Tag: ಮಹಿಷ ದಸರಾ

  • ಇಂದು ಮಹಿಷ ದಸರಾ – ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ

    ಇಂದು ಮಹಿಷ ದಸರಾ – ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ

    – ದಸರಾದಲ್ಲಿ ಶತಮಾನದ ವಿಂಟೇಜ್‌ ಕಾರುಗಳ ಕಲರವ

    ಮೈಸೂರು: ನಗರದಲ್ಲಿಂದು ಮಹಿಷ ದಸರಾ (Mahisha Dasara) ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮಾಡಿ ಪೊಲೀಸ್ (Mysuru Police) ಆಯುಕ್ತರು ಆದೇಶಿಸಿದ್ದಾರೆ.

    ತಡರಾತ್ರಿ 12 ಗಂಟೆಯಿಂದಲೇ ಸೆ.25ರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಯಾವುದೇ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ ಎಂದು ಆದೇಶಿಸಲಾಗಿದೆ. ಇದನ್ನೂ ಓದಿ: ನರೇಂದ್ರ ಮೋದಿ ಹೇಗೆ ಟೋಪಿ ಹಾಕ್ತಾರೆ ಅಂತ ನೀವು ತಿಳಿದುಕೊಳ್ಳಬೇಕು: ಸಿದ್ದರಾಮಯ್ಯ

    ದಸರಾ ಸೊಬಗು
    ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ (Mysuru Dasara) ಹತ್ತು ಹಲವು ಆಕರ್ಷಣೆಗಳು ಜನರನ್ನ ಕೈಬೀಸಿ ಕರೆಯುತ್ತಿವೆ. ಅದರಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ಕೂಡ ಒಂದು. ನಾವು ನೀವು ನೋಡಿರದ ಎಷ್ಟೋ ಅದ್ಬುತ ವಿಂಟೇಜ್ ಕಾರುಗಳ ಒಂದೇ ಜಾಗದಲ್ಲಿ ಕಾಣುಸಿಗುತ್ತೀರೋದು ವಿಶೇಷ. ಮತ್ತೊಂದೆಡೆ ಯುವ ದಸರಾಕ್ಕೂ ಚಾಲನೆ ಸಿಕ್ಕಿದ್ದು ಅರ್ಜುನ್ ಜನ್ಯ ಮ್ಯೂಸಿಕ್ ಕಲರವ ಮೋಡಿ ಮಾಡಿತ್ತು. ಇಂದು ಮಹಿಷ ದಸರಾ ಹಿನ್ನೆಲೆ. ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    ದಸರಾದಲ್ಲಿ ಶತಮಾನದ ಕಾರುಗಳ ಪ್ರದರ್ಶನ
    ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಸಂಭ್ರಮ ಹಿಮ್ಮಡಿಯಾಗಿದೆ. ನಿತ್ಯ ಹತ್ತು ಹಲವು ವಿಶೇಷ ಕಾರ್ಯಕ್ರಮಗಳು ದಸರಾ ರಂಗನ್ನ ಹೆಚ್ಚಿಸುತ್ತಿವೆ. ಈ ಪೈಕಿ ವಿಂಟೇಜ್ ಕಾರುಗಳು ಪ್ರದರ್ಶನವು ಒಂದು. ಪ್ರತಿವರ್ಷದಂತೆ ಈ ವರ್ಷವು ವಿಂಟೇಜ್ ಕಾರುಗಳು ದಸರಾ ರಂಗನ್ನ ಹೆಚ್ಚಿಸಿದ್ದು, ಜನರನ್ನ ಆಕರ್ಷಿಸುತ್ತಿದೆ. ಮೈಸೂರಿನ ಹೆಬ್ಬಾಳ ಕೈಗಾರಿಕ ಪ್ರದೇಶದಲ್ಲಿ ಆಯೋಜಿಸಿರುವ ಈ ಕಾರುಗಳ ಪ್ರದರ್ಶನದಲ್ಲಿ 1905ರ ಕಾರ್ ಮಾಡೆಲ್ ನಿಂದ 2025ರ ಮಾಡೆಲ್ ವರೆಗೂ ಕಾರುಗಳ ಕಾಣಸಿಗುತ್ತಿವೆ. ಇದರಲ್ಲಿ ಹಲವು ಕಾರುಗಳು ವಿದೇಶದಲ್ಲಿ ಮಾತ್ರ ಬಳಕೆಯಲ್ಲಿದ್ದಂತವು. ಇನ್ನೂ ಕೆಲವು ಭಾರತದ ರಸ್ತೆಗಳಲ್ಲಿ ಘರ್ಜಿಸಿ ಮರೆಯಾದವು. ಇನ್ನೂ ಕೆಲವು ರಾಜ ಮಹರಾಜರು ಬಳಸಿದ್ದ ಐಷಾರಾಮಿ ಕಾರುಗಳು. ಇದನ್ನೂ ಓದಿ: ಪಂಡಿತ್ ವೆಂಕಟೇಶ್ ಕುಮಾರ್‌ಗೆ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ

    ಪ್ರಮುಖವಾಗಿ ಯುಕೆ, ಯುಎಸ್, ಇಟಲಿ ಸೇರಿದಂತೆ ಹಲವು ದೇಶಗಳ ಕಾರುಗಳು. ಫೋರ್ಡ್ ಜಿಪಿಡಬ್ಲ್ಯೂ, ರೋಲ್ಸ್ ರಾಯ್, ಲ್ಯಾಂಡ್ ರೋವರ್, ಅಂಬಾಸಿಡರ್, ಬೆಡ್ ಫೋರ್ಡ್ ನಂತಹ ಹಲವು ಮರೆಯಾದ ಕಾರುಗಳು ಪ್ರದರ್ಶನದಲ್ಲಿ ಕಾಣಸಿಗುತ್ತಿವೆ. ಕಾರುಗಳ ಸಂಗ್ರಹ ಬಗ್ಗೆ ಮಾಲೀಕರಾದ ಸಾವಿತ್ರಿ ಗೋಪಿನಾಥ ಶೆಣೈ ಮಾತನಾಡಿ, ಇದು ನನ್ನ ಪತಿ ಹವ್ಯಾಸ. ಹಲವು ವರ್ಷಗಳಿಂದ ನಾನಾ ದೇಶಗಳಿಂದ ಈ ಕಾರುಗಳನ್ನ ತಂದು ಸಂಗ್ರಹಿಸಲಾಗಿದೆ.

