Tag: ಮಹಿಳೆ

  • ಪರ ಪುರುಷನೊಂದಿಗೆ ಸರಸಕ್ಕೆ ಅಡ್ಡಿ – ಅನ್ನಕ್ಕೆ ವಿಷ ಹಾಕಿ ಇಡೀ ಕುಟುಂಬವನ್ನೇ ಮುಗಿಸಲು ಯತ್ನಿಸಿದ್ದಾಕೆ ಅರೆಸ್ಟ್‌

    ಪರ ಪುರುಷನೊಂದಿಗೆ ಸರಸಕ್ಕೆ ಅಡ್ಡಿ – ಅನ್ನಕ್ಕೆ ವಿಷ ಹಾಕಿ ಇಡೀ ಕುಟುಂಬವನ್ನೇ ಮುಗಿಸಲು ಯತ್ನಿಸಿದ್ದಾಕೆ ಅರೆಸ್ಟ್‌

    – ಒಬ್ಬನಿಂದ ಬೇರ್ಪಟ್ಟ ಕೆಲ ದಿನಗಳಲ್ಲೇ ಮತ್ತೊಬ್ಬನೊಂದಿಗೆ ಅನೈತಿಕ ಸಂಬಂಧ

    ಹಾಸನ: ಅನೈತಿಕ ಸಂಬಂಧಕ್ಕೆ (Immoral Relationship) ಅಡ್ಡಿಯಾಗಿದ್ದ ತನ್ನ ಕುಟುಂಬಸ್ಥರಿಗೆ ಚಟ್ಟಕಟ್ಟಲು ಯತ್ನಿಸಿದ್ದಾಕೆಯನ್ನ ಪೊಲೀಸರು ಬಂಧಿಸಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ.

    ಹಾಸನ ಜಿಲ್ಲೆಯ ಬೇಲೂರು (Belur) ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಹೌದು. ಅನ್ನಕ್ಕೆ ವಿಷ ಹಾಕಿ ಪತಿ, ಮಕ್ಕಳು ಹಾಗೂ ಅತ್ತೆ-ಮಾವನ ಕೊಲೆಗೆ ಯತ್ನಿಸಿದ್ದ ಆರೋಪಿ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ. ಚೈತ್ರಾ (33) ಬಂಧಿತ ಮಹಿಳೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿಯಿಂದ ಅಭಿಮಾನಿಗಳ ಮೇಲೆ ಪೈಪ್‌ನಿಂದ ಹಲ್ಲೆ – ಬಹಳ ಭಯಾನಕವಾಗಿದೆ ಕಾಲ್ತುಳಿತದ ದೃಶ್ಯ

    ಏನಿದು ಘಟನೆ?
    11 ವರ್ಷಗಳ ಹಿಂದೆ ಗಜೇಂದ್ರ ಎಂಬವರೊಂದಿಗೆ ಚೈತ್ರಾ ವಿವಾಹವಾಗಿದ್ದಳು. ಕೆಲ ವರ್ಷಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳೂ ಇದ್ದಾರೆ. ಆದ್ರೆ ಕಳೆದ ಮೂರು ವರ್ಷಗಳಿಂದ ಸಣ್ಣ-ಪುಟ್ಟ ವಿಚಾರಕ್ಕೂ ಚೈತ್ರಾ ಗಂಡನೊಂದಿಗೆ ಜಗಳವಾಡುತ್ತಿದ್ದಳು. ಈ ನಡುವೆಯೇ ಚೈತ್ರಾಳಿಗೆ ಪುನೀತ್‌ ಎಂಬಾತ ಪರಿಚಯವಾಗಿದ್ದ. ಇಬ್ಬರಿಗೂ ಸಲುಗೆ ಬೆಳೆದಿತ್ತು. ಹೀಗಾಗಿ ಪುನೀತ್‌ ಜೊತೆಗೆ ಚೈತ್ರಾ ಅನೈನಿಕ ಸಂಬಂಧ ಹೊಂದಿದ್ದಳು. ಇದನ್ನೂ ಓದಿ: Stampede Case | ಡಿಸಿ ನೇತೃತ್ವದ ತನಿಖೆ ಚುರುಕು – 25ಕ್ಕೂ ಹೆಚ್ಚು ಗಾಯಾಳುಗಳಿಗೆ ನೋಟಿಸ್, ಜೂ.11ಕ್ಕೆ ವಿಚಾರಣೆ

    ಚೈತ್ರ-ಪುನೀತ್ ನಡುವಿನ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿ ಗಜೇಂದ್ರ ಈ ವಿಚಾರವನ್ನ ಚೈತ್ರಾಳ ತಂದೆ-ತಾಯಿಗೆ ತಿಳಿಸಿದ್ದ. ಕೊನೆಗೆ ಕುಟುಂಬಸ್ಥರು ರಾಜಿ ಪಂಚಾಯ್ತಿ ಮಾಡಿದ್ದರು. ಬಳಿಕ ದಂಪತಿ ಅನ್ಯೋನ್ಯವಾಗಿದ್ದರು. ಪುನಃ ಕೆಲ ದಿನಗಳಿಂದ ಅದೇ ಗ್ರಾಮದ ಶಿವು ಎಂಬಾತನೊಂದಿಗೆ ಚೈತ್ರಾ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಕುಟುಂಬಸ್ಥರಿಗೆ ತಿಳಿಯುವ ಮುನ್ನ ಹಾಗೂ ತನ್ನ ಅಕ್ರಮ ಸಂಬಂಧಕ್ಕೆ ಗಂಡ, ಮಕ್ಕಳು, ಅತ್ತೆ-ಮಾವ ಅಡ್ಡಿಯಾಗುತ್ತಾರೆ ಎಂಬ ಅನುಮಾನದಿಂದ ಎಲ್ಲರನ್ನೂ ಸಾಮೂಹಿಕವಾಗಿ ಮುಗಿಸುವ ಸ್ಕೆಚ್‌ ಹಾಕಿದಳು. ಇದನ್ನೂ ಓದಿ: ಮೆಟ್ರೋ ಪಿಲ್ಲರ್‌ಗೆ ಡಿಕ್ಕಿಯಾದ ಬಿಎಂಟಿಸಿ ಬಸ್ – 10ಕ್ಕೂ ಹೆಚ್ಚು ಮಂದಿಗೆ ಗಾಯ

    ಪತಿ ಹಾಗೂ ಅವರ ಕುಟುಂಬದವರಿಗೆ ತಿಳಿಯದಂತೆ ಊಟ-ತಿಂಡಿಯಲ್ಲಿ ವಿಷಯುಕ್ತ ಮಾತ್ರೆಗಳನ್ನು ಹಾಕುತ್ತಿದ್ದಳು. ಇದಕ್ಕೆ ಪರಸಂಗ ಹೊಂದಿದ್ದ ಶಿವು ಸಹಕಾರ ನೀಡಿದ್ದ. ಈ ವಿಷಯ ತಿಳಿದು ಪತಿ ಗಜೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ಬಳಿಗ ಪೊಲೀಸರು ಚೈತ್ರಾಳನ್ ನಬಂಧಿಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಚಿಕ್ಕಬಳ್ಳಾಪುರ | ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ | ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲುಕುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲ್ಲೂಕಿನ ರಂಗಸ್ಥಳ ಗ್ರಾಮದ ರಂಗಧಾಮ ಕೆರೆಯಲ್ಲಿ ನಡೆದಿದೆ.

    ಬಾಧಗಾನಹಳ್ಳಿ ಗ್ರಾಮದ ಲಾವಣ್ಯ (30) ಮಕ್ಕಳಾದ ನಿಹಾರಿಕಾ (10) ನೇಹಾ (6) ವರ್ಷ ಮೃತರು. ಅಂದಹಾಗೆ ಗಂಡ ಜಯಣ್ಣನ ಜೊತೆ ನಿನ್ನೆ ಲಾವಣ್ಯ ವಾಗ್ವಾದ ನಡೆಸಿದ್ದರು. ಮಕ್ಕಳನ್ನ ಶಾಲೆಗೆ (School) ಸೇರಿಸಬೇಕು ಚೆನ್ನಾಗಿ ದುಡಿ, ಏರ್‌ಪೋರ್ಟ್‌ಗೆ ಡ್ರೈವರ್‌ (Airport Driver) ಕೆಲಸಕ್ಕೆ ಹೋಗುವಂತೆ ಪೀಡಿಸುತ್ತಿದ್ದರಂತೆ. ಇದೇ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ಮೂಡಿದೆ. ಇದನ್ನೂ ಓದಿ: ತನ್ನ ಬಾಯ್‌ಫ್ರೆಂಡ್‌ನಿಂದ ಮಗಳ ಮೇಲೆಯೇ ರೇಪ್‌ ಮಾಡಿಸಿದ್ದ ಬಿಜೆಪಿ ನಾಯಕಿ ಅರೆಸ್ಟ್‌

    ನಿನ್ನೆ ಸಂಜೆ ಮನೆಯಿಂದ ನಾಪತ್ತೆಯಾಗಿದ್ದ ತಾಯಿ ಹಾಗೂ ಮಕ್ಕಳ ದೇಹ ಇಂದು ಕೆರೆಯಲ್ಲಿ ತೇಲಾಡಿದ್ದು ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೂರು ಮೃತದೇಹಗಳನ್ನ ಹೊರತೆಗೆದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಹೆಂಡತಿ ಮಕ್ಕಳನ್ನ ಕಳೆದುಕೊಂಡ ಗಂಡ ಜಯಣ್ಣ ರೋಧಿಸುವಂತಾಗಿದೆ. ಇದನ್ನೂ ಓದಿ: ಪರಾರಿಯಾಗುತ್ತಿದ್ದ ಆರ್‌ಸಿಬಿಯ ನಿಖಿಲ್‌ ಸೋಸಲೆ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌

  • ಬೆಂಗಳೂರಿನಲ್ಲಿ ಮಹಿಳೆಯ ಹತ್ಯೆ – ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಹಂತಕ ಎಸ್ಕೇಪ್

    ಬೆಂಗಳೂರಿನಲ್ಲಿ ಮಹಿಳೆಯ ಹತ್ಯೆ – ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಹಂತಕ ಎಸ್ಕೇಪ್

    ಬೆಂಗಳೂರು: ಮಹಿಳೆಯನ್ನು ಹತ್ಯೆಗೈದು ಲಕ್ಷಾಂತರ ಮೌಲ್ಯದ ಚಿನ್ನಾಭರಣದೊಂದಿಗೆ ಹಂತಕ ಎಸ್ಕೇಪ್ ಆದ ಘಟನೆ ಬೆಂಗಳೂರಿನ (Bengaluru) ಕಾಟನ್ ಪೇಟೆ (Cottonpete) ದರ್ಗಾ ರಸ್ತೆಯಲ್ಲಿ ನಡೆದಿದೆ.

    ಲತಾ (40) ಕೊಲೆಯಾದ ಮಹಿಳೆ. ಲತಾ ಪತಿ ಹೋಲ್‌ಸೇಲ್ ಬಟ್ಟೆ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ಹತ್ಯೆ ನಡೆದಿದ್ದು, ಕೊಲೆ ಬಳಿಕ ಲಕ್ಷಾಂತರ ಮೌಲ್ಯದ ಚಿನ್ನಭರಣ ದೋಚಿ ಹಂತಕ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಮೈಸೂರು ರಾಜಮನೆತನಕ್ಕೆ ಟಿಡಿಆರ್ ನೀಡಲು ಸುಪ್ರೀಂ ಆದೇಶ – ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರದಿಂದ ಅರ್ಜಿ

    ಮಗಳು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಮಗ ಶಾಲೆಗೆ ಹೋಗಿದ್ದ. ಮನೆಯಲ್ಲಿ ಲತಾ ಒಬ್ಬಳೇ ಇದ್ದ ವೇಳೆ ಕೊಲೆ ನಡೆದಿದೆ. ಮಧ್ಯಾಹ್ನ ಪತಿ ಪ್ರಕಾಶ್ ಮನೆಗೆ ಬಂದ ವೇಳೆ ಕೊಲೆಯಾಗಿರೋದು ಬೆಳಕಿಗೆ ಬಂದಿದೆ. ಮಗಳ ಮದುವೆಗೆ ಎಂದು ಲತಾ ಕುಟುಂಬ ಹಂತ ಹಂತವಾಗಿ ಚಿನ್ನಾಭರಣ ಖರೀದಿ ಮಾಡಿತ್ತು. ಕೊಲೆ ಬಳಿಕ ಹಂತಕ ಈ ಚಿನ್ನಾಭರಣ ಸಹಿತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕಕ್ಕೆ ಮೂವರ ಹೆಸರು ಶಿಫಾರಸ್ಸು ಮಾಡಿದ ಕೊಲಿಜಿಯಂ

    ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.‌ ಇದನ್ನೂ ಓದಿ: ಮಂಡ್ಯ | ಟ್ರಾಫಿಕ್‌ ಪೊಲೀಸರ ಯಡವಟ್ಟಿನಿಂದ ಪ್ರಾಣಬಿಟ್ಟ ಮಗು – ಮೂವರು ASI ಸಸ್ಪೆಂಡ್‌

  • ‘ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌’; ಇದು ಹೃದಯದ ಮಾತು – ಪುರುಷರೇ ಜೋಕೆ!

    ‘ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌’; ಇದು ಹೃದಯದ ಮಾತು – ಪುರುಷರೇ ಜೋಕೆ!

    ವಳು ನನಗೆ ಕೈಕೊಟ್ಟಳು.. ಅಮ್ಮ ನಿನ್ನ ಪ್ರೀತಿ ಸಾಗರ, ನನ್ನನ್ನೇಕೆ ಬಿಟ್ಟು ಹೋದೆ.. ನನ್ನ ಮುದ್ದಿನ ಟೋನಿ (ಸಾಕು ನಾಯಿ) ಇನ್ನಿಲ್ಲ.. ಹೀಗೆ ಪ್ರೀತಿ ಪಾತ್ರರನ್ನು ಕಳೆದುಕೊಂಡು ಕೊರಗುವವರು ಎಷ್ಟು ಮಂದಿ. ಪ್ರೀತಿ-ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು. ಇದು ಹೃದಯಕ್ಕೆ ಸಂಬಂಧಿಸಿದ ಮಾತು. ಮನುಷ್ಯನಿಗೆ ಹೃದಯ ಎಷ್ಟು ಮುಖ್ಯ ಅಲ್ವಾ? ಅದು ಸದಾ ಲಬ್‌ ಡಬ್‌.. ಲಬ್‌ ಡಬ್‌ ಎನ್ನಲು ದೇಹಕ್ಕೆ ಆರೋಗ್ಯ ಮತ್ತು ಮನಸ್ಸಿಗೆ ಉಲ್ಲಾಸ ಬೇಕು. ಇವರೆಡೂ ಇಲ್ಲ ಅಂದ್ರೆ ಹೃದಯದ ಕಥೆ ಏನಾಗಬಹುದು?

    ಹೃದಯ ಮುರಿದೀತು ಜೋಕೆ! ಹೀಗೆನ್ನುತ್ತಿದ್ದಾರೆ ಆರೋಗ್ಯ ತಜ್ಞರು. ಪ್ರೀತಿ ವಿಷಯದಲ್ಲಿ ಹೆಚ್ಚು ಭಾವನೆಗೆ ಒಳಗಾಗಬೇಡಿ. ಅದು ನಿಮ್ಮ ಪ್ರಾಣಕ್ಕೆ ಅಪಾಯ ತರಬಹುದು. ‘ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌’. ಇದು ಹೃದಯವಂತರಿಗೆ ಎಚ್ಚರಿಕೆಯ ಕರೆಗಂಟೆ. ಈ ಸಿಂಡ್ರೋಮ್‌ಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಬಲಿಯಾಗುತ್ತಿದ್ದಾರಂತೆ. ಹೀಗಾಗಿ, ಹೃದಯಕ್ಕೆ ಹೆಚ್ಚು ನೋವು ಕೊಡಬೇಡಿ ಎನ್ನುತ್ತಿದ್ದಾರೆ ವೈದ್ಯರು.

    ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌ಗೆ ವೈದ್ಯಕೀಯ ಪರಿಭಾಷೆಯಲ್ಲಿ ‘ಟಕೋಟ್ಸುಬೊ ಕಾರ್ಡಿಯೊಮಯೋಪತಿ’ ಎಂದು ಕರೆಯುತ್ತಾರೆ. ಪ್ರೀತಿಪಾತ್ರರನ್ನು ಕಳೆದುಕೊಳ್ಳುವ, ಗಂಭೀರ ಅನಾರೋಗ್ಯ ಅಥವಾ ಶಸ್ತ್ರಚಿಕಿತ್ಸೆಯಿಂದಾಗಿ ತೀವ್ರವಾದ ಭಾವನಾತ್ಮಕ ಅಥವಾ ದೈಹಿಕ ಒತ್ತಡಕ್ಕೆ ಒಳಗಾಗುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸಿಂಡ್ರೋಮ್‌ ಕೂಡ ಹೃದಯಘಾತದಂತೆಯೇ ಎದೆ ನೋವು, ಉಸಿರಾಟದ ತೊಂದರೆ ಮತ್ತು ಜೋರಾದ ಹೃದಯ ಬಡಿತವನ್ನು ಉಂಟುಮಾಡುತ್ತದೆ. ಆದರೆ ಸಾಮಾನ್ಯ ಹೃದಯಾಘಾತದಂತೆ ಇದು ನಿರ್ಬಂಧಿತ ಅಪಧಮನಿಗಳನ್ನು ಒಳಗೊಂಡಿರುವುದಿಲ್ಲ.

    ಜರ್ನಲ್ ಆಫ್ ದಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ವರದಿಯು 2016 ಮತ್ತು 2020 ರ ನಡುವೆ ಆಸ್ಪತ್ರೆಗೆ ದಾಖಲಾದ ಸುಮಾರು 2,00,000 ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ.

    ಸಂಶೋಧಕರು ಕಂಡುಕೊಂಡಿದ್ದೇನು?
    ಆಸ್ಪತ್ರೆಯಲ್ಲಿ ಒಟ್ಟಾರೆ ಮರಣ ಪ್ರಮಾಣ: 6.5%
    ಮಹಿಳೆಯರ ಮರಣ ಪ್ರಮಾಣ: 5.5%
    ಪುರುಷರ ಮರಣ ಪ್ರಮಾಣ: 11.2%

    ಈ ವರದಿಯನ್ನು ಗಮನಿಸಿದರೆ ಪುರುಷರಲ್ಲಿ ಹೆಚ್ಚಿನ ಮರಣ ಪ್ರಮಾಣ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದಕ್ಕೆ ಉತ್ತಮ ಚಿಕಿತ್ಸೆಗಳು ಮತ್ತು ಹೆಚ್ಚಿನ ಸಂಶೋಧನೆಯ ತುರ್ತು ಅಗತ್ಯವಿದೆ ಎಂದು ಅರಿಜೋನಾ ವಿಶ್ವವಿದ್ಯಾನಿಲಯದ ಹೃದ್ರೋಗ ತಜ್ಞ ಡಾ. ಮೊಹಮ್ಮದ್ ರೆಜಾ ಮೊವಾಹೆದ್ ತಿಳಿಸಿದ್ದಾರೆ.

    ಸಿಂಡ್ರೋಮ್‌ಗೆ ಅಪಾಯ ಏನು?
    ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌ಗೆ ಒಳಗಾಗುವವರಿಗೆ ತ್ವರಿತವಾಗಿ ಚಿಕಿತ್ಸೆ ನೀಡದಿದ್ದರೆ ಈ ಸ್ಥಿತಿಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
    ಹೃದಯ ವೈಫಲ್ಯ – 35.9%
    ಅನಿಯಮಿತ ಹೃದಯ ಬಡಿತ (ಹೃತ್ಕರ್ಣದ ಕಂಪನ) – 20.7%
    ಹೃದಯ ಆಘಾತ – 6.6%
    ಪಾರ್ಶ್ವವಾಯು – 5.3%
    ಹೃದಯ ಸ್ತಂಭನ – 3.4% ಕಾಣಿಸಿಕೊಳ್ಳಬಹುದು.

