Tag: ಮಹಿಳೆಯರ ಸುರಕ್ಷತೆ

  • ಮಹಿಳೆಯರ ರಕ್ಷಣೆಗೆ ಬರಲಿದೆ ಅಕ್ಕ ಪಡೆ: ಲಕ್ಷ್ಮಿ ಹೆಬ್ಬಾಳ್ಕರ್

    ಮಹಿಳೆಯರ ರಕ್ಷಣೆಗೆ ಬರಲಿದೆ ಅಕ್ಕ ಪಡೆ: ಲಕ್ಷ್ಮಿ ಹೆಬ್ಬಾಳ್ಕರ್

    – ಬಾಲ್ಯವಿವಾಹ ತಡೆಗಟ್ಟಲು ಸರ್ಕಾರದಿಂದ ಕಠಿಣ ಕ್ರಮ

    ಬೆಂಗಳೂರು: ಶಾಲಾ – ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಸುರಕ್ಷತೆ (Women’s Safety) ದೃಷ್ಟಿಯಿಂದ ಮಹಿಳಾ ಪೊಲೀಸ್ ಒಳಗೊಂಡ ಅಕ್ಕ ಪಡೆ (Akka Pade) ಶೀಘ್ರವೇ ಜಾರಿಗೆ ಬರಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.

    ಮಳೆಗಾಲದ ಅಧಿವೇಶನದ ಮೂರನೇ ದಿನವಾದ ಬುಧವಾರ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸುರೇಶ್ ಬಾಬು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅಗಸ್ಟ್ 15ರಿಂದ ಬೆಳಗಾವಿ, ಮೈಸೂರು ಹಾಗೂ ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಅಕ್ಕ ಪಡೆ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ತೆಲಂಗಾಣ | ಬೇಕರಿಯಿಂದ ಖರೀದಿಸಿದ ಪಪ್ಸ್‌ನಲ್ಲಿ ಹಾವು ಪತ್ತೆ

    ಕೆಲವು ಸಮುದಾಯ ಮತ್ತು ಪಂಗಡಗಳಲ್ಲಿ ಆಚರಣೆಯಲ್ಲಿರುವ ಸಾಮಾಜಿಕ ಪದ್ಧತಿಗಳಿಂದಾಗಿ ಬಾಲ್ಯವಿವಾಹಗಳು ನಡೆಯುತ್ತಿದ್ದು, ಇದರಿಂದಾಗಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಬಾಲ್ಯವಿವಾಹ ಸಾಮಾಜಿಕ ಪಿಡುಗಾಗಿದ್ದು, ಇದನ್ನು ಬೇರುಮಟ್ಟದಿಂದ ಕಿತ್ತೊಗೆಯಬೇಕು. ಬಾಲ್ಯವಿವಾಹ ತಡೆಗಟ್ಟಲು ಸರ್ಕಾರ ಸರ್ವಸನ್ನದ್ಧವಾಗಿದ್ದು, ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳದ ಹೆಸರು ಹಾಳು ಮಾಡೋಕೆ ನೋಡಿದವರು ಯಾರು ಅಂತ ಗೊತ್ತಾಗ್ಬೇಕು: ಬೇಳೂರು ಗೋಪಾಲಕೃಷ್ಣ

    ಬಾಲ್ಯವಿವಾಹಗಳನ್ನು ತಡೆಗಟ್ಟಲು ಸರ್ಕಾರ ಈಗಾಗಲೇ ಕಾಯ್ದೆಯನ್ನು ಜಾರಿಗೆ ತಂದಿದೆ. ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಮಕ್ಕಳ ರಕ್ಷಣಾ ಸಮಿತಿ (ಸಿಡಬ್ಲ್ಯುಸಿ) ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ 4 ಕೇಂದ್ರಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಸಿಡಬ್ಲ್ಯುಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ | ರಾಜ್ಯಾದ್ಯಂತ ಪ್ರತಿಭಟನೆ – ವಿಧಾನಸೌಧದಲ್ಲಿ ಹೆಣ ಇದೆ ಅಂದ್ರೆ ಅಗೆಯುತ್ತಾರಾ? ಭಕ್ತರ ಆಕ್ರೋಶ

    ಬಾಲ್ಯ ವಿವಾಹ ತಡೆಗಟ್ಟುವ ಸಲುವಾಗಿ ಸೋಷಿಯಲ್ ಮೀಡಿಯಾಗಳಿಗೆ ಕಡಿವಾಣ ಹಾಕಬೇಕು. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಗೃಹ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ನುಡಿದರು. ಇದನ್ನೂ ಓದಿ: ಎಲ್‌ಓಸಿಯಲ್ಲಿ ಪಾಕ್ ಒಳನುಸುಳುಕೋರರ ತಡೆದ ಸೇನೆ; ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕ ಹುತಾತ್ಮ

    ಮಕ್ಕಳ ಸುರಕ್ಷತೆಗಾಗಿ ಮಕ್ಕಳ ಸಹಾಯವಾಣಿ 1098 ಸಂಖ್ಯೆಯೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಸಂಕಷ್ಟದಲ್ಲಿರುವ ಮಗುವಿನ ಬಗ್ಗೆ ಯಾವುದೇ ಸಮಯದಲ್ಲಿ ಕರೆ ಬಂದರೂ ತಕ್ಷಣ ಮಗುವನ್ನು ರಕ್ಷಿಸಲು ಸಂಬಂಧಿಸಿದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗುತ್ತಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: Bengaluru | ಲೇಡಿಸ್ ಪಿಜಿಗೆ ನುಗ್ಗಿ ಎಂಜಿನಿಯರ್ ಕುತ್ತಿಗೆಗೆ ಚಾಕು ಇಟ್ಟು ಚಿನ್ನಾಭರಣ ದರೋಡೆ

    ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಕಾವಲು ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

  • ಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆ ಸ್ಟಿಚ್ ಮಾಡಲು ಅಳತೆ ತೆಗೆದುಕೊಳ್ಳುವಂತಿಲ್ಲ – ಯುಪಿ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪ್ರಸ್ತಾವನೆ

    ಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆ ಸ್ಟಿಚ್ ಮಾಡಲು ಅಳತೆ ತೆಗೆದುಕೊಳ್ಳುವಂತಿಲ್ಲ – ಯುಪಿ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪ್ರಸ್ತಾವನೆ

    – ಮಹಿಳೆಯರ ಸುರಕ್ಷತೆ, ಭದ್ರತೆಗೆ ಹಲವು ಪ್ರಸ್ತಾವ ಸರ್ಕಾರದ ಮುಂದಿಟ್ಟ ಮಹಿಳಾ ಆಯೋಗ
    – ಮಹಿಳೆಯರಿಗೆ ಜಿಮ್, ಯೋಗಾಸನ ಪುರುಷರು ಹೇಳಿಕೊಡುವಂತಿಲ್ಲ

    ಲಕ್ನೋ: ಮಹಿಳೆಯರ ಸುರಕ್ಷತೆ, ಭದ್ರತೆಗಾಗಿ ಉತ್ತರಪ್ರದೇಶದ (Uttar Pradesh) ಮಹಿಳಾ ಆಯೋಗ (Women Commission) ಸರ್ಕಾರದ ಮುಂದೆ ಹಲವು ಪ್ರಸ್ತಾವನೆಗಳನ್ನು ಇರಿಸಿದೆ.

    ರಾಜ್ಯದಲ್ಲಿನ ಮಹಿಳೆಯರ ಸುರಕ್ಷತೆಯ (Women Safety) ದೃಷ್ಟಿಯಿಂದ ಹಲವು ಕ್ರಮಗಳನ್ನು ತೆಗೆದುಕೊಳ್ಳುವಂತೆ ಉತ್ತರ ಪ್ರದೇಶ ಮಹಿಳಾ ಆಯೋಗವು ಪ್ರಸ್ತಾವನೆಗಳನ್ನು ಸರ್ಕಾರದ ಮುಂದಿಟ್ಟಿದೆ.ಇದನ್ನೂ ಓದಿ: Articles 370 Row | ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಮೂರನೇ ದಿನ ಮಾರಾಮಾರಿ

    ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಪ್ರಕರಣಗಳನ್ನು ಕಡಿಮೆ ಮಾಡುವ ಮುಖ್ಯ ಉದ್ದೇಶದಿಂದ ಮಹಿಳಾ ಆಯೋಗ ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದಿರಿಸಿದೆ. ಸಲ್ಲಿಸಿದ ಪ್ರಸ್ತಾವನೆಯಲ್ಲಿ ಪುರುಷ ಟೈಲರ್‌ಗಳು ಇನ್ನು ಮುಂದೆ ಮಹಿಳೆಯರ ಅಳತೆಗಳನ್ನು ತೆಗೆದುಕೊಳ್ಳುವಂತಿಲ್ಲ. ಜಿಮ್‌ಗಳಲ್ಲಿ ಅಥವಾ ಯೋಗ ತರಬೇತಿ ಕೇಂದ್ರಗಳಲ್ಲಿ ಪುರುಷರು ಮಹಿಳೆಯರಿಗೆ ತರಬೇತಿ ನೀಡುವಂತಿಲ್ಲ. ಶಾಲಾ ಬಸ್‌ಗಳಲ್ಲಿ ಮಹಿಳಾ ಸಿಬ್ಬಂದಿ, ಮಹಿಳೆಯರಿಗೆ ಉಡುಪುಗಳಿಗೆ ಸಂಬಂಧಿಸಿದ ಅಂಗಡಿಗಳಲ್ಲಿ ಮಹಿಳಾ ಸಿಬ್ಬಂದಿ ಇರುವಂತೆ ಶಿಫಾರಸು ಮಾಡಿದೆ.

    ಲಕ್ನೋದಲ್ಲಿ ಅ.28 ರಂದು ನಡೆದ ಸಭೆಯಲ್ಲಿ ಈ ಸಲಹೆಗಳ ಕುರಿತು ಚರ್ಚಿಸಲಾಯಿತು. ಆಯೋಗದ ಸದಸ್ಯರು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಪರಿಹರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚಿಂತನೆ ನಡೆಸಲಾಯಿತು. ಇದೇ ವೇಳೆ ಆಯೋಗದ ಸದಸ್ಯರಾದ ಮನೀಶಾ ಅಹ್ಲಾವತ್ ಮಾತನಾಡಿ, ಪ್ರಸ್ತಾವನೆಗೆ ಸಂಬಂಧಿಸಿದಂತೆ ಪ್ರಾಥಮಿಕವಾಗಿ ಚರ್ಚೆಯನ್ನು ನಡೆಸಲಾಗಿದ್ದು, ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ. ಅನುಮೋದನೆಗೊಂಡ ನಂತರ ಪ್ರಸ್ತಾವನೆಗಳ ಅನುಷ್ಠಾನಕ್ಕಾಗಿ ಕರಡು ನೀತಿಯನ್ನು ರಚಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು.

    ಶಾಮ್ಲಿ ಜಿಲ್ಲಾ ಪರೀಕ್ಷಾಧಿಕಾರಿ ಹಮೀದ್ ಹುಸೇನ್ ಮಾತನಾಡಿ, ಈಗಾಗಲೇ ಈ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಸಂಸ್ಥೆಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಮಹಿಳಾ ಜಿಮ್‌ಗಳು, ಯೋಗ ಕೇಂದ್ರಗಳಲ್ಲಿ ಕಡ್ಡಾಯ ಮಹಿಳಾ ತರಬೇತುದಾರರು ಅಥವಾ ಶಿಕ್ಷಕರು ಮತ್ತು ಡಿವಿಆರ್ ಹೊಂದಿರುವ ಸಿಸಿಟಿವಿ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ತಿಳಿಸಿದರು.ಇದನ್ನೂ ಓದಿ: ದಲಿತ ಯುವತಿಗೆ ನಿಂದನೆ – ಅಥಣಿ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳಿ ವಿರುದ್ಧ ಎಫ್‌ಐಆ‌ರ್

    ಬಾಟಿಕ್ ಸೆಂಟರ್‌ಗಳಲ್ಲಿ ಸಕ್ರಿಯ ಸಿಸಿಟಿವಿ ಮಾನಿಟರಿಂಗ್‌ನೊಂದಿಗೆ ಮಹಿಳೆಯರ ಅಳತೆಗಳನ್ನು ತೆಗೆದುಕೊಳ್ಳಲು ಮಹಿಳಾ ಟೈಲರ್‌ಗಳನ್ನು ನೇಮಿಸಿಕೊಳ್ಳಬೇಕು. ಕೋಚಿಂಗ್ ಸೆಂಟರ್‌ಗಳು ಸಿಸಿಟಿವಿ ಕಣ್ಗಾವಲು ಮತ್ತು ಸರಿಯಾದ ಶೌಚಾಲಯ ಹಾಗೂ ವಿಶ್ರಾಂತಿ ಕೋಣೆಗಳನ್ನು ಹೊಂದಿರಬೇಕು ಎಂದರು.

  • ಇನ್ಮುಂದೆ ಎಲ್ಲಾ ತುರ್ತು ಸೇವೆ ನೆರವಿಗೂ 112 ಡಯಲ್ ಮಾಡಿ!- ಹೇಗೆ ಕೆಲಸ ಮಾಡುತ್ತೆ?

    ಇನ್ಮುಂದೆ ಎಲ್ಲಾ ತುರ್ತು ಸೇವೆ ನೆರವಿಗೂ 112 ಡಯಲ್ ಮಾಡಿ!- ಹೇಗೆ ಕೆಲಸ ಮಾಡುತ್ತೆ?

    ನವದೆಹಲಿ: ಇನ್ನು ಮುಂದೆ ಎಲ್ಲ ತುರ್ತು ಸೇವೆಗೆ ಒಂದೇ ನಂಬರ್ ಗೆ ಕರೆ ಮಾಡಬಹುದು. ಸುರಕ್ಷತೆ ತುರ್ತು ಸ್ಪಂದನ ಬೆಂಬಲ ವ್ಯವಸ್ಥೆ (ಇಆರ್ ಎಸ್‍ಎಸ್)ಗೆ ಏಕೈಕ ತುರ್ತು ಸಹಾಯವಾಣಿ ಸಂಖ್ಯೆ 112ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ದೆಹಲಿಯಲ್ಲಿ ಚಾಲನೆ ನೀಡಿದ್ದಾರೆ.

    ಹೌದು. ಮೊದಲೆಲ್ಲ ಪೊಲೀಸ್ ನೆರವು ಬೇಕಾದಲ್ಲಿ 100ಕ್ಕೆ, ಅಗ್ನಿಶಾಮಕ ನೆರವು ಬೇಕಾದಲ್ಲಿ 101ಕ್ಕೆ, ಆರೋಗ್ಯಕ್ಕೆ 108ಗೆ ಹೀಗೆ ಬೇರೆ ಬೇರೆ ಸೇವೆಗಳಿಗೆ ವಿವಿಧ ತುರ್ತು ಸಹಾಯವಾಣಿ ಸಂಖ್ಯೆ ಇತ್ತು. ಆದ್ರೆ ಇನ್ಮುಂದೆ ಎಲ್ಲಾ ವ್ಯವಸ್ಥೆಗೂ 112 ಏಕೈಕ ತುರ್ತು ಸಹಾಯವಾಣಿ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಈ ವಿನೂತನ ತುರ್ತು ಸಹಾಯವಾಣಿ ಸಂಖ್ಯೆಗೆ ಸಂಕಷ್ಟದಲ್ಲಿರುವ ಮಹಿಳೆಯರು ಸಹ ಡಯಲ್ ಮಾಡಿ ನೆರವು ಪಡೆಯಬಹುದಾಗಿದೆ.

    ಸದ್ಯ ಒಟ್ಟು ದೇಶದಲ್ಲಿ 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಆಂಧ್ರಪ್ರದೇಶ, ಉತ್ತರಾಖಂಡ, ಪಂಜಾಬ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ತಮಿಳುನಾಡು, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಪುದುಚೇರಿ, ಲಕ್ಷದೀಪ, ಅಂಡಮಾನ್, ದಾದರ್ ನಗರ್ ಹವೇಲಿ, ದಿಯು ಮತ್ತು ದಮನ್‍ನಲ್ಲಿ ಸೇವೆ ಕಾರ್ಯರೂಪಕ್ಕೆ ಬರಲಿದೆ.

    ಹೇಗೆ ಕೆಲಸ ಮಾಡುತ್ತೆ?
    * ಸ್ಮಾರ್ಟ್ ಫೋನ್ ನಲ್ಲಿ 112 ನಂಬರ್ ಡಯಲ್ ಮಾಡಬಹುದು ಅಥವಾ ಪವರ್ ಬಟನ್ ಅನ್ನು ಮೂರು ಬಾರಿ ಒತ್ತಿ ತಕ್ಷಣವೇ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದು. ಹಾಗೆಯೇ ಫೀಚರ್ ಫೋನ್‍ನಲ್ಲಿ ಸಂಖ್ಯೆ 5 ಅಥವಾ 9 ಅನ್ನು ದೀರ್ಘವಾಗಿ ಒತ್ತಿದರೆ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದಾಗಿದೆ.
    * ಸಂಬಂಧ ಪಟ್ಟ ರಾಜ್ಯಗಳ ಇಆರ್ ಎಸ್‍ಎಸ್ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಸಮಸ್ಯೆಯನ್ನು ಇ-ಮೇಲ್ ಹಾಗೂ ಎಸ್‍ಓಎಸ್ ಸಂದೇಶದ ಮೂಲಕ ರಾಜ್ಯ ಎ.ಆರ್‍ಸಿಗೆ ಕಳುಹಿಸಬಹುದು.

    * 112 ಸಹಾಯವಾಣಿಗೆ ಕರೆ ಮಾಡಿದರೆ ನೇರವಾಗಿ ಜಿಲ್ಲಾ ಕಮಾಂಡ್ ಕೇಂದ್ರದೊಂದಿಗೆ ಸಂಪರ್ಕಿಸಲಾಗಿರುತ್ತದೆ. ಹೀಗೆ ಸಂತ್ರಸ್ತರಿಗೆ ಸಂಬಂಧ ಪಟ್ಟ ಪ್ರದೇಶಗಳಿಂದ ತಕ್ಷಣ ನೆರವು ಒದಗಿಸಲಾಗುತ್ತದೆ.
    * ಈ ತುರ್ತುಸೇವೆಗಾಗಿ ನಿರ್ಭಯ ನಿಧಿಯಡಿ 321 ಕೋಟಿ ರೂಪಾಯಿಗಳ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
    * 112 ಇಂಡಿಯಾ ಮೊಬೈಲ್ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಸ್ಟೋರ್ ಗಳಲ್ಲಿ ಲಭ್ಯವಿದೆ.

    * ಸದ್ಯ ತುರ್ತು ಸಹಾಯವಾಣಿ ಕರೆಗಳಿಗೆ ಸ್ಪಂದಿಸಿ ನೆರವು ನೀಡಲು ಈಗ 10-12 ನಿಮಿಷಗಳ ಸಮಯ ತೆಗೆದುಕೊಳ್ಳುತ್ತದೆ. ಮುಂದಿನ 6-8 ತಿಂಗಳ ಒಳಗಡೆ 8 ನಿಮಿಷದಲ್ಲಿ ಕರೆಗೆ ಸ್ಪಂದನೆ ನೀಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
    * ಅಲ್ಲದೆ ಮಹಿಳೆಯರಿಗೆ ಇನ್ನಷ್ಟು ಸುರಕ್ಷತೆ ಒದಗಿಸುವ ಸಲುವಾಗಿ ದೇಶದಲ್ಲಿ ಒಟ್ಟು 8 ದೊಡ್ಡ ನಗರಗಳನ್ನು ಆರಿಸಿಕೊಂಡು ಅಲ್ಲಿ ಸುರಕ್ಷತಾ ನಗರ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸುಮಾರು 2,919 ಕೋಟಿ ರೂ. ಹಣ ಮೀಸಲಿಡಲಾಗಿದೆ. ಅಹಮದಾಬಾದ್, ಚೆನ್ನೈ, ಬೆಂಗಳೂರು, ದೆಹಲಿ, ಕೋಲ್ಕತ್ತಾ, ಹೈದರಾಬಾದ್, ಲಕ್ನೋ, ಮುಂಬೈ ನಗರಗಳನ್ನು ಸುರಕ್ಷತಾ ನಗರ ಯೋಜನೆಗೆ ಆರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv