Tag: ಮಹಿಳೆ ಆತ್ಮಹತ್ಯೆ

  • ಅನಾರೋಗ್ಯದಿಂದ ಗಂಡ ಸಾವು – ಬಾವಿಗೆ ಹಾರಿ ಪತ್ನಿ ಆತ್ಮಹತ್ಯೆ

    ಅನಾರೋಗ್ಯದಿಂದ ಗಂಡ ಸಾವು – ಬಾವಿಗೆ ಹಾರಿ ಪತ್ನಿ ಆತ್ಮಹತ್ಯೆ

    ಉಡುಪಿ: ಪತಿಯ ಅಗಲುವಿಕೆಯಿಂದ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.

    ಇಲ್ಲಿನ ಮೀಯಾರು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿರುವ ಸೌಮ್ಯ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಈಕೆಯ ಪತಿ ಸಂತೋಷ್ ಪೂಜಾರಿ ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದರು.

    ಪತಿಯ ಸಾವಿನಿಂದ ಮನನೊಂದು, ಆರ್ಥಿಕ ಸಂಕಷ್ಟದಿಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಮತ್ತು ತಾಯಿಯ ಸಾವಿನಿಂದ 16 ಮತ್ತು 12 ವರ್ಷದ ಇಬ್ಬರು ಪುತ್ರಿಯರು ಅನಾಥರಾಗಿದ್ದಾರೆ.

  • ಮೀಟರ್ ಬಡ್ಡಿ ದಂಧೆಗೆ ಮಹಿಳೆ ಬಲಿ – ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ

    ಮೀಟರ್ ಬಡ್ಡಿ ದಂಧೆಗೆ ಮಹಿಳೆ ಬಲಿ – ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ

    ಕೋಲಾರ: ಮೀಟರ್ ಬಡ್ಡಿ ಹಣಕ್ಕಾಗಿ ತೊಂದರೆ ನೀಡುತ್ತಿದ್ದುದನ್ನು ಸಹಿಸಿಕೊಳ್ಳಲಾಗದೇ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅತ್ತಗಿರಿಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯನ್ನು ಹುಲಿಬೆಲೆ ಗ್ರಾಮದ ವೆಂಕಟೇಶ್ ಅವರ ಪತ್ನಿ ಲಕ್ಷ್ಮಿದೇವಮ್ಮ ಎಂದು ಹೇಳಲಾಗಿದೆ. ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ

    ಹುಲಿಬೆಲೆ ಗ್ರಾಮದ ವೀಣಾ ವೆಂಕಟೇಶ್ ಮತ್ತಿತರರು ಬಡ್ಡಿ ಹಣಕ್ಕಾಗಿ ಸತಾಯಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ ಹಿನ್ನೆಲೆ ಲಕ್ಷ್ಮಿದೇವಮ್ಮ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಹೀಗಾಗಿ ತಕ್ಷಣ ಅವರನ್ನು ಕೋಲಾರದ ಆರ್.ಎಲ್.ಮೆಡಿಕಲ್ ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲಕ್ಷ್ಮಿದೇವಮ್ಮ ಬುಧವಾರ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕುಟುಂಬ ಸಮೇತ ವಿದೇಶಕ್ಕೆ ಬಿಎಸ್‍ವೈ ಪ್ರಯಾಣ

    POLICE JEEP

    ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬಡ್ಡಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಬಗ್ಗೆ ವೀಡಿಯೋ ಮಾಡಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ. ಈ ಸಂಬಂಧ ಮೃತಳ ಸಂಬಂಧಿಕರು ಮೃತಳ ವೀಡಿಯೋ ಸಮೇತ ಗುರುವಾರ ಬೂದಿಕೋಟೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಈ ಹಿನ್ನೆಲೆ ವೀಣಾ ವೆಂಕಟೇಶ್, ಅರುಣ್, ಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಾಗಿದೆ.