ರವಾದ ಪೆಟ್ಟು ಬಿದ್ದಿದೆ. ಅಂಬುಲೆನ್ಸ್ ವಾಹನ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಂಬುಲೆನ್ಸ್ ಬಳ್ಳಾರಿಯ ವಿಮ್ಸ್ ಗೆ ರೋಗಿಯನ್ನು ಬಿಟ್ಟು ವಾಪಸ್ ಸಿಂಧನೂರಿಗೆ ಬರುತ್ತಿತ್ತು. ಓವರ್ ಟೇಕ್ ಮಾಡುವ ಬರದಲ್ಲಿ ನಿಯಂತ್ರಣ ಕಳೆದುಕೊಂಡ ಪಿಕಪ್ ನೇರವಾಗಿ ಅಂಬುಲೆನ್ಸ್ ನ ಹಿಂಭಾಗಕ್ಕೆ ಗುದ್ದಿದೆ. ಗುದ್ದಿದ ರಭಸಕ್ಕೆ ಅಂಬುಲೆನ್ಸ್ ಹಿಂಭಾಗ ಅಪ್ಪಚ್ಚಿಯಾಗಿದೆ.
ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ, ವಾಹನದಲ್ಲಿ ಸಿಕ್ಕಿ ಹಾಕಿಕೊಂಡಿದ್ದವರನ್ನು ಹೊರತರಲು ಹರ ಸಾಹಸ ಪಟ್ಟರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