    ಯಾರಿಗೆ ಹೆಚ್ಚು ಅಪಾಯವಿದೆ?
    61 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. 46–60 ಮತ್ತು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 3.25 ಕ್ಕಿಂತ ಹೆಚ್ಚು ಪಟ್ಟು ಪರಿಣಾಮ ಬೀರುತ್ತಾರೆ. ಶ್ವೇತ ವರ್ಣೀಯರು ಈ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಾರೆ (0.16%). ನಂತರ ಸ್ಥಳೀಯ ಅಮೆರಿಕನ್ನರು (0.13%) ಮತ್ತು ಕಪ್ಪು ವಯಸ್ಕರು (0.07%) ಸಮಸ್ಯೆಯಿಂದ ಬಳಲುತ್ತಾರೆ.

    ಪುರುಷರೇ ಹೆಚ್ಚು ಸಾಯೋದು ಏಕೆ?
    ಈ ಸಿಂಡ್ರೋಮ್‌ಗೆ ಶೇ.83% ರಷ್ಟು ಮಹಿಳೆಯರು ತುತ್ತಾಗುತ್ತಿದ್ದಾರೆ. ಆದರೆ, ಸಾವಿನ ಪ್ರಮಾಣದಲ್ಲಿ ಪುರುಷರೇ ಹೆಚ್ಚಿದ್ದಾರೆ. ಏಕೆಂದರೆ, ಪುರುಷರು ದೈಹಿಕ ಒತ್ತಡಗಳನ್ನು (ಶಸ್ತ್ರಚಿಕಿತ್ಸೆ ಅಥವಾ ಅನಾರೋಗ್ಯದಂತಹ) ಎದುರಿಸುವ ಸಾಧ್ಯತೆ ಹೆಚ್ಚು. ಪುರುಷರಿಗೆ ಸಾಮಾಜಿಕ ಬೆಂಬಲದ ಕೊರತೆಯೂ ಇರಬಹುದು. ಸಾಮಾಜಿಕ ಬೆಂಬಲವು ಗುಣಪಡಿಸುವಿಕೆಗೆ ನಿರ್ಣಾಯಕವಾಗಿದೆ. ಆ ಬೆಂಬಲವಿಲ್ಲದೆ, ಚೇತರಿಕೆ ನಿಧಾನ ಮತ್ತು ಹೆಚ್ಚು ಅಪಾಯಕಾರಿಯಾಗಬಹುದು. ಮಹಿಳೆಯರು ಹೆಚ್ಚಾಗಿ ಭಾವನಾತ್ಮಕ ಒತ್ತಡಗಳನ್ನು (ದುಃಖ ಅಥವಾ ಉದ್ಯೋಗ ನಷ್ಟ) ಎದುರಿಸುತ್ತಾರೆ.

    5 ವರ್ಷಗಳಲ್ಲಿ ಯಾವುದೇ ಪ್ರಗತಿ ಇಲ್ಲ
    ಐದು ವರ್ಷಗಳ ಅಧ್ಯಯನ ಅವಧಿಯಲ್ಲಿ ಮರಣ ಪ್ರಮಾಣವು ಸುಧಾರಿಸಲಿಲ್ಲ. ಈ ಸಿಂಡ್ರೋಮ್‌ಗೆ ಸದ್ಯದ ಚಿಕಿತ್ಸೆಗಳು ಪರಿಣಾಮಕಾರಿಯಾಗಿಲ್ಲ. ಆಸ್ಪತ್ರೆ ಸಂಪನ್ಮೂಲಗಳು, ಆದಾಯ ಮಟ್ಟ ಮತ್ತು ವಿಮಾ ಸ್ಥಿತಿಯಂತಹ ಅಂಶಗಳು ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನವು ತಿಳಿಸಿದೆ.

  • ಮಹಾಮಳೆಗೆ ಕಾಂಪೌಂಡ್ ಗೋಡೆ ಕುಸಿದು ಮಹಿಳೆ ಸಾವು – ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

    ಮಹಾಮಳೆಗೆ ಕಾಂಪೌಂಡ್ ಗೋಡೆ ಕುಸಿದು ಮಹಿಳೆ ಸಾವು – ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಭಾನುವಾರ ಸುರಿದ ಮಹಾಮಳೆಗೆ ಕಾಂಪೌಂಡ್ ಗೋಡೆ ಕುಸಿದು ಸಾವನ್ನಪ್ಪಿದ ಮಹಿಳೆ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಘೋಷಣೆ ಮಾಡಿದರು.

    ಬೆಂಗಳೂರಿನಲ್ಲಿ ಮಳೆ ಹಾನಿ (RainFall) ಪ್ರದೇಶಗಳು ಮತ್ತು ಅನಾಹುತಗಳ ಬಗ್ಗೆ ವಾರ್‌ ರೂಮ್‌ನಲ್ಲೇ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸಿಎಂ ಮತ್ತು ಡಿಸಿಎಂ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು. ಇದನ್ನೂ ಓದಿ: ಕೇಂದ್ರದಿಂದ 4,195 ಕೋಟಿ ಅನುದಾನ ಬಾಕಿ; ಸಿಎಂ ಬೂಟಾಟಿಕೆ ಪ್ರದರ್ಶನ – ಜೋಶಿ ವಾಗ್ದಾಳಿ

    Bengaluru Mahadevapura Woman Death Compound Collapse

    ಶಶಿಕಲಾ (35) ಮೃತ ಮಹಿಳೆ. ಇಂದು ಬೆಳಗ್ಗೆ ವೈಟ್ ಫೀಲ್ಡ್‌ನ ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋದಾಗ ದುರ್ಘಟನೆ ನಡೆದಿದೆ. ಇದನ್ನೂ ಓದಿ: ರಾಯಚೂರು | ಭಾರೀ ಮಳೆಗೆ ಟಿನ್ ಶೆಡ್ ಮನೆ ಕುಸಿದು ಮೂವರಿಗೆ ಗಾಯ

    ಕೆಲಸದ ಸ್ಥಳದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಶಶಿಕಲಾ ಸಾವನ್ನಪ್ಪಿದ್ದಾರೆ. ಇಡೀ ರಾತ್ರಿ ಮಳೆಗೆ ಗೋಡೆ ನೆನೆದಿದ್ದರಿಂದ ಕುಸಿದು ಶಶಿಕಲಾ ಮೇಲೆ ಬಿದ್ದಿದೆ, ಪರಿಣಾಮ ಶಶಿಕಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ನಂತರ ವೈಟ್‌ಫೀಲ್ಡ್ ಪೊಲೀಸರು ಮೃತದೇಹವನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಯಾದಗಿರಿಯ ಶಹಾಪುರ ಮೂಲದ ಶಶಿಕಲಾ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಮೃತ ಶಶಿಕಲಾಗೆ ಇಬ್ಬರು ಪುಟ್ಟ ಮಕ್ಕಳಿದ್ದು, ಗಂಡ ಕೂಡ ಕೂಲಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಮಳೆಗೆ ನಾನಾ ಅವಾಂತರ | ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ: ಸಿ.ಟಿ ರವಿ