    ಇನ್ನೂ ಇಲ್ಲಿ ಕೇವಲ ಕಾರ್ ಗಳು ಮಾತ್ರ ಅಲ್ಲದೇ ಹಳೆಯ ಬೈಕ್‌ಗಳೂ ಕಾಣಸಿಗುತ್ತಿವೆ. ಆರ್‌ಎಕ್ಸ್, ಜರ್ಮನ್ ಮಾಡೆಲ್ ಓಲ್ಡ್ ಬಿಎಂಡಬ್ಲ್ಯೂ ಬೈಕ್, ರಾಯಲ್ ಎನ್ಫಿಲ್ಡ್ ಓಲ್ಡ್, ಸೇರಿದಂತೆ ಹಲವು ಬೈಕ್ ಗಳು ಕೂಡ ಕಣ್ಮನ ಸೆಳೆಯುತ್ತಿವೆ. ಇದನ್ನೂ ಓದಿ: ಶೀಘ್ರವೇ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘ ಸ್ಥಾಪನೆ: ಲಕ್ಷ್ಮೀ ಹೆಬ್ಬಾಳ್ಕರ್

    ಯುವ ದಸರಾ 2025ಕ್ಕೆ ಚಾಲನೆ..!
    ದಸರಾ ಅಂದ್ರೆ ಯುವ ದಸರಾನೆ ತುಂಬಾ ಫೇಮಸ್. ಇದೀಗ ಯುವ ದಸರಾ 2025ಕ್ಕೆ ಚಾಲನೆ ಸಿಕ್ಕಿದ್ದು 5 ದಿನಗಳ ಕಾಲ ಯುವದಸರಾ ಸಂಭ್ರಮಾಚರಣೆ ಇರಲಿದೆ. ನಿನ್ನೆ ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ರು ಮೊದಲ ದಿನವಾದ ನಿನ್ನೆ ಅರ್ಜುನ್ ಜನ್ಯ ಮ್ಯೂಸಿಕ್ ಕಲರವ ಜೋರಾಗಿತ್ತು. ಬೆಂಗಳೂರು ಮೂಲದ ಲಗೋರಿ ಬ್ಯಾಂಡ್‌ಗೆ ಯುವಕರು ಕುಣಿದು ಕುಪ್ಪಳಿಸಿದ್ರು.

  • ನಂಬಿಕೆಗೆ ಧಕ್ಕೆಯಾಗದಂತೆ ಮಹಿಷ ದಸರಾ ಆಚರಿಸಿದ್ರೆ ನಮಗೂ ಸಂತೋಷ: ಯದುವೀರ್

    ನಂಬಿಕೆಗೆ ಧಕ್ಕೆಯಾಗದಂತೆ ಮಹಿಷ ದಸರಾ ಆಚರಿಸಿದ್ರೆ ನಮಗೂ ಸಂತೋಷ: ಯದುವೀರ್

    -ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಬೇಡ

    ಉಡುಪಿ: ಮೈಸೂರು ಚಾಮುಂಡಿ ಬೆಟ್ಟ ಧಾರ್ಮಿಕ ಕ್ಷೇತ್ರ, ಅದು ಚಾಮುಂಡೇಶ್ವರಿ ತಾಯಿಯ ಆಸ್ತಿ. ನಾವು ಆ ತಾಯಿಯನ್ನು ಮಹಿಷಾಸುರಮರ್ದಿನಿ ಎಂದು ನಂಬುತ್ತೇವೆ. ಈ ಭಾವನೆಗೆ ಧಕ್ಕೆ ಆಗದಂತೆ ಮಹಿಷ ದಸರಾ ಆಚರಣೆ ಮಾಡಬಹುದು. ಆದರೆ ಚಾಮುಂಡಿಬೆಟ್ಟದ ಮೇಲೆ ಮಹಿಷ ದಸರಾ (Mahisha Dasara) ಸರಿಯಲ್ಲ ಎಂದು ಸಂಸದ ಯದುವೀರ್ ಒಡೆಯರ್ (Yaduveer Wodeyar) ಹೇಳಿದ್ದಾರೆ.

    ನಗರದಲ್ಲಿ (Udupi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಷ ದಸರಾ ವಿಚಾರವಾಗಿ ಪ್ರತಿಕ್ರಿಸಿಸಿದರು. ಈ ವೇಳೆ, ಸಂವಿಧಾನದಲ್ಲಿ ಯಾವುದೇ ನಂಬಿಕೆಗಳನ್ನು ಇಟ್ಟುಕೊಳ್ಳಲು ಅವಕಾಶವಿದೆ. ಮನೆಯಲ್ಲಿ ಯಾವುದೇ ಆಚರಣೆ ಮಾಡಬಹುದು. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲೂ ಸರ್ಕಾರದಿಂದ ಅನುಮತಿ ಪಡೆದು ಮಾಡಿಕೊಳ್ಳಬಹುದು. ನಿಯಮ ಅನುಸರಿಸಿ ಆಚರಣೆ ಮಾಡಿದರೆ ನಮಗೂ ಸಂತೋಷ ಎಂದರು.

    ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದ ವಿಚಾರವಾಗಿ, ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣದ ಬಗ್ಗೆ ಬಹಳಷ್ಟು ಚರ್ಚೆ ನಡೆದಿದೆ. ಈಗಾಗಲೇ ಎಫ್‍ಐಆರ್ ಕೂಡ ದಾಖಲಾಗಿದೆ. ಮುಖ್ಯಮಂತ್ರಿಗಳು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ರಾಜೀನಾಮೆ ಕೊಟ್ಟು ತನಿಖೆಯನ್ನು ಎದುರಿಸಲಿ. ತನಿಖೆಯಲ್ಲಿ ಏನು ವರದಿ ಬರುತ್ತದೆ ಎಂಬುದನ್ನು ನೋಡಿ ಮುಂದುವರೆಯಲಿ ಎಂದಿದ್ದಾರೆ.

    ಮಹಿಷ ಮಂಡಲೋತ್ಸವ ವರ್ಸಸ್ ಚಾಮುಂಡಿ ಚಲೋ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಚಾಮುಂಡಿ ತಾಯಿ ದರ್ಶನಕ್ಕೆ ಯಾರಿಗೂ ಇವತ್ತು ಅವಕಾಶ ಇಲ್ಲ. ಹೀಗಾಗಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

  • ಇಂದು ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ; ತಾಯಿ ದರ್ಶನಕ್ಕೆ ನಿರ್ಬಂಧ

    ಇಂದು ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ; ತಾಯಿ ದರ್ಶನಕ್ಕೆ ನಿರ್ಬಂಧ

    ಮೈಸೂರು: ಮಹಿಷ ಮಂಡಲೋತ್ಸವ ವರ್ಸಸ್ ಚಾಮುಂಡಿ ಚಲೋ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನ (Mysuru) ಚಾಮುಂಡಿ ಬೆಟ್ಟದಲ್ಲಿ (Chamundi Hill) ನಿಷೇಧಾಜ್ಞೆ ಜಾರಿಯಾಗಿದೆ.

    ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಚಾಮುಂಡಿ ತಾಯಿ ದರ್ಶನಕ್ಕೆ ಯಾರಿಗೂ ಇವತ್ತು ಅವಕಾಶ ಇಲ್ಲ. ಹೀಗಾಗಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಡಿವೈಡರ್‌ಗೆ ಬಸ್ ಡಿಕ್ಕಿಯಾಗಿ ಸರಣಿ ಅಪಘಾತ – ನಾಲ್ವರು ಮಕ್ಕಳು ಸೇರಿ 7 ಮಂದಿ ದುರ್ಮರಣ

    ಮಹಿಷ ದಸರಾ ಆಚರಣಾ ಸಮಿತಿಯು ಇಂದು ಮಹಿಷ ದಸರಾ (Mahisha Dasara) ಆಚರಣೆಗೆ ಕರೆ ನೀಡಿತ್ತು. ಬೆಳಗ್ಗೆ 10:30ಕ್ಕೆ ಚಾಮುಂಡಿಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಹಾಗೂ ಪುರಭವನದ ಹೊರಾವರಣದಲ್ಲಿ ಮಹಿಷ ಮಂಡಲೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿತ್ತು.

    ಈ ವೇಳೆ ಯಾವುದೇ ಮೆರವಣಿಗೆ, ಬೈಕ್ ರ್‍ಯಾಲಿ ನಡೆಸುವುದು, ಪರ-ವಿರೋಧ ಘೋಷಣೆ ಕೂಗುವುದು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವುದು, 5 ಜನರಿಗಿಂತ ಹೆಚ್ಚಿನ ಜನ ಗುಂಪು ಸೇರುವುದು, ಯಾವುದೇ ಬಹಿರಂಗ ಸಭೆ ಸಮಾರಂಭಗಳನ್ನು ನಡೆಸುವುದು ಹಾಗೂ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ, ದ್ವನಿವರ್ಧಕ ಬಳಸುವುದು, ಫ್ಲೆಕ್ಸ್, ಬ್ಯಾನರ್ ಅಳವಡಿಸುವುದು, ಕರಪತ್ರಗಳನ್ನು ಹಂಚುವುದು, ಮೂರ್ತಿ ಮೆರವಣಿಗೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನೂ ಓದಿ: ಇಸ್ರೇಲಿ ದಾಳಿ; ಒಂದೇ ದಿನ 33 ಮಂದಿ ಸಾವು, 195 ಮಂದಿಗೆ ಗಾಯ

  • ಮಹಿಷ ದಸರಾದಿಂದ ಮೈಸೂರು ಹೆಸರೇ ಚೇಂಜ್ – ಮೈಸೂರು ಅಲ್ಲ, ‘ಮಹಿಷೂರು’ ಅಂತಾ ಬದಲಾವಣೆ

    ಮಹಿಷ ದಸರಾದಿಂದ ಮೈಸೂರು ಹೆಸರೇ ಚೇಂಜ್ – ಮೈಸೂರು ಅಲ್ಲ, ‘ಮಹಿಷೂರು’ ಅಂತಾ ಬದಲಾವಣೆ

    – ಚಾಮುಂಡಿಬೆಟ್ಟಕ್ಕೆ ಮಹಿಷ ಬೆಟ್ಟ ಎಂದು ಹೆಸರು
    – ವಿವಾದಕ್ಕೆ ಎಡೆಮಾಡಿಕೊಟ್ಟ ಮಹಿಷಾ ಸಮಿತಿ ಆಹ್ವಾನ ಪತ್ರಿಕೆ

    ಮೈಸೂರು: ಮಹಿಷಾ ದಸರಾದಿಂದ ( Mahisha Dasara) ಮೈಸೂರು (Mysuru) ಹೆಸರೇ ಬದಲಾಗಿದೆ. ಮಹಿಷ ದಸರಾ ಆಚರಣಾ ಸಮಿತಿ ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಬದಲಿಗೆ ಮಹಿಷೂರು, ಚಾಮುಂಡಿಬೆಟ್ಟ  ಬದಲಿಗೆ ಮಹಿಷಾ ಬೆಟ್ಟ ಎಂದು ಹೆಸರು ಮುದ್ರಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

    ಇದೇ ತಿಂಗಳು 29 ರಂದು ಮಹಿಷಾ ದಸರಾ ನಡೆಸಲು ಸಮಿತಿ ಉದ್ದೇಶಿಸಿದೆ. ಚಾಮುಂಡಿ ಬೆಟ್ಟದಲ್ಲಿ (Chamundi Hill) ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಿ ನಂತರ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮಹಿಷಾ ದಸರಾ ಹೆಸರಿನಲ್ಲಿ ಈಗಾಗಲೇ ಸಂಘರ್ಷ ಶುರುವಾಗಿದೆ. ಇದನ್ನೂ ಓದಿ: ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿತ- ಮಣ್ಣಿನಡಿ ಸಿಲುಕಿ ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

    ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದರೆ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತದೋ ಚಾಮುಂಡಿಯ ಭಕ್ತರ ಕೈ ಮೇಲಾಗುತ್ತದೋ ನೋಡಿಯೇ ಬಿಡೋಣ ಎಂದು ಮಹಿಷ ದಸರಾ ಆಚರಣೆ ಸಮಿತಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ವಿವಾದ – ಇಂದಿನಿಂದ ಟಿಟಿಡಿ ದೇವಾಲಯ ಪವಿತ್ರೋತ್ಸವ

  • ಮೈಸೂರಿನಲ್ಲಿ ಮಹಿಷ ದಸರಾ ಫೈಟ್ – ಈ ಬಾರಿ `ಮಹಿಷ ಮಂಡಲೋತ್ಸವ’!

    ಮೈಸೂರಿನಲ್ಲಿ ಮಹಿಷ ದಸರಾ ಫೈಟ್ – ಈ ಬಾರಿ `ಮಹಿಷ ಮಂಡಲೋತ್ಸವ’!

    – ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಿಸಲು ಬಿಡಲ್ಲ
    – `ಚಾಮುಂಡಿ ಚಲೋ’ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಕರೆ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು (Mysuru) ದಸರಾ (Dasara) ಹಬ್ಬದ ಸಂಭ್ರಮಕ್ಕೆ ಸಿದ್ಧವಾಗ್ತಿದೆ. ಈ ಸಂಭ್ರಮದ ನಡುವೆ ಮತ್ತೆ ಮಹಿಷ ದಸರಾ ಕೂಗು ಕೇಳಿ ಬಂದಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮಹಿಷ ದಸರಾ (Mahisha Dasara) ವಿಚಾರ ಮತ್ತೆ ವಿವಾದ ಸೃಷ್ಟಿ ಮಾಡಿದೆ.

    ಮೈಸೂರಿನಲ್ಲಿ ದಸರಾ ಸಂಭ್ರಮ ಅಧಿಕೃತವಾಗಿ ಆರಂಭವಾಗಲು ಇನ್ನೂ ಒಂದು ವಾರ ಮಾತ್ರ ಬಾಕಿ ಇದೆ. ಈ ಹೊತ್ತಿನಲ್ಲೇ ಮಹಿಷ ದಸರಾ ವಿಚಾರವೂ ಮುನ್ನೆಲೆಗೆ ಬಂದಿದೆ. ಸೆಪ್ಟೆಂಬರ್ 29 ರಂದು ಮಹಿಷ ದಸರಾ ಮಾಡುತ್ತೇವೆ ಅಂತ ಮಹಿಷ ದಸರಾ ಆಚರಣ ಸಮಿತಿ ಹೇಳಿದೆ. ಇದನ್ನೂ ಓದಿ: ಪುಣೆ ಏರ್‌ಪೋರ್ಟ್ ಹೆಸರು ಬದಲಾವಣೆ – ಜಗದ್ಗುರು ಸಂತ ತುಕಾರಾಂ ನಿಲ್ದಾಣವಾಗಿ ಮರುನಾಮಕರಣ

    ಚಾಮುಂಡಿ ಬೆಟ್ಟದಲ್ಲಿನ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಹಿಷ ದಸರಾ ಮಾಡುತ್ತೇವೆ. ಅಲ್ಲದೇ ಈ ಬಾರಿಯಿಂದ ಮಹಿಷಾ ದಸರಾ ಬದಲು `ಮಹಿಷ ಮಂಡಲೋತ್ಸವ’ ಎಂದು ಹೊಸ ಹೆಸರು ಇಟ್ಟಿದ್ದೇವೆ ಅಂತ ಹೇಳಿದೆ. ಇದನ್ನೂ ಓದಿ: ನಿಮ್ಮ ಕೈಯಲ್ಲಿರೋ ಸ್ಮಾರ್ಟ್‌ಫೋನ್‌ ಹ್ಯಾಕ್‌ ಮಾಡಿ ಸ್ಫೋಟಿಲು ಸಾಧ್ಯವೇ? ಹ್ಯಾಕಿಂಗ್‌ ತಪ್ಪಿಸಲು ಏನು ಮಾಡ್ಬೇಕು?

    ಮಹಿಷ ದಸರಾ ವಿಚಾರ ಸಹಜವಾಗಿಯೇ ಬಿಜೆಪಿ (BJP) ನಾಯಕರನ್ನು ಸಿಟ್ಟಿಗೇಳುವಂತೆ ಮಾಡಿದೆ. ಮೊದಲಿಂದಲೂ ಮಹಿಷ ದಸರಾಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha), ಈ ಬಾರಿಯೂ ಧ್ವನಿ ಜೋರು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಮಾಡಲು ಬಿಡಲ್ಲ. ಒಂದು ವೇಳೆ ಅವರು ಅಲ್ಲೇ ಆಚರಿಸಲು ಹೊರಟರೆ ನಾವು ಕೂಡ ಚಾಮುಂಡಿ ಚಲೋ ಮಾಡ್ತಿವಿ. ನಾವಾ ಅವರ ನೋಡೇಬಿಡೋಣಾ ಅಂತ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ರಾಕೆಟ್‌ ದಾಳಿಗೆ ಲೆಬನಾನ್‌ ಛಿದ್ರ ಛಿದ್ರ – ಸಾವಿನ ಸಂಖ್ಯೆ 492ಕ್ಕೆ ಏರಿಕೆ!

  • ನಿಷೇಧಾಜ್ಞೆ ನಡುವೆಯೂ ಮಹಿಷ ದಸರಾ ಆಚರಣೆ – ನೂರಾರು ದಲಿತ ಮುಖಂಡರು ವಶಕ್ಕೆ

    ನಿಷೇಧಾಜ್ಞೆ ನಡುವೆಯೂ ಮಹಿಷ ದಸರಾ ಆಚರಣೆ – ನೂರಾರು ದಲಿತ ಮುಖಂಡರು ವಶಕ್ಕೆ

    ಚಿಕ್ಕಮಗಳೂರು: ಜಿಲ್ಲಾಡಳಿತದ ನಿಷೇಧಾಜ್ಞೆ ಹೊರಡಿಸಿದ ನಡುವೆಯೂ ಮಹಿಷ ದಸರಾ (Mahisha Dasara) ಆಚರಣೆಗೆ ಮುಂದಾಗಿದ್ದ ದಲಿತ ಮುಖಂಡರು ಹಾಗೂ ಪ್ರಗತಿಪರ ಸಂಘಟನೆಯ ನೂರಾರು ಕಾರ್ಯಕರ್ತರನ್ನ ವಶಕ್ಕೆ ಪಡೆದಿರುವ ಘಟನೆ ನಗರದಲ್ಲಿ ನಡೆದಿದೆ.

    ಇಲ್ಲಿನ ದಲಿತ ಸಂಘಟನೆಯ ಮುಖಂಡರು (Dalit Leaders) ನಗರದ ಹನುಮಂತಪ್ಪ ವೃತ್ತದಿಂದ ಮಹಿಷ ದಸರಾ ಮೆರವಣಿಗೆಗೆ ಮುಂದಾಗಿದ್ದರು.‌ ಮಹಿಷನ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿರುವುದನ್ನು ತಿಳಿದಿದ್ದ ಪೊಲೀಸರು (Police) ಹನುಮಂತಪ್ಪ ಸರ್ಕಲ್ ನಲ್ಲಿ ಬಿಗಿ ಭದ್ರತೆ ಒದಗಿಸಿದ್ದರು. ಇದನ್ನೂ ಓದಿ: ಗೋ ಬ್ಯಾಕ್ ರಿಜ್ವಾನ್; ಬೆಂಗ್ಳೂರಲ್ಲಿ ಪಾಕ್ ಕ್ರಿಕೆಟಿಗರ ವಿರುದ್ಧ ಹಿಂದೂ ಕಾರ್ಯಕರ್ತರ ಪ್ರತಿಭಟನೆ

    ದಲಿತಪರ ಸಂಘಟನೆಗಳ ಕಾರ್ಯಕರ್ತರು ಇನ್ನೇನು ಮೆರವಣಿಗೆ ಆರಂಭಿಸಬೇಕು ಎನ್ನುವಷ್ಟರಲ್ಲಿಯೇ ಸುತ್ತುವರಿದ ಪೊಲೀಸರು ಮೆರವಣಿಗೆಗೆ ಸಿದ್ಧರಾಗಿದ್ದ ದಲಿತಪರ ಸಂಘಟನೆಗಳ ಮುಖಂಡರನ್ನ ವಶಕ್ಕೆ ಪಡೆದಿದ್ದಾರೆ. ಮಧ್ಯಾಹ್ನ 3 ಗಂಟೆ ವೇಳೆಗೆ ವಶಕ್ಕೆ ಪಡೆದಿದ್ದ ಮುಖಂಡರನ್ನು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡು ರಾತ್ರಿ 8ಗಂಟೆ ನಂತರ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಎಂಗೆ ಕ್ರಿಕೆಟ್‌ ಕ್ರೇಜ್‌ – ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ vs ಪಾಕಿಸ್ತಾನ ಮ್ಯಾಚ್‌ ವೀಕ್ಷಿಸಿದ ಸಿದ್ದರಾಮಯ್ಯ

    ಮೆರವಣಿಗೆ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆದಿದ್ದು, ತಳ್ಳಾಟ ನೂಕಾಟವೂ ಊಂಟಾಗಿದೆ. ಅಲ್ಲದೇ ಪೊಲೀಸರು ಹಾಗೂ ಜಿಲ್ಲಾಡಳಿತದ ನಡೆಗೆ ದಲಿತ ಆಕ್ರೋಶ ವ್ಯತಕ್ತಪಡಿಸಿದ್ದಾರೆ.

    ಜಿಲ್ಲಾಡಳಿತ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ, ಆದ್ದರಿಂದಲೇ ಮಹಿಷ ದಸರಾ ಆಚರಣೆಗೆ ಅನುಮತಿ ನೀಡಿಲ್ಲ ಜೊತೆಗೆ ಈ ಅವಧಿಯಲ್ಲಿಯೇ ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: BJP-JDS ಮೈತ್ರಿಗೆ ಕೇರಳ ನಾಯಕರು ಒಪ್ಪಿದ್ದಾರೆ ಎಂದು ನಾನು ಹೇಳಿಲ್ಲ: ಹೆಚ್.ಡಿ ದೇವೇಗೌಡ

    ಮಹಿಷ ದಸರಾ ಕಾರ್ಯಕ್ರಮಕ್ಕೆ ಪ್ರಗತಿಪರ ಚಿಂತಕ ಪ್ರೊ.ಭಗವಾನ್ ಆಗಮಿಸಲು ಅವಕಾಶ ನೀಡದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಜೊತೆಗೆ ಜಿಲ್ಲಾಧಿಕಾರಿಗೆ ಮನವಿಯನ್ನೂ ಸಲ್ಲಿಸಿದ್ದವು. ಆದರೆ, ಶುಕ್ರವಾರ ಚಿಕ್ಕಮಗಳೂರಿಗೆ ಭಗವಾನ್ ಆಗಮಿಸಿರಲಿಲ್ಲ. ಹೀಗಾಗಿ ನಿಷೇಧಾಜ್ಞೆ ಇದ್ದರೂ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ಕೆಲ ಮುಖಂಡರನ್ನು ವಶಕ್ಕೆ ಪಡೆಯಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಷಾಸುರ ದುರ್ಗುಣಗಳ ಪ್ರತೀಕ; ಮಹಿಷ ದಸರಾ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ: ಪೇಜಾವರ ಶ್ರೀ

    ಮಹಿಷಾಸುರ ದುರ್ಗುಣಗಳ ಪ್ರತೀಕ; ಮಹಿಷ ದಸರಾ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ: ಪೇಜಾವರ ಶ್ರೀ

    ಚಿಕ್ಕೋಡಿ: ಮಹಿಷಾಸುರ (Mahishasur) ದುರ್ಗುಣಗಳ ಪ್ರತೀಕ ಎಂದು ಮಹಿಷ ದಸರಾ ಉತ್ಸವ ಆಚರಣೆ ಕುರಿತು ಉಡುಪಿಯ ಪೇಜಾವರ ಶ್ರೀಗಳು (Pejavara Sri) ಪ್ರತಿಕ್ರಿಯೆ ನೀಡಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ಪಟ್ಟಣದ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಭಾಗಿಯಾಗಿ ಪೇಜಾವರ ಶ್ರೀಗಳು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದರು. ಮಹಿಷಾಸುರ ಮರ್ದಿನಿ ಎಂದು ಚಾಮುಂಡೇಶ್ವರಿ ಪೂಜೆ ಮಾಡುತ್ತೇವೆ. ದುಷ್ಟ ಅಂತ ಹೇಳಿ ಚಾಮುಂಡೇಶ್ವರಿ ಮಹಿಷಾಸುರನನ್ನು ಮರ್ದನ ಮಾಡಿದ್ದಾಳೆ ಎಂದು ತಿಳಿಸಿದರು.

    ಚಾಮುಂಡೇಶ್ವರಿ ಉತ್ಸವವನ್ನು ಸರ್ಕಾರವೇ ಮಾಡುತ್ತಿದೆ. ಮತ್ತೊಂದು ಕಡೆ ಮಹಿಷಾಸುರನ ಉತ್ಸವ ಮಾಡುವಲ್ಲಿ ಅರ್ಥವಿಲ್ಲ. ದುರ್ಗುಣಗಳ ಉತ್ಸವ ಮಾಡುವುದು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತದಲ್ಲಿ ಇರಬೇಕೆಂದರೆ ಭಾರತ್ ಮಾತಾ ಕಿ ಜೈ ಎನ್ನಬೇಕು: ಕೇಂದ್ರ ಸಚಿವ

    ಪ್ರೋ.ಕೆಎಸ್ ಭಗವಾನ್ ಒಕ್ಕಲಿಗರ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಭಗವಾನ್ ಅವರ ವಿಚಾರಕ್ಕೆ ಬಿಟ್ಟಿದ್ದು. ಸಮಾಜದಲ್ಲಿ ಹೆಸರು ಬರಲು ದೊಡ್ಡವರ ಬಗ್ಗೆ ತುಚ್ಛವಾಗಿ ನಿಂದಿಸುವ, ಪ್ರಚಾರ ಪಡೆಯುವ ಹುನ್ನಾರ ಭಗವಾನ್ ಅವರದ್ದಾಗಿದೆ ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪಬ್ಲಿಕ್ ಟಿವಿಗೆ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಐಸಿಎಸ್‌ಐ ವಾಕಥಾನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಲೀಸ್‌ ಸರ್ಪಗಾವಲಲ್ಲಿ ಮಹಿಷ ದಸರಾ ಆಚರಣೆ, ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧ – ಬಿಗಿ ಪೊಲೀಸ್ ಬಂದೋಬಸ್ತ್

    ಪೊಲೀಸ್‌ ಸರ್ಪಗಾವಲಲ್ಲಿ ಮಹಿಷ ದಸರಾ ಆಚರಣೆ, ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧ – ಬಿಗಿ ಪೊಲೀಸ್ ಬಂದೋಬಸ್ತ್

    ಮೈಸೂರು: ಚಾಮುಂಡಿ ಬೆಟ್ಟಕ್ಕೆ (Chamundi Hills) ಇಂದು (ಅ.13) ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಹಿಷ ದಸರಾ (Mahisha Dasara) ಮತ್ತು ಚಾಮುಂಡಿ ಚಲೋ ಜಾಥಾ ಎರಡಕ್ಕೂ ಮೈಸೂರು ಜಿಲ್ಲಾಡಳಿತ ನಿರ್ಬಂಧ ಹೇರಿ 144 ಸೆಕ್ಷನ್ ಜಾರಿಗೊಳಿಸಿದೆ. ಹೀಗಾಗಿ ಚಾಮುಂಡಿಬೆಟ್ಟದ ಪಾದದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಪೊಲೀಸ್ ಆಯುಕ್ತರಾದ ಡಾ.ರಮೇಶ್ ಪುರಭವನದಲ್ಲಿ ಮಹಿಷ ದಸರಾ ಆಚರಿಸಲು ಅನುಮತಿ ನೀಡಿದ್ದು, ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಯಾವುದೇ ಪ್ರಚೋದನಕಾರಿ ಭಾಷಣ ಮಾಡದಂತೆ ಎಚ್ಚರಿಕೆಯನ್ನೂ ನೀಡಲಾಗಿದ್ದು, ಸುಮಾರು 2 ಸಾವಿರ ಮಂದಿ ಪೊಲೀಸ್‌ (Mysuru City Police) ಭದ್ರತೆಯನ್ನು ನಿಯೋಜಿಸಲಾಗಿದೆ. ಸದ್ಯ ಎರಡೂ ಕಾರ್ಯಕ್ರಮಗಳಿಗೆ ಬ್ರೇಕ್‌ ಬಿದ್ದಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇದನ್ನೂ ಓದಿ: ಮಹಿಷಾ ದಸರಾ ಪರ, ವಿರೋಧ – ಮೈಸೂರಿನಲ್ಲಿ ಸೆಕ್ಷನ್ 144 ಜಾರಿ

    ಚಾಮುಂಡಿ ಕಾಲ್ಪನಿಕ, ಮಹಿಷಾ ಇತಿಹಾಸ ಪುರುಷ:
    ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ನಾವು ಜನಪದದಲ್ಲಿ ಬರುವ ಚಾಮುಂಡಿಯ ಪ್ರಸಂಗ ಹೇಳಿದ್ದೇವೆ. ಆದರೆ ನಾವು ಚಾಮುಂಡಿಯನ್ನು ನಿಂದಿಸಿಲ್ಲ. ನಮಗೆ ಮಹಿಷನ ಮೇಲೂ ಭಕ್ತಿ ಗೌರವವಿದೆ, ಚಾಮುಂಡಿ ಮೇಲೂ ಇದೆ. ನೀವು ಮಹಿಷನ ಹಿನ್ನೆಲೆ ಕೇಳಿದ್ರೆ, ನಾವು ಚಾಮುಂಡಿ ಹಿನ್ನೆಲೆ ಕೇಳ್ತಿವಿ. ಚಾಮುಂಡಿ ಕಾಲ್ಪನಿಕ, ಮಹಿಷ ಇತಿಹಾಸ ಪುರುಷ ಅನ್ನೋದು ಸತ್ಯ ಎಂದು ನುಡಿದಿದ್ದಾರೆ.

    ಚಾಮುಂಡಿ ಕೀಳಾಗಿ ಮಾತಾಡಲ್ಲ:
    ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಚಾಮುಂಡಿ ದೇವಿ ಬಗ್ಗೆ ನಮ್ಮಲೇ ಕೆಲವರು ಕೆಟ್ಟದಾಗಿ ಮಾತನಾಡಿದ್ದು ತಪ್ಪು. ಆ ತಪ್ಪು ಮುಂದೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ಬಳಿ ಬೇಡಿಕೊಳ್ಳುವ ಪ್ರತಿಯೊಬ್ಬರು ಮಹಿಷಾ ದಸರಾ ವಿರೋಧ ಮಾಡಬೇಕು: ಪ್ರತಾಪ್ ಸಿಂಹ

    ಬೆಟ್ಟದಲ್ಲಿ ಮಹಿಷ ದಸರಾಕ್ಕೆ ಬ್ರೇಕ್ ಬಿದ್ದಿದ್ದು ಸಮಾಧಾನ:
    ಬಿಜೆಪಿ ಶಾಸಕ ಶ್ರೀವತ್ಸ ಟಿ.ಎಸ್‌ ಶ್ರೀವತ್ಸ ಮಾತನಾಡಿ, ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ನಡೆಸುವುದು ನಿಲ್ಲಿಸೋದೇ ನಮ್ಮ ಉದ್ದೇಶವಾಗಿತ್ತು. ಆ ಕೆಲಸದಲ್ಲಿ ನಮಗೆ ಜಯ ಸಿಕ್ಕಿದೆ. ಮಹಿಷಾ ದಸರಾ ತಡೆಯಲು ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದ್ದೇವು. ಈಗ ಅದಕ್ಕೆ ಬ್ರೇಕ್ ಬಿದ್ದಿದೆ. ಇದು ನಮಗೆ ಸಮಾಧಾನ ತಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಷ ದಸರಾ, ಚಲೋ ಚಾಮುಂಡಿ ಬೆಟ್ಟ ಕಾರ್ಯಕ್ರಮಗಳಿಗೆ ಬ್ರೇಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೈಸೂರಿನಲ್ಲಿ ಮಹಿಷ ದಸರಾಕ್ಕೆ ಅನುಮತಿ

    ಮೈಸೂರಿನಲ್ಲಿ ಮಹಿಷ ದಸರಾಕ್ಕೆ ಅನುಮತಿ

    ಮೈಸೂರು: ಭಾರೀ ಚರ್ಚೆಯಾಗುತ್ತಿರುವ ಮಹಿಷ ದಸರಾದ (Mahisha Dasara) ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಅಲ್ಲದೇ ಕಾರ್ಯಕ್ರಮದಲ್ಲಿ ಯಾವುದೇ ಪ್ರಚೋದನಕಾರಿ ಭಾಷಣ ಮಾಡದಂತೆ ಪೊಲೀಸ್ ಆಯುಕ್ತ ಡಾ.ರಮೇಶ್ ಎಚ್ಚರಿಕೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪುರಭವನದಲ್ಲಿ ಬೆ.10 ರಿಂದ 12ರವರೆಗೆ ಮಹಿಷ ದಸರಾ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಪುರಭವನದ ಒಳಗಿನ ಸಭಾಂಗಣ ಬಿಟ್ಟು ನಗರದ ಎಲ್ಲಾ ಕಡೆ 144 ಸೆಕ್ಷನ್ ಜಾರಿ ಮಾಡಲಾಗುತ್ತದೆ. ಇದರಿಂದಾಗಿ ಮೆರವಣಿಗೆ ಹಾಗೂ ಬೈಕ್ ರ‍್ಯಾಲಿ ನಡೆಸಬಾರದು. ಪರ ಹಾಗೂ ವಿರೋಧ ಘೋಷಣೆ ಕೂಗಬಾರದು. ಅಲ್ಲದೇ ಪ್ರಚೋದನಕಾರಿ ಹೇಳಿಕೆ ನೀಡಬಾರದು ಎಂದಿದ್ದಾರೆ. ಇದನ್ನೂ ಓದಿ: ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿ ಮಾಜಿ ಶಾಸಕ ರಾಮಪ್ಪ ಲಮಾಣಿ

    ಭದ್ರತೆಗೆ 2 ಸಾವಿರ ಪೊಲೀಸರ (Police) ನಿಯೋಜನೆ ಮಾಡಲಾಗಿದೆ. ಮಹಿಷ ದಸರಾ ವಿಚಾರವಾಗಿ ಪ್ರಚೋದನಕಾರಿಯಾಗಿ ಹೇಳಿಕೆ ಹಾಗೂ ಪೋಸ್ಟ್ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಷಾ ದಸರಾ ಪರ, ವಿರೋಧ – ಮೈಸೂರಿನಲ್ಲಿ ಸೆಕ್ಷನ್ 144 ಜಾರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಷ ದಸರಾ, ಚಲೋ ಚಾಮುಂಡಿ ಬೆಟ್ಟ ಕಾರ್ಯಕ್ರಮಗಳಿಗೆ ಬ್ರೇಕ್

    ಮಹಿಷ ದಸರಾ, ಚಲೋ ಚಾಮುಂಡಿ ಬೆಟ್ಟ ಕಾರ್ಯಕ್ರಮಗಳಿಗೆ ಬ್ರೇಕ್

    ಮೈಸೂರು: ಮಹಿಷ ದಸರಾ, ಚಲೋ ಚಾಮುಂಡಿ ಬೆಟ್ಟ ಕಾರ್ಯಕ್ರಮಗಳಿಗೆ ಪೊಲೀಸ್‌ ಇಲಾಖೆ ಬ್ರೇಕ್‌ ಹಾಕಿದೆ. ಎರಡು ಕಾರ್ಯಕ್ರಮಗಳಿಗೂ ಇಲಾಖೆ ಅನುಮತಿ ನಿರಾಕರಿಸಿದೆ.

    ಇದೇ ತಿಂಗಳ 13 ರಂದು ಮಹಿಷ ದಸರಾ ಆಚರಣೆಗೆ ಮಹಿಷ ದಸರಾ ಆಚರಣಾ ಸಮಿತಿ ಕರೆ ಕೊಟ್ಟಿತ್ತು. ಚಾಮುಂಡಿ ಬೆಟ್ಟಕ್ಕೆ ತೆರಳಿ ಮಹಿಷನ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಹಿಷ ದಸರಾಗೆ ಚಾಲನೆ ನೀಡಲು ನಿರ್ಧರಿಸಿತ್ತು. ಇದನ್ನೂ ಓದಿ: ಮಹಿಷ ದಸರಾ ಆಚರಣೆಗೆ 50 ವರ್ಷ; ಚರ್ಚೆ ಹುಟ್ಟುಹಾಕಿದ ಆಹ್ವಾನ ಪತ್ರಿಕೆ

    ಮಹಿಷ ದಸರಾ ವಿರುದ್ಧ ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದರು. ಮಹಿಷ ದಸರಾ ಆಚರಣೆ ವಿರೋಧಿಸಿ ಅದೇ ದಿನ (ಅ.13) ಚಲೋ ಚಾಮುಂಡಿ ಬೆಟ್ಟ ಹಮ್ಮಿಕೊಳ್ಳಲಾಗಿದೆ. ಪ್ರತಾಪ್‌ ಸಿಂಹ ನೇತೃತ್ವದಲ್ಲಿ ಬಿಜೆಪಿ ಮೈಸೂರಿನಲ್ಲಿ ಈ ಚಲೋ ಚಾಮುಂಡಿ ಬೆಟ್ಟ ಕರೆ ನೀಡಿತ್ತು.

    ಎರಡು ಕಾರ್ಯಕ್ರಮದ ಆಯೋಜಕರು ಪೊಲೀಸ್ ಅನುಮತಿ ಕೇಳಿದ್ದರು. ಮೈಸೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡೂ ಕಾರ್ಯಕ್ರಮಗಳಿಗೂ ಪೊಲೀಸ್‌ ಇಲಾಖೆ ಅನುಮತಿ ನಿರಾಕರಿಸಿದೆ. ಇದನ್ನೂ ಓದಿ: ವೀರಪ್ಪನ್‌ ದೇವರು, ಮಲೆ ಮಹದೇಶ್ವರ ದೆವ್ವ ಅಂತಾರೆ: ಪ್ರತಾಪ್ ಸಿಂಹ ಕಿಡಿ

    ಎರಡೂ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ. ದಸರಾ ಸಂದರ್ಭದಲ್ಲಿ ಮೈಸೂರು ನಗರದ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಮೈಸೂರು ನಗರದ ಪೊಲೀಸ್ ಅಯುಕ್ತ ರಮೇಶ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]