Tag: ಮಹಿಳಾ ಸ್ವಸಹಾಯ ಸಂಘ

  • ಬೊಮ್ಮಾಯಿ ಬಜೆಟ್ – ಯುಪಿ ಮಾದರಿಯಲ್ಲಿ ಮಹಿಳೆಯರ ಮನ ಗೆಲ್ಲೋಕೆ ಪ್ಲಾನ್‌?

    ಬೊಮ್ಮಾಯಿ ಬಜೆಟ್ – ಯುಪಿ ಮಾದರಿಯಲ್ಲಿ ಮಹಿಳೆಯರ ಮನ ಗೆಲ್ಲೋಕೆ ಪ್ಲಾನ್‌?

    ಬೆಂಗಳೂರು: ಚುನಾವಣಾ ವರ್ಷದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಬಜೆಟ್ ಸಾಕಷ್ಟು ಕುತೂಹಲ ಮೂಡಿಸಿದೆ. ಏಕೆಂದರೆ ಈ ಬಜೆಟ್‌ನಲ್ಲಿ (Karnataka Budget 2023) ಮಹಿಳೆಯರ ಮನಗೆಲ್ಲೋಕೆ ಬೊಮ್ಮಾಯಿ ಸರ್ಕಾರ ಪ್ಲಾನ್‌ ಮಾಡಿದೆ ಎನ್ನಲಾಗುತ್ತಿದೆ.

    ಈಗಾಗಲೇ ಜೆಡಿಎಸ್ (JDS) ಪಂಚರತ್ನ ಯಾತ್ರೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ (Women Self Help Group Society) ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದೆ, ಕಾಂಗ್ರೆಸ್ (Karnataka Congress) ಅಧಿಕಾರಕ್ಕೆ ಬಂದ್ರೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನ ಘೋಷಣೆ ಮಾಡುವ ಮೂಲಕ ಮಹಿಳೆಯರ ಮನಗೆಲ್ಲೋಕೆ ಬೊಮ್ಮಾಯಿ ಪ್ಲಾನ್‌ ಮಾಡಿದ್ದಾರಾ? ಎನ್ನುವ ಬಗ್ಗೆ ಕುತೂಹಲ ಮೂಡಿಸಿದೆ.

    ಕೊರೊನಾ ಸಮಯದಲ್ಲಿ ಯೋಗಿ ಸರ್ಕಾರ (Uttar Pradesh Government) ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನ ಘೋಷಣೆ ಮಾಡಿತ್ತು. ಅದರಂತೆ ರಾಜ್ಯದಲ್ಲೂ ಮಹಿಳೆಯರ ಓಲೈಕೆಗೆ ಬೊಮ್ಮಾಯಿ ಪ್ಲಾನ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆ ಬಜೆಟ್ ನಲ್ಲಿ ಮಹಿಳೆಯರಿಗೆ ಈ ವರ್ಷ ಬಂಪರ್ ನಿರೀಕ್ಷೆಗಳ ಸಾಧ್ಯತೆ ಎಂದು ಹೇಳಲಾಗಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಇನ್ನೂ ನೀಡಿಲ್ಲ ಯಾಕೆ – ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

    ಬೊಮ್ಮಾಯಿ ಬಜೆಟ್ ಪ್ಲಾನ್‌ ಏನು?: ಮಹಿಳಾ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಅಥವಾ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಅನುದಾನ ನೀಡುವ ಸಾಧ್ಯತೆ. ಸ್ವಂತ ಉದ್ಯೋಗ ಮಾಡುವ ಮಹಿಳೆಯರಿಗೆ ವಿಶೇಷ ಆರ್ಥಿಕ ಸಹಾಯ ಯೋಜನೆ ಜಾರಿ ಸಾಧ್ಯತೆ. ಮಹಿಳಾ ಸ್ವಸಹಾಯ ಸಂಘಗಳ ಸಾಲಮನ್ನಾ ಮಾಡೋ ಬಗ್ಗೆ ಚಿಂತನೆ. ಇದನ್ನೂ ಓದಿ: ಸೌಹಾರ್ದ ಕ್ರಿಕೆಟ್ ಆಡಲು ಹೋಗಿ ಎಡವಟ್ಟು ಮಾಡಿಕೊಂಡ ಬಿಜೆಪಿ ಕೇಂದ್ರ ಸಚಿವ

