Tag: ಮಹಿಳಾ ಸಹೋದ್ಯೋಗಿ

  • ಮಹಿಳಾ ಸಹೋದ್ಯೋಗಿಗೆ ಚುಂಬಿಸಿದ ಅಧಿಕಾರಿ ಅರೆಸ್ಟ್ – ವೀಡಿಯೋ ವೈರಲ್

    ಮಹಿಳಾ ಸಹೋದ್ಯೋಗಿಗೆ ಚುಂಬಿಸಿದ ಅಧಿಕಾರಿ ಅರೆಸ್ಟ್ – ವೀಡಿಯೋ ವೈರಲ್

    ಲಕ್ನೋ: ಮಹಿಳಾ ಸಹೋದ್ಯೋಗಿಗೆ ಕಿರುಕುಳ ನೀಡುತ್ತಿದ್ದ ಸರ್ಕಾರಿ ಅಧಿಕಾರಿಯನ್ನು ಲಕ್ನೋ ಪೊಲೀಸರು ಬಂಧಿಸಿದ್ದು, ಆಕೆ ಮೇಲೆ ಹಲ್ಲೆ ಮಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಇಚ್ಚಾ ರಾಮ್ ಯಾದವ್ ಬಂಧಿತ ಅಧಿಕಾರಿ. ಯುಪಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಗುತ್ತಿಗೆ ಉದ್ಯೋಗಿಯಾಗಿರುವ 30 ವರ್ಷದ ವಿವಾಹಿತ ಮಹಿಳೆ ಮೇಲೆ ಇಚ್ಚಾ ರಾಮ್ ಯಾದವ್ ಹಲ್ಲೆ ಮಾಡಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪರಿಣಾಮ ಇಚ್ಚಾ ರಾಮ್ ಮೇಲೆ ಎಫ್‍ಐಆರ್ ದಾಖಲಾಗಿದ್ದು, ಆತನನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು

    ವೀಡಿಯೋದಲ್ಲಿ ಇಚ್ಚಾ ರಾಮ್ ಯಾದವ್, ಮಹಿಳೆಯ ಮೇಲೆ ಪಟ್ಟು ಬಿಡದೆ ಹಲ್ಲೆ ಮಾಡುತ್ತಿದ್ದು, ಮಹಿಳೆ ಅವನನ್ನು ದೂರ ತಳ್ಳತ್ತ, ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಪಡುತ್ತಿರುವ ದೃಶ್ಯ ಸೆರೆಯಾಗಿದೆ. ಅದು ಅಲ್ಲದೇ ವೀಡಿಯೋದಲ್ಲಿ ಯಾದವ್ ಆಕೆಯನ್ನು ಚುಂಬಿಸುವ ದೃಶ್ಯವು ಸಹ ಸೆರೆಯಾಗಿದೆ.

    ಒಂದು ವಾರದ ಹಿಂದೆ ಈ ಕುರಿತು ಮಹಿಳೆ ದೂರು ನೀಡಿದ್ದು, ಪೊಲೀಸರು ತಡವಾಗಿ ಆತನನ್ನು ಬಂಧಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇಂದು ಬೆಳಗ್ಗೆ, ಟ್ವಿಟ್ಟರ್‍ನಲ್ಲಿ ಇಚ್ಛಾ ರಾಮ್ ಜೈಲಿನಲ್ಲಿರುವ ಫೋಟೋವನ್ನು ಟ್ವೀಟ್ ಮಾಡಲಾಗಿದ್ದು, ಅನೇಕರು ಯುಪಿ ಪೊಲೀಸರ ತಡವಾದ ಕ್ರಮವನ್ನು ತೆಗೆದುಕೊಂಡಿರುವುದರ ಕುರಿತು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್

    ಈ ಕುರಿತು ಮಹಿಳೆ ದೂರಿನಲ್ಲಿ, ನಾನು 2013 ರಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. 2018 ರಿಂದ ವಿಭಾಗದ ಉಸ್ತುವಾರಿ ಅಧಿಕಾರಿ ಇಚ್ಚಾ ರಾಮ್ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಇಬ್ಬರೂ ಬಾಪು ಭವನದ ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದೆವು ಎಂದು ತಿಳಿಸಿದ್ದಾರೆ.

    ಇಚ್ಚಾ ರಾಮ್ ನನಗೆ ಕಿರುಕುಳ ಕೊಡುತ್ತಿದ್ದು, ನನಗೆ ಸಹಕರಿಸಿದರೆ ನಿನ್ನ ಕೆಲಸ ಖಾಯಂ ಮಾಡಿಸುವುದಾಗಿ ಭರವಸೆ ನೀಡುತ್ತಿದ್ದನು. ನಾನು ಹೇಳಿದ ರೀತಿ ಕೇಳುವುದಿಲ್ಲ ಎಂದರೇ ಕೆಲಸದಿಂದ ವಜಾ ಮಾಡಿಸುವುದಾಗಿ ಮತ್ತು ಕೊಲ್ಲುವುದಾಗಿ ಬೆದರಿಕೆಯನ್ನು ಹಾಕಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾರೆ.

  • ಶಾಕಿಂಗ್ ವಿಡಿಯೋ: ಹುಟ್ಟುಹಬ್ಬದ ದಿನವೇ ಮಹಿಳಾ ಸಹೋದ್ಯೋಗಿಯ ಸೀರೆ ಎಳೆದ ಸೆಕ್ಯೂರಿಟಿ ಮ್ಯಾನೇಜರ್!

    ಶಾಕಿಂಗ್ ವಿಡಿಯೋ: ಹುಟ್ಟುಹಬ್ಬದ ದಿನವೇ ಮಹಿಳಾ ಸಹೋದ್ಯೋಗಿಯ ಸೀರೆ ಎಳೆದ ಸೆಕ್ಯೂರಿಟಿ ಮ್ಯಾನೇಜರ್!

    ನವದೆಹಲಿ: ನಗರದ ಪಂಚತಾರಾ ಹೋಟೇಲಿನ ಸೆಕ್ಯೂರಿಟಿ ಮಾನೇಜರೊಬ್ಬ ತನ್ನ ಮಹಿಳಾ ಸಹೋದ್ಯೋಗಿಯ ಸೀರೆ ಎಳೆದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆಯೊಂದು ಬೆಳೆಕಿಗೆ ಬಂದಿದೆ.

    ಈ ಘಟನೆ ಜುಲೈ 29ರಂದು ದೆಹಲಿ ಏರ್‍ಪೋರ್ಟ್ ಬಳಿಯ ಪಂಚತಾರಾ ಹೊಟೇಲಿನಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    33 ವರ್ಷದ ಮಹಿಳಾ ಸಹೋದ್ಯೋಗಿಯ ಹುಟ್ಟುಹಬ್ಬದ ದಿನವೇ ಈ ಘಟನೆ ನಡೆದಿದ್ದು, ಮಹಿಳೆಗೆ ಶಾಕ್ ನೀಡಿದೆ. ಇದೀಗ ಮಹಿಳೆ ಈ ದೃಶ್ಯವನ್ನು ಶೇರ್ ಮಾಡಿದ್ದು, ಬಳಿಕ ಸೆಕ್ಯೂರಿಟಿ ಮ್ಯಾನೇಜರ್ ನನ್ನು ಉದ್ಯೋಗದಿಂದ ವಜಾ ಮಾಡಲಾಗಿದೆ.

    ಜುಲೈ 29ರಂದು ಹುಟ್ಟು ಹಬ್ಬವಾಗಿತ್ತು. ಸೆಕ್ಯೂರಿಟಿ ಮ್ಯಾನೇಜರ್ ಪವನ್ ದಾಹಿಯಾ  ತನ್ನ ಕ್ಯಾಬಿನ್ ಗೆ ಕರೆದ. ಬಳಿಕ ಆತನ ಕ್ರೆಡಿಟ್ ಕಾರ್ಡ್ ಹೊರ ತೆಗೆದು ನಿನಗೇನು ಬೇಕು ಅಂತ ಕೇಳಿದ್ದನು. ಅಲ್ಲದೇ ತನ್ನ ಎದುರುಗಡೆ ಕುಳಿತುಕೊಳ್ಳುವಂತೆ ಹೇಳಿದ್ದನು. ಆದ್ರೆ ಇದನ್ನು ನಾನು ನಿರಾಕರಿಸಿದೆ. ಈ ವೇಳೆ ಆತ ತನ್ನ ಸೀರೆ ಎಳೆದು ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಅಲ್ಲದೇ ಅಲ್ಲೇ ಇದ್ದ ಸಹೋದ್ಯೋಗಿಯನ್ನು ಹೊರ ಹೋಗುವಂತೆ ಹೇಳಿದ್ದಾನೆ. ಇಷ್ಟು ಮಾತ್ರವಲ್ಲದೇ ಒಂದು ರಾತ್ರಿ ಹೊಟೇಲಿನಲ್ಲಿ ತನ್ನ ಜೊತೆ ಕಳೆಯುವಂತೆ ಕೂಡ ಹೇಳಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.

    ವಿಡಿಯೋದಲ್ಲಿ ಆರೋಪಿ ಸೀರೆ ಎಳೆಯುತ್ತಿರುವಾಗ ಮಹಿಳೆ ತನ್ನ ಸೀರೆ ಬಿಚ್ಚದಂತೆ ಗಟ್ಟಿಯಾಗಿ ಹಿಡಿದುಕೊಳ್ಳುವುದನ್ನು ಕಾಣಬಹುದು. ಘಟನೆ ನಡೆದ ರಾತ್ರಿಯೇ ಮಹಿಳೆ ಹೊಟೇಲಿನ ಹೆಚ್ ಆರ್ ಮ್ಯಾನೇಜರ್ ಗೆ ಈ ಬಗ್ಗೆ ದೂರು ನೀಡಿದ್ದಾರೆ. ಆದ್ರೆ ಹೆಚ್ ಆರ್ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಳಿಕ ಆಕೆಯ ಪತಿಯ ಸೂಚನೆಯಂತೆ ಆಗಸ್ಟ್ 1ರಂದು ಪೊಲೀಸ್ ಠಾಣೆಗೆ ತೆರಳಿ ಆರೋಪಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.

     

  • ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋಗಿ ನೀರುಪಾಲಾದ ಐಎಎಸ್ ಅಧಿಕಾರಿ!

    ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋಗಿ ನೀರುಪಾಲಾದ ಐಎಎಸ್ ಅಧಿಕಾರಿ!

    ನವದೆಹಲಿ: ನೀರಿಗೆ ಬಿದ್ದ ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋದ ಐಎಎಸ್ ಅಧಿಕಾರಿಯೊಬ್ಬರು ನೀರು ಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ.

    ಬೆರ್ ಸರೈನಲ್ಲಿರೋ ಫಾರಿನ್ ಸರ್ವಿಸ್ ಇನ್ ಸ್ಟಿಟ್ಯೂಟ್‍ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಂಗಳವಾರದಂದು ಈ ಅವಘಡ ಸಂಭವಿಸಿದ್ದು, ಮೃತ ಐಎಎಸ್ ಅಧಿಕಾರಿಯನ್ನು ಆಶಿಶ್ ದಹಿಯಾ ಎಂಬುವುದಾಗಿ ಗುರುತಿಸಲಾಗಿದೆ. ಇವರು ಹರಿಯಾಣದ ಸೊನಿಪತ್ ನಿವಾಸಿಯಾಗಿದ್ದಾರೆ.

    ಆಶಿಶ್ ತನ್ನ ಇಂಡಿಯನ್ ಫಾರಿನ್ ಅಂಡ್ ರೆವೆನ್ಯೂ ಸರ್ವೀಸ್‍ನ ಗೆಳೆಯರೊಂದಿಗೆ ಪೂಲ್ ಪಾರ್ಟಿಗೆ ಹೋಗಿದ್ರು. ಈ ವೇಳೆ ಕ್ಲಬ್ ನಲ್ಲಿದ್ದ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ನಿರ್ಧರಿಸಿದ್ದರು. ಪಾರ್ಟಿಗೆ ಬಂದವರು ಮದ್ಯಪಾನ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

    ಈ ವೇಳೆ ಮಹಿಳಾ ಸಹೋದ್ಯೋಗಿಯೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ರಕ್ಷಿಸಲೆಂದು ಆಶಿಶ್ ಸೇರಿದಂತೆ ಇತರೆ ಅಧಿಕಾರಿಗಳು ನೀರಿಗೆ ಹಾರಿದ್ದಾರೆ. ನಂತರ ಮಹಿಳೆಯನ್ನ ರಕ್ಷಣೆ ಮಾಡಿ ಹೊರಗೆಳೆದಿದ್ದಾರೆ. ಆದ್ರೆ ಈ ವೇಳೆ ಆಶಿಶ್ ಕಾಣಿಸುತ್ತಿರಲಿಲ್ಲ. ನಂತರ ನೋಡಿದಾಗ ಆಶಿಶ್ ನೀರಿನಲ್ಲಿ ತೇಲುತ್ತಿದ್ದರು.

    ಕೂಡಲೇ ಸ್ವಿಮ್ಮಿಂಗ್ ಪೂಲ್‍ನಿಂದ ಆಶಿಶ್‍ರನ್ನು ಮೇಲಕ್ಕೆತ್ತಿ ಸ್ಥಳೀಯ ಫೋರ್ಟಿಸ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಅದಾಗಲೇ ಆಶಿಶ್ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

    ಸದ್ಯ ಮೃತ ಆಶೀಶ್ ಕುಟುಂಬಸ್ಥರು ದೆಹಲಿ ತಲುಪಿದ್ದಾರೆ.