Tag: ಮಹಿಳೆ

  • ಬೆಟ್ಟದಿಂದ ಉರುಳಿ ಕಾರಿನೊಳಕ್ಕೆ ಬಿದ್ದ ಬಂಡೆ ಕಲ್ಲು – ಮಹಿಳೆ ಸಾವು

    ಬೆಟ್ಟದಿಂದ ಉರುಳಿ ಕಾರಿನೊಳಕ್ಕೆ ಬಿದ್ದ ಬಂಡೆ ಕಲ್ಲು – ಮಹಿಳೆ ಸಾವು

    ಮುಂಬೈ: ಸಾವು ಯಾರಿಗೆ ಹೇಗೆ, ಎಲ್ಲಿ, ಯಾವಾಗ ಬರುತ್ತೆ ಅಂತ ಹೇಳೋಕೆ ಆಗಲ್ಲ. ಅದೇ ರೀತಿ ಮುಂಬೈನಲ್ಲಿ (Mumbai) ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಂಡೆ ಕಲ್ಲೊಂದು (Rock) ಬೆಟ್ಟದಿಂದ ಉರುಳಿ ಕಾರಿನ ಸನ್‌ರೂಫ್‌ನಿಂದ ಒಳಗೆ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ.

    ಹೌದು, ಮಹಾರಾಷ್ಟ್ರದ ಪರ್ವತ ಮಾರ್ಗವಾದ ತಮ್ಹಿನಿ ಘಾಟ್‌ನಲ್ಲಿ ಈ ಘಟನೆ ನಡೆದಿದೆ. ಸ್ನೇಹಲ್ ಗುಜರಾತಿ (43) ಮೃತ ಮಹಿಳೆ. ಇದನ್ನೂ ಓದಿ: Mumbai Hostage | 17 ಮಕ್ಕಳನ್ನ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರೋಪಿ ಪೊಲೀಸರ ಗುಂಡಿಗೆ ಬಲಿ

    ಮಹಿಳೆಯು ಪುಣೆಯಿಂದ ಮಂಗಾವ್‌ಗೆ ವೋಕ್ಸ್ವ್ಯಾಗನ್ ವರ್ಟಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ಕಾರಿನ ಮೇಲೆ ಬಂಡೆ ಕಲ್ಲೊಂದು ಉರುಳಿ ಸನ್‌ರೂಫ್ ಮೂಲಕ ಒಳಗೆ ಬಿದ್ದಿದೆ. ಮಹಿಳೆ ಕೂತಿದ್ದ ಸೀಟಿನ ಮೇಲೆ ಬಿದ್ದಿದ್ದರಿಂದ ಆಕೆಯ ತಲೆಗೆ ನೇರವಾಗಿ ಬಂಡೆ ಕಲ್ಲು ಬಡಿದು, ಮೃತಪಟ್ಟಿದ್ದಾರೆ.

    ಅಲ್ಲದೇ ಮುಂಬೈನಲ್ಲಿ ಪ್ರತ್ಯೇಕ ಘಟನೆಯೊಂದು ಸಂಭವಿಸಿದ್ದು, ಚಾಲಕ ತನ್ನ ಸಮಯಪ್ರಜ್ಞೆಯಿಂದ 12 ಪ್ರಯಾಣಿಕರ ಜೀವ ಉಳಿಸಿದ್ದಾನೆ. ಬುಧವಾರ ನಸುಕಿನ ವೇಳೆ 3 ಗಂಟೆ ಸುಮಾರಿಗೆ ಮುಂಬೈನಿಂದ ಜಲ್ನಾಗೆ ಪ್ರಯಾಣಿಸುತ್ತಿದ್ದಾಗ ಸಮೃದ್ಧಿ ಹೆದ್ದಾರಿಯಲ್ಲಿ ಖಾಸಗಿ ಐಷಾರಾಮಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು.

    ಕೂಡಲೇ ಎಚ್ಚೆತ್ತುಕೊಂಡ ಚಾಲಕ 12 ಪ್ರಯಾಣಿಕರನ್ನು ತಕ್ಷಣವೇ ಬಸ್‌ನಿಂದ ಕೆಳಗಿಳಿಸಿ ಅವರ ಪ್ರಾಣ ಉಳಿಸಿದ್ದಾನೆ.

  • ಹೆಂಡ್ತಿ ಕೊಂದು ಕೊಳವೆ ಬಾವಿಯಲ್ಲಿ ಹಾಕಿ, ದೇವರಿಗೆ ಮೂರು ಪ್ರಾಣಿ ಬಲಿ ಅರ್ಪಿಸಿದ್ದ ಕೇಡಿ ಗಂಡ!

    ಹೆಂಡ್ತಿ ಕೊಂದು ಕೊಳವೆ ಬಾವಿಯಲ್ಲಿ ಹಾಕಿ, ದೇವರಿಗೆ ಮೂರು ಪ್ರಾಣಿ ಬಲಿ ಅರ್ಪಿಸಿದ್ದ ಕೇಡಿ ಗಂಡ!

    – ಹೆಂಡ್ತಿ ದೆವ್ವ ಆಗಬಾರದು, ತಾನು ಪೊಲೀಸರಿಗೆ ಸಿಗಬಾರ್ದು ಅಂತ ಪ್ರಾಣಿಬಲಿ

    ಚಿಕ್ಕಮಗಳೂರು: ಹೆಂಡತಿ ಕೊಂದು ಕೊಳವೆ ಬಾವಿಗೆ ಹಾಕಿ ದಫನ್ ಮಾಡಿ ದೇವರಿಗೆ ಮೂರು ಪ್ರಾಣಿ ಬಲಿ (Animal sacrifice) ನೀಡಿ, ಕಬ್ಬಿಣದ ತಗಡಿಗೆ ಹೆಂಡತಿ ಹೆಸರು ಬರೆದು ಆಕೆ ದೆವ್ವ-ಪೀಡೆ-ಪಿಶಾಚಿ ಆಗಬಾರದು, ಈ ಕೇಸ್ ಗೊತ್ತಾಗಬಾರದು, ಕೇಸ್ ಪತ್ತೆ ಹಚ್ಚುವಲ್ಲಿ ಪೊಲೀಸರು ವೈಫಲ್ಯ ಆಗಬೇಕು, ಕೋರ್ಟಿನಿಲ್ಲಿ ಕೇಸ್ ನಿಲ್ಲಬಾರದು ಎಂದು ಬರೆದು ಹೆಂಡತಿ ಫೋಟೋವನ್ನ ದೇವಾಲಯದ ಮರಕ್ಕೆ ಮೊಳೆ ಹೊಡೆದಿದ್ದ ಕೇಡಿ-ಕಿರಾತಕ ಪತಿ ಬಂಧನವಾಗಿರೋ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ನಡೆದಿದೆ.

    ಮೃತಳನ್ನ 28 ವರ್ಷದ ಭಾರತಿ ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಹೆಂಡತಿಯನ್ನ ಕೊಂದಿದ್ದ ಗಂಡ ವಿಜಯ್ ಯಾರಿಗೂ ತಿಳಿಯಂತೆ ತಮ್ಮ ತೋಟದ ಕೊಳವೆ ಬಾವಿಯಲ್ಲಿ ಆಕೆಯನ್ನ ಹೂತಿದ್ದನು. ಯಾರಿಗೂ ಅನುಮಾನ ಬಾರದಿರಲಿ ಎಂದು ಆತನೇ ಹೋಗಿ ನನ್ನ ಪತ್ನಿ ಮಾನಸಿಕ ಅಸ್ವಸ್ಥೆ. ಎಲ್ಲೋ ಹೋಗಿದ್ದಾಳೆ. ಹುಡುಕಿಕೊಡಿ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದ. ಆದ್ರೆ, ಒಂದೂವರೆ ತಿಂಗಳ ಹಿಂದೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯ ಬೆನ್ನು ಬಿದ್ದಿದ್ದರು. ಹುಡುಗಿಯ ಪೋಷಕರು ಕೂಡ ನಮಗೆ ನಮ್ಮ ಮಗಳನ್ನ ಹುಡುಕಿಕೊಂಡು ಎಂದು ಕೈಮುಗಿದಿದ್ದರು. ಇದೀಗ ಪೊಲೀಸರ ಸೂಕ್ಷ್ಮ ತನಿಖೆಯಿಂದ ಹಂತಕ ಆಕೆಯ ಗಂಡನೇ ಎಂಬುದು ಸಾಬೀತಾಗಿದ್ದು, ಗಂಡ ವಿಜಯ್, ಅತ್ತೆ ತಾಯಮ್ಮ, ಮಾವ ಗೋವಿಂದಪ್ಪನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಏನಿದು ಹಾರರ್‌ ಸ್ಟೋರಿ?
    ಮೃತ ಭಾರತಿ ತನ್ನ ಅಜ್ಜಿ ನೋಡಲು ಶಿವಮೊಗ್ಗಕ್ಕೆ ಹೋದವಳು ವಾಪಸ್ಸು ಬಾರದೇ ಕಾಣೆಯಾಗಿದ್ದಾಳೆ ಎಂದು ಸೆಪ್ಟೆಂಬರ್ 5ರಂದು ಪಾಪಿ ಗಂಡ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಪೋಲೀಸರು ತನಿಖೆ ಕೈಗೊಂಡಿದ್ದರು. ಈ ನಡುವೆ ಸುಮಾರು ಒಂದೂವರೆ ತಿಂಗಳ ಬಳಿಕ ಅಕ್ಟೋಬರ್ 13 ರಂದು ಭಾರತಿಯ ತಾಯಿ ಎಮ್ಮೆದೊಡ್ಡಿ ಪ್ರದೇಶದ ಪರದೇಶಿಹಾಳ್ ನಿವಾಸಿ ಲಲಿತಮ್ಮ ಅವರು ಕಡೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ನನ್ನ ಮಗಳು ಭಾರತಿಯನ್ನ 6 ವರ್ಷಗಳ ಹಿಂದೆ ಆಲಘಟ್ಟದ ವಿಜಯಕುಮಾರ್ ಎಂಬುವವರಿಗೆ ವಿವಾಹ ಮಾಡಿಕೊಟ್ಟಿದ್ದೆವು. ನಂತರ ಹಲವಾರು ಬಾರಿ ವರದಕ್ಷಿಣೆ ವಿಚಾರವಾಗಿ ಭಾರತಿಗೆ ಹೊಡೆದು ಹಿಂಸೆ ನೀಡಿದ್ದರು. ಈಗ ಕೆಲ ದಿನಗಳ ಹಿಂದೆಯೂ ವರದಕ್ಷಿಣೆ ವಿಚಾರವಾಗಿ ಆಕೆಯ ಕಾಲು ಮುರಿಯುವಂತೆ ಹೊಡೆದಿದ್ದರು. ರಾಜಿ ಪಂಚಾಯಿತಿ ಮಾಡಿ ಆಕೆಯನ್ನು ಗಂಡನ ಮನೆಗೆ ಕಳುಹಿಸಿದ್ದೆವು. ಹತ್ತು ದಿನಗಳ ಹಿಂದೆ ಮತ್ತೆ ಭಾರತಿಗೆ ಬಹಳ ಹಿಂಸೆ ನೀಡಿದ್ದಾರೆಂಬ ವಿಚಾರ ತಿಳಿದು ಅವರ ಮನೆಗೆ ಹೋದಾಗ ಅವರ ಅಜ್ಜಿಗೆ ಹುಷಾರಿಲ್ಲ. ಹಾಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ನೋಡಲು ಹೋಗಿದ್ದಾಳೆ ಎಂದು ಹೇಳಿದ್ದರು.

    ಆ ನಂತರ ನಮಗೆ ತಿಳಿಯದಂತೆ ಭಾರತಿ ನಾಪತ್ತೆಯಾಗಿದ್ದಾಳೆ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ವಿಚಾರ ತಿಳಿದು ಮತ್ತೆ ಆಲಘಟ್ಟಕ್ಕೆ ಹೋಗಿ ಕೇಳಿದಾಗ ನಿಮ್ಮ ಮಗಳು ಬರುವುದಿಲ್ಲ. ಆಕೆಯನ್ನು ಮರೆತು ಬಿಡಿ ಎಂದು ಹೇಳಿದ್ದರಂತೆ. ನನ್ನ ಮಗಳನ್ನು ಇವರು ಕೊಲೆ ಮಾಡಿದ್ದಾರೆ. ಶವ ಎಲ್ಲಿದೆ? ಎಂದು ಹೇಳಿಲ್ಲ ಎಂದು ಭಾರತಿಯ ಪತಿ ವಿಜಯ ಕುಮಾರ್, ಆತನ ತಂದೆ ಗೋವಿಂದಪ್ಪ ಹಾಗೂ ತಾಯಿ ತಾಯಮ್ಮ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಅಂತಿಮವಾಗಿ ದೂರು ನೀಡಿದ ವ್ಯಕ್ತಿಯೇ ತನ್ನ ಹೆಂಡತಿಯನ್ನು ಕೊಲೆ ಮಾಡಿ ಕಾಣೆಯಾಗಿರುವ ಬಗ್ಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದು ಆತನನ್ನು ಬಂಧಿಸಿದ್ದಾರೆ. ಜೊತೆಗೆ ಆತನ ತಂದೆ ತಾಯಿಯನ್ನೂ ಬಂಧಿಸಲಾಗಿದೆ.

    ಆರೋಪಿಗಳನ್ನ ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿದೆ. ಕೊಲೆ ಮಾಡಿದ ನಂತರ ಹೆಂಡತಿಯ ಮೃತ ದೇಹವನ್ನು ತನ್ನದೇ ಜಮೀನಿನಲ್ಲಿ ಹಿಂದೆ ತೆಗೆಸಿ ನೀರು ಬಾರದೇ ಹಾಗೆಯೇ ಮುಚ್ಚದೇ ಬಿಟ್ಟಿದ್ದ ಕೊಳವೆ ಬಾವಿಗೆ ಹಾಕಿದ್ದಾರೆ ಎನ್ನಲಾಗಿದೆ. ಮಂಗಳವಾರ ಕಡೂರು ಪೊಲೀಸರು ಮೃತದೇಹ ಹಾಕಿದ್ದಾರೆ ಎನ್ನಲಾದ ಕೊಳವೆ ಬಾವಿ ಮುಂತಾದೆಡೆ ಮಹಜರು ನಡೆಸಿದರು. ಮೃತದೇಹವನ್ನು ಹೊರತೆಗೆಯಲು ಅಗತ್ಯ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡು ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಚಿಕ್ಕಬಳ್ಳಾಪುರ ರೇಪ್‌ ಕೇಸ್‌ | ಅನ್ಯಕೋಮಿನ ವ್ಯಕ್ತಿಯಿಂದ ಕೃತ್ಯ – ಸಂತ್ರಸ್ತೆ ನೆರವಿಗೆ ಧಾವಿಸಿದ ಮಹಿಳೆ ಹೇಳಿದ್ದೇನು?

    ಚಿಕ್ಕಬಳ್ಳಾಪುರ ರೇಪ್‌ ಕೇಸ್‌ | ಅನ್ಯಕೋಮಿನ ವ್ಯಕ್ತಿಯಿಂದ ಕೃತ್ಯ – ಸಂತ್ರಸ್ತೆ ನೆರವಿಗೆ ಧಾವಿಸಿದ ಮಹಿಳೆ ಹೇಳಿದ್ದೇನು?

    – ಡ್ರಾಪ್ ಕೊಡುವ ನೆಪದಲ್ಲಿ ನಡೆದೇಹೋಯ್ತು ಕೃತ್ಯ
    – ಹೊಸ ಬಟ್ಟೆ ತರ್ತೀನಿ ಅಂತ ಸ್ನೇಹಿತನನ್ನ ಕರೆಸಿ ಮತ್ತೆ ರೇಪ್‌

    ಚಿಕ್ಕಬಳ್ಳಾಪುರ: ಆಕೆ ಬಿಕಾಂ ಪದವೀಧರೆ (BCom Graduate) ಕೆಲಸ ಹುಡುಕೋಣ ಅಂತ ಹಳ್ಳಿಯಿಂದ ನಗರಕ್ಕೆ ಬಂದಿದ್ಲು. ಆದ್ರೆ ಕೆಲಸ ಸಿಗಲಿಲ್ಲ ಹೀಗಾಗಿ ಮರಳಿ ಹಳ್ಳಿಯತ್ತ ನಡೆದುಕೊಂಡು ಹೋಗ್ತಿದ್ದ ಯುವತಿಗೆ ದಾರಿ ಮಧ್ಯೆ ಡ್ರಾಪ್ (Bike Drop) ಕೋಡೋದಾಗಿ ಹೇಳಿ ಕರೆದೊಯ್ದ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಪಾಪಿ ತಾನು ಮಾತ್ರವಲ್ಲದೇ ಸ್ನೇಹಿತನನ್ನ ಕರೆದುಕೊಂಡು ಹೋಗಿ ಮತ್ತೆ ಮತ್ತೆ ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾನೆ.

    ಇಡೀ ಸಮಾಜವೇ ತಲೆತಗ್ಗಿಸುವಂತಹ ಹೇಯ ಕೃತ್ಯ ನಡೆದಿದ್ದು ಚಿಕ್ಕಬಳ್ಳಾಪುರದಲ್ಲಿ. ಹೌದು. ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದ ಬಡಾವಣೆಯೊಂದರಲ್ಲಿ ಕಾಮುಕನೊಬ್ಬ ಡ್ರಾಪ್ ಕೊಡುವ ನೆಪದಲ್ಲಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಡ್ರಾಪ್ ಕೊಡುವ ನೆಪದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್, ಇಬ್ಬರು ಅರೆಸ್ಟ್

    ಸಂತ್ರಸ್ತೆ ಚಿಕ್ಕಬಳ್ಳಾಪುರದ (Chikkaballapura) ಹಳ್ಳಿಯೊಂದರ ನಿವಾಸಿ. ಬಿಕಾಂ ಪಧವೀಧರೆಯಾಗಿದ್ದು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಕೆಲಸ ಹುಡುಕಿಕೊಂಡೇ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾಳೆ. ಕೆಲಸ ಸಿಗದೇ ಇದ್ದಾಗ ತಮ್ಮೂರಿಗೆ ತಮ್ಮೂರಿಗೆ ವಾಪಸ್ ಹೋಗೋಣ ಅಂತ ಚಿಕ್ಕಬಳ್ಳಾಪುರ ಗೌರಿಬಿದನೂರು ಮಾರ್ಗದಲ್ಲಿ ಹೆಜ್ಜೆ ಹಾಕಿದ್ದಳು. ಇದೇ ದಾರಿಯಲ್ಲಿ ಸಾಗುತ್ತಿದ್ದ ಚಿಕ್ಕಬಳ್ಳಾಪುರದ ಟ್ರ‍್ಯಾಕ್ಟರ್ ಮೆಕ್ಯಾನಿಕ್ ಸಿಖಂದರ್ ಎಂಬಾತ ರಸ್ತೆಯಲ್ಲಿ ಒಂಟಿ ಯುವತಿ ಕಂಡು ಡ್ರಾಪ್ ಕೊಡುವ ನೆಪದಲ್ಲಿ ಸ್ಕೂಟಿ ಹತ್ತಿಸಿಕೊಂಡಿದ್ದಾನೆ. ಸೀದಾ ಗೌರಿಬಿದನೂರು ಮಾರ್ಗದ ಕಣಿವೆ ಇಳಿತಿದ್ದಂತೆ ಬಡಾವಣೆಯೊಂದರೊಳಗೆ ಸ್ಕೂಟಿ ತಿರುಗಿಸಿ ಅಲ್ಲೇ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಇದನ್ನೂ ಓದಿ: ಆರ್‌ಎಸ್‌ಎಸ್ ಬ್ಯಾನ್ ಮಾಡ್ಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? – ಪ್ರಿಯಾಂಕ್ ಖರ್ಗೆ

    ʻಬಂಗಾರʼ ಬದುಕು ಕಸಿದ ಕಾಮುಕರು
    ಇನ್ನೂ ಅತ್ಯಾಚಾರ ಮಾಡಿದ ಕಾಮುಕರು ಆಕೆಯ ಕಿವಿಯಲ್ಲಿದ್ದ ಬಂಗಾರದ ಒಲೆ ಕಸಿದುಕೊಂಡಿದ್ದಾರೆ. ನಂತರ ಆಕೆಗೆ ಹೊಸ ಬಟ್ಟೆ ತರುವುದಾಗಿ ಹೇಳಿ ಹೋಗಿದ್ದಾನೆ. ನಂತರ ಚಿಕ್ಕಬಳ್ಳಾಪುರಕ್ಕೆ ಹೋಗಿ ತನ್ನ ಸ್ನೇಹಿತ ಜನಾರ್ಧನಾಚಾರಿ ಎಂಬಾತನನ್ನು ಕರೆದುಕೊಂಡು ಬಂದು ಪುನಃ ಆಕೆಯನ್ನ ಅದೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮತ್ತೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ.

    ರಾತ್ರಿವರೆಗೆ ಶಾಕ್‌ನಲ್ಲೇ ಇದ್ದ ಯುವತಿ
    ಎರಡು ಬಾರಿ ಅತ್ಯಾಚಾರ ಮಾಡಿದ ಆರೋಪಿಗಳು ಸೀದಾ ಅಕೆಯನ್ನ ಕರೆತಂದು ಕೊನೆಗೆ ಪೆಟ್ರೋಲ್ ಬಂಕ್‌ವೊಂದರ ಬಳಿ ಬಿಟ್ಟು ಎಸ್ಕೇಪ್ ಅಗಿದ್ದಾರೆ. ಘಟನೆಯಿಂದ ಶಾಕ್‌ಗೆ ಗುರಿಯಾಗಿ ರಾತ್ರಿ ಆದ್ರೂ ಅಲ್ಲೇ ಇದ್ದ ಯುವತಿ ಕಂಡು ಶಿಲ್ಪಗೌಡ ಎಂಬ ಮಹಿಳೆ ಈಕೆಯನ್ನು ವಿಚಾರಿಸಿ ಉಪಚರಿಸಿದಾಗ ಯುವತಿ ನಡೆದ ಘಟನೆ ವಿವರಿಸಿದ್ದಾಳೆ. ಈ ಸಂಬಂಧ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಸಂತ್ರಸ್ತ ಯುವತಿಗೆ ಚಿಕಿತ್ಸೆ ನೀಡಿ ಮಹಿಳಾ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ – ಸಿಬಿಐ ತನಿಖೆಗೆ ಸುಪ್ರೀಂ ಆದೇಶ

    ಘಟನೆ ಕುರಿತು ʻಪಬ್ಲಿಕ್‌ ಟಿವಿʼಜೊತೆಗೆ ಮಾತನಾಡಿರುವ ಮಹಿಳೆ ಶಿಲ್ಪಗೌಡ, ಮುಸ್ಲಿಂ ವ್ಯಕ್ತಿಯೊಬ್ಬ ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ, ಡ್ರಾಪ್‌ ಕೊಡ್ತೀನಿ ಅಂತ ಆಕೆಯನ್ನ ಕರೆದುಕೊಂಡು ಹೋಗಿದ್ದಾನೆ. ಅಲ್ಲೊಂದು ಅಜ್ಜಿ ಮನೆ ಬಳಿ ಕೂರಿಸಿದ್ದಾನೆ. ನಮ್ಮ ತೋಟದಲ್ಲೇ ಅವರ ತಂದೆ-ತಾಯಿ ಕೆಲಸ ಮಾಡ್ತಿದ್ದಾರೆ, ಈಕೆಗೆ ಮೆಂಟಲ್‌ ಕಂಡೀಷನ್‌ ಸರಿಯಿಲ್ಲ ಅಂತ ಕೂರಿಸಿರುತ್ತಾನೆ. ಬಳಿಕ ಸ್ನೇಹಿತನನ್ನ ಕರೆದುಕೊಂಡು ಬಂದು ಕಣಿವೆ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡ್ತಾರೆ. ಆಕೆ ಕಿರುಚಿದಾಗ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ. ಚಿನ್ನ ಕಸಿದು ಪೆಟ್ರೋಲ್‌ ಬಂಕ್‌ ಬಳಿ ಆಕೆಯನ್ನ ಬಿಟ್ಟು ಹೋಗಿದ್ದಾರೆ. ಶಾಕ್‌ನಲ್ಲಿದ್ದ ಯುವತಿ ಇಡೀ ರಾತ್ರಿ ಅಲ್ಲೇ ಮಲಗಿದ್ದಾಳೆ. ಅಸಹಾಯಕತೆಯಿಂದ ಏನೂ ಮಾಡೋದಕ್ಕೆ ಆಗಿಲ್ಲ. ಮರುದಿನ ಉಪಚರಿಸಿದ ನಂತರ ಆಕೆ ಘಟನೆ ವಿವರಿಸಿದ್ದಾಳೆ ಎಂದು ತಿಳಿಸಿದ್ದಾರೆ. ಬಳಿಕ ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ್ದಾರೆ.

  • Bengaluru | ಮಹಿಳೆಗೆ ಥಳಿತ ಕೇಸ್‌ – ಬಟ್ಟೆ ಅಂಗಡಿ ಮಾಲೀಕ ಸೇರಿ ಇಬ್ಬರು ಆರೋಪಿಗಳು ಅರೆಸ್ಟ್

    Bengaluru | ಮಹಿಳೆಗೆ ಥಳಿತ ಕೇಸ್‌ – ಬಟ್ಟೆ ಅಂಗಡಿ ಮಾಲೀಕ ಸೇರಿ ಇಬ್ಬರು ಆರೋಪಿಗಳು ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಅವೆನ್ಯೂ ರಸ್ತೆಯಲ್ಲಿ (Avenue Road) ಗುರುವಾರ ಮಹಿಳೆಗೆ ಅಮಾನುಷವಾಗಿ ಥಳಿಸಿದ್ದ ಆರೋಪಿಗಳನ್ನ ಕೆ.ಆರ್.ಮಾರ್ಕೆಟ್ ಪೊಲೀಸರು (KR Market Police) ಬಂಧಿಸಿದ್ದಾರೆ.

    ಅಂಗಡಿಯ ಮಾಲೀಕ ಉಮೇದ್‌ ರಾಮ್ ಮತ್ತು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ, ಮಹೇಂದ್ರ ಶರ್ಮಾ ಬಂಧಿತ ಆರೋಪಿಗಳು. ಕಳೆದ ಶನಿವಾರ ಮಹಿಳೆಯೊಬ್ಬರು ಉಮೇದ್‌ ರಾಮ್ ಅಂಗಡಿಯಲ್ಲಿ ಸೀರೆ ಕಳ್ಳತನ ಮಾಡಿದ್ದರು. ಇದನ್ನ ಗಮನದಲ್ಲಿಟ್ಟುಕೊಂಡು, ಉಮೇದ್‌ ರಾಮ್ ಭಾನುವಾರ ಕಾದು ಕೂತಿದ್ದಾನೆ. ಮಹಿಳೆ ಬರುತ್ತಿದ್ದಂತೆ ಆಕೆಯನ್ನ ಹಿಡಿದು, ಆತ ಮತ್ತು ಸಿಬ್ಬಂದಿ ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಬೂಟ್ ಕಾಲಿನಲ್ಲಿ ಒದ್ದು, ಮನಬಂದಂತೆ ಥಳಿಸಿದ್ದರು. ಮಹಿಳೆ ನೋವಿನಿಂದ ಅಂಗಲಾಚಿದರೂ ಬಿಡದ ಪಾಪಿ ಮಾಲೀಕನ ಕೃತ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮಹಿಳೆ ದೂರು ಕೊಡಲು ಮುಂದಾದರೂ ಕೇರ್ ಮಾಡದ ಸಿಟಿ ಮಾರ್ಕೆಟ್ ಪೊಲೀಸರು, ಕಳ್ಳತನ ಕೇಸ್ ಹಾಕಿ ಮಹಿಳೆಯನ್ನ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ವಾಣಿವಿಲಾಸ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ – ಸಿಎಂ ಅವ್ರನ್ನೇ ಕೇಳಿ ಅಂತ ಸಿಬ್ಬಂದಿ ಉಡಾಫೆ!

    ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದಂತೆ, ಕನ್ನಡಪರ ಹೋರಾಟಗಾರರು ಮಹಿಳೆಯ ಪರವಾಗಿ ನಿಂತಿದ್ದಾರೆ. ಕನ್ನಡ ಪರ ಸಂಘಟನೆಗಳು ಎಂಟ್ರಿ ಕೊಡುತ್ತಿದ್ದಂತೆ ಸಿಟಿ ಮಾರ್ಕೆಟ್ ಪೊಲೀಸರು, ತರಾತುರಿಯಲ್ಲಿ ಮಾಲೀಕನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಗುರುವಾರ ರಾತ್ರಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ | ಚರಂಡಿಗೆ ಬಿದ್ದು 4 ವರ್ಷದ ಬಾಲಕ ಸಾವು

  • ಯಾದಗಿರಿ | ಪತ್ನಿ ಶೀಲ ಶಂಕಿಸಿ ಜನ್ಮ ಕೊಟ್ಟ ತಂದೆಯಿಂದಲೇ ಮಕ್ಕಳ ಬರ್ಬರ ಹತ್ಯೆ!

    ಯಾದಗಿರಿ | ಪತ್ನಿ ಶೀಲ ಶಂಕಿಸಿ ಜನ್ಮ ಕೊಟ್ಟ ತಂದೆಯಿಂದಲೇ ಮಕ್ಕಳ ಬರ್ಬರ ಹತ್ಯೆ!

    ಯಾದಗಿರಿ: ಪತ್ನಿಯ (Wife) ಶೀಲ ಶಂಕಿಸಿ ಹೆತ್ತ ತಂದೆಯೇ ತನ್ನ ಮಕ್ಕಳನ್ನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಯಾದಗಿರಿ (Yadagiri) ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ.

    ಮಲಗಿದ್ದ ಮಕ್ಕಳ ಮೇಲೆ ಕ್ರೌರ್ಯ ಮೆರೆದ ರಾಕ್ಷಸ ತಂದೆ ಶರಣಪ್ಪ. ತಾಯಿ ಬಹಿರ್ದೆಸೆಗೆ ಹೋಗಿದ್ದಾಗ ಮಕ್ಕಳನ್ನ ಕೊಲೆ ಮಾಡಿ ಎಸ್ಕೇಪ್‌ ಆಗಿದ್ದಾನೆ. ಸಾನ್ವಿ (5), ಭರತ (3) ಮೃತ ದುರ್ದೈವಿ ಮಕ್ಕಳು. ಮತ್ತೋರ್ವ ಮಗನ ಸ್ಥಿತಿ ಗಂಭಿರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವಿಜಯಪುರ | ಡೋಣಿ ನದಿ ಸೇತುವೆ ಜಲಾವೃತ – ದಾಟಲು ಯತ್ನಿಸಿದ ಬೈಕ್ ಸವಾರ ನೀರುಪಾಲು

    ಶರಣಪ್ಪನ ಪತ್ನಿ ಕಳೆದ ಕೆಲ ದಿನಗಳಿಂದ ಗಂಡನೊಂದಿಗೆ ಹೊಂದಾಣಿಕೆಯಾಗದೇ ತವರು ಮನೆ ಸೇರಿದ್ದಳು. ಹದಿನೈದು ದಿನಗಳ ಹಿಂದಷ್ಟೇ ಪತ್ನಿಯನ್ನ ಶರಣಪ್ಪ ಕರೆತಂದಿದ್ದ. ಮಗಳು ಸಾನ್ವಿ ಜೊತೆ ಹೋಗಿ ಕರೆದುಕೊಂಡು ಬಂದಿದೆ.

    ಬೆಳಗ್ಗೆ ಹೆಂಡತಿ ಬಹಿರ್ದೆಸೆಗೆ ಹೋಗಿದ್ದಾಗ ಮಲಗಿದ್ದ ಮಕ್ಕಳನ್ನ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಒಬ್ಬರು ಮಕ್ಕಳು ಸಾವನ್ನಪ್ಪಿದ್ರೆ, ಮತ್ತೋರ್ವ ಮಗನ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಯಾದಗಿರಿ ಡಿವೈಎಸ್ಪಿ ಸುರೇಶ್ ನಾಯಕ್, ಪಿಎಸ್‌ಐ ಹಣಮಂತ ಬಂಕಲಗಿ ಭೇಟಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಸೆ.26ರಿಂದ 5 ದಿನ ಕಾವೇರಿ ಆರತಿ – ಕೆಆರ್‌ಎಸ್‌ಗೆ ಭೇಟಿ ನೀಡಿ, ಸಿದ್ಧತೆ ವೀಕ್ಷಿಸಿದ ಡಿಕೆಶಿ

    ಯಾದಗಿರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮೂರು ಮಕ್ಕಳ ತಾಯಿ ಲೀಲಾಳ ಲವ್ವರ್‌ಗೆ ಬಿಯರ್‌ ಬಾಟಲ್‌ನಿಂದ ಹೊಡೆದ ಪತಿ ಮಂಜುನಾಥ್‌

  • Hyderabad | ಕಟ್ಟಿಹಾಕಿ, ಪ್ರೆಷರ್ ಕುಕ್ಕರ್‌ನಿಂದ ಹೊಡೆದು ಮಹಿಳೆಯ ಭೀಕರ ಕೊಲೆ

    Hyderabad | ಕಟ್ಟಿಹಾಕಿ, ಪ್ರೆಷರ್ ಕುಕ್ಕರ್‌ನಿಂದ ಹೊಡೆದು ಮಹಿಳೆಯ ಭೀಕರ ಕೊಲೆ

    – ದರೋಡೆಗೆ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ
    – 40 ಗ್ರಾಂ ಚಿನ್ನ, 1 ಲಕ್ಷ ರೂ. ನಗದು ದೋಚಿ ಪರಾರಿ

    ಹೈದರಾಬಾದ್: ಮಹಿಳೆಯನ್ನು ಕಟ್ಟಿಹಾಕಿ, ಪ್ರೆಷರ್ ಕುಕ್ಕರ್‌ನಿಂದ (Pressure Cooker) ಹೊಡೆದು ಬಳಿಕ ಕತ್ತರಿಯಿಂದ ಆಕೆಯ ಗಂಟಲು ಸೀಳಿ ಕೊಲೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.

    ಸೈಬರಾಬಾದ್‌ನ ಐಟಿ ಕೇಂದ್ರದಲ್ಲಿರುವ ಸ್ಕ್ಯಾನ್ ಲೇಕ್ ಅಪಾರ್ಟ್ಮೆಂಟ್‌ನಲ್ಲಿ ಘಟನೆ ನಡೆದಿದೆ. 13ನೇ ಮಹಡಿಯಲ್ಲಿ ವಾಸಿಸುತ್ತಿದ್ದ (50) ರೇಣು ಅಗರ್ವಾಲ್ ಹತ್ಯೆಯಾದ ಮಹಿಳೆ. ದರೋಡೆಗೆ ಬಂದಿದ್ದ ಇಬ್ಬರು ಆರೋಪಿಗಳು ಕೃತ್ಯವೆಸಗಿದ್ದಾರೆ. ಕೊಲೆ ಬಳಿಕ ಸುಮಾರು 40 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆ ಮಾಡಿ ಆಕೆಯ ಮನೆಯಲ್ಲೇ ಸ್ನಾನ ಮಾಡಿದ ದುಷ್ಕರ್ಮಿಗಳು ರಕ್ತಸಿಕ್ತ ಬಟ್ಟೆಗಳನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಸಾಕಿದ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ – ಕರುಳು ಕಿತ್ತು ಬರುವಂತಿದೆ ಈ ದೃಶ್ಯ

    ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ರೇಣು ಅಗರ್ವಾಲ್ ಪತಿ, ಮಗ ಮನೆಯಿಂದ ತೆರಳಿದ್ದರು. ಸಂಜೆ 5 ಗಂಟೆಗೆ ಪತಿ, ಪತ್ನಿ ರೇಣುಗೆ ಕಾಲ್ ಮಾಡಿದ್ದರು. ಕರೆ ಸ್ವೀಕರಿಸದಿದ್ದಾಗ ಪತಿ ಮನೆಗೆ ಬಂದಿದ್ದಾರೆ. ಪ್ಲಂಬರ್ ಸಹಾಯದಿಂದ ಬಾಲ್ಕನಿ ಮೂಲಕ ಮನೆಗೆ ಎಂಟ್ರಿ ಕೊಟ್ಟು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಸ್ಸಿನಲ್ಲಿ ಪುತ್ರಿಗೆ ಲೈಂಗಿಕ ಕಿರುಕುಳ – ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ

  • ಮಂಗಳೂರು | ರಸ್ತೆ ಗುಂಡಿಗೆ ಬಿದ್ದ ಮಹಿಳೆ – ಕ್ಯಾಂಟರ್ ಲಾರಿ ಹರಿದು ಸಾವು

    ಮಂಗಳೂರು | ರಸ್ತೆ ಗುಂಡಿಗೆ ಬಿದ್ದ ಮಹಿಳೆ – ಕ್ಯಾಂಟರ್ ಲಾರಿ ಹರಿದು ಸಾವು

    ಮಂಗಳೂರು: ರಸ್ತೆ ಗುಂಡಿಗೆ ಬಿದ್ದ ದ್ವಿಚಕ್ರ ವಾಹನ ಸವಾರೆ ಮೇಲೆಯೇ ಕ್ಯಾಂಟರ್ ಲಾರಿ ಹರಿದು, ಮಹಿಳೆ ಮೃತಪಟ್ಟಿರುವ ಘಟನೆ ಮಂಗಳೂರು (Mangaluru) ನಗರದ ಕೂಳೂರು (Kulur) ರಾಯಲ್ ಓಕ್ ಶೋರೂಂ ಮುಂಭಾಗ ನಡೆದಿದೆ.

    ಉಡುಪಿಯ ಪರ್ಕಳ ಮೂಲದ ಮಾಧವಿ ಮೃತ ಮಹಿಳೆ. ಮಂಗಳೂರಿನ ಎ.ಜೆ.ಆಸ್ಪತ್ರೆಯ ಸಿಬ್ಬಂದಿಯಾಗಿರುವ ಮಾಧವಿ, ಕರ್ತವ್ಯಕ್ಕೆ ಹಾಜರಾಗಲು ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಿದ್ದರು. ದ್ವಿಚಕ್ರ ವಾಹನವು ರಸ್ತೆ ಹೊಂಡಕ್ಕೆ ಬಿದ್ದ ಪರಿಣಾಮ ಮಾಧವಿ ರಸ್ತೆಗೆ ಬಿದ್ದಿದ್ದರು. ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮೈಸೂರು | ಮಾಲ್‌ನ ನಾಲ್ಕನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ಸಾವು

    ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಗಳು ಹೊಂಡಗುಂಡಿಗಳಿಂದ ತುಂಬಿದ್ದು, ಇದನ್ನು ದುರಸ್ಥಿ ಮಾಡದ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

  • ಪ್ರಿಯಕರನ ಜೊತೆ ಸೇರಿ ಪತಿ ಕೊಲೆ; ಮೃತದೇಹ ಸುಟ್ಟುಹಾಕಲು ಹೋಗಿದ್ದ ಆರೋಪಿಗಳು ಪೊಲೀಸರಿಗೆ ಲಾಕ್‌

    ಪ್ರಿಯಕರನ ಜೊತೆ ಸೇರಿ ಪತಿ ಕೊಲೆ; ಮೃತದೇಹ ಸುಟ್ಟುಹಾಕಲು ಹೋಗಿದ್ದ ಆರೋಪಿಗಳು ಪೊಲೀಸರಿಗೆ ಲಾಕ್‌

    – ಪೊಲೀಸರ ಕಂಡೊಡನೆ ಶವವಿದ್ದ ಕಾರು ಬಿಟ್ಟು ಎಸ್ಕೇಪ್‌ಗೆ ಮುಂದಾಗಿದ್ದ ಆರೋಪಿಗಳು

    ಕೋಲಾರ: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಪತಿಯನ್ನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪತ್ನಿ ಸೇರಿ ಮೂವರನ್ನ ಕೋಲಾರದ ರಾಯಲ್ಪಾಡು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಹೋಬಳಿಯ ಎಸ್.ಗೊಲ್ಲಪಲ್ಲಿ ಗ್ರಾಮದ ವೆಂಕಟರಮಣ ಎಂಬವನನ್ನ 2 ದಿನಗಳ ಹಿಂದೆ ಕೊಲೆ ಮಾಡಲಾಗಿತ್ತು. ವೆಂಕಟರಮಣನ ಪತ್ನಿ, ಆಕೆಯ ಪ್ರಿಯಕರ ವೇಣುಗೋಪಾಲ್ ಹಾಗೂ ಆತನಿಗೆ ಸಹಾಯ ಮಾಡಿದ ಬಾಲಾಜಿ ಎಂಬವರನ್ನ ಬಂಧಿಸಲಾಗಿದೆ.

    ಆ.24 ರ ರಾತ್ರಿ ಕೊಲೆ ಮಾಡಿದ್ದ ಆರೋಪಿಗಳು, ವೆಂಕಟರಮಣ ಶವವನ್ನ ಬುಲೆರೋ ಕಾರ್‌ನಲ್ಲಿ ಹಾಕಿಕೊಂಡು ಚಿಕ್ಕಬಳ್ಳಾಪುರ, ತುಮಕೂರು, ಹಿಂದೂಪುರ ಸೇರಿ ಹಲವೆಡೆ ಸುತ್ತಾಡಿದ್ದರು. ಎಲ್ಲಿಯೂ ಶವವನ್ನು ಬಿಸಾಡಲು ಜಾಗ ಸಿಗದೇ ರಾಯಲ್ಪಾಡು ಬಳಿ ಅರಣ್ಯದಲ್ಲಿ ಸುಟ್ಟು ಹಾಕಲು ತೆರಳುವ ವೇಳೆ ಪೊಲೀಸರ ಕಂಡು ಕಾರು ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ.

    ನಂಬರ್ ಪ್ಲೇಟ್ ಮೇಲೆ ಸ್ಟಿಕ್ಕರ್ ಅಂಟಿಸಿದ್ದ ಹಿನ್ನೆಲೆ ಅನುಮಾನಗೊಂಡ ರಾಯಲ್ಪಾಡು ಪಿಎಸ್‌ಐ, ವಾಹನ ಪರಿಶೀಲನೆ ನಡೆಸಿದ ವೇಳೆ ಡಿಕ್ಕಿಯಲ್ಲಿ ವೆಂಕಟರಮಣನ ಶವ ಪತ್ತೆಯಾಗಿತ್ತು. ವೆಂಕಟರಮಣನನ್ನ ಕೊಂದ ಪತ್ನಿ ಸೇರಿ ಆಕೆಗೆ ಸಹಾಯ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ತವರು ಮನೆಯಿಂದ ಹಣ ತರದ ಪತ್ನಿಯನ್ನ ಬರ್ಬರವಾಗಿ ಕೊಂದ ಪತಿಗೆ ಮರಣದಂಡನೆ

    ತವರು ಮನೆಯಿಂದ ಹಣ ತರದ ಪತ್ನಿಯನ್ನ ಬರ್ಬರವಾಗಿ ಕೊಂದ ಪತಿಗೆ ಮರಣದಂಡನೆ

    ಮೈಸೂರು: ತವರು ಮನೆಯಿಂದ ಹಣ ತರದ ಹೆಂಡತಿಯನ್ನು ರಸ್ತೆಯಲ್ಲೇ ಬರ್ಬರವಾಗಿ ಕೊಂದಿದ್ದ ಪತಿಗೆ ಮೈಸೂರು ಜಿಲ್ಲಾ ನ್ಯಾಯಾಲಯ (Mysuru District Court) ಮರಣದಂಡನೆ ವಿಧಿಸಿದೆ.

    ಮೈಸೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ. 2024ರ ಜನವರಿಯಲ್ಲಿ ಮೈಸೂರಿನ ಹೊರ ವಲಯದ ಆಲನಹಳ್ಳಿಯ (Alanahalli) ಮುಖ್ಯ ರಸ್ತೆಯಲ್ಲಿ ಕೊಲೆ ನಡೆದಿತ್ತು. ಇದನ್ನೂ ಓದಿ: ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆಯ ಹತ್ಯೆ – 18 ದಿನಗಳ ಬಳಿಕ ಶವ ಹೊರತೆಗೆದು ಪೋಸ್ಟ್ ಮಾರ್ಟಂ

    ಆಲನಹಳ್ಳಿಯ ನಿವಾಸಿ ಮಹೇಶ್ ಇಸ್ಪೀಟ್ ಚಟಕ್ಕೆ ಬಿದ್ದು ಬಹಳಷ್ಟು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಪತ್ನಿ ಶಿಲ್ಪಾಗೆ ತವರು ಮನೆಯಿಂದ ಹಣ ತರಲು ಪೀಡಿಸುತ್ತಿದ್ದ. ಹಣ ತರಲು ಶಿಲ್ಪಾ ನಿರಾಕರಿಸಿದ ಕಾರಣ ಆಲನಹಳ್ಳಿ – ಟಿ. ನರಸೀಪುರ ರಸ್ತೆಯಲ್ಲೇ ಪತ್ನಿ ಶಿಲ್ಪಾಳನ್ನ ಕೊಲೆ ಮಾಡಿದ್ದ. ಇದನ್ನೂ ಓದಿ: ಬಾನು ಮುಷ್ತಾಕ್‍ಗೆ ಚಾಮುಂಡಿ ತಾಯಿಯ ಮೇಲೆ ನಂಬಿಕೆ ಇದ್ರೆ ಉದ್ಘಾಟನೆಗೆ ಬರುತ್ತಾರೆ: ಜಿಟಿಡಿ

    ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ದೇಗುಲವಲ್ಲದೇ ಇದ್ದಿದ್ರೆ ಮುಜರಾಯಿ ವ್ಯಾಪ್ತಿಗೆ ತರುತ್ತಿರಲಿಲ್ಲ – ಪ್ರಮೋದಾ ದೇವಿ ಒಡೆಯರ್‌

  • Shivamogga | ತಾನೇ ಜನ್ಮ ನೀಡಿದ ನವಜಾತ ಶಿಶುವಿನ ಕತ್ತು ಕೊಯ್ದು ಕೊಂದಿದ್ದ ಲೇಡಿ ಅರೆಸ್ಟ್

    Shivamogga | ತಾನೇ ಜನ್ಮ ನೀಡಿದ ನವಜಾತ ಶಿಶುವಿನ ಕತ್ತು ಕೊಯ್ದು ಕೊಂದಿದ್ದ ಲೇಡಿ ಅರೆಸ್ಟ್

    ಶಿವಮೊಗ್ಗ: ತಾನೇ ಜನ್ಮ ನೀಡಿದ ನವಜಾತ ಶಿಶುವಿನ ಕತ್ತು ಕೊಯ್ದು ಕೊಂದಿದ್ದ ಮಹಿಳೆಯನ್ನು ಬಂಧಿಸಿದ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ.

    1 ದಿನದ ಗಂಡು ಮಗುವನ್ನು ಕತ್ತು ಸೀಳಿ ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾದ ಹಿನ್ನೆಲೆ ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿಯ (Honnali) ತಿಮ್ಲಾಪುರದ ಶೈಲಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆ.16ರಂದು ಮೆಗ್ಗಾನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಶೌಚಾಲಯದಲ್ಲಿ ಒಂದು ದಿನದ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿತ್ತು. ಶೌಚಾಲಯದಲ್ಲಿ ಶವ ನೋಡಿದ ಬೇರೆ ರೋಗಿಗಳು ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಸೋಕೋ ಟೀಮ್ ಬಂದು ಮಾಹಿತಿ ಸಂಗ್ರಹಿಸಿತ್ತು. ಇದನ್ನೂ ಓದಿ: ಬೆಳಗಾವಿ| ದೇವಸ್ಥಾನದ ಜಾಗಕ್ಕಾಗಿ ಕೊಲೆ – ಐವರಿಗೆ ಜೀವಾವಧಿ ಶಿಕ್ಷೆ ಪ್ರಕಟ

    ಹೊನ್ನಾಳಿ ಮೂಲದ ಶೈಲಾಗೆ 2 ಮಕ್ಕಳಿದ್ದು, ನಾಲ್ಕು ವರ್ಷಗಳ ಹಿಂದೆ ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿತ್ತು. ಸಂತಾನಹರಣ ಶಸ್ತ್ರಚಿಕಿತ್ಸೆ ಆದರೂ ಶೈಲಾ ಗರ್ಭಿಣಿಯಾಗಿದ್ದಳು. ಥೈರಾಯ್ಡ್ ನೆಪ ಮಾಡಿಕೊಂಡು ಗರ್ಭಿಣಿ ಆಗಿರುವುದನ್ನು ಶೈಲಾ ಕುಟುಂಬಸ್ಥರಿಂದ ಮುಚ್ಚಿಟ್ಟಿದ್ದಳು. ಆಸ್ಪತ್ರೆಯ ಶೌಚಾಲಯದಲ್ಲಿ ಒಬ್ಬಳೇ ನಾರ್ಮಲ್ ಹೆರಿಗೆ ಮಾಡಿಕೊಂಡಿದ್ದ ಶೈಲಾ ಹೆರಿಗೆ ಬಳಿಕ ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್‌ನಿಂದ ಮಗುವಿನ ಕತ್ತು ಕೊಯ್ದು ಕೊಲೆ ಮಾಡಿದ್ದಳು. ಇದೀಗ ಮಗುವಿನ ಕೊಲೆ ಮಾಡಿರುವ ಕುರಿತು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾಳೆ. ಘಟನೆ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ – ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