  • ಬೆಂಗಳೂರಿನ ಮಹಾಮಳೆಗೆ ಕಾಂಪೌಂಡ್ ಗೋಡೆ ಕುಸಿದು ಮಹಿಳೆ ಸಾವು

    ಬೆಂಗಳೂರಿನ ಮಹಾಮಳೆಗೆ ಕಾಂಪೌಂಡ್ ಗೋಡೆ ಕುಸಿದು ಮಹಿಳೆ ಸಾವು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಹಾಮಳೆಗೆ ಕಾಂಪೌಂಡ್ ಗೋಡೆ ಕುಸಿದು ಮಹಿಳೆ (Woman) ಸಾವನ್ನಪ್ಪಿದ ಘಟನೆ ಮಹದೇವಪುರದ (Mahadevapura) ಚನ್ನಸಂದ್ರದಲ್ಲಿ ನಡೆದಿದೆ.

    ಶಶಿಕಲಾ (35) ಮೃತ ಮಹಿಳೆ. ಇಂದು ಬೆಳಗ್ಗೆ ವೈಟ್ ಫೀಲ್ಡ್‌ನ ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋದಾಗ ದುರ್ಘಟನೆ ನಡೆದಿದೆ. ಕೆಲಸದ ಸ್ಥಳದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಶಶಿಕಲಾ ಸಾವನ್ನಪ್ಪಿದ್ದಾರೆ. ಇಡೀ ರಾತ್ರಿ ಮಳೆಗೆ ಗೋಡೆ ನೆನೆದಿದ್ದರಿಂದ ಕುಸಿದು ಶಶಿಕಲಾ ಮೇಲೆ ಬಿದ್ದಿದೆ. ಘಟನೆಯ ಪರಿಣಾಮ ಶಶಿಕಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Bengaluru Rain | ನಾನು ನಿಮ್ಮಲ್ಲಿ ಒಬ್ಬ, ನಿಮ್ಮೊಂದಿಗೆ ನಿಲ್ಲುತ್ತೇನೆ: ಡಿಕೆಶಿ

    ಸದ್ಯ ವೈಟ್‌ಫೀಲ್ಡ್ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಯಾದಗಿರಿಯ ಶಹಾಪುರ ಮೂಲದ ಶಶಿಕಲಾ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಮೃತ ಶಶಿಕಲಾಗೆ ಇಬ್ಬರು ಸಣ್ಣ ಮಕ್ಕಳಿದ್ದು, ಗಂಡ ಕೂಡ ಕೂಲಿ ಕೆಲಸ ಮಾಡುತ್ತಿದ್ದರು. ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು, ಡಿಸಿಪಿ ಶಶಿಕುಮಾರ್ ಗುಣಾರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: Ramanagara | 2 ಬೈಕ್‌ಗಳಿಗೆ ಗುದ್ದಿ ಹಳ್ಳಕ್ಕೆ ಬಿದ್ದ KSRTC ಬಸ್ – ಸಬ್ ಇನ್ಸ್‌ಪೆಕ್ಟರ್ ಸಾವು

  • ಮೈಸೂರು | ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನಿಂದ ಮಹಿಳೆಗೆ 1.41 ಕೋಟಿ ವಂಚನೆ ಆರೋಪ

    ಮೈಸೂರು | ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನಿಂದ ಮಹಿಳೆಗೆ 1.41 ಕೋಟಿ ವಂಚನೆ ಆರೋಪ

    ಮೈಸೂರು: ಇಲ್ಲಿನ ನವನಗರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ (Navanagara Urban Co-Operative Bank) ಮಹಿಳೆಯೊಬ್ಬರಿಗೆ 1.41 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

    ಸುನಿತಾ ಎಂಬ ಮಹಿಳೆಯ ಬ್ಯಾಂಕ್ ಉಳಿತಾಯ ಖಾತೆಯಲ್ಲಿದ್ದ (Savings Account) 1 ಕೋಟಿ 41 ಲಕ್ಷ ರೂ. ಹಣವನ್ನು ಅವರ ಅನುಮತಿಯಿಲ್ಲದೇ ಬ್ಯಾಂಕಿನ 2 ಅನ್ಯ ಖಾತೆಗೆ ಟ್ರಾನ್ಸಫರ್ ಮಾಡಿಕೊಳ್ಳಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಪ್ರವಾಸಿಗರ ಕೊಂಡೊಯ್ಯುತ್ತಿದ್ದ ಬಸ್ ಅಪಘಾತ – 25 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಸಾಲಕ್ಕಾಗಿ ಬ್ಯಾಂಕ್‌ಗೆ ನೀಡಿದ್ದ ಚೆಕ್‌ಗಳನ್ನು ಬಳಸಿ, ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಬ್ಯಾಂಕ್‌ನ ಅಧ್ಯಕ್ಷ ಕೆ.ಎನ್.ಬಸಂತ್, ಜನರಲ್ ಮ್ಯಾನೇಜರ್ ಸುರೇಶ್, ಮ್ಯಾನೇಜರ್ ಶಿವಕುಮಾರ್ ಅವರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಕ್ಫ್‌ ಕಾಯ್ದೆ ವಿರುದ್ಧ ಪ್ರತಿಭಟನೆ – ಪ್ರತಿಭಟನಾಕಾರರಿಗೆ ಎಸಿಪಿ ಕಾರಿನಲ್ಲೇ ಡ್ರಾಪ್‌ ಆರೋಪ

    ಈ ಬಗ್ಗೆ ಬ್ಯಾಂಕ್‌ನ ಅಧ್ಯಕ್ಷರನ್ನು ವಿಚಾರಿಸಿದಾಗ ಬ್ಯಾಂಕ್‌ನ ಹಿತದೃಷ್ಟಿಯಿಂದ ಹಣ ಬಳಸಿದ್ದೇವೆಂದು 4 ವರ್ಷಗಳಿಂದ ಸಬೂಬು ಹೇಳುತ್ತಾ ಬಂದಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ಮ್ಯಾನೇಜರ್ ಶಿವಕುಮಾರ್ ಅವರನ್ನ ಸೇವೆಯಿಂದ ಅಮಾನತು ಮಾಡಲಾಗಿತ್ತು. ಅವರು ಬಳಸಿಕೊಂಡ ಹಣಕ್ಕೆ ಬಡ್ಡಿ ಸಹಿತ ವಾಪಸ್ ಕೊಡಿಸುವುದಾಗಿ ಅಧ್ಯಕ್ಷ ಕೆ.ಎನ್. ಬಸಂತ್ ಭರವಸೆ ನೀಡಿದ್ದರು. ಈವರೆಗೆ 25 ಲಕ್ಷ ರೂ. ಮಾತ್ರ ಸುನಿತಾ ಅವರ ಖಾತೆಗೆ ಜಮೆ ಆಗಿದ್ದು, ಇನ್ನೂ 1 ಕೋಟಿ 16 ಲಕ್ಷ ರೂ. ಕೊಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಗುಂಡು ತಗುಲಿ ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು

    ತಮ್ಮ ಬಾಕಿ ಹಣವನ್ನು ವಾಪಸ್ ನೀಡದೇ ಇದಿದ್ದಕ್ಕೆ ಸುನಿತಾ, ಬ್ಯಾಂಕ್‌ನ ಅಧ್ಯಕ್ಷ, ಜನರಲ್ ಮ್ಯಾನೇಜರ್ ಹಾಗೂ ಮ್ಯಾನೇಜರ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ (Vijayanagara Police Station) ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

  • ರಾಹುಲ್ಲನನ್ನ ಬಿಟ್ಟು ಬದುಕಲ್ಲ – ಭಾವಿ ಅಳಿಯನೊಂದಿಗೆ ಒಟ್ಟಿಗೆ ಜೀವನ ನಡೆಸಲು ಮುಂದಾದ ಮಹಿಳೆ

    ರಾಹುಲ್ಲನನ್ನ ಬಿಟ್ಟು ಬದುಕಲ್ಲ – ಭಾವಿ ಅಳಿಯನೊಂದಿಗೆ ಒಟ್ಟಿಗೆ ಜೀವನ ನಡೆಸಲು ಮುಂದಾದ ಮಹಿಳೆ

    – 12 ಗಂಟೆ ಕೌನ್ಸೆಲಿಂಗ್‌ ಬಳಿಕವೂ ನಿರ್ಧಾರದಿಂದ ಹಿಂದೆ ಸರಿಯದ ಭಾವಿ ಅತ್ತೆ

    ಲಕ್ನೋ: ಉತ್ತರ ಪ್ರದೇಶದ ಅಲಿಘರ್‌ನಲ್ಲಿ (Uttar Pradesh’s Aligarh) ಭಾವಿ ಅಳಿಯ ಮತ್ತು ಅತ್ತೆಯ ಪ್ರೇಮ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. 10 ದಿನಗಳ ಬಳಿಕ ಪೊಲೀಸರ ಎದುರು ಶರಣಾದ ಸಪ್ನಾ ದೇವಿ ಮತ್ತು ಭಾವಿ ಅಳಿಯ ರಾಹುಲ್‌ ಈಗ ಒಟ್ಟಿಗೆ ಜೀವನ ಕಳೆಯಲು ನಿರ್ಧರಿಸಿದ್ದಾರೆ.

    ತನ್ನ ಮಗಳಿಗೆ ನಿಶ್ಚಯವಾಗಿದ್ದ ಭಾವಿ ಅಳಿಯನೊಂದಿಗೆ ಮನೆಯಲ್ಲಿದ್ದ 3.5 ಲಕ್ಷ ರೂ.ಗೂ ಹೆಚ್ಚು ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಸಹ ತೆಗೆದುಕೊಂಡು ಪರಾರಿಯಾಗಿದ್ದಳು. ಇದೀಗ ಪೊಲೀಸರಿಗೆ ಶರಣಾಗಿದ್ದು, ತಾನು ಓಡಿಹೋಗಲು ಕಾರಣ ಏನೆಂಬುದನ್ನ ತಿಳಿಸಿದ್ದಾಳೆ.

    UP Women 2

    12 ಗಂಟೆಗಳ ಕಾಲ ಕೌನ್ಸೆಲಿಂಗ್‌:
    ರಾಹುಲ್‌ ಮತ್ತು ಸಪ್ನಾ ದೇವಿ ಪೊಲೀಸರಿಗೆ ಶರಣಾದಾಗ ಸಪ್ನಾ ತನ್ನ ಕುಟುಂಬಸ್ಥರಿಂದ ಅನುಭವಿಸುತ್ತಿದ್ದ ತೊಂದರೆಗಳನ್ನು ಹೇಳಿಕೊಂಡಿದ್ದಳು. ಪತಿ ನಿತ್ಯ ಥಳಿಸುತ್ತಿದ್ದ, ಮಗಳೂ ಸಹ ಜಗಳ ಆಡುತ್ತಿದ್ದಳು, ಇದರಿಂದ ನನ್ನ ಮಾನಸಿಕ ನೆಮ್ಮದಿ ಹಾಳಾಗಿತ್ತು ಎಂದು ಹೇಳಿದ್ದಳು. ಅಲ್ಲದೇ ರಾಹುಲ್‌ ಸಹ ನಾನು ಇಲ್ಲದೇ ಇದ್ದಿದ್ದರೇ ಅವಳು ಬದುಕುತ್ತಿರಲಿಲ್ಲ ಎಂದು ಹೇಳಿದ್ದ. ಇದಾದ ಬಳಿಕ ಪೊಲೀಸರು ಸಪ್ನಾ ಮತ್ತು ಪತಿಗೆ 12 ಗಂಟೆಗಳ ಕಾಲ ಕೌನ್ಸೆಲಿಂಗ್‌ ನಡೆಸಿದರು. ಸಪ್ನಾಳ ಪತಿ ಮತ್ತು ಆತನ ಕುಟುಂಬಸ್ಥರೊಂದಿಗೆ ಮಾತನಾಡಿಸಿ, ಮನವೊಲಿಸುವ ಪ್ರಯತ್ನ ಮಾಡಿದರು. ಆದ್ರೆ ಸಪ್ನಾ ಮಾತ್ರ ರಾಹುಲ್‌ ಜೊತೆಗೇ ಜೀವನ ಕಳೆಯುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಕೊನೆಗೆ ಪೊಲೀಸರು ಸಪ್ನಾಳನ್ನ ರಾಹುಲ್‌ ಜೊತೆಗೆ ಕಳುಹಿಸಿದ್ರು ಎಂದು ವರದಿಗಳು ತಿಳಿಸಿವೆ. ಆದ್ರೆ ಸಪ್ನಾ ದೇವಿ ಪತಿ, ಅವಳು ದೋಚಿರುವ ಎಲ್ಲಾ ಹಣ ಮತ್ತು ಚಿನ್ನಾಭರಣ ಹಿಂದಿರುಗಿಸುವವರೆಗೆ ಇಬ್ಬರನ್ನೂ ಬಿಡಲ್ಲ ಎಂದು ಹೇಳಿದ್ದಾನೆ.