    ಮಹಿಳೆಯರ ಆರೋಗ್ಯಕ್ಕಾಗಿ ವಿಶೇಷ ಯೋಜನೆ ಘೋಷಣೆ ಸಾಧ್ಯತೆ. ರೈತ ಮಹಿಳೆ ಪ್ರೋತ್ಸಾಹ ಧನ, ಅಥವಾ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಘೋಷಣೆ ಸಾಧ್ಯತೆ. ಹಿಂದುಳಿದ ವರ್ಗದ ಮಹಿಳಾ ಉದ್ಯಮಿಗಳಿಗೆ ಉದ್ಯಮ ಪ್ರಾರಂಭಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ. ಪದವಿ ವಿದ್ಯಾರ್ಥಿನಿಯರು, ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಹೆಚ್ಚಳ ಸಾಧ್ಯತೆ. ವಿಧವಾ ವೇತನ, ಅಸಿಡ್ ದಾಳಿಗೆ ಒಳಗಾದ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಶಾಸನ ಹೆಚ್ಚಳ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿ ಕಾರ್ಯಕ್ರಮಕ್ಕೆ ಹೋಗಿಬರುತ್ತಿದ್ದ ಬಸ್ ಅಪಘಾತ – 20 ಮಹಿಳೆಯರಿಗೆ ಗಾಯ

    ಮೋದಿ ಕಾರ್ಯಕ್ರಮಕ್ಕೆ ಹೋಗಿಬರುತ್ತಿದ್ದ ಬಸ್ ಅಪಘಾತ – 20 ಮಹಿಳೆಯರಿಗೆ ಗಾಯ

    ಭೋಪಾಲ್: ಪ್ರಧಾನಿ ಮೋದಿ (PM Narendra Modi) ಭಾಷಣ ಕೇಳಲು ತೆರಳಿದ್ದ ಸ್ವಸಹಾಯ ಸಂಘದ ಮಹಿಳೆಯರಿದ್ದ (Womens Self Help Group) ಬಸ್ (Bus) ಕರೋನಿ ಕಣಿವೆ ಬಳಿ ಅಪಘಾತಕ್ಕೀಡಾಗಿದ್ದು, 20 ಮಹಿಳೆಯರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    Crime-Scene

    20 ಮಹಿಳೆಯರು (Women) ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವಿಮ್ಸ್‌ನಲ್ಲಿ ಸಾವಿನ ಸರಣಿ- ಸುಧಾಕರ್ ಹಠದಿಂದ ನಿರ್ದೇಶಕರ ನೇಮಕ

    ಮಧ್ಯಪ್ರದೇಶದ ಶಿಯೋಪುರದ ಕಾರ್‌ಹಾಲ್‌ನಲ್ಲಿ ನಡೆಯುತ್ತಿದ್ದ ಮಹಿಳಾ ಸ್ವಸಹಾಯ ಸಂಘದ (Womens Self Help Group) ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಷಣ ಕೇಳಲು 25 – 30 ಮಹಿಳೆಯರು ಬಸ್‌ನಲ್ಲಿ ತೆರಳಿದ್ದರು. ಮಾರ್ಗಮಧ್ಯೆ ಟ್ರಾಫಿಕ್ (Traffic) ಸಮಸ್ಯೆ ಎದುರಾಗಿದ್ದರಿಂದ ಸಮಾವೇಶ ತಲುಪಲು ಸಾಧ್ಯವಾಗಲಿಲ್ಲ. ಹಿಂದಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ (Accident) ಸಂಭವಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಏಪ್ರಿಲ್ 8 ರಿಂದ 18ರವರೆಗೆ ರಾಷ್ಟ್ರೀಯ ಸಂಜೀವಿನಿ ಸರಸ್ ಮೇಳ: ಅಶ್ವಥ್ ನಾರಾಯಣ

    ಏಪ್ರಿಲ್ 8 ರಿಂದ 18ರವರೆಗೆ ರಾಷ್ಟ್ರೀಯ ಸಂಜೀವಿನಿ ಸರಸ್ ಮೇಳ: ಅಶ್ವಥ್ ನಾರಾಯಣ

    ಬೆಂಗಳೂರು: ಮಹಿಳೆಯರ ಆರ್ಥಿಕ ಸಬಲೀಕರಣದ ಆಶಯವನ್ನುಳ್ಳ ರಾಷ್ಟ್ರೀಯ ಸಂಜೀವಿನಿ ಸರಸ್ ಮೇಳವು ಏ.8ರಿಂದ 18ರವರೆಗೆ ಇಲ್ಲಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಮೇಳವನ್ನು ಇದೇ 8ರಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, 300ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

    ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳ ಸಂಯುಕ್ತ ಆಶ್ರಯದಲ್ಲಿ ಸಂಜೀವಿನಿ ಸರಸ್ ಮೇಳ ನಡೆಯುತ್ತಿದ್ದು, ಇದರಲ್ಲಿ ಅಖಿಲ ಭಾರತ ಮಟ್ಟದ ಉತ್ಪನ್ನಗಳು ಗ್ರಾಹಕರಿಗೆ ಸಿಗಲಿವೆ. ರಾಷ್ಟ್ರೀಯ ಗ್ರಾಮೀಣ ಮತ್ತು ನಗರ ಜೀವನೋಪಾಯ ಅಭಿಯಾನದಡಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಅವರು ಮೇಳದ ಲಾಂಛನವನ್ನು ಅನಾವರಣಗೊಳಿಸಿದರು. ಇದನ್ನೂ ಓದಿ: ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ

    ಈ ಮೇಳದಲ್ಲಿ ಕೈಮಗ್ಗದ ಉತ್ಪನ್ನಗಳು, ಕರಕುಶಲ ವಸ್ತುಗಳು, ಬುಡಕಟ್ಟು ಮತ್ತು ಸಾವಯವ ಉತ್ಪನ್ನಗಳು, ಅಲಂಕಾರಿಕ ವಸ್ತುಗಳು, ಮಣ್ಣಿನಿಂದ ತಯಾರಿಸಿದ ಪಾತ್ರೆಗಳು, ಮರದಿಂದ ಮಾಡಿದ ವಸ್ತುಗಳು, ಬಿದಿರು ಮತ್ತು ಸೆಣಬಿನ ವಸ್ತುಗಳು, ಸಾಂಬಾರ ಪದಾರ್ಥಗಳು, ಸಾಂಪ್ರದಾಯಿಕ ವಸ್ತ್ರಗಳು, ಕಲಾಕೃತಿಗಳು, ವರ್ಣಚಿತ್ರಗಳು, ಟೆರ್ರಾಕೋಟ ಮತ್ತು ಪಾರಂಪರಿಕ ಉತ್ಪನ್ನಗಳು ಹಾಗೂ ಸಂಸ್ಕರಿತ ಆಹಾರ ಪದಾರ್ಥಗಳು ಮುಂತಾದವು ಸಿಗಲಿವೆ ಎಂದು ಅವರು ಮಾಹಿತಿ ನೀಡಿದರು.

    ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಇಲ್ಲಿ ತಮ್ಮ ಕೌಶಲಗಳನ್ನು ಪ್ರದರ್ಶಿಸುವ ಜತೆಗೆ ಗ್ರಾಹಕರೊಂದಿಗೆ ನೇರ ಸಂವಾದ ಮಾಡಬಹುದು. ಅಲ್ಲದೆ, ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ತರಬೇತಿ, ಕಾರ್ಯಾಗಾರ, ವಿಚಾರ ಸಂಕಿರಣ, ಕಾರ್ಪೋರೇಟ್ ಪ್ರಮುಖರ ಮಾತುಕತೆ ಸಿಎಸ್‍ಆರ್ ದುಂಡು ಮೇಜಿನ ಸಭೆಗಳು ಮತ್ತು ನವೋದ್ಯಮ ಹಾಗೂ ಎನ್.ಜಿ.ಒ ಅಧಿವೇಶನಗಳನ್ನು ಕೂಡ ಏರ್ಪಡಿಸಲಾಗಿದೆ ಎಂದು ನುಡಿದರು. ಇದನ್ನೂ ಓದಿ: ಶಿವಮೊಗ್ಗದ ಜನತೆ ಸಂತೃಪ್ತಿಯಿಂದ ಇರುವುದು ಡಿಕೆಶಿಗೆ ಬೇಕಿಲ್ಲ: ಕೆ.ಎಸ್.ಈಶ್ವರಪ್ಪ

    ಉದ್ಯಮಶೀಲ ಮಹಿಳೆಯರಿಗೆ ಸರ್ಕಾರದ ನಾನಾ ಇಲಾಖೆಗಳು ಮತ್ತು ಬ್ಯಾಂಕ್‍ಗಳು ವಿವಿಧ ಸಾಲ ಸೌಲಭ್ಯ ಹಾಗೂ ಸೇವಾ ಉಪಕ್ರಮಗಳನ್ನು ಹೊಂದಿವೆ. ಮೇಳದಲ್ಲಿ ಈ ಬಗ್ಗೆಯೂ ಮಾಹಿತಿ ಒದಗಿಸುವ ಏರ್ಪಾಡನ್ನು ಕೂಡ ಮಾಡಲಾಗಿದೆ ಎಂದು ತಿಳಿಸಿದರು.