    UP Women

    ಏನಿದು ಪ್ರಕರಣ?
    ಸಪ್ನಾಳ ಮಗಳು ಅನಿತಾಳಿಗೆ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. 10 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಗಳನ್ನು ಸಹ ಮುದ್ರಿಸಿ, ಸಂಬಂಧಿಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ತನ್ನ ಮಗಳನ್ನು ಮದುವೆಯಾಗಬೇಕಿದ್ದ ಯುವಕನೊಂದಿಗೆ ಸಪ್ನಾ ಓಡಿ ಹೋಗಿದ್ದಳು. ಇದು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸಿತ್ತು.

    uttar pradesh man

    ನಾನು ಏಪ್ರಿಲ್ 16 ರಂದು ರಾಹುಲ್ ಜೊತೆ ಮದುವೆಯಾಗಬೇಕಿತ್ತು. ಆದರೆ ನನ್ನ ತಾಯಿ ಭಾನುವಾರ ಅವನೊಂದಿಗೆ ಓಡಿಹೋದರು. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಫೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು. ನಮ್ಮ ಅಲ್ಮಾರಾದಲ್ಲಿ 3.5 ಲಕ್ಷ ರೂ. ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳಿದ್ದವು. ಅವನು ಕೇಳಿದ್ದನ್ನೆಲ್ಲಾ ಅವಳು ಮಾಡಿದ್ದಾಳೆ. ನನ್ನ ತಾಯಿ ನಮ್ಮ ಎಲ್ಲಾ ಹಣವನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆಂದು ವಧು ಅನಿತಾ ನೊಂದು ನುಡಿದಿದ್ದಳು.

    ಸಪ್ನಾಳ ಪತಿ ಕುಮಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಸಪ್ನಾ ಮತ್ತು ರಾಹುಲ್ ಪತ್ತೆಗೆ ಬಲೆಬೀಸಿದ್ದರು.

  • ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಜಿಗಿದ ಮಹಿಳೆ

    ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಜಿಗಿದ ಮಹಿಳೆ

    ಹೈದರಾಬಾದ್: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಇಬ್ಬರು ಗಂಡು ಮಕ್ಕಳನ್ನು ಕೊಂದು ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ (Hyderabad) ಗಜುಲರಾಮರಂನ (Gajularamaram) ಬಾಲಾಜಿ ಲೇಔಟ್‌ನಲ್ಲಿ ನಡೆದಿದೆ.

    ಆಶಿಶ್ ರೆಡ್ಡಿ(8), ಅರ್ಷಿತ್ ರೆಡ್ಡಿ(6) ಎಂಬ ಇಬ್ಬರು ಗಂಡು ಮಕ್ಕಳನ್ನು ತೇಜಸ್ವಿನಿ(33) ತೆಂಗಿನಕಾಯಿ ತುರಿಯುವ ಮಣೆಯಿಂದ (Coconut Chopper) ಹೊಡೆದು ಕೊಲೆ ಮಾಡಿ, ಬಳಿಕ ತಾನೂ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ತಾಯಿ, ಮಗನ ಕೊಲೆ ಕೇಸ್‌ – ಪೊಲೀಸರಿಗೆ ಹೆದರಿ ಆರೋಪಿ ನೇಣಿಗೆ ಶರಣು

    ಮನೆಯಲ್ಲಿ ಕಿರುಚಾಟದ ಶಬ್ದ ಕೇಳಿದ್ದರಿಂದ ಬಂದು ನೋಡಿದಾಗ ಮಕ್ಕಳಿಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಶಿಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಅರ್ಷಿತ್ ರೆಡ್ಡಿ ಗಂಭೀರ ಸ್ಥಿತಿಯಲ್ಲಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ ಎಂದು ವೈದ್ಯರು ಹೇಳಿದರು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್‌ ಆಗಬಹುದು!

    7 ಪುಟಗಳ ಡೆತ್‌ನೋಟ್ (Suicide Note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ತೇಜಸ್ವಿನಿ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಪುತ್ರರಿಬ್ಬರ ಉಸಿರಾಟದ ತೊಂದರೆ ಹಾಗೂ ಪತಿಯ ಬೆಂಬಲದ ಕೊರತೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುದ್ದು ಮಗಳಿಗೆ ಸುಂದರ ಹೆಸರಿಟ್ಟ ಅಥಿಯಾ ಶೆಟ್ಟಿ ದಂಪತಿ- ಅದರ ಅರ್ಥವೇನು ಗೊತ್ತಾ?

    ಘಟನಾ ಸ್ಥಳಕ್ಕೆ ಜೀಡಿಮೆಲ್ಲಾ ಪೊಲೀಸರು (Jeedimetla Police) ಭೇಟಿ ನೀಡಿ, ಪರಿಸೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ನಾನು ಅವನನ್ನೇ ಮದ್ವೆಯಾಗ್ತೀನಿ – ಭಾವಿ ಅಳಿಯನೊಂದಿಗೆ ಓಡಿಹೋಗಿದ್ದ ಯುಪಿ ಮಹಿಳೆ ಪಟ್ಟು

    ನಾನು ಅವನನ್ನೇ ಮದ್ವೆಯಾಗ್ತೀನಿ – ಭಾವಿ ಅಳಿಯನೊಂದಿಗೆ ಓಡಿಹೋಗಿದ್ದ ಯುಪಿ ಮಹಿಳೆ ಪಟ್ಟು

    – ಏನೇ ಆಗಲಿ ರಾಹುಲ್ಲನೊಂದಿಗೆ ಬದುಕುತ್ತೀನಿ ಅಂದ್ಳು ಸಪ್ನೋಂಕಿ ರಾಣಿ

    ಲಕ್ನೋ: ಪ್ರೀತಿ (Love) ಎಂಬುದು ಮಾಯೆ.. ಅದು ಹುಟ್ಟಿದಾಗ ಗಾಳಿಯಲ್ಲಿ ತೇಲಾಡುವ ಅನುಭವ… ಎದೆಯಲ್ಲಿ ಪುಳಕ, ಅಸಹನೀಯ ಭಾರ. ಇದರ ಕೊನೆಯ ಹಂತವೇ ಮದುವೆ. ಆದ್ರೆ ಈ ಪ್ರೀತಿ ಅದು ಯಾರಿಗೆ ಯಾವಾಗ ಹೇಗೆ, ಯಾರ ಮೇಲೆ ಹುಟ್ಟುತ್ತೆ? ಅನ್ನೋ ಕಾರಣವೇ ನಿಗೂಢ.. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲ ವಿವಾಹಿತ ಮಹಿಳೆಯರು ಯುವಕರನ್ನು ವರಿಸುತ್ತಿರುವ ಪ್ರಸಂಗ ಆಗಾಗ್ಗೆ ಕಂಡುಬರುತ್ತಿವೆ. ಇದಕ್ಕೆ ಉತ್ತರ ಪ್ರದೇಶದ (Uttar Pradesh) ಘಟನೆ ತಾಜಾ ಉದಾಹರಣೆಯಾಗಿದೆ.

    UP Women

    ತನ್ನ ಮಗಳಿಗೆ ನಿಶ್ಚಯವಾಗಿದ್ದ (daughter’s fiance) ಭಾವಿ ಅಳಿಯನೊಂದಿಗೆ ಮನೆಯಲ್ಲಿದ್ದ 3.5 ಲಕ್ಷ ರೂ.ಗೂ ಹೆಚ್ಚು ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಸಹ ತೆಗೆದುಕೊಂಡು ಪರಾರಿಯಾಗಿದ್ದಳು. ಇದೀಗ ಪೊಲೀಸರಿಗೆ ಶರಣಾಗಿದ್ದು, ತಾನು ಓಡಿಹೋಗಲು ಕಾರಣ ಏನೆಂಬುದನ್ನ ತಿಳಿಸಿದ್ದಾಳೆ. ಅಲ್ಲದೇ ಅವನನ್ನೇ ಮದುವೆಯಾಗುತ್ತೇನೆಂದು ಪಟ್ಟು ಹಿಡಿದಿದ್ದಾಳೆ. ಇದನ್ನೂ ಓದಿ: ಪಿಯುಸಿ ಹುಡುಗನ ಮದುವೆಯಾದ ಮೂರು ಮಕ್ಕಳ ತಾಯಿ!

    ಓಡಿ ಹೋಗಿದ್ದ ಮಹಿಳೆ ಸಪ್ನಾ, ಭಾವಿ ಅಳಿಯ ರಾಹುಲ್‌ ಕುಮಾರ್. ತನ್ನ ಪತಿ ಕುಡಿದು ಥಳಿಸುತ್ತಿದ್ದ, ಮಗಳು ಕೂಡ ಪದೇ ಪದೇ ಜಗಳವಾಡುತ್ತಿದ್ದಳು ಇದರಿಂದ ಬೇಸತ್ತು ಅವನೊಂದಿಗೆ ಓಡಿ ಹೋದೆ. ನನ್ನ ಕಥೆಯನ್ನು ಕೇಳಿ ರಾಹುಲ್‌ ಓಡಿ ಹೋಗಲು ಒಪ್ಪಿಕೊಂಡ. ಇಲ್ಲದಿದ್ದರೆ, ಆತ್ಮಹತ್ಯೆ ಒಂದೇ ದಾರಿಯಾಗಿತ್ತು. ಪೊಲೀಸರು ಹುಡುಕಾಡುತ್ತಿರುವುದು ಗೊತ್ತಾಗಿ ಮರಳಿ ಬಂದೆ. ಏನೇ ಆಗಲಿ ನಾನು ರಾಹುಲ್‌ ಜೊತೆಗೇ ಬದುಕುತ್ತೇನೆ, ಅವನನ್ನೇ ಮದುವೆಯಾಗುತ್ತೇನೆ ಅಂತ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ತನ್ನ ಮಗಳನ್ನು ಮದುವೆಯಾಗಬೇಕಿದ್ದ ಭಾವಿ ಅಳಿಯನೊಂದಿಗೆ ಮಹಿಳೆ ಜೂಟ್‌

    ಅಲ್ಲದೇ ಲಕ್ಷಗಟ್ಟಲೇ ಚಿನ್ನಾಭರಣ, ಹಣ ಕದ್ದೊಯ್ದಿದ್ದಾರೆ ಎನ್ನುವ ಆರೋಪವನ್ನು ತಳ್ಳಿಹಾಕಿದ್ದಾರೆ. ನಾನು ಹೋಗುವಾಗ ನನ್ನ ಮೊಬೈಲ್‌, 200 ರೂ.ಪಾಯಿ ಮಾತ್ರ ತೆಗೆದುಕೊಂಡು ಹೋಗಿದ್ದೆ. ಆಕೆಯ ಮತ್ತೊಬ್ಬ ಮಗಳು ಶಿವಾನಿ ಮನೆಯಲ್ಲಿದ್ದ 3.5 ಲಕ್ಷ ರೂಪಾಯಿ ನಗದು ಮತ್ತು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಇದೇ ಸಂದರ್ಭದಲ್ಲಿ ರಾಹುಲ್‌ ಕುಮಾರ್‌ನನ್ನು ವಿವಾಹವಾಗುತ್ತೀಯಾ ಎಂದು ಕೇಳಿದ್ದಕ್ಕೆ ಆತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಸಪ್ನಾಳ ಕುಟುಂಬಸ್ಥರು ಅವಳು ಮನೆಗೆ ವಾಪಸ್‌ ಬರೋದು ಬೇಡ ತೆಗೆದುಕೊಂಡು ಹೋಗಿರುವ ಚಿನ್ನಾಭರಣ ಕೊಟ್ಟರೆ ಸಾಕು ಅಂತ ಹೇಳಿದ್ದಾರೆ. ಇದನ್ನೂ ಓದಿ: ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಪೊಲೀಸ್ ರಕ್ಷಣೆ ಇಲ್ಲ: ಹೈಕೋರ್ಟ್

    uttar pradesh man

    ಏನಿದು ಪ್ರಕರಣ?
    ಸಪ್ನಾಳ ಮಗಳು ಅನಿತಾಳಿಗೆ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. 10 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಗಳನ್ನು ಸಹ ಮುದ್ರಿಸಿ, ಸಂಬಂಧಿಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ತನ್ನ ಮಗಳನ್ನು ಮದುವೆಯಾಗಬೇಕಿದ್ದ ಯುವಕನೊಂದಿಗೆ ಸಪ್ನಾ ಓಡಿ ಹೋಗಿದ್ದಳು. ಇದು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸಿತ್ತು.

    ನಾನು ಏಪ್ರಿಲ್ 16 ರಂದು ರಾಹುಲ್ ಜೊತೆ ಮದುವೆಯಾಗಬೇಕಿತ್ತು. ಆದರೆ ನನ್ನ ತಾಯಿ ಭಾನುವಾರ ಅವನೊಂದಿಗೆ ಓಡಿಹೋದರು. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಫೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು. ನಮ್ಮ ಅಲ್ಮಾರಾದಲ್ಲಿ 3.5 ಲಕ್ಷ ರೂ. ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳಿದ್ದವು. ಅವನು ಕೇಳಿದ್ದನ್ನೆಲ್ಲಾ ಅವಳು ಮಾಡಿದ್ದಾಳೆ. ನನ್ನ ತಾಯಿ ನಮ್ಮ ಎಲ್ಲಾ ಹಣವನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆಂದು ವಧು ಅನಿತಾ ನೊಂದು ನುಡಿದಿದ್ದಳು.

    ಸಪ್ನಾಳ ಪತಿ ಕುಮಾರ್ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಸಪ್ನಾ ಮತ್ತು ರಾಹುಲ್ ಪತ್ತೆಗೆ ಬಲೆಬೀಸಿದ್ದರು. ಇದನ್ನೂ ಓದಿ: Mandya | ಅಪರಿಚಿತ ವಾಹನ ಡಿಕ್ಕಿ – ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವು